ಜರ್ದಾಳು

ಜರ್ದಾಳು ಪ್ರೂನಸ್ (ಕಲ್ಲು ಹಣ್ಣುಗಳು) ಜಾತಿಯಲ್ಲಿನ ಹಲವಾರು ಪ್ರಜಾತಿಗಳ ಒಂದು ಹಣ್ಣು ಅಥವಾ ಹಣ್ಣನ್ನು ಹೊರುವ ಮರ. ಜರ್ದಾಳು ೮-೧೨ ಮಿ. ಎತ್ತರದ, ೪೦ ಸೆ.ಮಿ. ವರೆಗಿನ ವ್ಯಾಸದ ಬೊಡ್ಡೆ ಮತ್ತು ದಟ್ಟ, ಹರಡಿದ ಮೇಲ್ಕಟ್ಟಿರುವ ಒಂದು ಚಿಕ್ಕ ಮರ. ಹಣ್ಣು ಒಂದು ಸಣ್ಣ ಪೀಚ್ ಅನ್ನು ಹೋಲುವ ಒಂದು ಓಟೆಹಣ್ಣು, ವ್ಯಾಸ ೧.೫-೨.೫ ಸೆ.ಮಿ., ಬಣ್ಣ ಹಳದಿಯಿಂದ ಕಿತ್ತಳೆ. ಜರ್ದಾಳುವಿನ ಮೂಲ ವಿವಾದಿತವಾಗಿದೆ.