ಕ್ರೇಗ್ಸ್‌ಲಿಸ್ಟ್
ಚಿತ್ರ:Craigslist.png | |
ಮಾದರಿ | Private |
---|---|
ಅಡಿಪಾಯದ ದಿನಾಂಕ | 1995 (incorporated 1999) |
ಪ್ರಧಾನ ಕಚೇರಿ | San Francisco Bay Area, United States[೧] |
ಸೇವೆ ಸಲ್ಲಿಸಿದ ಪ್ರದೇಶ | 570 cities in 50 countries |
Founder(s) | Craig Newmark |
Key people | Jim Buckmaster (CEO) |
ಸೇವೆಗಳು | Web Communications |
ನೌಕರರು | 32 |
ಜಾಲತಾಣ | www.craigslist.org |
Alexa rank | 37[೨] |
ಸೈಟ್ನ ಪ್ರಕಾರ | Classifieds, forums |
Advertising | None |
ನೋಂದಣಿ | Optional |
ಲಭ್ಯತೆ | English, French, German, Spanish, Italian, Portuguese |
ಪ್ರಾರಂಭಿಸಲಾಗಿದೆ | 1995 |
ಪ್ರಸ್ತುತ ಸ್ಥಿತಿ | Active |
ಕ್ರೇಗ್ಸ್‌ಲಿಸ್ಟ್ ಎಂಬುದು ಆನ್ ಲೈನ್ ಸಮೂಹಗಳ ಕೇಂದ್ರೀಕೃತ ಜಾಲವಾಗಿದೆ.ಉಚಿತ ಆನ್ ಲೈನ್ ವರ್ಗೀಕೃತ ಜಾಹೀರಾತುಗಳನ್ನು ಹೊಂದಿದೆ –ಆಲ್ಲದೇ ಕೆಲಸಗಳಿಗೆ , ಆಶ್ರಯ, ವೈಯಕ್ತಿಕ, ಮಾರಾಟ, ಸೇವೆಗಳು, ಸಮೂಹ, ಗಿಗ್ ಗಳು, ಪರಿಚಯ ಪತ್ರ, ಮತ್ತು ಚರ್ಚಾವೇದಿಕೆಗೆ ಮೀಸಲಿಡಲಾದ ವಿಭಾಗಗಳನ್ನೂ ಕೂಡ ಒಳಗೊಂಡಿದೆ.
ವಿವರಣೆ
[ಬದಲಾಯಿಸಿ]ಕ್ರ್ಯೇಗ್ ನ್ಯೂಯಾರ್ಕ್, 1995 ರಲ್ಲಿ ಸ್ನೇಹಿತರ ವಿತರಣ ಪಟ್ಟಿಯನ್ನು ಒಳಗೊಂಡ ಇಮೇಲ್ ನ ಮೂಲಕ ತನ್ನ ಸೇವೆಯನ್ನು ಪ್ರಾರಂಭಿಸಿದ. ಇದು 1996 ರಲ್ಲಿ ವೆಬ್ ಆಧಾರಿತ ಸೇವೆಯಾಗಿ ರೂಪಗೊಳ್ಳುವವರೆಗೂ ಸ್ಯಾನ್ ಫ್ರ್ಯಾನ್ಸಿಸ್ಕೋ ಬೇ ಪ್ರದೇಶದ ಸ್ಥಳಿಯ ಘಟನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿತ್ತು. ಇದು 1999ರಲ್ಲಿ ಲಾಭಯುತ ಕಂಪನಿಗಳಿಗೋಸ್ಕರ ಖಾಸಗಿಯಾಗಿ ಸಂಘಟಿತವಾದ ನಂತರ ಕ್ರೇಗ್ಸ್‌ಲಿಸ್ಟ್ ಅದರ ಸೇವೆಯನ್ನು 2000ದ ಹೊತ್ತಿಗೆ ಒಂಭತ್ತು U.S. ನಗರಗಳಲ್ಲಿ, 2001 ರ ಹೊತ್ತಿಗೆ ನಾಲ್ಕು ಮತ್ತು 2002ರ ಹೊತ್ತಿಗೆ ಒಂದು, ಹಾಗು 2003 ರ ಹೊತ್ತಿಗೆ 14 ನಗರಗಳಿಗೆ ವಿಸ್ತರಿಸಿತು.
ಕ್ರೇಗ್ಸ್‌ಲಿಸ್ಟ್ 2009ರ ಹೊತ್ತಿಗೆ 28 ಜನರನ್ನು ಒಳಗೊಂಡ ಸಿಬ್ಬಂದಿವರ್ಗದಿಂದ ಕಾರ್ಯನಿರ್ವಹಿಸಲ್ಪಡುತ್ತಿತ್ತು.[೩] ಕೆಲವು ನಗರಗಳಲ್ಲಿ ಶುಲ್ಕಸಹಿತ ಉದ್ಯೋಗ ಜಾಹೀರಾತುಗಳಿಂದ ಬರುವ ಹಣವೇ ಆದಾಯದ ಪ್ರಮುಖ ಮೂಲವಾಗಿದೆ.-ಸ್ಯಾನ್ ಫ್ರ್ಯಾನ್ಸಿಸ್ಕೋ ಬೇ ಪ್ರದೇಶದಲ್ಲಿ ಪ್ರತಿ ಜಾಹೀರಾತಿಗೆ $75ಗಳಂತೆ ಹಾಗು ನ್ಯೂಯಾರ್ಕ್ ನಗರ, ಲಾಸ್ ಏಂಜಲಿಸ್ , ಸ್ಯಾನ್ ಡಿಗೊ, ಬುಸ್ಟನ್ , ಸಿಏಟಲ್ , ವಾಷಿಂಗ್ ಟನ್ D.C.ಚಿಕಾಗೋ , ಫಿಲಾಡೆಲ್ಫಿಯಾ ಮತ್ತು ಪೊಲ್ಯಾಂಡ್ ನಲ್ಲಿ ಪ್ರತಿ ಜಾಹೀರಾತಿಗೆ $25 ಗಳಂತೆ ಶುಲ್ಕವನ್ನು ವಿಧಿಸಲಾಗುತ್ತದೆ. ಅಲ್ಲದೇ ನ್ಯೂ ಯಾರ್ಕ ನಗರದಲ್ಲಿ ಪಟ್ಟಿಮಾಡಲಾಗಿರುವ ಪ್ಯೆಯ್ಡ್ ಬ್ರೋಕರ್ ಅಪಾರ್ಟ್ ಮೆಂಟ್ ಗೆ ( ಪ್ರತಿ ಜಾಹೀರಾತಿಗೆ $10) ನಿಗದಿಮಾಡಲಾಗಿದೆ.
ಈ ಸೈಟ್ ಪ್ರತಿ ತಿಂಗಳಿಗೆ ಇಪ್ಪತ್ತು ಬಿಲಿಯನ್ ಪುಟಗಳ ವೀಕ್ಷಣೆ ಅವಕಾಶವನ್ನು ಹೊಂದಿದೆ. ಪ್ರಪಂಚದಾದ್ಯಂತ ಇರುವ ವೆಬ್ ಸೈಟ್ ಗಳಲ್ಲಿ 37ನೇ ಸ್ಥಾನವನ್ನು ಹಾಗು ಯುನೈಟೆಡ್ ಸ್ಟೇಟ್( Alexa.com ಜನವರಿ 8, 2010ರ ಪ್ರಕಾರ ) ನಲ್ಲಿ ಇರುವ ಒಟ್ಟು ವೆಬ್ ಸೈಟ್ ಗಳಲ್ಲಿ 11 ನೇ ಸ್ಥಾನ ಪಡೆದಿದೆ. ಅಲ್ಲದೇ ಪ್ರತಿ ತಿಂಗಳಿಗೆ 49.4 ಮಿಲಿಯನ್ ನಷ್ಟು ಸಂದರ್ಶಕರನ್ನು ಕೇವಲ ಯುನೈಟೆಡ್ ಸ್ಟೇಟ್ಸ್ ನಲ್ಲಿಯೇ ಒಳಗೊಂಡಿದೆ.(Compete.com ಜನವರಿ 8, 2010ರ ಪ್ರಕಾರ). ಪ್ರತಿ ತಿಂಗಳ ಎಂಬತ್ತು ಮಿಲಿಯನ್ ಹೊಸ ವರ್ಗೀಕೃತ ಜಾಹೀರಾತುಗಳಲ್ಲಿ , ಕ್ರೇಗ್ಸ್‌ಲಿಸ್ಟ್ ಯಾವುದೇ ಮಾಧ್ಯಮದಲ್ಲೂ ಪ್ರಮುಖ ವರ್ಗೀಕೃತ ಸೇವಾ ವಿಭಾಗವಾಗಿದೆ. ಈ ಸೈಟ್ ಪ್ರತಿ ತಿಂಗಳು ಒಂದು ಮಿಲಿಯನ್ ಹೊಸ ಉದ್ಯೋಗಗಳ ಪಟ್ಟಿಯನ್ನು ಪಡೆದುಕೊಳ್ಳುತ್ತಾ, ಇದನ್ನು ಪ್ರಪಂಚದ ಅತ್ಯಂತ ದೊಡ್ಡ ಉದ್ಯೋಗ ಮಂಡಳಿಯನ್ನಾಗಿಸುತ್ತಿದೆ.[೪] ವರ್ಗೀಕೃತ ಜಾಹೀರಾತುಗಳು ಸಾಂಪ್ರದಾಯಿಕ ಕೊಂಡುಕೊಳ್ಳುವ/ಮಾರಾಟ ಮಾಡುವ ಜಾಹೀರಾತುಗಳಲ್ಲಿ, ಹಾಗು ವೈಯಕ್ತಿಕ ಜಾಹೀರಾತುಗಳಲ್ಲಿ ಮತ್ತು ವಯಸ್ಕರ ಸೇವೆ(ಮೊದಲ ಲೈಂಗಿಕತೆಗೆ ಸಂಬಂಧಿಸಿದ ಸೇವೆಗಳು )ಯ ಬಗ್ಗೆ ಸಾಮೂಹಿಕ ಪ್ರಕಟನೆಗಳಲ್ಲಿ ವ್ಯತ್ಯಾಸ ಹೊಂದಿರುತ್ತವೆ.
ಸೈಟ್ ಪ್ರಾರಂಭವಾದಾಗಿನಿಂದಲೂ ವಿನ್ಯಾಸಗಳಲ್ಲಿ ಮಾತ್ರ ಕೇವಲ ಕೆಲವೆ ಸಣ್ಣ ಬದಲಾವಣೆಯನ್ನು ಮಾಡಿರುವುದು ಗಮನಾಹರವಾಗಿದೆ; 1996 ರಲ್ಲಿ ಮಾಡಿದ ವಿನ್ಯಾಸ ಕೂಡ ತುಂಬ ಸರಳವಾಗಿತ್ತು. ವಾಸ್ತವವಾಗಿ 2001ರ ವರೆಗೆ ಸೈಟ್ ತನ್ನ ವಿನ್ಯಾಸವನ್ನು ಬದಲಾಯಿಸಿರಲಿಲ್ಲ. ಏಪ್ರಿಲ್ 2010 ರಲ್ಲಿ ಕ್ರೇಗ್ಸ್‌ಲಿಸ್ಟ್ ಚಿತ್ರಗಳನ್ನು ಹೆಚ್ಚಾಗಿ ಬಳಸುವುದು ಬಿಟ್ಟು ಕೇವಲ ಕನಿಷ್ಠ ಜಾವಾಲಿಪಿಯನ್ನು ಬಳಸಿತು. ಆ ವಿನ್ಯಾಸದ ತತ್ವಗಳು 1990 ರ ಕೊನೆಯಲ್ಲಿ ಸಾಮಾನ್ಯವಾಗಿದ್ದವು, ಆದರೆ ಈಗಿನ ಅನೇಕ ಪ್ರಮುಖ ವೆಬ್ ಸೈಟ್ ಗಳಿಗೆ ಅವು ಅಜ್ಞಾತವಾಗಿವೆ.[ಸೂಕ್ತ ಉಲ್ಲೇಖನ ಬೇಕು]
ಡಿಸೆಂಬರ್ 2006ರಲ್ಲಿ ನ್ಯೂ ಯಾರ್ಕ್ ನ UBS ವಿಶ್ವವ್ಯಾಪಕ ಸಮೂಹ ಮಾಧ್ಯಮ ಸಮ್ಮೇಳನದಲ್ಲಿ ಕ್ರೇಗ್ಸ್‌ಲಿಸ್ಟ್ CEO ಆದ ಜಿಮ್ ಬಕ್ ಮಾಸ್ಟರ್ ವಾಲ್ ಸ್ಟ್ರೀಟ್ನ ವಿಶ್ಲೇಷಕರಿಗೆ ಹೀಗೆ ಹೇಳುತ್ತಾನೆ; ಕ್ರೇಗ್ಸ್‌ಲಿಸ್ಟ್ ಲಾಭವನ್ನು ಹೆಚ್ಚಿಸುವುದರ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿಲ್ಲ ಬದಲಿಗೆ ಅದು ಬಳಕೆದಾರರಿಗೆ ಬೇಕಾದ ಕಾರು, ವಾಸದ ಮಹಡಿ, ಉದ್ಯೋಗ ಹಾಗು ಸಂಗಾತಿಯನ್ನು ಪಡೆಯಲು ಅವರಿಗೆ ಸಹಾಯ ಮಾಡಲು ಬಯಸುತ್ತದೆ.
ಸಾಮಾನ್ಯವಾಗಿ ಕಂಪನಿ ಅದರ ಹಣಕಾಸಿನ ವಿಚಾರ ಅಥವಾ ಸ್ವಾಮ್ಯದ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ. ವಿಶ್ಲೇಷಕರು ಮತ್ತು ನಿರೂಪಣಕಾರರು ಇವರ ವಾರ್ಷಿಕ ಆದಾಯದ ವಿವಿಧ ಮೊತ್ತದ ವರದಿ ಸಲ್ಲಿಸಿದ್ದಾರೆ. 2004ರಲ್ಲಿ $10 ಮಿಲಿಯನ್ ,2005ರಲ್ಲಿ $20 ಮಿಲಿಯನ್ , ಹಾಗು 2006 ರಲ್ಲಿ $25 ಮಿಲಿಯನ್ 2007 ರ ಹೊತ್ತಿಗೆ $150 ಮಿಲಿಯನ್ ನಷ್ಟು ಆದಾಯ ಸಾಧ್ಯವಾಗಿರಬಹುದು.[೫][೬][೭] ಈ ಸೈಟ್ ಅನ್ನು ಪ್ರಮುಖವಾಗಿ ನ್ಯೂಮಾರ್ಕ್ , ಬಕ್ ಮಾಸ್ಟರ್ ಮತ್ತು ಇಬೇ (ಆಡಳಿತ ಮಂಡಲಿಯ ಮೂರು ಜನ ಸದಸ್ಯರು) ನಡೆಸುತ್ತಾರೆಂದು ನಂಬಲಾಗಿದೆ.ಇಬೇ 25% ನಷ್ಟು ಹಾಗು ನ್ಯೂ ಮಾರ್ಕ್ ಕಂಪನಿಯ ಅತ್ಯಂತ ಹೆಚ್ಚು ಹಕ್ಕನ್ನು ಹೊಂದಿದ್ದಾರೆ ಎಂದು ನಂಬಲಾಗಿದೆ.[೭][೮][೯]
ಹಿನ್ನೆಲೆ
[ಬದಲಾಯಿಸಿ]ವೆಲ್ , ಮೈಂಡ್ ವಿಕ್ಸ್ ಮತ್ತು ಯೂಸ್ ನೆಟ್ ಅಂತರಜಾಲ ಸೇವೆಗಳಲ್ಲಿ ಜನರು ಪರಸ್ಪರ ಸ್ನೇಹಭಾವದಲ್ಲಿ , ಸಾಮಾಜಿಕವಾಗಿ ಹಾಗು ಸಾಮುದಾಯಿಕ ರೀತಿಯಲ್ಲಿ ಒಬ್ಬರಿಗೊಬ್ಬರು ಸಹಾಯಮಾಡುವುದನ್ನು ಗಮನಿಸಿ ;ಸ್ಯಾನ್ ಫ್ರ್ಯಾನ್ಸಿಸ್ಕೊಗೆ ಈ ಸೈಟ್ ಹೊಸದೆಂದು ಭಾವಿಸಬಹುದಾದ ಕಾರಣ;ಕ್ರೇಗ್ಸ್‌ಲಿಸ್ಟ್ ನ ಸಂಸ್ಥಾಪಕ ಕ್ರೇಗ್ ನ್ಯೂಮಾರ್ಕ್ ಸ್ಥಳಿಯ ಘಟನೆಗಳಿಗೆ ಹತ್ತಿರವಾಗುವಂತೆ ಏನನ್ನಾದರು ಸೃಷ್ಟಿಸಲು ನಿರ್ಧರಿಸಿದ.[೧೦]
ಸ್ಯಾನ್ ಫ್ರ್ಯಾನ್ಸಿಸ್ಕೊ ದ ಘಟನೆಗಳ ಪಟ್ಟಿಯನ್ನು ಒಳಗೊಂಡಿರುವ ಮೊಟ್ಟ ಮೊದಲನೆಯ ಇಮೇಲ್ ಅನ್ನು 1995 ರಲ್ಲಿ ಪ್ರಥಮವಾಗಿ ಕಳುಹಿಸಲಾಯಿತು ಆರಂಭದಲ್ಲಿದ್ದ ತಂತ್ರಜ್ಞಾನ ಕೆಲವು ಪರಿಮಿತಿಗಳಿಗೆ ಒಳಪಡಬೇಕಾಯಿತು, ಜೂನ್ 2005 ರಲ್ಲಿ ಮೇಜರ್ ಡೋಮೋ ಸಾಫ್ಟ್ ವೇರ್ಅನ್ನು ಅಳವಡಿಸಲಾಯಿತು. ಅಲ್ಲದೇ "ಕ್ರೇಗ್ಸ್‌ಲಿಸ್ಟ್" ಮೇಲಿಂಗ್ ಪಟ್ಟಿಯ ಕಾರ್ಯನಿರ್ವಾಹಕವನ್ನು ಪಡೆದುಕೊಂಡಿತು. ಮೊದಲಿನ ಬಹುಪಾಲು ಪೋಸ್ಟ್ ಗಳನ್ನು ನ್ಯೂ ಮಾರ್ಕ್ ಕಳುಹಿಸುತ್ತಿದ್ದ.ಈ ಪೋಸ್ಟ್ ಗಳು ಸ್ಯಾನ್ ಫ್ರ್ಯಾನ್ಸಿಸ್ಕೊನಲ್ಲಿ ನೆಲೆಸಿರುವ, ಹಾಗು ಕಾರ್ಯನಿರ್ವಹಿಸುತ್ತಿರುವ ಸಾಫ್ಟ್ ವೇರ್ ಮತ್ತು ಇಂಟರ್ ನೆಟ್ ಅಭಿವರ್ಧಕರು(ಡೆವಲಪರ್ಸ್ )ಗಳಿಗೆ ಆಸಕ್ತಿದಾಯಕವಾದ ಸ್ಥಳೀಯ ಘಟನೆಗಳ ಮಾಹಿತಿಯನ್ನು ಒಳಗೊಂಡಿರುತ್ತಿದ್ದವು.
ಬಾಯಿಂದ ಬಾಯಿಗೆ ಹರಡಿ ಇದು ಅತಿ ವೇಗವಾಗಿ ಬೆಳೆಯಿತು. ಚಂದಾದಾರರ ಸಂಖ್ಯೆ ಮತ್ತು ಪೋಸ್ಟಿಂಗ್ ನ ಸಂಖ್ಯೆ ಅತಿ ವೇಗವಾಗಿ ಬೃಹತ್ ಪ್ರಮಾಣದಲ್ಲಿ ಬೆಳೆಯಿತು. ಇಳಿಮುಖ ಹೊಂದಲೇ ಇಲ್ಲ. ಜನರು ಘಟನೆಗಳಿಲ್ಲದ ಪೋಸ್ಟಿಂಗ್ ನ ಮೇಲಿಂಗ್ ಪಟ್ಟಿಯನ್ನೂ ಕೂಡ ಬಳಸಲು ಪ್ರಾರಂಭಿಸಿದಾಗ ನ್ಯೂಮಾರ್ಕ್ ಆಶ್ಚರ್ಯಚಕಿತನಾದ.[ಸೂಕ್ತ ಉಲ್ಲೇಖನ ಬೇಕು] ಜನರಿಗೆ ಇಷ್ಟವಾದ ತಾಂತ್ರಿಕ ಹುದ್ದೆಗಳ ಪಟ್ಟಿ, ಅವರಿಗೆ ಬೇಕಾದ ಕೆಲಸವನ್ನು ಹುಡುಕಿ ಕೊಡುವ ಪ್ರಮುಖ ಮಾಧ್ಯಮವಾಯಿತು. ಇದು "ಉದ್ಯೋಗ"ಕ್ಕೆ ಮತ್ತೊಂದು ವಿಭಾಗವನ್ನು ಸೇರಿಸಲು ಕಾರಣವಾಯಿತು. ಅಧಿಕ ವಿಭಾಗಳು ಬೇಕೆಂಬ ಬಳಕೆದಾರನ ಬೇಡಿಕೆ ವಿಭಾಗಗಳು ಹೆಚ್ಚಾಗಲು ಕಾರಣವಾದವು. ಸಮೂಹದ ಸದಸ್ಯರು ವೆಬ್ ಇಂಟರ್ ಫೆಸ್ ಅನ್ನು ಕೇಳಲು ಪ್ರಾರಂಭಿಸಿದರು. ನ್ಯೂಮಾರ್ಕ್, ವಿಭಿನ್ನ ಮೇಲಿಂಗ್ ಲಿಸ್ಟ್ ವಿಭಾಗಗಳಿಗೆ ವೆಬ್ ಸೈಟ್ ಬಳಕೆದಾರರ ಇಂಟರ್ ಫೆಸ್ ಅನ್ನು ಸೃಷ್ಟಿಸಲು ಸ್ವಯಂಸೇವಕರ ಹಾಗು ಗುತ್ತಿಗೆದಾರರ ಸಹಾಯವನ್ನು ಪಡೆದುಕೊಂಡ.[ಸೂಕ್ತ ಉಲ್ಲೇಖನ ಬೇಕು] ಈ ಸೈಟ್ ಗೆ ಹೆಸರನ್ನು ಕೊಡುವ ಅವಶ್ಯಕತೆಯಿಂದ ಕ್ರ್ಯೇಗ್ "craigslist.org" ಎಂದು ದಾಖಲಿಸಿದ (ಅಲ್ಲದೇ "ಕ್ರೇಗ್ಸ್‌ಲಿಸ್ಟ್" ಹೆಸರನ್ನು ಬೇರೆ ಉದ್ದೇಶಗಳಿಗೆ ಬಳಸಬಹುದು ಎಂಬ ಕಾರಣಕ್ಕೆ ನಂತರ "craigslist.com"ಎಂದು ನಾಮಕರಣ ಮಾಡಿದ).[ಸೂಕ್ತ ಉಲ್ಲೇಖನ ಬೇಕು] ಈ ವಿದ್ಯಮಾನಗಳು ನಡೆಯುತ್ತಿರುವಾಗ ನ್ಯೂಮಾರ್ಕ, ಸೈಟ್ ಅತಿ ವೇಗವಾಗಿ ಬೆಳೆಯುತ್ತಿರುವ ಕಾರಣ ತಾನು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುದನ್ನು ಬಿಟ್ಟು ಸಂಪೂರ್ಣವಾಗಿ ಕ್ರೇಗ್ಸ್‌ಲಿಸ್ಟ್ ನಡೆಸಬೇಕೆಂಬುದನ್ನು ಮನಗಂಡ. ಏಪ್ರಿಲ್ 2000ದ ಹೊತ್ತಿಗೆ ಸ್ಯಾನ್ ಫ್ರ್ಯಾನ್ಸಿಸ್ಕೊದ ಕೋಲೆ ಸ್ಟ್ರೀಟ್ ನಲ್ಲಿರುವ ನ್ಯೂ ಮಾರ್ಕ್ ನ ಅಪಾರ್ಟ್ ಮೆಂಟ್ ನಲ್ಲಿ ಒಂಭತ್ತು ಜನ ಕೆಲಸಗಾರರು ಕಾರ್ಯನಿರ್ವಹಿಸುತ್ತಿದ್ದರು.[೧೧]
ಕ್ರೇಗ್ಸ್‌ಲಿಸ್ಟ್ ಕೆಲಸ ಮಾಡುತ್ತಿದೆ , ಏಕೆಂದರೆ ಇದು ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತದೆ;ಸಾಮೂಹಿಕ ನಂಬಿಕೆಯನ್ನು ಹಾಗು ಆತ್ಮೀಯತೆಯನ್ನೂ ಕೂಡ ನೀಡುತ್ತಿದೆ: ಎಂದು ನ್ಯೂ ಮಾರ್ಕ್ ಹೇಳುತ್ತಾನೆ. ಅವನು ಇದರ ಸರಳತತ್ವದ ದೃಢತೆ , ಗ್ರಾಹಕ ಸೇವೆ ಹಾಗು ಸರಳತೆಯ ಬಗ್ಗೆಯು ಉಲ್ಲೇಖಿಸುತ್ತಾನೆ. ನ್ಯೂಮಾರ್ಕ್ ಗೆ ಕ್ರೇಗ್ಸ್‌ಲಿಸ್ಟ್ ನಲ್ಲಿ ಶೀರ್ಷಿಕೆ ಜಾಹೀರಾತುಗಳನ್ನು ನಡೆಸುವ ಅವಕಾಶ ದೊರೆಯಿತು, ಆದರೆ ಅವನು ಮುಕ್ತಾಯ ಹೇಳಲು ನಿರ್ಧರಿಸಿದ್ದ. 2002ರಲ್ಲಿ , ಏಪ್ರಿಲ್ ಫೂಲ್ ಜೋಕ್ ಎಂದು ಕ್ರೇಗ್ಸ್‌ಲಿಸ್ಟ್ ಸಿಬ್ಬಂದಿ ವರ್ಗ ಸುಳ್ಳು-ಶೀರ್ಷಿಕೆಯ ಜಾಹೀರಾತುಗಳನ್ನು ಇಡೀ ಸೈಟ್ ನಲ್ಲೆಲ್ಲಾ ಕಳುಹಿಸಿದ್ದರು.[೧೨]
ಕಾನೂನು ಬಾಹಿರ ಮತ್ತು ಅಸಂಬದ್ಧ ಪೋಸ್ಟಿಂಗ್ ಗಳನ್ನು ತಕ್ಷಣವೇ ಕಂಡು ಹಿಡಿಯಲು ಕ್ರೇಗ್ಸ್‌ಲಿಸ್ಟ್ ಬಳಕೆದಾರರ ಫ್ಲ್ಯಾಗಿಂಗ್ ವ್ಯವಸ್ಥೆಯನ್ನು ಉಪಯೋಗಿಸುತ್ತದೆ. ಬಳಕೆದಾರರ ಫ್ಲ್ಯಾಗ್ ಅನ್ನು ಅನೇಕ ಬಾರಿ ಕಳುಹಿಸಿದಾಗ ಅದನ್ನು ತೆಗೆದುಹಾಕಲಾಗುತ್ತದೆ. ಪೋಸ್ಟಿಂಗ್ ಗಳನ್ನು ಮೂರು ವಿಭಾಗಗಳಿಗೆ ಫ್ಲ್ಯಾಗ್ ಮಾಡಲಾಗಿದೆ:ಅನುಚಿತ ಸ್ಥಳದಲ್ಲಿಟ್ಟ, ನಿಷೇಧಿಸಲಾದ ಅಥವಾ ಸ್ಪ್ಯಾಮ್/ಒವರ್ ಪೋಸ್ಟ್.[೧೩] ಆದಾಗ್ಯೂ ಬಳಕೆದಾರರು ಪ್ರತಿಯೊಂದು ಫ್ಲ್ಯಾಗಿಂಗ್ ವಿಭಾಗಕ್ಕೂ ಲಘು ಟಿಪ್ಪಣಿ ಬರೆದಿದ್ದಾರೆ. ಕ್ರೇಗ್ಸ್‌ಲಿಸ್ಟ್ ನ ಬಳಕೆಯ ಪ್ರಕಾರ , ಬಳಕೆದಾರರು ಅವರು ಇಚ್ಛಿಸುವುದರಿಂದ ,ಪೂರ್ವಗ್ರಹದಿಂದ ಅಥವಾ ಸರಿಯಾಗಿ ಅರ್ಥಮಾಡಿಕೊಳ್ಳದೆ ಇರುವುದರಿಂದಲೂ ಕೂಡ ಫ್ಲ್ಯಾಗ್ ಮಾಡಬಹುದು.[೧೪] ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಹಾಗು ಫ್ಯಾಗಿಂಗ್ ಅನ್ನು ಸ್ಪಷ್ಟ ಪಡಿಸಿಕೊಳ್ಳಲು ಅಂದರೆ ಅನೌಪಚಾರಿಕ ಫ್ಯ್ಲಾಗಿಂಗ್ FAQ[೧೫] ಮತ್ತು ಫ್ಲ್ಯಾಗ್ ಸಹಾಯಕ ಫೋರಮ್ ನಲ್ಲಿ ಕೆಲವು ನಿಯಮಗಳನ್ನು ಹಾಕಿಕೊಳ್ಳುವುದು ಬಳಕೆದಾರರಿಗೆ ಸೇರಿದ್ದಾಗಿದೆ.[೧೬]
ಕ್ರೇಗ್ಸ್‌ಲಿಸ್ಟ್ ಗೆ ಅತ್ಯಂತ ಮಹತ್ವಪೂರ್ಣ ಘಟನೆಗಳು
[ಬದಲಾಯಿಸಿ]- ಜನವರಿ 2000ದಲ್ಲಿ , ಪ್ರಸ್ತುತ CEO ಜಿಮ್ ಬಕ್ ಮಾಸ್ಟರ್CTO ಹಾಗು ಪ್ರಮುಖ ಪ್ರೋಗ್ರಾಮರ್ ಆಗಿ ಕಂಪೆನಿಯನ್ನು ಸೇರಿಕೊಂಡರು. ಬಕ್ ಮಾಸ್ಟರ್ ಸೈಟ್ ಗೆ ಮಲ್ಟಿ-ಸಿಟಿ ಅರ್ಕಿಟೆಕ್ಚರ್, ಸರ್ಚ್ ಇಂಜಿನ್, ಡಿಸ್ಕಷನ್ ಫೋರಮ್, ಫ್ಲ್ಯಾಗಿಂಗ್ ವ್ಯವಸ್ಥೆ , ಸೆಲ್ಫ್-ಪೋಸ್ಟಿಂಗ್ ಪ್ರೋಸೆಸ್, ಮುಖಪುಟ ವಿನ್ಯಾಸ, ವೈಯಕ್ತಿಕ ವಿಭಾಗಗಳು , ಮತ್ತು ಕ್ರೇಗ್ಸ್‌ಲಿಸ್ಟ್ ನ ಅತ್ಯಂತ ಉತ್ತಮ ಗುಣಲಕ್ಷಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರು ನವೆಂಬರ್ 2000ದ ಹೊತ್ತಿಗೆ CEO ಆಗಿ ಭಡ್ತಿ ಪಡೆದರು.[೧೭]
- 2002ರಲ್ಲಿ "ಮೆನ್ ಸೀಕಿಂಗ್ ಮೆನ್", "ಕ್ಯಾಷ್ಯುಅಲ್ ಎನ್ ಕೌಂಟರ್ಸ್", "ಎರೋಟಿಕ್ ಸರ್ವೀಸಸ್", ಮತ್ತು "ರಾಅಂಟ್ಸ್ ಮತ್ತು ರೇವ್ಸ್" ಈ ವಿಭಾಗವನ್ನು 18 ವರ್ಷ ಕ್ಕಿಂತ ಕಡಿಮೆ ವಯಸ್ಸಿನವರು ನೋಡದಂತೆ ನಿಷೇಧಿಸಲಾಗಿದೆ; ಆದರೆ " ಮೆನ್ ಸೀಕಿಂಗ್ ವಿಮೆನ್" , "ವಿಮೆನ್ ಸೀಕಿಂಗ್ ಮೆನ" ಅಥವಾ ವಿಮೆನ್ ಸೀಕಿಂಗ್ ವಿಮೆನ" ವಿಭಾಗಗಳನ್ನು ನಿಷೇಧಿಸಿಲ್ಲ. ಪಕ್ಷಪಾತ ಹಾಗು ನಕಾರಾತ್ಮಕ ಸ್ಟೀರಿಯೋ ಮುದ್ರಣದ ಆಪಾದನೆಗೆ ಪ್ರತ್ಯುತ್ತರ ನೀಡುವಂತೆ; ಕಂಪನಿಯ ನಿಯಮ ಏನೆಂದರೆ ಕಂಪನಿಯು ಬಳಕೆದಾರರ ಪ್ರತಿಕ್ರಿಯೆಗೆ ಹೆಚ್ಚು ಅಶ್ಲೀಲತೆ ಪ್ರದರ್ಶಿಸುವ ವಿಭಾಗಗಳ ಬಗ್ಗೆ "ಮೆನ್ ಸೀಕಿಂಗ್ ಮೆನ್ " ಅನ್ನು ಒಳಗೊಂಡಂತೆ ವಿನಯ ಪೂರ್ವಕ ವಾಗಿ ಎಚ್ಚರಿಕೆಯನ್ನು ನೀಡುವುದರ ಮೂಲಕ ಪ್ರತಿಕ್ರಿಯಿಸ ಬೇಕು ಎಂದು ಬಕ್ ಮಾಸ್ಟರ್ ಹೇಳಿದರು.[೧೮] ಇಂದು ಮೇಲೆ ಪಟ್ಟಿ ಮಾಡಲಾಗಿರುವ ಎಲ್ಲಾ ಮಂಡಳಿಗಳನ್ನು (ಜೊತೆಯಲ್ಲಿ ಇತರ ಮಂಡಳಿಗಳನ್ನು)ನಿಷೇಧಿಸಲಾಗಿದೆ .
- ಆಗಸ್ಟ್ 1ರ 2004ರಲ್ಲಿ ಕ್ರೇಗ್ಸ್‌ಲಿಸ್ಟ್ ನ್ಯೂ ಯಾರ್ಕ್ ಮತ್ತು ಲಾಸ್ ಏಂಜಲಿಸ್ ನ ಪುಟಗಳಲ್ಲಿ ಉದ್ಯೋಗ ಅವಕಾಶಗಳನ್ನು ಪೋಸ್ಟ್ ಮಾಡಲು $25 ನಷ್ಟು ಶುಲ್ಕವನ್ನು ವಿಧಿಸಲು ಪ್ರಾರಂಭಿಸಿತು. ಅದೇ ದಿನ "ಗಿಗ್ಸ"ಎಂದು ಕರೆಯುವ ಹೊಸ ವಿಭಾಗವನ್ನು ಕೂಡ ಸೇರಿಸಿಕೊಂಡಿತು.ಈ ವಿಭಾಗದಲ್ಲಿ ಕಡಿಮೆ ಬೆಲೆಯ ಹಾಗು ಶುಲ್ಕ ವಿಧಿಸಿರದ ಉದ್ಯೋಗಗಳ ಜಾಹೀರಾತು ಮತ್ತು ಇಂಟರ್ನ್ ಷಿಪ್ ಗಳನ್ನು ಉಚಿತವಾಗಿ ಪೋಸ್ಟ್ ಮಾಡಲಾಗುತ್ತಿತ್ತು.
- ಹರಾಜಿನಲ್ಲಿ ಕಂಪನಿಯ 25% ರಷ್ಟು ಶೇರನ್ನು ಮಾಜಿ ಮುಖ್ಯಸ್ಥನಿಂದ ಇಬೇ ಕೊಂಡುಕೊಂಡಿದೆ, ಎಂದು 2004 ಆಗಸ್ಟ್ 13 ರಂದು ನ್ಯೂ ಮಾರ್ಕ್ ತನ್ನ ಬ್ಲಾಗ್ ನಲ್ಲಿ ಪ್ರಕಟಿಸಿದನು. ಈ ಬೆಳವಣಿಗೆ ಸೈಟ್ ನ ದೀರ್ಘಕಾಲದ ವಾಣಿಜ್ಯೇತರ ಪ್ರವೃತ್ತಿಯ ಮೇಲೆ ಪ್ರಭಾವ ಬೀರಬಹುದು ಎಂದು ಕ್ರೇಗ್ಸ್‌ಲಿಸ್ಟ್ ನ ಕೆಲವು ಅಭಿಮಾನಿಗಳು ಅವರ ಕಾಳಜಿಯನ್ನು ತೋರಿಸಿದರು; ಇದು ನಿಜವಾಗಿ ಶಾಖೆಗಳಲ್ಲಿ ಉಂಟಾಗಬಹುದಾದ ಬದಲಾವಣೆಯನ್ನು ತೋರಿಸುತ್ತದೆ. As of ನವೆಂಬರ್ 2009[update][[ವರ್ಗ:Articles containing potentially dated statements from Expression error: Unexpected < operator.]],ಆದರೆ ಜಾಹೀರಾತುಗಳನ್ನು ತೆಗೆದುಕೊಳ್ಳದಿರುವ ಪ್ರವೃತ್ತಿಯಲ್ಲಾಗಲಿ , ಅಥವಾ ಲಾಭದಾಯಕತೆಯಲ್ಲಾಗಲಿ ಯಾವುದೇ ಶಾಶ್ವತ ಬದಲಾವಣೆಗಳು ಉಂಟಾಗಲಿಲ್ಲ(ಈಗಲೂ ಯಾವುದೇ ಬ್ಯಾನರ್ ಜಾಹೀರಾತುಗಳಿಲ್ಲ, ಹಾಗು ವಾಣಿಜ್ಯಕ್ಕೆ ನೀಡಿರುವ ಕೆಲವು ಸೇವೆಗಳಿಗೆ ಮಾತ್ರ ಶುಲ್ಕವನ್ನು ವಿಧಿಸಲಾಗುತ್ತಿದೆ).
- ಏಪ್ರಿಲ್ 2008ರಲ್ಲಿ ಇಬೇ ಅದರ "ನಾಲ್ಕು ವರ್ಷಗಳ ಬಂಡವಾಳ ಹೂಡಿಕೆಯನ್ನು ಕಾಪಾಡಬೇಕೆಂದು ಕ್ರೇಗ್ಸ್‌ಲಿಸ್ಟ್ ನ ಮೇಲೆ ಮೊಕದ್ದಮೆಯನ್ನು ಹೂಡಿತು"."ಕ್ರೇಗ್ಸ್‌ಲಿಸ್ಟ್ ನ ಕಾರ್ಯನಿರ್ವಾಹಕರು ಇಬೇಯ ಆದಾಯದ ಹಣದಲ್ಲಿ 10% ಗಿಂತ ಹೆಚ್ಚು ಆದಾಯವನ್ನು ಕಡಿಮೆ ಮಾಡಿದ್ದಾರೆ"ಎಂದು ಇಬೇ ಜನವರಿ 2008ರಲ್ಲಿ ಆರೋಪಿಸಿತ್ತು.[೧೯] ಇದಕ್ಕೆ ಪ್ರತಿಕ್ರಿಯಿಸುತ್ತಿರುವಂತೆ ಕ್ರೇಗ್ಸ್‌ಲಿಸ್ಟ್ , "ನ್ಯಾಯಯುತ ಸ್ಪರ್ಧೆಯಲ್ಲಿ ಪ್ರಮುಖ ಹಾಗು ಆಗುತ್ತಿರುವ ಹಾನಿಗೆ ಪರಿಹಾರ ನೀಡುವಂತೆ" ಮೇ 2008 ರಲ್ಲಿ ಇಬೇಯಾ ವಿರುದ್ಧ ಪ್ರತಿದಾವೆಯನ್ನು ಹೂಡಿತು .ಕ್ರೇಗ್ಸ್‌ಲಿಸ್ಟ್ ನ ಆರೋಪವು ಇಬೇ ಕ್ರೇಗ್ಸ್‌ಲಿಸ್ಟ್ ನ ಪಾಲುದಾರನಾಗಿ ಮಾಡಿರುವ ಕೃತ್ಯವನ್ನು ಆಧರಿಸಿದೆ.[೨೦]
- ಕ್ರೇಗ್ಸ್‌ಲಿಸ್ಟ್ 'ಎರೋಟಿಕ್ ಸರ್ವಿಸ್' ವಿಭಾಗವನ್ನು ಮುಚ್ಚಿ ಅದರ ಬದಲಿಗೆ 'ವಯಸ್ಕರ ಸೇವೆಯ'(ಅಡಲ್ಟ್ ಸರ್ವಿಸ್ ) ವಿಭಾಗವನ್ನು ಪ್ರಾರಂಭಿಸುತ್ತಿದೆ ಎಂದು ಮೇ 13ರ 2009ರಲ್ಲಿ ಪ್ರಕಟಿಸಿತು. ಇದರಲ್ಲಿನ ಪೋಸ್ಟಿಂಗ್ ಗಳನ್ನು ಕ್ರೇಗ್ಸ್‌ಲಿಸ್ಟ್ ನೌಕರರಿಂದ ಮರು ಪರೀಕ್ಷಿಸಲಾಗುವುದು. US ಸ್ಟೇಟ್ಸ್ ನಿಂದ ಎರೋಟಿಕ್ ಸರ್ವಿಸ್ ಜಾಹೀರಾತುಗಳನ್ನು ವೇಶ್ಯಾವಾಟಿಕೆಗೆ ಬಳಸಲಾಗುತ್ತಿದೆ, ಎಂಬ ಆರೋಪ ಬಂದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.[೨೧] ಈ ಹೊಸ ವಿಭಾಗಕ್ಕೆ ಪೋಸ್ಟಿಂಗ್ ಕಳುಹಿಸಲು $10 ನಷ್ಟು ಹಾಗೂ ನವೀಕರಿಸಲು $5 ರಷ್ಟು ಶುಲ್ಕ ವಿಧಿಸಲಾಗಿದೆ.
ಸಂಬಂಧಿಸಿದ ಮಾಧ್ಯಮ
[ಬದಲಾಯಿಸಿ]- 2003 ರಲ್ಲಿ ಮೈಕೆಲ್ ಫೇರಿಸ್ ಗಿಬ್ಸನ್24 ಹಾರ್ಸ್ ಆನ್ ಕ್ರೇಗ್ಸ್‌ಲಿಸ್ಟ್ ಎಂಬ ಸಾಕ್ಷ್ಯಚಿತ್ರವನ್ನು ಚಲನಚಿತ್ರವಾಗಿಸಿದ.
- ಆಫ್- ಬ್ರಾಡ್ ವೇಯ ಕೇಂದ್ರವಾದ ನ್ಯೂ ವಲ್ಡ್ ಸ್ಟೇಜಸ್[೨೨] ನಲ್ಲಿ, ಜೆಫ್ ರಿ ಸೆಲ್ಫ್ ಸೋಲೊ ಶೋ ಮೈ ಲೈಫ್ ಆನ್ ದಿ ಕ್ರೇಗ್ಸ್‌ಲಿಸ್ಟ್ ಅನ್ನು ನವೆಂಬರ್ 2007ರಲ್ಲಿ ರೆಅನ್ ಜೆ. ಡೆವಿಸ್ ನಿರ್ದೇಶಿಸಿದ. ಈ ಶೋ ಕ್ರೇಗ್ಸ್‌ಲಿಸ್ಟ್ ನಲ್ಲಿ ಯುವಕನೊಬ್ಬನ ಲೈಂಗಿಕ ಅನುಭವದ ಕಡೆ ಹೆಚ್ಚು ಪ್ರಾಮುಖ್ಯತೆ ನೀಡಿದೆ.ಆಲ್ಲದೇ ಎಷ್ಟು ಜನಪ್ರಿಯವಾಯಿತೆಂದರೆ ಫೆಬ್ರವರಿ 2008 ರಲ್ಲಿ ಇದನ್ನು ಅತ್ಯಂತ ಬೇಡಿಕೆಯ ಮೇರೆಗೆ ನ್ಯೂಯಾರ್ಕ್ ಗೆ ಮರಳಿಸಲಾಯಿತು.[೨೩]
- ನರ್ಡ್ ಕೋರ್ ಹಿಪ್ -ಹಾಪ್ ಸಂಗೀತಗಾರ ಶಾಫರ್ ದಿ ಡಾರ್ಕ್ ಲಾರ್ಡ್ ಎಂಬುವವನು ಆತನ ಆಲ್ಬಂ ಆದ ಮಾರ್ಕ್ ಆಫ್ ದಿ ಬೀಸ್ಟ್ ಗೆ "ಕ್ರ್ಯೇಗ್'ಸ್ ಲಿಸ್ಟ್" ಎಂಬ ಹಾಡನ್ನು ಧ್ವನಿ ಮುದ್ರಿಸಿದನು.
- ಜೂನ್ 16ರ 2009ರಲ್ಲಿ, "ವಿಯರ್ಡ್ ಆಲ್" ಯಾಂಕೋವಿಕ್ ಎಂಬುವನು "ಕ್ರೇಗ್ಸ್‌ಲಿಸ್ಟ್" ಎಂಬ ಶೀರ್ಷಿಕೆ ಇರುವಂತಹ ಹಾಡನ್ನು ಬಿಡುಗಡೆ ಮಾಡಿದ. ಇದು ಸ್ಟೈಲ್ ಆಫ್ ದಿ ಡೋರ್ಸ್ ವಿಡಿಯೋದಲ್ಲಿ ಮಾಡಿರುವ ಸೈಟ್ ನ ಅಣಕ ಬರಹವಾಗಿದೆ.
ಟೀಕೆ
[ಬದಲಾಯಿಸಿ]- ಕ್ರೇಗ್ಸ್‌ಲಿಸ್ಟ್ ಡಾಗ್ ಬ್ರೀಡರ್ಸ್ ನಿಂದ ಜಾಹಿರಾತುಗಳನ್ನು ತೆಗೆದುಕೊಳ್ಳುತ್ತಿರುವುದಕ್ಕೆ, ಹಾಗು ನಾಯಿಗಳು ಮರಿಹಾಕುವುದನ್ನು ಹೆಚ್ಚು ಪ್ರೋತ್ಸಾಹಿಸುತ್ತಿರುವುದಕ್ಕೆ ಮತ್ತು ಬೇ ಪ್ರದೇಶದಲ್ಲಿ ಪಿಟ್ ಬುಲ್ ಗಳನ್ನು ಬೇಜವಾಬ್ದಾರಿಯಿಂದ ಮಾರಾಟ ಮಾಡುತ್ತಿರುವುದರ ಬಗ್ಗೆ ಸ್ಯಾನ್ ಫ್ರ್ಯಾನ್ಸಿಸ್ಕೊ ಕ್ರಾನಿಕಲ್ ಜುಲೈ 2005ರಲ್ಲಿ ಕ್ರೇಗ್ಸ್‌ಲಿಸ್ಟ್ ಅನ್ನು ಟೀಕಿಸಿತು.[೨೪]
- ಕ್ರೇಗ್ಸ್‌ಲಿಸ್ಟ್ ಸ್ಥಳೀಯ ಸಮುದಾಯಗಳಲ್ಲಿ ಮಧ್ಯ ಪ್ರವೇಶಿಸಿದ್ದಕ್ಕೆ, ಹಾಗು ಸ್ಥಳೀಯ ಇತರ ಪತ್ರಿಕೆಗಳನ್ನು ನಿಸ್ಸಾರಗೊಳಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ; ಅದನ್ನು ಟೀಕಿಸುವ ಸಂಪಾದಕೀಯ ಲೇಖನವನ್ನು ಸ್ಯಾನ್ ಫ್ರ್ಯಾನ್ಸಿಸ್ಕೊ ಬೇ ಗಾರ್ಡಿಯನ್ ಜನವರಿ 2006ರಲ್ಲಿ ಪ್ರಕಟಿಸಿತು. ಕ್ರೇಗ್ಸ್‌ಲಿಸ್ಟ್ ಅನ್ನು ವಾಲ್-ಮಾರ್ಟ್ ನೊಂದಿಗೆ ಹೋಲಿಸಲಾಗಿತ್ತು ,ಇದು ಬಹುರಾಷ್ಟ್ರೀಯ ಸಂಘಟನೆಯಾಗಿದೆ. ಇದು ನಗರಗಳಿಗೆ ಬಂದ ನಂತರ ಸ್ಥಳೀಯ ವ್ಯಾಪಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತದೆ. ಅಲ್ಲದೇ ಕಡಿಮೆ ಬೆಲೆಗೆ ಆಗಾಧ ಸರಕುಗಳ ವಿತರಿಸುವ ಅವಕಾಶ ನೀಡತ್ತದೆ, ಎಂದು ಕೆಲವರು ಭಾವಿಸಿದ್ದಾರೆ.[೨೫]
- ವರ್ಗೀಕೃತ ಜಾಹೀರಾತುಗಳ ಮೂಲಕ ತಿಳಿಯದೆ ಮಾಡುತ್ತಿರುವ ಬಾಲ್ಯ ವೇಶ್ಯವಾಟಿಕೆಯನ್ನು ತಪ್ಪಿಸಬೇಕೆಂದು ಕಂಪನಿಯನ್ನು ಕೋರಿಕೊಳ್ಳುತ್ತ ಅಟ್ಲಾಂಟದ ಮೇಯರ್ ಶರ್ಲೆ ಫ್ರ್ಯಾಂಕ್ಲಿನ್ರವರು ಆಗಸ್ಟ್ 2007ರಲ್ಲಿ ಕ್ರೇಗ್ಸ್‌ಲಿಸ್ಟ್ ಗೆ ಪತ್ರವನ್ನು ಬರೆದಿದ್ದರು.[೨೬][೨೭]
ಲಾಭದ ಉದ್ದೇಶರಹಿತ ಸಂಸ್ಥೆ
[ಬದಲಾಯಿಸಿ]ಕಂಪನಿ ಕ್ರೇಗ್ಸ್‌ಲಿಸ್ಟ್ ಸಂಸ್ಥೆಯನ್ನು 2001ರಲ್ಲಿ ಪ್ರಾರಂಭಿಸಿತು. ಇದು § 501(c)(3) ಲಾಭದ ಉದ್ದೇಶರಹಿತ ಸಂಸ್ಥೆಯಾಗಿದೆ; ಹಾಗು ಸಮುದಾಯ ಮತ್ತು ನೆರೆಹೊರೆಯನ್ನು ಬಲಪಡಿಸಲು ಜನರಿಗೆ ಅವಶ್ಯವಿರುವ ಮೂಲಗಳೊಂದಿಗೆ ಸಂಬಂಧವನ್ನು ಕಲ್ಪಿಸಿಕೊಡುತ್ತದೆ. ಸಮುದಾಯಗಳ ರಚನೆಗೆ ಬೇಕಾದ ಆನ್ ಲೈನ್ ಮೂಲಗಳನ್ನು ಉತ್ತೇಜಕ ರೂಪದಲ್ಲಿ ಎಲ್ಲಾ ಹಂತಗಳಲ್ಲಿ ನೀಡುತ್ತದೆ ; ಉಚಿತ ಹಾಗು ಕಡಿಮೆ ಬೆಲೆಯ ಕಾರ್ಯಕ್ರಮಗಳ ಅವಕಾಶ ನೀಡುತ್ತದೆ. ಇದು ನೇರವಾಗಿ ಹಣ ಕೊಡುವ ಸಂಸ್ಥೆಗಳಿಗಿಂತ ದಾನವಾಗಿ ಕೊಡುವ ನಿಧಿಯನ್ನು ಸ್ವೀಕರಿಸುತ್ತದೆ. ಆಲ್ಲದೇ ಇದು "ಮುಖಾಮುಖಿ ಕಾರ್ಯಕ್ರಮಗಳನ್ನು ಹಾಗು ಮೂಲ ಸಂಸ್ಥೆಗಳು ಅವುಗಳ ವಲಯದಿಂದ ಹೊರಗೆ ಬಂದು ಸಮೂಹಕ್ಕೆ ನೀಡಬೇಕಾದ ನಿಜವಾದ ಕೊಡುಗೆಯನ್ನು ನೀಡುವಂತೆ ಸಹಾಯ ಮಾಡಲು ಆನ್ ಲೈನ್ ಮೂಲಗಳನ್ನು ನೀಡುತ್ತದೆ".
ಕ್ರೇಗ್ಸ್‌ಲಿಸ್ಟ್ ಸಂಸ್ಥೆ 2004 ರಲ್ಲಿ ಬೂಟ್ ಕ್ಯಾಂಪ್ ಎಂದು ಕರೆಯುವ ವಾರ್ಷಿಕ ಸಮ್ಮೇಳನವನ್ನು ನಡೆಸಿತು. ಇದು ವೈಯಕ್ತಿಕ(ಇನ್ ಪರ್ಸನ್) ಕಾರ್ಯಕ್ರಮವಾಗಿದದೆ. ಸಮೂಹದಲ್ಲಿ ಒಳಗೊಳ್ಳುವಿಕೆಯನ್ನು ಹಾಗು ಪ್ರಭಾವ ಬೀರುವುದನ್ನು ಪ್ರೇರೇಪಿಸುವ ,ಸೇರಿಸುವ ಕೌಶಲಗಳ ಕಡೆ ಹೆಚ್ಚು ಪ್ರಾಮುಖ್ಯತೆ ನೀಡಿತು. ಬೂಟ್ ಕ್ಯಾಂಪ್ ಆರಂಭವಾದಾಗಿನಿಂದಲೂ 10,000 ಕ್ಕಿಂತಲು ಹೆಚ್ಚು ಉತ್ಕಟ ಭಾವನೆಯುಳ್ಳ ಜನರನ್ನು ಆಕರ್ಷಿಸಿದೆ. ಮುಂದಿನ ಬೂಟ್ ಕ್ಯಾಂಪ್ ಕಾರ್ಯಕ್ರಮವನ್ನು ಆಗಸ್ಟ್ 14, 2010 ರ ಶನಿವಾರ ನಡೆಸಲಾಯಿತು.[೨೮]
ಕ್ರೇಗ್ಸ್‌ಲಿಸ್ಟ್ ಸಂಸ್ಥೆಯು ಅವರ್ ಗುಡ್ ವಕ್ಸ್ ಸಂಸ್ಥೆಗೆ ಹಣಕಾಸಿನ ನೆರವು ನೀಡುತ್ತದೆ. ಈ ಸಂಸ್ಥೆ AllforGood.org ಯನ್ನು ನಿರ್ವಹಿಸುತ್ತಿದೆ;ಇದು ವೆಬ್ ನ ಉದ್ದಕ್ಕೂ ಅನೇಕ ಅವಕಾಶಗಳನ್ನು ನೀಡುತ್ತದೆ.ಅಲ್ಲದೇ ಜನರು ಅವರ ಸಮೂಹಗಳಲ್ಲಿ ಒಳಗೊಳ್ಳಲು ಸಹಾಯ ಮಾಡುತ್ತದೆ.[೨೯]
ನಗರಗಳು
[ಬದಲಾಯಿಸಿ]ನಗರದ ಮೊದಲನೆಯ 14 ಸೈಟ್ ಗಳು :[೮] (ಇಡೀ ಪಟ್ಟಿಯಲ್ಲಿ Archived 2008-08-28 ವೇಬ್ಯಾಕ್ ಮೆಷಿನ್ ನಲ್ಲಿ.)
- ಮಾರ್ಚ್ 1995: ಸ್ಯಾನ್ ಫ್ರ್ಯಾನ್ಸಿಸ್ಕೋ ಬೇ ಪ್ರದೇಶ
- ಜೂನ್ 2000: ಬೊಸ್ಟನ್
- ಆಗಸ್ಟ್ 2000: , ಲಾಸ್ ಏಂಜಲಿಸ್, ನ್ಯೂ ಯಾರ್ಕ್, ಪೊರ್ಟ್ ಲ್ಯಾಂಡ್, ಸ್ಯಾನ್ ಡೈಗೊ, [[ಸೀ
ಟಲ್]], ವಾಷಿಂಗ್ಟನ್, D.C.
- ಅಕ್ಟೋಬರ್ 2000: ಸ್ಕ್ಯಾರಮೆಂಟೊ
- ಏಪ್ರಿಲ್ 2001: ಅಟ್ಲಾಂಟ, ಆಸ್ಟಿನ್, ಡೆನ್ ವರ್, ವ್ಯಾನ್ ಕೋವರ್
ವ್ಯಾನ್ ಕೋವರ್, ಬ್ರಿಟಿಷ್ ಕೊಲಂಬಿಯ, ಇವು ಅವರು ಸೇರಿಸಿಕೊಂಡ ಮೊದಲನೆಯ U.S. ಗೆ ಸೇರದ ನಗರಗಳಾಗಿವೆ. ಉತ್ತರ ಅಮೇರಿಕದ ಹೊರಗೆ ಲಂಡನ್ ಮೊದಲನೆಯ ನಗರವಾಗಿತ್ತು.
ನವೆಂಬರ್ 2004 ರಲ್ಲಿ ಸೇರಿಸಿಕೊಳ್ಳಲಾದಅಮ್ ಸ್ಟ್ರಾಡಮ್, ಬೆಂಗಳೂರು, ಪ್ಯಾರಿಸ್, ಸಾ ಪೌಲೊ, ಮತ್ತು ಟೋಕಿಯ , ಇವು ಇಂಗ್ಲೀಷ್ ಭಾಷೆ ಪ್ರಧಾನವಾಗಿರುವ ರಾಷ್ಟ್ರಗಳ ಹೊರಗೆ ಸೇರಿಸಿಕೊಂಡ ನಗರಗಳಲ್ಲಿ ಮೊಟ್ಟ ಮೊದಲನೆಯ ನಗರಗಳಾಗಿವೆ .
As of ಮೇ 2008[update][[ವರ್ಗ:Articles containing potentially dated statements from Expression error: Unexpected < operator.]]50 ದೇಶಗಳ 500 "ನಗರಗಳು"ಗಳು ಕ್ರೇಗ್ಸ್‌ಲಿಸ್ಟ್ ಸೈಟ್ ಗಳನ್ನು ಹೊಂದಿವೆ.[೮] ಕೆಲವು ಕ್ರೇಗ್ಸ್‌ಲಿಸ್ಟ್ ಸೈಟ್ ಗಳು ಏಕ ಪ್ರಧಾನ ನಗರ ಕೇಂದ್ರದ ಬದಲಿಗೆ ವಿಶಾಲ ಪ್ರದೇಶಗಳನ್ನು ಒಳಗೊಂಡಿವೆ. — ಉದಾಹರಣೆಗೆ; U.S. ಸ್ಟೇಟ್ ನ ಡೆಲ್ ವೇರ್ ಮತ್ತು ಯೋಮಿಂಗ್, ಕಾಲಾರ್ಯಾಡೊ ವೆಸ್ಟರ್ನ್ ಸ್ಲೋಪ್, ಕ್ಯಾಲಿಫೊರ್ನಿಯ ಗೋಲ್ಡ್ ಕಂಟ್ರಿ, ಮತ್ತು ಅಪ್ಪರ್ ಪೆನಿನ್ಸುಲಾ ಆಫ್ ಮಿಚಿಗನ್ ನಗರಗಳು, ತಮ್ಮದೇ ಕ್ರೇಗ್ಸ್‌ಲಿಸ್ಟ್ ಸೈಟ್ ಗಳನ್ನು ಒಳಗೊಂಡಿರುವ ನೆಲೆಗಳಲ್ಲಿ ಇವೂ ಸೇರಿಕೊಂಡಿವೆ .As of 24 ಸೆಪ್ಟೆಂಬರ್ 2009[update][[ವರ್ಗ:Articles containing potentially dated statements from Expression error: Unexpected < operator.]],695 ಅಪೂರ್ವ ಕ್ರೇಗ್ಸ್‌ಲಿಸ್ಟ್ ಸೈಟ್ ಗಳಿವೆ.ಅವುಗಳನ್ನು ಪೋಸ್ಟ್ ಕೂಡ ಮಾಡಬಹುದು.
ಭಾಷೆಗಳು
[ಬದಲಾಯಿಸಿ]ಮಾರ್ಚ್ 2008ರಲ್ಲಿ ಇಂಗ್ಲೀಷೇತರ ಭಾಷೆಗಳಾದ ಸ್ಪ್ಯಾನಿಷ್, ಫ್ರೆಂಚ್, ಇಟಾಲಿಯನ್, ಜರ್ಮನ್, ಮತ್ತು ಪೋರ್ಚುಗೀಸ್ ಉತ್ತೇಜನ ದೊರೆತ ಭಾಷೆಗಳಲ್ಲೇ ಮೊಟ್ಟ ಮೊದನೆಯ ಭಾಷೆಗಳಾಗಿವೆ.[೩೦]
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "craigslist – Company Overview". Hoover's. Retrieved 2008-05-08.
- ↑ "craigslist.org – Traffic Details from Alexa". Alexa Internet, Inc. Archived from the original on 2015-05-02. Retrieved 2009-10-17.
- ↑ Jones, Del (2007-01-02). "Can small businesses help win the war?". USA Today. Retrieved 2009-04-07.
- ↑ Lenhart, Amanda (2005). "Selling items online" (PDF). Pew Research Center. Archived from the original (PDF) on 2007-07-14. Retrieved 2007-09-06.
{{cite web}}
: Unknown parameter|coauthors=
ignored (|author=
suggested) (help); Unknown parameter|month=
ignored (help) - ↑ Lashinsky, Adam (2005-12-12). "Burning Sensation". Fortune. Retrieved 2007-08-22.
- ↑ Carney, Brian M. (2006-06-17). "Zen and the Art of Classified Advertising: Craigslist could make $500 million a year. Why not?". Wall Street Journal. Retrieved 2007-08-22.
- ↑ ೭.೦ ೭.೧ Thomas, Owen (2007-07-26). "http://www.opinionjournal.com/editorial/feature.html?id=110008531". Valleywag. Retrieved 2008-08-22.
{{cite news}}
: External link in
(help)|title=
- ↑ ೮.೦ ೮.೧ ೮.೨ craigslist.org (2006). "craigslist fact sheet". Archived from the original on 2008-08-28. Retrieved 2007-09-06.
{{cite web}}
: Unknown parameter|month=
ignored (help) - ↑ Sandoval, Greg (2007-07-03). "Craigslist grapples with competitor on board". CNET. Archived from the original on 2012-07-13. Retrieved 2007-08-22.
- ↑ "craigslist factsheet". Craigslist. Archived from the original on 2008-08-28. Retrieved 2008-05-08.
- ↑ "Archived page from Craigslist's About Us". 2000-04-19. Archived from the original on 2000-06-20. Retrieved 2007-02-08.
{{cite web}}
: CS1 maint: bot: original URL status unknown (link) - ↑ "april fool's rules". Craigslist. Archived from the original on 2007-02-27. Retrieved 2007-02-08.
- ↑ "flags and community moderation". Craigslist. Retrieved 2010-03-24.
- ↑ "terms of use". Craigslist. Retrieved 2010-03-24.
- ↑ "Unofficial Flagging FAQ". Craigslist users. Archived from the original on 2012-08-05. Retrieved 2010-03-24.
- ↑ "Craigslist flag help forum". Craigslist users. Retrieved 2010-03-24.
- ↑ "Jim Buckmaster—CEO & programmer". Archived from the original on 2007-06-30. Retrieved 2007-09-06.
- ↑ "Warning: men seeking men—Craigslist posts disclaimer for gay male personals". Southern Voice. 2005-08-31. Archived from the original on 2007-07-02. Retrieved 2007-09-06.
- ↑ "EBay sues Craigslist ad website". BBC. 2008-04-23. Retrieved 2008-05-08.
- ↑ "Craigslist strikes back at eBay". BBC. 2008-05-13. Retrieved 2008-05-13.
- ↑ Stone, Brad (2009-05-13). "Craigslist to Remove Category for Erotic Services". New York Times. Retrieved 2010-04-30.
- ↑ Hetrick, Adam (2007-10-17). "Jeffery Self to Offer My Life on the Craigslist at New World Stages Nov. 1". Playbill. Retrieved 2008-05-08.
- ↑ "'My Life on the Craigslist' Returns Feb. 15, 22 & 29". Broadway World. 2008-01-23. Retrieved 2008-05-08.
- ↑ Ilene Lelchuk (July 11, 2005). "Craigslist pressured to ban dog, cat ads". San Francisco Chronicle. Retrieved 2007-09-06.
- ↑ Tim Redmond (July 11, 2005). "Editor's Notes". San Francisco Bay Guardian. Archived from the original on 2010-12-05. Retrieved 2007-09-06.
- ↑ David Pendered (August 22, 2007). "Mayor rips Craigslist over child prostitution". agc.com.
- ↑ "Atlanta mayor says Craigslist used for child prostitution". San Francisco Business Times. 2007-08-22. Retrieved 2008-01-29.
- ↑ "ಕ್ರೇಗ್ಸ್‌ಲಿಸ್ಟ್ ಸಂಸ್ಥೆ ಯ ಕಾರ್ಯಕ್ರಮ". Archived from the original on 2010-05-12. Retrieved 2010-06-15.
- ↑ AllforGood.org
- ↑ Craig Newmark (March 27, 2008). "Multiple language support on Craigslist". cnewmark. Archived from the original on 2008-10-05. Retrieved 2008-09-13.
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಅಧಿಕೃತ ವೆಬ್‌ಸೈಟ್
[ಬದಲಾಯಿಸಿ]- ಕ್ರೇಗ್ಸ್‌ಲಿಸ್ಟ್ ಮುಖಪುಟ
- ಕಂಪನಿ ಬ್ಲಾಗ್
- ಕ್ರೇಗ್ಸ್‌ಲಿಸ್ಟ್ ಸಂಸ್ಥೆ Archived 2010-06-14 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- Pages using duplicate arguments in template calls
- CS1 errors: unsupported parameter
- CS1 errors: external links
- CS1 maint: bot: original URL status unknown
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from August 2009
- Articles with unsourced statements from October 2007
- Articles with unsourced statements from February 2007
- Articles with unsourced statements from November 2007
- Articles with invalid date parameter in template
- All articles containing potentially dated statements
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಜಾವಾ ಸರ್ಚ್ ಎಂಜಿನ್ಸ್
- ಉಚಿತ ವೆಬ್ ಸೈಟ್ ಗಳನ್ನು- ಪ್ರಚಾರ ಮಾಡುವುದು
- ಆನ್ ಲೈನ್ ಸಾಮಾಜಿಕ ಜಾಲ
- ಸ್ಯಾನ್ ಫ್ರ್ಯಾನ್ಸಿಸ್ಕೊ, ಕ್ಯಾಲಿಫೋರ್ನಿಯ ಮೂಲದ ಕಂಪನಿಗಳು
- ಅಮೆರಿಕನ್ ವೆಬ್ ಸೈಟ್ಸ್
- ಕಾರ್ಯತಃ ಪರಿಣಾಮಕಾರಿ ಸಮುದಾಯಗಳು
- 1982ರಲ್ಲಿ ಸ್ಥಾಪನೆಯಾದ ಕಂಪನಿಗಳು
- 2003 ರಲ್ಲಿ ಸ್ಥಾಪಿಸಲ್ಪಟ್ಟ ಅಂತರಜಾಲ ಗುಣಗಳು
- ಅಂತರ ಜಾಲ ತಾಣಗಳು