ಕೋರೆದಾಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಆನೆ

ಕೋರೆದಾಡೆಗಳು (ದಂತ, ಕೊಂಬು) ಉದ್ದವಾದ, ನಿರಂತರವಾಗಿ ಬೆಳೆಯುತ್ತಿರುವ ಹಲ್ಲುಗಳಾಗಿರುತ್ತವೆ. ಸಾಮಾನ್ಯವಾಗಿ (ಆದರೆ ಯಾವಾಗಾಲೂ ಅಲ್ಲ) ಜೋಡಿಗಳಲ್ಲಿ ಬೆಳೆಯುತ್ತವೆ ಮತ್ತು ಕೆಲವು ಸಸ್ತನಿ ಪ್ರಾಣಿಗಳಲ್ಲಿ ಬಾಯಿಯನ್ನು ಮೀರಿ ಹೊರಚಾಚಿರುತ್ತವೆ. ಇವು ಅತ್ಯಂತ ಸಾಮಾನ್ಯವಾಗಿ ಕೋರೆಹಲ್ಲುಗಳಾಗಿರುತ್ತವೆ, ಉದಾಹರಣೆಗೆ ನರಹುಲಿಗಳು, ಹಂದಿಗಳು ಮತ್ತು ಕಡಲಸಿಂಹಗಳಲ್ಲಿ. ಆನೆಗಳ ವಿಷಯದಲ್ಲಿ ಇವು ಉದ್ದವಾದ ಬಾಚಿಹಲ್ಲುಗಳಾಗಿರುತ್ತವೆ. ಬಹುತೇಕ ಕೋರೆದಾಡೆಯಿರುವ ಪ್ರಾಣಿಗಳಲ್ಲಿ ಗಂಡು ಮತ್ತು ಹೆಣ್ಣು ಎರಡೂ ಕೋರೆದಾಡೆಗಳನ್ನು ಹೊಂದಿರುತ್ತವೆ, ಆದರೆ ಗಂಡಿನ ಕೋರೆದಾಡೆಗಳು ಹೆಚ್ಚು ದೊಡ್ಡದಾಗಿರುತ್ತವೆ. ಕೋರೆದಾಡೆಗಳು ಸಾಮಾನ್ಯವಾಗಿ ಬಾಗಿರುತ್ತವೆ, ಆದರೆ ನಾರ್ವಾಲ್‍ನ ಏಕೈಕ ಕೋರೆದಾಡೆಯು ನೇರವಾಗಿದ್ದು ಸುರುಳಿಯಾಕಾರದ ರಚನೆ ಹೊಂದಿರುತ್ತದೆ. ಹಲ್ಲುಗಳ ಬೇರುಗಳ ಶೃಂಗದ ರಂಧ್ರಗಳಲ್ಲಿನ ರೂಪಕಾರಕ ಅಂಗಾಂಶಗಳಿಂದ ನಿರಂತರ ಬೆಳವಣಿಗೆಯು ಸಾಧ್ಯವಾಗುತ್ತದೆ. ಹಿಂದಿನ ಕಾಲದಲ್ಲಿ, ೯೦ ಕೆ.ಜಿ.ಗಿಂತ ಹೆಚ್ಚು ತೂಕವಿರುವ ಆನೆಯ ದಂತಗಳು ಅಸಾಮಾನ್ಯವಾಗಿರಲಿಲ್ಲ, ಆದರೆ ಇಂದು ೪೫ ಕೆ.ಜಿ.ಗಿಂತ ಹೆಚ್ಚು ತೂಕದ ದಂತವನ್ನು ನೋಡುವುದು ಅಪರೂಪ.[೧]

ಉಲ್ಲೇಖಗಳು[ಬದಲಾಯಿಸಿ]

  1. "Still Life" by Bryan Christy. National Geographic Magazine, August, 2015, pp. 97, 104.