ಕೊಲ್ಲಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಲ್ಲಂ ಭಾರತದ ಕೇರಳ ರಾಜ್ಯದಲ್ಲಿನ ಒಂದು ಪುರಾತನ ಬಂದರು ಮತ್ತು ನಗರವಾಗಿದೆ. ಇದು ಅರಬ್ಬೀ ಸಮುದ್ರದ ಮಲಬಾರ್ ತೀರದ ಮೇಲೆ ಸ್ಥಿತವಾಗಿದೆ.[೧] ಇದು ರಾಜ್ಯದ ರಾಜಧಾನಿ ತಿರುವನಂತಪುರದಿಂದ 66 ಕಿಲೋಮೀಟರ್ ದೂರದಲ್ಲಿದೆ.[೨] ಈ ನಗರವು ಅಷ್ಟಮುಡಿ ಸರೋವರ ಮತ್ತು ಕಲ್ಲಡ ನದಿಯ ದಡದಲ್ಲಿದೆ.[೩][೪][೫]

ಅರಬ್ಬರು, ಫೀನಿಷಿಯನ್ನರು, ಚೈನೀಸರು, ಇಥಿಯೋಪಿಯನ್ನರು, ಸಿರಿಯನ್ನರು, ಯಹೂದಿಗಳು, ಚಲ್ದೀಯರು ಮತ್ತು ರೋಮನ್ನರ ಕಾಲದಿಂದಲೂ ಕೊಲ್ಲಂ ಪ್ರಬಲವಾದ ವಾಣಿಜ್ಯ ಖ್ಯಾತಿಯನ್ನು ಹೊಂದಿದೆ.[೬] ಇದನ್ನು 14 ನೇ ಶತಮಾನದಲ್ಲಿ ಇಬ್ನ್ ಬಟುಟಾ ತನ್ನ ಇಪ್ಪತ್ನಾಲ್ಕು ವರ್ಷಗಳ ಪ್ರಯಾಣದ ಸಮಯದಲ್ಲಿ ತಾನು ನೋಡಿದ ಐದು ಭಾರತೀಯ ಬಂದರುಗಳಲ್ಲಿ ಒಂದೆಂದು ಉಲ್ಲೇಖಿಸಿದ್ದಾನೆ.[೭] ಕೊಲ್ಲಮ್‍ನಲ್ಲಿ ಪೂರ್ಣ ಏಳಿಗೆಯಲ್ಲಿದ್ದ ಚೀನಾದ ವಸಾಹತು ಇತ್ತು. ವೆನೆಷಿಯನ್ ಪ್ರಯಾಣಿಕ ಮಾರ್ಕೊ ಪೊಲೊ, ಪಶ್ಚಿಮ ಕರಾವಳಿಯ ಕೊಲ್ಲಂ ಮತ್ತು ಇತರ ಪಟ್ಟಣಗಳಿಗೆ ಭೇಟಿ ನೀಡಿದನು.[೮] ಕೊಲ್ಲಂನಲ್ಲಿ ಸೇಂಟ್ ಥಾಮಸ್ ಸ್ಥಾಪಿಸಿದ ಏಳು ಚರ್ಚ್‌ಗಳಲ್ಲಿ ಒಂದು ಮತ್ತು ಕೇರಳದಲ್ಲಿ ಮಲಿಕ್ ದೀನಾರ್ ಸ್ಥಾಪಿಸಿದ 10 ಹಳೆಯ ಮಸೀದಿಗಳಲ್ಲಿ ಒಂದಿದೆ.

ಕೊಲ್ಲಂ ದಕ್ಷಿಣ ಕೇರಳದ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ.

ಸ್ಥಳನಾಮ[ಬದಲಾಯಿಸಿ]

ಕೊಲ್ಲಂ ಎಂಬ ಹೆಸರು ಸಂಸ್ಕೃತ ಪದ ಕೊಲ್ಲಂನಿಂದ ಬಂದಿದೆ ಎಂದು ನಂಬಲಾಗಿದೆ, ಅಂದರೆ ಮೆಣಸು.

ಪರವೂರು ಹತ್ತಿರ ಕೊಲ್ಲಂ ಕಾಲುವೆ

ಪ್ರವಾಸಿ ಸ್ಥಳಗಳು[ಬದಲಾಯಿಸಿ]

ಪೂಜಾ ಸ್ಥಳಗಳು[ಬದಲಾಯಿಸಿ]

ಹಿಂದೂ ದೇವಾಲಯಗಳು
ಕೊಟ್ಟರಕ್ಕರ ಶ್ರೀ ಮಹಾಗಣಪತಿ ಕ್ಷೇತ್ರ

ಇಲ್ಲಿ 400 ವರ್ಷಗಳಷ್ಟು ಹಳೆಯದಾದ ಆನಂದವಲ್ಲೀಶ್ವರಂ ಶ್ರೀ ಮಹಾದೇವರ ದೇವಸ್ಥಾನವಿದ್ದು ಇದು ಪುರಾತನ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ 400 ವರ್ಷಗಳಷ್ಟು ಹಳೆಯ ಗರ್ಭಗುಡಿಯನ್ನು ತೇಗದಲ್ಲಿ ನಯಗೊಳಿಸಲಾಗಿದೆ.[೯] ಅಮ್ಮಚಿವೀಡು ಮುಹೂರ್ತಿ ದೇವಸ್ಥಾನವು ನಗರದ ಇನ್ನೊಂದು ಪ್ರಮುಖ ದೇವಸ್ಥಾನವಾಗಿದ್ದು ಇದನ್ನು ಸುಮಾರು 600 ವರ್ಷಗಳ ಹಿಂದೆ ಕೊಲ್ಲಂನ ಶ್ರೀಮಂತರಾದ ಅಮ್ಮಾಚಿ ವೀಡು ಕುಟುಂಬವು ಸ್ಥಾಪಿಸಿತು.[೧೦][೧೧] ಆಶ್ರಮಂ ಶ್ರೀಕೃಷ್ಣ ಸ್ವಾಮಿ ದೇವಸ್ಥಾನದಲ್ಲಿ ಹತ್ತು ದಿನಗಳ ಉತ್ಸವ ನಡೆಯುತ್ತದೆ.[೧೨] ಕೊತ್ತನ್‍ಕುಲಂಗರ ದೇವಿ ದೇವಸ್ಥಾನವು ಕೇರಳದ ವಿಶ್ವಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಚಮಯವಿಲಕ್ಕು ಆಚರಣೆಗಾಗಿ ಪುರುಷರು ಹೆಂಗಸರ ಉಡುಪನ್ನು ಧರಿಸುತ್ತಾರೆ. ಇದು ಸಾಂಪ್ರದಾಯಿಕ ಹಬ್ಬಗಳ ಒಂದು ಭಾಗವಾಗಿದೆ. ಪುರುಷರು ದೊಡ್ಡ ದೀಪಗಳನ್ನು ಸಹ ಹೊರುತ್ತಾರೆ. ಇದಲ್ಲದೆ ಹತ್ತಿರ ಇರುವ ಇತರ ದೇವಾಲಯಗಳೆಂದರೆ ಕೊಟ್ಟರಕ್ಕರಾ ಶ್ರೀ ಮಹಾಗಣಪತಿ ಕ್ಷೇತ್ರ,[೧೩] ಪುಟ್ಟಿಂಗಲ್ ದೇವಿ ದೇವಾಲಯ,[೧೪] ಪಳಯಿದಂ ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ, ಪೋರುವಳಿ ಪೇರುವಿರುತಿ ಮಲನಾಡ ದೇವಾಲಯ,[೧೫] ಸಸ್ತಮ್‍ಕೊಟ್ಟ ಶ್ರೀ ಧರ್ಮ ಸಸ್ತ ದೇವಾಲಯ,[೧೬] ಶಕ್ತಿಕುಲಂಗರ ಶ್ರೀ ಧರ್ಮ ಸಸ್ತ ದೇವಸ್ಥಾನ,[೧೭] ತೃಕ್ಕಡವೂರು ಶ್ರೀ ಮಹಾದೇವ ದೇವಸ್ಥಾನ, ಕಟ್ಟಿಲ್ ಮೆಕ್ಕತಿಲ್ ದೇವಿ ದೇವಸ್ಥಾನ,[೧೮] ಪದನಾಯರ್‌ಕುಲಂಗರ ಮಹಾದೇವ ದೇವಸ್ಥಾನ ಕರುಣಾಗಪಲ್ಲಿ,[೧೯] ಅಷ್ಟಮುಡಿ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ.

ಕ್ರೈಸ್ತ ಧರ್ಮ ಮತ್ತು ಚರ್ಚುಗಳು
ತಂಗಸ್ಸೇರಿ, ಕೊಲ್ಲಮ್‍ನಲ್ಲಿ ಹೊಸ ಕ್ಯಾಥೆಡ್ರಲ್

ತಂಗಸ್ಸೇರಿಯಲ್ಲಿರುವ ಇನ್ಫಂಟ್ ಜೀಸಸ್ ಕ್ಯಾಥೆಡ್ರಲ್ ಅನ್ನು ಪೋರ್ಚುಗೀಸರು 1614 ರಲ್ಲಿ ಸ್ಥಾಪಿಸಿದರು. ನೀಂದಕರದಲ್ಲಿರುವ ಸೇಂಟ್ ಸೆಬಾಸ್ಟಿಯನ್ ಚರ್ಚ್ ನಗರದ ಇನ್ನೊಂದು ಪ್ರಮುಖ ಚರ್ಚ್. ಮುನ್ರೋ ದ್ವೀಪದಲ್ಲಿ ಡಚ್ ಚರ್ಚ್ ಇದ್ದು ಇದನ್ನು 1878 ರಲ್ಲಿ ಡಚ್ಚರು ನಿರ್ಮಿಸಿದರು.[೨೦] ಕಚ್ಚೇರಿಯಲ್ಲಿರುವ ಅವರ್ ಲೇಡಿ ಆಫ್ ವೆಲಂಕಣ್ಣಿ ಸ್ಥಾನವು ಕೊಲ್ಲಂ ನಗರದ ಇನ್ನೊಂದು ಪ್ರಮುಖ ಕ್ರಿಶ್ಚಿಯನ್ ಆರಾಧನಾ ಸ್ಥಳವಾಗಿದೆ. ಕಡವೂರಿನ ಸಂತ ಕಾಸಿಮಿರ್ ಚರ್ಚ್,[೨೧] ಕವನಾಡಿನಲ್ಲಿರುವ ಹೋಲಿ ಫ್ಯಾಮಿಲಿ ಚರ್ಚ್, ತೊಪ್ಪುವಿನ ಸೇಂಟ್ ಸ್ಟೆಫೆನ್ಸ್ [೨೨] ಮತ್ತು ಕಡಪ್ಪಕಡದಲ್ಲಿರುವ ಸೇಂಟ್ ಥಾಮಸ್ ಚರ್ಚ್ ಕೊಲ್ಲಂನ ಇತರ ಪ್ರಮುಖ ಕ್ರಿಶ್ಚಿಯನ್ ಚರ್ಚುಗಳು.[೨೩][೨೪]

ಮುಸ್ಲಿಮರು ಮತ್ತು ಮಸೀದಿಗಳು

ಕರುನಾಗಗಪ್ಪಲ್ಲಿ ಮಸೀದಿ

ಕೊಟ್ಟುಕಾಡು ಜುಮಾ ಮಸೀದಿ, ಏಲಂಪಲ್ಲೂರ್ ಜುಮಾ-ಎ-ಮಸೀದಿ, ವಲಿಯಪಲ್ಲಿ, ಚಿನ್ನಕಾಡ ಜುಮಾ ಮಸೀದಿ, ಕೊಲ್ಲುರವಿಲಾದ ಜುಮಾ-ಅತ್ ಪಲ್ಲಿ, ತಟ್ಟಮಾಲಾದ ಜುಮಾ-ಅತ್ ಪಲ್ಲಿ ಮತ್ತು ಕೋಯಿವಿಲ ಜುಮಾ ಮಸೀದಿ ಕೊಲ್ಲಮ್‍ನ ಪ್ರಮುಖ ಮಸೀದಿಗಳಾಗಿವೆ.[೨೫][೨೬]

ಉಲ್ಲೇಖಗಳು[ಬದಲಾಯಿಸಿ]

 

 1. "Kollam - Encyclopaedia Britannica". Britannica. Retrieved 7 February 2020.
 2. "Kollam on the itinerary". The Hindu. 14 September 2018. Retrieved 14 September 2018.
 3. Cities of Kerala
 4. "Kerala Cities". Archived from the original on 24 November 2014. Retrieved 19 August 2014.
 5. Alphabetical listing of Places in State of Kerala
 6. Sasthri, K. A. Nilakanta (1958) [1935]. History of South India (2nd ed.). Oxford University Press.
 7. "Kozhikode to China: IIT Prof Unearths 700-YO Link That'll Will Blow Your Mind!". The Better India. 26 July 2018. Retrieved 7 December 2015.
 8. Short History of Kollam
 9. "400-year-old sreekovil to be replaced". The Hindu. Retrieved 13 October 2015.
 10. Ammachiveedu Muhurthi Temple Archived 2010-11-15 ವೇಬ್ಯಾಕ್ ಮೆಷಿನ್ ನಲ್ಲಿ. at kollamcity.com
 11. Ammachiveedu Muhurthi Temple at thekeralatemples.com
 12. News article regarding kollam pooram
 13. "Of small appam and Kottarakkara". Mathrubhumi. Archived from the original on 28 ಆಗಸ್ಟ್ 2013. Retrieved 25 March 2013.
 14. "Puttingal Devi Temple, aravur". Puttingal Devi Temple. Retrieved 25 March 2013.
 15. "Malanada temple fete draws big crowds". The Hindu. Retrieved 25 March 2013.
 16. "Sasthamcotta Sree Dharma Sastha Temple". Sasthamcotta Sree Dharma Sastha Temple. Archived from the original on 6 ಡಿಸೆಂಬರ್ 2013. Retrieved 25 March 2013.
 17. /Sakthikulangara-sreesharmasastha-karadevasom.com/
 18. "Here, bells on tree answer your prayers". Deccan Chronicle. Retrieved 25 March 2013.
 19. "No permission for RSS to conduct 'shakha' in temple: Kerala HC told". The Times of India. Retrieved 25 March 2013.
 20. "The emerald isle". The Hindu. Retrieved 19 January 2016.
 21. "Church festival from Saturday". The Hindu. 2005-04-22. Retrieved 19 January 2016.
 22. "St.Stephen's Church". Kollam St.Stephen's Church. Retrieved 19 January 2016.
 23. "St.Thomas Church". The Hindu. Retrieved 19 January 2016.
 24. "Piety marks Good Friday observance". The Hindu. Retrieved 19 January 2016.
 25. "Juma-Ath-Palli". Retrieved 29 July 2014.
 26. "Elampalloor Juma-A-Masjid". Archived from the original on 9 ಆಗಸ್ಟ್ 2014. Retrieved 29 July 2014.

ಗ್ರಂಥಸೂಚಿ[ಬದಲಾಯಿಸಿ]

 • Ring, Trudy (1994). International Dictionary of Historic Places: Asia and Oceania, Volume 5. United Kingdom: Taylor & Francis. ISBN 978-1-884964-05-3.
 • Chan, Hok-lam (1998). "The Chien-wen, Yung-lo, Hung-hsi, and Hsüan-te reigns, 1399–1435". The Cambridge History of China, Volume 7: The Ming Dynasty, 1368–1644, Part 1. Cambridge: Cambridge University Press. ISBN 978-0-521-24332-2.
 • Lin (2007). Zheng He's Voyages Down the Western Seas. Fujian Province: China Intercontinental Press. ISBN 978-7-5085-0707-1.
 • Elamkulam Kunjan Pillai, Keralathinde Eruladanja Edukal, p. 64,112,117
 • Travancore Archaeological Series (T.A.S.) Vol. 6 p. 15
 • Diaries and writings of Mathai Kathanar, the 24th generation priest of Thulaserry Manapurathu, based on the ancestral documents and Thaliyolagrandha handed down through generations
 • Z.M. Paret, Malankara Nazranikal, vol. 1
 • L. K. Ananthakrishna Iyer, State Manual, p50,52
 • Bernard Thoma Kathanar, Marthoma Christyanikal, lines 23,24
 • Narayan, M.G.S, Chera-Pandya conflict in the 8th–9th centuries which led to the birth of Venad: Pandyan History seminar, Madurai University, 1971
 • The Viswavijnanakosam (Malayalam) Vol. 3, p. 523,534
 • Narayan M.G.S., Cultural Symbiosis p33
 • The handwritten diaries of Pulikottil Mar Dionyius (former supreme head of the Malankara Orthodox Syrian Church and Chitramezhuthu KM Varghese)

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಕೊಲ್ಲಂ&oldid=1128299" ಇಂದ ಪಡೆಯಲ್ಪಟ್ಟಿದೆ