ಕೊಂದೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕೊಂದೆಮರ
Cassia fistula Blanco1.120.png
Conservation status
Not evaluated (IUCN 3.1)
ವೈಜ್ಞಾನಿಕ ವರ್ಗೀಕರಣ
Kingdom: plantae
Division: ಹೂ ಬಿಡುವ ಮರ
Class: ಮ್ಯಾಗ್ನೋಲಿಯೋಪ್ಸಿಡ
Subclass: ರೋಸಿಡೆ
(unranked): Eurosids I
Order: ಫಬಲ್ಸ್
Family: ಫಬಸಿ
Subfamily: Caesalpinioideae
Tribe: Cassieae
Subtribe: Cassiinae
Genus: Cassia
Species: C. fistula
ದ್ವಿಪದ ಹೆಸರು
ಕಾಸಿಯ ಫಿಸ್ಟುಲ
L.
Synonyms

Many, see text

ಕೊಂದೆ (ಕಕ್ಕೆ, ಸ್ವರ್ಣಪುಷ್ಪ) ಎಂಬ ಹೆಸರಿನಿಂದ ಕರೆಯಲ್ಪಡುವ ಮರವು ಮಧ್ಯಮ ಪ್ರಮಾಣದ ಪರ್ಣಪಾತಿ ಮರ. ಮಾರ್ಚ್-ಮೇ ತಿಂಗಳಲ್ಲಿ ಇದು ಹಳದಿ ಬಣ್ಣದ ಹೂವನ್ನು ಗೊಂಚಲು ಗೊಂಚಲಾಗಿ ಮರ ತುಂಬಾ ಬಿಟ್ಟು ಅತ್ಯಂತ ಸುಂದರವಾಗಿ ಕಾಣುವುದರಿಂದ ಇದನ್ನು ಇಂಗ್ಲೀಷ್ ಭಾಷೆಯಲ್ಲಿ Golden Shower Treeಎಂದು ಕರೆಯುತ್ತಾರೆ. ಇದು ಥೈಲ್ಯಾಂಡ್ ದೇಶದ ರಾಷ್ಟ್ರೀಯಪುಷ್ಪ. ಅಂತೆಯೇ ಕೇರಳರಾಜ್ಯದ ರಾಜ್ಯಪುಷ್ಪವಾಗಿದೆ. ತಮಿಳಿನಲ್ಲಿ ಈ ಹೂವನ್ನು "ಕೊಂಡ್ರೈ" ಎಂದು ಕರೆಯುತ್ತಾರೆ. ತಮಿಳಿನ ಪ್ರಾಚೀನ 'ಸಂಗಂ ಸಾಹಿತ್ಯ'ದಲ್ಲಿ ಕೊಂಡ್ರೈ ಹೂವಿನ ಪ್ರಸ್ತಾಪವಿದೆ. ಅದರ ಪ್ರಕಾರ ಇದು ಶಿವನಿಗೆ ತುಂಬಾ ಪ್ರಿಯವಾದ ಹೂವಾಗಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಫಬಸಿಯೆ ಕುಟುಂಬದಲ್ಲಿaesalpinieaeಉಪ ಕುಟುಂಬಕ್ಕೆ ಸೇರಿದ್ದು, ಕಾಸಿಯ ಫಿಸ್ಟುಲ (Cassia fistula)ಎಂದು ಸಸ್ಯಶಾಸ್ತ್ರೀಯ ಹೆಸರು. ಸಂಸ್ಕೃತಭಾಷೆಯಲ್ಲಿ 'ಸುವರ್ಣಕ'ಮಲೆಯಾಳಮ್ಭಾಷೆಯಲ್ಲಿ 'ಕೊನ್ನೆ' ಮುಂತಾಗಿ ಹೆಸರು ಇದೆ.

ಕೊಂದೆ ಹೂ

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಮಧ್ಯಮ ಪ್ರಮಾಣದ ಪರ್ಣಪಾತಿ ಮರ. ಸಂಯುಕ್ತಪರ್ಣಿ ಎಲೆಗಳು ಚಿಗುರಿದಾಗ ಉಜ್ವಲ ಹಸಿರು ಬಣ್ಣದ ಎಲೆಗಳು ಮತ್ತು ತೂಗಾಡುವ ಹಳದಿ ಬಣ್ಣದ ಹೂಗಳು ಅಂದವಾಗಿ ಕಾಣುತ್ತದೆ. ಉದ್ದವಾದ ಬೀಜಕೋಶಗಾಯಿ(Pods)ಜೋಲಾಡುತ್ತಿರುತ್ತದೆ. ಇದರ ದಾರುವು ಗಡುಸಾಗಿದ್ದು, ಬಾಳಿಕೆಯುತವಾಗಿದೆ.

ಉಪಯೋಗಗಳು[ಬದಲಾಯಿಸಿ]

ಅಲಂಕಾರಕ್ಕೆ ಬೆಳೆಸುತ್ತಾರೆ. ದಾರುವು ಮನೆ ಕಂಬಗಳು, ಕೃಷಿ ಉಪಕರಣಗಳ ತಯಾರಿಯಲ್ಲಿ ಬಳಸಲ್ಪಡುತ್ತದೆ. ಕಾಯಿ ಹಾಗೂ ಹೂ ಆಯುರ್ವೇದಔಷಧಗಳಲ್ಲಿ ಬಳಕೆಯಲ್ಲಿದೆ. ಮುಖ್ಯವಾಗಿ ವಿರೇಚಕವಾಗಿ, ವಾತ ಸಂಬಂಧಿ ಔಷಧಗಳಲ್ಲಿ ಉಪಯೋಗದಲ್ಲಿದೆ.

ಛಾಯಾಂಕಣ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Media related to Cassia fistula at Wikimedia Commons Database on state of environment, Kerala (2008): Kerala Symbols

ಆಧಾರ ಗ್ರಂಥಗಳು[ಬದಲಾಯಿಸಿ]

ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

"https://kn.wikipedia.org/w/index.php?title=ಕೊಂದೆ&oldid=537496" ಇಂದ ಪಡೆಯಲ್ಪಟ್ಟಿದೆ