ವನಸಿರಿ (ಪುಸ್ತಕ)

ವಿಕಿಪೀಡಿಯ ಇಂದ
Jump to navigation Jump to search
ವನಸಿರಿ
ಲೇಖಕರುಅಜ್ಜಂಪುರ ಕೃಷ್ಣಸ್ವಾಮಿ
ದೇಶಭಾರತ
ಭಾಷೆಕನ್ನಡ
ವಿಷಯಅರಣ್ಯಶಾಸ್ತ್ರ
ಪ್ರಕಾರಅರಣ್ಯಸಂಪತ್ತು
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೪, ೬ನೆ ಮುದ್ರಣ
ಪುಟಗಳು೪೨೦
ಐಎಸ್‍ಬಿಎನ್978-81-8467-413-2

ವನಸಿರಿ ಅಜ್ಜಂಪುರ ಕೃಷ್ಣಸ್ವಾಮಿಯವರು ಬರೆದ ಪುಸ್ತಕ. ಇದು ಕರ್ನಾಟಕದ ಅರಣ್ಯ ಸಂಪತ್ತಿನ ಬಗೆಗಿನ ಪುಸ್ತಕ.

ಕರ್ನಾಟಕದ ವೃಕ್ಷಸಂಪತ್ತು ಭಾರತ ದೇಶದಲ್ಲಿಯೇ ತನ್ನ ಶ್ರೀಮಂತಿಕೆಗೆ ಹೆಸರಾಗಿದೆ. ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಅರಣ್ಯಗಳ ಬೃಹದಾಕಾರದ ವೃಕ್ಷಗಳು, ಪರ್ಣಪಾತಿ ಕಾಡುಗಳ ಉತ್ತಮ ಚೌಬೀನೆ ಮರಜಾತಿಗಳು, ಅಮೂಲ್ಯ ಫಸಲುಗಳ ಗಿಡಮರಗಳು, ಬಿದಿರು, ಕಾನಿನ ಬೆತ್ತ, ಗಿಡಮೂಲಿಕೆಗಳು, ನಮ್ಮ ನಾಡಿನ ವೃಕ್ಷಸಂಪನ್ಮೂಲಕ್ಕೆ ಮೆರುಗು ಕೊಟ್ಟಿವೆ.

ಕರ್ನಾಟಕದ ವೃಕ್ಷಜಾತಿಗಳ, ನೆಲೆ, ಆಕಾರ, ಋತುಘಟನೆ, ಉಪಯುಕ್ತತೆ, ಸ್ವಾಭಾವಿಕ ಪುನರುತ್ಪನ್ನದ ಸ್ಥಿತಿಗತಿ, ಕೃತಕ ಪುನರುತ್ಪನ್ನದ ಸಾಧ್ಯತೆ, ಇವುಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ.

ವೃಕ್ಷಸಂಪತ್ತು "ವನಸಿರಿ"ಯ ಮುಖ್ಯ ಅಂಶವಾಗಿದ್ದರೆ, ಮೃಗಸಂಪತ್ತು ವೃಕ್ಷಗಳೇ ಕಲ್ಪಿಸಿಕೊಟ್ಟ ಪರಿಸರದಲ್ಲಿ ಕಾಣಬರುವ ವನಸಿರಿಯ ಪೂರಕ ಅಂಶ. ಕರ್ನಾಟಕದ ಪರಿಚತ ವನ್ಯ ಮೃಗಗಳೊಂದಿಗೆ ಇನ್ನಿತರ ಅಪರಿಚಿತ ಮೃಗಗಳ ವಿವರಣೆ ನೀಡಲಾಗಿದೆ. ಹಿಂದೆ ನಡೆಯುತ್ತಿದ್ದ ಹುಲಿಯ ಬೇಟೆ, ಆನೆಯ ಖೆಡ್ಡ ಇವುಗಳ ವಿವರಣೆಯನ್ನು ಚಾರಿತ್ರಿಕ ಕುತೂಹಲತೆಗಾಗಿ ಕೊಡಲಾಗಿದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]