ಅಜ್ಜಂಪುರ ಕೃಷ್ಣಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೯೨೪ರಲ್ಲಿ ತರೀಕೆರೆಯಲ್ಲಿ ಜನಿಸಿದ ಅಜ್ಜಂಪುರ ಕೃಷ್ಣಸ್ವಾಮಿಯವರು ೧೯೪೨ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ 'ಪ್ರಾಣಿಶಾಸ್ತ್ರ' ಪದವಿ ಪಡೆದರು. ೧೯೪೬ರಲ್ಲಿ ಆಗಿನ ಮೈಸೂರು ರಾಜ್ಯದ ಅರಣ್ಯ ಇಲಾಖೆಯಲ್ಲಿ ಸೇವೆ ಪ್ರಾರಂಭ. ೧೯೫೬ರಲ್ಲಿ 'ಭಾರತೀಯ ಅರಣ್ಯ ಸೇವಾ' ಸದಸ್ಯರಾಗಿ ಆಯ್ಕೆ. ೧೯೮೨ರಲ್ಲಿ ಸೇವಾ ನಿವೃತ್ತಿ ಪಡೆದಾಗ ಅರಣ್ಯ ಇಲಾಖೆಯ ಮುಖ್ಯಸ್ಥರಾಗಿದ್ದರು. ಕೆಲವು ವರ್ಷಗಳ ಕಾಲ ಕರ್ನಾಟಕದ ತೋಟಗಾರಿಕೆ ಇಲಾಖೆಯ ನಿರ್ದೇಶಕತ್ವವನ್ನು ವಹಿಸಿದ್ದರು. ನಿವೃತ್ತಿಯ ನಂತರ ಕೆಲವು ವರ್ಷ ಕೃಷಿ ಜೀವನ ನಡೆಸಿ ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಿಡುವಿನ ವೇಳೆಯಲ್ಲಿ ಹವ್ಯಾಸಿ ಬರಹ. ವನ ಸಾಹಿತ್ಯದ 'ಅರಣ್ಯಶಾಸ್ತ್ರ', 'ವನಸಿರಿ','ಖಗಸಿರಿ' ಮುಂತಾದ ಪಾರಿಭಾಷಿಕ ಸಚಿತ್ರ ಕೃತಿಗಳ ರಚನೆ. 'ಬಾಳ ಹರಿವು', 'ಪರಿವರ್ತನೆ', 'ಭವ್ಯ ಭಾರತ' ಮುಂತಾದವು ಇವರ ಇತರ ಕೃತಿಗಳು.