ಕೊಂಕಣ ಸೇನ್ ಶರ್ಮಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕೊಂಕಣ ಸೇನ್ ಶರ್ಮಾ
Konkona Sen Sharma.jpg
೨೦೦೭ರಲ್ಲಿ ಕೊಂಕಣ ಸೇನ್ ಶರ್ಮಾ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1979-12-03) ಡಿಸೆಂಬರ್ ೩, ೧೯೭೯(ವಯಸ್ಸು ೩೭)
ನವ ದೆಹಲಿ, ಭಾರತ
ವೃತ್ತಿ ನಟಿ
ವರ್ಷಗಳು ಸಕ್ರಿಯ ೨೦೦೦–ಪ್ರಸ್ತಕ
ಪತಿ/ಪತ್ನಿ ರನ್ವೀರ್ ಶೋರಿ (೨೦೧೦-ಪ್ರಸ್ತಕ)


ಕೊಂಕಣ ಸೇನ್ ಶರ್ಮಾ (ಬಂಗಾಳಿ:কঙ্কনা সেন শর্মা Kôngkôna Shen Shôrma ) ೧೯೭೯ರ ಡಿಸೆಂಬರ್ ೩ರಂದು ಜನಿಸಿದರು, ಈಕೆ ಒಬ್ಬ ರಾಷ್ಟ್ರೀಯ ಪ್ರಶಸ್ತಿ ವಿಜೇತ ಭಾರತೀಯ ನಟಿ. ಆಕೆ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ ಅಪರ್ಣ ಸೇನ್‌‌ರವರ ಮಗಳು. ಶರ್ಮಾ ಆರಂಭದಲ್ಲಿ ಭಾರತೀಯ ಕಲಾಮಂದಿರ ಮತ್ತು ಸ್ವತಂತ್ರ ಚಲನಚಿತ್ರಗಳಲ್ಲಿ ಅಭಿನಯಿಸಿದರು. ಅದರಲ್ಲಿನ ಆಕೆಯ ಸಾಧನೆಗಳು ಸಮಕಾಲೀನ ಸಿನಿಮಾರಂಗದಲ್ಲಿ ಆಕೆಯನ್ನು ಪ್ರಮುಖ ನಟಿಯರಲ್ಲಿ ಒಬ್ಬಳನ್ನಾಗಿ ಮಾಡಿತು.

ಇಂದಿರಾ (೧೯೮೩) ಚಿತ್ರದಲ್ಲಿ ಮೊದಲ ಬಾರಿಗೆ ಬಾಲಕಲಾವಿದೆಯಾಗಿ ನಟಿಸಿದ ಶರ್ಮಾ ಏಕ್ ಜಿ ಅಚ್ಚೆ ಕನ್ಯಾ (೨೦೦೦) ಎಂಬ ಬಂಗಾಳಿ ಭಯಾನಕ ಚಿತ್ರದಲ್ಲಿ ಮೊದಲ ಬಾರಿಗೆ ಪ್ರೌಢ ಕಲಾವಿದೆಯಾಗಿ ನಟಿಸಿದರು. ಶರ್ಮಾ ಮೊದಲು ಆಕೆಯ ತಾಯಿ ನಿರ್ದೇಶಿಸಿದ ಇಂಗ್ಲಿಷ್-ಭಾಷಾ ಚಲನಚಿತ್ರ ಮಿಸ್ಟರ್ ಆಂಡ್ ಮಿಸೆಸ್ ಐಯರ್ ‌ನಿಂದ (೨೦೦೨) ಜನಪ್ರಿಯತೆಯನ್ನು ಗಳಿಸಿದರು. ಆ ಚಿತ್ರದಲ್ಲಿನ ನಟನೆಗಾಗಿ ಆಕೆ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಪೇಜ್ ೩ (೨೦೦೫) ನಾಟಕದಲ್ಲಿನ ಆಕೆಯ ನಟನೆಯು ಪ್ರೇಕ್ಷಕರಿಂದ ಭಾರಿ ಪ್ರಶಂಸೆಯನ್ನು ಗಳಿಸಿತು. ಅಲ್ಲಿಂದೀಚಿಗೆ ಆಕೆ ಹಲವಾರು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಅವುಗಳಲ್ಲಿ ಹೆಚ್ಚಿನವು ವಾಣಿಜ್ಯ ಯಶಸ್ಸಿನ ಬದಲಿಗೆ ಆಕೆಗೆ ವಿಮರ್ಶಾತ್ಮಕ ಶ್ಲಾಘನೆಯನ್ನು ತಂದುಕೊಟ್ಟವು. ಆಕೆ ಓಂಕಾರ (೨೦೦೬) ಮತ್ತು ಲೈಫ್ ಇನ್ ಎ... ಮೆಟ್ರೊ (೨೦೦೭) ಚಿತ್ರಗಳಲ್ಲಿನ ಅಭಿನಯಕ್ಕಾಗಿ ಎರಡು ಅನುಕ್ರಮ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗಳನ್ನು ಗೆದ್ದುಕೊಂಡರು. ಓಂಕಾರ ಚಿತ್ರದಲ್ಲಿನ ನಟನೆಗಾಗಿ ಆಕೆ ಅತ್ಯುತ್ತಮ ಪೋಷಕ ನಟಿ ವರ್ಗದಲ್ಲಿ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.[೧][೨]

ಆರಂಭಿಕ ಜೀವನ[ಬದಲಾಯಿಸಿ]

ಕೊಂಕಣ ಮುಕುಲ್ ಶರ್ಮಾ (ವಿಜ್ಞಾನ ಬರಹಗಾರ ಮತ್ತು ಪತ್ರಕರ್ತ) ಮತ್ತು ಅಪರ್ಣ ಸೇನ್‌ (ನಟಿ ಮತ್ತು ಚಲನಚಿತ್ರ ನಿರ್ದೇಶಕಿ) ದಂಪತಿಗಳ ಮಗಳು. ಆಕೆಗೆ ಕಮಲಿನಿ ಚಟರ್ಜಿ ಹೆಸರಿನ ಒಬ್ಬ ಅಕ್ಕ ಸಹ ಇದ್ದಾರೆ.[೩] ಸೇನ್ ಶರ್ಮಾರ ತಾಯಿಯ ಅಜ್ಜ ಚಿದಾನಂದ ದಾಸ್‌ಗುಪ್ತ ಒಬ್ಬ ಚಲನಚಿತ್ರ ವಿಮರ್ಶಕ, ಪಂಡಿತ, ಪ್ರಾಧ್ಯಾಪಕ, ಲೇಖಕ ಮತ್ತು ಕಲ್ಕತ್ತಾ ಫಿಲ್ಮ್ ಸೊಸೈಟಿಯ ಸಹ-ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಆಕೆಯ ದಿವಂಗತ ಅಜ್ಜಿ ಸುಪ್ರಿಯಾ ದಾಸ್‌ಗುಪ್ತರವರು ಪುರಾಣಪ್ರಸಿದ್ಧ ಆಧುನಿಕ ಬಂಗಾಳಿ ಕವಿ ಜಿಬನಾನಂದ ದಾಸ್‌ರ ಸೋದರಸಂಬಂಧಿಯಾಗಿದ್ದರು.

ಕೊಂಕಣ ೨೦೦೧ರಲ್ಲಿ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜ್‌ನಿಂದ ಇಂಗ್ಲೀಷ್‌ನಲ್ಲಿ ಪದವಿಯನ್ನು ಪಡೆದರು. ಆಕೆ ಕಲ್ಕತ್ತಾದ ಮಾಡರ್ನ್ ಹೈ ಸ್ಕೂಲ್ ಫಾರ್ ಗರ್ಲ್ಸ್ ಮತ್ತು ಕಲ್ಕತ್ತಾ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಯಾಗಿದ್ದರು.[೪]

ವೃತ್ತಿಜೀವನ[ಬದಲಾಯಿಸಿ]

ಕೊಂಕಣ ಇಂದಿರಾ (೧೯೮೩) ಚಿತ್ರದಲ್ಲಿ ಮೊದಲ ಬಾರಿಗೆ ಬಾಲಕಲಾವಿದೆಯಾಗಿ ನಟಿಸಿದರು. ೨೦೦೦ರಲ್ಲಿ ಆಕೆ ಬಂಗಾಳಿ ಚಿತ್ರ ಏಕ್ ಜಿ ಅಚ್ಚೆ ಕನ್ಯಾ ದಲ್ಲಿ ಮೊದಲ ಬಾರಿಗೆ ಪ್ರೌಢ ಕಲಾವಿದೆಯಾಗಿ ಅಭಿನಯಿಸಿದರು, ಈ ಚಿತ್ರದಲ್ಲಿ ಆಕೆ ನಕಾರಾತ್ಮಕ ಪಾತ್ರದಲ್ಲಿ ನಟಿಸಿದರು. ಅನಂತರ ಆಕೆ ರಿತುಪರ್ಣೊ ಘೋಶ್‌ನ ಚಿತ್ರ ಟಿಟ್ಲಿ ಯಲ್ಲಿ ಮಿಥುನ್ ಚಕ್ರಬೂರ್ತಿ ಮತ್ತು ತಾಯಿ ಅಪರ್ಣ ಸೇನ್‌‌ರಿಗೆ ವಿರುದ್ಧವಾಗಿ ನಟಿಸಿದರು.

ಚಿತ್ರ:MrMrsIyer2.JPG
ಮಿಸ್ಟರ್ ಆಂಡ್ ಮಿಸೆಸ್ ಐಯರ್‌ನಲ್ಲಿ ಕೊಂಕಣ ಸೇನ್ ಶರ್ಮಾ, ಈ ಚಿತ್ರವು ಆಕೆಗೆ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು.

ಆಕೆ ಅಪರ್ಣ ಸೇನ್ ನಿರ್ದೇಶನದ ಇಂಗ್ಲಿಷ್-ಭಾಷಾ ಚಿತ್ರ ಮಿಸ್ಟರ್ ಆಂಡ್ ಮಿಸೆಸ್ ಐಯರ್ ‌ನಲ್ಲಿ ನಟಿಸಿದಾಗ ಹೆಚ್ಚು ಜನಪ್ರಿಯತೆಯನ್ನು ಗಳಿಸಿದರು‌. ಆ ಚಿತ್ರವು ಮುಖ್ಯವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ಕಂಡಿತು ಮತ್ತು ಅತ್ಯುತ್ತಮ ವಿಮರ್ಶೆಗಳೊಂದಿಗೆ ಪ್ರಮುಖ ಯಶಸ್ಸನ್ನು ಗಳಿಸಿತು. ಸೇನ್ ಶರ್ಮಾರ ತಮಿಳು ಗೃಹಿಣಿಯ ಪಾತ್ರ ಮತ್ತು ಈ ವಿಶಿಷ್ಟ ಪಾತ್ರದ ಮೇಲಿನ ಆಕೆಯ ಪ್ರಾಬಲ್ಯವು ಉತ್ತಮ ಪ್ರಶಂಸೆಯನ್ನು ಗಳಿಸಿತು ಹಾಗೂ ಈ ಪಾತ್ರಕ್ಕಾಗಿ ಆಕೆ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.[೫] ನಂತರ ಆಕೆಯ ನಟನೆಯು ೨೦೧೦ರಲ್ಲಿ ಫಿಲ್ಮ್‌ಫೇರ್‌ ‌ನಿಂದ "ಪ್ರಮುಖ ೮೦ ಸಾಂಪ್ರದಾಯಿಕ ನಟನೆ"ಗಳಲ್ಲಿ ಸೇರಿಕೊಂಡಿತು.[೬]

"What´s special about her performances as Meenakshi Iyer is not the effort she put into it as much as the apparent lack of it. [...] Be it her squabbling with the urbane photographer Jehangir Chaudhary or her gently reprimanding him about how her name is pronounced (It´s Mee-naa-kshi not Minakshi) or even when she is screaming at her infant, you believe it´s Meenakshi you´ve met. And therein lies the key to her iconic performance."

Filmfare on Sen Sharma's performance in Mr. and Mrs. Iyer (2002)[೭]

ಇದರ ನಂತರ ಆಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-ವಿಜೇತ ಸಾಮಾಜಿಕ ಚಲನಚಿತ್ರ ಪೇಜ್ ೩ ರಲ್ಲಿ (೨೦೦೫) ನಟಿಸಿದರು.[೮] ಅದರಲ್ಲಿನ ಆಕೆಯ ಚತುರ ಪತ್ರಿಕೋದ್ಯಮಿಯ ಪಾತ್ರವು ಪ್ರಶಂಸೆಯನ್ನು ಗಳಿಸಿತು ಮತ್ತು ಆಕೆ ಚಲನಚಿತ್ರ ಪ್ರೇಮಿಗಳಿಗೆ ಹೆಚ್ಚು ಚಿರಪರಿಚಿತ ನಟಿಯಾದರು.

ಸೇನ್ ಶರ್ಮಾ ಮೀರಾ ನಾಯರ್‌ರ ಹಾಲಿವುಡ್ ಚಿತ್ರ ದಿ ನೇಮ್‌ಸೇಕ್ ‌ನಲ್ಲಿ (೨೦೦೭) ನಟಿಸುವ ಅವಕಾಶವನ್ನು ಪಡೆದರು. ಆದರೆ ಇತರ ಚಲನಚಿತ್ರಗಳಿಗೆ ಅದಾಗಲೇ ಒಪ್ಪಿಕೊಂಡಿದುದರಿಂದ ಸಮಯವಿಲ್ಲದೆ ಆಕೆ ಈ ಅವಕಾಶವನ್ನು ಒಪ್ಪಿಕೊಳ್ಳಲಾಗಲಿಲ್ಲ.[೯] ಆದರೆ ಆಕೆ ನಂತರ ೧೫ ಪಾರ್ಕ್ ಅವೆನ್ಯೂ (೨೦೦೫) ಚಿತ್ರದಲ್ಲಿ ಹೆಚ್ಚು ಪ್ರಶಂಸೆಯನ್ನು ಗಳಿಸಿದ ಮಾನಸಿಕ ಅಸ್ವಸ್ಥ ಮಹಿಳೆಯ ಪಾತ್ರದಲ್ಲಿ ಅಭಿನಯಿಸಿದರು. ಅನಂತರ ಆಕೆ ಓಂಕಾರ (೨೦೦೬) ಚಿತ್ರದಲ್ಲಿ ಮಧ್ಯ ವಯಸ್ಕ ಹಳ್ಳಿಯ ಹೆಂಗಸಿನ ಪಾತ್ರದಲ್ಲಿ ನಟಿಸಿದರು. ಓಂಕಾರ ಚಿತ್ರಕ್ಕಾಗಿ ಆಕೆ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ಪೋಷಕ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳೆರಡನ್ನೂ ಪಡೆದರು. ಆಕೆಯ ನಂತರದ ಚಿತ್ರ Deadline: Sirf 24 Ghante (೨೦೦೬) ಸಾಧಾರಣ ಪ್ರತಿಕ್ರಿಯೆಗಳನ್ನು ಪಡೆಯಿತು. ೨೦೦೬ರಲ್ಲಿ ಸೇನ್ ಶರ್ಮಾ ಕಾಲ ಘೋಡ ಚಲನಚಿತ್ರೋತ್ಸವಕ್ಕಾಗಿ ೧೮-ನಿಮಿಷದ ಬಂಗಾಳಿ ಕಿರುಚಿತ್ರ ನಾಮ್‌ಕೊರಾನ್ (ನೇಮಿಂಗ್ ಸೆರಮನಿ) ಅನ್ನು ಮೊದಲ ಬಾರಿಗೆ ನಿರ್ದೇಶಿಸಿದರು.[೧೦][೧೧]

ಅನಂತರ ಸೇನ್ ಶರ್ಮಾ ರಿತುಪರ್ಣೊ ಘೋಶ್‌ರ ಬಂಗಾಳಿ ಕಲಾ ಚಿತ್ರ ದೋಸರ್ ‌ನಲ್ಲಿ ನಟಿಸಿದರು, ಇದು ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಈ ಚಿತ್ರದಲ್ಲಿನ ಪಾತ್ರಕ್ಕಾಗಿ ಆಕೆ ಮಹಿಂದ್ರಾ ಇಂಡೊ-ಅಮೆರಿಕನ್ ಆರ್ಟ್ಸ್ ಕೌನ್ಸಿಲ್‌ (MIAAC) ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದುಕೊಂಡರು.[೧೨]

ಚಿತ್ರ:Konkana-sen-omkara.jpg
ಓಂಕಾರ (2006) ಚಿತ್ರದಲ್ಲಿ ಇಂದು ತ್ಯಾಗಿಯ ಪಾತ್ರದಲ್ಲಿ ಕೊಂಕಣ ಸೇನ್ ಶರ್ಮಾ, ಈ ಚಿತ್ರವು ಆಕೆಗೆ ಮೊದಲ ಫಿಲ್ಮ್‌ಫೇರ್‌ ಪ್ರಶಸ್ತಿ ಮತ್ತು ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು, ಇವೆರಡೂ ಪ್ರಶಸ್ತಿಗಳು ಆಕೆಗೆ ಪೋಷಕ ವರ್ಗದಲ್ಲಿ ದೊರಕಿದವು.

೨೦೦೭ರ ಆಕೆಯ ಮೊದಲನೇ ಚಿತ್ರ ಮಧುರ್ ಭಂಡಾರ್ಕರ್ ಒಂದಿಗೆ ಎರಡನೇ ಬಾರಿ ಜತೆಗೂಡಿಗೊಂಡು ಮಾಡಿದ ಟ್ರಾಫಿಕ್ ಸಿಗ್ನಲ್ ಹೆಸರಿನ ಒಂದು ನ್ವಾರ್ ಚಿತ್ರ, ಇದರಲ್ಲಿ ಆಕೆ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ.[೧೩] ಆ ವರ್ಷದಲ್ಲಿ ನಂತರ ಆಕೆ ಅನುರಾಗ್ ಬಸು ಅವರ ಲೈಫ್ ಇನ್ ಎ... ಮೆಟ್ರೊ ದಲ್ಲಿ ಅಭಿನಯಿಸಿದರು. ಈ ಚಿತ್ರವು ಉತ್ತಮ ಪ್ರತಿಕ್ರಿಯೆಗಳನ್ನು ಪಡೆಯಿತು ಮತ್ತು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಅತ್ಯುತ್ತಮ ಗಳಿಕೆಯನ್ನು ಸಾಧಿಸಿತು.[೧೪] ಮೆಟ್ರೊ ಚಿತ್ರವು ಮುಂಬೈಯ ವಿವಿಧ ಜನರ ಜೀವನ ಸ್ಥಿತಿಗಳನ್ನು ಚಿತ್ರಿಸುತ್ತದೆ. ಈ ಚಿತ್ರದಲ್ಲಿನ ಸೇನ್ ಶರ್ಮಾರ ಕಿರಿಯ ಮತ್ತು ಅಭದ್ರ ಮಹಿಳೆಯ ಪಾತ್ರವು ಆಕೆಗೆ ಎರಡನೇ ಫಿಲ್ಮ್‌ಫೇರ್‌ ಪ್ರಶಸ್ತಿಯನ್ನು ತಂದುಕೊಟ್ಟಿತು.

೨೦೦೭ರ ಉತ್ತರಾರ್ಧದಲ್ಲಿ ಸೇನ್ ಶರ್ಮಾ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಎರಡು ಚಿತ್ರಗಳಲ್ಲಿ ಅಭಿನಯಿಸಿದರು. ಈ ಎರಡು ಚಿತ್ರಗಳ ಬಗ್ಗೆ ಆಕೆ ಅತಿ ಹೆಚ್ಚು ಆಸಕ್ತಿಯನ್ನು ತೋರಿಸಿದರು ಏಕೆಂದರೆ ಈ ಚಿತ್ರಗಳಲ್ಲಿ ಆಕೆ ಮೊದಲ ಬಾರಿಗೆ ಹಾಡುಗಳಿಗೆ ಹೊಂದುವಂತೆ ತುಟಿಗಳನ್ನು ಚಲಿಸಬೇಕಾಗಿತ್ತು. ಮೊದಲ ಚಿತ್ರ ಪ್ರದೀಪ್ ಸರ್ಕಾರ್ ನಿರ್ದೇಶನದ ಲಗಾ ಚುನರಿ ಮೇ ದಾಗ್‌ ನಲ್ಲಿ ಆಕೆ ರಾಣಿ ಮುಖರ್ಜಿಯೊಂದಿಗೆ ಬನಾರಸ್ ಸಣ್ಣ ನಗರದ ಕಿರಿಯ ಹುಡುಗಿ ಚುಟ್ಕಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವು ಭಾರತದಲ್ಲಿ ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯವಾಗಿ ವಿಫಲವಾಯಿತು, ಆದರೂ ಅದರಲ್ಲಿನ ಆಕೆಯ ನಟನೆಯು ಉತ್ತಮ ಪ್ರಶಂಸೆಯನ್ನು ಗಳಿಸಿತು. ಎರಡನೆಯದು ಆಜ ನಾಚ್ಲೆ , ಇದು ಮಾಧುರಿ ದೀಕ್ಷಿತ್ ಪುನಃ ಚಿತ್ರರಂಗಕ್ಕೆ ಹಿಂದಿರುಗಿದ ಚಿತ್ರವಾಗಿತ್ತು. ಈ ಚಿತ್ರವು ಅಷ್ಟೊಂದು ಜನಪ್ರಿಯವಾಗಲಿಲ್ಲ. CNN-IBNಯ ರಾಜೀವ್ ಮಸಂದ್ ಈ ಚಿತ್ರದಲ್ಲಿನ ಆಕೆಯ ನಟನೆಯ ಬಗ್ಗೆ ಹೀಗೆಂದು ಹೇಳಿದ್ದಾರೆ - "ನಟನೆ ಅತ್ಯುತ್ತಮವಾಗಿದೆ. ಆಕೆ ತನ್ನನ್ನು ತಾನು ಲೇವಡಿ ಮಾಡಿಕೊಳ್ಳಲು ಮುಜುಗರ ಪಡುವುದಿಲ್ಲ ಮತ್ತು ತನ್ನನ್ನು ಅಪಹಾಸ್ಯ ಮಾಡುವವರ ಬಗ್ಗೆ ಚಿಂತಿಸುವುದಿಲ್ಲ. ಆದ್ದರಿಂದ ಆಜ ನಾಚ್ಲೆ ಯಲ್ಲಿನ ಆಕೆಯ ನಟನೆಯು ಅಂಜಿಕೆಯಿಲ್ಲದ್ದು ಮತ್ತು ತಡೆಯಿಲ್ಲದ್ದು."[೧೫]

೨೦೦೮ರಲ್ಲಿ ಸೇನ್ ಶರ್ಮಾ ದಿಲ್ ಕಬಡ್ಡಿ ಚಿತ್ರದಲ್ಲಿ ನಟಿಸಿದರು. ಎಂಬ ಚಿತ್ರಕ್ಕಾಗಿ ಮೀರಾ ನಾಯರ್ ನಿರ್ದೇಶಿಸಿದ ಕಿರುಚಿತ್ರದಲ್ಲಿ (ಹೌ ಕ್ಯಾನ್ ಇಟ್ ಬಿ?) ಆಕೆ ಅಭಿನಯಿಸಿದರು, ಇದು ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳುವುದಕ್ಕಿಂತ ಮೊದಲು ೨೦೦೮ರಲ್ಲಿ ಅನೇಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತ್ತು.[೧೬]

೨೦೦೯ರಲ್ಲಿ ಆಕೆ ಕುನಾಲ್ ರಾಯ್ ಕಪೂರ್‌ ನಿರ್ದೇಶನದ ಕಡಿಮೆ-ವೆಚ್ಚದ ಇಂಗ್ಲಿಷ್ ಚಿತ್ರ ದಿ ಪ್ರೆಸಿಡೆಂಟ್ ಈಸ್ ಕಮಿಂಗ್ ‌ನಲ್ಲಿ ನಟಿಸಿದರು. ಈ ಚಿತ್ರವು ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯಿತು. ಪ್ರತಿಕ್ರಿಯೆಗಳೆಲ್ಲವೂ ಆಕೆಯ ಪರವಾಗಿದ್ದವು. ದಿ ಟೈಮ್ಸ್ ಆಫ್ ಇಂಡಿಯಾ ದ ನಿಖತ್ ಕಜ್ಮಿ ಹೀಗೆಂದು ಹೇಳಿದ್ದಾರೆ - "ನಟನೆಯಲ್ಲಿ ಕಟ್ಟಾ ಸಂಪ್ರದಾಯನಿಷ್ಠ ಮತ್ತು ಸಂಕೀರ್ಣ-ಮನಸ್ಥಿತಿಯ ಕೊಂಕಣ ವಿಶೇಷ ಮನ್ನಣೆಯಿಂದ ದೂರ ಉಳಿಯುತ್ತಾಳೆ ಮತ್ತು ತನ್ನ ಚಲನಚಿತ್ರವು ಅಪಹಾಸ್ಯಕ್ಕೆ ಒಳಗಾದರೂ ನಗುಮುಖದಿಂದಿರುತ್ತಾಳೆ."[೧೭]

ಸೇನ್ ಶರ್ಮಾ ನಂತರ ಜೋಯ ಅಖ್ತರ್‌‍ನ ಲಕ್ ಬೈ ಚಾನ್ಸ್ ಚಿತ್ರದಲ್ಲಿ ಫರಾನ್ ಅಖ್ತರ್‌ಗೆ ವಿರುದ್ಧವಾಗಿ ನಟಿಸಿದರು.[೧೮] ಬಿಡುಗಡೆಯಾದ ನಂತರ ಆ ಚಿತ್ರವು ಆಕೆಯ ನಟನೆಗಾಗಿ ವಿಮರ್ಶಕರಿಂದ ಅತಿ ಹೆಚ್ಚು ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯಿತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿಸಿದಷ್ಟು ಲಾಭಗಳಿಸಲಿಲ್ಲ.[೧೯][೨೦] ಸೇನ್ ಶರ್ಮಾರ ಇತ್ತೀಚಿನ ೨೦೦೯ರ ಚಿತ್ರ ಅಯನ್ ಮುಖರ್ಜಿಯ ರೊಮ್ಯಾಂಟಿಕ್ ಹಾಸ್ಯ ವೇಕ್ ಅಪ್ ಸಿದ್ , ಇದರಲ್ಲಿ ಆಕೆ ರಣಬೀರ್ ಕಪೂರ್ ಒಂದಿಗೆ ನಟಿಸಿದ್ದಾರೆ. ಬಿಡುಗಡೆಯಾದ ನಂತರ ಈ ಚಿತ್ರವು ಎಲ್ಲಾ ಕಡೆ ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯಿತು[೨೧] ಮತ್ತು ಆಕೆಯ ನಟನೆಯು ಭಾರಿ ಪ್ರಶಂಸೆಗೆ ಒಳಗಾಯಿತು. ಬಾಲಿವುಡ್ ಹಂಗಾಮ ದ ತರಣ್ ಆದರ್ಶ್ ಹೀಗೆಂದು ಬರೆದಿದ್ದಾರೆ - "ಕೊಂಕಣ ಸಹಜ ಸ್ವಭಾವದವಳು ಮತ್ತು ಆಕೆಯ ಉತ್ತಮ ಅಂಶವೆಂದರೆ ಆಕೆ ಹೆಚ್ಚು ಶ್ರಮಪಡುವುದಿಲ್ಲ. ಈ ಅದ್ಭುತ ನಟಿಯಿಂದ ಮತ್ತೊಂದು ಯಶಸ್ಸಿನ ನಟನೆ ಇಲ್ಲಿದೆ."[೨೨] ದಿ ನ್ಯೂಯಾರ್ಕ್ ಟೈಮ್ಸ್ ಹೀಗೆಂದು ಬರೆದಿದೆ - "ಮಿಸ್ ಶರ್ಮಾ ಆಯಿಶಾಳಂತಹ ವಿಶೇಷ ಪಾತ್ರಗಳನ್ನು ಮಾಡಿದ್ದಾರೆ: ಆಯಿಶಾ ಸ್ವತಂತ್ರ ನಗರದ-ಮಹಿಳೆ, ಆಕೆಯ ಕನಸುಗಳು ವೃತ್ತಿಜೀವನ ಮತ್ತು ಪ್ರೀತಿಯನ್ನು ಒಳಗೊಳ್ಳುತ್ತದೆ. ಆಕೆಯ ಆಯಿಶಾ ಪಾತ್ರವು ಸೂಕ್ಷ್ಮ ವ್ಯತ್ಯಾಸದ - ಮಹತ್ವಾಕಾಂಕ್ಷೆಯ, ಸಾಹನುಭೂತಿಯ, ವಿಶ್ವಾಸಾರ್ಹದ ಸೃಷ್ಟಿಯಾಗಿದೆ. ಮೊದಲ ಬಾರಿಗೆ ನಿರ್ದೇಶನವನ್ನು ಕೈಗೆತ್ತಿಕೊಂಡಿರುವ ಶ್ರೀ ಮುಖರ್ಜಿಯವರು ಚಲನಚಿತ್ರ ರಂಗದಲ್ಲಿ ಆಕೆ ಇನ್ನಷ್ಟು ಜನಪ್ರಿಯಗೊಳ್ಳುವಂತೆ ಮಾಡಲು ಸೂಕ್ತವಾದವರಾಗಿದ್ದಾರೆ."[೨೩]

೨೦೧೦ರಲ್ಲಿ ಸೇನ್ ಶರ್ಮಾ ಅಶ್ವನಿ ಧೀರ್‌ರವರ ಹಾಸ್ಯ ಚಿತ್ರ ಅತಿಥಿ ತುಮ್ ಕಬ್ ಜಾವೋಗೆ ಯಲ್ಲಿ ಅಜಯ್ ದೇವಗನ್ ಮತ್ತು ಪರೇಶ್ ರಾವಲ್ ಒಂದಿಗೆ ನಟಿಸಿದ್ದಾರೆ.[೨೪] ಆಕೆಯ ಇತ್ತೀಚಿನ ಚಿತ್ರ ನೀರಜ್ ಪಾತಕ್‌ರ ರೈಟ್ ಯಾ ರಾಂಗ್ , ಇದರಲ್ಲಿ ಆಕೆ ವಕೀಲರ ಪಾತ್ರದಲ್ಲಿ ನಟಿಸಿದ್ದಾರೆ.

ಆಕೆ ರಿತುಪರ್ಣೊ ಘೋಶ‌ರ ಸನ್‌ಗ್ಲಾಸ್ ಮತ್ತು ವಿನಯ್ ಶುಕ್ಲಾರ ಮಿರ್ಚ್ ಚಿತ್ರಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ೨೦೦೯ರ ಸೆಪ್ಟೆಂಬರ್‌ವರೆಗಿನ ಮಾಹಿತಿಯ ಪ್ರಕಾರ ಸೇನ್ ಶರ್ಮಾ ಅಪರ್ಣ ಸೇನ್‌‌ರ ಇತಿ ಮೃನಾಲಿನಿ [೨೫] ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ, ಈ ಚಿತ್ರವು ೨೦೧೧ರ ಆರಂಭದಲ್ಲಿ ಬಿಡುಗಡೆಯಾಗಲಿದೆ.[೨೬] ಆಕೆ ಅಮಿತಾಭ್ ವರ್ಮಾರ ಜ್ಯಾಕ್‌ಪಾಟ್[disambiguation needed][೨೭] ಚಿತ್ರದಲ್ಲಿ ರಣ್ವೀರ್ ಶೋರೆ ಒಂದಿಗೂ ನಟಿಸುತ್ತಾರೆ.[೨೮]

ರಂಗಭೂಮಿ[ಬದಲಾಯಿಸಿ]

೨೦೦೯ರ ಜೂನ್‌ನಲ್ಲಿ ಸೇನ್ ಶರ್ಮಾ ಅತುಲ್ ಕುಮಾರ್‌ರ ದಿ ಬ್ಲೂ ಮಗ್ ‌ನಲ್ಲಿ ರಜತ್ ಕಪೂರ್, ವಿನಯ್ ಪಾಠಕ್, ರಣ್ವೀರ್ ಶೋರೆ ಮತ್ತು ಶೀಬಾ ಚಧಾ ಒಂದಿಗೆ ಮೊದಲ ಬಾರಿಗೆ ರಂಗವೇದಿಕೆಯಲ್ಲಿ ನಟಿಸಿದರು.[೨೯] ೨೦೧೦ರಲ್ಲಿ ಆ ನಾಟಕವು ರಾಷ್ಟ್ರದಾದ್ಯಂತ ಮತ್ತು ವಿದೇಶದಲ್ಲೂ ಪ್ರವಾಸ ಮಾಡಿತು.[೩೦]

ವೈಯಕ್ತಿಕ ಜೀವನ[ಬದಲಾಯಿಸಿ]

53ನೇ ವಾರ್ಷಿಕ ಫಿಲ್ಮ್‌ಫೇರ್‌ ಪ್ರಶಸ್ತಿಯ (2008) ಸಂದರ್ಭದಲ್ಲಿ ಪತಿ ರಣ್ವೀರ್ ಶೋರೆಯೊಂದಿಗೆ ಕೊಂಕಣ ಸೇನ್ ಶರ್ಮಾ.

ಸೇನ್ ಶರ್ಮಾ ೨೦೦೭ರಲ್ಲಿ ನಟ ಮತ್ತು ಸಹ-ನಟ ರಣ್ವೀರ್ ಶೋರೆ ಒಂದಿಗೆ ಡೇಟಿಂಗ್ ಮಾಡಲು ಆರಂಭಿಸಿದರು, ಆದರೂ ಈ ಜೋಡಿ ಸಾರ್ವಜನಿಕ ಗಮನಕ್ಕೆ ಹೆಚ್ಚು ಬೀಳದಂತೆ ಎಚ್ಚರಿಕೆ ವಹಿಸಿದರು. ೨೦೦೮ರ ಜುಲೈನಲ್ಲಿ ಅಪರ್ಣ ಸೇನ್‌ ತನ್ನ ಮಗಳು ಶೋರೆಯನ್ನು ಇಷ್ಟಪಟ್ಟಿದ್ದಾಳೆಂದು ದೃಢಪಡಿಸಿದರು.[೩೧] ಆ ಜೋಡಿಯು ೨೦೧೦ರ ಸೆಪ್ಟೆಂಬರ್‌ನಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಮದುವೆಯಾದರು.[೩೨]

ಮಾಧ್ಯಮಗಳಲ್ಲಿ[ಬದಲಾಯಿಸಿ]

೨೦೦೫ರಲ್ಲಿ ಸೇನ್ ಶರ್ಮಾ ರೆಡಿಫ್‌ನ "ಪ್ರಮುಖ ಬಾಲಿವುಡ್ ನಟಿ"ಯರ ಪಟ್ಟಿಯಲ್ಲಿ ೧೧ನೇ ಸ್ಥಾನವನ್ನು ಪಡೆದರು.[೩೩] ನಂತರ ೨೦೦೬ರಲ್ಲಿ ಆಕೆ ೯ನೇ ಸ್ಥಾನವನ್ನು ಪಡೆದರು.[೩೪]

ಸೇನ್ ಶರ್ಮಾ ಕರಣ್ ಜೋಹಾರ್‌ನ ಸಂಭಾಷಣೆ ಕಾರ್ಯಕ್ರಮ ಕಾಫೀ ವಿದ್ ಕರಣ್ ‌ನಲ್ಲಿ ಮೂರು ಬಾರಿ ಕಾಣಿಸಿಕೊಂಡಿದ್ದಾರೆ. ಆಕೆ ಈ ಕಾರ್ಯಕ್ರಮದಲ್ಲಿ ೨೦೦೪ರಲ್ಲಿ ಆಕೆಯ ಮಿಸ್ಟರ್ ಆಂಡ್ ಮಿಸೆಸ್ ಐಯರ್ ‌ ಚಿತ್ರದ ಸಹ-ನಟ ರಾಹುಲ್ ಬೋಸ್ ಒಂದಿಗೆ ಹಾಗೂ ನಂತರ ಕುನಾಲ್ ಕಪೂರ್ ಮತ್ತು ರಿತೇಶ್ ದೇಶ್ಮುಖ್ ಒಂದಿಗೆ ಕಾಣಿಸಿಕೊಂಡರು. ೨೦೦೭ರಲ್ಲಿ ಆಕೆ ಮೈ ಬ್ರಿಲಿಯೆಂಟ್ ಬ್ರೈನ್ ಎಂಬ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟರು, ಅದು ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್‌ನಲ್ಲಿ ಪ್ರಸಾರವಾಯಿತು.[೩೫]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಲನಚಿತ್ರ ಪಾತ್ರ ಭಾಷೆ ಟಿಪ್ಪಣಿಗಳು
೧೯೮೩ ಇಂದಿರಾ ಬಾಲಕಲಾವಿದೆ ಬಂಗಾಳಿ
೧೯೮೯ ಪಿಕ್‌ನಿಕ್ ಮಗಳು ಬಂಗಾಳಿ ಟಿವಿ
೧೯೯೪ ಅಮೋದಿನಿ ಹದಿಹರೆಯದ ಮಲತಾಯಿ ಬಂಗಾಳಿ
೨೦೦೧ ಏಕ್ ಜಿ ಅಚ್ಚೆ ಕನ್ಯಾ ರಿಯಾ ಬಂಗಾಳಿ
೨೦೦೨ ಟಿಟ್ಲಿ ಟಿಟ್ಲಿ ಬಂಗಾಳಿ
ಮಿಸ್ಟರ್ ಆಂಡ್ ಮಿಸೆಸ್ ಐಯರ್ ಮೀನಾಕ್ಷಿ ಐಯರ್ ಇಂಗ್ಲಿಷ್ ವಿಜೇತೆ , ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
೨೦೦೪ ಚಾಯ್ ಪಾನಿ ಎಟ್ಸೆಟ್ರಾ ಶಾಂತಿ/ರಾಧ ಜೋಶಿ ಇಂಗ್ಲಿಷ್
೨೦೦೫ ಅಮು ಕಜು "ಅಮು" ಇಂಗ್ಲೀಷ್
ಪೇಜ್ ೩ ಮಾಧವಿ ಶರ್ಮಾ ಹಿಂದಿ
೧೫ ಪಾರ್ಕ್ ಅವೆನ್ಯೂ ಮಿತಿ ಇಂಗ್ಲೀಷ್
೨೦೦೬ ದೋಸರ್ ಕಾಬೆರಿ ಚಟರ್ಜಿ ಬಂಗಾ‍ಳಿ
ಮಿಕ್ಸೆಡ್ ಡಬಲ್ಸ್ ಮಾಲತಿ ಹಿಂದಿ
ಯೂನ್ ಹೋತಾ ತೊ ಕ್ಯಾ ಹೋತ ತಿಲೋತ್ತಿಮ ಪಂಜ್ ಹಿಂದಿ
ಓಂಕಾರ ಇಂದು ಹಿಂದಿ ವಿಜೇತೆ , ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
ವಿಜೇತೆ , ಅತ್ಯುತ್ತಮ ಪೋಷಕ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
Deadline: Sirf 24 Ghante ಸಂಜನಾ ಹಿಂದಿ
ಕರ್ಕಟ್ ರಾಶಿ ಕಾಲೇಜ್ ಹುಡುಗಿ ಹಿಂದಿ ಟಿವಿ
೨೦೦೭ ಟ್ರಾಫಿಕ್ ಸಿಗ್ನಲ್ ನೂರಿ ಹಿಂದಿ
ಮೆರಿಡಿಯನ್ ಪ್ರಮೀಳಾ ಹಿಂದಿ ವಿಳಂಬ
ಲೈಫ್ ಇನ್ ಎ... ಮೆಟ್ರೊ ಶ್ರುತಿ ಘೋಶ್ ಹಿಂದಿ ವಿಜೇತೆ , ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
ಲಗಾ ಚುನರಿ ಮೇ ದಾಗ್ ಚುಟ್ಕಿ (ಶುಭಾವರಿ ಸಹಾಯ್) ಹಿಂದಿ ನಾಮನಿರ್ದೇಶನಗೊಂಡರು, ಫಿಲ್ಮ್‌ಫೇರ್‌ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
ಆಜ ನಾಚ್ಲೆ ಅನೋಖಿ ಅನೊಖೆಲಾಲ್ ಹಿಂದಿ
೨೦೦೮ ಫ್ಯಾಷನ್ ಸ್ವತಃ ಆಕೆಯೇ ಹಿಂದಿ ವಿಶೇಷ ಪಾತ್ರ
ದಿಲ್ ಕಬಡ್ಡಿ [೩೬] ಸಿಮಿ ಹಿಂದಿ
ಜೈನಬ್ (ಭಾಗ "ಹೌ ಕ್ಯಾನ್ ಇಟ್ ಬಿ ?") ಇಂಗ್ಲೀಷ್
೨೦೦೯ ದಿ ಪ್ರೆಸಿಡೆಂಟ್ ಈಸ್ ಕಮಿಂಗ್ ಮಾಯ ರಾಯ್ ಇಂಗ್ಲೀಷ್
ಲಕ್ ಬೈ ಚಾನ್ಸ್ [೧೮] ಸೋನ ಮಿಶ್ರಾ ಹಿಂದಿ
ವೇಕ್ ಅಪ್ ಸಿಡ್ ಅಯಿಶಾ ಬ್ಯಾನರ್ಜಿ ಹಿಂದಿ
೨೦೧೦ ಅತಿಥಿ ತುಮ್ ಕಬ್ ಜಾವೋಗೆ ಮುನ್ಮುನ್ ಹಿಂದಿ
ರೈಟ್ ಯಾ ರಾಂಗ್ [೩೭] ರಾಧಿಕಾ ಪಟ್ನಾಯಕ್ ಹಿಂದಿ
ಮಿರ್ಚ್ [೩೮] ಲಾವ್ನಿ/ ಅನಿತಾ ಹಿಂದಿ
೨೦೧೧ ೭ ಖೂನ್ ಮಾಫ್ ವಿಶೇಷ ಪಾತ್ರ ಹಿಂದಿ ೨೦೧೧ರ ಫೆಬ್ರವರಿ ೧೮ರಂದು ಬಿಡುಗಡೆಯಾಗಲಿದೆ
ಇತಿ ಮೃನಾಲಿನಿ [೩೯] ಮೃನಾಲಿನಿ ಮಿತ್ರಾ ಬಂಗಾ‍ಳಿ ೨೦೧೧ರ ಎಪ್ರಿಲ್ ೧೫ರಂದು ಬಿಡುಗಡೆಯಾಗಲಿದೆ
ಸನ್‌ಗ್ಲಾಸ್ ಬಂಗಾ‍ಳಿ ವಿಳಂಬ

ಪ್ರಶಸ್ತಿಗಳು[ಬದಲಾಯಿಸಿ]

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
 • ೨೦೦೩: ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮಿಸ್ಟರ್ ಆಂಡ್ ಮಿಸೆಸ್ ಐಯರ್
 • ೨೦೦೭: ಅತ್ಯುತ್ತಮ ಪೋಷಕ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಓಂಕಾರ
ಫಿಲ್ಮ್‌ಫೇರ್ ಪ್ರಶಸ್ತಿಗಳು
 • ೨೦೦೭: ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಓಂಕಾರ
 • ೨೦೦೮: ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಲೈಫ್ ಇನ್ ಎ... ಮೆಟ್ರೊ
ಝೀ ಸಿನಿ ಪ್ರಶಸ್ತಿಗಳು
 • ೨೦೦೬: ಜೀ ಸಿನಿ ಎವಾರ್ಡ್ ಬೆಸ್ಟ್ ಫೀಮೇಲ್ ಡಿಬಟ್, ಪೇಜ್ ೩ (ವಿದ್ಯಾ ಬಾಲನ್ ಒಂದಿಗೆ ಜಂಟಿಯಾಗಿ)
 • ೨೦೦೭: ಅತ್ಯುತ್ತಮ ಪೋಷಕ ನಟನೆಗಾಗಿ ಜೀ ಸಿನಿ ಪ್ರಶಸ್ತಿ, ಓಂಕಾರ
IIFA ಪ್ರಶಸ್ತಿಗಳು
 • ೨೦೦೮: IIFA ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಲೈಫ್ ಇನ್ ಎ... ಮೆಟ್ರೊ
AIFA ಪ್ರಶಸ್ತಿಗಳು
 • ೨೦೦೭: ವಿಶೇಷ ಮನ್ನಣೆ ಪ್ರಶಸ್ತಿ - ೧೫, ಪಾರ್ಕ್ ಅವೆನ್ಯೂ
 • ೨೦೦೮: ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ - ಲೈಫ್ ಇನ್ ಎ... ಮೆಟ್ರೊ
ಇತರೇ ಪ್ರಶಸ್ತಿಗಳು
 • ೨೦೦೨: ಬಂಗಾಳ ಚಲನಚಿತ್ರ ಪತ್ರಿಕೋದ್ಯಮಿಗಳ ಸಂಘದ ಪ್ರಶಸ್ತಿಗಳು : ಏಕ ಜಿ ಅಚ್ಚೆ ಕನ್ಯಾ ಚಿತ್ರಕ್ಕಾಗಿ ಅತ್ಯುತ್ತಮ ನಟಿ
 • ೨೦೦೩: ಆನಂದಲೋಕ ಪ್ರಶಸ್ತಿಗಳು : ಮಿಸ್ಟರ್ ಆಂಡ್ ಮಿಸೆಸ್ ಐಯರ್ ‌ಗಾಗಿ ವಿಮರ್ಶಕರ ಆಯ್ಕೆ
 • ೨೦೦೫: ಕಲಾಕಾರ್ ಪ್ರಶಸ್ತಿಗಳು : ಪೇಜ್ ೩ ಚಿತ್ರಕ್ಕಾಗಿ ಅತ್ಯುತ್ತಮ ನಟಿ .[೪೦]
 • ೨೦೦೭: ಬಂಗಾಳ ಚಲನಚಿತ್ರ ಪತ್ರಿಕೋದ್ಯಮಿಗಳ ಸಂಘದ ಪ್ರಶಸ್ತಿಗಳು : ೧೫, ಪಾರ್ಕ್ ಅವೆನ್ಯೂ ಚಿತ್ರದಲ್ಲಿನ ನಟನೆಗಾಗಿ ವರ್ಷದ ಅತ್ಯದ್ಭುತ ನಟನೆ
 • ೨೦೦೭: ಮಹೀಂದ್ರಾ ಇಂಡೊ-ಅಮೆರಿಕನ್ ಆರ್ಟ್ಸ್ ಕೌನ್ಸಿಲ್ (MIAAC) ಚಲನಚಿತ್ರೋತ್ಸವ : ಅತ್ಯುತ್ತಮ ನಟಿ - ದೋಸರ್ .[೧೨]

ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದು (ಮುಖ್ಯವಾದವು)

 • ೨೦೦೭: ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, - ಲಗಾ ಚುನರಿ ಮೇ ದಾಗ್

ಇವನ್ನೂ ಗಮನಿಸಿ[ಬದಲಾಯಿಸಿ]

 • ಭಾರತೀಯ ಚಲನಚಿತ್ರ ನಟಿಯರ ಪಟ್ಟಿ
 • ಬಂಗಾಳಿ ನಟಿಯರ ಪಟ್ಟಿ

ಉಲ್ಲೇಖಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. "udc.edu". Film Index. 
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. ೧೨.೦ ೧೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. "Masand's Verdict: Traffic Signal". 
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. ೧೮.೦ ೧೮.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. "Kalakar Awards". Kalakar Awards for 2005. Retrieved 2005.  Check date values in: |access-date= (help)

ಬಾಹ್ಯ ಕೊಂಡಿಗಳು[ಬದಲಾಯಿಸಿ]

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ: