ಕೇಶೀ-ಮರಕುಟಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇಶೀ-ಮರಕುಟಗ
ಗಂಡು , ಪೂರ್ವ ಪರಿ ಸೆಪ್ಟೆನ್ಟ್ರಯೊನೇಲಿಸ್ (septentrionalis)
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
P. villosus
Binomial name
Picoides villosus
(Linnaeus, 1766)
Synonyms

Dryobates villosus

ಕೇಶೀ-ಮರಕುಟಗದ (Hairy Woodpecker) , ವೈಜ್ಞಾನಿಕ ಹೆಸರು: ಪಿಕೊಯ್ಡೆಸ್ ವಿಲ್ಲೋಸಸ್ (Picoides villosus). ಇದು, 250 mm (9.75’’ ) ಉದ್ದದ, 380 mm (15 ‘’) ರೆಕ್ಕೆ ಅಳತೆಯ[೨] ಮಧ್ಯಮ ಗಾತ್ರದ ಮರಕುಟಗ woodpecker. 2003ರ ಅಂದಾಜು ಗಣನೆಯ ಪ್ರಕಾರ ಉತ್ತರ ಅಮೇರಿಕ ಖಂಡದಲ್ಲಿ ಇವುಗಳ ಸಂಖ್ಯೆ ಸುಮಾರು 9 ಮಿಲಿಯನ್ ನಷ್ಟು - ಹಾಗಾಗಿ ಇವುಗಳ ಸಂತತಿ ಅಲಕ್ಷಣೀಯ least concern (ಪುಷ್ಟಿಯಾಗಿದೆ) ಎಂದು ಪರಿಗಣಿಸಲಾಗಿದೆ [೩]

ವ್ಯಾಪ್ತಿ[ಬದಲಾಯಿಸಿ]

ಉತ್ತರ ಅಮೇರಿಕಾದ ದೇಶಗಳಾದ ಅಮೇರಿಕ(ಸಂಯುಕ್ತ ಸಂಸ್ತಾನ) , ಬಹಾಮಾಸ್, ಕೆನಡ, ಕೋಸ್ಟರಿಕ, ಎಲ್-ಸಾಲ್ವಡೋರ್, ಗ್ವಾತಮಾಲ, ಹೊಂಡೂರಸ್ ಮೆಕ್ಸಿಕೋ, ನಿಕರಗೋವ, ಪನಾಮ, ಪೂರ್ಟೋರಿಕೊ ಗಳಲ್ಲಿನ ಪರ್ಣಪಾಟಿ ಕಾಡುಗಳು (deciduous forests)[೨][೪] ಕೇಶೀ-ಮರಕುಟಗದ ವ್ಯಾಪ್ತಿ.[೩] ಜೋಡಿ ಕೇಶೀ-ಮರಕುಟಗಗಳು ಮರದಲ್ಲಿ ಬಿಲ ಕುಟಕಿ, ಸುಮಾರು 4 ಬಿಳಿ ಮೊಟ್ಟೆಗಳನ್ನು ಇಡುತ್ತವೆ.[೪]

ವಿವರ[ಬದಲಾಯಿಸಿ]

ವಯಸ್ಕ ಕೇಶೀ-ಮರಕುಟಗಗಳ ಮೇಲ್ಮೈ ಕಪ್ಪು, ರೆಕ್ಕೆಗಳ ಮೇಲೆ ಬಿಳಿ ಅಥವಾ ಮಂದ ಕಪ್ಪು ಚುಕ್ಕಿಗಳಿದ್ದು, ಕಂಠ, ಎದೆ ಮತ್ತು ಹೊಟ್ಟೆ ಭಾಗಗಳು ಕುಲದಿಂದ ಕುಲಕ್ಕೆ ಭಿನ್ನವಾಗಿದ್ದು - ಬಿಳಿ ಯಿಂದ ಮಂದ ಕಂದು ಬಣ್ಣಗಳವರೆಗಿನ ಭಿನ್ನತೆಯನ್ನು ತೋರಬಹುದು. ಕಣ್ಣಿನ ಮೇಲೆ ಹಾಗು ಕಣ್ಣಿನ ಕೆಳಗೆ ಬಿಳಿಯ ಪಟ್ಟಿಗಳಿದ್ದು, ಬಾಲ ಕಪ್ಪಾದರೂ ಬಾಹ್ಯ (ಅಂಚಿನ) ಪುಕ್ಕಗಳಲ್ಲಿ ಬಿಳಿಯ ಕುರುಹು ಇರುತ್ತದೆ. ವಯಸ್ಕ ಗಂಡುಗಳ ಬುರುಡೆಯ ಹಿಂಭಾಗದಲ್ಲಿ ಒಂದು ಇಲ್ಲವೇ ಎರಡು ಕೆಂಪು ಪಟ್ಟಿಗಳಿರಬಹುದು. ಎಳೆ ಗಂಡುಗಳು ಕೆಂಪು ಅಥವಾ ಕೆಲವೊಮ್ಮೆ ಕೇಸರ ನೆತ್ತಿ ಹೊಂದಿರುತ್ತವೆ.[೫]

ಕೇಶೀ-ಮರಕುಟಗದ ಕೊಕ್ಕಿನಿಂದ ಬಾಲದ ಅಳತೆ 18–26 cm, ಹರಡಿದ ರೆಕ್ಕೆಗಳ ಒಟ್ಟು ಅಳತೆ 33–43 cm ಮತ್ತು ತೂಕ 40-95g [೬][೭]. ತೋರಿಕೆಗೆ ಕೇಶೀ-ಮರಕುಟಗಗಳು ತಮಗಿಂತಲೂ ಗಾತ್ರದಲ್ಲಿ ಚಿಕ್ಕದಾದ ಡೌನಿ-ಮರಕುಟಗ (Downy Woodpecker) ಗಳಂತೆ ಕಂಡರೂ, ಡೌನಿ-ಮರಕುಟಗಳ ಕೊಕ್ಕು ಮೊಟಕು (ಅವುಗಳ ತಲೆಗೆ ಹೊಲಿಸಿದಂತೆ), ಇವುಗಳ ಬಿಳಿ ಬಾಲದ ಕಪ್ಪು ತುದಿ ಮತ್ತು ಧ್ವನಿ(ಕರೆ)ಯಲ್ಲಿ ಕೇಶಿ ಮತ್ತು ಡೌನಿಗಳಲ್ಲಿನ ಭಿನ್ನತೆ ತೋರುತ್ತದೆ. ತೋರಿಕೆಗೆ ಇವೆರಡೂ ಹೋಲುತ್ತವೆಯಾದರೂ ಇವೆರಡರಲ್ಲಿ ಹತ್ತಿರದ ನೆಂಟಸ್ತಿಕೆ ಇಲ್ಲ. ಇವುಗಳ ವರ್ಗೀಕರಣದಂತೆ ಜಾತಿಗಳಲ್ಲಿ (genera) ಭಿನ್ನತೆ ಇದೆ.[೮][೯] ಕೇಶಿ ಮತ್ತು ಡೌನಿ ಮರಕುಟಗಗಳ ಬಾಹ್ಯ ತೋರಿಕೆಯಲ್ಲಿನ ಅಂತರ ಹೆಚ್ಚಿಲ್ಲದೇ ಇವುಗಳ ಜೀವ ವಿಕಾಸದ ಮಾರ್ಗಗಳಲ್ಲಿ ಅಂತರವಿರುವುದು ಒಮ್ಮುಖ-ಜೀವವಿಕಾಸಕ್ಕೆ ಉನ್ನತ ಉದಾಹರಣೆಯಾಗಿದೆ. ಈ ಒಮ್ಮುಖ-ವಿಕಾಸಕ್ಕೆ ಕಾರಣ(ವಿವರಣೆ) ಸಧ್ಯಕ್ಕೆ ಅಸ್ಪಷ್ಟವಾಗಿದ್ದರೂ ಇವುಗಳಲ್ಲಿನ ಗಾತ್ರದ ಅಂತರದಿಂದಾಗಿ ಪರಿಸರ ಪೈಪೋಟಿ(ಸ್ಪರ್ದೆ) ಹೆಚ್ಚಿಲ್ಲ.

ಸಾಧಾರಣವಾಗಿ ಇವು ಸ್ಥಾನವಾಸಿಗಳು ( ವಲಸೆ ಹೋಗುವುದಿಲ್ಲ) ಆದರೆ ಅಮೇರಿಕ ಖಂಡದ ಉತ್ತರ ಭಾಗದ ಕೇಶೀ-ಮರಕುಟಗಗಳು ಚಳಿಗಾಲದಲ್ಲಿ ದಕ್ಷಿಣಕ್ಕೆ ವಲಸೆ ಹೋಗಬಹುದು ಮತ್ತು ಪರ್ವತದ ಮೇಲಿನ ವಾಸಿಗಳು, ತಪ್ಪಲಿಗೆ ವಲಸೆ ಬರಬಹುದು. ಕೀಟಗಳೇ ಇವುಗಳ ಮುಖ್ಯ ಆಹಾರವಾದರೂ ಹಣ್ಣುಗಳು, ಕಿರಿ-ಕಾಯಿಗಳು, ಬೀಜಗಳು ಮತ್ತು ಕೆಲವೊಮ್ಮೆ ಮರದ ಒಳ-ರಸಾತ್ಮಕಗಳನ್ನೂ ಸೇವಿಸುತ್ತವೆ. ಆಹಾರಕ್ಕಾಗಿ ಮತ್ತು ಗೂಡು ಕಟ್ಟಲು ಮರಗಳನ್ನು ಕುಟುಕುವ ಇವು ಕೀಟಗಳ ಅನ್ವೇಷಣೆಯಲ್ಲಿ ಕೆಲವೊಮ್ಮೆ ಮರದ ಕಿಟಕಿ ಹಾಗು ಮರದ ಗೋಡೆಗಳನ್ನು ಕುಟುಕುವುದು ಕಾಣಲಾಗಿದೆ.

ಗ್ರೇಟ್ ಬೇಸಿನ್ನಲ್ಲಿನ (Great Basin ) ‘’ಒರಿಯಸ್’’ ಕುಲದ ಹೆಣ್ಣು - ರೆಕ್ಕೆಯ ಮೇಲೆ ಪೂರ್ವದ ಹಕ್ಕಿಗಳಷ್ಟು ಬಿಳಿ ಇಲ್ಲ ಮತ್ತು ಕೆಳಭಾಗ ಮಂದ-ಕಂದು
ಹೆಣ್ಣು ಡೌನಿ-ಮರಕುಟಗ.

ಸಂಬಂಧಿಸಿದ ವಿಷಯ[ಬದಲಾಯಿಸಿ]

  • ಡೌನಿ ಮರಕುಟಗ (Downy woodpecker) - ಘಾತ್ರದಲ್ಲಿ ಕೇಶಿ-ಮರಕುಟುಗಗಳಿಗಿಂತಲೂ ಚಿಕ್ಕದಾದರೂ, ತೋರಿಕೆಯಲ್ಲಿ ಬಹಳವಾಗಿ ಹೋಲುತ್ತವೆ. ತೋರಿಕೆಯಲ್ಲಿ ಹೋಲುತ್ತವೆ, ಆದರೆ ಜೀವವಿಕಾಸದ ಮಾರ್ಗದಲ್ಲಿ ಅಂತರವಿದೆ.

ಚಿತ್ರ ಪ್ರದರ್ಶನ[ಬದಲಾಯಿಸಿ]

ಮೂಲಗಳು[ಬದಲಾಯಿಸಿ]

  1. BirdLife International (2012). "Picoides villosus". IUCN Red List of Threatened Species. Version 2012.1. International Union for Conservation of Nature. Retrieved 16 July 2012. {{cite web}}: Invalid |ref=harv (help)
  2. ೨.೦ ೨.೧ Sibley, David Allen (2003). The Sibley Field Guide to Birds of Eastern North America. Alfred A. Knopf, Inc. p. 249. ISBN 0-679-45120-X.
  3. ೩.೦ ೩.೧ "Picoides villosus". International Union for Conservation of Nature and Natural Resources. Retrieved 2009-03-24.
  4. ೪.೦ ೪.೧ Bull, John; Farrand, Jr., John (1994) [1977]. National Audubon Society Field Guide to North American Birds:Eastern region (2nd ed.). Chanticleer Press. p. 573. ISBN 0-679-42852-6. {{cite book}}: Unknown parameter |month= ignored (help)
  5. Jackson, Jerome A., Henri R. Ouellet, & Bette J. Jackson (2002): Hairy Woodpecker (Picoides villosus), The Birds of North America Online (A. Poole, Ed.). Ithaca: Cornell Lab of Ornithology; Retrieved from the Birds of North America Online 2009-3-20 doi:10.2173/bna.702 (registration required)
  6. Hairy Woodpecker, All About Birds.
  7. Hairy Woodpecker Archived 2018-11-06 ವೇಬ್ಯಾಕ್ ಮೆಷಿನ್ ನಲ್ಲಿ., Bird Fellow
  8. Weibel, Amy C. & Moore, William S. (2005): Plumage convergence in Picoides woodpeckers based on a molecular phylogeny, with emphasis on convergence in Downy and Hairy woodpeckers. Condor 107(4): 797–809. doi:10.1650/7858.1 (HTML abstract)
  9. Moore, William S.; Weibel, Amy C. & Agius, Andrea (2006): Mitochondrial DNA phylogeny of the woodpecker genus Veniliornis (Picidae, Picinae) and related genera implies convergent evolution of plumage patterns. Biol. J. Linn. Soc. 87: 611–624. PDF fulltext Archived 2011-09-29 ವೇಬ್ಯಾಕ್ ಮೆಷಿನ್ ನಲ್ಲಿ.

ಬಾಹ್ಯ ಕೊಂಡಿಗಳು[ಬದಲಾಯಿಸಿ]