ವಿಷಯಕ್ಕೆ ಹೋಗು

ಕೇಶವನ್ ವೆಳುತ್ತಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇಶವನ್ ವೆಳುತ್ತಾಟ್
ಕೇಶವನ್ ವೆಳುತ್ತಾಟ್
Nationalityಭಾರತೀಯ
Alma mater
Occupation(s)ಇತಿಹಾಸಜ್ಞ
ಶೈಕ್ಷಣಿಕ
Notable work
  • ದಿ ಪೊಲಿಟಿಕಲ್ ಸ್ಟ್ರಕ್ಚರ್ ಆಫ್ ಅರ್ಲಿ ಮೆಡಿವಲ್ ಸೌತ್ ಇಂಡಿಯಾ (1993)
  • ದ ಅರ್ಲಿ ಮೆಡಿವಲ್ ಇನ್ ಸೌತ್ ಇಂಡಿಯಾ (2009)

ಕೇಶವನ್ ವೆಳುತ್ತಾಟ್ (ಹುಟ್ಟು ೧೯೫೧) ರವರು ಕೇರಳ ಮೂಲದ ಭಾರತೀಯ ಇತಿಹಾಸಜ್ಞ ಮತ್ತು ಶಿಕ್ಷಣ ತಜ್ಞ. ಅವರು ಮಧ್ಯಯುಗದ ದಕ್ಷಿಣ ಭಾರತೀಯ ಇತಿಹಾಸದಲ್ಲಿ ವಿಶೇಷ ಪರಿಣತರು.[] ಅವರು ಶಾಸನ ತಜ್ಞರು ಮತ್ತು ಸಂಸ್ಕೃತ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳನ್ನು ತಿಳಿದಿದ್ದರು.[][]


ವೃತ್ತಿ

[ಬದಲಾಯಿಸಿ]

ವೆಳುತ್ತಾಟ್ ರವರು ತಮ್ಮ ಪದವಿ ಶಿಕ್ಷಣವನ್ನು ನ್ಯಾಷನಲ್ ಕೌನ್ಸಿಲ್ ಫಾರ್ ರೂರಲ್ ಎಜುಕೇಶನ್ ನಿಂದಲೂ, ಸ್ನಾತಕೋತ್ತರ ಪದವಿಯನ್ನು ಕೇರಳದ ಕೋಯೀಕೋಡ್ ವಿಶ್ವವಿದ್ಯಾಲಯದಿಂದಲೂ (೧೯೭೪), ಎಮ್. ಫಿಲ್. ಪದವಿಯನ್ನು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದಲೂ (೧೯೭೮) ಮತ್ತು ಡಾಕ್ಟರೇಟ್ ಪದವಿಯನ್ನು ಕೋಯೀಕೋಡ್ ವಿಶ್ವವಿದ್ಯಾಲಯದಿಂದಲೂ (೧೯೮೭) ಪಡೆದರು. ಅವರು ಇತಿಹಾಸಕಾರರಾದ ಎಮ್. ಜಿ. ಎಸ್ . ನಾರಾಯಣ್ .[] ರವರ ವಿದ್ಯಾರ್ಥಿಯಾಗಿದ್ದರು.

ವೆಳುತ್ತಾಟ್ ರವರು ೧೯೭೫ ರಲ್ಲಿ ಕೇರಳ ಸರ್ಕಾರಿ ಕಾಲೇಜು ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೮೨ ರಲ್ಲಿ ಅವರು ಹೊಸದಾಗಿ ರೂಪುಗೊಂಡ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ತೆರಳಿದರು. ವೆಳುತ್ತಾಟ್ ರವರು ೨೦೦೮ [] ರಲ್ಲಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಮತ್ತು ಅಧ್ಯಕ್ಷರಾಗಿ ನಿವೃತ್ತರಾದರು. ಅವರು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. []

ಅವರು ಪ್ಯಾರಿಸ್‌ನ ಎಕೋಲ್ ಪ್ರಾಟಿಕ್ ಡೆಸ್ ಹಾಟ್ಸ್ ಎಟುಡೆಸ್‌ ಹಾಗೂ ಮೈಸನ್ ಡೆಸ್ ಸೈನ್ಸಸ್ ಡೆ ಎಲ್'ಹೋಮ್, ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಕೇರಳದ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ, ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅವರು ಭಾರತೀಯ ಇತಿಹಾಸ ಕಾಂಗ್ರೆಸ್‌ನ ಅಜೀವ ಸದಸ್ಯರಾಗಿದ್ದಾರೆ. [] ಅವರು ಭಾರತದಲ್ಲಿನ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳನ್ನು ಮೌಲ್ಯಮಾಪನ ಮಾಡುವ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ಯೊಂದಿಗೆ ಸಹ ಸಂಬಂಧ ಹೊಂದಿದ್ದರು. []

ಪ್ರಮುಖ ಪ್ರಕಟಣೆಗಳು

[ಬದಲಾಯಿಸಿ]
  • ಬ್ರಾಹ್ಮಿನ್ ಸೆಟ್ಟ್ಲ್ ಮೆಂಟ್ಸ್ ಇನ್ ಕೇರಳ: ಹಿಸ್ಟೋರಿಕ್ ಸ್ಟಡೀಸ್, (ಕೋಝಿಕೋಡ್, ಸಂಧ್ಯಾ ಪಬ್ಲಿಕೇಷನ್ಸ್, 1978; ಪರಿಷ್ಕೃತ ಮತ್ತು ವಿಸ್ತರಿಸಿದ ಆವೃತ್ತಿ, ಕಾಸ್ಮೋಬುಕ್ಸ್, ತ್ರಿಶೂರ್, 2013)
  • ದಿ ಪೊಲಿಟಿಕಲ್ ಸ್ಟ್ರಕ್ಚರ್ ಆಫ್ ಅರ್ಲಿ ಮೆಡಿವಲ್ ಸೌತ್ ಇಂಡಿಯಾ, (ನವದೆಹಲಿ, ಓರಿಯಂಟ್ ಲಾಂಗ್‌ಮನ್, 1993; ಎರಡನೇ ಪರಿಷ್ಕೃತ ಆವೃತ್ತಿ, ನವದೆಹಲಿ, ಓರಿಯಂಟ್ ಬ್ಲ್ಯಾಕ್‌ಸ್ವಾನ್, 2012)
  • ಕೇರಳ ಥ್ರೂ ದಿ ಏಜಸ್, (ತಿರುವನಂತಪುರಂ, ಸಾರ್ವಜನಿಕ ಸಂಪರ್ಕ ಇಲಾಖೆ, ಕೇರಳ ಸರ್ಕಾರ, 1976) MGS ನಾರಾಯಣನ್, ಮತ್ತು ಇತರರು.
  • ಸ್ಟೇಟ್ ಅಂಡ್ ಸೊಸೈಟಿ ಇನ್ ಪ್ರಿ ಮೊಡೆರ್ನ್ ಸೌತ್ ಇಂಡಿಯಾ , ಸಂ., R. ಚಂಪಕಲಕ್ಷ್ಮಿ ಮತ್ತು TR ವೇಣುಗೋಪಾಲನ್ (ಕಾಸ್ಮೋ ಬುಕ್ಸ್, ತ್ರಿಶೂರ್, 2002)
  • ದಿ ಅರ್ಲಿ ಮೆಡಿವಲ್ ಇನ್ ಸೌತ್ ಇಂಡಿಯಾ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, (ನವದೆಹಲಿ, 2009; ಮೊದಲ ಪೇಪರ್‌ಬ್ಯಾಕ್ ಆವೃತ್ತಿ, 2010; ಆರನೇ ಆವೃತ್ತಿ, 2014)
  • ಇರ್ರೆವೆರೆಂಟ್ ಹಿಸ್ಟರಿ: ಎಸ್ಸೇಸ್ ಫಾರ್ ಎಂ.ಜಿ.ಎಸ್ ನಾರಾಯಣನ್, ಸಂ., ಡೊನಾಲ್ಡ್ ಆರ್. ಡೇವಿಸ್, ಪ್ರೈಮಸ್ ಬುಕ್ಸ್, ದೆಹಲಿ, 2014

ಉಲ್ಲೇಖಗಳು

[ಬದಲಾಯಿಸಿ]
  1. Ramaswamy, Vijaya (2009-12-01). "Situating the Early Medieval in South India: Based on, Kesavan Veluthat, The Early Medieval in South India, (Delhi, OUP), 2009, pp. XII + 356, Rs. 695". Indian Historical Review. 36 (2): 307–310. doi:10.1177/037698360903600206. ISSN 0376-9836.
  2. "Department of History - University of Delhi". www.du.ac.in. Retrieved 2018-12-05.
  3. ೩.೦ ೩.೧ ೩.೨ ೩.೩ ೩.೪ Delhi University - Faculty Profile (2016) http://www.du.ac.in/du/uploads/Faculty%20Profiles/2016/History/Nov2016_History_Kesavan.pdf
  4. Staff Reporter (2018-07-13). "Distorted history a danger". The Hindu. ISSN 0971-751X. Retrieved 2018-12-05.