ವಿಷಯಕ್ಕೆ ಹೋಗು

ಕೆ. ಸಿವನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ಕೆ. ಸಿವನ್
ಚಂದ್ರಯಾನ-೨ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿರುವ ಡಾ.ಕೆ.ಶಿವನ್

ಹಾಲಿ
ಅಧಿಕಾರ ಸ್ವೀಕಾರ 
೧೫ ಜನವರಿ ೨೦೧೮
ಪೂರ್ವಾಧಿಕಾರಿ ಎ.ಎಸ್. ಕಿರಣ್ ಕುಮಾರ್
ವೈಯಕ್ತಿಕ ಮಾಹಿತಿ
ಜನನ ಕೈಲಸವಾಡಿವ ಶಿವನ್
(1957-04-14) ೧೪ ಏಪ್ರಿಲ್ ೧೯೫೭ (ವಯಸ್ಸು ೬೭)
ಮೇಳ ಸರಕ್ಕಲ್ವಿಲೈ,
ಕನ್ಯಾಕುಮಾರಿ ಜಿಲ್ಲೆ,
(ಇಂದಿನ ತಮಿಳುನಾಡು), ಭಾರತ
ಪೌರತ್ವ ಭಾರತೀಯ
ರಾಷ್ಟ್ರೀಯತೆ Indian

ಡಾ ಕೈಲಸವಾಡಿವ ಸಿವನ್ (ಜನನ ೧೪ ಏಪ್ರಿಲ್ ೧೯೫೭) ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.[೧][೨] ಇವರು ಈ ಹಿಂದೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಹಾಗೂ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.[೩]

ವೈಯಕ್ತಿಕ ಜೀವನ[ಬದಲಾಯಿಸಿ]

ಕೆ.ಸಿವನ್ ಅವರು ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಬಳಿ ಇರುವ ಮೇಳ ಸರಕ್ಕಲ್ವಿಲೈ ಗ್ರಾಮದ ಕೈಲಸವಾಡಿ ವೂನಾದರ್ ಮತ್ತು ಚೆಲ್ಲಮಲ್ ದಂಪತಿಗೆ ಜನಿಸಿದರು.[೪][೫] ಸಿವನ್ ಅವರು ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಕ್ರಯೋಜೆನಿಕ್ ಎಂಜಿನ್ ಅಭಿವೃದ್ಧಿಗೆ ಪಡಿಸಿದ ಮಹತ್ವದ ಕೊಡುಗೆಗಾಗಿ ಹೆಸರುವಾಸಿಯಾಗಿದ್ದಾರೆ.

ಶಿಕ್ಷಣ[ಬದಲಾಯಿಸಿ]

ಸಿವನ್ ಒಬ್ಬ ರೈತರ ಮಗ. ಮೇಳ ಸರಕ್ಕಲ್ವಿಲೈ ಗ್ರಾಮದಲ್ಲಿ ತಮಿಳು ಮಧ್ಯಮ ಸರ್ಕಾರಿ ಶಾಲೆಯಲ್ಲಿ ಮತ್ತು ನಂತರ ಕನ್ಯಾಕುಮಾರಿಜಿಲ್ಲೆಯಲ್ಲಿ ವಲ್ಲಂಕುಮಾರನ್ವಿಲೈ ನಲ್ಲಿ ಅಧ್ಯಯನ ಮುಗಿಸಿದರು. ಇವರು ತಮ್ಮ ಕುಟುಂಬದ ಮೊದಲ ಪದವೀಧರರು.[೬] ನಂತರ ಶಿವನ್ ಅವರು ೧೯೮೦ ರಲ್ಲಿ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಿಂದ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದು, ನಂತರ ೧೯೮೨ ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ನಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಇಸ್ರೋದಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಇವರು ೨೦೦೬ ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ ಯಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪದವಿ ಪಡೆದರು. ಇವರು ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್, ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಮತ್ತು ಸಿಸ್ಟಮ್ಸ್ ಸೊಸೈಟಿ ಆಫ್ ಇಂಡಿಯಾದ ಪಧವೀಧರರಾಗಿದ್ದಾರೆ.

ವೃತ್ತಿ ಜೀವನ[ಬದಲಾಯಿಸಿ]

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಪರವಾಗಿ ಉಡಾವಣಾ ವಾಹನಗಳ ವಿನ್ಯಾಸ ಅಭಿವೃದ್ಧಿಗೆ ಶಿವನ್ ಕೆಲಸ ಮಾಡಿದರು. ೧೯೮೨ ರಲ್ಲಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಯೋಜನೆಯಲ್ಲಿ ಭಾಗವಹಿಸಲು ಸಿವನ್ ಇಸ್ರೋಗೆ ಸೇರಿದರು. ಜುಲೈ, ೨, ೨೦೧೪ ರಂದು ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ನಿರ್ದೇಶಕರಾಗಿ ಅವರನ್ನು ನೇಮಿಸಲಾಯಿತು.[೭] ಜೂನ್, ೧, ೨೦೧೫ ರಂದು ವಿಎಸ್ಎಸ್ಸಿಯ ನಿರ್ದೇಶಕರಾದರು.[೮]

ಸಿವನ್ ಅವರನ್ನು ೨೦೧೮ ರ ಜನವರಿಯಲ್ಲಿ ಇಸ್ರೋ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು ನಂತರ ಇವರು ಜನವರಿ ೧೫ ರಂದು ಅಧಿಕಾರ ವಹಿಸಿಕೊಂಡರು.[೯] ಇವರ ಅಧ್ಯಕ್ಷತೆಯಲ್ಲಿ ಇಸ್ರೋ ಸಂಸ್ಥೆ, ಜುಲೈ ೨೨, ೨೦೧೯ ರಂದು ಚಂದ್ರಯಾನದ ಎರಡನೇ ಮಿಷನ್ ಚಂದ್ರಯಾನ-೨ ಅನ್ನು ಪ್ರಾರಂಭಿಸಿತು.[೧೦]

ಪ್ರಶಸ್ತಿಗಳು[ಬದಲಾಯಿಸಿ]

 • ಶ್ರೀ ಹರಿ ಓಂ ಆಶ್ರಮ ಪ್ರೇರಿತ್ ಡಾ. ವಿಕ್ರಮ್ ಸಾರಾಭಾಯಿ ಸಂಶೋಧನಾ ಪ್ರಶಸ್ತಿ (೧೯೯೯)
 • ಇಸ್ರೋ ಮೆರಿಟ್ ಪ್ರಶಸ್ತಿ (೨೦೦೭)
 • ಡಾ. ಬಿರೆನ್ ರಾಯ್ ಬಾಹ್ಯಾಕಾಶ ವಿಜ್ಞಾನ ಪ್ರಶಸ್ತಿ (೨೦೧೧)
 • ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಅಲುಮ್ನಿ ಅಸೋಸಿಯೇಷನ್, ಚೆನ್ನೈನಿಂದ ಡಿಸ್ಟಿಂಗ್ವಿಶ್ಡ್ ಅಲುಮನಸ್ ಪ್ರಶಸ್ತಿ (೨೦೧೩)
 • ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಡಿಸ್ಟಿಂಗ್ವಿಶ್ಡ್ ಅಲುಮನಸ್ ಪ್ರಶಸ್ತಿ (೨೦೧೮)
 • ಇವರಿಗೆ ಏಪ್ರಿಲ್ 2014 ರಲ್ಲಿ ಚೆನ್ನೈನ ಸತ್ಯಬಾಮಾ ವಿಶ್ವವಿದ್ಯಾಲಯ ದಿಂದ ಡಾಕ್ಟರ್ ಆಫ್ ಸೈನ್ಸ್ (ಹೊನೊರಿಸ್ ಕೌಸಾ) ನೀಡಲಾಯಿತು.[೧೧]
 • ತಮಿಳುನಾಡು ಸರ್ಕಾರದ ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿ (೨೦೧೯).[೧೨]
 1. ೨೦೨೦ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ [೧೩]

ಉಲ್ಲೇಖಗಳು[ಬದಲಾಯಿಸಿ]

 1. "Renowned scientist Sivan K named new ISRO chairman". The Times of India. 10 January 2018. Retrieved 10 January 2018.
 2. "Sivan K named new ISRO chairman". The Economic Times. 10 January 2018. Retrieved 10 January 2018.
 3. "Dr. Sivan takes over as LPSC director". The Hindu. 2 July 2014. Retrieved 28 May 2016.
 4. "A humble farmer's son to Isro's 'Rocket Man': Incredible journey of K Sivan".
 5. Raman, A. Ragu (2018-01-12). "Fighting odds: Once mango trader now Isro chairman". Deccan Chronicle (in ಇಂಗ್ಲಿಷ್). Retrieved 2019-08-31.
 6. "K Sivan: A humble farmer's son's journey to Indian Space agency top job". The Times of India. 11 January 2018. Retrieved 11 January 2018.
 7. Correspondent, Special (2 July 2014). "New Directors at ISRO centres". The Hindu. Retrieved 2 July 2014.
 8. New directors for major ISRO centres
 9. "K. Sivan takes charge as new ISRO chairman". The Hindu (in Indian English). 16 January 2018. Retrieved 28 October 2018.
 10. "Chandrayaan-2: Success in India's second attempt at launching Moon mission".
 11. "Who is K. Sivan?". Sharan Poovanna. Livemint. 12 January 2018. Retrieved 22 January 2018.
 12. "ISRO Chairman Sivan gets A.P.J. Abdul Kalam Award". The Hindu. 2019-08-15.
 13. https://kannada.asianetnews.com/state/saalumarada-thimmakka-among-5-selected-by-cuk-honorary-doctorate-rbj-qh0ipa

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]