ಕೆ. ತಿಮ್ಮಯ್ಯ
ಗೋಚರ
ಕೆ. ತಿಮ್ಮಯ್ಯ | |
---|---|
ಜನನ | ಜೂನ್ ೦೫, ೧೯೬೯ ಚಿಕ್ಕಬಾಣಗೆರೆ, ಶಿರಾ, ತುಮಕೂರು, ಕರ್ನಾಟಕ, ಭಾರತ |
ವೃತ್ತಿ |
|
ಭಾಷೆ | ಕನ್ನಡ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಬೆಂಗಳೂರು ವಿಶ್ವವಿದ್ಯಾಲಯ |
ಪ್ರಕಾರ/ಶೈಲಿ |
|
ಡಾ. ಕೆ. ತಿಮ್ಮಯ್ಯ ಭಾರತೀಯ ಕನ್ನಡ ಲೇಖಕ, ವಿಮರ್ಶಕ ಮತ್ತು ಸಂಶೋಧಕ.[೧] ಇವರು ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.[೨]
ಜನನ, ವಿದ್ಯಾಭ್ಯಾಸ
[ಬದಲಾಯಿಸಿ]ತಿಮ್ಮಯ್ಯ ಅವರು ೧೯೬೯ರಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೋಕಿನ ಚಿಕ್ಕಬಾಣಗೆರೆಯಲ್ಲಿ ಈರಕಾಳಪ್ಪ ಮತ್ತು ಈರನಾಗಮ್ಮ ಅವರ ಮಗನಾಗಿ ಹುಟ್ಟಿದರು.
ಶಾಲಾಶಿಕ್ಷಣವನ್ನು ಚಿಕ್ಕಬಾಣಗೆರೆ, ಹುಲಿಕುಂಟೆಯಲ್ಲಿ; ಪದವಿ ಶಿಕ್ಷಣವನ್ನು ಶಿರಾದಲ್ಲಿ; ಕನ್ನಡ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದ ಅವರು, ಪಿಎಚ್. ಡಿ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ.
ಕೃತಿಗಳು
[ಬದಲಾಯಿಸಿ]ಸಂಶೋಧನೆ
[ಬದಲಾಯಿಸಿ]- ಜೀವಸಂಕುಲ ಜಾನಪದ
- ನೊಸರಿ
- ಚಿಕ್ಕಬಾಣಗೆರೆ ಕರಿಯಮ್ಮ
- ಕಾಡು ಕುಸುಮ
ವಿಮರ್ಶೆ
[ಬದಲಾಯಿಸಿ]- ಬೆಳಸು
- ಕೊನರು
- ಹೃದಯ ಸ್ಪಂದನ
ಕಥಾಸಂಕಲನ
[ಬದಲಾಯಿಸಿ]- ಉಗಾದಿ[೩]
- ಸಾಲು ಹುಣಸೆ
ಜಾನಪದ
[ಬದಲಾಯಿಸಿ]- ಉಲಾಯ
- ಕವಣೆ
ಪಶುಪಾಲನ ಸಂಸ್ಕೃತಿ ಅಧ್ಯಯನ
[ಬದಲಾಯಿಸಿ]- ನೊಸರಿ[೪]
ಇತರರೊಡನೆ ತಂದಿರುವ ಕವನ ಸಂಕಲನ
[ಬದಲಾಯಿಸಿ]- ಬಣ್ಣದ ಗೆರೆ ಸಂಪಾದಕೀಯ:
- ಬಯಲು ಆಲಯ
- ಹರಿಗೋಲು
- ಗ್ರಾಮೀಣಾಭಿವೃದ್ದಿಯ ಸವಾಲುಗಳು
- ಹೂವಿನಿಂದ ನಾರು
- ಕೃಷ್ಣಾರ್ಜುನ
ಗೌರವ ಪುರಸ್ಕಾರ
[ಬದಲಾಯಿಸಿ]- ನೊಸರಿ ಮತ್ತು ಚಿಕ್ಕಬಾಣಗೆರೆ ಕರಿಯಮ್ಮ ಕೃತಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರೋತ್ಸಾಹ ಧನ
- ಸಾಹಿತ್ಯ ಕೇಸರಿ ಪ್ರಶಸ್ತಿ
ಉಲ್ಲೇಖ
[ಬದಲಾಯಿಸಿ]- ↑ http://www.udayavani.com/kannada/news/%E0%B2%A4%E0%B3%81%E0%B2%AE%E0%B2%95%E0%B3%82%E0%B2%B0%E0%B3%81/102659/%E0%B2%B2%E0%B3%80%E0%B2%A1%E0%B3%8D%E2%80%8C%E0%B2%AE%E0%B3%8C%E0%B2%B2%E0%B3%8D%E0%B2%AF%E0%B2%AF%E0%B3%81%E0%B2%A4-%E0%B2%9C%E0%B3%80%E0%B2%B5%E0%B2%A8-%E0%B2%85%E0%B2%B3%E0%B2%B5%E0%B2%A1%E0%B2%BF%E0%B2%B8%E0%B2%BF%E0%B2%95%E0%B3%86%E0%B3%82%E0%B2%B3%E0%B3%8D%E0%B2%B3%E0%B2%BF
- ↑ "ಆರ್ಕೈವ್ ನಕಲು". Archived from the original on 2015-08-04. Retrieved 2015-09-01.
- ↑ "ಆರ್ಕೈವ್ ನಕಲು". Archived from the original on 2021-06-13. Retrieved 2016-12-17.
- ↑ http://libcatmysore-koha.informindia.co.in/cgi-bin/koha/opac-search.pl?q=au:%22%E0%B2%A4%E0%B2%BF%E0%B2%AE%E0%B3%8D%E0%B2%AE%E0%B2%AF%E0%B3%8D%E0%B2%AF,%20%E0%B2%95%E0%B3%86.%22