ಕೆ. ಚಿನ್ನಪ್ಪ ಗೌಡ
ಡಾ.ಕೆ.ಚಿನ್ನಪ್ಪ ಗೌಡ | |
|---|---|
ಕೆ.ಚಿನ್ನಪ್ಪ ಗೌಡ | |
| ಜನನ | 01 ಸಪ್ಟಂಬರ್ 1955 ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ವಿಟ್ಲದ ಕೂಡೂರು |
| ಉದ್ಯೋಗ | ವಿಶ್ರಾಂತ ಸಾಹಿತಿ, ಪ್ರೊಫೆಸರ್, ಉಪಕುಲಪತಿ |
| ರಾಷ್ಟ್ರೀಯತೆ | ಭಾರತೀಯ |
| ಶೈಲಿ | ಜನಪದ |
| ವಿಷಯ | ಕನ್ನಡ ಸಾಹಿತ್ಯ ಮತ್ತು ಜಾನಪದ |
| ಸಾಹಿತ್ಯ ಚಳವಳಿ | ಸಮಾಜವಾದ ಹಾಗೂ ಶಿಕ್ಷಣ ಕ್ಷೇತ್ರ |
ಡಾ. ಕೆ. ಚಿನ್ನಪ್ಪ ಗೌಡರು ಕರ್ನಾಟಕದ ಪ್ರಮುಖ ಜಾನಪದ ವಿದ್ವಾಂಸರು, ಸಂಶೋಧಕರು, ಮತ್ತು ಲೇಖಕರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ..[೧] ಇಂಗ್ಲಿಷ್, ಕನ್ನಡ ಮತ್ತು ತುಳು ಮೂರು ಭಾಷೆಯಲ್ಲಿ ಸಾಹಿತ್ಯ, ಸಂಶೋಧನೆ ಹಾಗು ಅನುವಾದ ರಚನೆ ಮಾಡಿದ್ದಾರೆ.[೨] ನಂತರ, ಹಾವೇರಿ ಜಿಲ್ಲೆಯ ಗೋಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಯಾಗಿ ಕೆಲಸ ಮಾಡಿದ್ದಾರೆ..[೩] ಕನ್ನಡ, ತುಳು, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರ ಆಳವಾದ ಜ್ಞಾನವಿದೆ. ಈ ಮೂರು ಭಾಷೆಗಳಲ್ಲಿ ಅವರು ಸಾಹಿತ್ಯ, ಸಂಶೋಧನಾ ಲೇಖನಗಳು ಮತ್ತು ಅನುವಾದ ಕೃತಿಗಳನ್ನು ರಚಿಸಿದ್ದಾರೆ. ಡಾ. ಕೆ. ಚಿನ್ನಪ್ಪ ಗೌಡರು ಮುಖ್ಯವಾಗಿ ಭೂತಾರಾಧನೆ ಮತ್ತು ಜಾನಪದ ಅಧ್ಯಯನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಭೂತಾರಾಧನೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಅವರು ನಡೆಸಿದ ಸಂಶೋಧನೆಗಳು ಬಹಳ ಮುಖ್ಯವಾದವು. ಚಿನ್ನಪ್ಪ ಗೌಡರು ತುಳುನಾಡಿನ ಸಂಸ್ಕೃತಿ ಮತ್ತು ಜಾನಪದದ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬಹುತೇಕ ಕೃತಿಗಳು ತುಳು ಜಾನಪದ, ಅದರಲ್ಲೂ ವಿಶೇಷವಾಗಿ ಭೂತಾರಾಧನೆ ಮತ್ತು ಕೋಲದಂತಹ ವಿಶಿಷ್ಟ ಆಚರಣೆಗಳ ಮೇಲೆ ಕೇಂದ್ರೀಕೃತವಾಗಿವೆ. ಈ ವಿಷಯಗಳಲ್ಲಿ ಅವರು ಮಾಡಿದ ಸಂಶೋಧನೆಗಳು ಜಾನಪದ ಕ್ಷೇತ್ರದಲ್ಲಿ ಬಹಳ ಮಹತ್ವ ಪಡೆದಿವೆ. ತುಳುನಾಡಿನ ಭೂತಾರಾಧನೆ ಮತ್ತು ಪ್ರಾದೇಶಿಕ ನಂಬಿಕೆಗಳ ಬಗ್ಗೆ ಇವರು ಬರೆದ ಕೃತಿಗಳು ಈ ವಿಷಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಕನ್ನಡ, ತುಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನುವಾದ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ, ಹಲವಾರು ಸಂಶೋಧನಾ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಜಾನಪದ ಸೇವೆಗಾಗಿ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ಹಾಗೂ ವಿವಿಧ ಸಾಹಿತ್ಯ ಸಂಸ್ಥೆಗಳಿಂದಲೂ ಅವರು ಸನ್ಮಾನಿಸಲ್ಪಟ್ಟಿದ್ದಾರೆ. ಕನ್ನಡ ಜಾನಪದ ಲೋಕದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ಬರವಣಿಗೆಗಳು ಮತ್ತು ಸಂಶೋಧನೆಗಳು ಕನ್ನಡ ಜಾನಪದಕ್ಕೆ ಒಂದು ಹೊಸ ಆಯಾಮ ತಂದುಕೊಟ್ಟಿವೆ.
ಹುಟ್ಟು
[ಬದಲಾಯಿಸಿ]ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾವದ ಕೂಡೂರು ಎಂಬ ಊರಿನಲ್ಲಿ ಸಪ್ಟಂಬರ್ 01, 1955ರಂದು ಜನಿಸಿದರು.[೪] ಪ್ರಸ್ತುತ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೋಕಿನ ಕೊಣಾಜೆ ಗ್ರಾಮದ ಅಸೈಗೋಳಿ ಎಂಬ ಸ್ಥಳದಲ್ಲಿ ವಾಸವಿದ್ದಾರೆ.
ವಿದ್ಯಾಭ್ಯಾಸ
[ಬದಲಾಯಿಸಿ]ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ, ಪುತ್ತೂರು ತಾಲೂಕಿನ ವಿವೇಕಾನಂದ ಕಾಲೇಜಿನಲ್ಲಿ 1976ರಲ್ಲಿ ಬಿ.ಎ. ಪದವಿ, 1978ರಲ್ಲಿ ಮದರಾಸ್ ವಿಶ್ವವಿದ್ಯಾನಿಲಯಡ್ ಎಂ.ಎ. ಕನ್ನಡ(ಓ ಗ್ರೇಡ್) ಪದವಿ, 1988ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಬಿ.ಎ. ವಿವೇಕ ರೈಯವರ ಮಾರ್ಗದರ್ಶನದಲ್ಲಿ ಭೂತಾರಾಧನೆ:ಜಾನಪದೀಯ ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿರುತ್ತಾರೆ.[೫]
ನಿರ್ವಹಿಸಿರುವ ಉದ್ಯೋಗ ಮತ್ತು ಜವಾಬ್ದಾರಿಗಳು
[ಬದಲಾಯಿಸಿ]ಎಸ್.ಡಿ.ಎಂ. ಪದವಿ ಕಾಲೇಜಿನ ಉಪನ್ಯಾಸಕರು, ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ರೀಡರ್[೬], ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರು, ಕಲಾನಿಕಾಯದ ಡೀನ್, ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರು, ಪ್ರಸಾರಾಂಗ, ಶಿವರಾಮ ಕಾರಂತ ಪೀಠದ ನಿರ್ದೇಶಕರು, ದಯಾನಂದ ಪೈ, ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಶ್ರೀ ಧರ್ಮಸ್ಥಳ ತುಳು ಅಧ್ಯಯನ ಕೇಂದ್ರದ ನಿರ್ದೇಶಕರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿ.[೭], ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿ ಸದಸ್ಯರು, ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಅಧಿಕಾರಿ, ಕರ್ನಾಟಕ ಸರಕಾರದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರ್ನಾಟಕ ಸರಕಾರದ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿದ ಸದಸ್ಯರು, ಎಸ್.ಡಿ.ಎಂ.ಸ್ವಾಯತ್ತ ಕಾಲೇಜು, ಉಜಿರೆಯ ಆಡಳಿತ ಮಂಡಳಿ ಸದಸ್ಯರು, ಮಂಗಳೂರು ವಿಶ್ವವಿದ್ಯಾನಿಲಯದ ಮಾಹಿತಿ ಕೈಪಿಡಿ ಯೋಜನೆಯ ಅಧ್ಯಕ್ಷರು, ಮಂಗಳೂರು ಪಿಲಿಕುಳ ಸಂಸ್ಕೃತಿ ಗ್ರಾಮದ ನಿರ್ದೇಶಕರು, ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಲಹಾ ಸಮಿತಿ ಸದಸ್ಯರು - ಹೀಗೆ ಬೇರೆಬೇರೆ ಸ್ಥಳಗಳಲ್ಲಿ ಶೈಕ್ಷನಿಕ ಹಾಗೂ ಆಡಳಿತಾತ್ಮಕ ಜವಾಬ್ದಾರಿ ನಿರ್ವಹಿಸಿದವರು.
ಪರಿಣತಿಯ ಕ್ಷೇತ್ರಗಳು
[ಬದಲಾಯಿಸಿ]ಆಧುನಿಕ ಕನ್ನಡ ಸಾಹಿತ್ಯ ಮತ್ತು ಜಾನಪದ ಅಧ್ಯಯನದ ಬಗ್ಗೆ ವಿಶೇಷ ಪರಿಣತಿ ಪಡೆದವರು. ಜಾನಪದ, ತುಳು ಮೌಖಿಕ ಕಥನ ಮತ್ತು ಸಾಂಸ್ಕೃತಿಕ ಅಧ್ಯಯನದಲ್ಲೂ ಪರಿಣತರು. 10 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಅಧ್ಯಯನ ಹಾಗೂ 5 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಎಂ.ಫಿಲ್. ಅಧ್ಯಯನ ಮಾಡಲು ಮಾರ್ಗದರ್ಶನ ನೀಡಿರುತ್ತಾರೆ.
ಶೈಕ್ಷಣಿಕ ಸಾಧನೆ
[ಬದಲಾಯಿಸಿ]1994-95ರಲ್ಲಿ ಫಿನ್ಲೆಂಡ್ನ ತುರ್ಕು ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್ ಡಾಕ್ಟ್ರಲ್ ಫೆಲೊಶಿಪ್, 2002-2003ಗ್ ಜಪಾನ್‍ನ ವಸೆದಾ ವಿಶ್ವವಿದ್ಯಾನಿಲಯದಲ್ಲಿ[೮] ಜಪಾನ್ ಫೌಂಡೇಶನ್ ಫೆಲೊಸಿಪ್, 2008-2009ಗ್ ಜರ್ಮನಿಯ ವೂರ್ಸ್ಬರ್ಗ್ ಮ್ಯಾಕ್ಸ್‌ಮಿಲ್ಲನ್ಸ್ ವಿಶ್ವವಿದ್ಯಾನಿಲಯಕ್ಕೆ ಭಾರತ ಸರ್ಕಾರದ ಭಾರತೀಯ ಕೌನ್ಸಿಲ್‍ನಿಂದ ಸಾಂಸ್ಕೃತಿಕ ರಾಯಭಾರಿಯಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕ, 2012ಕ್ಕೆ ತುರ್ಕಿ ವಿಶ್ವವಿದ್ಯಾಲಯ, ಫಿನ್ಲೆಂಡ್ ತ್ಯುಬಿಂಗೆನ್ ವಿಶ್ವವಿದ್ಯಾನಿಲಯ ಜರ್ಮನಿಯ ವೂರ್ಸ್ಬರ್ಗ್ ಮ್ಯಾಕ್ಸ್‌ಮಿಲ್ಲನ್ಸ್ ವಿಶ್ವವಿದ್ಯಾನಿಲಯ, ಜರ್ಮನಿ ಮತ್ತು ವಾಸೆದ ಯೂನಿವರ್ಸಿಟಿ ತ್ಸುಬೌಚಿ ಮೆಮೋರಿಯಲ್ ಥೀಯೇಟರ್ ಮೂಸೆಯಂ, ವಾಸ್ದಾ ವಿಶ್ವವಿದ್ಯಾನಿಲಯ ಟೋಕಿಯೋ ಜಪಾನ್ ಇಂತಹ ದೇಶಗಳ ವಿಶ್ವವಿದ್ಯಾನಿಲಯಕ್ಕೆ ಜಾನಪದ ಮತ್ತು ಕಂಪೇರಿಟಿವ್ಹ್ ರಿಲಿಜಿಯಸ್ ಸಂದರ್ಶಕರಾಗಿ ಆಯ್ಕೆಯಾಗಿರುತ್ತಾರೆ. 2017ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿರುತ್ತಾರೆ.
ಬರೆದ ಪುಸ್ತಕಗಳು
[ಬದಲಾಯಿಸಿ]ಚಿನ್ನಪ ಗೌಡರು ಬರೆದ ಕನ್ನಡ, ಇಂಗ್ಲಿಷ್ ಪುಸ್ತಕಗಳು ಮತ್ತು ಅನುವಾದಗಳು, ಸಂಪಾದನಾ ಪುಸ್ತಕಗಳು
- ಭೂತಾರಾಧನೆ – ಕೆಲವು ಅಧ್ಯಯನಗಳು (ಕರಾವಳಿ ಜಾನಪದ ಸಂಶೋಧನ ಲೇಖನಗಳು)
- ಜಾಲಾಟ (ಜಾನಪದ ಮತ್ತು ಸಂಸ್ಕೃತಿ ಸಂಶೋಧನ ಲೇಖನಗಳು)
- ಭೂತಾರಾಧನೆ:ಜಾನಪದೀಯ ಅಧ್ಯಯನ - ಪಿಎಚ್.ಡಿ. ಅಧ್ಯಯನ ಮಹಾಪ್ರಬಂಧ
- ಸಂಸ್ಕೃತಿ ಸಿರಿ (ತುಳು ಸಂಸ್ಕೃತಿ ಮತ್ತು ಜಾನಪದ ಸಂಶೋಧನ ಲೇಖನಗಳ ಸಂಪುಟ)
- ಕರಾವಳಿ ಕಥನಗಳು-2022 (ತುಳು ಜಾನಪದ, ತುಳು ಸಾಹಿತ್ಯ, ಯಕ್ಷಗಾನ ಬುಕ್ಕೊ ಅನುವಾದ ವಿಷಯಗಳಿಗೆ ಸಂಬಂಧಿಸಿದ ಸಂಶೋಧನ ಲೇಖನಗಳ ಸಂಪುಟ)[೯]
- ಮಾಚಾರು ಗೋಪಾಲ ನಾಯ್ಕ ಹೇಳಿದ ‘ಸಿರಿ ಸಂಧಿ’-ಕನ್ನಡ ಪ್ರಸ್ತಾವನೆ ಮತ್ತು ತುಳು ಪಠ್ಯ[೧೦]
- ಕಿತ್ತಳೆ ಹಣ್ಣಲ್ಲ 2019 (ಕನ್ನಡ ಕವನ ಸಂಕಲನ)[೧೧]
- ಕೆಲೆಪು ಪೆರಡೆ ಕೆಲೆಪು (ತುಳು ಕವನ ಸಂಕಲನ)
- ಬೇಲಿಯೊಳಗಿನ ಬೆಳೆ (ಪ್ರಬಂಧ ಸಂಕಲನ)[೧೨]
- ಹಿರಿಯ ಕವಿ ಅ.ಗೌ.ಕಿನ್ನಿಗೋಳಿ : ಬದುಕು ಬರಹ
- ಮೂಂಕು ಸಂಬಳೊ (ತುಳು ಜನಪದ ಕತೆಗಳು)
- ತುಳುಮಾನ್ಯ (ತುಳುಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ರಂಗಗಳಿಗೆ ಧರ್ಮಸ್ಥಳ ನೀಡಿರುವ ಕೊಡುಗೆ)
ಇಂಗ್ಲಿಷ್ ಪುಸ್ತಕಗಳು
[ಬದಲಾಯಿಸಿ]- The Mask and the Message (A Collection of research papers on various aspects of Tulu Culture and Folklore)[೧೩]
- The Siri Epic as Performed by Gopala Naika ( 2 Volumes)- Co-Editor[೧೪][೧೫]
- The Retrieved Acre-Nature and Culture in the World of Tuluva (Co-editor): A Collection of research papers on various aspects of the culture and the history of Tulunadu
- Ladle in a Golden Bowl (Translation of modern Tulu Poems) (With Prof.B.Surendra Rao)[೧೬]
- Mittabail Yamunakka - Tale of a Guttu household by D.K Chowta(Translation of a Tulu Novel) (With Prof.B. Surendra Rao)[೧೭]
- The Rainboy (Collection, Selection and Translation of Sixty Tulu Folktales) (With Prof.B. Surendra Rao)[೧೮]
- When Moonlight is very Hot (Selection and Translation of Tulu Work songs and Dance songs) (With Prof.B. Surendra Rao)[೧೯]
- Sati Kamale by S. U. Paniyadi (Translation of the first Tulu Novel) (With Prof.B. Surendra Rao)[೨೦]
- Tale of Narayana the Impostor – An early modern Tulu Story by Polali Sheenappa Heggade (Translation of Mittaya Narayana Kathe (With Prof.B. Surendra Rao)[೨೧]
- Heartbeats - Fifty Tulu Short Stories (Selection, Translation and Introduction ) (With Prof.B. Surendra Rao)[೨೨]
ಸಂಪಾದನೆ ಮಾಡಿರುವ ಪುಸ್ತಕಗಳು
[ಬದಲಾಯಿಸಿ]- ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು (ಸಹ ಸಂಪಾದಕ)
- ಅ. ಗೌ. ಕಿನ್ನಿಗೋಳಿ - ಸಾಹಿತ್ಯ ಸಂಚಯ (ಸಹ ಸಂಪಾದಕ)
- ಸೇರಿಗೆ (ತುಳು ಜಾನಪದ ಅಧ್ಯಯನ ಲೇಖಗಳು)
- ಗೌಡ ಜನಾಂಗ – ಇತಿಹಾಸ ಮತ್ತು ಸಂಸ್ಕೃತಿ (ಜನಾಂಗೀಯ ಅಧ್ಯಯನ)[೨೩]
- ಪನಿಯಾರ (ವಿಶ್ವ ತುಳು ಸಮ್ಮೇಳನ, ಸ್ಮರಣ ಸಂಪುಟ)
- ಧರ್ಮಯಾನ - ಶ್ರೀ ಡಿ. ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಅಭಿನಂದನ ಸಂಪುಟ[೨೪]
- ನುಡಿ ಒಸಗೆ (ಪ್ರೊ.ಕೆ.ಕುಶಾಲಪ್ಪ ಗೌಡ ಅಭಿನಂದನಾ ಸಂಪುಟ)
- ಅನನ್ಯ (ಪ್ರೊ.ಶ್ರೀಕೃಷ್ಣ ಭಟ್ ಅರ್ತಿಕಜೆ ಅಭಿನಂದನಾ ಸಂಪುಟ)
- ಅಯನ (ಪ್ರೊ.ತಾಳ್ತಜೆ ವಸಂತಕುಮಾರ ಅಭಿನಂದನಾ ಸಂಪುಟ)
- ತಿಬಾರ ಉಳ್ಳಾಯ, ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳು
- ಕರಾವಳಿಯ ಕತೆಗಳು (1930ರಿಂದ 1947 ವರೆಗೆ ಪತ್ರಿಕೆಳಿಂದ ಆಯ್ದ ಕತೆಗಳೂ)
- ಕರಾವಳಿಯ ಪ್ರಬಂಧಗಳು (ಪ್ರಾಚೀನ ಪತ್ರಿಕೆಳಿಂದ ಆಯ್ದ ಪ್ರಬಂಧಗಳು)
- ಕನ್ನಡ ಪತ್ರಿಕೆ ಮತ್ತು ಮಹಿಳೆ
- ಯಕ್ಷಗಾನ ಪ್ರಸಂಗ ಸಂಚಯ
- ಕೊಡವ ರಂಗಭೂಮಿ
- ರತ್ನಮಾನಸ – ಧರ್ಮಸ್ಥಳ ಬಾಹುಬಲಿ ಪ್ರತಿಷ್ಠಾಪನಾ ಮಹೋತ್ಸವ ಸ್ಮರಣ ಸಂಪುಟ
- ಆರೋಹಣ - ಧರ್ಮಸ್ಥಳ ಬಾಹುಬಲಿ ಪ್ರತಿಷ್ಠಾಪನಾ ಮಹೋತ್ಸವ ಸ್ಮರಣ ಸಂಪುಟ
- ತ್ಯಾಗ ಸಂದೇಶ - ಧರ್ಮಸ್ಥಳ ಬಾಹುಬಲಿ ಪ್ರತಿಷ್ಠಾಪನಾ ಮಹೋತ್ಸವ ಸ್ಮರಣ ಸಂಪುಟ
- ಪ್ರತಿಷ್ಠಾಪನಾ - ಧರ್ಮಸ್ಥಳ ಬಾಹುಬಲಿ ಪ್ರತಿಷ್ಠಾಪನಾ ಮಹೋತ್ಸವ ಸ್ಮರಣ ಸಂಪುಟ
ಪ್ರಸಾರಾಂಗದ ಪ್ರಚಾರೋಪನ್ಯಾಸ ಮಾಲಿಕೆ ಸಂಪಾದನೆ
[ಬದಲಾಯಿಸಿ]28 ಪುಸ್ತಕಗಳಿಗೆ ಪ್ರಧಾನ ಸಂಪಾದಕೆರಾಗಿ ಕೆಲಸ ಮಾಡಿದ್ದಾರೆ.
ಮುದ್ದಣ - ಬದುಕುಬರಹ, ಸಮೂಹಮಾಧ್ಯಮ ಮತ್ತು ಸಮಾಜ, ಸೇಡಿಯಾಪು ಕೃಷ್ಣಭಟ್ಟರ ಬದುಕು ಮತ್ತು ಬರಹ, ಎಸ್.ಯು.ಪಣಿಯಾಡಿ: ಬದುಕುಬರಹ, ಮುಳಿಯ ತಿಮ್ಮಪ್ಪಯ್ಯನವರ ಬದುಕುಬರಹ, ವಿಶುಕುಮಾರ್: ಬದುಕುಬರಹ, ಮೂಕಜ್ಜಿ, ಗ್ರಾಮೀಣ ಅಭಿವೃದ್ಧಿ ಕೆಲವು ಚಿಂತನೆಗಳು, ತಾಳಮದ್ದಳೆ - ಪಠ್ಯ ಮತ್ತು ಪ್ರದರ್ಶನ, ಕೈಯಾರರ ಕಾವ್ಯ, ದಕ್ಷಿಣ ಕನ್ನಡದ ರೈತ ಹೋರಾಟಗಳು, ಜಾಹಿರಾತು ಮತ್ತು ಆಧುನಿಕ ಸಮಾಜ
ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಕಟಣೆಗಳ ಸಂಪಾದನೆ
[ಬದಲಾಯಿಸಿ]11 ಪುಸ್ತಕಗಳಿಗೆ ಪ್ರಧಾನ ಸಂಪಾದಕೆರಾಗಿ ಕೆಲಸ ಮಾಡಿದ್ದಾರೆ.
- ಯಕ್ಷಭಂಡಾರಿ
- ಯಕ್ಷಮುಡಿ
- ಯಕ್ಷಸಿರಿ
- ಯಕ್ಷಸ್ತ್ರೀ
- ಯಕ್ಷತರು
- ಯಕ್ಷಕೇದಗೆ
- ಜಿನ ಯಕ್ಷಗಾನ ಸಂಪುಟ
- ಕೋಟ ಶಿವರಾಮ ಕಾರಂತರು:ಯಕ್ಷಗಾನ ಚಿಂತನೆ ಮತ್ತು ಪ್ರಯೋಗ
- ಬಲಿಪ ಗಾನ ಯಾನ
- ಯಕ್ಷಗಾನ ಸ್ಥಿತಿಗತಿ
- ಯಕ್ಷಗಾನ ಪ್ರಸಂಗ ಸಂಪುಟ
ಮಂಗಳ ಪಠ್ಯ ಪುಸ್ತಕ ಮಾಲಿಕೆ
[ಬದಲಾಯಿಸಿ]ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮಟ್ಟದ ಓದುವ ಕನ್ನಡ ಪುಸ್ತಕಗಳ ಪ್ರಧಾನ ಸಂಪಾದಕೆರಾಗಿ ಕೆಲಸ ಮಾಡಿದ್ದಾರೆ.
- ಪೊಚ್ಚಪೊಸ ಕಾವ್ಯಕದಿರು
- ಕಡಲಸಿರಿ
- ಬನದಸಿರಿ
- ಹಳಗನ್ನಡ ಕಾವ್ಯಕದಿಕೆ
- ನಡುಗನ್ನಡಕಾವ್ಯ
- ಕಣಜ
- ಇಂಗಡಲು
- ಇನಿದನಿ
- ಇಂಚರ
- ಪುಷ್ಪಗಿರಿ
- ಕೊಡಚಾದ್ರಿ
- ನುಡಿಗಡಲು
- ನುಡಿಸಿಂಗಾರ
- ನುಡಿಸಂಚಯ
- ನುಡಿಲಹರಿ
- ಇನಿಜೇನು
- ಒಳ್ನುಡಿ
- ಮೆಲ್ನುಡಿ
- ಬೆಡಗು
ವಿದೇಶ ಪ್ರಯಾಣ
[ಬದಲಾಯಿಸಿ]- ಜಾನಪದ ಮತ್ತು ತೌಲನಿಕ ಮತ ಧರ್ಮಗಳ ಅಧ್ಯಯನ ವಿಭಾಗ, ತುರ್ಕು ವಿಶ್ವವಿದ್ಯಾನಿಲಯ, ಫಿನ್ಲೆಂಡ್ (ಐದು ಬಾರಿ)
- ಭಾರತೀಯ ಪ್ರಾಚ್ಯಶಾಸ್ತ್ರ ಅಧ್ಯಯನ ವಿಭಾಗ, ಟ್ಯುಬಿಂಗೆನ್ ವಿಶ್ವವಿದ್ಯಾನಿಲಯ, ಜರ್ಮನಿ
- ಭಾರತೀಯ ಪ್ರಾಚ್ಯಶಾಸ್ತ್ರ ಅಧ್ಯಯನ ವಿಭಾಗ, ಜೂಲಿಯಸ್ ಮ್ಯಾಕ್ಸ್ಮಿಲಿಯನ್ಸ್ ವಿಶ್ವವಿದ್ಯಾನಿಲಯ, ವೂರ್ಸ್ಬರ್ಗ್, ಜರ್ಮನಿ (ಎರಡು ಬಾರಿ)
- ತ್ಸುಬೌಚಿ ಥಿಯೇಟರ್ ಮ್ಯೂಸಿಯಂ, ವಸೆದಾ ವಿಶ್ವವಿದ್ಯಾನಿಲಯ, ಟೊಕಿಯೋ, ಜಪಾನ್
ಪ್ರಶಸ್ತಿ ಮತ್ತು ಗೌರವ
[ಬದಲಾಯಿಸಿ]- 2024ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ – ತುಳು ಸಾಹಿತ್ಯ, ಜಾನಪದ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಕೊಟ್ಟಿರುವ ವಿಶೇಷ ಕೊಡುಗೆಗಾಗಿ[೨೫]
- 2024ರಲ್ಲಿ 2023ನೇ ವರ್ಷದ ಡಾ.ಜೀ.ಶಂ.ಪರಮಶಿವಯ್ಯ ಜಾನಪದ ತಜ್ಞ ಪ್ರಶಸ್ತಿ – ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು[೨೬]
- ಡಾ.ಕೋಟ ಶಿವರಾಮ ಕಾರಂತ ಪ್ರಶಸ್ತಿ - ಭೂತಾರಾಧನೆ ಜಾನಪದೀಯ ಅಧ್ಯಯನ ಪಿಎಚ್.ಡಿ. ಸಂಶೋಧನ ಪುಸ್ತಕಕ್ಕೆ
- ಸಂದೇಶ ರಾಜ್ಯ ಪ್ರಶಸ್ತಿ - ಸಿರಿ ಮಹಾಕಾವ್ಯ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣಾ ಯೋಜನೆಗೆ
- 2003ರಲ್ಲಿ ಪ್ರೊ.ಕು.ಶಿ. ಹರಿದಾಸ ಭಟ್ಟ ಜಾನಪದ ಪ್ರಶಸ್ತಿ, ಉಡುಪಿ
- 2017ಕ್ಕೆ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ[೨೭]
- 2022ಡ್ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಗಡೆ ಸಂಸ್ಕೃತಿ ಅಧ್ಯಯನ ಪ್ರಶಸ್ತಿ, ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ [೨೮]
- ಸಂದೇಶ ಪ್ರಶಸ್ತಿ – ತುಳು ಸಾಹಿತ್ಯ ರಂಗದ ಕೊಡುಗೆಗಾಗಿ
- ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ‘ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು’ ಸಂಶೋಧನ ಕೃತಿಗೆ
- ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ – ‘ಭೂತಾರಾಧನೆ ಕೆಲವು ಅಧ್ಯಯನಗಳು’ ಸಂಶೋಧನ ಕೃತಿಗೆ
- ವಸುದೇವ ಭೂಪಾಳಂ ದತ್ತಿನಿಧಿ ಪ್ರಶಸ್ತಿ -‘ಜಾಲಾಟ’ ಕೃತಿಗೆ
- 2021ನೇ ವರ್ಷದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ – ‘ಕೆಲೆಪು ಪೆರಡೆ ಕೆಲೆಪು’ ತುಳು ಕಾವ್ಯ ಪ್ರಶಸ್ತಿ[೨೯]
- ಬಿ.ಎ. ಪ್ರಭಾಕರ ರೈ ದತ್ತಿ ನಿಧಿ ಪ್ರಶಸ್ತಿ – ಕರಾವಳಿ ಕಥನಗಳು ಕೃತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
- ಕರಾವಳಿ ರತ್ನ ಪ್ರಶಸ್ತಿ –ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠ ರಜತ ಮಹೋತ್ಸವ, ಮಂಗಳೂರು
- ಯಕ್ಷಗಾನ ಸಾಹಿತ್ಯ ಸಾಂಸ್ಕೃತಿಕ ಜಾನಪದ ಪ್ರಶಸ್ತಿ – ರಂಗಭೂಮಿ ಉಡುಪಿ, ಕರ್ನಾಟಕ ಜಾನಪದ ಪರಿಷತ್ತು ಉಡುಪಿ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ
- ಆರ್ಯಭಟ ಸಾಹಿತ್ಯ/ಶಿಕ್ಷಣ ಪ್ರಶಸ್ತಿ, ಬೆಂಗಳೂರು 2016 [೩೦]
- ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ, ಕಾಸರಗೋಡು
- ಕುವೆಂಪು ದೀಪ ಪ್ರಶಸ್ತಿ, ಹೊನ್ನಾವರ
- ಶ್ರೀಮಯ ಯಕ್ಷತ್ರಿವೇಣಿ ಪ್ರಶಸ್ತಿ, ಮಂಗಳೂರು
- ಜಾನಪದ ಸಾಹಿತ್ಯ ಅಕಾಡೆಮಿ ಮಂಜುನಾಥ ಬೇವಿನಕಟ್ಟೆ ಜಾನಪದ ತಜ್ಞ ಪ್ರಶಸ್ತಿ[೩೧]
- 2017ಡ್ 21ನೇ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಲನೊದ ಗುರ್ಕಾರ್ಮೆ[೩೨]
- ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಪ್ರಶಸ್ತಿ 2025 [೩೩]
ಉಲ್ಲೇಖಗಳು
[ಬದಲಾಯಿಸಿ]- ↑ "Dr. K. Chinnappa Gowda". mangaloreuniversity.ac.in. Retrieved 28 March 2021.
- ↑ "ತುಳು ಭಾಷಾ ಸಂಸ್ಕೃತಿ ಅನನ್ಯವಾದುದು: ಡಾ.|ಕೆ.ಚಿನ್ನಪ್ಪ ಗೌಡ". www.udayavani.com. Retrieved 28 March 2021.
- ↑ "Janapada University". janapadauni.in. Archived from the original on 2016-07-16. Retrieved 2025-09-01.
{{cite web}}: CS1 maint: bot: original URL status unknown (link) - ↑ "Prof Chinnappa Gowda Biodata English : Free Download, Borrow, and Streaming : Internet Archive".
- ↑ "Dr. K. Chinnappa Gowda | Mangalore University". www.mangaloreuniversity.ac.in.
- ↑ https://mangaloreuniversity.ac.in/kannada-dept
- ↑ https://dn720700.ca.archive.org/0/items/prof-chinnappa-gowda-biodata-english/Prof%20Chinnappa%20Gowda%20Biodata%20Kannada.pdf
- ↑ [[https://www.waseda.jp/top/en/
- ↑ "ಕೆ. ಚಿನ್ನಪ್ಪ ಗೌಡ ಅವರ 'ಕರಾವಳಿ ಕಥನಗಳು' ಕೃತಿ ಲೋಕಾರ್ಪಣೆ". www.bookbrahma.com (in ಇಂಗ್ಲಿಷ್).
- ↑ "ಡಾ. ಕೆ. ಚಿನ್ನಪ್ಪ ಗೌಡ ಇವರ 'ಸಿರಿಸಂಧಿ' ಕೃತಿ ಬಿಡುಗಡೆ | ಫೆಬ್ರವರಿ 10". Roovari. 9 February 2024.
- ↑ cite web|last1=ವಾರ್ತೆ|first1=ಪ್ರಜಾವಾಣಿ|title=ಕಿತ್ತಳೆ ಹಣ್ಣಲ್ಲ, ನೆಲದ ಪ್ರತಿಫಲನ|url=https://www.prajavani.net/district/dakshina-kannada/chinnappa-gowdas-book-released-653892.html%7Cwebsite=Prajavani%7Clanguage=kn
- ↑ "ಬೇಲಿಯೊಳಗಿನ ಬೆಳೆ – -". 3 January 2021.
- ↑ Gowda, K. Chinnappa (2005). "The mask and the message". Madipu Prakashana.
- ↑ "The Siri epic as performed by Gopala Naika". 1998.
- ↑ Bender, Mark (2001). "Textualising the Siri Epic, and: The Siri Epic as Performed by Gopala Naika (review)". Journal of American Folklore. pp. 381–384.
- ↑ cite web|last1=Correspondent|first1=Special|title=In a first, Tulu poems translated into English|url=https://www.thehindu.com/news/cities/Mangalore/in-a-first-tulu-poems-translated-into-english/article17409251.ece%7Cwebsite=The Hindu|language=en-IN|date=4 March 2017
- ↑ cite web|url=https://media.neliti.com/media/publications/619845-alternative-geographies-and-bioregional-c442c413.pdf
- ↑ Bhasthi, Deepa (3 November 2024). "How K Chinnappa Gowda and B Surendra Rao translated the oral language Tulu for the world". Scroll.in (in ಇಂಗ್ಲಿಷ್).
- ↑ "When Moonlight is Very Hot: Selection and English Translation of Tulu Work Songs and Dance Songs" (in ಇಂಗ್ಲಿಷ್). Karnataka Tulu Sahitya Academy. 2018.
- ↑ Paniyadi, S. U. (1 December 2018). "Sati Kamale: , published by Manipal Universal Press" (in ಇಂಗ್ಲಿಷ್). Manipal Universal Press.
- ↑ "Sati Kamale | Exotic India Art". www.exoticindiaart.com (in ಇಂಗ್ಲಿಷ್).
- ↑ cite web|last1=Correspondent|first1=Special|title=English translation of 50 Tulu short stories released|url=https://www.thehindu.com/news/cities/Mangalore/english-translation-of-50-tulu-short-stories-released/article34041004.ece%7Cwebsite=The Hindu|language=en-IN|date=10 March 2021
- ↑ "ಗೌಡ ಜನಾಂಗ-ಇತಿಹಾಸ ಮತ್ತು ಸಂಸ್ಕೃತಿ – Kanaja – e-book". kanaja.karnataka.gov.in.
- ↑ "ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನಾ ಗ್ರಂಥ 'ಧರ್ಮಯಾನ' ಅರ್ಪಣೆ". Vijay Karnataka.
- ↑ Puttur, TEAM News (24 March 2025). "ಡಾ.ಕೆ.ಚಿನ್ನಪ್ಪ ಗೌಡರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪ್ರದಾನ". News Puttur.
- ↑ "Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ | Udayavani – Latest Kannada News, Udayavani Newspaper". Udayavani. 4 November 2024.
- ↑ "ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಗೆ ಡಾ.ಚಿನ್ನಪ್ಪ ಗೌಡ, ಸಯ್ಯದ್ ಹಿದಾಯತುಲ್ಲ ಆಯ್ಕೆ". Vijay Karnataka.
- ↑ cite web|last1=ವಾರ್ತೆ|first1=ಪ್ರಜಾವಾಣಿ|title=ಜಾನಪದ ತಜ್ಞ ಡಾ.ಕೆ.ಚಿನ್ನಪ್ಪ ಗೌಡರಿಗೆ ಪ್ರಶಸ್ತಿ|url=https://www.prajavani.net/district/udupi/chinnappa-gowda-984517.html%7Cwebsite=Prajavani%7Clanguage=kn
- ↑ cite web|url=https://tuluacademy.karnataka.gov.in/storage/pdf-files/pressnote%2019.pdf
- ↑ "ಆರ್ಯಭಟ ಪ್ರಶಸ್ತಿಗೆ ಪ್ರೊ.ಕೆ.ಚಿನ್ನಪ್ಪ ಗೌಡ ಆಯ್ಕೆ". www.varthabharati.in. 25 April 2016.
- ↑ cite web|last1=ವಾರ್ತೆ|first1=ಪ್ರಜಾವಾಣಿ|title=ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ|url=https://www.prajavani.net/news/karnataka-news/karnataka-janapada-academy-annual-award-30-artists-from-30-districts-k-chinnappa-gowda-manjunatha-bevinakatte-and-others-3035107%7Cwebsite=Prajavani%7Clanguage=kn
- ↑ "ಡಾ.ಕೆ.ಚಿನ್ನಪ್ಪ ಗೌಡ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ". Bantwalnews.com. 4 January 2017.
- ↑ cite web|last1=ವಾರ್ತೆ|first1=ಪ್ರಜಾವಾಣಿ|title=ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ: ದಾಮೋದರ ಶೆಟ್ಟಿ, ಚಿನ್ನಪ್ಪ ಗೌಡಗೆ ಪ್ರಶಸ್ತಿ|url=https://www.prajavani.net/district/bengaluru-city/lakshminarayana-alva-centenary-awards-damodar-shetty-chinnappa-gowda-3488607%7Cwebsite=Prajavani%7Clanguage=kn