ಕೆ.ವಿ.ತಿರುಮಲೇಶ

ವಿಕಿಪೀಡಿಯ ಇಂದ
Jump to navigation Jump to search

ಕೆ.ವಿ.ತಿರುಮಲೇಶ್ ಇವರು ಸೆಪ್ಟೆಂಬರ್ ೧೨ರ ೧೯೪೦ರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಎಂಬ ಗ್ರಾಮದಲ್ಲಿ ಜನಿಸಿದರು.ಪ್ರೊಫೆಸರ್ ಕೆ ವಿ ತಿರುಮಲೇಶ್ ಕನ್ನಡದ ಬಹು ಮುಖ್ಯಕವಿ ಮತ್ತು ವಿಮರ್ಶಕರಲ್ಲೊಬ್ಬರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ .

ತಿರುಮಲೇಶ್ ಕೆ ವಿ.jpg

ವ್ಯಕ್ತಿಚಿತ್ರ[ಬದಲಾಯಿಸಿ]

ಕೆ.ವಿ. ತಿರುಮಲೇಶ್ ಕನ್ನಡದ ನವ್ಯಸಾಹಿತ್ಯದ ಸಂದರ್ಭದಲ್ಲಿ ಬರೆಯಲು ತೊಡಗಿದವರು. [೧] ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ‘ಮುಖವಾಡಗಳು’ ಹಾಗೂ ‘ವಠಾರ’ ಇವರ ಎರಡು ಜನಪ್ರಿಯ ಕೃತಿಗಳು. [೨] ಇವರ ೨೦ ಪ್ರಕಟಿತ ಕೃತಿಗಳಲ್ಲಿ ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕೆಲ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಇವರ ಅನುವಾದಿತ ಕೃತಿ.ತಿರುಮಲೇಶರು ಪ್ರಸ್ತುತ ಅಮೇರಿಕದ ಅಯೋವ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ನಿರಂಜನ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿವೆ. [೩] [೨] ಹೈದರಾಬಾದಿನ ಸಿ.ಐ.ಇ.ಎಫ್.ಎಲ್. (ಈಗ ಇ.ಎಫ್.ಎಲ್.ಯು.) ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದ ಪ್ರೊಫಸರರಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡದ ವಾಕ್ಯರಚನೆಯ ಕುರಿತು ಮತ್ತು ಕರ್ಮಣೀ ಪ್ರಯೋಗದ ನಿಯೋಗಗಳ ಕುರಿತು ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳನ್ನೊಳಗೊಂಡ ಭಾಷಾವೈಜ್ಞಾನಿಕ ಅಧ್ಯಯನ ಅವರ ಪಿ.ಎಚ್ ಡಿ. ಪ್ರಬಂಧ. ಬೇಂದ್ರೆಯವರ ಶೈಲಿಯ ಬಗ್ಗೆಯೂ ಮತ್ತಿತರ ಭಾಷಾಸಂಬಂಧಿ ವಿಷಯಗಳನ್ನು ಕುರಿತೂ ಹಲವಾರು ಲೇಖನಗಳನ್ನೂ, ಒಂದು ಲೇಖನ ಸಂಗ್ರಹವನ್ನೂ ಪ್ರಕಟಿಸಿದ್ದಾರೆ.[೪] ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅತ್ಯುತ್ತಮವಾದುದ್ದನ್ನೇ ಬರೆದರು. ಕನ್ನಡ ಭಾಷೆ ಮತ್ತು ವ್ಯಾಕರಣದ ಮೇಲೆ ಬಹಳ ಆಳವಾದ ಹಿಡಿತವನ್ನು ಹೊಂದಿದ್ದಾರೆ.

ಕೃತಿಮಾಲೆ[೧][ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

 • ಅಕ್ಷಯ ಕಾವ್ಯ. ಅಭಿನವ ಪ್ರಕಾಶನ, ಬೆಂಗಳೂರು, ೨೦೧೦
 • ಅರಬ್ಬಿ.ಅಭಿನವ, ಬೆಂಗಳೂರು. ೨೦೧೫
 • ಅವಧ. ಅಕ್ಷರ ಪ್ರಕಾಶನ, ೧೯೮೬
 • ಏನೇನ್ ತುಂಬಿ. ಅಭಿನವ, ಬೆಂಗಳೂರು, ೨೦೧೪
 • ಪಾಪಿಯೂ. ಅಕ್ಷರ ಪ್ರಕಾಶನ, ೧೯೯೦
 • ಮಹಾಪ್ರಸ್ಥಾನ. ಅಕ್ಷರ ಪ್ರಕಾಶನ, ೧೯೭೧
 • ಮುಖವಾಡಗಳು. ಅಕ್ಷರ ಪ್ರಕಾಶನ, ಸಾಗರ, ೧೯೬೮
 • ಮುಖಾಮುಖಿ. ನೆಲಮನೆ ಪ್ರಕಾಶನ, ಮೈಸೂರು, ೧೯೭೮
 • ವಠಾರ. ನವ್ಯ ಸಾಹಿತ್ಯ ಸಂಘ, ಕಾಸರಗೋಡು, ೧೯೬೯

ಕಥಾಸಂಕಲನ[ಬದಲಾಯಿಸಿ]

 • ನಾಯಕ ಮತ್ತು ಇತರರು [೫]
 • ಕೆಲವು ಕಥಾನಕಗಳು
 • ಕಳ್ಳಿ ಗಿಡದ ಹೂ
 • ಅಪರೂಪದ ಕತೆಗಳು

ಕಾದಂಬರಿ[ಬದಲಾಯಿಸಿ]

 • ಆರೋಪ
 • ಮುಸುಗು
 • ಅನೇಕ

ವಿಮರ್ಶಾ ಕೃತಿ[ಬದಲಾಯಿಸಿ]

 • ಬೇಂದ್ರೆಯವರ ಕಾವ್ಯಶೈಲಿ
 • ನಮ್ಮ ಕನ್ನಡ
 • ಅಸ್ತಿತ್ವವಾದ - ೧೯೮೯ / ೨೦೧೬
 • ಕಾವ್ಯಕಾರಣ (ಆಧುನಿಕ ಕನ್ನಡ ಕಾವ್ಯದ ಒಂದು ಪಾರ್ಶ್ವನೋಟ)

ಲೇಖನ ಸಂಗ್ರಹ[ಬದಲಾಯಿಸಿ]

 • ಉಲ್ಲೇಖ
 • ನಮ್ಮ ಕನ್ನಡ
 • ಸಮೃದ್ಧ ಕನ್ನಡ

ಅನುವಾದಿತ ಕೃತಿ[ಬದಲಾಯಿಸಿ]

 • ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ
 • ಪೂರ್ವ ಯಾನ [ಮೂಲ:ಜೆರಾರ್ಡ್ ದ ನೆರ್ವಾಲ್]

ನಾಟಕ[ಬದಲಾಯಿಸಿ]

 • ಕಲಿಗುಲ
 • ಟೈಬೀರಿಯಸ್

ಪ್ರಶಸ್ತಿಗಳು[ಬದಲಾಯಿಸಿ]

ಇವರ ಅಕ್ಷಯ ಕಾವ್ಯ ಎಂಬ ಕವನ ಸಂಕಲನಕ್ಕೆ ೨೦೧೫ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಡಿಸೆಂಬರ್ ೧೭,೨೦೧೫ರಂದು ಪ್ರಕಟಿಸಲಾಗಿದೆ.[೬]

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ "ಓದು ಎಂದೆಂದಿಗೂ ಮುಗಿಯದ ಪಯಣ".
 2. ೨.೦ ೨.೧ "ಸಮ್ಮೇಳನದ ಮುಖ್ಯ ಅತಿಥಿ ಕೆ. ವಿ. ತಿರುಮಲೇಶ್".
 3. "ನಿರಂಜನ ಪ್ರಶಸ್ತಿಗೆ ಕವಿ ಕೆ.ವಿ.ತಿರುಮಲೇಶ್‌ ಆಯ್ಕೆ".
 4. "ಕೆ.ವಿ.ತಿರುಮಲೇಶ್".
 5. "Mysore University Main Library Catalog".
 6. "ಕೆ.ವಿ.ತಿರುಮಲೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ". Retrieved 18 December 2015.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]