ವಿಷಯಕ್ಕೆ ಹೋಗು

ಕೆವಿನ್ ಪೀಟರ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆವಿನ್ ಪೀಟರ್ಸನ್

ಕೆವಿನ್ ಪೀಟರ್ ಪೀಟರ್ಸನ್ (ಜನನ ೨೭ ಜೂನ್ ೧೯೮೦) ದಕ್ಷಿಣ ಆಫ್ರಿಕಾದ ಮೂಲದ ಬ್ರಿಟಿಷ್ ಮಾಜಿ ಕ್ರಿಕೆಟಿಗ. ಅವರು ಬಲಗೈ ಬ್ಯಾಟ್ಸ್‌ಮನ್ ಮತ್ತು ಸಾಂದರ್ಭಿಕ ಆಫ್ ಸ್ಪಿನ್ ಬೌಲರ್ ಆಗಿದ್ದು, ಅವರು ೨೦೦೫ ಮತ್ತು ೨೦೧೪ ರ ನಡುವೆ ಇಂಗ್ಲೆಂಡ್ ಪರ ಎಲ್ಲಾ ಮೂರು ಕ್ರಿಕೆಟ್ ಸ್ವರೂಪಗಳಲ್ಲಿ ಆಡಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ಪೀಟರ್ಸನ್ ದಕ್ಷಿಣ ಆಫ್ರಿಕಾದಲ್ಲಿ ಆಫ್ರಿಕಾನರ್ ತಂದೆ ಮತ್ತು ಇಂಗ್ಲಿಷ್ ತಾಯಿಗೆ ಜನಿಸಿದರು. ದಕ್ಷಿಣ ಆಫ್ರಿಕಾದ ಕ್ರಿಕೆಟ್‌ನಲ್ಲಿ ಜನಾಂಗೀಯ ಕೋಟಾ ವ್ಯವಸ್ಥೆ ಎಂದು ಹೇಳಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ೧೯೯೭ರಲ್ಲಿ ನಟಾಲ್ ಪರ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದರು. ನಂತರ ೨೦೦೦ ರಲ್ಲಿ ಇಂಗ್ಲೆಂಡ್‌ಗೆ ತೆರಳಿದರು. [೧] ಇಂಗ್ಲಿಷ್ ಸಂತತಿಯವರಾಗಿದ್ದರಿಂದ, ಪೀಟರ್ಸನ್ ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ನಾಲ್ಕು ವರ್ಷಗಳ ಅರ್ಹತಾ ಅವಧಿಯನ್ನು ಮೊದಲು ಪೂರೈಸಿ, ಇಂಗ್ಲೆಂಡ್ ತಂಡಕ್ಕೆ ಅರ್ಹರಾಗಿದ್ದರು. ನಟಿಂಗ್ ಹ್ಯಾಮ್ನಲ್ಲಿ ನಾಲ್ಕು ವರ್ಷಗಳ ಅವಧಿ ಪೂರೈಸಿದ ತಕ್ಷಣ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ತಂಡ ಆಯ್ಕೆ ಮಾಡಿಕೊಂಡಿತು. ೨೦೦೪ರಲ್ಲಿ ಅವರು ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಜಿಂಬಾಬ್ವೆ ವಿರುದ್ದ ಹಾಗೂ ೨೦೦೫ರ ಆಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಪಾದಾರ್ಪಣೆ ಮಾಡಿದರು. [೨]

ಪೀಟರ್ಸನ್ ೨೦೦೫ ರಲ್ಲಿ ನಟಿಂಗ್ ಹ್ಯಾಂಷೇರ್ ತಂಡವನ್ನು ತ್ಯಜಿಸಿ ಹ್ಯಾಂಪ್ಷೇರ್ ತಂಡವನ್ನು ಸೇರಿಕೊಂಡರು, ಆದರೆ ಇಂಗ್ಲೆಂಡ್ ತಂಡದ ನಂತರದ ಅವಲಂಬನೆಯಿಂದಾಗಿ ಪೀಟರ್ಸನ್ ೨೦೦೫ ಮತ್ತು ೨೦೧೦ ರ ನಡುವೆ ತಮ್ಮ ಕೌಂಟಿಗೆ ಕ್ರಿಕೆಟ್ನ ಒಂದೇ ಪ್ರಥಮ ದರ್ಜೆ ಪಂದ್ಯದಲ್ಲಿ ಕಾಣಿಸಿಕೊಂಡರು. ಜೂನ್ ೨೦೧೦ ರಲ್ಲಿ, ಪೀಟರ್ಸನ್ ಹ್ಯಾಂಪ್ಶೈರ್ ತೊರೆಯುವ ಇಛ್ಛೆ ಘೋಷಿಸಿದರು; [೩] ಅವರು ಸರಣಿಯ ಉಳಿದ ಅವಧಿಗೆ ಸಾಲದಲ್ಲಿ ಸರ್ರಿ ತಂಡಕ್ಕೆ ಸೇರಿದರು, ನಂತರ ೨೦೧೧ ರಲ್ಲಿ ಶಾಶ್ವತವಾಗಿ ತೆರಳಿದರು. [೪] [೫]

ವೃತ್ತಿ ಜೀವನ[ಬದಲಾಯಿಸಿ]

೨೦೦೮ ರ ಆಗಸ್ಟ್ ೦೪ ರಿಂದ ೨೦೦೮ ರ ಜನವರಿ ೦೭ ರವರೆಗೆ ಪೀಟರ್ಸನ್ ಇಂಗ್ಲೆಂಡ್ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕರಾಗಿದ್ದರು, ಆದರೆ ಇಂಗ್ಲೆಂಡ್ ತರಬೇತುದಾರ ಪೀಟರ್ ಮೂರ್ಸ್ ಅವರೊಂದಿಗಿನ ವಿವಾದದ ನಂತರ ಕೇವಲ ಮೂರು ಟೆಸ್ಟ್ ಮತ್ತು ಒಂಬತ್ತು ಏಕದಿನ ಪಂದ್ಯಗಳ ನಂತರ ರಾಜೀನಾಮೆ ನೀಡಿದರು. [೬] ಇಸಿಬಿಯೊಂದಿಗಿನ ಪೀಟರ್‌ಸನ್‌ನ ಸಂಬಂಧವು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿಲ್ಲ. ೨೦೧೨ ರಲ್ಲಿ ಅವರ ವೇಳಾಪಟ್ಟಿಯ ಬಗ್ಗೆ ಭಿನ್ನಾಭಿಪ್ರಾಯದ ನಂತರ, ಪೀಟರ್ಸನ್ ಮೇ 31 ರಂದು ಎಲ್ಲಾ ರೀತಿಯ ಅಂತರರಾಷ್ಟ್ರೀಯ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. [೭] [೮] ನಂತರ ಅವರು ತಮ್ಮ ನಿವೃತ್ತಿಯನ್ನು ಹಿಂತೆಗೆದುಕೊಂಡರೂ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಇಸಿಬಿ ಮತ್ತು ಅವರ ಸಹ ಆಟಗಾರರೊಂದಿಗೆ ಅವರ ಸಂಬಂಧವು ಹೆಚ್ಚಾಯಿತು, [೯] ಮತ್ತು ಆ ಸರಣಿಯ ಅಂತಿಮ ಟೆಸ್ಟ್‌ಗೆ ಅವರನ್ನು ಕೈಬಿಡಲಾಯಿತು. [೧೦] ಪೀಟರ್ಸನ್ ಕೊನೆಯ ಬಾರಿಗೆ ಇಂಗ್ಲೆಂಡ್ ಪರವಾಗಿ ೨೦೧೩-೧೪ ಆಶಸ್ ಹಾಗೂ ನಂತರದ ಏಕದಿನ ಪಂದ್ಯಗಳಲ್ಲಿ ಆಡಿದ್ದರು. ನಂತರ ಇನ್ನು ಮುಂದೆ ಅಂತರರಾಷ್ಟ್ರೀಯ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಯಿತು.

ಸಾಧನೆಗಳು[ಬದಲಾಯಿಸಿ]

ಪ್ರಶಸ್ತಿಗಳು[ಬದಲಾಯಿಸಿ]

೨೦೦೫ರ ರತುವಿನಲ್ಲಿ ಪೀಟರ್ಸನ್ ಅವರು ತಮ್ಮ ಆಟಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದರು. ೨೦೦೫ರಲ್ಲಿ ಅವರನ್ನು ಐಸಿಸಿ 'ವರ್ಷದ ಏಕದಿನ ಆಟಗಾರ' ಮತ್ತು 'ವರ್ಷದ ಉದಯೋನ್ಮುಖ ಆಟಗಾರ' ಎಂದು ಹೆಸರಿಸಲಾಯಿತು.[೧೧] ಜೊತಗೆ (ತಂಡದ ಸಹ ಆಟಗಾರ ಸೈಮನ್ ಜೋನ್ಸ್ ಮತ್ತು ಮ್ಯಾಥ್ಯೂ ಹೊಗಾರ್ಡ್ ಅವರೊಂದಿಗೆ) ಆಸ್ಟ್ರೇಲಿಯಾ ವಿರುದ್ಧದ 2005 ರ ಆಶಸ್ ಸರಣಿಯಲ್ಲಿ ಯಶಸ್ವಿಯಾಗಿ ಆಡಿದ್ದರಿಂದ ವರ್ಷದ ಐದು ವಿಸ್ಡೆನ್ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು. [೧೨] ಉಳಿದ ಇಂಗ್ಲೆಂಡ್ ತಂಡದ ಜೊತೆಗೆ, ಪೀಟರ್ಸನ್ ಅವರನ್ನು 2006 ರ ಹೊಸ ವರ್ಷದ ಗೌರವಗಳಲ್ಲಿ ಗುರುತಿಸಲಾಯಿತು, ಕ್ರಿಕೆಟ್‌ಗೆ ಸೇವೆಗಳಿಗಾಗಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್‌ನ ಸದಸ್ಯರಾಗಿ ನೇಮಕಗೊಂಡರು. [೧೩] ಆಸ್ಟ್ರೇಲಿಯಾ ವಿರುದ್ಧದ ೨೦೦೫ ರ ಐಸಿಸಿ ಸೂಪರ್ ಸರಣಿಯಲ್ಲಿ ಐಸಿಸಿ ವಿಶ್ವ ಇಲೆವೆನ್ ಪರ ಆಡಿದ್ದರು. [೧೪]

ಟೆಸ್ಟ್ ಪಂದ್ಯದ ಪ್ರದರ್ಶನ[ಬದಲಾಯಿಸಿ]

ದಾಖಲೆಗಳು[ಬದಲಾಯಿಸಿ]

 • ಮೊದಲ 25 ಟೆಸ್ಟ್ ಪಂದ್ಯದಿಂದ ಎರಡನೇ ಅತಿ ಹೆಚ್ಚು ರನ್ ( ಸರ್ ಡಾನ್ ಬ್ರಾಡ್ಮನ್ ಅವರ ಹಿಂದೆ) ಗಳಿಸಿದ ಬ್ಯಾಟ್ಸ್ಮಾನ್.
 • ಚೊಚ್ಚಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಗ್ರ ಸ್ಕೋರ್ ಆಗಿ ಆಡಿದ ನಾಲ್ಕನೇ ಇಂಗ್ಲಿಷ್ ಆಟಗಾರ. [೧೫]
 • 900 ಕ್ಕಿಂತ ಹೆಚ್ಚು ಐಸಿಸಿ ಬ್ಯಾಟಿಂಗ್ ರೇಟಿಂಗ್ ಹೊಂದಿರುವ ಕೇವಲ ಇಪ್ಪತ್ತೈದು ಆಟಗಾರರಲ್ಲಿ ಒಬ್ಬರು.
 • ಅತ್ಯಂತ ವೇಗದ ಸಮಯದಲ್ಲಿ ೫೦೦೦ ಟೆಸ್ಟ್ ರನ್ ಗಳಿಸಿದ್ದು, (೪ ವರ್ಷ ೨೪೩ ದಿನಗಳಲ್ಲಿ ಈ ಸಾಧನೆ ಮಾಡಿದಾರೆ). [೧೬]

ಹೆಚ್ಚಿನ ಓದುವಿಕೆ[ಬದಲಾಯಿಸಿ]

 • ಶೇನ್ ವಾರ್ನೆ ರವರ, ಶೇನ್ ವಾರ್ನ್ ಆನ್ ಕೆವಿನ್ ಪೀಟರ್ಸನ್ ಸೆಂಚುರಿ: 'ಕೆವಿನ್ ಅತ್ಯುತ್ತಮವಾಗಬಹುದು.', 'ದಿ ಟೈಮ್ಸ್', ೨೯ ಸೆಪ್ಟೆಂಬರ್ ೨೦೦೮.

ಉಲ್ಲೇಖಗಳು[ಬದಲಾಯಿಸಿ]

 1. Kevin Pietersen biography, Cricinfo. Retrieved on 28 May 2007.
 2. Test Matches played by Kevin Pietersen, Cricketarchive. Retrieved on 28 May 2007.
 3. Dobell, George. "Kevin Pietersen set for Hampshire talks". Cricinfo. Retrieved 17 June 2010.
 4. "Pietersen dropped by England, joins Surrey". Reuters. 31 August 2010. Archived from the original on 28 ಮಾರ್ಚ್ 2019. Retrieved 4 ಜನವರಿ 2020.
 5. Aspin, Guy (22 November 2010). "Kevin Pietersen signs deal with Surrey". The Independent. UK. Retrieved 15 January 2011.
 6. "England captain Pietersen resigns". BBC Sport. 7 January 2008. Retrieved 7 January 2008.
 7. "Kevin Pietersen retires from limited overs cricket: ECB". The Times of India. 31 May 2012.
 8. "Pietersen quits ODIs, T20 internationals". Wisden India. 13 July 2012. Archived from the original on 25 June 2012.
 9. "Pietersen hints at Test retirement". Wisden India. 6 August 2012. Archived from the original on 10 August 2012.
 10. "Pietersen dropped over text messages". 12 August 2012.
 11. "Flintoff shares ICC player award", BBC Sport, 11 October 2005. Retrieved on 27 May 2007.
 12. "Flintoff named as the leading player of the year", Cricinfo, 11 April 2006. Retrieved on 28 May 2007.
 13. "Ashes heroes get Palace Honours". BBC Sport. 9 February 2006. Retrieved 28 May 2007.
 14. ICC World XI Squads, Cricinfo. Retrieved on 6 June 2007.
 15. Lynch, Steven. "Pietersen's double debut double", Cricinfo, 1 August 2005. Retrieved on 27 May 2007.
 16. Travis Basevi and George Binoy, From zero to 5000 runs in 1703 days, Cricinfo, 24 March 2010. Retrieved on 22 July 2011.