ಕುಣಿಗಲ್ ರಾಮನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

Incomplete list.png This page or section is incomplete.

ಕುಣಿಗಲ್ ರಾಮನಾಥ್
ಜನನಡಿಸೆಂಬರ್ 1932
ಮರಣಫೆಬ್ರವರಿ 1, 2016
ಅಂತ್ಯ ಸಂಸ್ಕಾರ ಸ್ಥಳಬ್ರಾಹ್ಮಣ ರುದ್ರಭೂಮಿ, ಕುಣಿಗಲ್‍
ವೃತ್ತಿಚಿತ್ರನಟ
ರಾಷ್ಟ್ರೀಯತೆಭಾರತೀಯ

ಕನ್ನಡ ಚಿತ್ರನಟ ಕುಣಿಗಲ್‍ ರಾಮನಾಥ್ ಅವರು ಕುಣಿಗಲ್‍ನವರು. ಅವರು ಡಾ. ರಾಜ್‍ಕುಮಾರ್ ಅವರಿಗೆ ಪರಮಾಪ್ತರಾಗಿದ್ದರು[೧]. ಅವರು ಕುಣಿಗಲ್‍ನಲ್ಲಿರುವ ದುರ್ಗಾಭವನ್ ಲಾಡ್ಜ್‍ನ ಮಾಲೀಕರು.

ಜನನ[ಬದಲಾಯಿಸಿ]

ಕುಣಿಗಲ್‍ ರಾಮನಾಥ್ ಅವರು 1932ರ ಡಿಸೆಂಬರ್‍ನಲ್ಲಿ ಕೃಷ್ಣರಾವ್ ಹಾಗೂ ರಮಾಬಾಯಿ ದಂಪತಿಗಳ ಮಗನಾಗಿ ಜನಿಸಿದರು.

ಶಿಕ್ಷಣ[ಬದಲಾಯಿಸಿ]

ಆಂಧ್ರಪ್ರದೇಶದ ಕಡಪಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು.

ಸಾಂಸಾರಿಕ ಜೀವನ[ಬದಲಾಯಿಸಿ]

ಕುಣಿಗಲ್‍ ರಾಮನಾಥ್ ಅವರು 19ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.

ಸೇವೆ[ಬದಲಾಯಿಸಿ]

ಕುಣಿಗಲ್‍ ರಾಮನಾಥ್ ಅವರು 'ಸಂಪತ್ತಿಗೆ ಸವಾಲ್', 'ಹಾವಿನ ಹೆಡೆ', 'ಚಲಿಸುವ ಮೋಡಗಳು', 'ಸಮ್ಮಿಲನ', 'ತೂಗುವೆ ಕೃಷ್ಣನ', 'ಅನುರಾಗದ ಅಲೆಗಳು', 'ಪ್ರಾಣಸ್ನೇಹಿತ', 'ಸಪ್ತಪದಿ', 'ಕಿತ್ತೂರಿನ ಹುಲಿ' ಮುಂತಾದ ಸುಮಾರು 220ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಿಧನ[ಬದಲಾಯಿಸಿ]

ಕುಣಿಗಲ್ ರಾಮನಾಥ್ ಅವರು ದಿನಾಂಕ 1-2-2016ರಂದು ಮಧ್ಯಾಹ್ನ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾದರು[೨]. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಒಬ್ಬ ಮಗ ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಅಂದೇ ಸಂಜೆ ಕುಣಿಗಲ್‍ನ ಬ್ರಾಹ್ಮಣ ರುದ್ರಭೂಮಿಯಲ್ಲಿ ನಡೆಯಿತು.

ಉಲ್ಲೇಖ[ಬದಲಾಯಿಸಿ]

  1. http://kannada.filmibeat.com/news/kannada-actor-kunigal-ramanath-is-no-more-020676.html
  2. "ಪ್ರಜಾವಾಣಿ". 2 Feb 2016. Retrieved 2 Feb 2016.