ವಿಷಯಕ್ಕೆ ಹೋಗು

ಕುಡುತ ಚಟ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಡುತ ಚಟ್ನಿ ಮಳೆಗಾಲದಲ್ಲಿ ದೇಹ ತಂಪಾಗಿರುವುದರಿಂದ ತುಳುನಾಡಿನಲ್ಲಿ ಕುಡುತ ಚಟ್ನಿ ಮಾಡುತ್ತಾರೆ. ಕನ್ನಡದಲ್ಲಿ ತುಳುವಿನಲ್ಲಿ ಕುಡುತ ಚಟ್ನಿಯನ್ನು ಹುರುಳಿ ಚಟ್ನಿ ಎಂದು ಕರೆಯಬಹುದು. ಕುಡುತ ಚಟ್ನಿ ದೇಹವನ್ನು ಬೆಚ್ಚಗಿರುತ್ತದೆ. ಇದರಲ್ಲಿ ಕಬ್ಬಿಣದ ಅಂಶದಿಂದ ಸಮೃದ್ಧವಾಗಿದ್ದು, ಗರ್ಭಿಣಿಯರಿಗೆ ಬಹಳ ಮುಖ್ಯವಾದ ಆಹಾರವಾಗಿದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ಟೈಪ್ 2 ಮಧುಮೇಹಿಗಳಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.[] ಈ ಚಟ್ನಿ ಬಿಸಿ ಅನ್ನ, ಸಾರು, ಅಥವಾ ಗಂಜಿಯೊಂದಿಗೆ ಚೆನ್ನಾಗಿ ಒಪ್ಪುತ್ತದೆ.[]

ವೈಜ‍್ನಾನಿಕವಾಗಿ ಕುಡು ಅಥವಾ ಹುರುಳಿ

[ಬದಲಾಯಿಸಿ]

ಮ್ಯಾಕ್ರೋಟೈಲೋಮಾ ಯೂನಿಫ್ಲೋರಮ್'ಎಂದು ವೈಜ‍್ನಾನಿಕವಾಗಿ ಕುಡು ಅಥವಾ ಹುರುಳಿ ಅಥವಾ ಹೊರ್ಸ ಗ್ರಾಮ್ ಅನ್ನು ಕರೆಯಲಾಗುತ್ತದೆ.[])

ಕುಡುತ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು

[ಬದಲಾಯಿಸಿ]

1/2 ಲೋಟ ಹುರುಳಿ ಕಾಳು, 1 ಲೋಟ ಈರುಳ್ಳಿ, 2 ಲವಂಗ ಬೆಳ್ಳುಳ್ಳಿ ಕರಿಬೇವಿನ ಎಲೆಗಳು 4 ಒಣ ಕೆಂಪು ಮೆಣಸಿನಕಾಯಿ 2 ಚಮಚ ಜೀರಿಗೆ 1/2 ಚಮಚ ಕೊತ್ತಂಬರಿ ಬೀಜ, 1/2 ಚಮಚ ಬೆಲ್ಲ, 2 ಚಮಚ ತಾಜಾ ತೆಂಗಿನಕಾಯಿ, 1 ಚಮಚ ಹುಣಸೆ ನೀರು, 2 ಚಮಚ ಎಣ್ಣೆ, ಇಂಗು ಉಪ್ಪು ರುಚಿಗೆ ತಕ್ಕಸ್ಟು,[] 1/4 ಲೋಟ ತಾಜಾ ತೆಂಗಿನ ತುರಿ 1/2 ಚಮಚ ಧನಿಯಾ / ಕೊತ್ತಂಬರಿ ಬೀಜಗಳು 1/4 ಚಮಚ ಜೀರಿಗೆ / ಜೀರಿಗೆ 4 ಬೆಳ್ಳುಳ್ಳಿ ಲವಂಗ 3 ಒಣ ಕೆಂಪು ಮೆಣಸಿನಕಾಯಿಗಳು 1/2 ಚಮಚ + 2 ಚಮಚ ಎಣ್ಣೆ[] ಒಗ್ಗರಣೆಗೆ- ಸಾಸಿವೆ, ಉದ್ದಿನ ಬೇಳೆ ಮತ್ತು ಕರಿಬೇವಿನ ಎಲೆಗಳು.[]

ಹುರುಳಿ ಕಾಳು

ಕುಡುತ ಚಟ್ನಿ ಮಾಡುವ ಕ್ರಮ

[ಬದಲಾಯಿಸಿ]

ಒಂದು ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಕರಿಬೇವಿನ ಎಲೆ, ಒಣ ಮೆಣಸಿನಕಾಯಿ ಮತ್ತು ಕೊತ್ತಂಬರಿ ಬೀಜಗಳ್ನು ಸೇರಿಸಿ, ಕೈಯಾಡಿಸಿ. ನಂತರ, ಅದಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ, ಚೆನ್ನಾಗಿ ಹುರಿಯಿರಿ. ಅದು ಮುಗಿದ ನಂತರ ಅದಕ್ಕೆ ಹುರುಳಿ ಕಾಳು ಸೇರಿಸಿ, ಅದು ಉಬ್ಬುವವರೆಗೆ ಬಿಸಿ ಮಾಡಿ. ಒಮ್ಮೆ ಮಾಡಿದ ನಂತರ ಒಲೆಯಿಂದ ಕೆಳಗಿರಿಸಿ ಮತ್ತು ತಣ್ಣಗಾಗಲು ಬಿಡಿ. ನಂತರ ಈ ಹುರಿದ ಮಿಶ್ರಣ ಹಾಕಿ ಅದಕ್ಕೆ ಬೆಲ್ಲ, ತೆಂಗಿನಕಾಯಿ ಮತ್ತು ಹುಣಸೆಹಣ್ಣು ಸೇರಿಸಿ, ನಯವಾಗಿ ರುಬ್ಬಿಕೊಳ್ಳಿ. ಒಂದು ತಟ್ಟೆಗೆ ಹಾಕಿಕೊಳ್ಳಿ. ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಉದ್ದಿನಬೇಳೆ ಹಾಕಿ, ಕಂದು ಬಂಗಾರದ ಬಣ್ಣ ಆಗುವವರೆಗೆ ಹುರಿಯಿರಿ. ನಂತರ ಕರಿಬೇವಿನ ಎಲೆಗಳು, ಒಣ ಕೆಂಪು ಮೆಣಸಿನಕಾಯಿ ಮತ್ತು ಇಂಗು ಸೇರಿಸಿ. ಕರಿಬೇವಿನ ಎಲೆಗಳು ಗರಿಗರಿಯಾಗುವವರೆಗೆ ಕೆಲವು ಸೆಕೆಂಡುಗಳ ಕಾಲ ಬಿಸಿ ಮಾಡಿ. ಇದನ್ನು ಕುಡುತ ಚಟ್ನಿಯ ಮೇಲೆ ನಿಧಾನವಾಗಿ ಸೇರಿಸಿ. ತುಳುನಾಡಿನ ಕುಡುತ ಚಟ್ನಿ ಸವಿಯಲು ಸಿಧ್ದ. []

ಪೌಷ್ಟಿಕಾಂಶದ ಮಾಹಿತಿ

[ಬದಲಾಯಿಸಿ]

ಜನರು - 4 ಜನರು ಶಕ್ತಿ - 27 ಕೆಜಿ ಕೊಬ್ಬು - 1.3 ಗ್ರಾಂ ಪ್ರೋಟೀನ್ - 1.1 ಗ್ರಾಂ ಕಾರ್ಬೋಹೈಡ್ರೇಟ್ಗಳು - 2.8 ಗ್ರಾಂ ಫೈಬರ್ - 0.4 ಗ್ರಾಂ []

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ Read more at: https://kannada.boldsky.com/recipes/horse-gram-chutney-recipe-in-kannada/?story=2
  2. ೨.೦ ೨.೧ "Kudutha Chutney/Horsegram Chutney". 10 November 2021.
  3. .ars-grin.gov/gringlobal/taxonomydetail.aspx?id=425415 "Taxonomy - GRIN-Global Web v 1.10.5.0". npgsweb.ars-grin.gov. Retrieved 24 ಸೆಪ್ಟೆಂಬರ್ 2019. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  4. https://kannada.boldsky.com/recipes/horse-gram-chutney-recipe-in-kannada/?story=2