ಕಸ್ಟರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಸ್ಟರ್ಡ್ ಹಾಲು ಅಥವಾ ಕೆನೆ ಮತ್ತು ಜನೆಯ (ಮೊಟ್ಟೆಯ ಹಳದಿ ಭಾಗ) ಬೆಂದ ಮಿಶ್ರಣವನ್ನು ಆಧರಿಸಿದ ಪಾಕಶಾಲಾ ತಯಾರಿಕೆಗಳ ಒಂದು ವೈವಿಧ್ಯ. ಎಷ್ಟು ಮೊಟ್ಟೆ ಅಥವಾ ಸಾಂದ್ರಕಾರಿಯನ್ನು ಬಳಸಲಾಗಿದೆ ಎಂಬುದನ್ನು ಆಧರಿಸಿ, ಕಸ್ಟರ್ಡ್ ಅದರ ಮಂದತೆಯಲ್ಲಿ ತೆಳು ಸುರಿಯುವ ಸಾಸ್‍ನಿಂದ (ಕ್ರೆಮ್ ಆಂಗ್ಲೇಸ್) ಏಕ್ಲೇರ್‍ಗಳನ್ನು ತುಂಬಲು ಬಳಸಲಾಗುವ ದಪ್ಪ ಪೇಸ್ಟ್ರಿ ಕೆನೆಯವರೆಗೆ (ಕ್ರೆಮ್ ಪ್ಯಾಟಿಶಿಯರ್) ಬದಲಾಗಬಹುದು. ಬಹುತೇಕ ಸಾಮಾನ್ಯ ಕಸ್ಟರ್ಡ್‍ಗಳನ್ನು ಡಿಜ಼ರ್ಟ್‍ಗಳು ಅಥವಾ ಡಿಜ಼ರ್ಟ್ ಸಾಸ್‍ಗಳಾಗಿ ಬಳಸಲಾಗುತ್ತದೆ ಮತ್ತು ವಿಶಿಷ್ಟವಾಗಿ ಸಕ್ಕರೆ ಮತ್ತು ವನಿಲಾವನ್ನು ಒಳಗೊಂಡಿರುತ್ತವೆ.