ವಿಷಯಕ್ಕೆ ಹೋಗು

ಕಲ್‍ಯುಗ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲ್‍ಯುಗ್
ಚಿತ್ರದ ಭಿತ್ತಿಪತ್ರ
Directed byಶ್ಯಾಮ್ ಬೆನೆಗಲ್
Written byಶ್ಯಾಮ್ ಬೆನೆಗಲ್
ಸತ್ಯದೇವ್ ದುಬೇ
ಗಿರೀಶ್ ಕಾರ್ನಾಡ್
Produced byಶಶಿ ಕಪೂರ್
Starringಶಶಿ ಕಪೂರ್
ರೇಖಾ
ರಾಜ್ ಬಬ್ಬರ್
ಅನಂತ್ ನಾಗ್
Cinematographyಗೋವಿಂದ್ ನಿಹಲಾನಿ
Edited byಭಾನುದಾಸ್ ದಿವಾಕರ್
Music byವನ್‍ರಾಜ್ ಭಾಟಿಯಾ
Release date
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೩".
  • 24 ಜುಲೈ 1981 (1981-07-24)
Running time
152 ನಿಮಿಷಗಳು
Countryಭಾರತ
Languageಹಿಂದಿ

ಕಲ್‍ಯುಗ್ 1981 ರ ಒಂದು ಹಿಂದಿ ಭಾಷೆಯ ಅಪರಾಧಕೇಂದ್ರಿತ ನಾಟಕೀಯ ಚಲನಚಿತ್ರ. ಇದನ್ನು ಶ್ಯಾಮ್ ಬೆನೆಗಲ್ ನಿರ್ದೇಶಿಸಿದ್ದಾರೆ. ಇದು ಭಾರತೀಯ ಮಹಾಕಾವ್ಯ ಮಹಾಭಾರತದ ಆಧುನಿಕ-ದಿನದ ಆವೃತ್ತಿಯೆಂದು ಕರೆಯಲ್ಪಡುತ್ತದೆ. ಇದು ಪ್ರತಿಸ್ಪರ್ಧಿ ವ್ಯಾಪಾರ ಸಂಸ್ಥೆಗಳ ನಡುವಿನ ಪ್ರಾತಿನಿಧಿಕ ಸಂಘರ್ಷವನ್ನು ಚಿತ್ರಿಸುತ್ತದೆ. ಕಲ್‍ಯುಗ್ 1982 ರಲ್ಲಿ ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು.[][]

ಚಿತ್ರಕಥೆ ಮತ್ತು ಕಥಾವಸ್ತುವು ಮಹಾಭಾರತಕ್ಕಿಂತ ಭಿನ್ನವಾಗಿದೆ. ಆದಾಗ್ಯೂ, ಪಾತ್ರೀಕರಣ ಮತ್ತು ಗಂಭೀರವಾದ ಘಟನೆಗಳು ಮಹಾಕಾವ್ಯದೊಂದಿಗೆ ಗಮನಾರ್ಹ ಹೋಲಿಕೆಯನ್ನು ಹೊಂದಿವೆ. ಶಶಿ ಕಪೂರ್, ರೇಖಾ, ರಾಜ್ ಬಬ್ಬರ್, ಸುಪ್ರಿಯಾ ಪಾಠಕ್, ಅನಂತ್ ನಾಗ್, ಕುಲ್‍ಭೂಷಣ್ ಖರ್ಬಂದಾ, ಸುಶ್ಮಾ ಸೇಠ್, ಆಕಾಶ್ ಖುರಾನಾ, ವಿಕ್ಟರ್ ಬ್ಯಾನರ್ಜಿ, ರೀಮಾ ಲಾಗೂ, ಮತ್ತು ಎಕೆ ಹಾನಗಲ್ ಪ್ರಮುಖ ಪಾತ್ರಗಳನ್ನು ವಹಿಸಿದರು. ಊರ್ಮಿಳಾ ಮಾತೊಂಡ್ಕರ್ ಬಾಲನಟಿಯಾಗಿ ಕಾಣಿಸಿಕೊಂಡರು.

ಕಥಾವಸ್ತು

[ಬದಲಾಯಿಸಿ]

ಇದು ಒಳಸಂಚು, ಪಿತೂರಿಗಳು ಮತ್ತು ಎರಡು ಕುಟುಂಬಗಳ ನಡುವಿನ ಅನಿವಾರ್ಯ ಯುದ್ಧದ ಕಥೆಯಾಗಿದೆ.

ರಾಮ್‌ಚಂದ್ ಮತ್ತು ಭೀಷಮ್‌ಚಂದ್ ಇವರುಗಳು ವ್ಯವಹಾರದಲ್ಲಿ ಇಬ್ಬರು ಪ್ರವರ್ತಕ ಸಹೋದರರು. ಅಜೀವ ಪರ್ಯಂತ ಬ್ರಹ್ಮಚಾರಿಯಾದ ಭೀಷಮ್‌ಚಂದ್ ರಾಮ್‌ಚಂದ್‍ನ ನಿಧನದ ನಂತರ ಅವನ ಇಬ್ಬರು ಗಂಡು ಮಕ್ಕಳನ್ನು ಬೆಳೆಸಿದನು. ಅವನು ತನ್ನ ಕುಟುಂಬದ ಉದ್ಯಮಕ್ಕೆ ದೃಢವಾದ ಅಡಿಪಾಯವನ್ನೂ ನೀಡಿದನು. ರಾಮ್‌ಚಂದ್‌ನ ಹಿರಿಯ ಮಗನಾದ ಖೂಬ್‌ಚಂದ್‍ಗೆ (ವಿನೋದ್ ದೋಶಿ) ಇಬ್ಬರು ಗಂಡುಮಕ್ಕಳು, ಧನ್‍ರಾಜ್ (ವಿಕ್ಟರ್ ಬ್ಯಾನರ್ಜಿ) ಮತ್ತು ಸಂದೀಪ್‍ರಾಜ್ (ಆಕಾಶ್ ಖುರಾನಾ). ಖೂಬ್‌ಚಂದ್‍ನ ತಮ್ಮನಾದ ಪೂರಣ್‌ಚಂದ್ ಕೆಲವು ವರ್ಷಗಳ ಹಿಂದೆ ಮೃತಪಟ್ಟಿರುತ್ತಾನೆ. ಅವನ ಮೂವರು ಗಂಡು ಮಕ್ಕಳೆಂದರೆ ಧರಮ್‍ರಾಜ್ (ರಾಜ್ ಬಬ್ಬರ್), ಬಲ್‍ರಾಜ್ (ಕುಲ್‍ಭೂಷಣ್ ಖರ್ಬಂದಾ) ಮತ್ತು ಭರತ್‍ರಾಜ್ (ಅನಂತ್ ನಾಗ್). ಈ ಆಟದಲ್ಲಿ ಮತ್ತೊಬ್ಬ ಆಟಗಾರನೆಂದರೆ ಕರನ್ (ಶಶಿ ಕಪೂರ್). ಇವನು ಭೀಷಮ್‍ಚಂದ್ ಬೆಳೆಸಿದ ಅನಾಥ.

ಘಟನೆಗಳ ಒಂದು ಸರಣಿಯು ಎರಡು ಕುಟುಂಬಗಳ ನಡುವಿನ ದೀರ್ಘಕಾಲದ ಗುಪ್ತ ದ್ವೇಷವನ್ನು ಬೆಳಕಿಗೆ ತರುತ್ತದೆ. ಇಬ್ಬರ ನಡುವೆ ಮಧ್ಯಸ್ಥಿಕೆ ವಹಿಸಲು ಭೀಷಮ್‌ಚಂದ್ ಪ್ರಯತ್ನಿಸಿದರೂ ಪರಿಸ್ಥಿತಿ ಕೈತಪ್ಪಿ ಹೋಗುತ್ತದೆ ಮತ್ತು ಘಟನೆಗಳು ದುರಂತ ತಿರುವನ್ನು ತೆಗೆದುಕೊಳ್ಳುತ್ತವೆ. ಧನ್‍ರಾಜ್‍ನ ಕಡೆಯವರು ಆಕಸ್ಮಿಕವಾಗಿ ಬಲ್‍ರಾಜ್‍ನ ಕಿರಿಮಗನನ್ನು ಕೊಲ್ಲುತ್ತಾರೆ. ಸೇಡು ತೀರಿಸಿಕೊಳ್ಳಲು ಭರತ್‍ರಾಜ್ ಕರನ್‍ನನ್ನು ಕೊಲೆ ಮಾಡುತ್ತಾನೆ. ಕುಟುಂಬದ ಸಾಕಷ್ಟು ಸಂಖ್ಯೆಯ ಬಯಲುಪಡಿಸದ ವಾಸ್ತವಾಂಶಗಳು ಬಹಿರಂಗವಾಗುತ್ತವೆ. ಇವು ಉದ್ವಿಗ್ನತೆ ಮತ್ತು ದ್ವೇಷವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಅಂತಿಮವಾಗಿ ಎರಡೂ ಕುಟುಂಬಗಳ ನಾಶದಲ್ಲಿ ಕೊನೆಗೊಳ್ಳುತ್ತದೆ ಮತ್ತು ನಮ್ಮ ನೈತಿಕ ಚೌಕಟ್ಟಿನ ಭಂಗುರತೆಯನ್ನು ತೋರಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Shyam Benegal at filmreference
  2. "Kalyug - 1981". cinemasangeet. Retrieved 17 January 2019.

ಹೊರಗಿನ ಕೊಂಡಿಗಳು

[ಬದಲಾಯಿಸಿ]