ಕರ್ನಾಟಕ ರಾಜ್ಯದ ನಿಗಮ ಮಂಡಳಿಗಳ ನೇಮಕ ೨೦೧೬
ಗೋಚರ
ನಿಗಮ–ಮಂಡಳಿಗಳಿಗೆ ಅಧ್ಯಕ್ಷರ ನೇಮಕ
[ಬದಲಾಯಿಸಿ]- 2 Nov, 2016
- ರಾಜ್ಯದ 91 ನಿಗಮ-ಮಂಡಳಿಗಳಿಗೆ ಅಧ್ಯಕರನ್ನು ನೇಮಕ ಮಾಡಲಾಗಿದೆ. ಪಟ್ಟಿಯಲ್ಲಿ 21 ಶಾಸಕರು ಸ್ಥಾನ ಪಡೆದಿದ್ದು, 70 ಕಾರ್ಯಕರ್ತರು ಮತ್ತು ಮುಖಂಡರಿಗೆ ಅಧ್ಯಕ್ಷ ಸ್ಥಾನ ಲಭಿಸಿದೆ.
ಮಂಡಳಿಗಳಿಗೆ ಅಧ್ಯಕ್ಷರ ಭತ್ಯೆಗಳು
[ಬದಲಾಯಿಸಿ]- ಶಾಸಕರಿಗೆ ಸಂಪುಟ ದರ್ಜೆ ಸಚಿವ ಸ್ಥಾನಮಾನ
- ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕ ಆಗಿರುವ 21 ಶಾಸಕರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಮುಂದಿನ 18 ತಿಂಗಳಲ್ಲಿ ರೂ.17.33 ಕೋಟಿ ಹೊರೆ ಬೀಳಲಿದೆ. 14 ನೇ ವಿಧಾನಸಭೆ ಅವಧಿ 2018ರ ಮೇ ತಿಂಗಳಿಗೆ ಮುಕ್ತಾಯವಾಗಲಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇರುವವರೆಗೆ ನೂತನ ಅಧ್ಯಕ್ಷರ ಅವಧಿ ಇರಲಿದ್ದು, ಹೀಗಾಗಿ ಮುಂದಿನ 18 ತಿಂಗಳು ಇವರೆಲ್ಲರೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಧ್ಯಕ್ಷರ ತಿಂಗಳ ವೇತನ, ಆತಿಥ್ಯ ವೆಚ್ಚ, ಗೃಹ, ಸಾರಿಗೆ ಭತ್ಯೆಗಳು ಮತ್ತು ಆಪ್ತ ಸಿಬ್ಬಂದಿ ವೇತನ ಸೇರಿ ತಿಂಗಳಿಗೆ ರೂ.2.97 ಲಕ್ಷ ವೆಚ್ಚವನ್ನು ಸರ್ಕಾರ ಭರಿಸಬೇಕಾಗುತ್ತದೆ. ರಾಜ್ಯ ಮತ್ತು ಹೊರ ರಾಜ್ಯ ಪ್ರವಾಸಕ್ಕೆ ತೆರಳಿದಾಗ ದಿನಭತ್ಯೆ ಸಿಗಲಿದೆ. ವಿಮಾನದಲ್ಲಿ ಓಡಾಡುವುದಕ್ಕೆ ಯಾವುದೇ ಮಿತಿ ಇರುವುದಿಲ್ಲ. ಪ್ರತಿ ಕಿ.ಮೀ. ವಿಮಾನ ಪ್ರಯಾಣಕ್ಕೆ ರೂ.30 ರಂತೆ ನೀಡಲಾಗುತ್ತದೆ. ಇದಲ್ಲದೆ ಇವರ 18 ತಿಂಗಳ ಅವಧಿಗೆ ಒಂದು ಕಾರು (ದರ ರೂ.19 ಲಕ್ಷ ಮೀರದಂತೆ) ಮತ್ತು ಮನೆಗೆ ರೂ.10 ಲಕ್ಷ ಮೌಲ್ಯದ ಪೀಠೋಪಕರಣಗಳನ್ನು ಖರೀದಿಸಲು ಅವಕಾಶ ಇದೆ. ಅವಧಿ ಮುಗಿದ ನಂತರ ಇವುಗಳನ್ನು ಸರ್ಕಾರಕ್ಕೆ ವಾಪಸ್ ಮಾಡಬೇಕು.
- ಎಲ್ಲ ಸವಲತ್ತುಗಳು ಮತ್ತು ಕಾರು, ಪೀಠೋಪಕರಣ ಸೇರಿದರೆ 18 ತಿಂಗಳಿಗೆ ಒಬ್ಬ ಅಧ್ಯಕರಿಗೆ ರೂ.82.56 ಲಕ್ಷ ವೆಚ್ಚ ಆಗುತ್ತದೆ. ಇದೇ ರೀತಿ 21 ಅಧ್ಯಕ್ಷರಿಂದ ರೂ.17.33 ಕೋಟಿ ವೆಚ್ಚ ಸರ್ಕಾರಕ್ಕೆ ಬೀಳಲಿದೆ.
ಅಧ್ಯಕ್ಷ ಸ್ಥಾನ ಪಡೆದಿರುವ ಶಾಸಕರ ಪಟ್ಟಿ
[ಬದಲಾಯಿಸಿ]- ಮಾಲಿಕಯ್ಯ ವೆಂಕಯ್ಯ ಗುತ್ತೇದಾರ, ಕರ್ನಾಟಕ ಗೃಹ ಮಂಡಳಿ
- ಆರ್.ವಿ.ದೇವರಾಜ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
- ಕೆ.ವೆಂಕಟೇಶ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
- ರಾಜಶೇಖರ ಬಿ.ಪಾಟೀಲ, ಕೆ.ಆರ್.ಐ.ಡಿ.ಎಲ್
- ಎನ್.ನಾಗರಾಜ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ
- ಫಿರೋಜ್ ಶೇಠ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ
- ಕೆ.ಗೋಪಾಲ ಪೂಜಾರಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ
- ಪುಟ್ಟರಂಗಶೆಟ್ಟಿ ಸಿ., ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ
- ರಹೀಂ ಖಾನ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮ
- ಕೆ.ವಸಂತ ಬಂಗೇರ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ
- ಬಿ.ಆರ್.ಯಾವಗಲ್ಲ, ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
- ಎಂ.ಕೆ.ಸೋಮಶೇಖರ್, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
- ಜಿ.ಎಸ್.ಪಾಟೀಲ್, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ
- ಶಿವಾನಂದ ಎಸ್.ಪಾಟೀಲ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
- ಹಂಪನಗೌಡ ಬಾದರ್ಲಿ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್
- ಹೆಚ್.ಆರ್.ಅಲಗೂರ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
- ಡಿ.ಸುಧಾಕರ್, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ
- ಬಾಬೂರಾವ್ ಚಿಂಚನಸೂರ್, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
- ಶಾರದಾ ಮೋಹನ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ
- ಎನ್.ವೈ.ಗೋಪಾಲ ಕೃಷ್ಣ, ಸಮಿತಿ ಶಿಫಾರಸುಗಳ ಅನುಷ್ಠಾನ ಸಮಿತಿ
- ಜಿ.ಹಂಪಯ್ಯ ನಾಯಕ್ ಬಲ್ಲಟಗಿ, ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ, ತುಂಗಭದ್ರ ಯೋಜನೆ
🔰🔹🔹2024 ರ ಅಧ್ಯಕ್ಷ ಸ್ಥಾನ 🔹🔹🔰
- ಬಿ ಜಿ ಗೋವಿಂದಪ್ಪ ಹೊಸದುರ್ಗ ಕರ್ನಾಟಕ ಆಹಾರ ಅಭಿವೃದ್ಧಿ ನಿಗಮದ ಅಧ್ಯಕ್ಷರು
70 ಕಾರ್ಯಕರ್ತರು ಮತ್ತು ಮುಖಂಡರ ಪಟ್ಟಿ
[ಬದಲಾಯಿಸಿ]- ಹುದ್ದೆ ಪಡೆದ ಕಾರ್ಯಕರ್ತರು:
- ಪ್ರೊ. ಎಸ್.ಜಿ. ಸಿದ್ದರಾಮಯ್ಯ- ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ.
- ಮಲ್ಲಿಗೆ ವಿರೇಶ್-ಅಧ್ಯಕ್ಷೆ, ಮೃಗಾಲಯ ಪ್ರಾಧಿಕಾರ.
- ಶಶಿಕಲಾ ಬಿ ಕಾವಳೆ-ಅಧ್ಯಕ್ಷೆ, ಸಂಬಾರ ಮಂಡಳಿ.
- ಡಿ. ಶಂಕರ್-ಅಧ್ಯಕ್ಷ, ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ.
- ಮಾನಯ್ಯ-ಅಧ್ಯಕ್ಷ, ಕೇಂದ್ರ ಪರಿಹಾರ ಸಮಿತಿ.
- ಎಂ.ಆರ್. ವೆಂಕಟೇಶ್-ಅಧ್ಯಕ್ಷ, ಸಫಾಯಿ ಕರ್ಮಚಾರಿ ಆಯೋಗ.
- ಪದ್ಮಿನಿ ಪೊನ್ನಪ್ಪ-ಉಪಾಧ್ಯಕ್ಷೆ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ.
- ನಸೀರ್ ಅಹ್ಮದ್ - ಅಧ್ಯಕ್ಷ, ರಾಜ್ಯ ಅಲ್ಪಸಂಖ್ಯಾತರ ಆಯೋಗ. ಎಂ.ಎ.
- ಗಫೂರ್-ಅಧ್ಯಕ್ಷ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ.
- ಎಚ್.ಪಿ. ಮೋಹನ್-ಅಧ್ಯಕ್ಷ, ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ.
- ಎ.ಎನ್. ಮೋಹನ್- ಅಧ್ಯಕ್ಷರು, ಕರ್ನಾಟಕ ಜಂಗಲ್ ಲಾಡ್ಜಸ್.
- ಎ. ವೆಂಕಟೇಶ್- ಅಧ್ಯಕ್ಷರು, ಮೈಸೂರು ಪೇಂಟ್ಸ್ ಅಂಡ್ ವಾರ್ನಿಶ್.
- ಎ.ಮುನಿಯಪ್ಪ- ಅಧ್ಯಕ್ಷರು, ಎಸ್.ಸಿ.ಎಸ್‌ಟಿ ಆಯೋಗ.
- ಪ್ರೊ. ಬಸವರಾಜ ರಾಮನಾಳ- ಅಧ್ಯಕ್ಷರು, ಜೈವಿಕ ಇಂಧನ ಅಭಿವೃದ್ಧಿ ಮಂಡಳಿ.
- ಸುಂದರೇಶ್- ಅಧ್ಯಕ್ಷರು, ಕಾಡಾ, ಭದ್ರಾ ಜಲಾಶಯ. ಮಾಗಡಿ
- ಕಮಲಮ್ಮ- ಅಧ್ಯಕ್ಷರು, ಕರ್ನಾಟಕ ಕರ-ಕುಶಲ ಅಭಿವೃದ್ಧಿ
- ನಾಗಲಕ್ಷ್ಮೀಬಾಯಿ- ಅಧ್ಯಕ್ಷರು, ಮಹಿಳಾ ಆಯೋಗ.
- ಸಿ.ಎಂ. ಧನಂಜಯ- ಅಧ್ಯಕ್ಷರು, ಕರ್ನಾಟಕ ಕೈಗಾರಿಕೆಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮ.
- ರಘು ದೇವರಾಜ- ಅಧ್ಯಕ್ಷರು, ಎಂಸಿಅಂಡ್‌ಎ.
- ಎಸ್. ಮನೋಹರ್- ಅಧ್ಯಕ್ಷರು, ಕರ್ನಾಟಕ ವಿದ್ಯುತ್ ಕಾರ್ಖಾನೆ.
- ವೆಂಕಟಚಲಪತಿ- ಅಧ್ಯಕ್ಷರು, ತೆಂಗು-ನಾರು ಅಭಿವೃದ್ಧಿ ಮಂಡಳಿ.
- ಹನುಮಂತರಾಯಪ್ಪ- ಅಧ್ಯಕ್ಷರು, ಮೈಸೂರು ಎಲೆಕ್ಟ್ರಿಕಲ್ಸ್.
- ಎನ್. ರಮೇಶ್- ಅಧ್ಯಕ್ಷರು, ಖಾದಿ ಅಭಿವೃದ್ಧಿ ನಿಗಮ.
- ಬಿ.ಬಾಲರಾಜ್- ಅಧ್ಯಕ್ಷರು, ತಾಂಡಾ ಅಭಿವೃದ್ಧಿ ನಿಗಮ.
- ಜೆ. ಹುಚ್ಚಪ್ಪ-ಅಧ್ಯಕ್ಷರು, ದೇವರಾಜು ಅರಸು ಅಭಿವೃದಿಟಛಿ ನಿಗಮ.
- ಜಿ. ಕೃಷ್ಣ- ಅಧ್ಯಕ್ಷರು, ಕರ್ನಾಟಕ ರಾಜ್ಯ ಉಣ್ಣೆ ಅಭಿವೃದ್ಧಿ ನಿಗಮ.
- ಎಸ್.ಇ. ಸುಧೀಂದ್ರ- ಅಧ್ಯಕ್ಷರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ.
- ಎಂ.ಎಸ್. ಬಸರಾಜು- ಅಧ್ಯಕ್ಷರು, ಅಂಬೇಡ್ಕರ್ ಅಭಿವೃದ್ಧಿ ನಿಗಮ.
- ನಾಗರಾಜ ಜಾಧವ್- ಅಧ್ಯಕ್ಷರು, ಬಿಎಂಟಿಸಿ.
- ಭಾರತಿ ಶಂಕರ್- ಅಧ್ಯಕ್ಷರು, ಮಹಿಳಾ ಅಭಿವೃದ್ಧಿ ನಿಗಮ.
- ಅಶ್ವಿನಿ ಕೃಷ್ಣಮೂರ್ತಿ- ಅಧ್ಯಕ್ಷರು, ಕಂಠೀರವ ಸ್ಟುಡಿಯೋ.
- ಶಫಿಯುಲ್ಲಾ- ಅಧ್ಯಕ್ಷರು, ಬಿಐಎಪಿಪಿಎ.
- ರೋಷನ್ ಅಲಿ- ಅಧ್ಯಕ್ಷರು, ಕ್ರೀಡಾ ಪ್ರಾಧಿಕಾರ
- (ಪಟ್ಟಿ ಅಪೂರ್ಣ)
ನಿಗಮ ಮಂಡಳಿಗಳ ಖರ್ಚು ವೆಚ್ಚ
[ಬದಲಾಯಿಸಿ]ವಿವರ | ಮೊತ್ತ (ರೂಪಾಯಿಗಳಲ್ಲಿ) |
---|---|
ವೇತನ | 40,000 |
ಆತಿಥ್ಯ ವೆಚ್ಚ | 16,000 |
ಪ್ರವಾಸ ಭತ್ಯ | 2000 ದಿನಕ್ಕೆ |
;ರಾಜ್ಯದಹೊರಗೆ ಪ್ರವಾಸ | 2500 ದಿನಕ್ಕೆ |
ಪೀಠೋಪಕರಣ | 10ಲಕ್ಷ |
ಗೃಹ ಭತ್ಯೆ ಯಾ ಬಾಡಿಗೆ | ಇ ಲಕ್ಷ ತಿಂಗಳಿಗೆ |
ಪೆಟ್ರೋಲ್ 1000 ಲೀಟರ್ | (71,000) ತಿಂಗಳಿಗೆ |
ವಿದ್ಯುತ್ ಮತ್ತು ನೀರು | ಅನಯಮಿತ ರೂ200/-ಮಾತ್ರಾ |
ಸಿಬ್ಬಂದಿ 9ಸಂಬಳ-(ನಿಗದಿತ) | 1 ಆಪ್ತ ಕಾರ್ಯದರ್ಶಿ |
ತಲಾ 14,000 ರೂ | 2 ಆಪ್ತ ಸಹಾಯಕರು |
ತಲಾ 14,000 ರೂ | 2 ಪರಿ ಚಾರಕರು |
ಕರ್ನಾಟಕದ ಅಕ್ಯಾಡಮಿಗಳು
[ಬದಲಾಯಿಸಿ]- ಆರು ಅಕಾಡೆಮಿಗಳು ಮತ್ತು ಎರಡು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಜತೆಗೆ, ಸದಸ್ಯರನ್ನೂ ನೇಮಕ ಮಾಡಲಾಗಿದೆ.ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರ ಸಂಖ್ಯೆಯನ್ನು 10 ರಿಂದ 15ಕ್ಕೆ, ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರ ಸಂಖ್ಯೆಯನ್ನು 10 ರಿಂದ 12ಕ್ಕೆ ಹೆಚ್ಚಿಸಲಾಗಿದೆ. ನೇಮಕವಾದ ದಿನದಿಂದ ಮೂರು ವರ್ಷ ಅಥವಾ ಮುಂದಿನ ಆದೇಶದವರೆಗೆ ಅಧ್ಯಕ್ಷ ಮತ್ತು ಸದಸ್ಯರ ಅವಧಿ ಇರುತ್ತದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ
[ಬದಲಾಯಿಸಿ]- ಸಾಹಿತಿ ಅರವಿಂದ ಮಾಲಗತ್ತಿ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
[ಬದಲಾಯಿಸಿ]- ವಿಮರ್ಶಕ ಕೆ. ಮರುಳಸಿದ್ದಪ್ಪ
ಕರ್ನಾಟಕ ಪುಸ್ತಕ ಪ್ರಾಧಿಕಾರ
[ಬದಲಾಯಿಸಿ]- ವಸುಂಧರಾ ಭೂಪತಿ,
ಸಂಗೀತ ಮತ್ತು ನೃತ್ಯ ಅಕಾಡೆಮಿ
[ಬದಲಾಯಿಸಿ]- ಧಾರವಾಡದ ಪಂಡಿತ್ ಫಯಾಜ್ ಖಾನ್,
ಕರ್ನಾಟಕ ನಾಟಕ ಅಕಾಡೆಮಿ
[ಬದಲಾಯಿಸಿ]- ಬೆಂಗಳೂರಿನ ಜಿ. ಲೋಕೇಶ್,
ಜಾನಪದ ಅಕಾಡೆಮಿ
[ಬದಲಾಯಿಸಿ]ಶಿವಮೊಗ್ಗದ ಬಿ. ಟಾಕಪ್ಪ,
ಶಿಲ್ಪಕಲಾ ಅಕಾಡೆಮಿ
[ಬದಲಾಯಿಸಿ]- ಚಿತ್ರದುರ್ಗದ ಕಾಳಾಚಾರ್,
ತುಳು ಸಾಹಿತ್ಯ ಅಕಾಡೆಮಿ
[ಬದಲಾಯಿಸಿ]- ದಕ್ಷಿಣ ಕನ್ನಡ ಜಿಲ್ಲೆಯ ಎ.ಸಿ.ಭಂಡಾರಿ' [೩]
ನೋಡಿ
[ಬದಲಾಯಿಸಿ]- ಕರ್ನಾಟಕ ಸರ್ಕಾರ
- ಕರ್ನಾಟಕ ರಾಜ್ಯ
- ಕರ್ನಾಟಕದ ಜಿಲ್ಲೆಗಳು
- ಕರ್ನಾಟಕ ರಾಜ್ಯ ಸರಕಾರಿ ಒಡೆತನದ ನಿಗಮ ಮಂಡಳಿಗಳು ಮತ್ತು ನೇಮಕ
- ಕರ್ನಾಟಕದ ಅಕ್ಯಾಡಮಿಗಳು ಮತ್ತು ಪ್ರಾಧಿಕಾರಗಳು
ಉಲ್ಲೇಖಗಳು
[ಬದಲಾಯಿಸಿ]