ಕರ್ಣಾಟಕ ಭಾಷೋಜ್ಜೀವಿನಿ ಸಭಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ಣಾಟಕ ಭಾಷೋಜ್ಜೀವಿನಿ ಸಭಾ: 18ನೆಯ ಶತಮಾನದ ಕೊನೆಯ ಭಾಗದಲ್ಲಿ ಮೈಸೂರಿನಲ್ಲಿ ಕನ್ನಡದ ಅಭಿವೃದ್ಧಿಗೆಂದೇ ಸ್ಥಾಪಿತವಾದ (1887) ಒಂದು ಸಂಘ.

ಚಾಮರಾಜ ಒಡೆಯರ್ ಇದರ ಸ್ಥಾಪಕರು. ಇವರ ರಾಜ್ಯಾಭಿಷೇಕ 1881 ಮಾರ್ಚ್ 1 ರಂದು ಜರುಗಿತು. ಆ ಬಳಿಕ ಇವರು ಹಲವು ಸಾಂಸ್ಕೃತಿಕ, ಸಾರ್ವಜನಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಮಹಾರಾಜ ಕಾಲೇಜಿನ ಪ್ರಗತಿ, ಸ್ತ್ರೀ ವಿದ್ಯಾಭ್ಯಾಸ, ಸಂಸ್ಕೃತ-ಕನ್ನಡಗಳ ಪೋಷಣೆ ಇವರ ಉದ್ದೇಶವಾಗಿತ್ತು. ಸಂಸ್ಕೃತ ಭಾಷೆ-ವಿದ್ಯಾಭ್ಯಾಸಗಳ ಪುನರುಜ್ಜೀವನಕ್ಕೆ ಸರಸ್ವತೀ ಪ್ರಾಸಾದವೆಂಬ ಸಂಸ್ಕೃತ ಮಹಾಪಾಠಶಾಲೆಯನ್ನು ಸ್ಥಾಪಿಸಿದರು. ಯುವಕರ, ವಿದ್ಯಾರ್ಥಿಗಳ ಜ್ಞಾನವಿಕಾಸಕ್ಕೆ ಇಂಗ್ಲಿಷ್ ವಿದ್ಯೆಯೊಂದೇ ಅಗತ್ಯವೆಂಬುದು ಒಡೆಯರ ಅಭಿಪ್ರಾಯವಾಗಿತ್ತು. ಪಾಶ್ಚಾತ್ಯ ವಿದ್ಯೆ ಕನ್ನಡದ ಮೂಲಕ ದೊರೆಯಬೇಕು ಪಾಶ್ಚಾತ್ಯ ಜ್ಞಾನಶಾಖೆಗಳ ಅಧ್ಯಯನ-ಬೋಧನೆ ಕನ್ನಡದಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಇವರು ಕರ್ಣಾಟಕ ಭಾಷೋಜ್ಜೀವಿನಿ ಸಭಾದ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿದರು.

ಈ ಸಭೆ ಕರ್ಣಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತುಗಳಿಗಿಂತ ಹಳೆಯದು. ಇದರ ಚಟುವಟಿಕೆಗಳಲ್ಲಿ ಎಂ. ಶಾಮರಾವ್ ಮುಂತಾದ ಮಹನೀಯರು ಪಾಲ್ಗೊಂಡಿದ್ದರು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: