ಕಮರ್ ಉಲ್ ಇಸ್ಲಾಂ
ಕಮರ್ ಉಲ್ ಇಸ್ಲಾಂ | |
---|---|
ಅಧಿಕಾರ ಅವಧಿ ೨೦೦೮ – ೨೦೧೭ | |
ಪೂರ್ವಾಧಿಕಾರಿ | ಹೊಸ ಕ್ಷೇತ್ರ |
ಉತ್ತರಾಧಿಕಾರಿ | ಕನೀಜ್ ಫಾತಿಮಾ |
ಮತಕ್ಷೇತ್ರ | ಕಲಬುರಗಿ ಉತ್ತರ |
ಅಧಿಕಾರ ಅವಧಿ ೧೯೭೮ – ೧೯೮೩ | |
ಪೂರ್ವಾಧಿಕಾರಿ | ಮೊಹಮ್ಮದ್ ಅಲಿ ಮೆಹ್ತಾಬ್ ಅಲಿ |
ಉತ್ತರಾಧಿಕಾರಿ | ಎಸ್ ಕೆ ಕಾಂತ |
ಮತಕ್ಷೇತ್ರ | ಕಲಬುರಗಿ |
ಅಧಿಕಾರ ಅವಧಿ ೧೯೮೯ – ೧೯೯೬ | |
ಪೂರ್ವಾಧಿಕಾರಿ | ಎಸ್ ಕೆ ಕಾಂತ |
ಉತ್ತರಾಧಿಕಾರಿ | ಕೈಸರ್ ಮಹಮೂದ್ ಮನಿಯಾರ್ |
ಮತಕ್ಷೇತ್ರ | ಕಲಬುರಗಿ |
ಅಧಿಕಾರ ಅವಧಿ ೧೯೯೯ – ೨೦೦೪ | |
ಪೂರ್ವಾಧಿಕಾರಿ | ಕೈಸರ್ ಮಹಮೂದ್ ಮನಿಯಾರ್ |
ಉತ್ತರಾಧಿಕಾರಿ | Constituency abolished |
ಮತಕ್ಷೇತ್ರ | ಕಲಬುರಗಿ |
ಸಂಸದರು, ಲೋಕಸಭೆ
| |
ಅಧಿಕಾರ ಅವಧಿ ೧೯೯೬ – ೧೯೯೮ | |
ಪೂರ್ವಾಧಿಕಾರಿ | ಬಿ.ಜಿ.ಜವಳಿ |
ಉತ್ತರಾಧಿಕಾರಿ | ಬಸವರಾಜ ಪಾಟೀಲ ಸೇಡಂ |
ಮತಕ್ಷೇತ್ರ | ಕಲಬುರಗಿ |
ಕರ್ನಾಟಕದ ವಸತಿ ಮತ್ತು ಕಾರ್ಮಿಕ ಸಚಿವರು
| |
ಅಧಿಕಾರ ಅವಧಿ ೧೯೯೯ – ೨೦೦೪ | |
ಮತಕ್ಷೇತ್ರ | ಕಲಬುರಗಿ |
ವೈಯಕ್ತಿಕ ಮಾಹಿತಿ | |
ಜನನ | ಕಲಬುರಗಿ | ೨೭ ಜನವರಿ ೧೯೪೮
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ಕನೀಜ್ ಫಾತಿಮಾ |
ತಂದೆ/ತಾಯಿ | ನೂರುಲ್ ಇಸ್ಲಾಂ (ತಂದೆ) |
ವಾಸಸ್ಥಾನ | ಕಲಬುರಗಿ |
ಕಮರ್ ಉಲ್ ಇಸ್ಲಾಂ (ಜನನ ೨೭ ಜನವರಿ ೧೯೪೮) ಇವರನ್ನು ಸಾಮಾನ್ಯವಾಗಿ ಕಮರ್ ಸಾಬ್ ಎಂದು ಕರೆಯುತ್ತಿದ್ದರು. ಇವರು ಒಬ್ಬ ಭಾರತೀಯ ರಾಜಕಾರಣಿ. ಇವರು ಕರ್ನಾಟಕ ವಿಧಾನಸಭೆಯಲ್ಲಿ ಆರು ವರ್ಷ ಸದಸ್ಯರಾಗಿದ್ದರು. ಕಲಬುರಗಿಯಿಂದ ಲೋಕಸಭೆಯಲ್ಲಿ ಒಂದು ವರ್ಷದ ಅವಧಿಗೆ ಸಂಸದರಾಗಿದ್ದರು. ಆಲ್ಇಂಡಿಯಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಅದಲ್ಲದೆ ಕೇರಳ ರಾಜ್ಯದ ಉಸ್ತುವಾರಿ ಸಚಿವರಾಗಿದ್ದರು. ಇವರು ವಸತಿ ಮತ್ತು ಕಾರ್ಮಿಕ ಉಸ್ತುವಾರಿ ಸಚಿವರಾಗಿ, ಪೌರಾಡಳಿತ ಸಾರ್ವಜನಿಕ ಉದ್ದಿಮೆಗಳ ಉಸ್ತುವಾರಿ ಸಚಿವರಾಗಿ, ಮತ್ತು ವಕ್ಫ್ ನ ಉಸ್ತುವಾರಿ ಸಚಿವರಾಗಿದ್ದರು. ಮತ್ತು ಕರ್ನಾಟಕ ರಾಜ್ಯದ ಕಲಬುರಗಿ-ಉತ್ತರ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.[೧][೨][೩][೪][೫][೬]
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಕಮರ್ ಉಲ್ ಇಸ್ಲಾಂ ಅವರು ನೂರುಲ್ ಇಸ್ಲಾಂರವರ ಮಗ. ಅವರು ಕಲಬುರಗಿಯಲ್ಲಿ ಜನಿಸಿದರು. ಇವರು ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾಂತ್ರಿಕ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಅವರು ಮೊದಲು ಪಿಡಿಎ ಚುನಾವಣೆಯಲ್ಲಿ ನಿಂತು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾದರು. ಪಿಡಿಎ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಹುದ್ದೆಗೆ ಅಲಂಕರಿಸಿದ ಮೊದಲ ಮತ್ತು ಕೊನೆಯ ಮುಸ್ಲಿಂ ವಿದ್ಯಾರ್ಥಿಯಾಗಿದ್ದರು.[೭][೮][೯]
ರಾಜಕೀಯ ವೃತ್ತಿಜೀವನ
[ಬದಲಾಯಿಸಿ]ಕಮರ್ ಉಲ್ ಇಸ್ಲಾಂ ಕರ್ನಾಟಕ ರಾಜ್ಯದಿಂದ ೬ ಬಾರಿ ಶಾಸಕರಾಗಿದ್ದರು. ಅವರು ೧೯೭೮ ರಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಲ್ಎಲ್) ಅವರ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ೧೯೭೮-೮೩,[೧೦] ೧೯೮೯-೧೯೯೪,[೧೧] ೧೯೯೪-೧೯೯೬,[೧೨] ೧೯೯೯-೨೦೦೪ರ[೧೩] ಅವಧಿಯಲ್ಲಿ ಕರ್ನಾಟಕ ಶಾಸಕಾಂಗ ಸಭೆಗೆ ಆಯ್ಕೆಯಾದರು.[೧೪] ಇವರು ೧೯೯೬-೧೯೯೮ರ ಅವಧಿಯಲ್ಲಿ ಸಂಸತ್ ಸದಸ್ಯರಾಗಿದ್ದರು ಮತ್ತು ಮುಖ್ಯಮಂತ್ರಿ ಎಸ್.ಎಂ ನೇತೃತ್ವದ ಆಡಳಿತದಲ್ಲಿ ವಸತಿ ಮತ್ತು ಕಾರ್ಮಿಕ ಸಚಿವರಾಗಿದ್ದರು. ಮೇ ೨೦೧೩ ರಿಂದ ಜೂನ್ ೨೦೧೬ ರವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ನೇತೃತ್ವದಲ್ಲಿ ಪೌರಾಡಳಿತ, ಸಾರ್ವಜನಿಕ ಉದ್ದಿಮೆಗಳು, ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ವಕ್ಫ್ ಸಚಿವ ಸಂಪುಟದ ಸಚಿವರಾಗಿಯೂ ಸೇವೆ ಸಲ್ಲಿಸಿದರು.[೧೫][೧೬][೧೭][೧೮][೧೯][೨೦]
ವೈಯಕ್ತಿಕ ಜೀವನ
[ಬದಲಾಯಿಸಿ]ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಡಾ ಕಮರ್ ಉಲ್ ಇಸ್ಲಾಂ ಉರ್ದು ಬಗ್ಗೆ ಅಪಾರ ಒಲವು ಹೊಂದಿದ್ದರು ಮತ್ತು ಅವರು ಕೆಲವೊಮ್ಮೆ ಶಾಯರಿಯನ್ನು ಸಹ ಬರೆಯುತ್ತಿದ್ದರು. ಇವರ ಜೀವನದುದ್ದಕ್ಕೂ ವಿವಿಧ ಉರ್ದು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆ ವಹಿಸಿದ್ದಾರೆ.
ಪಡೆದ ಸ್ಥಾನಗಳು
[ಬದಲಾಯಿಸಿ]# | ಇಂದ | ವರೆಗೆ | ಸ್ಥಾನ | ಪಕ್ಷ |
---|---|---|---|---|
೧. | ೧೯೭೮ | ೧೯೮೩ | ಶಾಸಕರು (೧ನೇ ಅವಧಿ) ಗುಲ್ಬರ್ಗಾ
|
ಸ್ವತಂತ್ರ |
೨. | ೧೯೮೯ | ೧೯೯೪ | ಶಾಸಕರು (೨ನೇ ಅವಧಿ) ಗುಲ್ಬರ್ಗಾ
|
ಮುಸ್ಲಿಂ ಲೀಗ್ |
೩. | ೧೯೯೪ | - | ಶಾಸಕರು (೩ನೇ ಅವಧಿ) ಗುಲ್ಬರ್ಗಾ
|
ಕಾಂಗ್ರೆಸ್ |
೪. | ೧೯೯೬ | ೧೯೯೮ | ೧೧ನೇ ಲೋಕಸಭೆಯಲ್ಲಿ ಸಂಸದರು ಗುಲ್ಬರ್ಗಾ | ಜನತಾ ದಳ |
೫. | ೧೯೯೯ | ೨೦೦೪ | ಶಾಸಕರು (೪ನೇ ಅವಧಿ) ಗುಲ್ಬರ್ಗಾ | ಕಾಂಗ್ರೆಸ್ |
೬. | ೨೦೦೮ | ೨೦೧೩ | ಶಾಸಕರು (೫ನೇ ಅವಧಿ) ಗುಲ್ಬರ್ಗಾ ಉತ್ತರ | ಕಾಂಗ್ರೆಸ್ |
೭. | ೨೦೧೩ | ೨೦೧೭ | ಶಾಸಕರು (೬ನೇ ಅವಧಿ) ಗುಲ್ಬರ್ಗಾ ಉತ್ತರ | ಕಾಂಗ್ರೆಸ್ |
ಉಲ್ಲೇಖಗಳು
[ಬದಲಾಯಿಸಿ]- ↑ "Karnataka Congress leader Qamar-ul-Islam passes away". Deccan Herald (in ಇಂಗ್ಲಿಷ್). 18 ಸೆಪ್ಟೆಂಬರ್ 2017. Retrieved 28 ಡಿಸೆಂಬರ್ 2021.
- ↑ reddy, k n (6 ಏಪ್ರಿಲ್ 2018). "Congress to field Qamarul Islam's wife in Kalaburagi North?". Deccan Chronicle (in ಇಂಗ್ಲಿಷ್). Retrieved 28 ಡಿಸೆಂಬರ್ 2021.
- ↑ "Karnataka: Qamarul Islam quelled, Ambareesh won't budge". Deccan Chronicle (in ಇಂಗ್ಲಿಷ್). 1 ಜುಲೈ 2016. Retrieved 28 ಡಿಸೆಂಬರ್ 2021.
- ↑ "Winter Session begins at Belagavi". Star of Mysore (in ಅಮೆರಿಕನ್ ಇಂಗ್ಲಿಷ್). 13 ನವೆಂಬರ್ 2017. Retrieved 28 ಡಿಸೆಂಬರ್ 2021.
- ↑ "Minority girls to get Rs 50K marriage dole". Deccan Herald (in ಇಂಗ್ಲಿಷ್). 17 ಅಕ್ಟೋಬರ್ 2013. Retrieved 28 ಡಿಸೆಂಬರ್ 2021.
- ↑ "Siddaramaiah Cabinet: List of portfolios". Deccan Herald (in ಇಂಗ್ಲಿಷ್). 19 ಮೇ 2013. Retrieved 28 ಡಿಸೆಂಬರ್ 2021.
- ↑ "Wakf land scam: Anwar Manippady demands probe into his report". The Week (in ಇಂಗ್ಲಿಷ್). Retrieved 28 ಡಿಸೆಂಬರ್ 2021.
- ↑ "Rahul visits residences of Dharam Singh, Qamar Ul Islam – Mysuru Today" (in ಅಮೆರಿಕನ್ ಇಂಗ್ಲಿಷ್). Archived from the original on 28 ಡಿಸೆಂಬರ್ 2021. Retrieved 28 ಡಿಸೆಂಬರ್ 2021.
- ↑ Rakesh Prakash (18 ಡಿಸೆಂಬರ್ 2017). "Muslims in Karnataka lack strong leadership with mass appeal | Bengaluru News - Times of India". The Times of India (in ಇಂಗ್ಲಿಷ್). Retrieved 28 ಡಿಸೆಂಬರ್ 2021.
- ↑ "Statistical report on general election, 1978" (PDF). Retrieved 10 ಡಿಸೆಂಬರ್ 2010.
- ↑ "Statistical report on General election,1989" (PDF). Election commission of India. Retrieved 10 ಡಿಸೆಂಬರ್ 2010.
- ↑ "Statistical report on General Election, 1994" (PDF). Retrieved 10 ಡಿಸೆಂಬರ್ 2010.
- ↑ "Statistical report on General election,1999" (PDF). Retrieved 10 ಡಿಸೆಂಬರ್ 2010.
- ↑ "List of elected members of the karnataka legislative assembly". Archived from the original on 19 ಜೂನ್ 2010. Retrieved 10 ಡಿಸೆಂಬರ್ 2010.
- ↑ "Qamar-ul Islam accused of illegally acquiring wakf property". Deccan Herald (in ಇಂಗ್ಲಿಷ್). 8 ಜೂನ್ 2013. Retrieved 28 ಡಿಸೆಂಬರ್ 2021.
- ↑ "Madrasah Faizan-E Mustafa inaugurated, Management Committee Felicitates MLA Kaneez Fatima". DeccanDigest (in ಅಮೆರಿಕನ್ ಇಂಗ್ಲಿಷ್). 9 ಜನವರಿ 2021. Retrieved 28 ಡಿಸೆಂಬರ್ 2021.
- ↑ "Who is Who of Team Siddu". Deccan Herald (in ಇಂಗ್ಲಿಷ್). 19 ಮೇ 2013. Retrieved 28 ಡಿಸೆಂಬರ್ 2021.
- ↑ "Protests erupt over dropping of ministers". Deccan Herald (in ಇಂಗ್ಲಿಷ್). 20 ಜೂನ್ 2016. Retrieved 28 ಡಿಸೆಂಬರ್ 2021.
- ↑ Manu Aiyappa (2 ಜೂನ್ 2019). "BJP makes inroads into Muslim-dominated segments of Karnataka | Bengaluru News - Times of India". The Times of India (in ಇಂಗ್ಲಿಷ್). Retrieved 28 ಡಿಸೆಂಬರ್ 2021.
- ↑ "Businessmen in fray: MLAs prefer Ramamurthy to Farook". Deccan Herald (in ಇಂಗ್ಲಿಷ್). 12 ಜೂನ್ 2016. Retrieved 28 ಡಿಸೆಂಬರ್ 2021.
- Short description is different from Wikidata
- Use Indian English from February 2023
- Articles with invalid date parameter in template
- All Wikipedia articles written in Indian English
- Use dmy dates from December 2019
- ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ
- ರಾಜಕಾರಣಿಗಳು
- CS1 ಇಂಗ್ಲಿಷ್-language sources (en)
- CS1 ಅಮೆರಿಕನ್ ಇಂಗ್ಲಿಷ್-language sources (en-us)