ಕಪಿಲವಾಯಿ ಲಿಂಗಮೂರ್ತಿ

ವಿಕಿಪೀಡಿಯ ಇಂದ
Jump to navigation Jump to search
ಕಪಿಲವಾಯಿ ಲಿಂಗಮೂರ್ತಿ
ಜನನ(೧೯೨೮-೦೩-೩೧)೩೧ ಮಾರ್ಚ್ ೧೯೨೮
ಜಿನ್ಕುಂಟ, ಮಹಬೂಬ್ ನಗರ, ಹೈದರಾಬಾದ್ ರಾಜ್ಯ (ಈಗಿನ ತೆಲಂಗಾಣ), ಭಾರತ
ವೃತ್ತಿಕವಿ, ಬರಹಗಾರರು
ರಾಷ್ಟ್ರೀಯತೆಭಾರತೀಯ
ಬಾಳ ಸಂಗಾತಿಮೀನಾಕ್ಷಮ್ಮ
ಮಕ್ಕಳುಕಪಿಲವಾಯಿ ಕಿಶೋರ್ ಬಾಬು, ಕಪಿಲವಾಯಿ ಅಶೋಕ್ ಬಾಬು

ಕಪಿಲವಾಯಿ ಲಿಂಗಮೂರ್ತಿ (తెలుగు:కపిలవాయి లింగమూర్తి) ಭಾರತದ ಹೆಸರಾಂತ ತೆಲುಗು ಕವಿ ಮತ್ತು ಬರಹಗಾರರು. ಅವರು (೩೧ ಮಾರ್ಚ್ ೧೯೨೮) ತೆಲಂಗಾಣದ ಮಹಬೂಬ್ ನಗರ ಜಿಲ್ಲೆಯಲ್ಲಿ ಜನಿಸಿದರು[೧]. ಅವರ ಪೋಷಕರು ಮಾಣಿಕ್ಯಮ್ಮ ಮತ್ತು ಕಪಿಲವಾಯಿ ವೆಂಕಟಾಚಲಂ. ೩ ವರ್ಷದವನಿದ್ದಾಗ ಅವರ ತಂದೆ ವೆಂಕಟಾಚಲಂ ಮರಣ ಹೊಂದಿದರು. ಅವರು ನಂತರ ತಮ್ಮ ತಾಯಿಯ ಕಡೆಯ ಚಿಕ್ಕಪ್ಪನ ಮನೆಗೆ ತೆರಳಿದರು. ಅವರು ಅಚಂಪೆಟ್ ಬಳಿ ಅಮ್ರಬಾದ್ನಲ್ಲಿ ತನ್ನ ಮಾವ ಛೆಪೂರು ಪೆದ್ದಲಕ್ಶ್ಮಯ್ಯರವರಿಂದ ಪ್ರೇರೇಪಿತರಾದರು. ೧೯೪೪ರಲ್ಲಿ, ಅವರು ಚಿಂತಪತ್ಲ ಮೀನಾಕ್ಶಮ್ಮರವರನ್ನು ವಿವಾಹವಾದರು. ಅವರು ನಾಗರ ಕರ್ನೂಲ್ ಊರಿನ ಕಡೆಯವರಾಗಿದ್ದರು.[೨].

ಓದು ಮತ್ತು ವೃತ್ತಿ[ಬದಲಾಯಿಸಿ]

ಅವರು ಎಂ.ಎ. ಪದವಿಯನ್ನು ಒಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪಡೆದರು. ಅವರು ತೆಲುಗು ಸಾಹಿತ್ಯದಲ್ಲಿ ಎಂ.ಎ ಪದವಿಯನ್ನು ಪಡೆದುಕೊಂಡಿದ್ದಾರೆ.[೩] ಅವರು ವೃತ್ತಿಯಲ್ಲಿ ಶಿಕ್ಷಕ ಮತ್ತು ಪ್ರೊಫೆಸರ್ ಆಗಿದ್ದರು. ಅವರು ೧೧ ಜುಲೈ ೧೯೫೪ ರಂದು ನಾಗರ ಕರ್ನೂಲ್ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇರಿದರು ಮತ್ತು ನಂತರ MOL (ಮಾಸ್ಟರ್ ಓರಿಯಂಟಲ್ ಲರ್ನಿಂಗ್ ) ತರಬೇತಿ ಪಡೆದರು .ಆಗಸ್ಟ್ ೧೯, ೧೯೭೨ ರಂದು ಇತಿಹಾಸ ಉಪನ್ಯಾಸಕನಾಗಿ ಪಲೇಮ್‍ನಲ್ಲಿ, ಶ್ರೀ ವೆಂಕಟೇಶ್ವರ ಓರಿಯಂಟಲ್ ಕಾಲೇಜ್ ಸೇರಿದರು. ನಂತರ ಅವರು ೨೮ ಫೆಬ್ರವರಿ ೧೯೮೩ ರಂದು ನಿವೃತ್ತಿ ಪಡೆದರು.

ಸಾಹಿತ್ಯ[ಬದಲಾಯಿಸಿ]

ಕಪಿಲವಾಯಿ ಒಬ್ಬ ಪ್ರಮುಖ ಸಾಹಿತಿ, ದಣಿವರಿಯದ ಸಂಶೋಧಕ ಮತ್ತು ಪರಿಪೂರ್ಣ ಕವಿ. ಡಾ.ಲಿಂಗಮೂರ್ತಿ ತೆಲುಗು ಕಾವ್ಯ ಮತ್ತು ತೆಲುಗು ಗದ್ಯ ಎರಡರಲ್ಲೂ ಪಾರಂಗತರಾಗಿದ್ದಾರೆ. ಅವರು ತೆಲುಗು ಸಾಹಿತ್ಯಕ್ಕೆ ೧೦೦ ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಕೆಲವು ಪ್ರಮುಖ ಪುಸ್ತಕಗಳು:

 • ಪಾಲಮೂರ್ ಜಿಲ್ಲಾ ದೆವಾಲಯಲಯ
 • ಸಾಲಗ್ರಾಮಸಶಾಸ್ತ್ರಮ್
 • ಆರ್ಯ ಶತಮಾನ
 • ಮಾಂಗಳ್ಯ ವಿಜ್ಞಾನ
 • ಶ್ರೀ ಮತ್ರಪ್ರತಾಪಗಿರಿ ಖಂಡದ
 • ಸೋಮೇಶ್ವರ ಕ್ಷೇತ್ರ ಮಹಾತ್ಯಂ ಮತ್ತು ಚರಿತ್ರ
 • ಸುಂದರಿ ಸಂದೇಶಮು
 • ಪದ್ಯ ಕಧಾ ಪರಿಮಳಮು[೪]

ಉಮಾಮಹೇಶ್ವರ ವಿಭೂತಿ (೭) ಶ್ರೀಶೈಲಂ ಉತ್ತರ ಗೇಟ್ವೇ (ಶ್ರೀಶೈಲಂ ಮಲ್ಲಿಕಾರ್ಜುನ ಸ್ವಾಮಿ ಎಂಬ ೧೨ ಜ್ಯೋತಿರ್ಲಿಂಗಗಳಲ್ಲಿ, ಒಂದು ಹೊಂದಿದೆ ಮತ್ತು ದೇವತೆ ಭ್ರಮರಾಂಬಾ ದೇವಿ ರೂಪದಲ್ಲಿ, ಹದಿನೆಂಟು ಶಕ್ತಿ ಪೀಠಗಳಲ್ಲಿ ಹೊಂದಿದೆ) ಎಂದು ಪರಿಗಣಿಸಲಾಗುತ್ತದೆ. ಉಮಾಮಹೇಶ್ವರ ವಿಭೂತಿ ಇತಿಹಾಸ ಕಪಿಲವಾಯಿ ಬರೆದಿದ್ದಾರೆ. ಉಮಮಹೆಶ್ವರಂ (ಮಹಬೂಬನಗರ/ ರಾಯಚೂರು / ಹೈದರಾಬಾದ್ ನಿಂದ ಶ್ರೀಶೈಲಂ ದಾರಿಯಲ್ಲಿ) ಜಿಲ್ಲೆಯ ನಲ್ಲಮಲ ಪರ್ವತ ಪ್ರದೇಶದಲ್ಲಿದೆ. ಶ್ರೀಶೈಲಂ ಪ್ರಾವಸಕ್ಕೆ ಹೊದಾಗ,ಉಮಮಹೆಸಶ್ವರಂ ಭೆಟಿ ಇಲ್ಲದೆ ಅಪೂರ್ಣಾ ಎಂದು ನಂಬಲಾಗಿದೆ.

ಪ್ರಶಸ್ತಿಗಳು[ಬದಲಾಯಿಸಿ]

ಅವರಿಗೆ ಆಗಸ್ಟ್ ೨೦೧೪ ರಲ್ಲಿ ತೆಲುಗು ವಿಶ್ವವಿದ್ಯಾಲಯ-ಹೈದರಾಬಾದ್ ಗೌರವ ಡಾಕ್ಟರೇಟ್ ನೀಡಿತು.

ಕಪಿಲವಾಯಿ ಸಾಹಿತ್ಯದ ಮೇಲೆ ಆರು ಸಂಶೋಧನಾ ವಿದ್ವಾಂಸರು ಸಂಶೋಧನೆ ಮಾಡಿ ವಿವಿಧ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಪಡೆದರು, (ಒಸ್ಮಾನಿಯಾ ವಿಶ್ವವಿದ್ಯಾಲಯದ, ತೆಲುಗು ವಿಶ್ವವಿದ್ಯಾಲಯ ಹೈದರಾಬಾದ್, ಮಧುರೈ ವಿಶ್ವವಿದ್ಯಾಲಯ ಮತ್ತು ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ-ತಿರುಪತಿ).

ಕಪಿಲವಾಯಿರವರ ಶೀರ್ಷಿಕೆ[ಬದಲಾಯಿಸಿ]

 • "ಕವತಾ ಕಲಾನಿಧಿ" - (೧೯೯೨)
 • "ಪರಿಶೂಧನಾ ಪಂಚಾನನ" - (೧೯೯೨)
 • "ಕವಿ ಕೇಸರಿ" - (೧೯೯೬)
 • "ವೇದಾಂತ ವಿಶಾರದ" - (೨೦೦೫)
 • "ಗುರು ಶಿರೋಮಣಿ" - (೨೦೧೦)
 • "ಸಾಹಿತ್ಯ ಸ್ವರ್ಣಸೌರಭ ಕೇಸರಿ" - (೨೦೧೨)

ಕಪಿಲವಾಯಿರವರ ಪ್ರಶಸ್ತಿಗಳು[ಬದಲಾಯಿಸಿ]

 • ತೆಲುಗು ವಿಶ್ವವಿದ್ಯಾಲಯದ ಪ್ರತಿಭಾ ಪುರಸ್ಕಾರಂ - ಹೈದರಾಬಾದ್.
 • ಬುರುಗುಲ ರಾಮಕೃಷ್ಣ ರಾವ್ ಪ್ರತಿಭಾ ಪುರಸ್ಕಾರಂ.
 • ಚಾರ್ಲ್ಸ್ ಫಿಲಿಪ್ ಬ್ರೌನ್ ಸಾಹಿತ್ಯ ಪುರಸ್ಕಾರಂ.
 • ನೋರಿ ನರಸಿಂಹ ಶಾಸ್ತ್ರಿ ಪುರಸ್ಕಾರಂ.
 • ಕಂದುಕೂರಿ ರುದ್ರಕವಿ ಪ್ರೀತಂ ಪುರಸ್ಕಾರಂ.
 • ಪಾಲ್ಕುರಿ ಸೊಮನಾಧ ಪ್ರೀತಂ ಪುರಸ್ಕಾರಂ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

 • kapilavailingamurthy.com/
 • www.anandbooks.com/Kapilavai-Lingamurthy

ಉಲ್ಲೇಖಗಳು[ಬದಲಾಯಿಸಿ]

 1. "ಲಿಂಗಮೂರ್ತಿ‍ರವರ ವಿಳಾಸ".
 2. "ಜೀವನ ಪರಿಚಯ".
 3. "ವಿದ್ಯಾಭ್ಯಾಸ".
 4. "ಪದ್ಯ ಕಧಾ ಪರಿಮಳಮು ಬಗ್ಗೆ".