ವಿಷಯಕ್ಕೆ ಹೋಗು

ಕನ್ನಡ ಅಂಕಿ-ಸಂಖ್ಯೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡ ಅಂಕಿಗಳು

ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಭಾಷೆಯಾದ ಕನ್ನಡಕ್ಕೆ ಸುಮಾರು ೨೫೦೦ ವರ್ಷಗಳಷ್ಟು ಸುಧೀರ್ಘವಾದ ಇತಿಹಾಸವಿದೆ ಹಾಗೂ ಕನ್ನಡ ಲಿಪಿಗಳಿಗು ಕೂಡ ಸುಮಾರು ೧೮೦೦ ರಿಂದ ೨೦೦೦ ವರ್ಷಗಳಷ್ಟು ಇತಿಹಾಸವಿದೆ.ಅದರಂತೆಯೆ ಕನ್ನಡ ಅಂಕಿಗಳು ಸಹ ತನ್ನದೆ ಆದ ಇತಿಹಾಸವನ್ನು ಹೊಂದಿದೆ.

ಇತಿಹಾಸ

[ಬದಲಾಯಿಸಿ]

ಕನ್ನಡ ಅಂಕಿಗಳು ಸಹಾ ಕನ್ನಡ ಲಿಪಿಗಳಂತೆಯೆ ಬ್ರಾಹ್ಮಿ ಲಿಪಿಗಳಿಂದ ಬೆಳೆದು ಬಂದಿವೆ, ಇವು ಸುಮಾರು ೨೦೦೦ ವರ್ಷಗಳ್ಟು ಇತಿಹಾಸವನ್ನು ಹೊಂದಿದ್ದು, ಇವುಗಳ ಮೂಲ ಅಶೋಕನ ಕಾಲದ ಬ್ರಾಹ್ಮಿ ಲಿಪಿಗಳೆಂದು ಹೇಳಲಾಗುತ್ತದೆ. ಕ್ರಿ.ಶ.೪ ನೇ ಶತಮಾನದಲ್ಲಿ ಕದಂಬರ ಕಾಲದಲ್ಲಿ ಕನ್ನಡ ಅಂಕಿಗಳು ಪ್ರವರ್ಧಮಾನಕ್ಕೆ ಬಂದವು ಹಾಗೂ ಇವುಗಳಲ್ಲಿ ಸಾಕಷ್ಟು ಬದಲಾವಣೆಗಳು ಆದವು ಜೊತೆಗೆ ಅಭಿವೃದ್ಧಿಯನ್ನು ಹೊಂದಿದವು. ಕಾಲಾನಂತರ ಚಾಲುಕ್ಯರು, ಹೋಯ್ಸಳರು ಮತ್ತು ವಿಜಯನಗರ ಅರಸರ ಆಳ್ವಿಕೆಯಲ್ಲಿ ಸಾಕಷ್ಟು ಬದಲಾವಣೆ ಹಾಗು ಅಭಿವೃದ್ಧಿಯನ್ನು ಕಾಣುತ್ತಾ ಬಂದವು ಮತ್ತು ಕ್ರಿ.ಶ.೧೮ ನೇ ಶತಮಾನದಲ್ಲಿ ಮೈಸೂರು ಒಡೆಯರ ಕಾಲದಲ್ಲಿ ಪ್ರಸ್ತುತ ರೂಪವನ್ನು ಪಡೆದಕೊಂಡವು.[]

ಕನ್ನಡ ಅಂಕಿಗಳು ಬೆಳೆದುಬಂದ ದಾರಿ


ಕನ್ನಡ ಅಂಕಿಗಳು ಉಳಿದೆಲ್ಲಾ ದ್ರಾವಿಡ ಭಾಷೆಗಳ ಅಂಕಿಗಳಿಗಿಂತ ಹೆಚ್ಚು ಬಳಕೆಯಲ್ಲಿವೆ. ಭಾರತದಲ್ಲಿ ಹಿಂದಿ ಅಂಕಿಗಳ ನಂತರ ಅತಿ ಹೆಚ್ಚು ಬಳಸುವ ಅಂಕಿಗಳೆಂದರೆ ಅವು ಕನ್ನಡ ಅಂಕಿಗಳಾಗಿವೆ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಇವು ಹೆಚ್ಚು ಬಳಕೆಯಲ್ಲಿವೆ ಸರ್ಕಾರಿ ವಾಹನಗಳಲ್ಲಿ ಕನ್ನಡ ಅಂಕಿಗಳ ಬಳಕೆಯನ್ನು ಕಡ್ಡಾಯ ಮಾಡಲಾಗಿದೆ, ಇದು ಮುಂದಿನ ಪೀಳಿಗೆಯಲ್ಲಿ ಕನ್ನಡ ಅಂಕಿಗಳ ಉಳಿವಿಗೆ ಪ್ರಮುಖ ಅಂಶಗಳಾಗಿವೆ.
ವಿಶೇಷತೆ ಎಂದರೆ ಲಿಪಿಗಳಲ್ಲಿರುವಂತೆ ಅಂಕಿಗಳಲ್ಲಿಯೂ ಸಹಾ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಸಾಮ್ಯತೆಯಿದೆ.[][]

ವಾಹನವೊಂದರ ನೋಂದಣಿಯಲ್ಲಿ ಕನ್ನಡ ಸಂಖ್ಯೆಗಳ ಬಳಕೆ
ಕನ್ನಡ ಅಂಕಿಗಳು ಅಕ್ಷರಗಳಲ್ಲಿ ಆಂಗ್ಲ ಅಂಕಿಗಳು
ಸೊನ್ನೆ 0
ಒಂದು 1
ಎರಡು 2
ಮೂರು 3
ನಾಲ್ಕು 4
ಐದು 5
ಆರು 6
ಏಳು 7
ಎಂಟು 8
ಒಂಭತ್ತು 9
೧೦ ಹತ್ತು 10
೧೦೦ ನೂರು 100
೧೦೦೦ ಒಂದು ಸಾವಿರ 1000
೧೦೦೦೦೦ ಒಂದು ಲಕ್ಷ 100000
೧೦೦೦೦೦೦೦ ಒಂದು ಕೋಟಿ 10000000

ಉಲ್ಲೇಖಗಳು

[ಬದಲಾಯಿಸಿ]