ಕಟ್ಟುಸಿರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
 1. REDIRECT Template:Infobox symptom

ಕಟ್ಟುಸಿರು (ಇದಕ್ಕೆ ಇನ್ನೊಂದು ಪದ dyspnoea ) ಅಥವಾ (ಉಸಿರಾಟದ ತೊಂದರೆ (ಎಸ್‌ಒಬಿ), ಉಸಿರಾಟಕ್ಕೆ ತೊಂದರೆ ಪಡುವುದು )[೧],ಎಂದರೆ ಏದುಸಿರು ಬಿಡುವುದು ದರ ವೈಯಕ್ತಿಕ ರೋಗ ಲಕ್ಷಣ.[೨][೩] ಸಾಮಾನ್ಯವಾಗಿ ಪರಿಶ್ರಮದ ಕೆಲಸ ಮಾಡಿದಾಗ ಇದೊಂದು ಸಾಮಾನ್ಯ ಲಕ್ಷಣ ಆದರೆ ಕೆಲವೊಂದು ಅನಿರೀಕ್ಷಿತ ಸಮಯದಲ್ಲಿ ಉಂಟಾದರೆ ರೋಗ ಲಕ್ಷಣವಾಗುತ್ತದೆ .[೨] ಸುಮಾರು ೮೫%ರಷ್ಟು ಪ್ರಸಂಗಗಳಲ್ಲಿ ಇದು :ಅಸ್ತಮಾ, ಶ್ವಾಸಕೋಶದ ಉರಿಯೂತ, ಹೃದಯ ನಾಳಕ್ಕೆ ರಕ್ತದ ಕೊರತೆ(ಹೃದಯದ ಇಸ್ಚೆಮಿಯ), ಶ್ವಾಸಕೋಶ ಮಾರ್ಗದ ತೊಂದರೆ, ರಕ್ತ ಕಟ್ಟಿ ಹೃದಯ ಸ್ಥಂಭನ , ಬಲವಾಗಿ ಪುಪ್ಪುಸಕ್ಕೆ ತಡೆಯೊಡ್ಡುವ ರೋಗ , ಅಥವಾ ಮಾನಸಿಕ ಕಾರಣಗಳು ಆಗಿರಹುದು.[೪] ಈ ಕೆಳಗಿನ ಕಾರಣಗಳ ಮೇಲೆ ಚಿಕಿತ್ಸೆಯು ಅವಲಂಬಿಸಿದೆ.[೫]

ವ್ಯಾಖ್ಯಾನ[ಬದಲಾಯಿಸಿ]

ಟೆಂಪ್ಲೇಟು:Lung size/activity ’ಕಟ್ಟುಸಿರು’ ಇದಕ್ಕೆ ಸೂಕ್ತ ವಿವರಣೆ ಹೊಂದಿದ ವ್ಯಾಖ್ಯಾನವನ್ನು ಹೊಂದಿಲ್ಲ ಅಥವಾ ಎಲ್ಲರೂ ಒಪ್ಪಿಕೊಳ್ಳಬಹುದಾದಂತಹ ವಿವರಣೆಯನ್ನು ಇದು ಹೊಂದಿಲ್ಲ.[೪] " ಉಸಿರಾಡಲು ತೊಂದರೆಯಾಗುತ್ತಿರುವ ವೈಯಕ್ತಿಕ ಅನುಭವವು ಭಿನ್ನವಾದ ಸಂವೇದನೆ ಒಳಗೊಂಡಿದ್ದು ತೀವ್ರತೆ ಮಾತ್ರ ಬದಲಾಗುತ್ತದೆ ಎಂದು ಅಮೆರಿಕಾದ ಥೊರಾಸಿಕ್ ಸೊಸೈಟಿಯು ವ್ಯಖ್ಯಾನಿಸಿದೆ. ಈ ಅನುಭವವು ವಿವಿಧ ವಿಚಾರದಿಂದ, ಮಾನಸಿಕತೆಯಿಂದ, ಸಾಮಾಜಿಕ ಕಾರಣಗಳಿಂದ ಮತ್ತು ವಾತಾವರಣದ ಅಂಶಗಳಿಂದ, ಮತ್ತು ದ್ವಿತಿಯ ಮಾನಸಿಕ ಮತ್ತು ವರ್ತನೆಗಳ ಪ್ರತಿಕ್ರಿಯೆಯಿಂದ ಉಂಟಾಗಬಹುದು".[೬] ಕಟ್ಟುಸಿರಿಗಿರುವ ಇತರೆ ವ್ಯಾಖ್ಯಾನಗಳು: "ಉಸಿರಾಡಲು ತೊಂದರೆ"[೭], "ಉಸಿರಾಟದ ಲಯ ತಪ್ಪುವಿಕೆ ಅಥವಾ ಅಸಮರ್ಪಕತೆ"[೮], "ಉಸಿರಾಟಕ್ಕೆ ತೊಂದರೆ ಎನಿಸುವುದು"[೩], ಅಥವಾ ಸರಳವಾಗಿ ಹೇಳಬೇಕೆಂದರೆ "ಏದುಸಿರು ಬಿಡುವುದು".[೨]

ತೀವ್ರವಾವಾಗಿ ಎದುಸಿರು ಬಿಡುವುದನ್ನು ಕಷ್ಟಕರವಾಗಿ ಉಸಿರಾಡುವುದು ಒಂದು ನಿಮಿಷದಿಂದ ತಾಸಿನವರೆಗೂ ಹೆಚ್ಚಬಹುದು.[೫] ಬಹುಕಾಲದಿಂದ ಎದುಸಿರು ಬಿಡುವ ತೊಂದರೆ ಇದ್ದರೆ ಅದು ವಾರಕ್ಕಿಂತ ಹೆಚ್ಚುಗೆ ಅಥವಾ ತಿಂಗಳುವರೆಗೆ ಇರಬಹುದು.[೯]

ಸಾಂದರ್ಭಿಕ ರೋಗ ಲಕ್ಷಣ[ಬದಲಾಯಿಸಿ]

ಸಾಮಾನ್ಯವಾಗಿ ಉಸಿರಾಟದ ತೊಂದರೆಗೆ ರಕ್ತನಾಳಗಳ ಮೂಲಕ ಹೃದಯಕ್ಕೆ ರಕ್ತ ಸಂಚಾರವಾಗುವಲ್ಲಿ ,ಅಥವಾ ಉಸಿರಾಟದ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗುವುದು, ಮಾಂಸಖಂಡ ಎಲುಬುಗೂಡಿನಲ್ಲಿ ತೊಂದರೆ ,ಹಾರ್ಮೋನು, ರಕ್ತದಲ್ಲಿ ತೊಂದರೆ ಅಥವಾ ಮಾನಸಿಕ ಕಾರಣಗಳು ಕಾರಣವಿರಬಹುದು.[೪] ಡಯಾಗ್ನಿಸೀಸ್‌ಪ್ರೊ,ಆನ್‌ಲೈನ್ ವೈಧ್ಯಕೀಯ ತಜ್ಞ ವ್ಯವಸ್ಥೆಯು, ಅಕ್ಟೋಬರ್ ೨೦೧೦ರಲ್ಲಿ ಭಿನ್ನವಾದ ೪೯೭ ಕಾರಣಗಳನ್ನು ಪಟ್ಟಿಮಾಡಿದೆ..[೧೦] ಹೆಚ್ಚು ಸಾಮಾನ್ಯವಾದ ಹೃದಯನಾಳಕ್ಕೆ ಸಂಬಂಧಿಸಿದ ಕಾರಣಗಳು ತೀವ್ರವಾಗಿ ಹೃದಯದ ಮಧ್ಯ ಗೋಡೆಯ ಸ್ನಾಯುವಿನ ಪದರದ ಸಾವು ಮತ್ತು ರಕ್ತ ಕಟ್ಟಿ ಹೃದಯ ಸ್ಥಂಭನ ಸಾಮಾನ್ಯವಾದ ಉಸಿರಾಟದ ಕಾರಾಣಗಳು: ಬಲವಾಗಿ ಪುಪ್ಪುಸಕ್ಕೆ ತಡೆಯೊಡ್ಡುವ ರೋಗ, ಅಸ್ತಮ, ಎದೆಯೊಳಗೆ ಅಸಜವಾಗಿ ಗಾಳಿತುಂಬಿಕೊಳ್ಳುವಿಕೆ, ಮತ್ತು ಶ್ವಾಸಕೋಶದ ಉರಿಯೂತ.[೨]

ತೀವ್ರವಾದ ಪರಿಧಮನಿಯ ಕಾಯಿಲೆ[ಬದಲಾಯಿಸಿ]

ತೀವೃತರವಾದ ಪರಿಧಮನಿಯ ತೊಂದರೆಯಲ್ಲಿ ಎದೆಯ ಭಾಗದಲ್ಲಿ ತೀವೃ ಹಿಡಿತ ಉಂಟಾಗುತ್ತದೆ ಮತ್ತು ಉಸಿರು ತೆಗೆದುಕೊಳ್ಳಲು ಕಷ್ಟವಾಗುತ್ತದೆ.[೨] ಅದೇನೆ ಇದ್ದರೂ ಇದು ಉಸಿರಾಟದ ತೊಂದರೆಯಾಗಿಯೇ ಕಾಣಿಸಿಕೊಳ್ಳುತ್ತದೆ.[೧೧] ಅಪಾಯಕರ ಅಂಶಗಳು: ಮುದಿತನ, ಸಿಗರೇಟು ಸೇವನೆ, ರಕ್ತದಒತ್ತಡ, ಅಧಿಕಕೊಬ್ಬು , ಮತ್ತು ಮಧುಮೇಹ.[೧೧] ಎಲೆಕ್ಟ್ರೋಕಾರ್ಡಿಯೋಗ್ರಾಮ್ ಮತ್ತು ಕಾರ್ಡಿಯಾಕ್ ಎಂಜಿಮ್ಸ್‌ಗಳು ರೋಗ ನಿರ್ಣಯಿಸಲು ಮತ್ತು ನೇರವಾದ ಚಿಕಿತ್ಸೆ ನಡೆಸಲು ಪ್ರಮುಖವಾಗಿವೆ.[೧೧] ಚಿಕಿತ್ಸೆಯಲ್ಲಿ ಹೃದಯಕ್ಕೆ ಬೇಕಾದ ಆಮ್ಲಜನಕದ ಅಳತೆಮಾಡಿ ಕಡಿಮೆಗೊಳಿಸುವುದು ಮತ್ತು ರಕ್ತದ ಪೂರೈಕೆಯನ್ನು ಹೆಚ್ಚಿಸಲು ಪ್ರಯತ್ನ ಮಾಡಲಾಗುತ್ತದೆ.[೨]

ರಕ್ತ ಕಟ್ಟಿ ಹೃದಯ ಸ್ಥಂಭನ[ಬದಲಾಯಿಸಿ]

ರಕ್ತ ಕಟ್ಟಿ ಹೃದಯ ಸ್ಥಂಭನ ಪದೇ ಪದೇ ಎಸ್‌ಒಬಿಯೊಂದಿಗೆ ಪರಿಶ್ರಮದ ಕೆಲಸ ನಡೆಸಿದಾಗ, ಉಸಿರಾಟದ ತೊಂದರೆ, ಮತ್ತು ರಾತ್ರಿಯ ವೇಳೆ ಕಟ್ಟುಸಿನ ಉಲ್ಬಣ ದಿಂದ ಕಾಣಿಸಿಕೊಳ್ಳುತ್ತದೆ.[೨] ಇದು ೧-೨% ರಷ್ಟು ಪ್ರಭಾವವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಮಾನ್ಯ ಮತ್ತು ೧೦%ರಷ್ಟು ೬೫ ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸಾಮಾನ್ಯ.[೨][೧೧] ತೀವ್ರವಾದ ಉಸಿರಾಟ ಹೆಚ್ಚುಕಡಿಮೆಯಾಗಲು ಅಪಾಯಕಾರಿ ಅಂಶಗಳು: ಡಯೇಟ್ ಮಾಡಲು ಹೆಚ್ಚು ಉಪ್ಪಿನ ಅಂಶ ಹೊಂದಿರುವ ಆಹಾರ ತೆಗೆದುಕೊಳ್ಳುವುದು, ಔಷಧ ತೆಗೆದುಕೊಳ್ಳದಿರುವುದು, ಹೃದಯ ನಾಳಕ್ಕೆ ರಕ್ತದ ಕೊರತೆ(ಕಾರ್ಡಿಯಾಕ್ ಇಸ್ಚೆಮಿಯ), ಹೃದಯದ ಲಯ ತಪ್ಪುವುದು, ಮೂತ್ರಪಿಂಡಗಳ ವೈಫಲ್ಯ, ಪುಪ್ಪುಸ ರೋಧಕವಸ್ತು, ರಕ್ತದೊತ್ತಡ, ಮತ್ತು ಸೋಂಕುಗಳು.[೧೧] ಶ್ವಾಸಕೋಶಕ್ಕೆ ರಕ್ತಸಂಚಯ ಕಡಿಮೆಗೊಳಿಸಿ ಚಿಕಿತ್ಸೆ ನಡೆಸಲಾಸುತ್ತದೆ.[೨]

ತೀವ್ರ ತಡೆಯೊಡ್ಡುವ ಪುಪ್ಪುಸ ಕಾಯಿಲೆ[ಬದಲಾಯಿಸಿ]

ತೀವ್ರ ತಡೆಯೊಡ್ಡುವ ಪುಪ್ಪುಸ ಕಾಯಿಲೆ ಇರುವ ಜನರು (COPD), ಸಾಮಾನ್ಯವಾಗಿ ಎಂಪಿಸೆಮಾ ಅಥವಾ ತೀವ್ರವಾದ ಶ್ವಾಸನಾಳ ಕಾಯಿಲೆ, ಪದೆಪದೆ ತೀವ್ರತರವಾದ ಉಸಿರಾಟದ ತೊಂದರೆ ಮತ್ತು ತೀವ್ರ ಕಫ ಉತ್ಪಾದನೆಯಾಗುವ ಲಕ್ಷಣವನ್ನು ಹೊಂದಿರುತ್ತಾರೆ.[೨] ತೀವ್ರವಾಗಿ ಉಲ್ಬಣವಾದಾಗ ಏದುಸಿರು ಮತ್ತು ಉಗುಳಿನ ಉತ್ಪಾದನೆ ಹೆಚ್ಚಾಗುತ್ತದೆ.[೨] ಸಿಒಪಿಡಿಯು ಎದೆಯೊಳಗೆ ಅಸಜವಾಗಿ ಗಾಳಿತುಂಬಿಕೊಳ್ಳುವಿಕೆಗೆ ಹಾಗೆಯೇ ಈ ಸ್ಥಿತಿಯನ್ನು ಹೊರಗಿಡಲು ಅಪಾಯಕಾರಿ ಅಂಶವಾಗಿದೆ.[೨] ತೀವ್ರವಾಗಿ ರೋಗ ಉಲ್ಬಣವಾದಾಗ ಆ‍ಯ್‌೦ಟಿಕೊಲಿನೆರ್ಜಿಕ್, ಬೀಟಾ-ಅಡ್ರೀನೊಸೆಪ್ಟರ್ ಎಗೊನಿಸ್ಟ್ಸ್, ಸ್ಟೀರಾಯ್ಡ್ಸ್ ಮತ್ತು ಸಂಭಾವ್ಯ ಕೃತಕ ಶ್ವಾಸಸಾಧನದ ಮೂಲಕ ಗಾಳಿಯ ಒತ್ತಡ ಉಂಟುಮಾಡುವುದು ಇವುಗಳ ಸಂಯೋಜನೆಯಿಂದ ಚಿಕಿತ್ಸೆಯನ್ನು ನಡೆಸಲಾಗುತ್ತದೆ .[೨]

ಅಸ್ತಮಾ[ಬದಲಾಯಿಸಿ]

ಅಸ್ತಮ ಉಸಿರಾಟದ ತೊಂದರೆಗೆ ಅಪಾಯಕರ ಸ್ಥಿತಿ ಉಂಟುಮಾಡಲು ಒಂದು ಸಾಮಾನ್ಯ ಕಾರಣವಾಗಿದೆ.[೨] ಇದು ಸಾಮಾನ್ಯವಾದ ಶ್ವಾಸಕೋಶ ಖಾಯಿಲೆಯಾಗಿದ್ದು ಅಭಿವೃದ್ಧಿಶೀಲ ಹಾಗೂ ಆಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸುಮಾರು ೫% ಜನಸಂಖ್ಯೆಯ ಮೇಲೆ ಪರಿಣಾಮ ಬೀರಿದೆ.[೨] ಅಸ್ತಮಾದ ಇತರೆ ರೋಗಲಕ್ಷಣಗಳು: ಏದುಸಿರು ಬಿಡುವುದು, ಎದೆಯಲ್ಲಿ ಬಿಗಿತ, ಮತ್ತು ಒಣಕೆಮ್ಮು.[೨] ಬೀಟಾ೨-ಅಡ್ರೀನೊಸೆಪ್ಟರ್ ಎಗೊನಿಸ್ಟ್ಸ್ (ಸಬ್ಯುಟಮೋಲ್) ಒಳತೆಗೆದುಕೊಂಡು ಪ್ರಾಥಮಿಕ ಚಿಕಿತ್ಸೆ ತೆಗೆದುಕೋಳ್ಳಲಾಗುತ್ತದೆ ಮತ್ತು ಇದರಿಂದ ವಿಳಂಬವಿಲ್ಲದೆ ಸುಧಾರಣೆ ಕಂಡುಬರುತ್ತದೆ.[೨]

ಎದೆಯೊಳಗೆ ಅಸಜವಾಗಿ ಗಾಳಿತುಂಬಿಕೊಳ್ಳುವಿಕೆ[ಬದಲಾಯಿಸಿ]

ಎದೆಯೊಳಗೆ ಅಸಜವಾಗಿ ಗಾಳಿತುಂಬಿಕೊಳ್ಳುವಿಕೆಯು ತೀವ್ರವಾಗಿ ಎದೆಯ ಪಾರ್ಶ್ವದ ನೋವಿನ ಪ್ರಾರಂಭದಿಂದ ಮತ್ತು ಉಸಿರಾಟದ ತೊಂದರೆಯಿಂದ ಕಾಣಿಸಿಕೊಳ್ಳುತ್ತದೆ ಆಮ್ಲಜನಕದಿಂದ ಸುಧಾರಣೆ ಕಂಡುಬರುವುದಿಲ್ಲ.[೨] ದೈಹಿಕವಾಗಿ ಕಾಣಿಸಿಕೊಳ್ಳಬಹುದಾದ ಲಕ್ಷಣಗಳು:ಎದಯ ಒಂದು ಭಾಗದಲ್ಲಿ ಉಸಿರಾಟದ ಶಬ್ದ ಕೇಳದಿರುವುದು, ಗಂಟಲಿನ ಸಿರಾಯುಕ್ತದ ವರೆಗೆ ಹರಡುವುದು, ಮತ್ತು ಶ್ವಾಸನಾಳದ ಮಾರ್ಗ ಬದಲಾವಣೆ.[೨]

ಶ್ವಾಸಕೋಶದ ಉರಿಯೂತ[ಬದಲಾಯಿಸಿ]

ಶ್ವಾಸಕೋಶದ ಉರಿಯೂತ ದ ಲಕ್ಷಣಗಳು ಜ್ವರ, ಕೆಮ್ಮು ಪ್ರಾರಂಭವಾಗುವುದು,ಉಸಿರಾಟದ ತೊಂದರೆ, ಮತ್ತು ಎದೆಯ ಪಾರ್ಶ್ವದ ನೋವು.[೨] ಉಚ್ವಾಸದಲ್ಲಿ ತಡೆ ಇರುವುದನ್ನು ಪರೀಕ್ಷೆಯ ಮೂಲಕ ದೃಡಪಡಿಸಿಕೊಳ್ಳಬಹುದು.[೨] ರಕ್ತ ಕಟ್ಟಿ ಹೃದಯ ಸ್ಥಂಭನದಿಂದ ಉಂಟಾದ ಶ್ವಾಸಕೋಶದ ಉರಿಯೂತದ ಭೇದ ತೋರಿಸಲು ಎದೆಯ ಕ್ಷ-ಕಿರಣ ತುಂಬಾ ಸಹಾಯಕ.[೨] ಇದಕ್ಕೆ ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಸೋಂಕು ಕಾರಣವಾಗಿದ್ದು ಪ್ರತಿಜೀವಕಗಳನ್ನು ಚಿಕಿತ್ಸೆಗಾಗಿ ಬಳಸಲಾಗುತ್ತದೆ.[೨]

ಶ್ವಾಸಕೋಶದ ಧಮನಿಬಂಧ(ಪಲ್ಮನರಿ ಎಂಬಾಲಿಸಮ್‌)[ಬದಲಾಯಿಸಿ]

ಶ್ವಾಸಕೋಶದ ಧಮನಿಬಂಧವು ಉಸಿರಾಟದ ತೊಂದರೆ ಮೇಲೆ ತೀವ್ರವಾಗಿ ಆಕ್ರಮಣ ನಡೆಸುವುದಾಗಿದೆ.[೨] ಕಾಣಿಸಿಕೊಳ್ಳುವ ಇತರೆ ಲಕ್ಷಣಗಳು: ಎದೆಯ ಪಾರ್ಶ್ವದ ನೋವು,ಕೆಮ್ಮು, ಕೆಮ್ಮಿದಾಗ ರಕ್ತ ಕಾಣಿಸಿಕೊಳ್ಳುವುದು, ಮತ್ತು ಜ್ವರ.[೨] ಅಪಾಯಕರ ಅಂಶಗಳು: ನರಗಳಲ್ಲಿ ತೀವ್ರವಾಗಿ ರಕ್ತ-ಹೆಪ್ಪುಗಟ್ಟುವುದು, ಇತ್ತಿಚೇಗೆ ನಡೆದ ಶಸ್ತ್ರಚಿಕಿತ್ಸೆ, ಅರ್ಬುದ, ಮತ್ತು ಹಿಂದೊಮ್ಮೆ ನರಗಳಲ್ಲಿ ತೀವ್ರವಾಗಿ ರಕ್ತ-ಹೆಪ್ಪುಗಟ್ಟುವುದು.[೨] ಇದನ್ನು ಸಾಮಾನ್ಯವಾಗಿ ತೀವ್ರ ಉಸಿರಾಟದ ತೊಂದರೆ ಇರುವ ತೊಂದರೆಯಾಗಿ ಪರಿಗಣಿಸಲಾಗುತ್ತದೆ. ಇದರಿಂದ ಸಾವು ಕೂಡ ಉಂಟಾಗುವ ಸಾಧ್ಯತೆ ಇದೆ.[೨] ರೋಗನಿರ್ಣಯಿಸಲು ಕಷ್ಟವಾಗಬಹುದು.[೨] ಹೆಪ್ಪುರೋಧಕಗಳನ್ನು ನೀಡಿ ಚಿಕಿತ್ಸೆ ನೀಡಲಾಗುತ್ತದೆ.[೨]

ಇತರೆ[ಬದಲಾಯಿಸಿ]

ಪ್ರಮುಖವಾದ ಇತರೆಗಳು ಅಥವಾ ಉಸಿರಾಟದ ತೊಂದರೆಯ ಸಾಮಾನ್ಯ ಕಾರಣಗಳು : ಹೃದಯದ ರಕ್ತ ನಾಳಕ್ಕೆ ಹರಿಯುವ ರಕ್ತ ಸಂಚಾರದಲ್ಲಿ ತಡೆಯುಂಟಾಗುವುದು , ರಕ್ತಹೀನತೆ, ಎನಪೊಲ್ಯಾಕ್ಸಿಸ್ , ಶ್ವಾಸಕೋಶ ಮಾರ್ಗದ ತೊಂದರೆ ಮತ್ತು ಆತಂಕ ಉಂಟಾಗುವಿಕೆ.[೧೨][೫][೪] ಹೃದಯದ ರಕ್ತ ನಾಳಕ್ಕೆ ಹರಿಯುವ ರಕ್ತ ಸಂಚಾರದಲ್ಲಿ ತಡೆಯುಂಟಾಗುವುದುದರಿಂದ ಕಟ್ಟುಸಿರಿನೊಂದಿಗೆ ಕಾಣಿಸಿಕೊಳ್ಳುತ್ತೆ, ಹೃದಯಸ್ಪಂದನಾಧಿಕ್ಯ, ಗಂಟಲಿನ ಸಿರಾಯುಕ್ತದ ಒತ್ತಡ ಹೆಚ್ಚಾಗುವುದು, ಮತ್ತು ಪಲ್ಸಸ್ ಪ್ಯಾರಡೊಕ್ಸಸ್.[೧೨] ರೋಗನಿರ್ಣಯಕ್ಕೆ ಅತ್ಯುತ್ತಮ ವಿಧಾನ ಶ್ರವಣಾತೀತ ಧ್ವನಿ[೧೨] ರಕ್ತಹೀನತೆಯು ನಿಧಾನವಾಗಿ ಹೆಚ್ಚಾಗುತ್ತದೆ, ಸಾಮಾನ್ಯವಾಗಿ ತೀವ್ರವಾದ ಕಟ್ಟುಸಿರು,ಬಳಲಿಕೆ, ದೌರ್ಬಲ್ಯ, ಮತ್ತು ಹೃದಯಸ್ಪಂದನಾಧಿಕ್ಯದೊಂದಿಗೆ ಪ್ರಕಟವಾಗುತ್ತದೆ.[೧೨] ಇದು ಹೃದಯಸ್ತಂಭನ ಉಂಟುಮಾಡಬಹುದು.[೧೨] ಆ‍ಯ್‌ನ‌ಪಲಾಕ್ಸಿಸ್ ವ್ಯಕ್ತಿಯಲ್ಲಿ ಮೊದಲಿಗೆ ಕಂಡುಬಂದ ತೊಂದರೆಯ ರೀತಿಯಲ್ಲಿಯೇ ನಿಮಿಷಕ್ಕಿಂತ ಹೆಚ್ಚಿಗೆ ಕಾಣಿಸಿಕೊಳ್ಳಲು ಪ್ರಾರಂಭವಾಗಬಹುದು.[೫] ಇತರೆ ಲಕ್ಷಣಗಳು: ಚುಚ್ಚುವುದು, ಗಂಟಲ ಬಾವು, ಮತ್ತು ಜೀರ್ಣಕ್ರಿಯೆಯಲ್ಲಿ ತೊಂದರೆ.[೫] ಇದಕ್ಕೆ ಪ್ರಾಥಮಿಕ ಚಿಕಿತ್ಸೆ ಎಫಿನೆಫ್ರಿನ್.[೫] ಶ್ವಾಸಕೋಶ ಮಾರ್ಗದ ತೊಂದರೆಯಲ್ಲಿ ವಾತಾವರಣಕ್ಕೆ ತೆರೆದುಕೊಳ್ಳುವಂತೆ ಮಾಡಿ ಉಸಿರಾಟದ ತೊಂದರೆ ಮೇಲೆ ಕ್ರಮೇಣವಾಗಿ ಧಾಳಿ ಆರಂಭವಾಗಿತ್ತದೆ. ಹೆಚ್ಚಾಗಿ ಅನುಪಯುಕ್ತವಸ್ತುಗಳನ್ನು ಎಸೆಯುವ ಸ್ಥಳದಲ್ಲಿ ಇದು ಕಾಣಿಸಿಕೊಳ್ಳಬಹುದಾಗಿದೆ.[೪] ಉಸಿರಾಟದ ತೊಂದರೆಯು ಟಾಕಿಯಾರಿದ್ಮಿಯಾಸ್ನೊಂದಿಗೆ ಮಾತ್ರ ಇದರ ಲಕ್ಷಣ ಕಂಡುಬರುತ್ತದೆ.[೧೧] ಆತಂಕ ಉಂಟಾಗುವಿಕೆಯು ಆಳವಾಗಿ ಉಸಿರುತೆಗೆದುಕೊಳ್ಳುವಿಕೆ, ಬೆವರು, ಮತ್ತು ಜೋಮು ಹಿಡಿದಂತಿರುವಿಕೆಯಿಂದ ಕಾಣಿಸಿಕೊಳುತ್ತದೆ.[೫] ಇವುಗಳನ್ನು ಹೊರತುಪಡಿಸಿ ರೋಗನಿರ್ಣಯ ಮಾಡುವುದು.[೪] ಅವರು ಹೆಚ್ಚಾಗಿ ನಿಶ್ವಾಸ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ. ಸುಮಾರು ೨/೩ ರಷ್ಟು ಮಹಿಳೆಯರು ಗರ್ಭಧಾರಣೆ ಸಮಯದಲ್ಲಿ ಉಸಿರಾಟದ ತೊಂದರೆ ಅನುಭವಿಸುತ್ತಾರೆ .[೮]

ರೋಗ ಶರೀರಶಾಸ್ತ್ರ[ಬದಲಾಯಿಸಿ]

ಕೆಮೊರಿಸೆಪ್ಟರ್s, ಮೆಕಾನೊರಿಸೆಪ್ಟರ್, ಮತ್ತು ಲಂಗ್ ರಿಸೆಪ್ಟರ್‌ಗಳ ಮೂಲಕ ಹಲವಾರು ಸಂಖ್ಯೆಯ ವಿಭಿನ್ನ ಶರೀರಶಾಸ್ತ್ರ ಹಾದಿಗಳು ಉಸಿರಾಟದ ತೊಂದರೆ ಉಂಟುಮಾಡಬಹುದು .[೧೧]ಹಲವಾರು ಸಂಖ್ಯೆಗಳ ಬೇರೆಬೇರೆ ಶರೀರ ಕ್ರಿಯೆಯ ಕಾರಣಗಳು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಉದಾಹರಣೆಗೆ ಕಿಮೊರಿಸೆಪ್ಟರ್ಸ್, ಮೆಕಾನೊರಿಸೆಪ್ಟರ್ ಮತ್ತು ಶ್ವಾಸಕೋಶದ ಕೋಶಗಳು.[೧೧]

ಒಳಹೋಗುವ ಸಂಕೇತಗಳು, ಬಹಿರ್ವಾಹಿ ಸಂಕೇತಗಳು, ಮತ್ತು ಕೇಂದ್ರೀಯ ಮಾಹಿತಿ ಕ್ರಿಯೆ, ಈ ಮೂರು ಮುಖ್ಯ ಅಂಶಗಳು ಕಟ್ಟುಸಿರಿಗೆ ಕಾರಣವಾಗಿವೆ ಎಂದು ತಿಳಿಯಲಾಗಿದೆ. ಮೆದುಳಿನಲ್ಲಿನ ಕೇಂದ್ರೀಯ ಕ್ರಿಯೆಯು ಒಳಹೋಗುವ ಮತ್ತು ಹೊರಹೋಗುವ ಸಂಕೇತಗಳನ್ನು ಹೋಲಿಸುತ್ತದೆ, ಮತ್ತು ಇದರಲ್ಲಿನ "ಸಾಮರಸ್ಯವಿಲ್ಲದ ಸಂಬಂಧ" ಪರಿಣಾಮವಾಗಿ ಕಟ್ಟುಸಿರಿನ ಸಂವೇದನೆ ಉಂಟಾಗುತ್ತದೆ ಎಂದು ನಂಬುತ್ತದೆ. ಇನ್ನೊಂದು ಪ್ರಕಾರದಲ್ಲಿ, ವಾತಾಯನದ ವ್ಯವಸ್ಥೆಯ (ಒಳಹೋಗುವ ಸಂಕೇತ) ಅವಶ್ಯಕತೆ ಇದ್ದಾಗ ದೈಹಿಕವಾಗಿ ಉಸಿರಾಟ (ಬಹಿರ್ವಾಹಿ ಸಂಕೇತ) ದೊರೆಯದ ಪರಿಣಾಮವಾಗಿ ಕಟ್ಟುಸಿರು ಉಂಟಾಗಬಹುದು.[೧೩] ಅಂತರ್ವಾಹಿ ಸಂಕೇತಗಳು ಮೆದುಳಿಗೆ ಹೋಗುವ ನರಕೋಶ ಸಂವೇದನೆಗಳು. ಅಂತರ್ವಾಹಿ ನರಕೋಶಗಳು ದೊಡ್ಡ ಸಂಖ್ಯೆಯಲ್ಲಿನ ಮೂಲಗಳಾದ ಶೀರ್ಷ ಧಮನಿಗಳು, ಕೆಲವು ನರತಂತುಗಳ ಮಯಲಿನ್ ಪದರು, ಶ್ವಾಸಕೋಶಗಳು, ಮತ್ತು ಹೃದಯ ಕವಾಟದಿಂದ ಕಟ್ಟುಸಿರು ಹೆಚ್ಚಾಗಿ ಉಂಟಾಗಲು ಪ್ರಮುಖ ಕಾರಣವಾಗಿದೆ. ಶೀರ್ಷ ಧಮನಿಗಳಲ್ಲಿನ ಕೆಮೊರಿಸೆಪ್ಟರ್‌ಗಳು ಮತ್ತು ಕೆಲವು ನರತಂತುಗಳ ಮಯಲಿನ್ ಪದರು ರಕ್ತದಲ್ಲಿನ O, CO ಮತ್ತು H+ ಗಾಳಿಯ ಮಟ್ಟಕ್ಕೆ ಸಂಬಂಧ ಪಟ್ಟಂತೆ ಮಾಹಿತಿಯನ್ನು ಒದಗಿಸುತ್ತವೆ. ಶ್ವಾಸಕೋಶ, ಜಕ್ಸ್ಟಾಕ್ಯಾಪಿಲರಿ(J) ರಿಸೆಪ್ಟರ್‌‍ಗಳು ಶ್ವಾಸಕೋಶ ಸಂಬಂಧಿ ಕಾರ್ಯಕ್ಕೆ ಸಂವೇದಿಯಾಗಿರುತ್ತದೆ. ಅಲ್ಲದೆ ರಿಸೆಪ್ಟರ್‌ಗಳು ಶ್ವಾಸಕೋಶದಲ್ಲಿಯ ಕೋಶಗಳು ಬೆಳೆಯಲು ಸಂವೇಧನೆಯನ್ನು ಕಳ್ಸುಹಿಸುತ್ತವೆ. ಎದೆ ಕವಾಟದಲ್ಲಿನ ಸ್ನಾಯು ಸ್ಪಿಂಡಲ್‌ಗಳ ಸಂಕೇತಗಳು ಉಸಿರಾಟದ ಸ್ನಾಯುಗಳನ್ನು ಎಳೆಯುತ್ತವೆ ಮತ್ತು ಉದ್ವೇಗ ಉಂಟುಮಾಡುತ್ತವೆ. ಹಾಗೆಯೇ,ಕಡಿಮೆ ಪ್ರಮಾಣದ ಉಸಿರಾಟವು ಹೈಪರ್‌ಕ್ಯಾಪ್ನಿಯಾಕ್ಕೆ ಕಾರಣವಾಗಬಹುದು, ಹೃದಯದ ಎಡಭಾಗದ ಸ್ಥಂಭನವು ಆಂತರಿಕ ಎಡೆಮಾಕ್ಕೆ ಕಾರಣವಾಗಬಹುದು. ಅಸ್ತಮ ಶ್ವಾಸಕೋಶದಲ್ಲಿ ಉಸಿರಾಟಕ್ಕೆ ತಡೆಯೊಡ್ಡುತ್ತದೆ ಮತ್ತು ಸ್ನಾಯುಗಳ ಸುಸ್ತು ಪರಿಣಾಮಕಾರಿಯಲ್ಲದ ಉಸಿರಾಟಕ್ಕೆ ಕಾರಣವಾಗಬಹುದು. ಈ ಮೂಲಕ ಕಟ್ಟುಸಿರಿನ ಅನುಭವ ಆಗುವ ಸಾಧ್ಯತೆ ಇದೆ.[೧೩]

ಬಹಿರ್ವಾಹಿ ಸಂಕೇತಗಳು ಮೋಟರ್ ನರಕೋಶ ಸಂಕೇತಗಳನ್ನು ಉಸಿರಾಟದ ಸ್ನಾಯುಗಳಕಡೆಗೆ ಒಯ್ಯುತ್ತವೆ . ಮುಖ್ಯವಾದ ಉಸಿರಾಟದ ಸ್ನಾಯು ಎಂದರೆ ವಪೆ. ಉಸಿರಾಟದ ಇತರೆ ಸ್ನಾಯುಗಳು ಆಂತರಿಕ ಮತ್ತು ಬಾಹ್ಯ ಇಂಟರ್‌ಕೊಸ್ಟಲ್ ಸ್ನಾಯುಗಳನ್ನು, ಕಿಬ್ಬೊಟ್ಟೆಯ ಸ್ನಾಯುಗಳನ್ನು ಮತ್ತು ಉಸಿರಾಟದಕ್ಕೆ ಪೂರಕ ಸ್ನಾಯುಗಳನ್ನು ಒಳಗೊಂಡಿರುತ್ತವೆ.

ಗಾಳಿಯ ವ್ಯವಸ್ಥೆಗೆ ಸಂಬಂಧಿಸಿದಂತೆ ಅಂತರ್ವಾಹಿ ಮಾಹಿತಿಯ ವಿಫುಲ ಪೂರೈಕೆಯನ್ನು ಮೆದುಳು ಪಡೆದುಕೊಳ್ಳುತ್ತದೆ, ಇದಕ್ಕೆ ಬಹಿರ್ವಾಹಿ ಸಂಕೇತಗಳಿಂದ ಉಸಿರಾಟದ ವೇಗದ ಮಟ್ಟವನ್ನು ಹೋಲಿಸಿ ನಿರ್ಧರಿಸಲಾಗುತ್ತದೆ. ದೇಹದ ಪ್ರಕೃತಿಗೆ ತಕ್ಕ ಹಾಗೆ ಉಸಿರಾಟದ ಪ್ರಮಾಣವು ಸರಿಯಾಗಿಲ್ಲದಿದ್ದರೆ ಅದು ಡಿಸ್ಪ್ನಿಯಾಕ್ಕೆ ಕಾರಣವಾಗಬಹುದು. ಕಟ್ಟುಸಿರು ಪ್ರಾರಂಭವಾಗಲು ಮಾನಸಿಕ ಕಾರಣಗಳು ಕೂಡಾ ಇರುತ್ತವೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಅದಲ್ಲದೆ ಕೆಲವು ಜನರು ಸಾಮಾನ್ಯವಾಗಿ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಾರೆ. ಆದರೆ ಇದು ಕಟ್ಟುಸಿರಿನ ರೀತಿಯದ್ದಲ್ಲ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.[೧೩]


ನಿರ್ಣಯಿಸುವಿಕೆ[ಬದಲಾಯಿಸಿ]

ಎಂಆರ್‌ಸಿ ಉಸಿರಾಟದ ತೊಂದರೆಯ ಮಾಪನ
ವರ್ಗೀಕರಣ ಕಟ್ಟುಸಿರಿನ ಹಂತ
0 ಯಾವುದೇ ರೀತಿಯ ಕಟ್ಟುಸಿರು ಚಟುವಟಿಕೆಯ ಪರಿಶ್ರಮದ ಹೊರತಾಗಿಲ್ಲ
1 ನಡೆಯುವಾಗ ಬಾಗಿದ್ದರೇ ಅಥವಾ ಗಡಿಬಿಡಿ ಸ್ಥಿತಿಯಲ್ಲಿ ಕಟ್ಟುಸಿರು
2 ಒಂದು ಮಟ್ಟಕ್ಕಿಂತ ನಿಧಾನವಾಗಿ ನಡೆದರೆ ಅಥವಾ ನಡೆಯುತ್ತಿರುವಾಗ 15 ನಮಿಷದ ನಂತರ ನಿಂತರೆ
3 ಕೆಲವು ನಿಮಿಷಗಳು ನಡೆದ ನಂತರ ನಿಂತರೆ
4 ಬಟ್ಟೆ ದರಿಸುವಂತಹ ಚಿಕ್ಕ ಕೆಲಸದಿಂದಲೂ ಕೂಡಾ ಕಟ್ಟುಸಿರು ಇರುವವರಿಗೆ ಸುಸ್ತಾಗುವ ಮೂಲಕ ಮನೆಯಿಂದ ಹೊರಹೋಗಲು ಕಷ್ಟಪಡುತ್ತಾರೆ

ಪ್ರಾಥಮಿಕವಾಗಿ ನಿರ್ಣಿಯಿಸಲು ಪ್ರಾರಂಭಮಾಡುವಾಗ ಗಾಳಿದಾರಿ, ಉಸಿರಾಟ,ಮತ್ತು ರಕ್ತಪರಿಚಲನೆಯನ್ನು ವೈಧ್ಯಕೀಯ ಇತಿಹಾಸ ಮತ್ತು ದೈಹಿಕ ಪರೀಕ್ಷೆ ನಡೆಸಿ ಕಂಡುಕೊಳ್ಳಬೇಕು.[೨] ಪ್ರಮುಖವಾದ ತೀಕ್ಷ್ಣ ಚಿಹ್ನೆಗಳು: ರಕ್ತದೊತ್ತಡ, ಹೈಪೋಕ್ಸೆಮಿಯಾ, ಶ್ವಾಸನಾಳದ ಮಾರ್ಗ ಬದಲಾವಣೆ, ಬದಲಾದ ಮಾನಸಿಕ ಸ್ಥಿತಿ, ಅಸ್ಥಿರವಾದ ಡಿಸ್‌‌ರಿದ್ಮಿಯಾ, ಸ್ಟ್ರೈಡೊರ್, ಇಂಟರ್‌ಕೊಸ್ಟಲ್ ಇನ್‌ಡ್ರಾವಿಂಗ್, ಸೈನೊಸಿಸ್,ಮತ್ತು ಉಸಿರಾಟದ ಶಬ್ದ ಕೇಳದಿರುವುದು.[೪]

ಉಸಿರಾಟದ ತೊಂದರೆಯ ಮಟ್ಟವನ್ನು ಅಳೆಯಲು ಹಲವಾರು ರೀತಿಯ ಮಾಪನಗಳನ್ನು ಬಳಸಬಹುದು.[೧೪] ಇದನ್ನು ವಾಸ್ತವಿಕವಾಗಿ ಒಂದರಿಂದ ಹತ್ತು ಎಂಬಂತಹ ಅಂಕೆಯಲ್ಲಿ ಅಳತೆ ಮಾಡಲಾಗುತ್ತದೆ. (ಮಾಡಿಫೈಡ್ ಬಾರ್ಗ್ ಸ್ಕ್ಲೇಲ್)[೧೪] ಎಂಆರ್‌ಸಿ ಉಸಿರಾಟದ ತೊಂದರೆಯ ಮಾಪನಕ್ಕೆ ಬದಲಾಗಿ ಬಳಸಬಹುದಾದ ಮಾಪನ - ಕಟ್ಟುಸಿರು ಹೆಚ್ಚಾದ ಸಂದರ್ಭದ ಆಧಾರವಾಗಿಟ್ಟುಕೊಂಡು ಕಟ್ಟುಸಿರನ್ನು ಐದು ವಿಭಿನ್ನ ವರ್ಗೀಕರಣವಾಗಿ ಮಾಡುತ್ತದೆ.[೧೫]

ರಕ್ತ ಪರೀಕ್ಷೆ[ಬದಲಾಯಿಸಿ]

ಹಲವಾರು ಪ್ರಯೋಗಾಲಯಗಳು ಉಸಿರಾಟದ ತೊಂದರೆಯ ಕಾರಣವನ್ನು ನಿರ್ಧರಿಸಲು ಸಹಾಯಕಗಳು. ಡಿ-ಡೈಮರ್ ಇದು ಶ್ವಾಸಕೋಶದ ಧಮನಿಬಂಧ ನಿವಾರಣೆಗೆ ಸಹಾಯಕವಾಗುತ್ತದೆ. ಅಲ್ಲದೆ ಇದರಲ್ಲಿ ಕಡಿಮೆ ಸಮಸ್ಯೆ ಇರುವವರಿಗೆ ಇದು ಹೆಚ್ಚಿನ ಪರಿಣಾಮ ಬೀರಲಾರದು ಆದರೆ ಸಮಸ್ಯೆ ಹೆಚ್ಚಿದಂತೆ ಇದು ಉಸಿರಾಟದ ತೊಂದರೆಗೆ ಕಾರಣವಾಗಬಹುದು.[೧೧] ಕೆಳಹಂತದ ಮೆದುಳಿನ ನ್ಯಾಟ್ರಿಯುರೇಟಿಕ್ ಪೆಪ್ಟೈಡ್ ಇದು ರಕ್ತ ಕಟ್ಟಿ ಹೃದಯ ಸ್ಥಂಭನವನ್ನು ಕಡಿಮೆಗೊಳಿಸಲು ಕಾರಣವಾಗುತ್ತದೆ. ತೊಂದರೆ ಹೆಚ್ಚಾದಾಗ ಇದರಿಂದ ಮೂತ್ರಪಿಂಡದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದಾಗಿದೆ. ಅಲ್ಲದೆ ತೀವ್ರವಾದ ಪರಿಧಮನಿಯ ಕಾಯಿಲೆ ಅಥವಾ ಹೆಚ್ಚಿನ ಶ್ವಾಸಕೋಶದ ಧಮನಿಬಂಧ ಕಾಯಿಲೆ ಕಾಣಿಸಿಕೊಳ್ಳಬಹುದು.[೧೧]

ಚಿತ್ರಣ[ಬದಲಾಯಿಸಿ]

ಎದೆಯೊಳಗೆ ಅಸಹಜವಾಗಿ ಗಾಳಿ ಉಳಿದುಕೊಳ್ಳುವಿಕೆ, ಪುಪ್ಪುಸ ಅಡಿಮಾ, ಅಥವ ಶ್ವಾಸಕೋಶದ ಉರಿಯೂತ.[೧೧] ಆಗಿದೆ ಅಥವಾ ಇಲ್ಲ ಎಂಬುದನ್ನು ನಿರ್ಧರಿಸಲು ಹೃದಯದ ಕ್ಷ-ಕಿರಣವು ಸಹಾಯಕ. , ಸುರುಳಿಯಾಕಾರದ ಕಂಪ್ಯುಟೇಡ್ ಟೊಮೊಗ್ರಫಿದೊಂದಿಗೆ ಅಭಿಧಮನಿಯೊಳಗೆ ರೇಡಿಯೋಕಾಂಟ್ರಾಸ್ಟ್(ರೇಡಿಯೋ ಚಿತ್ರಗ್ರಹಣ)ಪಡೆದು ಶ್ವಾಸಕೋಶದ ಧಮನಿಬಂಧ ಚಿತ್ರಣದ ಅಧ್ಯಯನ ನಡೆಸುವುದು.[೧೧]

ಚಿಕಿತ್ಸೆ[ಬದಲಾಯಿಸಿ]

ಉಸಿರಾಟದ ತೊಂದರೆಯ ಕೆಳಗಿರುವ ಕೆಲವು ಕಾರಣಗಳನ್ನು ಯಾವುದೋ ಹೆಚ್ಚಿನ ರೋಗಕ್ಕೆ ಕಾರಣವಾಗಿರಬಹುದಾಗಿದೆ. ಆದರೆ ಉಪಶಮನಕಾರಕವಾಗಿ ಕೆಲಸ ಮಾಡಲಾರದು.[೫] ಆಮ್ಲಜಲಕದ ಕೊರತೆಗೆ ಹೊರಗಿನಿಂದ ಆಮ್ಲಜನಕ ಪೂರೈಕೆ ಮಾಡುವುದು ಪರಿಣಾಮಕಾರಿ ಆದರೆ ಸಾಮಾನ್ಯವಾಗಿ ರಕ್ತದಲ್ಲಿನ ಆಮ್ಲಜನಕ ಆರ್ದ್ರೀಕರಣವಾಗಿದ್ದರೇ ಯಾವುದೇ ಪರಿಣಾಮ ಬೀರುವಿದಿಲ್ಲ.[೩]

ಉಪಶಮನಕಾರಕ[ಬದಲಾಯಿಸಿ]

ಅರ್ಬುದದಲ್ಲಿ ಮತ್ತು ಇತರೆಗಳ ಕಾರಣದಿಂದ ಉಂಟಾದಾಗ ಮೇಲೆ ತಿಳಿಸಿರುವ ಕ್ರಮಗಳನ್ನು ಮತ್ತು ವಸ್ತುಗಳನ್ನು ಶೀಘ್ರವಾಗಿ ತೆಗೆದುಕೊಂಡರೆ ಉಸರಾಟದ ತೊಂದರೆಯ ಚಿಹ್ನೆಯನ್ನು ಕಡಿಮೆಗೊಳಿಸಲು ಉಪಯೋಗವಾಗಿತ್ತದೆ.[೩] [೧೬] ಮಿಡಾಜೋಲಮ್ ಅನ್ನು ಅನುಮೋದಿಸಲು ಸಾಕ್ಷ್ಯಾಧಾರಗಳು ಕಡಿಮೆ ಇರುವ ಕಾರಣ, ನೆಬ್ಯೂಲಿಕರಣಗೊಂಡ ಒಪಿಯೋಡ್ಸ್‌, ಗ್ಯಾಸ್‌ನ ಮಿಶ್ರಣ ಅಥವಾ ರೂಡಿಯಲ್ಲಿರುವ-ವರ್ತನಾ ಚಿಕಿತ್ಸೆಯ ಮೂಲಕ ಕಡಿಮೆಗೊಳಿಸಬಹುದಾಗಿದೆ.[೧೭]

ಸೋಂಕು ಶಾಸ್ತ್ರ[ಬದಲಾಯಿಸಿ]

ಯುನೈಟೆಡ್ ಸ್ಟೇಟ್‌ನಲ್ಲಿ ಉಸಿರಾಟದ ತೊಂದರೆಯ ಪ್ರಾರಂಭಿಕ ಕಾರಣಗಳಿಗಾರಿ ೩.೫%ರಷ್ಟು ಜನರು ತುರ್ತುಚಿಕಿತ್ಸಾ ಘಟಕಕ್ಕೆ ದಾಖಲಾಗುತ್ತಾರೆ. ಇವುಗಳಲ್ಲಿ ಸುಮಾರು ೫೧%ರಷ್ಟು ಆಸ್ಪತ್ರೆಗೆ ದಾಖಲಾಗುತ್ತಾರೆ ಮತ್ತು ೧೩%ರಷ್ಟು ವರ್ಷದೊಳಗಡೆಯೇ ಸಾವನ್ನಪ್ಪುತ್ತಾರೆ.[೧೮] ಸುಮಾರು ೨೭%ರಷ್ಟು ಜನರು ಕಟ್ಟುಸಿರು ತೊಂದರೆಯಿಂದ ಬಳಲುತ್ತಿದ್ದಾರೆ,[೧೯] ಸುಮಾರು ೭೫%ರಷ್ಟು ಸಾಯುತ್ತಿರುವ ರೋಗಗಳು ಇದರ ಅನುಭವ ಹೊಂದಿದ್ದಾರೆ ಎಂದು ಕೆಲವು ಅಧ್ಯಯನ ಸೂಚಿಸಿದೆ.[೧೩] ತೀವ್ರವಾದ ಉಸಿರಾಟದ ತೊಂದರೆಯು ಕಾರಣಕ್ಕಾಗಿ ಜನರು ತುರ್ತುಚಿಕಿತ್ಸಾ ಘತಕದ ಉಪಶಮನಕಾರಕಕ್ಕೆ ಭೇಟಿ ನೀಡುತ್ತಾರೆ .[೩]

ಶಬ್ದ ವ್ಯುತ್ಪತ್ತಿ[ಬದಲಾಯಿಸಿ]

ಕಟ್ಟುಸಿರು (pronounced /dɪspˈniːə/ disp-NEE), (ಲ್ಯಾಟಿನ್‌ನ ಡಿಸ್ಪನಿಯಾ ದಿಂದ ಬಂದಿದ್ದು, ಗ್ರೀಕ್‌ನ ಡಿಸ್ಪನಿಯಾ ಡಿಸ್ಪನೋಸ್‌ ನಿಂದ ಬಂದಿದೆ) ಅಕ್ಷರಶಃ ಅರ್ಥ ಉಸಿರಾಟದಲ್ಲಿ ಕ್ರಮತಪ್ಪುವಿಕೆ .[೪]

ಉಲ್ಲೇಖಗಳು[ಬದಲಾಯಿಸಿ]

 1. ಡೆಬರೊಹಾ ಲೀಡರ್‌ರಿಂದ About.com ಹೆಲ್ತ್ಸ್ ಡಿಸೀಸ್ ಆ‍ಯ್‌೦ಡ್ ಕಂಡಿಶನ್ ಕಂಟೆಂಟ್> ಡಿಸ್ಪನಿಯಾ. ಅಗಸ್ಟ್ ೦೫, ೨೦೦೮ರಂದು ಅಪ್‌ಡೇಟ್ ಮಾಡಲಾಗಿದೆ.
 2. ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ ೨.೧೧ ೨.೧೨ ೨.೧೩ ೨.೧೪ ೨.೧೫ ೨.೧೬ ೨.೧೭ ೨.೧೮ ೨.೧೯ ೨.೨೦ ೨.೨೧ ೨.೨೨ ೨.೨೩ ೨.೨೪ ೨.೨೫ ೨.೨೬ ೨.೨೭ ೨.೨೮ ೨.೨೯ Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 3. ೩.೦ ೩.೧ ೩.೨ ೩.೩ ೩.೪ Schrijvers D, van Fraeyenhove F (2010). "Emergencies in palliative care". Cancer J. 16 (5): 514–20. doi:10.1097/PPO.0b013e3181f28a8d. PMID 20890149. 
 4. ೪.೦ ೪.೧ ೪.೨ ೪.೩ ೪.೪ ೪.೫ ೪.೬ ೪.೭ Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 5. ೫.೦ ೫.೧ ೫.೨ ೫.೩ ೫.೪ ೫.೫ ೫.೬ ೫.೭ Zuberi, T.; et al. (2009). "Acute breathlessness in adults". InnovAiT. 2 (5): 307–15. doi:10.1093/innovait/inp055. 
 6. American Heart Society (1999). "Dyspnea mechanisms, assessment, and management: a consensus statement". Am Rev Resp Crit Care Med. 159: 321–340. 
 7. ದ ಫ್ರೀಡಿಕ್ಷನರಿ, ಡಿಸೆಂಬರ್ ೧೨, ೨೦೦೯.ರಂದು ಮರು ಸಂಪಾದಿಸಲಾಗಿದೆ ಸೈಟಿಂಗ್:ದ ಅಮೆರಿಕನ್ ಹೆರೀಟೇಜ್ ಡಿಕ್ಷನರಿ ಆಫ್ ದಿ ಇಂಗ್ಲೀಷ್ ಲ್ಯಾಂಗ್ವೇಜ್, ಹ್ಯೂಸ್ಟನ್ ಮಿಫ್ಲಿನ್ ಕಂಪನಿಯಿಂದ ನಾಲ್ಕನೇಯ ಆವೃತ್ತಿ. ೨೦೦೯ರಲ್ಲಿ ಅಪ್‌ಡೇಟ್ ಮಾಡಲಾಗಿದೆ Ologies & -Isms. ದ ಗಾಲೆ ಗ್ರುಪ್ ೨೦೦೮
 8. ೮.೦ ೮.೧ "UpToDate Inc.". 
 9. "dyspnea - General Practice Notebook". 
 10. http://en.diagnosispro.com/differential_diagnosis-for/poisoning-specific-agent--dyspnea/25103-154-100.html
 11. ೧೧.೦೦ ೧೧.೦೧ ೧೧.೦೨ ೧೧.೦೩ ೧೧.೦೪ ೧೧.೦೫ ೧೧.೦೬ ೧೧.೦೭ ೧೧.೦೮ ೧೧.೦೯ ೧೧.೧೦ ೧೧.೧೧ Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 12. ೧೨.೦ ೧೨.೧ ೧೨.೨ ೧೨.೩ ೧೨.೪ Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 13. ೧೩.೦ ೧೩.೧ ೧೩.೨ ೧೩.೩ ಹ್ಯಾರಿಸನ್ಸ್ ಪ್ರಿನ್ಸಿಪಲ್ಸ್ ಅಫ್ ಇಂಟರ್ನ್ಯಾಷನಲ್ ಮೆಡಿಸನ್ (ಕ್ಯಾಪ್ಸರ್ ಡಿಎಲ್, ಫೌಸಿ ಎ‌ಎಸ್, ಲಾಂಡೊ ಡಿಎಲ್, ಎಟ್ ಅಲ್ (ಆವೃತ್ತಿ)) (೧೬ನೇಯ ಆವೃತ್ತಿ.). ನ್ಯೂಯಾರ್ಕ್‌: ಮೆಕ್‌ಗ್ರಾ-ಹಿಲ್‌.
 14. ೧೪.೦ ೧೪.೧ Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 15. Stenton C (2008). "The MRC breathless scale.". Occup Med. 58 (3): 226–7. doi:10.1093/occmed/kqm162. PMID 18441368. 
 16. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 17. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 18. Stephen J. Dubner; Steven D. Levitt (2009). SuperFreakonomics: Tales of Altruism, Terrorism, and Poorly Paid Prostitutes. New York: William Morrow. p. 77. ISBN 0-06-088957-8. 
 19. ಮರ್ರಿ ಮತ್ತು ನಡೆಲ್‌ರ ಟೆಕ್ಸ್ಟ್‌ಬುಕ್ ಆಫ್ ರೆಸ್ಪಿಟರಿ ಮೆಡಿಸಿನ್, ೪ನೇಯ ಆವೃತ್ತಿ. ರಾಬರ್ಟ್ ಜೆ. ಮೇಸೂನ್, ಜಾನ್ ಎಫ್. ಮರ್ರಿ, ಜೆ ಎ. ನಡೆಲ್, ೨೦೦೫, ಎಲ್ಸೆವಿಯರ್

ಬಾಹ್ಯ ಕೊಂಡಿಗಳು[ಬದಲಾಯಿಸಿ]

 1. REDIRECT Template:Respiratory system symptoms and signs