ಓ.ಎಲ್.‌‌‌‌‌‌‌‌ಎಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಓ.ಎಲ್.‌‌‌‌‌‌‌‌ಎಕ್ಸ್
ಓ.ಎಲ್.‌‌‌‌‌‌‌‌ಎಕ್ಸ್

ಓ.ಎಲ್.‌‌‌‌‌‌‌‌ಎಕ್ಸ್ ನ್ಯೂ ಯಾರ್ಕ್, ಬ್ಯೂನಸ್, ಮಾಸ್ಕೋ, ಬೀಜಿಂಗ್ ಮತ್ತು ಮುಂಬಯಿ ಇಲ್ಲಿರುವ ಒಂದು ಆನ್ಲೈನ್ ಕಂಪನಿ. ವಿಶ್ವದೆಲ್ಲೆಡೆ ಅನೇಕ ಸ್ಥಳಗಳಲ್ಲಿ ರಿಯಲ್ ಎಸ್ಟೇಟ್, ಉದ್ಯೊಗಗಳು, ಕಾರುಗಳು, ಮಾರಾಟಕ್ಕಾಗಿ, ಸೇವೆಗಳು, ಸಮುದಾಯ ಮತ್ತು ವೈಯಕ್ತಿಕಗಳಂತಹ ಅನೇಕ ವರ್ಗಗಳಲ್ಲಿ ಉಚಿತವಾಗಿ ಗ್ರಾಹಕ-ರಚಿಸಿದ ವರ್ಗೀಕೃತ ಜಾಹಿರಾತುಗಳು OLX ವೆಬ್ ಸೈಟ್ ನಲ್ಲಿವೆ. ಕಂಪನಿಯನ್ನುಅಂತರ್ಜಾಲ ವಾಣಿಜ್ಯೋದ್ಯಮಿಗಳಾದ ಫ್ಯಾಬ್ರಿಸ್ ಗ್ರಿಂಡ(Fabrice Grinda) ಮತ್ತು ಅಲೆಕ್ ಓಕ್ಸೆನ್‍ಫಾರ್ಡ್(Alec Oxenford) ರವರು ಮಾರ್ಚ್ 2006ರಲ್ಲಿ ಜಂಟಿಯಾಗಿ ಪ್ರಾರಂಭಿಸಿದರು. ಫ್ಯಾಬ್ರಿಸ್ ಮೊದಲಿಗೆ ಝಿಂಗಿ[೪] ಎನ್ನುವ ಒಂದು ಮೊಬೈಲ್ ರಿಂಗ್ಟೋನ್ಸ್ ಕಂಪನಿಯನ್ನು ಪ್ರಾರಂಭಿಸಿದರು, ಅದು ಮೇ 2004ರಲ್ಲಿ ಫಾರ್-ಸೈಡ್ ಗೆ $80 ಮಿಲಿಯನ್ ಗೆ ಮಾರಾಟವಾಯಿತು. [೧][೨] ಅಲೆಕ್ ಮೊದಲಿಗೆ ಲ್ಯಾಟಿನ್ ಅಮೇರಿಕಾದಲ್ಲಿ ಡಿಮಾರ್ಟೆ[೫] Archived 2018-08-05 at the Wayback Machine. ಎನ್ನುವ ಒಂದು ಪ್ರಮುಖ ಅಂತರ್ಜಾಲ ಹರಾಜು ವೆಬ್ ಸೈಟ್ ಅನ್ನು ಪ್ರಾರಂಭಿಸಿದರು. ಡಿಮಾರ್ಟೆಯು ನವೆಂಬರ್ 2005ರಲ್ಲಿ MercadoLibre.com, ಒಂದು ಇಬೇ ಅಂಗಸಂಸ್ಥೆಗೆ ಮಾರಾಟವಾಯಿತು.

ಭೌಗೋಳಿಕ ವ್ಯಾಪ್ತಿ[ಬದಲಾಯಿಸಿ]

ಏಪ್ರಿಲ್ 2009ರಲ್ಲಿಂದ, OLX 91ದೇಶಗಳಲ್ಲಿ ಹಾಗೂ 39 ಭಾಷೆಗಳಲ್ಲಿ ಲಭ್ಯವಿದೆ. [೩]

ದೇಶಗಳು: ಅಲ್ಜೀರಿಯಾ, ಅರ್ಜೆಂಟೈನ, ಅರುಬ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಹಮಾಸ್, ಬಾಂಗ್ಲದೇಶ, ಬೆಲಾರಸ್, ಬೆಲ್ಜಿಯಂ, ಬೆಲಿಸ್, ಬೊಲಿವಿಯಾ, ಬ್ರೆಜಿಲ್, ಬಲ್ಗೇರಿಯಾ, ಕೆನಡ, ಚಿಲಿ, ಚೈನಾ, ಕೊಲಂಬಿಯಾ, ಕೋಸ್ಟ ರಿಕಾ, ಕ್ರೋವೆಶಿಯಾ, ಚೆಕ್ ರಿಪಬ್ಲಿಕ್, ಡೆನ್ಮಾರ್ಕ್, ಡೊಮಿನಿಕ, ಡೊಮಿನಿಕನ್ ರಿಪಬ್ಲಿಕ್, ಇಕ್ವಡೋರ್, ಇಸ್ಟೋನಿಯಾ, ಫಿನ್ ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಗ್ರೆನಡ, ಗ್ವಾಟೆಮಾಲ, ಹೈಟಿ, ಹೊಂಡುರಾಸ್,ಹಾಂಗ್ ಕಾಂಗ್,ಹಂಗೇರಿ, ಭಾರತ, ಇಂಡೋನೇಶಿಯಾ, ಐರ್ಲ್ಯಾಂಡ್, ಇಸ್ರೇಲ್, ಇಟಲಿ, ಜಮೈಕ, ಜಪಾನ್, ಜೋರ್ಡಾನ್, ಕಜಖ್ ಸ್ಥಾನ್, ಲಾತ್ವಿಯಾ, ಲಿಚೆನ್ ಸ್ಟೆನ್, ಲಿತ್ವಾನಿಯಾ, ಲಕ್ಸೆಂಬರ್ಗ್, ಮಲೇಶಿಯಾ, ಮೆಕ್ಸಿಕೊ, ಮಾಲ್ಡೋವ, ಮೊನಾಕೊ, ಮೊರೊಕ್ಕೊ, ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂಡ್, ನಿಕರಗ್ವ, ನಾರ್ವೆ, ಪಾಕಿಸ್ತಾನ್, ಪನಾಮ, ಪೆರುಗ್ವೆ, ಪೆರು, ಫಿಲಿಪೈನ್ಸ್, ಪೊಲಾಂಡ್,ಪೋರ್ಚುಗಲ್, ಪೊರ್ಟೊ ರಿಕೊ, ರೊಮೇನಿಯಾ, ರಷ್ಯನ್ ಫೆಡರೇಷನ್, ಸರ್ಬಿಯಾ, ಸಿಂಗಾಪೂರ್, ಸ್ಲೋವೇಕಿಯಾ, ಸ್ಲೋವೆನಿಯಾ, ದಕ್ಷಿಣ ಆಫ್ರಿಕ, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲ್ಯಾಂಡ್, ತೈವಾನ್, ಥಾಯ್ಲಾಂಡ್, ಟ್ರಿನಿಡಾಡ್ ಮತ್ತು ಟೊಬಾಗೊ, ತುನಿಶಿಯಾ, ಟರ್ಕಿ, ಟರ್ಕ್ಸ್ ಮತ್ತು ಕೈಕೂಸ್ ದ್ವೀಪಗಳು, ಉಕ್ರೈನ್, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್ ಡಮ್, ಯುನೈಟೆಡ್ ಸ್ಟೇಟ್ಸ್, ಉರುಗ್ವೆ, ವೆನೆಜುವೆಲಾ, ವಿಯೆಟ್ನಾಂ

ಭಾಷೆಗಳು: ಬೆಂಗಾಲಿ, ಕಾಟಲಾನ್, ಚೈನಿಸ್ (ಸಾಂಪ್ರದಾಯಿಕ), ಚೈನಿಸ್ (ಸರಳ), ಡಚ್, ಇಂಗ್ಲೀಷ್, ಬಲ್ಗೇರಿಯನ್, ಕ್ರೊವೇಶಿಯನ್, ಚೆಕ್, ಡಾನಿಷ್, ಎಸ್ಟೋನಿಯನ್, ಫ್ರೆಂಚ್, ಜರ್ಮನ್, ಗ್ರೀಕ್, ಹೆಬ್ರಿವ್, ಹಿಂದಿ, ಹಂಗೇರಿಯನ್, ಇಂಡೋನೇಶಿಯನ್, ಇಟೆಲಿಯನ್, ಜಪಾನೀಸ್, ಕೊರಿಯನ್, ಲಾತ್ವಿಯಾನ್, ಲಿಥುವನಿಯನ್, ನಾರ್ವೇಜಿಯನ್, ಪೊಲಿಶ್, ಪೋರ್ಚುಗೀಸ್, ರೊಮೇನಿಯನ್, ರಷ್ಯನ್, ಸೈಬೀರಿಯನ್, ಸ್ಲೋವಾಕ್, ಸ್ಲೋವಿನ್, ಸ್ಪಾನಿಷ್, ಸ್ವೀಡಿಷ್, ಟಾಗಲೊಗ್, ಥಾಯ್, ಟರ್ಕಿಶ್, ಉಕ್ರೇನಿಯನ್, ಉರ್ದು, ವಿಯೆಟ್ನಾಮೀಸ್.

ವಿಶಿಷ್ಟ ಲಕ್ಷಣಗಳು[ಬದಲಾಯಿಸಿ]

OLX ನ ವಿಶಿಷ್ಟ ಲಕ್ಷಣಗಳೆಂದರೆ:

 • ಹೆಚ್ಚಿನ HTML ಲಿಸ್ಟಿಂಗ್ ಗಳನ್ನು ವಿನ್ಯಾಸಗೊಳಿಸುವ ಸಾಮರ್ಥ್ಯವಿದೆ
 • ಮಾರಾಟ, ಕೊಳ್ಳುವಿಕೆ, ಹಾಗೂ ಸಮುದಾಯ ಚಟುವಟಿಕೆಗಳ ಮೇಲಿನ ಕೇಂದ್ರಿಯ ನಿಯಂತ್ರಕವಾಗಿದೆ
 • ವಂಚನೆಗಳನ್ನು ನಿಯಂತ್ರಿಸುತ್ತದೆ
 • ಫೊಟೊಲಾಗ್, ಫೇಸ್ ಬುಕ್ ಹಾಗೂ ಫ್ರೆಂಡ್ ಸ್ಟರ್ ನಂತಹ ಇತರ ವೆಬ್ ಸೈಟ್ ಗಳ ಮೇಲೆ ಲಿಸ್ಟಿಂಗ್ ಗಳನ್ನು ಜಾಹಿರಾತುಮಾಡುವ ಸಾಮರ್ಥ್ಯವಿದೆ.
 • ಇತರ ಆಸಕ್ತ ಬಳಕೆದಾರರೊಂದಿಗೆ ಲಿಸ್ಟಿಂಗ್ ಗಳನ್ನು ಚರ್ಚಿಸುವ ಸಾಮರ್ಥ್ಯವಿದೆ.
 • ನೀವು ವಾಸಿಸುತ್ತಿರುವಲ್ಲೆಲ್ಲ, ನಿಮ್ಮ ಬಳಿ ಇರುವ ಐಟಮ್ ಗಾಗಿ ಹುಡುಕುವ ಸಾಮರ್ಥ್ಯವಿದೆ
 • ಮೊಬೈಲ್ ಫೋನ್ ಗಳಿಂದ ವೆಬ್ ಸೈಟಿಗೆ ಪ್ರವೇಶಿಸಬಹುದು.
 • ಹಲವಾರು ಭಾಷೆಗಳಲ್ಲಿ ಲಭ್ಯವಿದೆ

ಉಲ್ಲೇಖಗಳು[ಬದಲಾಯಿಸಿ]

 1. ವೆಂಚರ್ ವಾಯ್ಸ್ ಇಂಟರ್ ವೀವ್ [೧] Archived 2010-04-28 at the Wayback Machine.
 2. ಫೋರ್ಬ್ಸ್ ಬರಹ 'ಝಿಂಗಿ ಫೌಂಡರ್ ಸ್ಟೆಪ್ಸ್ ಡೌನ್'[೨] Archived 2008-01-18 at the Wayback Machine.
 3. OLX ’ನಮ್ಮ ಕುರಿತು' ಪುಟ [೩] Archived 2007-06-19 at the Wayback Machine.

ಬಾಹ್ಯಸಂಪರ್ಕಗಳು[ಬದಲಾಯಿಸಿ]