ಒರಳು ಮತ್ತು ಕುಟ್ಟಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒರಳು ಮತ್ತು ಕುಟ್ಟಾಣಿ ಎಂದರೆ ಪದಾರ್ಥಗಳನ್ನು ಅಥವಾ ಸಾಮಗ್ರಿಗಳನ್ನು ಜಜ್ಜಿ ಮತ್ತು ಪುಡಿಮಾಡಿ ನಯವಾದ ಪೇಸ್ಟ್ ಅಥವಾ ಪುಡಿಯಾಗಿ ಸಿದ್ಧಗೊಳಿಸಲು ಪ್ರಾಚೀನ ಕಾಲದಿಂದ ಬಳಸಲಾಗುತ್ತಿರುವ ಪರಿಕರಗಳು. ಇವನ್ನು ಅಡಿಗೆಮನೆ, ವೈದ್ಯವಿಜ್ಞಾನ ಮತ್ತು ಔಷಧವಿಜ್ಞಾನದಲ್ಲಿ ಬಳಸಲಾಗುತ್ತದೆ. ಒರಳು/ಕಲಾಬತ್ತು ಒಂದು ಬೋಗುಣಿ/ಪಾತ್ರೆಯಾಗಿರುತ್ತದೆ. ಇದನ್ನು ಸಾಮಾನ್ಯವಾಗಿ ಗಟ್ಟಿ ಕಟ್ಟಿಗೆ, ಲೋಹ, ಪಿಂಗಾಣಿ, ಅಥವಾ ಬೆಣಚು ಕಲ್ಲಿನಂತಹ ಗಟ್ಟಿ ಕಲ್ಲಿನಿಂದ ತಯಾರಿಸಲಾಗುತ್ತದೆ. ಕುಟ್ಟಾಣಿ/ಒನಕೆ ಒಂದು ಭಾರವಾದ ಮತ್ತು ಹರಿತವಿಲ್ಲದ ದೊಣ್ಣೆಯಾಕಾರದ ವಸ್ತುವಾಗಿರುತ್ತದೆ. ರುಬ್ಬಬೇಕಾದ ಪದಾರ್ಥವು ಒಣ ಅಥವಾ ಹಸಿಯಾಗಿರಬಹುದು, ಮತ್ತು ಇದನ್ನು ಒರಳಿನಲ್ಲಿ ಇಟ್ಟು, ಕುಟ್ಟಾಣಿ/ಒನಕೆಯನ್ನು ಅಪೇಕ್ಷಿತ ಘನತ್ವವನ್ನು ಸಾಧಿಸುವವರೆಗೆ ಅದರಲ್ಲಿ ಒತ್ತಲಾಗುತ್ತದೆ/ಕುಟ್ಟಲಾಗುತ್ತದೆ ಮತ್ತು ತಿರುಗಿಸಲಾಗುತ್ತದೆ.

ಕಲಾಬತ್ತುಗಳು ಮತ್ತು ಕುಟ್ಟಾಣಿಗಳನ್ನು ಸಾಂಪ್ರದಾಯಿಕವಾಗಿ ಪೂರ್ವಸಿದ್ಧತೆಯಿಲ್ಲದ ಔಷಧಿಯನ್ನು ತಯಾರಿಸುವ ಮುಂಚೆ ವಿವಿಧ ಪದಾರ್ಥಗಳನ್ನು ಜಜ್ಜಲು ಔಷಧದ ಅಂಗಡಿಗಳಲ್ಲಿ ಬಳಸಲಾಗುತ್ತಿತ್ತು. ಔಷಧಿ ಬಳಕೆಗಾಗಿ, ಕಲಾಬತ್ತು ಮತ್ತು ಕುಟ್ಟಾಣಿಯ ತುದಿಯನ್ನು ಸಾಮಾನ್ಯವಾಗಿ ಪಿಂಗಾಣಿಯಿಂದ ತಯಾರಿಸಲಾಗುತ್ತದೆ, ಮತ್ತು ಕುಟ್ಟಾಣಿಯ ಹಿಡಿಯನ್ನು ಕಟ್ಟಿಗೆಯಿಂದ ತಯಾರಿಸಲಾಗುತ್ತದೆ. ಈ ಬಗೆಯ ಕಲಾಬತ್ತು ಕುಟ್ಟಾಣಿಯು ೧೭೫೯ರಲ್ಲಿ ಹುಟ್ಟಿಕೊಂಡಿತು. ಕಲಾಬತ್ತು ಮತ್ತು ಕುಟ್ಟಾಣಿಗಳನ್ನು ಮಾತ್ರೆಗಳನ್ನು ನುಣ್ಣಗೆ ಪುಡಿಮಾಡಲು ಔಷಧಿ ಉಪಕರಣಗಳಾಗಿ ಅಥವಾ ಶ್ವಸನಕ್ಕೆ ತಯಾರಿಯಾಗಿ ಕೂಡ ಬಳಸಲಾಗುತ್ತದೆ. ಇದರಿಂದ ಈ ಮಾತ್ರೆಗಳನ್ನು ಸೇವನೆ ಮಾಡಿದಾಗ ಹೀರುವಿಕೆಯು ವೇಗಗೊಳ್ಳುತ್ತದೆ. ದ್ರವ ಪ್ರಮಾಣದ ರೂಪದಲ್ಲಿ ಲಭ್ಯವಿಲ್ಲದ ಔಷಧಿಗಳನ್ನು ನಯವಾಗಿ ಪುಡಿಮಾಡಲು ಮತ್ತು ಕೃತಕ ಪೌಷ್ಟಿಕಾಂಶ ಅಗತ್ಯವಾದ ರೋಗಿಗಳಿಗಾಗಿ ಕಲಾಬತ್ತು ಕುಟ್ಟಾಣಿಗಳನ್ನು ಬಳಸಲಾಗುತ್ತದೆ.

ಆಗ್ನೇಯ ಏಷ್ಯಾದಲ್ಲಿ, ಜೊತೆಗೆ ಪಾಕಿಸ್ತಾನ ಮತ್ತು ಭಾರತದಲ್ಲಿ ಬೆಣಚು ಕಲ್ಲಿನ ಒರಳು ಮತ್ತು ಕುಟ್ಟಾಣಿಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ವಿವಿಧ ರಸಭಕ್ಷ್ಯಗಳು ಜೊತೆಗೆ ದೈನಂದಿನ ಖಾದ್ಯಗಳಿಗಾಗಿ ಸಂಬಾರ ಪದಾರ್ಥಗಳ ಮಿಶ್ರಣಗಳನ್ನು ತಯಾರಿಸಲು ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಮೋಟಾರು ಇರುವ ಗ್ರೈಂಡರ್‌ಗಳ ಆಗಮನದಿಂದಾಗಿ, ಒರಳು ಮತ್ತು ಕುಟ್ಟಾಣಿಗಳ ಬಳಕೆಯು ಕಡಿಮೆಯಾಗಿದೆ. ವಿವಿಧ ಹಿಂದೂ ಸಮಾರಂಭಗಳಲ್ಲಿ (ಉದಾಹರಣೆಗೆ ವಿವಾಹಗಳು ಮತ್ತು ಉಪನಯನ) ಈ ಒರಳುಗಳಲ್ಲಿ ಅರಶಿಣವನ್ನು ಜಜ್ಜುವುದು ಸಾಂಪ್ರದಾಯಿಕವಾಗಿದೆ. ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿ ಧಾನ್ಯದ ಹೊಟ್ಟು ಸಿಪ್ಪೆಯನ್ನು ತೆಗೆಯಲು/ಸುಲಿಯಲು ದೊಡ್ಡ ಒರಳುಗಳು ಮತ್ತು ಒನಕೆಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇವನ್ನು ಸಾಮಾನ್ಯವಾಗಿ ಕಟ್ಟಿಗೆಯಿಂದ ತಯಾರಿಸಲಾಗಿರುತ್ತದೆ, ಮತ್ತು ಇವನ್ನು ಒಬ್ಬರು ಅಥವಾ ಹೆಚ್ಚು ಜನರು ನಿರ್ವಹಿಸುತ್ತಾರೆ.