ಐವೋ ಆಂಡ್ರಿಕ್
ಐವೋ ಆಂಡ್ರಿಕ್ (Ivo Andrić) | |
---|---|
Born | Ivo Andrić ೯ ಅಕ್ಟೋಬರ್ ೧೮೯೨ |
Died | 13 March 1975 | (aged 82)
Resting place | New Cemetery |
Nationality | ಯುಗೋಸ್ಲೋವಿಯಾ |
Occupation(s) | Novelist, short story writer, diplomat |
Awards | Nobel Prize in Literature (1961) |
ಆಂದ್ರಿಚ್, ಈವೊ (9 ಒಕ್ಟೋಬರ್ 1892 – 13 ಮಾರ್ಚ್ 1975)[೧]. ಯುಗೋಸ್ಲಾವಿಯ ದೇಶದ ಕಾದಂಬರಿಕಾರ, ಕವಿ, ಕಥೆಗಾರ. ಮೊದಲ ಮಹಾಯುದ್ಧಕ್ಕೆ ಮೊದಲು ಯುಗೊಸ್ಲಾವಿಯದ ಐಕ್ಯಕ್ಕಾಗಿ ಹೋರಾಡಿದುದರಿಂದ ಆಸ್ಟ್ರಿಯದ ಆಡಳಿತಗಾರರು ಬಂಧನದಲ್ಲಿಟ್ಟರು[೧]. ಸ್ವತಂತ್ರ ಯುಗೊಸ್ಲಾವಿಯದಲ್ಲಿ ರಾಯಭಾರಿ ಶಾಖೆಯಲ್ಲಿ ಕೆಲಸ ಮಾಡಿದ. ಎರಡನೆಯ ಮಹಾಯುದ್ಧ, ಯುಗೊಸ್ಲಾವಿಯದಲ್ಲಿ ಹೊಸ ರಾಜಕೀಯ ಪಂಥದ ಆಡಳಿತದ ಪ್ರತಿಷ್ಠಾಪನೆ ಇವು ಹಲವು ಸಾಹಿತಿಗಳ ಅಸ್ತಮಯವನ್ನು ತಂದರೂ ಈತ ನಾಡಿನ ಅತ್ಯಂತ ಪ್ರಭಾವಯುತ, ಸನ್ಮಾನಿತ ಸಾಹಿತಿಗಳಲ್ಲಿ ಒಬ್ಬನಾಗಿ ಉಳಿದ. ಮನುಷ್ಯರ ನೋವಿನಲ್ಲಿ ಗಾಢವಾದ ಅನುಕಂಪ, ನಿಸರ್ಗದ ನಿಗೂಢತೆಯ ಎದುರಿನಲ್ಲಿ ಮನುಷ್ಯನ ಅಲ್ಪತ್ವಗಳು ಇವನ ಕೃತಿಗಳಲ್ಲಿ ಅಭಿವ್ಯಕ್ತಿ ಪಡೆದಿವೆ. ಇವನ ಶೈಲಿ ನಿಷ್ಕøಷ್ಟವೂ ಅಡಕವೂ ಆಗಿದೆ. ಬೊಸ್ನಿಯ ರೈತವರ್ಗವನ್ನು ಅಸಾಧಾರಣ ಯಶಸ್ಸಿನಿಂದ, ಕಣ್ಣಿಗೆ ಕಟ್ಟುವ ಹಾಗೆ, ಆತ್ಮೀಯವಾಗಿ ಈತ ಚಿತ್ರಿಸಿದ್ದಾನೆ. ಬೊಸ್ನಿಯವನ್ನು ಕುರಿತು ಈತ ಬರೆದಿರುವ ಮೂರು ಭಾಗದ ಕೃತಿಗೆ 1961ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು[೨].ಇವರ ಬರವಣಿಗೆ ಒಟ್ಟೋಮನ್ ಕಾಲದ ಬೋಸ್ನಿಯಾದ ಜನಜೀವನವನ್ನು ಚಿತ್ರಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ https://www.nobelprize.org/nobel_prizes/literature/laureates/1961/andric-bio.html
- ↑ "ಆರ್ಕೈವ್ ನಕಲು". Archived from the original on 2017-04-02. Retrieved 2017-05-18.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Andric at NobelPrize.org Archived 2008-10-07 ವೇಬ್ಯಾಕ್ ಮೆಷಿನ್ ನಲ್ಲಿ.
- The Swedish Academy secretary Anders Österling presentation speech Archived 2009-01-08 ವೇಬ್ಯಾಕ್ ಮೆಷಿನ್ ನಲ್ಲಿ.
- Ivo Andrić Museum and Foundation
- Paths, a short essay by Ivo Andric, translated by Lazar Pascanovic Archived 2012-03-12 ವೇಬ್ಯಾಕ್ ಮೆಷಿನ್ ನಲ್ಲಿ.
- Translated works by Ivo Andrić Archived 2016-02-07 ವೇಬ್ಯಾಕ್ ಮೆಷಿನ್ ನಲ್ಲಿ.
- ಟೆಂಪ್ಲೇಟು:Books and Writers