ಐಟಿಸಿ ನಿಯಮಿತ (ಐಟಿಸಿ ಲಿಮಿಟೆಡ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐಟಿಸಿ ನಿಯಮಿತ
ಸಂಸ್ಥೆಯ ಪ್ರಕಾರಸಾರ್ವಜನಿಕ (ಬಿಎಸ್‌ಇ: 500875)
ಸ್ಥಾಪನೆ೨೪ ಆಗಸ್ಟ್ ೧೯೪೦
ಮುಖ್ಯ ಕಾರ್ಯಾಲಯ37, J.L.Nehru Road,Kolkata, West Bengal, India
ಪ್ರಮುಖ ವ್ಯಕ್ತಿ(ಗಳು)ವೈ. ಸಿ. ದೇವೇಶ್ವರ್, ಅಧ್ಯಕ್ಷ
ಕುರುಷ್ ಗ್ರಾಂಟ್, ಕಾ.ನಿ. ನಿರ್ದೇಶಕ,
ಪಿ. ಧೊಬಾಲೆ, ಕಾ.ನಿ. ನಿರ್ದೇಶಕ,
ನಕುಲ್ ಆನಂದ್, ಕಾ.ನಿ. ನಿರ್ದೇಶಕ,
ರಾಜೀವ್ ಟಂಡನ್, ಮುಖ್ಯ ಹಣಕಾಸು ಅಧಿಕಾರಿ,
(೨ ಜನವರಿ ೨೦೧೧ರಿಂದ)
ಉದ್ಯಮ
 • ಸಿಗರೇಟು
  * ಹೋಟೇಲುಗಳ ಸರಣಿ
  * ಪ್ಯಾಕ್ ಮಾಡಿದ ತಿನಿಸುಗಳು
ಆದಾಯ US$6 billion (2009)
ಉದ್ಯೋಗಿಗಳು26,150 (2009)
ಜಾಲತಾಣITCportal.com

ITC ನಿಯಮಿತ (ಬಿಎಸ್‌ಇ: 500875)ಎಂಬುದು ಸಾರ್ವಜನಿಕ ಕ್ಷೇತ್ರದ ವ್ಯಾಪಾರಿ ಉದ್ದೇಶದ ವಾಣಿಜ್ಯ ಕೂಟದ ಸಂಸ್ಥೆ ಯಾಗಿದೆ.ಅದಲ್ಲದೇ ಭಾರತದ .ಕೊಲ್ಕತ್ತಾ ನಗರದಲ್ಲಿ ಪ್ರಧಾನ ಕಚೇರಿ ಹೊಂದಿದೆ.[೧] ಅದರ ಒಟ್ಟು ವಹಿವಾಟು $6 ಬಿಲಿಯನ್ ಆಗಿದ್ದರೆ ಮಾರುಕಟ್ಟೆಯ ಬಂಡವಾಳ ಶೇಖರಣಾ ಸಾಮರ್ಥ್ಯವು $30 ಬಿಲಿಯನ್ ಮೊತ್ತ ದಾಟಿದೆ. ಕೊಲ್ಕತ್ತಾದಲ್ಲಿ ಕಂಪನಿಯ ನೊಂದಾಯಿತ ಕಚೇರಿ ಇದೆ. ಇದು ಮೊದಲು ಇಂಪಿರಿಯಲ್ ಟೊಬ್ಯಾಕೊ ಕಂಪನಿಯಯಾಗಿ ಆರಂಭ ಕಂಡಿದ್ದು ತನ್ನ ಪ್ರಾಚೀನ ಬೇರುಗಳನ್ನು ಯುನೈಟೆಡ್ ಕಿಂಗ್ಡಮ್ ನ ಇಂಪಿರಿಯಲ್ ಟೊಬ್ಯಾಕೊದೊಂದಿಗೆ ಹಂಚಿಕೊಂಡಿತ್ತು.ಆದರೀಗ ಅದು ಸಂಪೂರ್ಣ ಸ್ವತಂತ್ರವಾಗಿದೆ.ನಂತರ 1970 ರಲ್ಲಿ ಇಂಡಿಯನ್ ಟೊಬ್ಯಾಕೊ ಕಂಪನಿಯೆಂದು ಮರುನಾಮಕರಣವಾಯಿತು,ಮುಂದೆ 1974 ರಲ್ಲಿ ಐ.ಟಿ.ಸಿ ಲಿಮಿಟೆಡ್ ಎಂದು ಹೆಸರಾಯಿತು. ಸದ್ಯ ಕಂಪನಿಗೆ ಯೋಗೇಶ್ವರ ಚಂದೆರ್ ದೇವೇಶ್ವರ್ ಅವರು ಮುಖ್ಯಸ್ಥರಾಗಿದ್ದಾರೆ. ಅದು 26,000 ಕಿಂತಲೂ ಅಧಿಕ ನೌಕರ ವರ್ಗವನ್ನು ಹೊಂದಿದೆ.ಭಾರತಾದಾದ್ಯಂತ ಒಟ್ಟು 60 ಸ್ಥಳೀಯ ನಿರ್ವಹಣಾ ಕಚೇರಿಗಳನ್ನು ಪಡೆದಿದೆಯಲ್ಲದೇ ಫೊರ್ಬ್ಸ್ 2000 ರ ಪಟ್ಟಿಯಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದೆ. ಐ.ಟಿ.ಸಿ ಲಿಮಿಟೆಡ್ ಆಗಷ್ಟ್ 24,2010 ರಂದು ತನ್ನ 100 ವರ್ಷಗಳನ್ನು ಪೂರೈಸಿದೆ. ಐ.ಟಿ.ಸಿ ಕಂಪನಿಯು ವಿವಿಧ ಉತ್ಪಾದನಾ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವ ತೋರಿಸಿದೆ, ಸಿಗರೇಟ್ ಗಳು, ಹೊಟೇಲುಗಳು, ಪೇಪರ್ ಬೋರ್ಡ್ಸ್ ಬೋರ್ಡ್ಸ್& ಸ್ಪೆಷಿಯಾಲಿಟಿ ಪೇಪರ್ಸ್, ಪ್ಯಾಕಿಜೇಂಗ್, ಕೃಷಿ-ಉದ್ಯೋಗ, ಪ್ಯಾಕ್ಡ್ ಆಹಾರಗಳು & ಮಿಠಾಯಿಗಳು, ಮಾಹಿತಿ ತಂತ್ರಜ್ಞಾನ, ಬ್ರಾಂಡೆಡ್ ಉಡುಪುಗಳು, ವ್ಯಕ್ತಿಗತ ಕಲ್ಯಾಣ ಕೇಂದ್ರ, ಸ್ಟೇಶನರಿ,(ಕಿರುಕುಳ ಸಾಮಾನು) ಸುರಕ್ಷಿತ ಬೆಂಕಿಕಡ್ಡಿ ಪೆಟ್ಟಿಗೆಗಳು ಮತ್ತು ಇನ್ನಿತರ FMCG ಉತ್ಪನ್ನಗಳನ್ನು ಒಳಗೊಂಡಿದೆ. ಐ.ಟಿ.ಸಿ ಕಂಪನಿಯು ತನ್ನ ಉತ್ಪನ್ನಗಳ ಮಾರುಕಟ್ಟೆಗಾಗಿ ಸಾಂಪ್ರದಾಯಿಕ ಮಾರಾಟ ವಲಯದಲ್ಲಿ ಸಿಗರೇಟ್ ಗಳು, ಹೊಟೇಲುಗಳು, ಪೇಪರ್ ಬೋರ್ಡ್ಸ್ ಬೋರ್ಡ್ಸ್& ಸ್ಪೆಷಿಯಾಲಿಟಿ ಪೇಪರ್ಸ್, ಪ್ಯಾಕಿಜೇಂಗ್, ಕೃಷಿ-ಉದ್ಯೋಗ, ಪ್ಯಾಕ್ಡ್ ಆಹಾರಗಳು & ಮಿಠಾಯಿಗಳು,ಇತ್ಯಾದಿಗಳಲ್ಲಿ ಮುಂಚೂಣಿಯಲ್ಲಿದೆ.ಅಷ್ಟೇ ಅಲ್ಲದೇ ತನ್ನ ಶೈಶವ ಮಟ್ಟದ ಹೊಸ ವ್ಯಾಪಾರ ಮಟ್ಟದಲ್ಲೂ ಅದು ಭರವಸೆ ಮೂಡಿಸಿದೆ.ಉದಾಹರಣೆಗೆ ಬೋರ್ಡ್ಸ್& ಸ್ಪೆಷಿಯಾಲಿಟಿ ಪೇಪರ್ಸ್, ಪ್ಯಾಕಿಜೇಂಗ್, ಕೃಷಿ-ಉದ್ಯೋಗ, ಪ್ಯಾಕ್ಡ್ ಆಹಾರಗಳು & ಮಿಠಾಯಿಗಳು, ಮಾಹಿತಿ ತಂತ್ರಜ್ಞಾನ, ಬ್ರಾಂಡೆಡ್ ಉಡುಪುಗಳು, ವ್ಯಕ್ತಿಗತ ಕಲ್ಯಾಣ ಕೇಂದ್ರ, ಸ್ಟೇಶನರಿ,(ಕಿರುಕುಳ ಸಾಮಾನು) ಸುರಕ್ಷಿತ ಬೆಂಕಿಕಡ್ಡಿ ಪೆಟ್ಟಿಗೆಗಳು ಮತ್ತು ಇನ್ನಿತರ FMCG ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸ್ಸ್ಪರ್ಧಾತ್ಮಕವಾಗಿ ಒದಗಿಸುತ್ತಿದೆ. ಐಟಿಸಿಯ ವ್ಯಾಪಾರಿ ಪಟ್ಟಿಯಲ್ಲಿರುವ ಉತ್ಪನ್ನಗಳು ವಿಶ್ವ ಮಟ್ಟದಲ್ಲೇ ಉತ್ತಮ ಹೆಸರು ಪಡೆಯಲು ಅದರ ಸತತ ಯತ್ನ ಮತ್ತು ತಾಳ್ಮೆ ರೀತಿಯ ವಹಿವಾಟುಗಳೇ ಕಾರಣವಾಗಿವೆ.ವಿಶ್ವದಲ್ಲೇ ತನ್ನ ಗಾತ್ರ ಮತ್ತು ವಿಭಿನ್ನತೆಯಲ್ಲಿ ಅತ್ಯಂತ ವಿಶಿಷ್ಟ ಸ್ಥಾನ ಗಳಿಸಿದೆ.ಅದು 'ಕಾರ್ಬನ್ ಪೊಜಿಟಿವ್',ವಾಟರ್ ಪೊಜಿಟಿವ್'ಮತ್ತು ಸೊಲಿಡ್ ವೇಸ್ಟ್ ರಿಸೈಕ್ಲಿಂಗ್ ಪೊಜಿಟಿವ್' ಅಂದರೆ ಅನುಕ್ರಮವಾಗಿ ತ್ಯಾಜ್ಯ ನಿರ್ವಹಣೆ ಮತ್ತು ಕಡಿಮೆ ಇಂಗಾಲ ಗಳ ಬಳಕೆ ನೀರಿನ ಮಿತವ್ಯಯದಲ್ಲೂ ತನ್ನ ಛಾಪು ಮೂಡಿಸಿದೆ. ಅದಕ್ಕೂ ಹೆಚ್ಚೆಂದರೆ ಐಟಿಸಿಯ ವ್ಯಾಪಾರ ವಹಿವಾಟುಗಳು ಭಾರತದ ಗ್ರಾಮೀಣ ಬಡಜನರ ಬದುಕಿಗೆ ನೆರವಾಗಲು ಉದ್ಯೋಗವಕಾಶಗಳನ್ನು ನೀಡಿವೆ.ಸುಮಾರು 5 ದಶಲಕ್ಷ ಜನರು ತಮ್ಮ ದೈನಂದಿನ ಹೊಟ್ಟೆಪಾಡಿಗಾಗಿ ಇದರ ಉದ್ಯೋಗದ ರೆಕ್ಕೆಯಡಿಯಿದ್ದಾರೆ.

ಉತ್ಪನ್ನಗಳು ಹಾಗು ವ್ಯಾಪಾರಿ ಮುದ್ರೆಗಳ ಪಟ್ಟಿ[ಬದಲಾಯಿಸಿ]

FMCG,ಯಲ್ಲಿಯೂ ಸಹ ಐಟಿಸಿ ತನ್ನ ಪ್ರಬಲ ಅಸ್ತಿತ್ವ ಸಾಧಿಸಿದೆ:

 • ಸಿಗರೇಟ್: W. D. & H. O. ವಿಲ್ಸ್ , ಗೊಲ್ಡ್ ಫ್ಲೇಕ್ , ನೇವಿಕಟ್ , ಇನ್ಸಿಗ್ನಿಯಾ , ಇಂಡಿಯಾ ಕಿಂಗ್ಸ್, ಕ್ಲಾಸಿಕ್ (ವೆರ್ವೆ, ರಶ್, ರೆಗ್ಯುಲರ್, ಮೈಲ್ಡ್ ಮತ್ತು ಅಲ್ಟ್ರಾಮೈಲ್ಡ್ ) , ಸಿಲ್ಕ್ ಕಟ್ , ಸಿಜರ್ಸ್ , ಕ್ಯಾಪ್ ಸ್ಟನ್ , ಬೆರ್ಕಲೆ , ಬ್ರಿಸ್ಟೊಲ್ , ಲಕ್ಕಿ ಸ್ಟ್ರೈಕ್ ಮತ್ತು ಫ್ಲೇಕ್ .
 • ಆಹಾರ ಪದಾರ್ಥಗಳು:(ಕಿಚನ್ಸ್ ಆಫ್ ಇಂಡಿಯಾ ; ಆಶೀರ್ವಾದ್ ;ಮಿಂಟೊ ; ಸನ್ ಫೀಸ್ಟ್ ; ಕ್ಯಾನ್ಡಿಮ್ಯಾನ್ ; ಬಿಂಗೊ ; ಯಿಪ್ಪೀ ; ಸಿದ್ದಪಡಿಸಿದ ತಕ್ಷಣದ ತಿಂಡಿ ಪದಾರ್ಥಗಳು,(ಸ್ಟೇಪಲ್ಸ) ಕೊಕ್ಕೆ ಕೊಂಡಿಗಳು, ಬಿಸ್ಕೆಟ್ಸ್, ಮಿಠಾಯಿ, ಶೇವಿಗೆ ಮತ್ತು ಕುರುಕಲ ತಿಂಡಿಗಳು);
 • ಸಿದ್ದ ಉಡುಪುಗಳು: (ವಿಲ್ಸ್ ಲೈಫ್ ಸ್ಟೈಲ್ಸ್ ಮತ್ತುಜಾನ್ ಪ್ಲೆಯರ್ಸ್ ಬ್ರಾಂಡ್ಸ್);
 • ವ್ಯಕ್ತಿಗತ ಸುರಕ್ಷತೆ,ಕಾಳಜಿ:(ಫಿಯಾಮಾ ಡಿ ವಿಲ್ಸ್ ; ವಿವೇಲ್ ; ಎಸ್ಸೆಂಜಾ ಡಿ ವಿಲ್ಸ್ ; ಸುಪಿರಿಯಾ ;ವಿವೇಲ್ ಸುಗಂಧ ದೃವ್ಯಗಳಲ್ಲಿನ ಬ್ರಾಂಡೆಡ್ ಗುಣಮಟ್ಟ, ಕೇಶ ಸಂರಕ್ಷಣೆ ಮತ್ತು ಚರ್ಮದ ರಕ್ಷಣೆ) [೨]
 • ಕಿರುಕಳ ಸಾಮಗ್ರಿ(ಸ್ಟೇಶನರಿ): (ಕ್ಲಾಸ್ ಮೇಟ್ ಮತ್ತು ಪೇಪರ್ ಬ್ರಾಂಡ್ ಗಳು)
 • ಸುರಕ್ಷಿತ ಬೆಂಕಿ ಕಡ್ಡಿಗಳು ಮತ್ತು ಅಗರಬತ್ತಿಗಳು: [ಶಿಪ್ (ಇದು WIMCO ಒಡೆತನದ ಮೂಲಕ ವ್ಯಾಪಾರಾಗುತ್ತದೆ); ಐಕಿನೊ ; ಮಂಗಲ್ ದೀಪ್ ; ಏಮ್ ಬ್ರಾಂಡ್ ಗಳು]ಪ್ರಖ್ಯಾತವಾಗಿವೆ.

ಇನ್ನಿತರ ವ್ಯಾಪಾರಗಳೆಂದರೆ:

 • ಹೊಟೇಲ್ ಗಳು: ಐಟಿಸಿಯ ಹೊಟೇಲ್ ಗಳು (ಇವು ವ್ಯಾಪಾರಿ ಬ್ರಾಂಡ್ ಗಳಾದ ಐಟಿಸಿ ಹೊಟೇಲ್ /ವೆಲ್ ಕಮ್ ಹೊಟೆಲ್ ) ಗಳನ್ನೊಳಗೊಂಡಂತೆ ಭಾರತದಾದ್ಯಂತ ಸುಮಾರು 80 ಹೊಟೇಲ್ ಗಳ ಸರಣಿಯು ಎರಡನೆಯ ದೊಡ್ಡ ಹೊಟೆಲ್ ಉದ್ಯಮ ಎನಿಸಿದೆ. ಐಟಿಸಿಯು ಎರಡು ಬ್ರಾಂಡ್ ಗಳಿಗೆ ಭಾರತದಲ್ಲಿ ಏಕೈಕ ಫ್ರಾಂಚೈಸೀ ಪಡೆದಿದೆ,ಇವುಗಳನ್ನು ಶೆರ್ಟಾನ್ ಇಂಟರ್ ನ್ಯಾಶನಲ್ ಇಂಕ್-ದಿ ಲಕ್ಸುರಿ ಕಲೆಕ್ಷನ್ ಅಂಡ್ ಶೆರಟಾನ್ ಇವುಗಳನ್ನು ಐಟಿಸಿ ತನ್ನ ವಲಯದಲ್ಲಿ 5 ಸ್ಟಾರ್ (ಪಂಚತಾರಾ) ಬ್ರಾಂಡ್ ನೊಂದಿಗೆ ಮಾರಾಟದ ಅನುಮತಿ ಪಡೆದಿದೆ. ಆದರ-ಸತ್ಕಾರದ ವಲಯದಲ್ಲಿ ಒಡೆತನ ಮತ್ತು ಆಡಳಿತ ನಿರ್ವಹಣೆ ಹೊಂದಿದೆ,ಅದರ ಉಪ ಉದ್ಯಮಗಳೆಂದರೆ ಫಾರ್ಚೂನ್ ಮತ್ತು ವೆಲ್ ಕಮ್ ಹೆರಿಟೇಜ್ ಬ್ರಾಂಡ್ಸ್ ಗಳು ಇದರಲ್ಲಿವೆ.
 • ಪೇಪರ್ ಬೋರ್ಡ್, ಸ್ಪೆಶಿಯಾಲಿಟಿ ಪೇಪರ್ (ವಿಶಿಷ್ಟ ಕಾಗದ ಮಾದರಿ), ರೇಖಾಚಿತ್ರದ ಗ್ರಾಫಿಕ್ ಮತ್ತು ಇನ್ನಿತರ ಕಾಗದ ಉದ್ಯಮ;
 • ಪ್ಯಾಕೇಜಿಂಗ್ ಮತ್ತು ಮುದ್ರಣಗಳನ್ನು ಅಂತರರಾಷ್ಟ್ರೀಯ ಮತ್ತು ಭಾರತೀಯ ಗ್ರಾಹಕರ ಸಲುವಾಗಿ ವಿಭಿನ್ನ ಮಾದರಿಗಳನ್ನು ಕೊಡ ಮಾಡಿದೆ.
 • ಇನ್ ಫೊಟೆಕ್ (ವಹಿವಾಟಿನ ಅದರ ಸಂಪೂರ್ಣ ಒಡೆತನದ-ಸಂಪೂರ್ಣವಾದ ಉಪ ಸಂಸ್ಥೆ ಐಟಿಸಿ ಇನ್ ಫೊಟೆಕ್ ಇಂಡಿಯಾ ಲಿಮಿಟೆದ್ ಇದು SEI CMM ದರ್ಜೆಯ 5 ಕಂಪನಿಯಾಗಿದೆ.)

ಗ್ರಾಮೀಣ ಪ್ರದೇಶದ ಪ್ರಗತಿಯೆಡೆಗಿನ ಹೆಜ್ಜೆ[ಬದಲಾಯಿಸಿ]

ಐಟಿಸಿಯ ಕೃಷಿ-ವಹಿವಾಟು ಭಾರತದಲ್ಲೇ ಎರಡನೆಯ ಅತಿ ದೊಡ್ಡ ಪ್ರಮಾಣದ ಕೃಷಿ ಉತ್ಪನ್ನಗಳ ರಫ್ತು ವಹಿವಾಟಿನ ವಲಯವಾಗಿದೆ. ಐಟಿಸಿಯು ಭಾರತದ ಅತಿ ದೊಡ್ಡ ಮೊತ್ತದ ವಿದೇಶೀ ವಿನಿಮಯ ಗಳಿಸುವ ಸಂಸ್ಥೆಯಾಗಿದೆ.(ಕಳೆದ ದಶಕದಲ್ಲಿ US $ 2 ಬಿಲಿಯನ್ ಮೊತ್ತ) ಕಂಪನಿಯ 'ಇ-ಚೌಪಲ್ ಎಂಬ (ಹಿಂದಿಯಲ್ಲಿ ಚೌಪಲ್ ಎಂದರೆ ಪಂಚಾಯತಿ ಕಟ್ಟೆ,ಗ್ರಾಮೀಣರು ಒಟ್ಟು ಸೇರಿ ಚರ್ಚಿಸುವ ವೇದಿಕೆ)ಇಂಟರ್ ನೆಟ್ ಆಧರಿತ ಬೇಸಾಯ ಉದ್ಯಮದ ಸಂಸ್ಕರಣಾ ವಿಭಾಗವು ಅದರ ಆರಂಭದಲ್ಲೇ ಕ್ರಾಂತಿಯನ್ನು ಮಾಡಿದೆ.ಭಾರತದ ಕೃಷಿ ವಲಯವನ್ನು ಸಶಕ್ತಗೊಳಿಸುವಲ್ಲಿ ಅದು ಹೆಚ್ಚು ನಿರತವಾಗಿದೆ. ಇಂತಹ ಕೃಷಿಸೂತ್ರದ ನಿಯಮಗಳಿಂದಾಗುವ ಕ್ರಾಂತಿಕಾರಿ ಬದಲಾವಣೆಗಳ ಬಗ್ಗೆ ವಿಶೇಷ ಅಧ್ಯಯನವು ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ನಡೆಯುತ್ತಿದೆ.ಇದರ ಪ್ರಯೋಗಶೀಲತೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಐಟಿಸಿ ಸಂಪರ್ಕ ಜಾಲ ನಿರ್ಮಿಸಲು, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅದು ಮುಂದಾಗಿದೆ.ಈ ಮೂಲಕ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಲು ಕಂಪನಿ ಶ್ರಮವಹಿಸುತ್ತದೆ. ಗ್ರಾಮೀಣ ವಲಯದ ಕೃಷಿ ಕ್ಷೇತ್ರದ ರೈತಾಪಿ ವರ್ಗಗಳಲ್ಲಿ ಕಂಪನಿಯು ಕಂಪ್ಯುಟರ್ ಗಳ ಸೇವೆಯನ್ನು ವಿಸ್ತರಿಸಿದೆ.ಇ-ಚೌಪಲ್ಸ್ ಎಂಬ ಚರ್ಚಾ ಕಟ್ಟೆಯು ಸಾಮಾಜಿಕ ಮತ್ತು ಪರಸ್ಪರ ಮಾಹಿತಿ ಹಂಚಿಕೊಳ್ಳುವ ಕೇಂದ್ರವಾಗಿದೆ.(ಹಿಂದಿಯಲ್ಲಿ ಚೌಪಲ್ ಎಂದರೆ ಪಂಚಾಯತಿ ಕಟ್ಟೆ,ಗ್ರಾಮೀಣರು ಒಟ್ಟು ಸೇರಿ ಚರ್ಚಿಸುವ ವೇದಿಕೆ) ತನ್ನ ಉತ್ಪಾದನೆಗಳ ಮರುರಚನೆ,ಅವುಗಳಿಗೆ ಮರುರೂಪ ನೀಡಲು ಅದು ತನ್ನ ಆಹಾರ ಧಾನ್ಯ ಶೇಖರಣೆಗಾಗಿ ರೈತ-ಸ್ನೇಹಿ ಹೊಸ ಸೂತ್ರಗಳನ್ನು ಜಾರಿಗೆ ತಂದು ಕ್ರಾಂತಿ ನಡೆಸಿತು.ಸೊಯಾ,ತಂಬಾಕು,ಗೋಧಿ,ಸೀಗಡಿ ಮತ್ತು ಇನ್ನಿತರ ಬೆಳೆಗಳ ವಿಧಾನಗಳನ್ನು ಗ್ರಾಮೀಣ ವಲಯದಲ್ಲಿ ಅನುಷ್ಟಾನ ಮಾಡಲು ಕಂಪನಿ ಶ್ರಮವಹಿಸುತ್ತಿದೆ.ಈ ಕಾಮರ್ಸ್ ಮೂಲಕ ಒಂದು ಪ್ರತ್ಯೇಕ ವೇದಿಕೆ ನಿರ್ಮಿಸಿ ಅದು ಗ್ರಾಮೀಣರ ಮೂಲ ಅಗತ್ಯಗಳ ಬಗ್ಗೆ ಸ್ವಯಂಸ್ಪೂರ್ತಿಯಿಂದ ಕಾರ್ಯನಿರತವಾಗಿದೆ. ಅದರ ಇ-ಚೌಪಲ್ ಪದ್ದತಿಯು ಗ್ರಾಮೀಣ ವಲಯವನ್ನು ರೂಪಾಂತರಿಸಲು ತನ್ನದೇ ಆದ ರೀತಿಯಲ್ಲಿ ವರ್ಗೀಕರಣ ಮಾಡಿದೆ.ಗ್ರಾಮೀಣ ಪ್ರದೇಶವನ್ನು ಪ್ರತ್ಯೇಕಿಸುವ ಪದ್ದತಿಯನ್ನು ತೆಗೆದು ಅದನ್ನೂ ಸಮಗ್ರತೆಯಲ್ಲಿ ಒಂದಾಗಿಸಲು ಮಂದಾಗಿದೆ.ರೈತರಿಗೆ ಹೆಚ್ಚು ಪಾರದರ್ಶಕತೆ ಮತ್ತು ಉತ್ಪನ್ನಗಳ ಇಳುವರಿಯಲ್ಲಿನ ಸುಧಾರಣೆ ಮೂಲಕ ಅವರನ್ನು ಉತ್ತಮ ಆದಾಯದ ಪರಿಧಿಯಲ್ಲಿ ತರಲಾಗಿದೆ.

ಕಾರ್ಪೊರೇಟ್ ಲೋಕೋಪಕಾರಿ ಕಾರ್ಯ[ಬದಲಾಯಿಸಿ]

ಐಟಿಸಿಯ ಇಚೌಪಲ್ ವೇದಿಕೆಗಳು ಮಾಹಿತಿ ತಂತ್ರಜ್ಞಾನವನ್ನು ಬಳಸಿ ಸಣ್ಣ-ವ್ಯಾಪ್ತಿಯ ಮಾರುಕಟ್ಟೆಗಳನ್ನು ಭಾರತದ ಕೃಷಿ ಉತ್ಪನ್ನಗಳಿಗೆ ಅನುಕೂಲವಾಗುವಂತೆ ದೊರಕಿಸುತ್ತವೆ.ಅಲ್ಲದೇ ಸಣ್ಣ ಹಿಡುವಳಿದಾರರಾದ ರೈತರಿಗೆ ಮಾರುಕಟ್ಟೆ ಸೌಕರ್ಯ ದೊರಕಿಸುವುದು ಇಲ್ಲಿನ ಮುಖ್ಯ ಉದ್ದೇಶವಾಗಿದೆ. ಜುಲೈ 2010 ರ ವೇಳೆಗೆ ಸುಮಾರು 10 ರಾಜ್ಯಗಳ 40,000 ಹಳ್ಳಿಗಳಲ್ಲಿನ ಅಂದಾಜು 4 ದಶಲಕ್ಷ ರೈತರರು ಈ ಇಚೌಪಲ್ ಸೇವಾಸೌಲಭ್ಯ ಪಡೆಯುತ್ತಿದ್ದಾರೆ. ಇಂಟರ್ ನೆಟ್ ನ ಉಚಿತ ಸೇವೆ ಕೂಡಾ ಗ್ರಾಮೀಣ ಭಾರತದ ರೈತರನ್ನು ವಿಶ್ವದ ವಿದ್ಯಮಾನಗಳನ್ನು ಗಮನಿಸುವಂತೆ ವಿಶಾಲವಾದ ಮಟ್ಟದಲ್ಲಿ ನೆರವಾಗಲಿದೆ. ಐಟಿಸಿ ಎಚೌಪಲ್ ಇ-ಚೌಪಲ್ Archived 2021-03-30 ವೇಬ್ಯಾಕ್ ಮೆಷಿನ್ ನಲ್ಲಿ. ವೇದಿಕೆಯು ಸದ್ಯ ಸಂಪನ್ಮೂಲ ಅಭಿವೃದ್ಧಿಯ ಉತ್ತಮ ಕೇಂದ್ರವೆಂದು ಪರಿಗಣಿಸಲಾಗಿದೆ. ಅದರ ಸಂಪನ್ಮೂಲ ಅಭಿವೃದ್ಧಿ ಬಗ್ಗೆ ಮುಂಚೂಣಿಯಲ್ಲಿರುವ ಆರಂಭಿಕ ಯೋಜನೆಗಳ ಮೂಲಕ ಪರೀಕ್ಷೆಗೊಳಪಡಿಲಾಗುತ್ತದೆ.ಈ ಪೈಲೆಟ್ ಯೋಜನೆಗಳು ಆರೋಗ್ಯ ಸುರಕ್ಷೆ,ಶಿಕ್ಷಣ ಸೇವೆಗಳು,ಜಲಸಂಪನ್ಮೂಲ ಆಡಳಿತ ನಿರ್ವಹಣೆ ಮತ್ತು ಪಶು ಆರೋಗ್ಯದ ನಿರ್ವಹಣೆಯನ್ನೂ ಒಳಗೊಂಡಿದ್ದು, ಸರಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಮೂಲಕ ಮಾಡಲಾಗುತ್ತದೆ. ಕಂಪನಿಯು ಯಾವಾಗ ಕ್ಲಾಸ್ ಮೇಟ್ ಎಂಬ್ ಶಾಲಾ ನೋಟ್ ಪುಸ್ತಕಗಳ ಮಾರಾಟ ಮಾಡಲು ಆರಂಭಿಸಿತೋ ಆಗ ಪ್ರತಿ ನೋಟ್ ಪುಸ್ತಕದ ಮಾರಾಟದಿಂದ 1 ರೂಪಾಯಿಯನ್ನು ಉಳಿಸಿ ಬಡಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಮುಂದಾಯಿತು. ಕ್ಲಾಸ್ ಮೇಟ್, ಯೋಜನೆಯು ಕ್ಲಾಸ್ ಮೇಟ್ ಐಡಿಯಾಸ್ ಫಾರ್ ಇಂಡಿಯಾ ಚಾಲೇಂಜ್ Archived 2010-09-04 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ ಹೆಸರಿನ ಕಾರ್ಯಕ್ರಮದ ಅಭಿಯಾನದೊಂದಿಗೆ ಅದನ್ನು ಸವಾಲಾಗಿ ಸ್ವೀಕರಿಸಿತು. ಈ ಕಾರ್ಯಕ್ರಮವು ಕಂಪನಿಯ ಶತಮಾನೋತ್ಸವದ ಆಚರಣೆಯ ದ್ಯೋತಕವಾಗಿತ್ತು.[೩] ದೇಶದ-ಉದ್ದಗಲಕ್ಕೂ ಯುವಜನರನ್ನು ಹೊಸ ಸುಧಾರಿತ ವಿಚಾರಗಳಿಗಾಗಿ ಪ್ರೊತ್ಸಾಹಿಸಿ ಆ ಮೂಲಕ ಭಾರತವನ್ನು ಅಭಿವೃದ್ಧಿಪಡಿಸುವ ಪ್ರಯತ್ನವೇ ಇದರ ಗುರಿ. ಕ್ಲಾಸ್ ಮೇಟ್ ಐಡಿಯಾಸ್ ಫಾರ್ ಇಂಡಿಯಾ ಚಾಲೇಂಜ್ ಅಭಿಯಾನವು 30 ನಗರಗಳಲ್ಲಿನ 25 ಲಕ್ಷ ವಿದ್ಯಾರ್ಥಿಗಳಿಗೆ ಮತ್ತು 500 ಶಾಲೆಗಳು ಹಾಗು 200 ಕಾಲೇಜಿಗೆ ಇದನ್ನು ತಲುಪಿಸುವುದೇ ಪ್ರಮುಖ ಉದ್ದೇಶವಾಗಿದೆ.[೪]

ಫೊರ್ಬ್ಸ್ ರಾಂಕಿಂಗ್ (ಫೊರ್ಬ್ಸ್ ಪಟ್ಟಿಯಲ್ಲಿನ ಸ್ಥಾನಮಾನ)[ಬದಲಾಯಿಸಿ]

ಐಟಿಸಿಯು ಫೊರ್ಬ್ಸ್ ಗ್ಲೊಬಲ್ 2000 ನಲ್ಲಿ ವಿಶ್ವದಾದ್ಯಂತ್ಯದ 1256 ಅನುಕ್ರಮದ ಪಟ್ಟಿಯಲ್ಲಿ ತನ್ನ ಸ್ಥಾನ ಪಡೆದುಕೊಂಡಿದೆ.[೫] ಐಟಿಸಿ ಒಂದೇ ಭಾರತದ FMCG ಕಂಪನಿಯಾಗಿದ್ದು ಅದು ಫೊರ್ಬ್ಸ್ ನ ಗ್ಲೊಬಲ್ 2000 ನಲ್ಲಿ 2009 ರಲ್ಲಿ 987 ನೆಯ ಸ್ಥಾನ ಪಡೆದುಕೊಂಡಿದೆ.[೬] ಐಟಿಸಿ ಕೂಡ ಫೊರ್ಬ್ಸ್ ನ ವರ್ಲ್ಡ್ಸ್ ನ (ಫೊರ್ಬ್ಸ್ ವಿಶ್ವಮಟ್ಟದ ಪಟ್ಟಿ)ಅತ್ಯಂತ ಜನಪ್ರಿಯ ಕಂಪನಿಗಳ ಪಟ್ಟಿಯಲ್ಲಿ 95 ನೆಯ ಸ್ಥಾನದಲ್ಲಿದೆ.[೭]

ಜಾಗತಿಕ ಮತ್ತು ಇನ್ನಿತರ ಗೌರವಗಳು[ಬದಲಾಯಿಸಿ]

 • ಐಟಿಸಿಯು ಭಾರತದಿಂದ ಪ್ರಥಮ ಮತ್ತು ವಿಶ್ವದ 10 ಕಂಪನಿಗಳಲ್ಲಿ ತನ್ನ ಅತ್ಯುತ್ತಮ ವಹಿವಾಟಿನ ನಿರಂತರತೆಗೆ ಹೆಸರಾಗಿದೆ ಎಂದು ವರದಿಯಾಗಿದೆ.(ಎಂದರೆ ಅತ್ಯುನ್ನತ A+ ಶ್ರೇಣಿಯಲ್ಲಿದೆ)ಇದು ಪೂರ್ವದ ನೆದರ್ ಲ್ಯಾಂಡ್ ಮೂಲದ ಗ್ಲೊಬಲ್ ರಿಪೊರ್ಟಿಂಗ್ ಇನಿಶಿಯೇಟಿವ್(GRI)ನ G3 ಮಾರ್ಗದರ್ಶಿ ಸೂತ್ರಗಳನ್ನು ಆಧರಿಸಿ ಇದನ್ನು ಬಿಡುಗಡೆ ಮಾಡಿದೆ.ಇದು UN ಮೂಲದ ಬಹುಮುಖದ ಶೇರುಗಳನ್ನು ಪಡೆದು ಅಂತರರಾಷ್ಟ್ರೀಯ ಮಟ್ಟದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ.ಇದನ್ನು ಜಾಗತಿಕವಾಗಿ ಪರಿಗಣನೆಯ ಸಸ್ಟೇನ್ಯಾಬಿಲಿಟಿ ರಿಪೊರ್ಟಿಂಗ್ ಗೈಡ್ ಲೈನ್ಸ್ ಮೇಲೆ ಸಿದ್ದಪಡಿಸಲಾಗುತ್ತದೆ.
 • ಅತ್ಯಂತ ಗೌರವಾನ್ವಿತ ಡೆವಲ್ಪ್ಮೆಂಟ್ ಗೇಟ್ ವೇ ಅವಾರ್ಡ್ ಪಡೆಯುವಲ್ಲಿ ಐಟಿಸಿ ಕಂಪನಿಯು ಮೊದಲ ಭಾರತೀಯ ಜಗತ್ತಿನ ಎರಡನೆಯ ಕಂಪನಿಯಾಗಿದೆ. ಐಟಿಸಿ ಕಂಪನಿಯು 2005 ರ ಸಾಲಿನಲ್ಲಿ ತನ್ನ ಇಚೌಪಾಲ್ ಅಭಿಯಾನದ ಯಶಸ್ವಿಗಾಗಿ $100,000 ಪ್ರಶಸ್ತಿಯನ್ನು ಪಡೆಯಿತು.ಗ್ರಾಮೀಣ ಭಾರತದಲ್ಲಿ ತನ್ನ ಭರವಸೆಪೂರ್ಣ ಕಾರ್ಯಕ್ರಮಗಳ ಕ್ರಾಂತಿಕಾರಕ ರೀತಿಯ ಅನುಷ್ಠಾನಕ್ಕಾಗಿ ಈ ಪುರಸ್ಕಾರ ದೊರೆಯಿತು. ಐಟಿಸಿಯ ಇ-ಚೌಪಲ್ ಯೋಜನೆಯನ್ನು ಗುರುತಿಸಿ ದಿ ಡೆವಲ್ಪ್ ಮೆಂಟ್ ಗೇಟ್ ವೇ ಅವಾರ್ಡ್ ನ್ನು ನೀಡಲಾಗಿದೆ.ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನಗಳನ್ನು (ICT)ಗ್ರಾಮೀಣ ಮಟ್ಟಕ್ಕೆ ತಲುಪಿಸಿದ ಕೊಡುಗೆಗಾಗಿ ಇದನ್ನು 10ವರ್ಷಗಳಿಂದ ಪ್ರದಾನ ಮಾಡಲಾಗುತ್ತಿದೆ. ಐಟಿಸಿಯ ಇ-ಚೌಪಲ್ ವೇದಿಕೆಯು ತನ್ನ ಅಭಿವೃದ್ಧಿಪರ ಕೊಡುಗೆಗಳನ್ನು ಆದ್ಯತಾವಲಯಗಳಾದ ಬಡತನ ನಿರ್ಮೂಲನೆ,ಅದರ ಉತ್ತಮ ಮಾನದಂಡ ಮತ್ತು ಪುನಾರವರ್ತನೆ,ನಿರಂತರತೆ,ಸಹಿಷ್ಣುತೆ ಹಾಗು ಪಾರದರ್ಶಕತೆಗಾಗಿ ಈ ಪ್ರಶಸ್ತಿ ಪಡೆಯುತ್ತಿದೆ.
 • ಐಟಿಸಿಯು ಆರಂಭಿಕ ಉದ್ಘಾಟನಾ ಮಟ್ಟದ 'ವರ್ಲ್ಸ್ ಬಿಸಿನೆಸ್ ಅವಾರ್ಡ್'ವಿಶ್ವಾದ್ಯಾಂತ ಬಿಜಿನೆಸ್ ಅವಾರ್ಡ್ ಇದನ್ನು ಕಂಪನಿಯು ಗ್ರಾಮೀಣ ವಲಯದ ಜನರಿಗೆ ಬದುಕಿಗೆ ಮಾರ್ಗ ಕಲ್ಪಿಸಿದ್ದಕ್ಕಾಗಿ ಈ ಮಾನ್ಯತೆ ದೊರಕಿದೆ.ಇದರಿಂದ ಭಾರತದ ರೈತಾಪಿ ವಲಯದ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಅದು ತನ್ನ ಕಾರ್ಯ ನಿರ್ವಹಿಸಿದೆ. ಈ ಪ್ರಶಸ್ತಿಯನ್ನು ಜಂಟಿಯಾಗಿ ಯುನೈಟೆಡ್ ನೇಶನ್ಸ್ ಡೆವಲ್ಪ್ ಮೆಂಟ್ ಪ್ರೊಗ್ರಾಮ್(UNDP), ಇಂಟರ್ ನ್ಯಾಶನಲ್ ಚೇಂಬರ್ ಆಫ್ ಕಾಮರ್ಸ್(ICC) ಮತ್ತು HRH ಪ್ರಿನ್ಸ್ ಆಫ್ ವೇಲ್ಸ್ ಇಂಟರ್ ನ್ಯಾಶನಲ್ ಬಿಜಿನೆಸ್ ಲೀಡರ್ಸ್ ಫೊರಮ್ (IBLF) ಗಳು ಸ್ಥಾಪಿಸಿವೆ.
 • ಐಟಿಸಿ ಕಂಪನಿಯು 2007 ರಲ್ಲಿ ಅನ್ಯುವಲ್ FICCI ಔಟ್ ಸ್ಟಾಂಡಿಂಗ್ ವಿಜನ್ ಕಾರ್ಪೊರೇಟ್ ಟ್ರಿಪಲ್ ಇಂಪ್ಯಾಕ್ಟ್ ಅವಾರ್ಡ್ ನ್ನು ಗ್ರಾಮೀಣ ಪ್ರದೇಶದಲ್ಲಿನ ತನ್ನ ಆರ್ಥಿಕದ ವಲಯದ ನಿರ್ಮಾಣ,ಸಾಮಾಜಿಕ ಮತ್ತು ದೇಶದ ನೈಸರ್ಗಿಕ ಬಂಡವಾಳ ಭದ್ರತೆ ಹೀಗೆ ಮೂರು ವಿಧದಲ್ಲಿ ತನ್ನ ಕೊಡುಗೆ ಸಲ್ಲಿಸಿದ್ದರಿಂದ ಈ ಅವಾರ್ಡ್ ಸಿಕ್ಕಿತು.
 • ಐಟಿಸಿಯು ಗೊಲ್ಡನ್ ಪೀಕಾಕ್ ಅವಾರ್ಡ್ಸ್ ನ್ನು 'ಕಾರ್ಪೊರೇಟ್ ಸೊಸಿಯಲ್ ರಿಸ್ಪಾನ್ಸಿಬಿಲಿಟಿ(ಏಶಿಯಾ)ಗಾಗಿ 2007 ರಲ್ಲಿ ಪಡೆದಿದೆ.ಅದು 2005 ರಲ್ಲಿ CSR ಎಮರ್ಜಿಂಗ್ ಎಕಾನಾಮಿಕ್ಸ್ 2005'ಮತ್ತು ಎಕ್ಸಲೆನ್ಸ್ ಇನ್ ಕಾರ್ಪೊರೇಟ್ ಗವರ್ನನನ್ಸ್'ಎಂಬ ಪ್ರಶಸ್ತಿಯನ್ನು ಅದೇ ವರ್ಷ ಪಡೆಯಿತು. ಈ ಪ್ರಶಸ್ತಿಗಳನ್ನು ನವದೆಹಲಿಯ ಇನ್ ಸ್ಟಿಟ್ಯುಟ್ ಆಫ್ ಡೈರೆಕಟರ್ಸ್ ಇದು ವರ್ಲ್ಡ್ ಕೌನ್ಸಿಲ್ ಫಾರ್ ಕಾರ್ಪೊರೇಟ್ ಗವರ್ನನ್ಸ್ ಅಂಡ್ ಸೆಂಟರ್ ಫಾರ್ ಗವರ್ನನ್ಸ್ ಇತ್ಯಾದಿಗಳಲ್ಲಿ ಅದು ಭಾಜನವಾಗಿದೆ.
 • ಐಟಿಸಿ ಹೊಟೇಲ್ ರಾಯಲ್ ಗಾರ್ಡೆನಿಯಾ,ಬೆಂಗಲೂರು,ಇದು ಮೊದಲ ಭಾರತೀಯ ಹೊಟೇಲ್ ಮತ್ತು ವಿಶ್ವದ ಅತಿ ದೊಡ್ಡ ಹೊಟೇಲ್ ಆಗಿದ್ದು ಇದು LEED ಪ್ಲಾಟಿನಮ್ ರೇಟಿಂಗ್-ಜಾಗತಿಕವಾಗಿ ಅತಿ ದೊಡ್ಡ ಹಸಿರು ಕಟ್ಟಡವೆಂದು ಪ್ರಮಾಣೀಕೃತವಾಗಿದೆ.
 • ದಿ ಸ್ಟಾಕ್ ಹೊಲ್ಮ್ ಚಾಲೇಂಜ್ 2006 ಇ-ಚೌಪಲ್ ಆರಂಭಿಕ ಅವಧಿ. ಗ್ರಾಮೀಣ ಸಮುದಾಯಗಳ ಆರ್ಥಿಕತೆ ಅಭಿವೃದ್ಧಿಗಾಗಿ ಮಾಹಿತಿ ತಂತ್ರಜ್ಞಾನದ ಬಳಕೆಗಾಗಿ ಈ ಪ್ರಶಸ್ತಿ.
 • ಇ-ಚೌಪಲ್ ಮೂಲಕ ಗ್ರಾಮೀಣ ವಲಯದಲ್ಲಿ ಕೃಷಿ ಮಾರುಕಟ್ಟೆಗಾಗಿ ಯುನೈಟೆಡ್ ಇಂಡಸ್ಟ್ರಿಯಲ್ ಡೆವಲ್ಪ್ ಮೆಂಟ್ ಆರ್ಗನೈಜೇಶನ್ (UNIDO)ಅವಾರ್ಡನ್ನು ನೀಡಲಾಯಿತು.ಇದನ್ನು ಶೇರಿಂಗ್ ಇನ್ನೊವೇಟಿವ್ ಅಗ್ರಿಬಿಜಿನೆಸ್ ಸೊಲುಶನ್ಸ್ 2008 ಇದನ್ನು ಕೈರೊದಲ್ಲಿ ಐಟಿಸಿಯ ಕೃಷಿ ಕ್ಷೇತ್ರದಲ್ಲಿನ ಮಾದರಿ ಸೇವೆಗಾಗಿ ನೀಡಲಾಗಿದೆ.
 • UNESCO ದ ವಾಟರ್ ಪ್ರಾಕ್ಟೀಸ್ ದಿಂದ ದಿ ಕಾರ್ಪೊರೇಟ್ ಸೊಸಿಯಲ್ ರೆಸ್ಪಾನ್ಸಿಬಿಲಿಟಿ ಕ್ರೌನ್ ಅವಾರ್ಡ್ ನ್ನು ಭಾರತದಲ್ಲಿನ ನೀರಿನ ಸದ್ಬಳಕೆ ಮತ್ತು ಜಲನಿರ್ವಹಣೆಗಾಗಿ ನೀಡಲಾಗಿದೆ. ಅದೇ ರೀತಿ ಐಟಿಸಿಯು ನ್ಯಾಶನಲ್ ಅವಾರ್ಡ್ ನ್ನು ವಾಟರ್ ಮ್ಯಾನೇಜ್ ಮೆಂಟ್ ಗಾಗಿ 2007 ರಲ್ಲಿ ದೊರಕಿಸಿಕೊಂಡಿತು.'ಬಿಯಾಂಡ್ ದಿ ಫೆನ್ಸ್'ವರ್ಗದಡಿ ಸಮರ್ಥ ಜಲನಿರ್ವಹಣೆಗೆ ಪಡೆದರೆ CII ಶೊರಬ್ಜಿ ಗೊದ್ರೆಜ್ ಗ್ರೀನ್ ಬಿಜಿನೆಸ್ ಸೆಂಟರ್ ನಿಂದ ಅದರ ಜಲ ಮತ್ತು ಜಲಾನಯನ ಆಡಳಿತ ನಿರ್ವಹಣೆ ಮತ್ತು ಅನುಷ್ಟಾನಕ್ಕೆ ನೀಡಲಾಯಿತು.
 • ಏಶಿಯನ್ ಇನ್ ಸ್ಟಿಟ್ಯುಟ್ ಆಫ್ ಮ್ಯಾನೇಜ್ ಮೆಂಟ್,ಅದರ ಜಲಾಯನ ಅಭಿವೃದ್ಧಿ ಕಾರ್ಯಗಳಿಗಾಗಿ ಏಶಿಯನ್ CSR ಅವಾರ್ಡ್ ನ್ನು 2007 ರಲ್ಲಿ ನೀಡಿದ್ದು ಅದರ ಪರಿಸರೀಯ ಉತ್ತಮ ಮಾದರಿಯ ಕಾರ್ಯಚಟುವಟಿಕೆಗಾಗಿ ಆಯ್ಕೆ ಮಾಡಿತು. ಈ ಬಹುಮಾನವು ಏಶಿಯನ್ ಕಂಪನಿಗಳ ಆವಿಷ್ಕಾರ ಕಾರ್ಯ ಮತ್ತು ವಿಶ್ವ ಮಟ್ಟದ ಯೋಜನೆಗಳ ಅನುಷ್ಟಾನಗೊಳಿಸಿದ್ದಕ್ಕಾಗಿ ಕೊಡಮಾಡಲಾಯಿತು. ಏಶಿಯಾ ಪ್ಯಾಸಿಫಿಕ್ ಫೊರಮ್ ನಿಂದ ಪರಸರೀಯ ಮತ್ತು ಅಭಿವೃದ್ಧಿಪರ ಕೆಲಸಗಳಿಗಾಗಿ 2007 ರಲ್ಲಿ ರ್ಯುಯೊಟಾರೊ ಹಾಶಿಮೊಟೊ ಇನ್ಸೆಂಟಿವ್ ಪ್ರೈಜ್ ನ್ನು ನೀಡಲಾಯಿತು. ಏಶಿಯಾ-ಪ್ಯಾಸಿಫಿಕ್ ಪ್ರದೇಶದಲ್ಲಿ ಮಾಹಿತಿ ಸಂಗ್ರಹ ಮತ್ತು ವ್ಯವಸ್ಥಿತ ರೂಪದಲ್ಲಿ ಬಳಸುವ ಕಾರ್ಯಕ್ಕಾಗಿ ಅಲ್ಲದೇ ವಹಿವಾಟು,ವ್ಯಾಪಾರ ವಲಯದಲ್ಲಿ ನಿರಂತರತೆ ಕಾಪಾಡುವುದಕ್ಕೆ ನೀಡಲಾಗುತ್ತದೆ.
 • ಸಾಮಾಜಿಕ ಕಳಕಳಿಯ ಕಾರ್ಯ ಮಾಡುವ ಕಂಪನಿಗಳಿಗೆ ಅವುಗಳ ಕಾರ್ಪೊರೇಟ್ ಸಾಮಾಜಿಕ ಪ್ರಜ್ಞೆ,ಜವಾಬ್ದಾರಿಯನ್ನು ಗುರುತಿಸಿ ದಿ ರೀಡರ್ಸ್ ಡೈಜೆಸ್ಟ್ ಪೆಗಾಸಸ್ ಅವಾರ್ಡ್ ನ್ನು ನೀಡಿ ಗೌರವಿಸಲಾಯಿತು.
 • ಭಾರತದ 7 ರಾಜ್ಯಗಳಲ್ಲಿ ಸಮಗ್ರ ನೀರಾವರಿ ಅಭಿವೃದ್ದಿಗಾಗಿ ಜಲಾನಯನಗಳ ನಿರ್ವಹಣಾ ಯೋಜನೆಗಳಡಿ ದಿ ಕಾರ್ಪೊರೇಟ್ ಅವಾರ್ಡ್ ಫಾರ್ ಸೊಸಿಯಲ್ ರಿಸ್ಪಾನ್ಸಿಬಿಲಿಟಿ 2008 ರ ಈ ಪ್ರಶಸ್ತಿಯನ್ನು ದಿ ಎನರ್ಜಿ ಅಂಡ್ ರಿಸೌರ್ಸಿಸ್ ಇನ್ ಸ್ಟಿಟ್ಯುಟ್ (TERI)ನೀಡಿತು. ಕಂಪನಿಯು ತನ್ನ ಇ-ಚೌಪಾಲ್ ಚಟುವಟಿಕೆಗಳನ್ನು ಆರಂಭಿಸಿದ ಸಾಧನೆಗಾಗಿ 2004 ರಲ್ಲಿ ಕಂಪನಿ ಪ್ರಶಸ್ತಿಗೆ ಪಾತ್ರವಾಯಿತು. ಈ ಬಹುಮಾನವು ನಿರಂತರ ಸಾಧನೆ ಮತ್ತು ಅಭಿವೃದ್ಧಿಪರ ಕಾರ್ಯಗಳಿಗಾಗಿ ಮತ್ತು ತನ್ನ ಜವಾಬ್ದಾರಿಯುತ ಪರವಾದ ಕಾರ್ಪೊರೇಟ್ ವಲಯವನ್ನು ಮುನ್ನಡೆಸಿದ್ದಕ್ಕಾಗಿ ಕೊಡಮಾಡಲಾಗಿದೆ.
 • ಇನ್ ಫೊಸಿಸ್ ಟೆಕ್ನಾಲಜೀಸ್ ಅಂಡ್ ವಾರ್ಟನ್ ಸ್ಕೂಲ್ ಆಫ್ ದಿ ಯುನ್ವರ್ಸಿಟಿ ಆಫ್ ಪೆನ್ ಸಿಲ್ವೇನಿಯಾ ಜಂಟಿಯಾಗಿ ಸ್ಥಾಪಿಸಿದ 'ಎಂಟರ್ ಪ್ರೈಜ್ ಬಿಜಿನೆಸ್ ಟ್ರಾನ್ಸ್ ಫಾರ್ಮೇಶನ್ ಅವಾರ್ಡ್ ನ್ನು ಏಸಿಯಾ ಪ್ಯಾಸಿಫಿಕ್ ಗಾಗಿ (Apac)ಅದರ ಇ-ಚೌಪಲ್ ಮೂಲಕ ಉತ್ತಮ ಸಂಪರ್ಕ ಸಾಧನೆಗಾಗಿ ನೀಡಿದ್ದು.
 • ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಟೈಮ್ಸ್ ಫೌಂಡೇಶನ್ ಅಂಡ್ ದಿ ನ್ಯಾಸ್ಕಾಮ್ ಫೌಂಡೇಶನ್ ಗಳು ಜಂಟಿಯಾಗಿ ಸ್ಥಾಪಿಸಿದ ದಿ ಬೆಸ್ಟ್ ಕಾರ್ಪೊರೇಟ್ ಸೊಸಿಯಲ್ ರಿಸ್ಪೊನ್ಸಿಬಿಲಿಟಿ ಪ್ರಾಕ್ಟೀಸ್ ಅವಾರ್ಡ್ 2008 ನ್ನು ನೀಡಲಾಯಿತು.
 • ಕಿರುಕಳ ಮತ್ತು ಸರಕುಸಾಗಣೆಯ ವಿಭಾಗದಲ್ಲಿ 2008 ರಲ್ಲಿ ದಿ ನ್ಯಾಸ್ಕಾಮ್-CNBC IT ಯುಜರ್ ಅವಾರ್ಡ್ ನೀಡಲಾಗಿದೆ. ಕಂಪನಿಯು ತನ್ನ ಧನಾತ್ಮಕ ಕಾರ್ಯಚಟುವಟಿಕೆ ಮತ್ತು ಉತ್ತಮ ನಿಯಮಾವಳಿಗಳ ಅಳವಡಿಕೆ ಹಾಗು ಐಟಿ ತಂತ್ರಜ್ಞಾನವನ್ನು ಸಮಗ್ರ ವ್ಯಾಪಾರೀ ವಲಯಕ್ಕೆ ನೀಡಿದ್ದಕ್ಕಾಗಿ ಈ ಪ್ರಶಸ್ತಿಗೆ ಪಾತ್ರವಾಗಿದೆ. ಐಟಿಸಿಯು 2003ರಲ್ಲಿ ಸ್ಥಾಪಿತ, ನಾಸ್ಕಾಮ್ಸ್ ಬೆಸ್ಟ್ ಐಟಿ ಯುಜರ್ ಅವಾರ್ಡ್ ನ್ನು ಅದು ನಾಲ್ಕನೆಯ ಬಾರಿಗೆ ಪಡೆದುಕೊಂಡಿದೆ.
 • ಅತ್ಯುತ್ತಮ ಹಣಕಾಸು ವಹಿವಾಟಿನ ತನ್ನ ವಾರ್ಷಿಕ ವರದಿ ಮತ್ತು ಅಕೌಂಟಿಂಗ್ ಫೈನಾನ್ಸಿಯಲ್ ರಿಪೊರ್ಟಿಂಗ್ ಗಾಗಿ ದಿ ಇನ್ ಸ್ಟಿಟ್ಯುಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ ಅವಾರ್ಡ್ ನೀಡಲಾಗಿದೆ.'ಮ್ಯಾನ್ಯುಫೆಕ್ಚರಿಂಗ್ ಅಂಡ್ ಟ್ರೇಡಿಂಗ್ ಟ್ರೇಡಿಂಗ್ ಎಂಟರ್ ಪ್ರೈಜಿಸ್'ವರ್ಗದಡಿ ಈ ಪ್ರಶಸ್ತಿ ನೀಡಿದೆ.
 • ದಿ ಬಿಜಿನೆಸ್ ಟುಡೆ ಅವಾರ್ಡ್ ನ್ನು ಗ್ರಾಹಕ ವಸ್ತುಗಳ ಮಾರುಕಟ್ಟೆಯಲ್ಲಿ ಅತ್ಯುತ್ತಮ ಆಡಳಿತ ನಿರ್ವಹಿಸಿದ ಕಂಪನಿಯ ಉತ್ಕೃಷ್ಠ ಸೇವೆಗಾಗಿ ನೀಡಿದ್ದು.

ಉಲ್ಲೇಖಗಳು[ಬದಲಾಯಿಸಿ]

 1. "History and Evolution of ITC Limited". ITC Limited. Retrieved 2007-09-23.
 2. "ITC Personal Care Products".
 3. "ITC: Leading Multi-business conglomerate turns 100". Economic Times. 2010-08-24.
 4. "ITC launches Classmate Ideas challenge". Business Line. 2010-08-23.
 5. ITC shifts media account to Madison from Lintas Read more: ITC shifts media account to Madison from Lintas - The Times of India http://timesofindia.indiatimes.com/business/india-business/ITC-shifts-media-account-to-Madison-from-Lintas/articleshow/6772430.cms#ixzz14ViJTAT3
 6. "The Global 2000". Forbes. 2009-04-08.
 7. Kneale, Klaus (2009-05-06). "World's Most Reputable Companies: The Rankings". Forbes.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Portal