ಏಕತಳಿ ಸಂತಾನೋತ್ಪಾದನೆ

ವಿಕಿಪೀಡಿಯ ಇಂದ
Jump to navigation Jump to search

ಏಕತಳಿ ಸಂತಾನೋತ್ಪಾದನೆ: ಸಾಕು ಪ್ರಾಣಿ ಮತ್ತು ಕೃಷಿ ಉತ್ಪಾದನೆಯಲ್ಲಿ, ಹೆಚ್ಚು ಹಾಲು ನೀಡಬಲ್ಲ ಹಸು, ಉಣ್ಣೆ ಮತ್ತು ಒಳ್ಳೆಯ ಆಹಾರ ನೀಡಬಲ್ಲ ಕುರಿ, ಮೇಕೆ, ಹಂದಿ, ಕೋಳಿ ಹಾಗೂ ಅಪೇಕ್ಷಿತ ಗುಣಗಳ ಸಸ್ಯಗಳನ್ನು ಪಡೆಯಲು ನಡೆಸುವ ತಳಿ ಸಂವರ್ಧನಾ ವಿಧಾನ. ಸೂಕ್ತ ಜೀವಿಗಳ ಆಯ್ಕೆ ಮತ್ತು ಸಂಕರಣ ಈ ವಿಧಾನದಲ್ಲಿ ಬಳಸಲಾಗುವುದು. ಹೆಣ್ಣು ಸಂತತಿಯನ್ನು ತಂದೆಯೊಂದಿಗೇ, ಮತ್ತು ಗಂಡು ಸಂತತಿಯನ್ನು ತಾಯಿಯೊಂದಿಗೇ ಅಥವಾ ಸೂಕ್ತ ಜೀನುಗಳಿರುವ ಮೊದಲ ಪೀಳಿಗೆಯ ಸಸ್ಯ/ಪ್ರಾಣಿಯನ್ನು ಎರಡನೇ ಮತ್ತು ಮೂರನೇ ಪೀಳಿಗೆಗಳೊಂದಿಗೆ ತಳಿ ಎಬ್ಬಿಸುವ ಪ್ರಕ್ರಿಯೆ. ಈ ವಿಧಾನದಲ್ಲಿ ಪೀಳಿಗೆಯ ಸೂಕ್ತ ಲಕ್ಷಣಗಳೊಂದಿಗೆ ಸೂಕ್ತವಲ್ಲದ ಲಕ್ಷಣಗಳೂ ಹರಿದು ಬರುವುದರಿಂದ ಆಯ್ಕೆಯನ್ನು ಎಚ್ಚರವಹಿಸಿ ಮಾಡಬೇಕಾಗುವುದು. ತಳಿವಿಜ್ಞಾನ ಮತ್ತು ಕೋಶತಳಿವಿಜ್ಞಾನದ ತತ್ತ್ವಗಳ ಆಧಾರದ ಮೇಲೆ ತಳಿ ಎಬ್ಬಿಸುವುದರಿಂದ ಆಯ್ಕೆಯ ಪ್ರಕ್ರಿಯೆ ಕೆಲವೊಮ್ಮೆ ಸೂಕ್ತವಾಗಲಾರದು. ಇಂತಹ ಸಂತಾನೋತ್ಪಾದನೆ ಜೀವಿ ವೈವಿಧ್ಯಕ್ಕೆ ಅಡಚಣೆಯಾಗಬಹುದೆಂಬ ಸಂಶಯವೂ ಇದೆ.