ವಿಷಯಕ್ಕೆ ಹೋಗು

ಎಲೆಹಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಲೆಹಕ್ಕಿ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
ಸಿ.ಔರಿಫ್ರೋನ್ಸ್
Binomial name
ಕ್ಲೋರೊಪ್ಸಿಸ್ ಔರಿಫ್ರೋನ್ಸ್
Temminck, 1829
ಎಲೆಹಕ್ಕಿ

ಎಲೆಹಕ್ಕಿ (Gold fronted Leafbird) ಇದು ಭಾರತ, ಶ್ರೀಲಂಕಾ ಹಾಗೂ ದಕ್ಷಿಣ ಏಷಿಯಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಪಕ್ಷಿ. ಗೊರವಂಕಕ್ಕಿಂತ ಚಿಕ್ಕದಾದ ಗಿಳಿ ಹಸಿರು ಬಣ್ಣ, ಹಣೆ ಕೇಸರಿ ಮಿಶ್ರಿತ ಹಳದಿ, ಕೊಕ್ಕಿನ ಸುತ್ತ ನೇರಳೆ ಮಿಶ್ರಿತ ಕಪ್ಪು ಹಾಗೂ ಕಪ್ಪು ಚಿಕ್ಕ ಕೊಕ್ಕು ಇರುತ್ತದೆ. ಎಲೆಹಕ್ಕಿ ಗಳು ಹಿಂದೆ ಐರಿನಾಡೆ ಕುಟುಂಬದಲ್ಲಿ ಐಯೋರಗಳು ಮತ್ತು ಕಣ್ಣುಕುಕ್ಕುವ ನೀಲಿ-ಬಣ್ಣದ ಹಕ್ಕಿಗಳೊಂದಿಗೆ ವಿಂಗಡಿಸಲಾಗಿತ್ತು. ಪ್ರಸ್ತುತವಾಗಿ ವ್ಯಾಖ್ಯಾನಿಸಿದಂತೆ, ಎಲೆ ಹಕ್ಕಿ ಕುಟುಂಬವು ಕ್ಲೋರೋಪ್ಸಿಸ್ ಜಾತಿಯ ಹಕ್ಕಿಗಳೊಂದಿಗೆ ಏಕವರ್ಣವಾಗಿ ವಿಂಗಡಿಸಲಾಗಿದೆ.

ವೈಜ್ಞಾನಿಕ ಹೆಸರು

[ಬದಲಾಯಿಸಿ]

ಕ್ಲೋರೋಪ್ಸಿಸ್ ಅರಿಫ್ರಾನ್ಸ್ ಎಂಬುದು ಇದರ ವೈಜ್ಞಾನಿಕ ಹೆಸರು.ಸಂಸ್ಕೃತದಲ್ಲಿ ಪಕ್ಷಗುಪ್ತ,ಪತ್ರಗುಪ್ತ, ಎಂದೂ ಹಸಿರು ಪಿಕಳಾರ ಎಂದು ಸ್ಥಳೀಯವಾಗಿ ಕರೆಯುತ್ತಾರೆ.

ವಿವರಣೆ

[ಬದಲಾಯಿಸಿ]

ಎಲೆಹಕ್ಕಿಯ ಗಾತ್ರವು ಸುಮಾರು ೧೪ ರಿಂದ ೨೧ ಸೆಂ.ಮೀ. (೫.೫-೮.೩ ಅಂಗುಲ) ಮತ್ತು ೧೫ ರಿಂದ ೪೮ ಗ್ರಾಂ (೦.೫೩ - ೧.೬೯ ಔನ್ಸ್)[] ತೂಕ ಹೊಂದಿರುತ್ತದೆ. ಇವು ಬುಲ್‌ಬುಲ್ ಪಕ್ಷಿಗಳನ್ನು ಹೋಲುತ್ತವೆಯಾದರೂ, ಈ ಗುಂಪಿನ ಪಕ್ಷಿಗಳ ಬಣ್ಣವು ಗಾಢಬಣ್ಣದಿಂದ ಕೂಡಿರುತ್ತದೆ. ಅದರ ಹೆಸರೇ ಸೂಚಿಸುವಂತೆ ಅದರ ಮೈ ಹಸಿರು ಬಣ್ಣದಿಂದ ಕೂಡಿರುತ್ತದೆ. ಈ ಕುಟುಂಬದ ಪಕ್ಷಿಗಳ ಗಾಢಬಣ್ಣದಿಂದ ಅವುಗಳ ಲಿಂಗಭೇದ ಪ್ರಕಟವಾಗುತ್ತದೆ. ಈ ಲಿಂಗ ಭೇದವು ಎಲೆಹಕ್ಕಿಯ ವಿವಿಧ ಉಪಜಾತಿಗಳ ನಡುವೆ ಭಿನ್ನವಾಗಿರುತ್ತದೆ. ಉದಾಹರಣೆಗೆ ಒಂದೆಡೆ ಕಿತ್ತಳೆ ಹೊಟ್ಟೆಯ ಎಲೆ ಹಕ್ಕಿ( ಆರೆಂಜ್ ಬೆಲ್ಲೀಡ್ ಲೀಫ್ ಬರ್ಡ್ ಗಳ) ಲಿಂಗಭೇದ ಸುಲಭವಾಗಿ ಕಾಣಬಹುದಾಗಿದೆ. ಆದರೆ ಪಿಲಿಫಿನ್ಸ್ ಎಲೆ ಹಕ್ಕಿ ಯಾವುದೇ ಲಿಂಗಬೇದವನ್ನು (ಡೈಮಾರ್‌ಫಿಸಂ) ಪ್ರದರ್ಶಿಸುವುದಿಲ್ಲ. ಭಾರತದ ಎಲೆಹಕ್ಕಿಗಳಲ್ಲಿ ಲಿಂಗ ಭೇದವನ್ನು ಗುರುತಿಸುವುದು ಅದರ ಬಣ್ಣದಿಂದಲೇ. ಹಾಗೆಯೇ ಪ್ರತ್ಯೇಕವಾಗಿ ಗಂಡು ಪಕ್ಷಿಗಳಿಗೆ ತಲೆಯು ನೀಲಿ ಬಣ್ಣದಿಂದ ಕೂಡಿದ್ದು, ಮುಖದ ಮೇಲಿನ ಕಪ್ಪು ಬಣ್ಣ ಮುಖವಾಡದಂತೆ ಕಾಣುತ್ತದೆ. ಆದರೆ ಹೆಣ್ಣು ಪಕ್ಷಿಯು ಕಡಿಮೆ ಬಣ್ಣದಿಂದ ಕೂಡಿರುತ್ತದೆ ಹಾಗೂ ಮುಖದ ಮೇಲಿನ ಕಪ್ಪು ಬಣ್ಣದ ಮುಖವಾಡ ಹೊಂದಿರುವುದಿಲ್ಲ. (ಕಡಿಮೆ ಹೊಂದಿರುವ ಸಾಧ್ಯತೆ ಇದೆ)[]. ಈ ಪಕ್ಷಿಗಳ ಕೂಗು ಮಾನವನ ಕಿವಿಗೆ ಹಾಡಿನಂತೆ ಮಧುರವಾಗಿದ್ದು , ಈ ಕರೆಗೆಳು ಸಿಟಿಗಳು ಹಾಗೂ ಹರಟೆಯಂತೆ (ಚಾಟ್ಟರ್ಸ್ಗಳಂತೆ) ಕೇಳುತ್ತವೆ[]. ಎಲೆಹಕ್ಕಿಗಳನ್ನು, ಹಾವುಗಳು ಅಥವಾ ಪರಭಕ್ಷಕಗಳು ತಿನ್ನಲು ಯತ್ನಿಸಿದಾಗ ಇವು ಬುಲ್ ಬುಲ್ ಹಕ್ಕಿಗಳಂತೆ ತನ್ನ ದೇಹದ ಮೇಲಿನ ಪುಕ್ಕಗಳನ್ನು ಕೊಡವಿ-ಉದುರಿಸಿ ಪರಭಕ್ಷಕರಿಗೆ ಗೊಂದಲವನ್ನು ಉಂಟುಮಾಡುತ್ತವೆ. ಇದು ಹಲ್ಲಿಗಳು ಆಪತ್ತಿನಿಂದ ತಪ್ಪಿಸಿಕೊಳ್ಳಲು ತಮ್ಮ ಬಾಲವನ್ನು ಉದುರಿಸಿ ಭಕ್ಷಕರನ್ನು ಕಳವಳಗೊಳಿಸಿ ಜೀವಕಾಪಾಡಿಕೊಳ್ಳುವ ವಿಧಾನದಂತೆ.

ವಿತರಣೆ ಮತ್ತು ಆವಾಸ(ವಾಸಸ್ಥಾನ)

[ಬದಲಾಯಿಸಿ]

ಪರ್ಣಪಾತಿ ಕಾಡು,ನಿತ್ಯಹರಿದ್ವರ್ಣ ಕಾಡು ಹಾಗೂ ಕುರುಚಲು ಕಾಡುಗಳಲ್ಲಿ ಮರ ಮತ್ತು ಪೊದೆಗಳಲ್ಲಿ ವಾಸ ಮಾಡುತ್ತವೆ.ಹಸಿರು ಮೈ ಬಣ್ಣ ಎಲೆಗಳ ಎಡೆಯಲ್ಲಿ ಇರುವಾಗ ಇವುಗಳನ್ನು ಮರೆ ಮಾಡುತ್ತದೆ. ಎಲೆ ಹಕ್ಕಿ ಯಾವಾಗಲೂ ಮರಗಳು ಹಾಗೂ ಪೊದೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಬಹುತೇಕ ಎಲೆ ಹಕ್ಕಿ ಗಳು ಹೆಚ್ಚಾಗಿ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬಂದರೆ ಗೊಂಲ್ಡನ್ ಫ್ರಂಟೆಡ್ ಲೀಫ್ ಬರ್ಡ್ ಮತ್ತು ಜೆರ್ಡಾನ್ ಲೀಫ್ ಬರ್ಡ್ ಗಳು ಮುಂಗಾರು ಪತ್ರಪತನ ಕಾಡುಗಳಲ್ಲಿ (ಡೆಸಿಡಿಯಸ್ ಮಾನ್ಸೂನ್ ಫಾರೆಸ್ಟ್)ಕಂಡುಬರುತ್ತವೆ ಮತ್ತು ಕಿತ್ತಳೆ ಹೊಟ್ಟೆಯ ಎಲೆ ಹಕ್ಕಿ (ಆರೆಂಜ್ ಬೆಲ್ಲೀಡ್ ಲೀಫ್ ಬರ್ಡ್ ಗಳು) ಪತ್ರ ಪತನ ಕಾಡುಗಳಲ್ಲಿ (ಡೆಸಿಡಿಯಸ್ ಫಾರೆಸ್ಟ್) ಕಂಡುಬರುತ್ತವೆ. ಈ ಪಕ್ಷಿಗಳು ದಕ್ಷಿಣ ಹಾಗೂ ಆಗ್ನೇಯ ಏಷ್ಯಾದ ಎಲ್ಲಾ ವಿಶಾಲ ಅರಣ್ಯಗಳಲ್ಲಿ ಕಂಡುಬರತ್ತವೆ. ಇವು ಸಮುದ್ರ ಮಟ್ಟಕ್ಕಿಂತ ೨೫೦೦ ಮೀ..[] ಎತ್ತರದ ಪ್ರದೇಶಗಳಲ್ಲಿ ಕಾಣ ಸಿಗುತ್ತವೆ. ಆದರೆ ನೀಲಿ ಮುಖವಾಡದ ಎಲೆ ಹಕ್ಕಿ ಗಳು ಸಮುದ್ರ ಮಟ್ಟಕ್ಕಿಂತ ೧೦೦೦ ಮೀ.[] ಕೆಳಗೆ ಕಾಣಸಿಗುತ್ತವೆ. ಏಷ್ಯಾದ ಪ್ರಧಾನ ಭೂಭಾಗದ ಪ್ರದೇಶಗಳಲ್ಲಿ ಕಿತ್ತಳೆ ಹೊಟ್ಟೆಯ ಎಲೆ ಹಕ್ಕಿ (ಆರೆಂಜ್ ಬೆಲ್ಲೀಡ್ ಲೀಫ್ ಬರ್ಡ್) ಮತ್ತು ಗೊಂಲ್ಡನ್ ಫ್ರಂಟೆದ್ ಲೀಫ್ ಬರ್ಡ್ ಗಳು ಹೆಚ್ಚಾಗಿವೆ. ಕೆಲವು ಜಾತಿಯ ಪಕ್ಷಿಗಳು ನಿರ್ಬಂದಿತ ವಿತರಣೆಗಳನ್ನು ಹೊಂದಿವೆ. ಉದಾಹರಣೆಗೆ ಫಿಲಿಫೈನ ದ್ವೀಪದ ಪಲ್ವಾನ್ ಪ್ರದೇಶದ ಯೆಲ್ಲೋ ತ್ರೋಟೆಡ್ ಲೀಫ್ ಬರ್ಡ್ ಮತ್ತು ಬಾರ್ನಿಯನ್ ಲೀಫ್ ಬರ್ಡ್. ಸಾಮಾನ್ಯವಾಗಿ ಒಂದೇ ಪ್ರದೇಶದಲ್ಲಿ ಮೂರಕ್ಕಿಂತ ಹೆಚ್ಚು ಜಾತಿಯ ಪಕ್ಷಿಗಳು ಕಾಣುವುದು ವಿರಳ, ಆದರೂ ಸುಮಾತ್ರಾದ ಪರ್ವತ ತಪ್ಪಲಿನ ಕಾಡುಗಳಲ್ಲಿ ಐದು ಜಾತಿಯ ಪಕ್ಷಿಗಳೂ ಸಹ ಕಾಣ ಸಿಗುತ್ತವೆ[].

ನಡವಳಿಕೆ

[ಬದಲಾಯಿಸಿ]
ಹಳದಿ ಕಂಠದ ಎಲೆಹಕ್ಕಿ ಮೂಲತಃ ಪಲವಾನ್-ನ, ಫಿಲಿಪೀನ್ಸ್ ನ , ಸ್ಥಳೀಯ ಎಲೆಹಕ್ಕಿ.

ಎಲೆ ಹಕ್ಕಿ ಗಳು ಸಾಮಾನ್ಯವಾಗಿ ಮೇಲಾವರಣದಲ್ಲಿ ಕಂಡುಬರುವ ಕೀಟಗಳನ್ನು, ಹಣ್ಣು ಹಾಗು ಹೂವಿನ ಮಕರಂದವನ್ನು ಹೀರುತ್ತವೆ. ಇವು ಕೊಂಬೆಗಳಿಂದ ಕೊಂಬೆಗೆ ಹಾರುವ ಮೂಲಕ ಕೀಟಗಳನ್ನು ಬೇಟೆಯಾಡುತ್ತವೆ. ಎಲೆ ಹಕ್ಕಿಗಳು ಗಾಳಿಯಲ್ಲಿಯೇ ತಟಸ್ಥವಾಗಿ ನಿಂತು ಕಂಡ ಕೀಟಗಳನ್ನು ತಿನ್ನುತ್ತವೆ ಹಾಗೂ ಗಾಳಿಯಲ್ಲಿ ಹಾರಾಡುವ ಚಿಟ್ಟೆಗಳನ್ನು ಬೇಟೆಯಾಡುವುದಲ್ಲದೇ, ಕಾಡಿನ ತಳದವರೆಗೂ ಬೇಟೆಯಾಡಲು ಮುಂದುವರೆಯುತ್ತವೆ. ಎಲೆ ಹಕ್ಕಿಗಳು ಯಾವ ಮಟ್ಟಕ್ಕೆ ತಮ್ಮ ಆಹಾರದಲ್ಲಿ ಮಕರಂದದ ಮೆಲೆ ಅವಲಂಬಿಸಿವೆ ಎಂಬುದು ಕೆಲವರಲ್ಲಿ ಚರ್ಚೆಯ ವಿಷಯವಾಗಿದೆ. ಇದಕ್ಕೆ ಸಿಕ್ಕ ದಾಖಲೆಗಳು ಆಗ್ನೇಯ ಏಷ್ಯಾಗೆ ಹೋಲಿಸಿದರೆ ದಕ್ಷಿಣ ಏಷ್ಯಾದ ದಾಖಲೆಗಳೆ ಹೆಚ್ಚಿವೆ[] . ಕೆಲಜಾತಿಯ ಪಕ್ಷಿಗಳು ಆಗಾಗ ಮಿಶ್ರ ಆಹಾರದ ಹಿಂಡುಗಳನ್ನು ಸೇರುತ್ತವೆ.. ಕೆಲ ಪಕ್ಷಿಗಳು ಆಹಾರಕ್ಕಾಗಿ ಹೂ ಬಿಡುವ ಫಲವತ್ತಾದ ಮರಗಳನ್ನು ಮತ್ತು ಪೊದೆಗಳನ್ನು ಅನ್ಯ ಪಕ್ಷಿಗಳ ಅತಿಕ್ರಮ ವನ್ನು ಬಿಡದೆ ಎದುರಿಸುತ್ತವೆ[]. ಎಲೆ ಹಕ್ಕಿ ಗಳ ಗೂಡುಗಳು ಕಾಡುಗಳಲ್ಲಿನ ನೆಲದ ಮೇಲಾಗಲಿ ಅಥವಾ ಮರದ ಬುಡದಲ್ಲಾಗಲಿ ಇರದೆ ಮರದ ರೆಂಬೆಗಳ ತುದಿಗಳಲ್ಲಿ ಕಂಡು ಬರುತ್ತವೆ. ಸಾಧರಣವಾಗಿ ಬಹುತೇಕ ಎಲೆ ಹಕ್ಕಿಯ ಗೂಡುಗಳು ಮನುಷ್ಯನ ಅಧ್ಯಯನಕ್ಕೆ ಇನ್ನೂ ದೊರಕದಾಗಿದೆ. ಗೂಡುಗಳು ಬಟ್ಟಲಿನ ಆಕಾರವಾಗಿದ್ದು, ಅವು ಸೂಕ್ಷ್ಮ ಕಾಂಡಗಳು, ಎಲೆಗಳು, ಸಣ್ಣ ಸಣ್ಣ ಬೇರುಗಳಿದ (rootlets) ಕೂಡಿರುತ್ತವೆ[] . (೧) ಕೆಲವು, ಗೂಡುಗಳನ್ನು ಮರದ ಚಿಗುರಿಗೆ ಅಂಟಿಕೊಳ್ಳುವಂತೆ ಕಟ್ಟುತ್ತವೆ. (೨) ಹೆಣ್ಣು ಪಕ್ಷಿಗಳು ಗುಲಾಬಿ ಬಣ್ಣದ ೨ ಅಥವಾ ೩ ಮೊಟ್ಟೆಗಳನ್ನು ಇಡುತ್ತವೆ. ಈ ಪಕ್ಷಿಗಳು ಮೊಟ್ಟೆ ಇಟ್ಟ ನಂತರ ೧೪ ದಿನಗಳ ಕಾಲ ಕಾವು ಕೊಡುತ್ತವೆ. ಕಾವು ಕೊಡುವ ಕ್ರಿಯೆ ಹೆಣ್ಣು ಪಕ್ಷಿಗಳಿಗೆ ಹೆಚ್ಚಾಗಿ ಸೀಮಿತವಾಗಿದೆ. ಆದರೆ ಕನಿಷ್ಠ ಎರಡು ಜಾತಿಯ ಪಕ್ಷಿಗಳಲ್ಲಿ ಗಂಡು ಪಕ್ಷಿಗಳು ಕಾವು ಕೊಡುವ ಹೆಣ್ಣು ಪಕ್ಷಿಗೆ ಆಹಾರ ತಂದು ಕೊಡುತ್ತವೆ[] .

ಮಾನವನೊಂದಿಗೆ ಸಂಬಂದ

[ಬದಲಾಯಿಸಿ]

ಎಲೆ ಹಕ್ಕಿ ಪಕ್ಷಿಗಳು ಆಕರ್ಷಕವಾದ ಹಕ್ಕಿಗಳು ಹಾಗೂ ಇವುಗಳು ಮಧುರವಾದ ಹಾಡು ಮತ್ತು ಧ್ವನಿಗಳನ್ನು ಅನುಕರಿಸುವ ಸಾಮರ್ಥ್ಯವನ್ನು ಹೊಂದಿವೆ. ಆದ್ದರಿಂದ ಇವು ಅತ್ಯಂತ ಜನಪ್ರಿಯ ಪಂಜರದ ಪಕ್ಷಿಗಳಾಗಿ ಬಿಟ್ಟಿವೆ. ಈ ಕುಟುಂಬದಲ್ಲಿನ ಬಹುತೇಕ ವ್ಯಾಪಾರವು ಏಷ್ಯಾಕ್ಕೆ ಸೀಮಿತವಾಗಿದೆ. ವ್ಯಾಪಾರಕ್ಕಾಗಿ ಬಹುತೇಕ ಪಕ್ಷಿಗಳನ್ನು ವಶಪಡಿಸಿಕೊಳ್ಳುತ್ತಿರುವುದರಿಂದ ಸ್ಥಳೀಯವಾಗಿ ಅವುಗಳ ಸಂತತಿ ಕ್ಷೀಣಿಸುತ್ತಿವೆ. ಒಟ್ಟಾರೆಯಾಗಿ ೧೧ ಜಾತಿಗಳೂ ಸಹ ಸೂಕ್ತ ಆವಾಸ(ವಾಸಸ್ಥಾನ)ಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಆದರೆ ಅರಣ್ಯ ನಾಶದಿಂದ ಸೂಕ್ತ ಆವಾಸ(ವಾಸಸ್ಥಾನ)ವು ಬಹಳ ಕಡಿಮೆಯಾಗಿದೆ. ಒಂದು ಜಾತಿಯ ಫಿಲಿಫೈನ್ ಎಲೆ ಹಕ್ಕಿ ವಾಸಸ್ಥಾನದ ನಷ್ಟದಿಂದಾಗಿ ಅಳಿವಿನ ಅಂಚಿನಲ್ಲಿರುವ ಪಕ್ಷಿಗಳ ಪಟ್ಟಿಗೆ ಸೇರಿಸಲಾಗಿದೆ. ಹಾಗೆಯೇ ನೀಲಿ ಮುಖವಾಡದ ಎಲೆ ಹಕ್ಕಿ ಸಾಮಾನ್ಯವಾಗಿ ವಿರಳವಾಗಿದ್ದು, ಅವುಗಳ ಸತಂತಿ ಇನ್ನೂ ಕ್ಷೀಣಿಸುತ್ತಿರುವುದರಿಂದ ಅವುಗಳನ್ನೂ ಕೂಡ ಅಳಿವಿನ ಅಂಚಿನಲ್ಲಿರುವ ಪಕ್ಷಿ ಗಳ ಪಟ್ಟಿಗೆ ಸೇರಿಸಲಾಗಿದೆ[] .

ಚಿತ್ರ ಶಾಖೆ

[ಬದಲಾಯಿಸಿ]

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

  1. BirdLife International (2012). "Chloropsis aurifrons". IUCN Red List of Threatened Species. Version 2012.1. International Union for Conservation of Nature. Retrieved 16 July 2012. {{cite web}}: Invalid |ref=harv (help)
  2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ Wells, David (2005), "Family Chloropseidae (Leafbirds)", in del Hoyo, Josep; Elliott, Andrew; Christie, David (eds.), Handbook of the Birds of the World. Volume 10, Cuckoo-shrikes to Thrushes, Barcelona: Lynx Edicions, pp. 252–266, ISBN 84-87334-72-5
  3. ೩.೦ ೩.೧ ೩.೨ Mead, Christopher J.; Wells, D. R. (2003). "Leafbirds". In Perrins, Christopher (ed.). The Firefly Encyclopedia of Birds. Firefly Books. pp. 506–507. ISBN 1-55297-777-3.