ಎಲಿಜಬೆತ್ ಬೆಂಟ್ಲೆ

ವಿಕಿಪೀಡಿಯ ಇಂದ
Jump to navigation Jump to search
ಎಲಿಜಬೆತ್ ಬೆಂಟ್ಲೆ

[೧][೨]ಎಲಿಜಬೆತ್ ಬೆಂಟ್ಲೆ

ಎಲಿಜಬೆತ್ ಬೆಂಟ್ಲೆ ಅವರು ಇಂಗ್ಲೇಡಿನ ಖ್ಯಾತ ಕವಿಯತ್ರಿಯಾಗಿದ್ದರು. ಹಲವು ಬ್ರಿಟಿಷ್ ಕವಯಿತ್ರಿಯಲ್ಲಿ ಇವರು ಒಬ್ಬರು. ಇವರು ೧೭೯೧ರಲ್ಲಿ ಇಂಗ್ಲೇಡಿನ (ಯು.ಕೆ) ನಾರ್ವಿಚ್ಚ್ ಎಂಬಲ್ಲಿ ಜನಿಸಿದರು. ಬೆಂಟ್ಲೆಯವರು ಮೂಲತಃ ಬ್ರಿಟಿಷವರಾಗಿದ್ದರು. ಬೆಂಟ್ಲೆಯವರು ಮೂಲ ಕವಯಿತ್ರಿ ಮತ್ತು ಬರಹಗಾರ್ತಿಯಾಗಿದ್ದರು. ೧೭೯೧ ರಿಂದ ೧೮೨೧ ಬೆಂಟ್ಲೆಯವರು ಈ ಕಾಲವಧಿಯಲ್ಲಿ ತಮ್ಮ ಕವಿತೆಗಳನ್ನು ಪ್ರಕಟಿಸಿದರು. ಬೆಂಟ್ಲೆಯವರ ಕವಿತೆ ಹೆಚ್ಚಾಗಿ ಗುಲಾಮಗಿರಿಯನ್ನು ನಿರ್ಮೂಲನೆ ಮಾಡುವುದರ ಕುರಿತಾದ ತನ್ನ ಅಭಿಪ್ರಾಯಗಳನ್ನು ಮತ್ತು ಪ್ರಾಣಿ ಕಲ್ಯಾಣದ ಬಗ್ಗೆ ತಿಳಿಸುತ್ತದೆ, ಮತ್ತು ಇದನ್ನು ಸಾಮಾನ್ಯವಾಗಿ ಗ್ರಾಮೀಣ ಭೂದೃಶ್ಯಗಳಲ್ಲಿ ಹೋಲಿಸಲಾಗಿದೆ.

ಜೀವನ ಚರಿತ್ರೆ[ಬದಲಾಯಿಸಿ]

ಬೆಂಟ್ಲೆಯವರು ೧೭೯೧ ರಲ್ಲಿ ಇಂಗ್ಲೇಡಿನ ನಾರ್ವಿಚ್ಚ್ ಎಂಬಲ್ಲಿ ಎಲಿಜಬೆತ್ ಲಾರೆನ್ಸ್ ಮತ್ತು ಡೇನಿಯಲ್ ಬೆಂಟ್ಲೆ ಯವರ ದಂಪತಿಗೆ ಮಗಳಾಗಿ ಜನಿಸಿದರು. ಎಲಿಜಬೆತ್ ಲಾರೆನ್ಸ್ ಸ್ವತಃ ಉತ್ತಮ ಶಿಕ್ಷಣವನ್ನು ಪಡೆದವರಾಗಿದ್ದರು. ಎಲಿಜಬೆತ್ ಲಾರೆನ್ಸ್ ರವರು ಒಬ್ಬ ಶೂ ತಯಾರಕರಾಗಿದ್ದರು. ಇವರ ಏಕೈಕ ಮಗಳೆ ಎಲಿಜಬೆತ್ ಬೆಂಟ್ಲೆ. ೧೭೭೭ರಲ್ಲಿ ಎಲಿಜಬೆತ್ ಲಾರೆನ್ಸ್ ರವರು ಪಾರ್ಶ್ವವಾಯುವಿಗೆ ಒಳಗಾದರು. ಆದ್ದರಿಂದ ಲಾರೆನ್ಸ್ ರವರು ತಮ್ಮ ವ್ಯಾಪರವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ನಂತರ ಅವರ ಕುಟುಂಬ ಅರ್ಧಿಕ ತೊಂದರೆಗಳಿಗೆ ಒಳಾಗಾಯಿತು. ೧೭೮೩ ರಲ್ಲಿ ಬೆಂಟ್ಲೆಯವರು ೧೬ನೇ ವಯಸ್ಸಿನಲ್ಲಿದ್ದಾಗ ಅವರ ತಂದೆ ಎಲಿಜಬೆತ್ ಲಾರೆನ್ಸ್ ರವರು ನಿಧನ ಹೊಂದಿದ್ದರು. ನಂತರ ಬೆಂಟ್ಲೆ ಯವರು ತಮ್ಮ ಜೀವನವನ್ನು ಬದಲಿಸಿದರು.

ಸಾಹಿತ್ಯ ಕೊಡುಗೆಗಳು[ಬದಲಾಯಿಸಿ]

ಎರಡು ವರ್ಷಗಳ ನಂತರ ಎಲಿಜಬೆತ್ ಬೆಂಟ್ಲೆಯವರಿಗೆ ಕವಿತೆಯನ್ನು ಬರೆಯುವ ಹೊಸ ಆಶಯ ಮೂಡಿತು. ಕವಿತೆಗಳ ಬಗ್ಗೆ ಬೆಂಟ್ಲೆಯವರಿಗೆ ಯಾವುದೇ ರೀತಿಯ ಆಲೋಚನೆಗಳು ಮತ್ತು ಬಯಕೆಗಳು ಇರಲಿಲ್ಲ. (೧) ೧೭೯೧ರಲ್ಲಿ ಅವರ ಮೊದಲು ಸಂಗ್ರಹವಾದ ಜ್ಯೂಯಿನ್ ಪೊಯೆಟಿಕಲ್ ಸಂಯೋಜನೆಗಳಲ್ಲಿ, ೧,೯೩೫ ಚಂದಾದಾರರುಗಳನ್ನು ಒಳಗೊಂಡಿತ್ತು, ಅವರುಗಳೆಂದರೆ ಎಲಿಜಬೆತ್ ಕಾರ್ಟರ್, ಎಲಿಜಬೆತ್ ಮೊಂಟಾಗು, ವಿಲಿಯಂ ಕೌಪರ್, ಮತ್ತು ಹೆಸ್ಟರ್ ಚಾಪೊನ್. ಎಂಬ ಕಾರ್ಮಿಕ-ವರ್ಗದ ಬಗ್ಗೆ ಇವರು ರಚಿಸಿದ್ದಾರೆ, ಮತ್ತು ಇವರು ಕಾರ್ಮಿಕ ವರ್ಗದ ಕವಯಿತ್ರಿ ಎಂದು ಖ್ಯಾತಿ ಹೊಂದಿದ್ದರು. ಆದು ಆವರ ಮೊದಲ ಸಂಗ್ರಹವಾಗಿದೆ. ಬೆಂಟ್ಲೆಯವರು ಎರಡನೆಯದಾಗಿ ರಚಿಸಿದ "ಕಂಟೆಟ್ ಟು ಬಿ ದಿ ಲಾಸ್ಟ್ ಅಂಡ್ ಲೋಯೆಸ್ಟ್ ಆಫ್ ಟ್ಯೂನ್ ಪುಲ್ ಟ್ರೇನ್" ಎಂಬ ಕೃತಿಯಿಂದ ಅವಳ ಓದುಗರಿಗೆ ಒಂದು ಒಳ್ಳೆಯ ನಿಲುವನ್ನು ತಂದುಕೊಟ್ಟಿತ್ತು. ಬೆಂಟ್ಲೆಯವರು ಮತ್ತು ಅವರ ತಾಯಿ ಡೇನಿಯಲ್ ಬೆಂಟ್ಲೆಯವರು ಸಮಾಜ ಸೇವೆ ಮಾಡುವ ಗುರಿ ಹೊಂದಿದ್ದರು . ಆದರಿಂದ ಬೆಂಟ್ಲೆಯವರು ಮತ್ತು ಅವರ ತಾಯಿ ಡೇನಿಯಲ್ ಬೆಂಟ್ಲೆಯವರು ಒಂದು ಶಾಲೆಯನ್ನು (ಸಂಸ್ಥೆ)ಯನ್ನು ಸ್ಥಾಪಿಸಿದರು. ಮತ್ತು ಪರಿಮಾಣದ ಲಾಭದೊಂದಿಗೆ ಶಾಲೆಯನ್ನು ನಡೆಸಿದರು. ಬೆಂಟ್ಲೆಯವರ ಸಂಗ್ರಹಣೆಗಳೆಲ್ಲವೂ ಹೆಚ್ಚಾಗಿ ಲೇಖಕರ ಭಾವಚಿತ್ರಳು ಮತ್ತು ಅವರ ಜೀವನ ಶೈಲಿಗಳನ್ನು ಒಳಗೊಂಡಿವೆ. ೧೭೯೦ ರಲ್ಲಿ ಬೆಂಟ್ಲೆಯವರು ಬರೆದ ಮೊದಲ ಕವಿತೆ ಪ್ರಕಟಗೊಂಡಿತು. ಬೆಂಟ್ಲೆಯವರ ಕವಿತೆಯು ಹೆಚ್ಚಾಗಿ ಗ್ರಾಮಾಂತರದ ಬಗ್ಗೆ ಮತ್ತು ನಿರ್ಮೂಲನವಾದವು ಮತ್ತು ಪ್ರಾಣಿಗಳ ಕ್ರೂರತೆಯಂಥ ವಿಷಯಗಳ ಬಗ್ಗೆ ಅವರ ಕವಿತೆಗಳು ಹೆಚ್ಚಾಗಿ ಸಂಗ್ರಹಗೊಂಡಿವೆ. ಅವರು ಸಾರ್ವಜನಿಕರ ಬಳಿ ಆ ವಿಷಯಗಳ ಬಗ್ಗೆ ಹೆಚ್ಚಾಗಿ ಚರ್ಚೆಗಳಲ್ಲಿ ತೊಡಗುತ್ತಿದ್ದರು. ಆದರಿಂದ ಕೂಪರ್ ಎಂಬಾತ ಹಿಂದಿನ ಪೀಳಿಗೆಯ ಕಾರ್ಮಿಕ ವರ್ಗದ ಕವಿಯಾಗಿದ್ದ ಮೇರಿ ಲೀಪೋರ್ನೊಂದಿಗೆ ಬೆಂಟ್ಲೆಯವರನ್ನು "ಸ್ಟಾಂಗ್ ನ್ಯಾಚುರಲ್ ಜೀನಿಯಸ್ " ಎಂದು ಉದಾಹರಿಸಿದ್ದಾನೆ. ಮತ್ತು ಬೆಂಟ್ಲೆಯವರು ಹಲವು ಬಿರುದುಗಳು ಗಳಿಸಿದ್ದಾರೆ. ಅವುಗಳಲ್ಲಿ "ಸ್ಟಾಂಗ್ ನ್ಯಾಚುರಲ್ ಜೀನಿಯಸ್ " ಎಂಬ ಬಿರುದನ್ನು ಅವರು ಗಳಿಸಿದ್ದಾರೆ. ಮತ್ತು ಕೂಪರ್ ಮೇರಿ ಲೀಪೋರ್ನೋಂದಿಗೆ ಬೆಂಟ್ಲೆಯವರನ್ನು ಹೋಲಿಸಿದ್ದರೆ. ಅದ್ದರಿಂದ ಇವರು ಕೂಡ ಕಾರ್ಮಿಕ ವರ್ಗದ ಕವಯಿತ್ರಿಯೆಂದು ಹೇಳಲಾಗಿದೆ.ಇವರು ತನ್ನ ಮೊದಲ ಸಂಪುಟವನ್ನು ಪ್ರಕಟಿಸಿದರು.ಮತ್ತು ಅವರು ಹಲವಾರು ಮಕ್ಕಳ ಪದ್ಯದ ಸಂಗ್ರಹಗಳ ಲೇಖಕರಾಗಿದ್ದಾರೆ. ಬೆಂಟ್ಲೆಯವರು ಸಣ್ಣ ಬೋರ್ಡಿಂಗ್ ಶಾಲೆಯನ್ನು ಇಟ್ಟುಕೊಂಡಿದ್ದರಿಂದ. ಅವರು ಹೆಚ್ಚು ಕವಿತೆಗಳನ್ನು ಪ್ರಕಟಿಸಲಾಗಲಿಲ್ಲ. ಸ್ವಲ್ಪ ಕವಿತೆಗಳನ್ನು ಮಾತ್ರ ಪ್ರಕಟಿಸಿದ್ದಾರೆ.ಬೆಂಟ್ಲೆಯವರು ಪರಿಸರ ಸ್ನೇಹಿಯಾಗಿದ್ದರು. ಆದ್ದರಿಂದ ಅವರ ಹೆಚ್ಚು ಕವಿತೆಗಳು ಪರಿಸರ ಮತ್ತು ವಿಧ್ಯಾಭ್ಯಾಸದ ಬಗ್ಗೆ ರಚಿತಗೊಂಡಿವೆ. ಮತ್ತು ಅವರು ಕವಿತೆಗಳು(ಪದ್ಯ) ಮತ್ತು ಪುಸ್ತಕಗಳ್ಳದೆ ಅವರು ಲೇಖನಗಳನ್ನು ಮತ್ತು ಪತ್ರಿಕೆಗಳನ್ನು ಪ್ರಕಟಿಸಿದ್ದಾರೆ, ಎಂದು ಹೇಳಲಾಗುತ್ತದೆ. ನಂತರ ೧೮೨೧ರಲ್ಲಿ ಬೆಂಟ್ಲೆಯವರ ಎಲ್ಲ ಕವಿತೆಗಳ ಪ್ರಕಟಗಳೊಂದಿಗೆ ಅವರ ಕವಿತೆಗಳು ಕೊನೆಗೊಂಡವು. ಆದರೆ ಅವರ ಕೆಲವು ಪುಸ್ತಕಗಳು ಇತ್ತಿಚೆಗೆ ಪ್ರಕಟಗೊಂಡವು ಎಂದು ಹೇಳಲಾಗುತ್ತಿದೆ. ಮತ್ತು ಬೆಂಟ್ಲೆಯವರು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ೧೭೯೯ಮತ್ತು ೧೮೨೯ ರಲ್ಲಿ ರಾಯಲ್ ಲಿಟರರಿ ಫಂಡ್ನ ಬೆಂಬಲವನ್ನು ಪಡೆದರು. ಒಂಬತ್ತು ವರ್ಷಗಳ ನಂತರ, ೧೮೩೯ ರಲ್ಲಿ ಬೆಂಟ್ಲೆಯವರು ಇಂಗ್ಲೇಡ್ ನ ಅಲ್ಮ್ಸಾಹೌಸ್ ಎಂಬಲ್ಲಿ ೭೨ನೇ ವಯಸ್ಸಿನಲ್ಲಿರುವಾಗ ನಿಧನರಾದರು.

ಕೃತಿಗಳು[ಬದಲಾಯಿಸಿ]

- ವಿವಿಧ ವಿಷಯಗಳ ಮೇಲೆ (ನಾರ್ವಿಚ್, ಚಂದಾದಾರಿಕೆ, ೧೭೯೧) (ಎಟೆಕ್ಸ್ಟ್, ಬ್ರಿಟೀಷ್ ವುಮೆನ್ ರೊಮ್ಯಾಂಟಿಕ್ ಪೊಯೆಟ್ಸ್ ಪ್ರಾಜೆಕ್ಟ್) ಅಪ್ಪಟ ಪೊಯೆಟಿಕಲ್ ಸಂಯೋಜನೆಗಳು.

- ಶ್ಲೋಕದಲ್ಲಿ ಮಕ್ಕಳ ಕಥೆಗಳು

- ಕವನಗಳು; ಎಲಿಜಬೆತ್ ಬೆಂಟ್ಲೆ (೧೮೨೧ ರ ಚಂದಾದಾರಿಕೆಯ ಮೂಲಕ)

ಟಿಪ್ಪಣಿಗಳು[ಬದಲಾಯಿಸಿ]

- ಉಲ್ಲೇಖಗಳು ಡೊನ್ನಾ ಲ್ಯಾಂಡ್ರಿ, "ಬೆಂಟ್ಲೆ, ಎಲಿಜಬೆತ್ (೧೭೬೭, ಮರಣ ೧೮೩೯)." ಆಕ್ಸ್ಫರ್ಡ್ ಡಿಕ್ಷನರಿ ಆಫ್ ನ್ಯಾಷನಲ್ ಬಯೋಗ್ರಫಿ. ಎಡ್. ಹೆಚ್ಚು.ಸಿ.ಜಿ. ಮ್ಯಾಥ್ಯೂ ಮತ್ತು ಬ್ರಿಯಾನ್ ಹ್ಯಾರಿಸನ್. ಆಕ್ಸ್ಫರ್ಡ್: ಒಯುಪಿ, ೨೦೦೪. ೧೨ ಏಪ್ರಿಲ್ ೨೦೦೭.

- ಅಪ್ಪಟ ಪೊಯೆಟಿಕಲ್ ಸಂಯೋಜನೆಗಳು, ಸಾಲುಗಳು ೩೦-೩೨.

- ಡೊನ್ನಾ ಲ್ಯಾಂಡ್ರಿ, "ಬೆಂಟ್ಲೆ, ಎಲಿಜಬೆತ್ (೧೭೬೭, ಮರಣ .೧೮೩೯)." ಆಕ್ಸ್ಫರ್ಡ್ ಡಿಕ್ಷನರಿ ಆಫ್ ನ್ಯಾಷನಲ್ ಬಯೋಗ್ರಫಿ. ಎಡ್ .ಹೆಚ್ಚು.ಸಿ.ಜಿ. ಮ್ಯಾಥ್ಯೂ ಮತ್ತು ಬ್ರಿಯಾನ್ ಹ್ಯಾರಿಸನ್. ಆಕ್ಸ್ಫರ್ಡ್: ಒಯುಪಿ, ೨೦೦೪. ೧೨ ಏಪ್ರಿಲ್ ೨೦೦೭.

ಪುಸ್ತಕಗಳು[ಬದಲಾಯಿಸಿ]

- ಔಟ್ ಆಫ್ ಬಾಂಡಿಜ್: ದ ಸ್ಟೋರಿ ಆಫ್ ಎಲಿಜಬೆತ್ ಬೆಂಟ್ಲೆ

- ಕೌಂಟಿ ಕೋರ್ಟ್ ಹೌಸ್ ಬುಕ್

- ದಿ ಫ್ಲೈ ಆನ್ ದಿ ರೋಸ್

- ಇನ್ ಎ ಡ್ರೈ ಲ್ಯಾಂಡ್

ಉಲ್ಲೇಖಗಳು[ಬದಲಾಯಿಸಿ]