ಎರೆಹುಳ ಕೃಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎರೆಹುಳ ಕೃಷಿ
ಎರೆಹುಳ ಕೃಷಿ

ಎರೆಹುಳ ಕೃಷಿ ಎರೆಗೊಬ್ಬರದ ಉತ್ಪನ್ನ ಅಥವಾ ಒಂದು ಪ್ರಕ್ರಿಯೆಯಲ್ಲಿ ಹುಳುಗಳನ್ನು ಬಳಸಿಕೊಂಡು ಮಿಶ್ರಗೊಬ್ಬರವನ್ನು ತಯಾರಿಸಬಹುದು. ಸಾಮಾನ್ಯವಾಗಿ ಕೆಂಪು ವಿಗ್ಲರ್, ಬಿಳಿ ಹುಳಗಳು ಮತ್ತು ಇತರ ಎರೆಹುಳುಗಳು ಕೊಳೆತ ತರಕಾರಿ ಅಥವ ಆಹಾರ ತ್ಯಾಜ್ಯ, ಹಾಸಿಗೆ ಪದಾರ್ಥಗಳು ಮತ್ತು ವರ್ಮ್ಕಾಸ್ಟ್ ಬಳಸಿ ಭಿನ್ನ ಜಾತಿಯ ಮಿಶ್ರಗೊಬ್ಬರವನ್ನು ರಚಿಸಲು ಸಾಧ್ಯ. ವರ್ಮಿಕಾಸ್ಟನ್ನು ಹುಳು ಎರಕ, ಹುಳು ಗೊಬ್ಬರ ಅಥವಾ ವರ್ಮ್ ಹ್ಯೂಮಸ್ ಎಂದು ಕರೆಯುತ್ತಾರೆ. ಇದು ಒಂದು ಎರೆಹುಳು ಮೂಲಕ ಸಾವಯವ ತ್ಯಾಜ್ಯ ಸ್ಥಗಿತ ಅಂತಿಮ ಉತ್ಪನ್ನವಾಗಿದೆ. ಈ ಹುಳು ಗೊಬ್ಬರದಲ್ಲಿ ಮಾಲಿನ್ಯ ಕಾರಕಹಳ ಮಟ್ಟ ಕಡಿಮೆಯಲ್ಲಿದ್ದು, ಮತ್ತು ಎರೆಹುಳು ಗೊಬ್ಬರ ಮಾಡುವ ಮುನ್ನ ಸಾವಯವ ವಸ್ತುಗಳಲ್ಲಿ ಇದ್ದಂತಹ, ಪೋಷಕಾಂಶಗಳ ಶುದ್ಧತ್ವ ಹೆಚ್ಚಿನ ಮಟ್ಟದಲ್ಲಿ ಹೊಂದಿದೆ. ನೀರಿನಲ್ಲಿ ಸುಲಭವಾಗಿ ಕರಗುವ ಪೌಷ್ಠಿಕ ದ್ರವ್ಯಗಳನ್ನು ಹೊಂದಿರುವ ಈ ಮಿಶ್ರಗೊಬ್ಬರ ಒಂದು ಅತ್ಯುತ್ತಮ ಪೊಷಕಾಂಶ ಭರಿತ ಸಾವಯವ ಗೊಬ್ಬರ ಮತ್ತು ಮಣ್ಣಿನ ಕಂಡೀಷನರ್ ಹೊಂದಿದೆ. ಈ ರೀತಿಯ ಮಿಶ್ರಗೊಬ್ಬರ ತಯಾರಿಕೆಯನ್ನು ಎರೆಹುಳು ಮಿಶ್ರಗೊಬ್ಬರವೆಂದು ಕರೆಯುತ್ತಾರೆ.

ಸೂಕ್ತ ಜಾತಿ[ಬದಲಾಯಿಸಿ]

ಎರೆಹುಳ
ಲುಂಬ್ರಿಕಸ್ ಜಾತಿಯ ಹುಳ

ರೆಡ್ ವಿಗ್ಲರ್ ಎಂಬ ಜಾತಿಯ ಎರೆಹುಳು ಮಿಶ್ರಗೊಬ್ಬರ ತಯಾರಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಚೀನಾ ದೇಶದಲ್ಲಿ ಅಧಿಕವಾಗಿ ಲಭ್ಯವಿರುವ ತಳಿ - ಕೆಂಪು ಎರೆಹುಳು, ಇದನ್ನು ಹೆಚ್ಚಾಗಿ ಉಪಯೋಗಿಸಲು ಸಾಧವಿಲ್ಲ. ಏಕೆಂದರೆ ಅದು ಆಳವಿಲ್ಲದ ಮಿಶ್ರಗೊಬ್ಬರದ ಡಬ್ಬಿಗಳಿಗೆ ಚೆನ್ನಾಗಿ ಹೊಂದಿಕೊಳ್ಳುವುದಿಲ್ಲ. ಯುರೋಪಿಯನ್ ನೈಟ್ ಕ್ರಾಲರ್ ಎಂಬ ತಳಿಯನ್ನೂ ಬಳಸಬಹುದು. ಉಪಯುಗಿಸುವವರು ಈ ಜಾತಿಯ ಎರೆಹುಳವನ್ನು ಅನೇಕ ಹೆಸರಿನಿಂದ - ಡೆಂಡ್ರೊ ಬೆನಸ್, ಬೆಲ್ಜಿಯನ್ ನೈಟ್ ಕ್ರಾಲರ್ಗಳೆಂದು ಗುರುತಿಸುತ್ತಾರೆ. ಈ ಎಲ್ಲಾ ತಳಿಗಳು ಬಹು ಜನಪ್ರಿಯ ಮಿಶ್ರಗೊಬ್ಬರ ತಯಾರಕರು. ಲುಂಬ್ರಿಕುಸ್ ಟೆರೆಸ್ಟಿಸ್ ಅಥವ ಸಾಮಾನ್ಯ ಎರೆಹುಳು ಹೆಚ್ಚಾಗಿ ಸಿಫಾರಸು ಮಾಡುವುದಿಲ್ಲ, ಏಕೆಂದರೆ ಅವು ಬಹಳ ಆಳವಾಗಿ ಬಿಲಗಳನ್ನು ಕೊರೆಯುತ್ತವೆ. ಇದಕ್ಕೆ ಎರೆಹುಳ ಕ್ರುಷಿಯು ಸೌಕರ್ಯ ಮಾಡುವುದಿಲ್ಲ. ಟ್ರಾಪಿಕ್ ಜಾಗಗಳಲ್ಲಿ ಬ್ಲೂವರ್ಮ್ ಎಂಬ ಜಾತಿಯನ್ನು ಬಳಸುತ್ತಾರೆ. ಈ ಎಲ್ಲಾ ಜಾತಿಯ ತಳಿಗಳು ಸಾವಯವ ಹೆಚ್ಚಾಗಿರುವ ಮಣ್ಣಿನ ಪ್ರದೇಶಗಳಾದ ಯುರೋಪ್ ಮತ್ತು ಉತ್ತರ ಅಮೇರಿಕಾಗಳಲ್ಲಿ ಕೊಳೆಯುತ್ತಿರವ ಸಸ್ಯ ವರ್ಗದ ಮಿಶ್ರಗೊಬ್ಬರದಲ್ಲಿ ಮತ್ತು ಗೊಬ್ಬರ ರಾಶಿಗಳಲ್ಲಿ ವಾಸಿಸುತ್ತದೆ. ಕೆಲವು ಜಾಗಗಳಲ್ಲಿ ಆಕ್ರಮಣಶೀಲ ಜಾತಿಯ ತಳಿಗಳು ಕಾಣಬಹುದು. ಈ ಹುಳುಗಳು ಆಳವಿಲ್ಲದ ಜಾಗಗಳಲ್ಲಿ ವಾಸಿಸುತ್ತದೆ ಹಾಗೂ ಅಲ್ಲಿ ದೊರಕುವ ಕೊಳೆತ ಸಸ್ಯಗಳ ಪದಾರ್ಥವಿರುವ ಮಣ್ಣಿನಲ್ಲಿ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆಹಾರ ಅಥವಾ ಸಸ್ಯ ತ್ಯಾಜ್ಯ ಪದಾರ್ಥಗಳ ಮೇಲೆ ಅವು ಬಹಳಷ್ಟು ಹೊಂದಿಕೊಂಡು ವರ್ಮ್ ಬಿನ್ಗಳಲ್ಲಿ ನಿರ್ಬಂಧಿತ ವಾಗಿರುತ್ತದೆ. ಮಿಶ್ರಗೊಬ್ಬರ ಹುಳುಗಳು ಆನ್ಲೈನ್ನಲ್ಲಿ ಲಭ್ಯವಿದ್ದು ಇವುಗಳನ್ನು ನರ್ಸರಿ ಮತ್ತು ಆಂಗ್ಲಿಂಗ್ ಮಳಿಗೆಗಳಲ್ಲಿ ಗಾಳದ ಹುಳ ಎಂದು ಮಾರಾಟ ಮಾಡುತ್ತಾರೆ. ಇವುಗಳನ್ನು ಗೊಬ್ಬರದ ರಾಶಿಯಲ್ಲಿ ಹಾಗು ಬೆರಕೆಗೊಬ್ಬರಗಳಲ್ಲಿ ಸಂಗ್ರಹಿಸಬಹುದು. ಸಾಮಾನ್ಯ ಮಣ್ಣಿನಲ್ಲಿ ಅಥವಾ ಪಾದಚಾರಿಗಳು ಬಳಸುವ ಜಾಗದಲ್ಲಿ ಮಣ್ಣು ನೀರಿನಿಂದ ಪ್ರವಾಹಕ್ಕೆ ಒಳಪಟ್ಟು, ಅದರ ಮೇಲೆ ಲಭ್ಯವಿರುವ ತಳಿಗಳು ಈ ಜಾತಿಯ ತಳಿಗಳಿಗಿಂತ ಬೇರೆಯಾಗಿದೆ.

ಭಾರಿ ಪ್ರಮಾಣ[ಬದಲಾಯಿಸಿ]

ಕೆನೆಡಾ, ಇಟಲಿ, ಜಪಾನ್, ಮಲೆಶಿಯಾ ಮತ್ತು ಅಮೇರಿಕಾ ದೇಶಗಳಲ್ಲಿ ಎರೆಹುಳ ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಅಭ್ಯಾಸ ಮಾಡುತಿದ್ದಾರೆ. ಕೃಷಿ, ಭುದೃಶ್ಯ, ಕಾಂಪೋಸ್ಟ್ ಚಹಾ ತಯಾರಿಸಲು ಅಥವ ಮಾರಾಟಕ್ಕೆ ಎರೆಹುಳ ಕೃಷಿಯನ್ನು ಬಳಸುತ್ತಾರೆ. ಈ ಎಲ್ಲಾ ಕಾರ್ಯಾಚರಣೆಯಿಂದ ಗಾಳದ ಹುಳು ಅಥವ ಮನೆ ವರ್ಮಿ ಕಾಂಪೋಸ್ಟಿಂಗ್ ತಯಾರಿಕೆ ಆಗುತ್ತದೆ. ಎರಡು ಮುಖ್ಯ ವಿಧಾನಗಳಲ್ಲಿ ದೊಡ್ಡ ಪ್ರಮಾಣದ ಎರೆಹುಳು ಸಾಕುವಿಕೆಯನ್ನು ಮಾಡಬಹುದು. ಕೆಲವು ಪದ್ಧತಿಗಳಲ್ಲಿ ವಿಂಡ್ರೊಗಳನ್ನು ಬಳಸಿ ಅದರಲ್ಲಿ ಎರೆಹುಳುಗಳಿಗೆ ಅಧಿಕವಾಗಿ ಸಾವಯವ ಪದಾರ್ಥಗಳನ್ನು ನೀಡುತ್ತಾರೆ. ಈ ವಿಂಡ್ರೊಗಳಲ್ಲಿ ಯಾವುದೇ ದೈಹಿಕ ತಡೆ ಇರುವುದಿಲ್ಲ, ಆದರೂ ಎರೆಹುಳು ಹೊರಕ್ಕೆ ಪಾರಾಗಲು ಅವಶ್ಯವಿಲ್ಲ ಏಕೆಂದರೆ ಸಿದ್ಧಾಂತರದ ಪ್ರಕಾರ ಅವುಗಳಿಗೆ ಅಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಪದಾರ್ಥ ಲಭ್ಯವಿದ್ದು ಅವುಗಳನ್ನು ತಿನ್ನಬಹುದು. ಈ ಎರೆಹುಳುಗಳ ಸಂಖ್ಯೆಯನ್ನು ಕಾಪಾಡಲು ವಿಂಡ್ರೊಗಳನ್ನು ಕಾಂಕ್ರೀಟ್ ಮೇಲ್ಮೈ ಇರುವ ಜಾಗಗಳಲ್ಲಿ ಇರಿಸಿ ಪರಭಕ್ಷಕ ಹುಳುಗಳಿಂದ ಪ್ರವೇಶ ಪಡೆಯಲು ತಪ್ಪಿಸುತ್ತಾರೆ. ಎರಡನೆಯ ತರಹದ ದೊಡ್ಡ ಪ್ರಮಾಣದ ಎರೆಹುಳ ಕೃಷಿ ವಿಧಾನದಲ್ಲಿ ಎತ್ತರದ ಹಾಸಿಗೆ ಅಥವ ಹರಿವಿನ ಮೂಲಕ ವ್ಯವಸ್ಥೆ ಮಾಡಿರುತ್ತಾರೆ. ಇಲ್ಲಿ ಹುಳುಗಳಿಗೆ ಒಂದು ಇಂಚಿನಷ್ಟು ಮೇಲ್ಭಾಗದಲ್ಲಿ 'ವರ್ಮ್ ಚೌ'ವನ್ನು ಉಣಿಸುತ್ತಾರೆ. ನಂತರ ತಳದಿಂದ ಒಂದು ಇಂಚು ಎರಕ ಹೊಯ್ದ ಕೊಯ್ಲನ್ನು ಒಂದು ಬ್ರೇಕರ್ ಬಾರ್ ಸಹಾಯದಿಂದ ಹಾಸಿಗೆಯ ಕೆಳಭಾಗಕ್ಕೆ ಜಾಲಿ ಮೂಲಕ ಪಡೆಯುತ್ತಾರೆ. ಹರಿವು ಮೂಲಕ ವ್ಯವಸ್ಥೆಯಲ್ಲಿ ಈ ಕೆಂಪು ಹುಳುಗಳು ಸದಾ ಮೇಲ್ಮೈ ನಿವಾಸಿಗಳಾದ ಕಾರಣ ಸತತವಾಗಿ ಹೊಸ ಆಹಾರ ಮೂಲವನ್ನು ಹುಡುಕುತಾ ಸಾಗುತ್ತದೆದ್. ಹೀಗಾಗಿ ಹುಳುಗಳನ್ನು ಎರಕ ಹೊಯ್ದುದ್ದರಿಂದ ಬೇರೆಪಡಿಸಲು ಬಹಳ ಸುಲಭ. ಈ ವಿಧಾನವು ಒಳಾಂಗಣ ಸೌಲಭಗಳಿಗೆ ಸೂಕ್ತವಾಗಿದೆ. ಈ ಕಾರಣದಿಂದ ತಂಪಾದ ವಾತಾವರ್ಣವಿರುವ ಪ್ರದೇಶಗಳಲ್ಲಿ ಈ ವಿಧಾನವು ಮೆಚ್ಚಿನ ಆಯ್ಕೆಯಾಗಿದೆ.

ಎರೆಹುಳ ಕೃಷಿ
ಎರೆಹುಳ ಬಿನ್

ಸಣ್ಣ ಪ್ರಮಾಣ[ಬದಲಾಯಿಸಿ]

ಎರೆಹುಳ ಕೃಷಿಯನ್ನು ಮನೆಯಲ್ಲೇ ಸಣ್ಣ ಪ್ರಮಾಣದಲ್ಲಿ ಮಾಡಲು ಬಹಳಷ್ಟು ತರಹದ ಬಿನ್ನುಗಳು ಮಾರುಕಟ್ಟೆಯಲ್ಲಿ ಲಭ್ಯವಾಗಿದ್ದು, ಅವರವರ ಅನುಕೂಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬಹುದಾದ ಧಾರಕಗಳು ದೊರಕುತ್ತದೆ. ಈ ಧಾರಕಗಳು ಮರದಿಂದ, ಲೋಹದಿಂದ, ಹಳೆಯ ಪ್ಲಾಸ್ಟಿಕ್ ಅಥವ ಇನ್ನಿತರ ವಸ್ತುಗಳನ್ನು ಬಳಸಿ ತಯಾರಿಸುತ್ತಾರೆ. ಈ ಡಬ್ಬಗಳನ್ನು ಸಣ್ಣದಾದ ಆಕಾರದಲ್ಲಿ ಪ್ರತಿಯೊಬ್ಬರ ಅಗತ್ಯಾನುಸಾರ ಹೇಗೆ ಮತ್ತು ಎಲ್ಲಿ ಇಡುತ್ತಾರೆ ಎಂಬುದರ ರೀತಿಯಲ್ಲಿ ಸಿದ್ದಪಡಿಸುತ್ತಾರೆ. ವರ್ಮ್ ಬಿನ್ ನಿರ್ಮಾಣವನ್ನು ಕೆಲವು ವಸ್ತುಗಳನ್ನು ಬಳಸಲು ಆಶಾದಾಯಕವಾಗಿದೆ. ಲೋಹದ ಬಿನ್ನುಗಳು ಸಾಮಾನ್ಯವಾಗಿ ಶಾಖವನ್ನು ಹೆಚ್ಚಿಸುತ್ತದೆ ಮತ್ತು ಅವು ಬಹುಬೇಗ ತುಕ್ಕು ಹಿಡಿಯುವ ಕಾರಣದಿಂದ ಮತ್ತು ಬಾರ ಲೋಹಗಳನ್ನು ಎರೆಹುಳುಗೊಬ್ಬರಕ್ಕೆ ಬಿಡುಗಡೆ ಮಾಡಬಹುದು. ಕೆಲವು ದೇವದಾರುಮರ ಅಂದರೆ ಹಳದಿ ದೇವದಾರು ಮತ್ತು ಮಂಜತ್ತಿ ಮರಗಳು ರಾಳದ ತೈಲಗಳನ್ನು ಒಳಗೊಂಡಿರತ್ತವೆ. ಇದು ಹಳುಗಳಿಗೆ ಹಾನಿ ಉಂಟುಮಾಡಬಹುದು. ಆದರೆ ಪಶ್ಚಿಮ ಕೆಂಪು ದೇವದಾರು ವೃಕ್ಷವು ಮಿಶ್ರಗೊಬ್ಬರದ ಪರಿಸ್ಥಿತಿಗೆ ಉತ್ತಮವಾದ ದೀರ್ಘಾಯುಷ್ಯವನ್ನು ನೇಡುತ್ತದೆ. ಮತ್ತೊಂದು ಅಗ್ಗದ ಮತ್ತು ತೀರ ಕೊಳೆತ-ವಿರೋಧಿ ತೊಗಟೆಯನ್ನು ಉಪಯೋಗಿಸಿ ವರ್ಮ್ ಬಿನ್ನುಗಳನ್ನು ಮಾಡುತ್ತಾರೆ. ಅದೇ ಹೆಮ್ಲಾಕ್ ಎಂಬ ಜಾತಿಯ ಮರ. ಈ ಬಿನ್ನುಗಳಲ್ಲಿ ಗಾಳಿ ಹರಿಯುವ ರಂಧ್ರಗಳು ಅಥವ ಜಾಲರಿಗಳನ್ನು ಅಳವಡಿಸುತ್ತಾರೆ. ಕೆಲವರು ರಂಧ್ರಗಳನ್ನು ಅಥವ ನಾಳಗಳನ್ನು ಇರಿಸಿ, ಅಧಿಕ ದ್ರವ್ಯವನ್ನು ಬರಿದಾಗಿಸಿ ತಟ್ಟೆಗಳಲ್ಲಿ ಸಂಗ್ರಹಿಸಲು ವ್ಯವಸ್ಥೆ ಮಾಡಿರುತ್ತಾರೆ. ಮಿಶ್ರಗೊಬ್ಬರದ ಬಿನ್ನುಗಳನ್ನು ಸಾಮಾನ್ಯವಾಗಿ ಪ್ಲಾಸ್ಟಿಕ್ ಬಳಸಿ ತಯಾರಿಸುವುದು ಸೂಕ್ತ. ಆದರೆ ಅದಕ್ಕೆ ಬಹಳಷ್ಟು ಬರಿದಾಗಿಸುವ ರಂಧ್ರದ ಅಗತ್ಯವಿದೆ. ಈ ಅನುಕೂಲ ಮರದಿಂದ ತಯಾರಿಸಿದ ಬಿನ್ನುಗಳಲ್ಲಿ ಕಾಣಬಹುದು. ಏಕೆಂದರೆ ಪ್ಲಾಸ್ಟಿಕ್ ಬಿನ್ ಒಂದು ತೇವಾಂಶ ಹೀರಿಕೊಳ್ಳಲಾಗದ ವಸ್ತು. ಮರದಿಂದ ತಯಾರಿಸಿದ ಬಿನ್ನುಗಳು ಅಂತಿಮವಾಗಿ ಕೊಳೆಯುತ್ತದೆ ಹಾಗು ಆಗಾಗ ಬದಲಾಯಿಸುವ ಅಗತ್ಯವಿರುತ್ತದೆ. ಸಣ್ಣ ಪ್ರಮಾಣದಲ್ಲಿ ವರ್ಮಿಕ್ ಮಿಶ್ರಗೊಬ್ಬರದ ತಯಾರಿಕೆ ನಮ್ಮ ಅಡುಗೆ ಮನೆಯ ಸಾವಯವ ತ್ಯಾಜ್ಯಗಳು ಬಹಳ ಸೂಕ್ತವಾಗಿದ್ದು, ಇದು ಉತ್ತಮ ಗುಣಮಟ್ಟದ ಮಣ್ಣು ಸುಧಾರಕ ದೊರಕುತ್ತದೆ. ಏಕೆಂದರೆ ಇಲ್ಲಿ ಜಾಗದ ಅಭಾವವಿರುತ್ತದೆ. ಬಿನ್ ಮಿಶ್ರಗೊಬ್ಬರಕ್ಕೆ ಬೇಕಾಗಿರವ ಹೆಚ್ಚುವರಿ ಮಾನವ ದೈಹಿಕ ಪ್ರಯತ್ನ ಇದರಲ್ಲಿ ಬೇಕಾಗಿರದ ಕಾರಣ ಹುಳುಗಳು ಸಾವಯವ ಪದಾರ್ಥಗಳನ್ನು ವೇಗವಾಗಿ ಕೊಳೆಸುತ್ತದೆ. ಸಾಮಾನ್ಯ ಎರೆಹುಳು ಆಳವಾಗಿ ಬಿಲವನ್ನು ಕೊರೆಯುವ ಜಾತಿಯದಾಗಿದ್ದು ಅವುಗಳ ಬಳಕೆ ಈ ಮುಚ್ಚಿರುವ ವಿಧಾನದಲ್ಲಿ ಬಳಸಲು ಸೂಕ್ತವಲ್ಲ. ಬೇರೆ ಇನ್ನಿತರ ಜಾತಿಯ ಮಣ್ಣಿನ ಕೀಟಗಳು, ಹುಳುಗಳು ಈ ಸಣ್ಣ ಪ್ರಮಾಣದ ಮಿಶ್ರಗೊಬ್ಬರವನ್ನು ತಯಾರಿಸುವ ಪ್ರಯತ್ನಕ್ಕೆ ಕೊಡುಗೆಯಾಗಿದೆ.

ಹವಾಮಾನ ಹಾಗು ತಾಪಮಾನ[ಬದಲಾಯಿಸಿ]

ಮಿಶ್ರಗೊಬ್ಬರವನ್ನು ತಯಾರಿಸಲು ಬಳಸುವ ಎರೆಹುಳ ೧೫°C-೨೫°C ತಾಪಮಾನದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಆದರೆ ೩೦°Cಕ್ಕಿಂತ ಹೆಚ್ಚು ತಾಪಮಾನಗಳು ಅವುಗಳಿಗೆ ಹಾನಿಯನ್ನುಂಟುಮಾಡಬಹುದು. ಹೊರಗಡೆ ಈ ಮಿಶ್ರಗೊಬ್ಬರದ ಬಿನ್ನುಗಳನ್ನು ಇಟ್ಟಿದ್ದರೆ ನೇರ ಬಿಸಿಲಿನಿಂದ ದೂರವಿಡಬೇಕು ಹಾಗು ತಂಡಿಗಾಲದಲ್ಲಿ ಮಂಜು ಒಳಗೆ ಬೀಳದಂತೆ ನೋಡಿಕೊಳ್ಳಬೇಕು. ಭಾರಿ ಪ್ರಮಾಣದ ಬಿನ್ನುಗಳ ತಾಪಮಾನವನ್ನು ನಿಯಂತ್ರಿಸಬೇಕು. ಅವುಗಳಿಗೆ ಉಷ್ಣ-ತಡಿಯುವ ಶಕ್ತಿಯಿರಬೇಕು, ಏಕೆಂದರೆ ಎರೆಹುಳಗಳು ಜೈವಿಕ ತ್ಯಾಜ್ಯಗಳನ್ನು ಕೊಳೆಯುವಾಗ ಶಾಖವನ್ನು ಉತ್ಪತ್ತಿ ಮಾಡುತ್ತದೆ.

ಸಾಮಗ್ರಿಗಳು[ಬದಲಾಯಿಸಿ]

ಜೈವಿಕ ವಿಘಟನೀಯ ತ್ಯಾಜ್ಯವನ್ನು ಮಧ್ಯಮ ಪ್ರಮಾಣದಲ್ಲಿ ಬಳಸಿದರೆ ಅವು ಬಿನ್ನುಗಳ ಉಷ್ಣಾಂಶವನ್ನು ನಿಯಂತ್ರಿಸಬಹುದು. ಮಾಂಸ ತ್ಯಾಜ್ಯ ಮತ್ತು ಡೈರಿ ಉತ್ಪನ್ನಗಳನ್ನು ಬಳಸಬಹುದು ಆದರೆ ಇನ್ನಿತರ ಕ್ರಿಮಿಕೀಟಗಳಿಂದ ಕಾಪಾಡಬೇಕಾಗಿದೆ.

ಸಣ್ಣ ಪ್ರಮಾಣ[ಬದಲಾಯಿಸಿ]

ಈ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಅಡುಗೆಮನೆಯ ತ್ಯಾಜ್ಯ ಮತ್ತು ಕೈ ತೋಟದ ತ್ಯಾಜ್ಯವನ್ನು ಬಳಸುತ್ತಾರೆ. ಅವುಗಳು ೧. ಹಣ್ಣು ಮತ್ತು ತರಕಾರಿಗಳು (ನಿಷೇಧ - ಸಿಟ್ರಸ್, ಈರುಳ್ಳಿ, ಬೆಳ್ಳುಳ್ಳಿ) ೨. ಹಣ್ಣು ಮತ್ತು ತರಕಾರಿ ಸಿಪ್ಪೆ ಮತ್ತೆ ತುದಿಗಳು ೩. ಟೀ ಸೊಪ್ಪಿನ ಪುಡಿ ಹಾಗು ಕಾಫಿ ಪುಡಿ ತ್ಯಾಜ್ಯ ೪. ಚೆನ್ನಾಗಿ ತೊಳೆದು ಪುಡಿಮಾಡಿದ ಮೊಟ್ಟೆ ಚಿಪ್ಪುಗಳು ೫. ಎಲೆಗಳು ಮತ್ತು ಸಸ್ಯ ತುಣುಕು

ಹೆಚ್ಚಿನ ಪ್ರಮಾಣ[ಬದಲಾಯಿಸಿ]

ಅಧಿಕ ಪ್ರಮಾಣದ ಆಹಾರವು ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಈ ಹೆಚ್ಚಿನ ಪ್ರಮಾಣ ಎರೆಹುಳು ಕೃಷಿ ವ್ಯವಸ್ಥೆಯನ್ನು ನಡೆಸಲು ಸಾಧ್ಯ. ೧. ಹಸು ಮತ್ತು ಹಂದಿ ಗೊಬ್ಬರ ೨. ಚರಂಡಿ ಕೆಸರು ೩. ಬ್ರೆವರಿ ತ್ಯಾಜ್ಯ ೪. ಹತ್ತಿ ಗಿರಣಿ, ಕೃಷಿ ತ್ಯಾಜ್ಯ ೫. ಆಹಾರ ಸಂಸ್ಕರಣಾ, ಹೋಟೆಲ್ ತ್ಯಾಜ್ಯ ೬. ಹುಲ್ಲು ತುಣುಕು ಮತ್ತು ಮರದ ಚೆಕ್ಕೆ

ಕೊಯ್ಲು[ಬದಲಾಯಿಸಿ]

ಯಾವುದೇ ತಿನ್ನದ ಆಹಾರ ಅಥವ ಬೆಡ್ಡಿಂಗ್ ಇಲ್ಲದಾಗ ಎರೆಹುಳು ಕೊಯ್ಲು ಮಾಡಲು ತಯಾರಾಗಿರುತ್ತದೆ. ಸಣ್ಣ ಪ್ರಮಾಣದ ವ್ಯವಸ್ಥೆಯಲ್ಲಿ ಅನೇಕ ರೀತಿಯಕೊಯ್ಲು ಕಾಣಬಹುದು. ಎರೆಹುಳು ಕೃಷಿಯ ಕೊಯ್ಲು ಗೊಬ್ಬರದಲ್ಲಿ ಸಿಕ್ಕಿಬಿದ್ದ ಅನೇಕ ಹುಳಗಳು ಸಾಧ್ಯವಾದಷ್ಟು ಉಳಿಸಲು ಬಯಸುತ್ತಾರೆ. ಹುಳುಗಳ ಮೊಟ್ಟೆಗಳನ್ನು ತೆಗೆದು ಪುನಃ ಬಿನ್ನುಗಳಿಗೆ ಹಿಂತಿರಿಗಿಸಬಹುದಾದ ಪ್ರಯತ್ನ ಒಳ್ಳೆಯದು. ಈ ಮೊಟ್ಟೆಗಳು ಸಣ್ಣದಾಗಿ, ನಿಂಬೆಯ ಆಕಾರದ್ದಾಗಿ ಮತ್ತು ಹಳದಿ ಬಣ್ಣ ಹೊಂದಿರತ್ತದೆ. ಇವು ಸುಲಭವಾಗಿ ಬರಿಗಣ್ಣಿಗೆ ಕಾಣಿಸುತ್ತದೆ. ಹೀಗಾಗಿ ಆರಿಸಿಕೊಳ್ಳಲು ಸುಲಭ.

ಗುಣಗಳು[ಬದಲಾಯಿಸಿ]

ಇತರ ವಿಧಾನಗಳಲ್ಲಿ ತಯಾರಿಸಿದ ಮಿಶ್ರಗೊಬ್ಬರಕ್ಕಿಂತ ಎರೆಹುಳು ಗೊಬ್ಬರದಲ್ಲಿ ಪೋಷಕಾಂಷಗಳು ಹೆಚ್ಚಾಗಿ ಕಂಡುಬಂದಿದ್ದು, ವ್ಯಾಪಾರದ ಸಸ್ಯ ಮಾಧ್ಯಮವನ್ನು ಗುಣಮಟ್ಟದಲ್ಲಿ ಮೀರಿಸಿದೆ. ಎರೆಹುಳು ಗೊಬ್ಬರದಲಿ ಮೆಗ್ನಿಸಿಯಮ್ ಹಾಗು ಪಿ.ಎಚ್ ಮಟ್ಟದಲ್ಲಿ ಹೊಂದಾಣಿಕೆಯ ಅಗತ್ಯವಿದೆ. ಸಣ್ಣ ಪ್ರಮಾಣದಲ್ಲಿ ತಯಾರಾದ ಎರೆಹಳು ಗೊಬ್ಬರದಲ್ಲಿ ಸೂಕ್ಷ್ಮಜೀವಿಯ ಜೀವರಾಶಿಗಳು, ಮಣ್ಣಿನ ಇದರ ಚಟುವಟಿಕೆ ಕಡಿಮೆಯಾಗಿದೆ. ಹುಳುವಿನ ಲೋಳೆ ಇರುವ ಕಾರಣ ಎರೆಹುಳು ಮಣ್ಣಿನಲ್ಲಿ ಪೋಷಕಾಂಶಗಳನ್ನು ನೀರಿನಲ್ಲಿ ತೊಳೆದು ಹೋಗದಂತೆ ತಡೆದು, ಹೆಚ್ಚಿನ ತೇವಾಂಷವನ್ನು ಹೊಂದಲು ಸಹಕಾರಿಯಾಗಿದೆ.

ಪ್ರಯೋಜನಗಳು[ಬದಲಾಯಿಸಿ]

  • ಮಣ್ಣು:

ಅ. ಮಣ್ಣಿನಲ್ಲಿ ಗಾಳಿಯ ಸುಧಾರಣಿಗೊಳಿಸುತ್ತದೆ. ಆ. ಮಣಿನಲ್ಲಿ ಸೂಕ್ಷ್ಮಾಣುಗಳ ಸಮೃದ್ಧಗೊಳಿಸುತ್ತದೆ. ಇ. ಸಾವಯವ ತ್ಯಾಜ್ಯಕ್ಕಿಂತ ಎರೆಹುಳ ಎರಕದಲ್ಲಿ ೧೦ರಿಂದ ೨೦ರಷ್ಟು ಅಧಿಕ ಸೂಕ್ಷ್ಮ ಚಟುವಟಿಕೆ ಹೆಚ್ಚಾಗಿಕಂಡಿದೆ

  • ಸಸ್ಯ ಬೆಳವಣಿಗೆಗೆ:

ಅ. ಚಿಗುರುವಿಕೆ, ಸಸ್ಯ ಬೆಳವಣಿಗೆ ಹಾಗು ಇಳುವರಿಯನ್ನು ವೃದ್ಧಿಸುತ್ತದೆ. ಆ. ಬೇರಿನ ಬೆಳವಣಿಗೆ ಹಾಗು ಸಸ್ಯ ರಚನೆ ಸುಧಾರಿಸುತ್ತದೆ.

  • ಆರ್ಥಿಕತೆ:

ಅ. ಸಸ್ಯ ತ್ಯಾಜ್ಯ ಪರಿವರ್ತನೆಯಿಂದ ಕಸದ ತ್ಯಾಜ್ಯದ ಹರಿವು ಕಡಿಮೆಯಾಗುತ್ತದೆ. ಆ. ಸ್ಥಳೀಯ ಮಟ್ಟದಲ್ಲಿ ಕಡಿಮೆ ಕೌಶಲ್ಯದ ಕೆಲಸ ಸೃಷ್ಟಿಯಾಗುತ್ತದೆ.

  • ಪರಿಸರ:

ಅ. ಬೃಹತ್ ವ್ಯವಸ್ಥೆಗಳಲ್ಲಿ ಸಾಮಾನ್ಯವಾಗಿ ತಾಪಮಾನ ನಿಯಂತ್ರಣ ಮತ್ತು ಯಾಂತ್ರೀಕೃತ ಕೊಯ್ಲು ಬಳಸುತ್ತಾರೆ ಆ. ಎರೆಹುಳು ಗೊಬ್ಬರ ತಯಾರಿಕೆಯಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸಬಹುದು

ಗೊಬ್ಬರ[ಬದಲಾಯಿಸಿ]

ಎರೆಹುಳು ಮಿಶ್ರಗೊಬ್ಬರವನ್ನು ನೇರ ಮಣ್ಣಿನಲ್ಲಿ ಮಿಶ್ರಗೊಳಿಸಬಹುದು ಅಥವ ನೀರಿನಲ್ಲಿ ಬೆರಸಿ ಗೊಬ್ಬರ ಚಹಾ ತಯಾರಿಸಿ ಕೆಲವು ಗಂಟೆ ಅಥವ ದಿನಗಳ ಕಾಲ ಅದಕ್ಕೆ ಆಮ್ಲಜನಕ ಪಂಪ್ ಮೂಲಕ ನೀಡಬೇಕು. ನಂತರ ಸೂಕ್ಷ್ಮಾಣುಗಳ ಚಟುವಟಿಕೆ ಹೆಚ್ಚಿಸಲು ಈ ಸಮಯದಲ್ಲಿ ಮಿಶ್ರಗೊಬ್ಬರಕ್ಕೆ ಹೆಚ್ಚಿನ ಗಾಳಿಯಾಡಲು ಅನುಕೂಲ ಮಾಡಬೇಕು. ಈ ರೀತಿ ತಯಾರಾದ ದ್ರವ್ಯಕಾರದ ಚಹಾವನ್ನು ಗೊಬ್ಬರವಾಗಿ ಅಥವ ಸಸ್ಯಗಳ ಮೇಲೆ ಚಿಮುಕಿಸಲಾಗುತ್ತದೆ. ಗಾಢ ಕಂದು ತ್ಯಾಜ್ಯ ದ್ರವ್ಯ ಕೆಲವು ಎರೆಹುಳ ಮಿಶ್ರಗೊಬ್ಬರ ತ್ಯಾರಿಸುವ ವ್ಯವಸ್ಥೆಗಳಲ್ಲಿ ಕೆಳಗೆ ಹರಿದು ಬರುತ್ತದೆ. ಇದನ್ನು ಪುನಃ ಬಿನ್ನುಗಳಿಗೆ ಹಾಕಿದಾಗ ಅದರ ತೇವಾಂಶ ಸಮತೋಲನ ಕಾಪಾಡಬಹುದು ಏಕೆಂದರೆ ಸಾವಯವ ಆಮ್ಲಗಳು ಎರೆಹುಳಗಳ ಮೇಲ ವಿಶೇಷ ರೀತಿಯಲ್ಲಿ ಪ್ರಭಾವ ಬೀರುತ್ತದೆ.

ನಿವಾರಣೆ[ಬದಲಾಯಿಸಿ]

೧. ವಾಸನೆ

 ಈ ಮಿಶ್ರಗೊಬ್ಬರ ತಯಾರಿಕೆಯ ಬಿನ್ನುಗಳನ್ನು ಮುಚ್ಚಿದಾಗ ಯಾವುದೇ ದುರ್ವಾಸನೆ ಇರುವುದಿಲ್ಲ. ಮುಚ್ಚಳ ತೆಗೆದಾಗ ಮಣ್ಣಿನ ವಾಸನೆ ಬರುತ್ತದೆ. ಹುಳಗಳಿಗೆ ಆಮ್ಲಜನಕದ ಅಗತ್ಯ. ಹಾಗಾಗಿ ಬಿನ್ನುಗಳಿಗೆ ರಂಧ್ರಗಳನ್ನು ಅಳವಡಿಸಿ ಆಗಾಗ ಬಿನ್ನುಗಳ ಪದಾರ್ಥವನ್ನು ಕೈಮಾಡಬೇಕು. ಬಿನ್ನುಗಳಲ್ಲಿ ಸಾವಯವ ಪದಾರ್ಥ ಅಥವ ದ್ರವ್ಯಾಂಶ ಹೆಚ್ಚಾಗುವ ಬಿನ್ನುಗಳಲ್ಲಿ ಅಮೋನಿಯಾ ವಾಸನೆ

೨. ತೇವಾಂಶ

 ಅಧಿಕ ತ್ಯಾಜ್ಯ ನೀರನ್ನು ತೆಗೆಯಬೇಕು, ದುರ್ವಾಸನೆ ತಪ್ಪಿಸಿ ಹುಳುಗಳನ್ನು ಜೀವಂತವಾಗಿ ಇರಿಸಬೇಕು. ಇದಕ್ಕೆ ಆರೋಗ್ಯಕರ ಪರಿಸ್ಥಿತಿ ಪುನಃ ಬಿನ್ನುಗಳಲ್ಲಿ ಸ್ಥಾಪಿಸಬೇಕು. ಇದನ್ನು ಸಾಧಿಸಲು ಹೆಚ್ಚಿನ ತೇವಾಂಶ ರಹಿತ ಪದಾರ್ಥ ಅಂದರೆ ಒಣ ಬೆಡ್ಡಿಂಗ್ ನಿರ್ಮಿಸಲು ದಿನಪತ್ರಿಕೆಗಳ ತುಂಡನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

೩. ಕೀಟ ಜಾತಿ

 ಮಾಂಸ ಮತ್ತು ಡೈರಿ ಪದಾರ್ಥಗಳ ಕಡಿಮೆ ಬಳಕೆಯಿಂದ ಕೀಟ ತೊಂದರೆಯನ್ನು ನಿವಾರಿಸಬಹುದು. ಹಣ್ಣು ಮತ್ತು ತರಕಾರಿಯ ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ಬೆಡ್ಡಿಂಗ್ ಮೂಲಕ ಮುಚ್ಚದಿದ್ದರೆ, ಬೆಚ್ಚಗಿನ ಹವಾಮಾನದಲ್ಲಿ ಹಣ್ಣು ಮತ್ತು ವಿನೆಗರ್ ನೊಣಗಳು ಬಿನ್ನುಗಳಲ್ಲಿ ವೃಧಿಯಾಗುತ್ತದೆ. ಕೀಟಗಳನ್ನು ದೂರವಿಡಲು ಸರಿಯಾದ ಪಿ.ಎಚ್ ನಿಯಂತ್ರಣ ಅಗತ್ಯ.

೪. ಹುಳಗಳ ಪಾರಾಗುವಿಕೆ

 ಬಿನ್ನುಗಳಲ್ಲಿ ದೀಪದ ವ್ಯವಸ್ಥೆ ಮಾಡಿದರೆ ಹುಳುಗಳು ರಂಧ್ರದ ಮೂಲಕ ಹೊರಕ್ಕೆ ಹೋಗುವುದನ್ನು ತಡೆಯಬಹುದು. ಏಕೆಂದರೆ ಮಳೆಯಾದ ನಂತರ, ಹೊರಗಡೆ ಆರ್ದ್ರತೆ ಹೆಚ್ಚಾದಾಗ ಹುಳು ಬಿನ್ನಿನಿಂದ ಹೊರಹೋಗಲು ಯತ್ನಿಸುತ್ತದೆ.

೫. ಪೌಷ್ಟಿಕ ಮಟ್ಟ

 ನೈಟ್ರೊಜೆನ್, ಪೊಟಾಶಿಯಮ್ ಅಂಶಗಳು ಸಣ್ಣ ಪ್ರಮಾಣದಲ್ಲಿ ಎರೆಹುಳು ಗೊಬ್ಬರದಲ್ಲಿ ಅಸಮಂಜಸವಾಗಿ ಇರುತ್ತದೆ. ಎನ್ ಪಿ ಕೆ ಪರಿಕ್ಷೆಗೆ ಒಳಪಡಿಸಿದ ಗೊಬ್ಬರ ಅಥವಾ ಚಹಾ ತೋಟಗಳಲ್ಲಿ ಬಳಸಲು ಅರ್ಹವಾಗಿರುತ್ತದೆ. ಉತ್ತಮ ಗುಣಮಟ್ಟದ ಗೊಬ್ಬರ ವಾಣಿಜ್ಯ ಮಟ್ಟದಲ್ಲಿ ತಯಾರಿಸಲು ತಿದ್ದುಪಡಿ ಅಗತ್ಯವಿದೆ. ನೈಟ್ರೊಜೆನ್ ಬರ್ನ್ ತಡೆಯಲು ಮಿಶ್ರಗೊಬ್ಬರವನ್ನು ಸಾಧಾರಣ ಮಣ್ಣಿನೊಂದಿಗೆ ೫೦:೫೦ ಅನುಪಾತದಲ್ಲಿ ಮಿಶ್ರಮಾಡಿ ಬಳಸಬೇಕು.

ಹೊರಗಿನ ಸಂಪರ್ಕ[ಬದಲಾಯಿಸಿ]