ಎರಡನೆಯ ಆಂಗ್ಲೊ-ಆಫ್ಘಾನ್ ಯುದ್ಧ
| ||||||||||||||||||||||||||
ಎರಡನೆಯ ಆಂಗ್ಲೊ-ಆಫ್ಘಾನ್ ಯುದ್ಧ ವು ಯುನೈಟೆಡ್ ಕಿಂಗಡಮ್ (ಇಂಗ್ಲೆಂಡ್)ಮತ್ತು ಅಫ್ಘಾನಿಸ್ತಾನದ ನಡುವೆ 1878 ರಿಂದ 1880 ರ ವರೆಗೆ ನಡೆಯಿತು.ಯಾವಾಗ ದೇಶವು ಬಾರಕ್ಜೈ ರಾಜ್ಯದ ಶೇರ್ ಅಲಿಖಾನ್ ನ,ಆಡಳಿತಕ್ಕೊಳಪಟ್ಟಿತ್ತೋ ಆಗ ಈ ಯುದ್ಧ ಸಂಭವಿಸಿತು.ಶೇರ್ ಅಲಿ ಖಾನ್ ಹಿಂದಿನ ಎಮಿರ್ ದೊಸ್ತ್ ಮೊಹ್ಮದ್ ಖಾನ್ ನ ಪುತ್ರನಾಗಿದ್ದ. ಭಾರತ ಬ್ರಿಟಿಶ್ ರು ಎರಡನೆಯ ಬಾರಿಗೆ ಆಫ್ಘಾನಿಸ್ತಾನ ಮೇಲೆ ಈ ದಾಳಿ ನಡೆಸಿದ್ದರು. ಬ್ರಿಟಿಶ್ ರ ಎಲ್ಲಾ ಭೌಗೋಳಿಕ-ರಾಜಕೀಯ ಉದ್ದೇಶಗಳು ಈಡೇರಿದ ನಂತರ ಈ ಯುದ್ಧ ಪ್ರವೃತ್ತಿ ಅಂತ್ಯಗೊಂಡಿತು. ಬಹಳಷ್ಟು ಬ್ರಿಟಿಶ್ ಮತ್ತು ಭಾರತೀಯ ಸೈನಿಕರನ್ನು ಆಫ್ಘಾನಿಸ್ತಾನದಿಂದ ವಾಪಸು ಕಳಿಸಲಾಯಿತು. ಆಫ್ಘನ್ ರಿಗೆ ಆಂತರಿಕ ಸಾರ್ವಭೌಮತ್ವದ ಅನುಮತಿ ನೀಡಲಾಗಿತ್ತು.ಅವರು ತಮ್ಮ ವಿದೇಶೀ ಸಂಬಂಧಗಳ ನಿಯಂತ್ರಣವನ್ನು ಬ್ರಿಟಿಶ್ ರಿಗೆ [೪][೫] ಒಪ್ಪಿಸಿದ್ದನ್ನು ರದ್ದುಗೊಳಿಸಲಾಯಿತು.
ಯುದ್ಧ[ಬದಲಾಯಿಸಿ]
ಯುರೊಪ್ ನಲ್ಲಿನ ರಷಿಯಾ ಮತ್ತು ಬ್ರಿಟೇನ್ ಮಧ್ಯೆದ ಉದ್ವಿಗ್ನತೆಯು ಕಾಂಗ್ರೆಸ್ ಆಫ್ ಬರ್ಲಿನ್ ನಲ್ಲಿ 1878ರ ಹೊತ್ತಿಗೆ ಮುಕ್ತಾಯಗೊಂಡಿತು.ರಷಿಯಾವು ತನ್ನ ಗಮನವನ್ನು ಕೇಂದ್ರ ಏಷಿಯಾದೆಡೆಗೆ ತಿರುಗಿಸಿತು. ಆ ಬೇಸಿಗೆಯಲ್ಲಿ ರಷಿಯಾವು ಕಾಬುಲ್ ಗೆ ಆವ್ಹಾನವಿಲ್ಲದಿದ್ದರೂ ರಾಜತಾಂತ್ರಿಕ ನಿಯೋಗವೊಂದನ್ನು ಕಳಿಸಿತು. ಶೇರ್ ಅಲಿ ಖಾನ್, ಅಫ್ಘಾನಿಸ್ತಾನ್ ದ ಅಮೀರ್ ಅವರನ್ನು ಆದಷ್ಟು ಹೊರಗಿಡಲು ಪ್ರಯತ್ನಿಸಿದನಾದರೂ ಯಶಸ್ವಿಯಾಗಲಿಲ್ಲ. ಕಾಬುಲ್ ಗೆ ರಷಿಯನ್ ನಿಯೋಗ 22 ಜುಲೈ 1878 ರಲ್ಲಿ ಬಂದಿತು.ಆಗ ಬ್ರಿಟಿಶ್ ಆಯೋಗ ಶೇರ್ ಅಲಿ ಖಾನ, ತಮ್ಮ ನಿಯೋಗಕ್ಕೂ ಅನುಮತಿ ನೀಡಬೇಕೆಂದು ಬೇಡಿಕೆಯೊಡ್ಡಿತು. ನೆವಿಲ್ಲೆ ಬೌಲ್ಸ್ ಚೆಂಬರ್ಲಿಯನ್ ನೇತೃತ್ವದ ಈ ನಿಯೋಗವನ್ನು ಅಮೀರ್ ಬರಮಾಡಿಕೊಳ್ಳಲು ನಿರಾಕರಿಸಿದ.ಅಲ್ಲದೇ ಅದನ್ನು ಕಳಿಸಿದರೆ ಅನಾಹುತವಾದೀತೆಂದು ಹೆದರಿಸಿದ. ವೈಸರಾಯ್ ಲಾರ್ಡ್ ಲಿಟ್ಟೊನ್ ರಾಜತಾಂತ್ರಿಕ ನಿಯೋಗವೊಂದು ಸೆಪ್ಟೆಂಬರ್ 1878ರಲ್ಲಿ ಅಲ್ಲಿಗೆ ಹೋಗುವಂತೆ ಸೂಚಿಸಿದ.ಆದರೆ ಈ ನಿಯೋಗವು ಪೂರ್ವದ ಪ್ರವೇಶ ದ್ವಾರ ಪ್ರವೇಶಿಸಿದಾಗ ಪ್ರತಿರೋಧ ಅನುಭವಿಸಿ ಖೈಬರ್ ಒಳಮಾರ್ಗದಿಂದಲೇ ವಾಪಸಾಗಬೇಕಾಯಿತು.ಇದರಿಂದಾಗಿ ಎರಡನೆಯ ಆಂಗ್ಲೊ-ಆಫ್ಘಾನ್ ಯುದ್ಧಕ್ಕೆ ನಾಂದಿಯಾಯಿತು.
ಮೊದಲ ಹಂತ[ಬದಲಾಯಿಸಿ]
ಸುಮಾರು 40,000 ಬ್ರಿಟಿಶ್ ಪಡೆ ಅದರಲ್ಲಿ ಭಾರತೀಯ ಸೈನಿಕರೂ ಇದ್ದರು.ಪುರುಷ ಸೈನಿಕರು ಹೋರಾಟಕ್ಕಾಗಿ ಆಫ್ಘಾನಿಸ್ತಾನಿನ ಮೂರು ವಿಭಿನ್ನ ಬಿಂದುವಿನಲ್ಲಿ ಜಮಾವಣೆಯಾದರು. ಈ ತಕ್ಷಣದ ಅಪಾಯದಿಂದ ಶೇರ್ ಅಲಿಖಾನ್ ರಷಿಯನ್ ತ್ಸಾರ್ ಗೆ ವೈಯಕ್ತಿಕವಾಗಿ ಸಹಾಯಕ್ಕಾಗಿ ಮನವಿ ಮಾಡಿಕೊಳ್ಳಲು ಹೋದ ಆದರೆ ಆತ ಯಾಚಿಸಲಾಗದೇ ಮಜರಿ ಶರಿಫ್ ಗೆ ಹಿಂದಕ್ಕೆ ಮರಳಿದ.ನಂತರ ಆತ ಫೆಬ್ರವರಿ 21,1879 ರಲ್ಲಿ ಮರಣವನ್ನಪ್ಪಿದ.[೭]
ಒಡಂಬಡಿಕೆ[ಬದಲಾಯಿಸಿ]
ದೇಶದ ಬಹುಭಾಗವನ್ನು ಬ್ರಿಟಿಶ್ ಸೈನಿಕರು ಸುತ್ತುವರಿದಿದ್ದರಿಂದ ಶೇರ್ ಅಲಿಯ ಪುತ್ರ,ಉತ್ತಾರಿಧಿಕಾರಿ ಮೊಹ್ಮದ್ ಯಾಕುಬ್ ಖಾನ್ ದೇಶದ ಇನ್ನುಳಿದ ಭಾಗದ ಮೇಲಿನ ದಾಳಿ ತಡೆಗೆ ಮೇ,1879ರಲ್ಲಿ ಟ್ರೀಟಿ ಆಫ್ ಗಂಡಮಾಕ್ ಗೆ ಸಹಿ ಹಾಕಿದ. ಈ ಒಪ್ಪಂದದ ಪ್ರಕಾರ ವಾರ್ಷಿಕ ಕೆಲಮಟ್ಟಿಗಿನ ಆರ್ಥಿಕ ಸಹಾಯ ಮತ್ತು ವಿದೇಶೀಯರ ದಾಳಿಗಳಾದಲ್ಲಿ ರಕ್ಷಣೆ ಭರವಸೆ ದೊರೆಯಿತು.ಯಾಕುಬ್ ಆಫ್ಘಾನ್ ನ ವಿದೇಶೀ ವ್ಯವಹಾರಗಳನ್ನು ಬ್ರಿಟಿಶ್ ರಿಗೆ ಒಪ್ಪಿಸಬೇಕಾಯಿತು.ಬ್ರಿಟಿಶ್ ರ ಪ್ರತಿನಿಧಿಗಳು ಕಾಬುಲ್ ಮತ್ತಿತರ ಸ್ಥಳೀಯತೆಗಳಲ್ಲಿ ಬೀಡು ಬಿಟ್ಟರು.ಹೀಗೆ ಬ್ರಿಟಿಶ್ ನಿಯಂತ್ರಣವು ಖೈಬರ್ ಮತ್ತು ಮಿಕ್ನಿ ಸುರಂಗ ಮಾರ್ಗಗಳಿಗೂ ವಿಸ್ತರಿಸಿತು.ಆಫ್ಘಾನಿಸ್ತಾನ್ ಹಲವು ಪ್ರಮುಖ ಪ್ರದೇಶ ಸ್ಥಳಗಳನ್ನು ಅಲ್ಲದೇ ಕ್ವಾಟ್ಟಾವನ್ನು ಬ್ರಿಟಿಶ್ ರಿಗೆ ಬಿಟ್ಟುಕೊಡಬೇಕಾಯಿತು.ಆಗ ಬ್ರಿಟಿಶ್ ಸೈನ್ಯ ಅಲ್ಲಿಂದ ನಿರ್ಗಮಿಸಿತು. ಆದರೆ ಸೆಪ್ಟೆಂಬರ್ 3 1879 ರಲ್ಲಿ ಕಾಬುಲ್ ನಲ್ಲಿನ ಗಲಭೆಯು ಸರ್ ಪೆರ್ರೆ ಕಾವಗ್ನರಿ ಹಾಗು ಅವರ ರಕ್ಷಕ ಸಿಬ್ಬಂದಿಯನ್ನು ಹತ್ಯೆ ಮಾಡಲು ಕಾರಣವಾಯಿತು.ಆತನ ರಕ್ಷಕರು ಮತ್ತು ಸಿಬ್ಬಂದಿಯ ಹತ್ಯೆಯ ಪ್ರಚೋದನೆಯು ಎರಡನೆಯ ಆಫ್ಘಾನ್ ಯುದ್ಧಕ್ಕೆ ನಾಂದಿಯಾಯಿತು.
ಎರಡನೆಯ ಹಂತ[ಬದಲಾಯಿಸಿ]
ಮೇಜರ್ ಜನರಲ್ ಸರ್ ಫ್ರೆಡೆರಿಕ್ ರಾಬರ್ಟ್ಸ್ ಕಾಬುಲ್ ಫೀಲ್ಡ್ ಫೊರ್ಸ್ ನ ನೇತೃತ್ವ ವಹಿಸಿದ್ದರು.ಶಟರ್ ಗಾರ್ಡನ್ ಪಾಸ್ ಮೇಲೆ ಕೇಂದ್ರ ಆಫ್ಘಾನಿಸ್ತಾನವನ್ನು ಆಕ್ರಮಿಸಿ ಆಫ್ಘಾನ್ ಸೈನ್ಯವನ್ನು ಚಾರ್ ಅಸಿಯಬ್ ಬಳಿ ಅಕ್ಟೋಬರ್ 6,1879 ರಲ್ಲಿ ಸೋಲಿಸಿ ಕಾಬುಲ್ ನ್ನು ವಶಪಡಿಸಿಕೊಂಡರು. ಘಾಜಿ ಮೊಹ್ಮದ ಜಾನ್ ಖಾನ್ ವರ್ದಕ್ ಬ್ರಿಟಿಶ್ ವಿರುದ್ದ ದಂಗೆ ಎದ್ದು ಬ್ರಿಟಿಶ್ ಸೈನ್ಯದ ಮೇಲೆ ದಾಳಿ ನಡೆಸಿದನು.ಕಾಬುಲ್ ಸಮೀಪದ ಶೆರ್ಪುರ್ ಕಂಟೋನ್ಮೆಂಟ್ ನ್ನು ಪಡೆಯಲು ಡಿಸೆಂಬರ್ 1879 ರಲ್ಲಿ ಹೋದಾಗ ಆತ ಸೋತು ಹೋದನಲ್ಲದೇ ಇದರಿಂದಾಗಿ ಆತನ ಬಂಡಾಯವೂ ಅಂತ್ಯ ಕಂಡಿತು. ಯಾಕುಬ್ ಖಾನ್ ಸಂಶಯಿಸಿದಂತೆ ಕಾವಗ್ನಿರ್ ಮತ್ತು ಆತನ ಸಿಬ್ಬಂದಿಯ ದುಷ್ಕೃತ್ಯದ ಕಾರಣದಿಂದಾಗಿ ಈ ತನ್ನ ಅಧಿಕಾರ ಹೋಗಲು ಕಾರಣವಾಗಿದೆ ಎಂಬುದು ಆತನ ತರ್ಕವಾಗಿತ್ತು. ಬ್ರಿಟಿಶ್ ರು ಈ ಸಂಬಂಧ ಆಫ್ಘಾನಿಸ್ತಾನ್ ವಿಭಾಗಿಸಲು ಇಲ್ಲವೇ ಅಗತ್ಯ ರಾಜಕೀಯ ಪರಿಹಾರ ಕಂಡು ಹಿಡಿಯಲು ಯೋಜನೆ ರೂಪಿಸಿದರು.ಇದರ ಬಹಳಷ್ಟು ರಾಜರು ಅಥವಾ ಯಾಕುಬ್ ನ ಸಹೋದರ ಅಯುಬ್ ಖಾನ್ ನನ್ನು ಗದ್ದುಗೆಗೆ ತರಲು ಯತ್ನಿಸಲಾಯಿತು.ಅಂತಿಮವಾಗಿ ಆತನ ಸಹೋದರ ಸಂಬಂಧಿ ಅಬ್ದುರ್ ರಹಮಾನ್ ಖಾನ್ ನನ್ನು ಅಮಿರ್ ಎಂದು ಹೇಳಿ ಗದ್ದುಗೆ ಮೇಲೆ ಕೂಡ್ರಿಸಲಾಯಿತು. ಹೆರತ್ ನ ಗವರ್ನರ್ ಆಗಿದ್ದ ಅಯುಬ್ ಖಾನ್ ದಂಗೆ ಎದ್ದು ಬ್ರಿಟಿಶ್ ರ ಒಂದು ಸೈನ್ಯವನ್ನು ಬ್ಯಾಟಲ್ ಆಫ್ ಮೈವಾಂಡ್ ನಲ್ಲಿ ಸೋಲಿಸಿ ಜುಲೈ 1880 ರಲ್ಲಿ ಕಂಧಹಾರ್ ವನ್ನು ವಶಪಡಿಸಿಕೊಂಡನು. ಆಗ ರಾಬರ್ಟ್ಸ್ ಪ್ರಮುಖ ಬ್ರಿಟಿಶ್ ಸೈನ್ಯವನ್ನು ಕಾಬುಲ್ ಎಡೆಗೆ ತಂದನು.ನಂತರ ಅಯುಬ್ ಖಾನ್ ನನ್ನು ಬ್ಯಾಟಲ್ ಆಫ್ ಕಂಧಹಾರ್ ನಲ್ಲಿ ಸೆಪ್ಟೈಂಬರ್ ನಲ್ಲಿ ಸೋಲಿಸಿ ಈ ಬಂಡುಕೋರತನಕ್ಕೆ ಕೊನೆ ಹಾಡಿದನು. ಅಬ್ದುರ್ ರಹಮಾನ್ ಟ್ರೀಟಿ ಆಫ್ ಗಂಡಮಾರ್ಕ್ ನ್ನು ಪುನರುಜ್ಜೀವನಗೊಳಿಸಿ ಬ್ರಿಟಿಶ್ ರಿಗೆ ಯಾಕುಬ್ ಖಾನ್ ವಶಪಡಿಸಿಕೊಂಡ ಪ್ರದೇಶಗಳ ನಿಯಂತ್ರಣಕ್ಕೆ ಅನುವು ಮಾಡಿಕೊಟ್ಟನು.ತನಗೆ ಹಣದ ನೆರವು ಮತ್ತು ರಕ್ಷಣೆಯ ಬದಲಿಗೆ ಅಫ್ಘಾನಿಸ್ತಾನನ ವಿದೇಶೀ ವ್ಯವಹಾರಗಳನ್ನು ಅವರಿಗೇ ಬಿಟ್ಟುಕೊಟ್ಟನು. ಬ್ರಿಟಿಶ್ ರ ವಿರುದ್ದದ ಎಲ್ಲಾ ಪ್ರಚೋದನಾತ್ಮಕ ವಿಚಾರಗಳನ್ನು ಬಿಟ್ಟ ನಂತರ ಬ್ರಿಟಿಶ್ ನಿವಾಸ ಕಾಬುಲ್ ನಿಂದ ಖಾಲಿಯಾಯಿತು.ಹೀಗಾಗಿ ತಮ್ಮ ಉದ್ದೇಶ ಸಾರ್ಥಕವಾದ ಅನಂತರ ಬ್ರಿಟಿಶ್ ರು ಅಲ್ಲಿಂದ ಹಿಂತೆಗೆದರು.
ಕದನಗಳ ವೇಳಾಪಟ್ಟಿಯ ಅನುಕ್ರಮಣಿಕೆ[ಬದಲಾಯಿಸಿ]
ಈ ವೇಳೆಯಲ್ಲಿ ಹಲವು ನಿರ್ಧಾರಕ ಕ್ರಮಗಳನ್ನು 1878 ರಿಂದ 1880 ರ ಎರಡನೆಯ ಆಂಗ್ಲೊ-ಆಫ್ಘಾನ್ ಯುದ್ಧದ ಸಮಯದಲ್ಲಿ ತೆಗೆದುಕೊಳ್ಳಲಾಯಿತು. ಕದನಗಳು ಮತ್ತು ಅದಕ್ಕೆ ತಕ್ಕದಾದ ಕ್ರಮಗಳ ನಿಯಮಿತ ಪಟ್ಟಿ ಇಂತಿದೆ. ಇದೊಂದು ಚುಕ್ಕೆ (*) ಗುರುತು ಒಂದು ಕೊಂಡಿ ಯನ್ನು ಜೋಡಿಸಿದ್ದಾಗಿ ಆ ವಿಷಯಕ್ಕಾಗಿಯೇ ನಿಗದಿತ ಯುದ್ದವೊಂದಕ್ಕೆ ಆಫ್ಘಾನಿಸ್ತಾನ್ ಮೆಡಲ್ ಗೆ ಪಾತ್ರವಾಗಿತ್ತು.
1878[ಬದಲಾಯಿಸಿ]
- ಅಲಿ ಮಸ್ಜಿದ್ ಕದನ * (ಬ್ರಿಟಿಶ್ ರ ನಿರ್ಣಾಯಕ ಗೆಲುವು)
- ಪೆವಾರ್ ಕೊತಲ್ ಕದನ* (ಬ್ರಿಟಿಶ್ ರ ನಿರ್ಣಾಯಕ ಗೆಲುವು)
1879[ಬದಲಾಯಿಸಿ]
- ತಖ್ತ್-ಇ-ಪುಲ್ ಬಳಿಯ ಕ್ರಮ
- ಮಾತುನ್ ಬಳಿಯ ಕ್ರಮ
- ಖುಶ್ಕ್-ಇ-ನಾಕುಡ್ ಕದನ
- ಫತೆಬಾದ್ ಕದನ
- ಕಮ್ ದಾಕಾ ಕದನ
- ಚಾರಸ್ಯಿಬ್* ಕದನ
- ಶಾಜುಯ್ ಕದನ
- ಕರೆಜ್ ಮೀರ್ ಕದನ
- ತಖ್ತ್-ಇ-ಶಾಹ್ ಕದನ
- ಅಸ್ಮೈ ಹೈಟ್ಸ್ ಕದನ (ಅಫ್ಘಾನ್ ಗೆಲುವು)
- ಶೆರ್ ಪುರ್ ನ ಮುತ್ತಿಗೆ* (ಬ್ರಿಟಿಶ್ ರ ನಿರ್ಣಾಯಕ ಗೆಲುವು)
1880[ಬದಲಾಯಿಸಿ]
- ಅಹ್ಮದ್ ಖೆಲ್ ಕದನ* (ಬ್ರಿಟಿಶ್ ರ ನಿರ್ಣಾಯಕ ಗೆಲುವು)
- ಆರ್ಜು ಕದನ
- ಚಾರಸೈಬ್ ನ ಎರಡನೆಯ ಕದನ
- ಮೈವಾಂಡ್ ಕದನ (ಅಫ್ಘಾನ್ ಗೆಲುವು)
- ದೆಹ್ ಖುಜಾ ಕದನ
- ಕಂಧಹಾರ್ ಕದನ* (ಬ್ರಿಟಿಶ್ ರ ನಿರ್ಣಾಯಕ ಗೆಲುವು)
1881[ಬದಲಾಯಿಸಿ]
- ಕಂಧಹಾರ್ (ಮತ್ತು ಅಫ್ಘಾನಿಸ್ತಾನ್)ಉಚ್ಚಾಟನೆ
ಯುದ್ಧದ ಕ್ರಮ[ಬದಲಾಯಿಸಿ]
- ಪೆಶಾವರ್ ವ್ಯಾಲಿ ಫೀಲ್ಡ್ ಫೊರ್ಸ್ ಲೆ,ಜನ್ ಸರ್ ಸ್ಯಾಮ್ಯುವಲ್ ಬ್ರೌನೆ
- ಕ್ಯಾವಲ್ರಿ ಬ್ರಿಗೇಡ್ ಬ್ರಿಗ್ ಜನ್ ಸಿ. ಜೆ. ಎಸ್. ಗಫ್
- 10ನೆಯ ಹುಸ್ಸರ್ಸ್ (2 ಸ್ಕಾಸ್)
- 11ನೆಯ ಪ್ರೊಬಿನ್ಸ್ ಲಾನ್ಸರ್ಸ್
- ಗೈಡ್ಸ್ ಕಾವಲ್ರಿ
- ರಾಯಲ್ ಆರ್ಟಿಲ್ಲರಿ
- ಫಸ್ಟ್ ಇನ್ ಫಂಂಟ್ರಿ ಬ್ರಿಗೇಡ್ ಬ್ರಿಗ್ ಜನ್ ಎಚ್ ಟಿ ಮಾಕ್ ಫೆರ್ಸನ್
- 4ನೆಯ ಬಟಾಲಿಯನ್ ರೈಫಲ್ ಬ್ರಿಗೇಡ್
- 20ನೆಯ ಬ್ರೌನ್ಸ್ ಪಂಜಾಬೀಸ್
- 4ನೆಯ ಗೂರ್ಖಾ ರೈಫಲ್ಸ್
- ಸೆಕೆಂಡ್ ಇನ್ ಫೆಂಟರಿ ಬ್ರಿಗೇಡ್ ಬ್ರಿಗ್ ಜನ್ ಜೆ.ಎ.ಟೈಟಲರ್
- 1ನೆಯ ಬಟಾಲಿಯನ್ ಲಿಸೆಸ್ಟಿಶಯರ್ ರೆಜಿಮೆಂಟ್
- ಗೈಡ್ಸ್ ಇನ್ ಫಂಟ್ರಿ
- 51ನೆಯ ಸಿಖ್ಸ್
- ಥರ್ಡ್ ಇನ್ ಫಂಟರಿ ಬ್ರಿಗೇಡ್ ಬ್ರಿಗ್ ಜನ್ ಎಫ್ . ಆಪಲ್ ಯಾರ್ಡ್
- 81ನೆಯ ನಾರ್ತ್ ಲಾಂಕ್ ಶೈಯರ್ ರೆಜಿಮೆಂಟ್
- 14ನೆಯ ಸಿಖ್ಖ್ಸ್
- 27tನೆಯ ಪಂಜಾಬೀಸ್
- ಫರುಥ್ ಇನ್ ಫಂಟ್ರಿ ಬ್ರಿಗೇಡ್ ಬ್ರಿಗ್ ಜನ್ ಡಬ್ಲು ಬ್ರೌನೆ
- 51ನೆಯ ಕಿಂಗ್ಸ್ ಓನ್ ಯಾರ್ಕ್ ಶೈಯರ್ ಲೈಟ್ ಇನ್ ಫಂಟ್ರಿ
- 6ನೆಯ ಜಾಟ್ ಲೈಟ್ ಇನ್ ಫಂಟ್ರಿ
- 45ನೆಯ ಸಿಖ್ಖ್ಸ್
- ಕುರ್ರಮ್ ವ್ಯಾಲ್ಲಿ ಫೀಲ್ಡ್ ಫೊರ್ಸ್ ಮೇಅಜ್ರ್ ಜನರಲ್ ರಾಬರ್ಟ್ಸ್
- ಕಾವಲ್ರಿ ಬ್ರಿಗೇಡ್ ಬ್ರಿಗ್ ಜನ್ ಹುಘ್ ಗಫ್
- 10ನೆಯ ಹಸರ್ಸ್ (1 ಸ್ಕ್ವಾ)
- 12ನೆಯ ಕಾವಲ್ರಿ
- 25ನೆಯ ಕಾವಲ್ರಿ
ರಾಯಲ್ ಆರ್ಟಿಲರಿ ಕಂl ಎ. ಎಚ್. ಲಿಂಡ್ಸಿ
- ಫಸ್ಟ್ ಇನ್ಫಂಟ್ರಿ ಬ್ರಿಗೇಡ್ ಬ್ರಿಗ್ ಜನ್ ಎ.ಎಚ್ ಕೊಬ್ಬೆ
- 2ನೆಯ ಬಟಾಲಿಯನ್, 8ನೆಯ ಫೂಟ್
- 23ನೆಯ ಪಾಯ್ನರ್
- 29ನೆಯ ಪಂಜಾಬೀಸ್
- 58ನೆಯ ವಘುವನಾ ರೈಫಲ್ಸ್
- ಸೆಕೆಂಡ್ ಇನ್ ಫಂಟ್ರಿ ಬ್ರಿಗೇಡ್ ಬ್ರಿಗ್ ಜನ್ ಜೆ,ಬಿ ಥೆಲ್ ವೆಲ್I
- 72ನೆಯ ಸೀಫೊರ್ತ್ ಹೈಲ್ಯಾಂಡರ್ಸ್
- 21ನೆಯ ಪಂಜಾಬೀ
- 56ನೆಯ ರೈಫಲ್ಸ್
- 5ನೆಯ ಗೂರ್ಖಾ ರೈಫಲ್ಸ್
- ಕಂಧಹಾರ್ ಫೀಲ್ಡ್ ಫೊರ್ಸ್
- ಫಸ್ಟ್ ಡಿವಿಜನ್ ಲೆ.ಜನ್ ಡೊನಾಲ್ಡ್ ಸ್ಟ್ವರ್ಟ್
- ಕಾವಲ್ರಿ ಬ್ರಿಗೇಡ್ ಬ್ರಿಗ್ ಜನ್ ವಾಲ್ಟರ್ ಫೇನ್
- 15ನೆಯ ಹುಸ್ಸರ್ಸ್
- 8ನೆಯ ಕಾವಲ್ರಿ
- 19ನೆಯ ಫೇನ್ಸ್ ಲಾನ್ಸರ್ಸ್
ರಾಯಲ್ ಆರ್ಟಿಲ್ಲರಿ ಬ್ರಿಗ್ ಜನ್ ಸಿ,ಜಿ ಆರ್ಬುಥ್ನೊಟ್
- ಫಸ್ಟ್ ಇನ್ ಫಂಟ್ರಿ ಬ್ರಿಗೇಡ್ ಬ್ರಿಗ್ ಜನ್ ಆರ್ ಬಾರ್ಟರ್
- 2ನೆಯ ಬಟಾಲಿಯನ್ ಕಿಂಗ್ಸ್ ರಾಯಲ್ ರೈಫಲ್ಸ್
- 15ನೆಯ ಸಿಖ್ಸ್
- 25ನೆಯ ಪಂಜಾಬೀಸ್
- ಸೆಕೆಂಡ್ ಇನ್ ಫಂಟ್ರಿ ಬ್ರಿಗೇಡ್ ಬ್ರಿಗ್ ಜನ್ ಡಬ್ಲು ಹುಘ್ಸ್
- 59ನೆಯ ಈಸ್ಟ್ ಲಾಂಕೈಶಯರ್ ರೆಜಿಮೆಂಟ್
- 12ನೆಯ ಕೆಲತ್-ಇ-ಘಿಲ್ಜಿ ರೆಜಿಮೆಂಟ್
- 1ನೆಯ ಗೂರ್ಖಾ ರೈಫಲ್ಸ್
- 3ನೆಯ ಗೂರ್ಖಾ ರೈಫಲ್ಸ್
- 2ನೆಯ ಡಿವ್ಜಿಜನ್ ಮೇಜರ್ ಜನ್ ಎಂ ಎ ಬಿಡ್ಡುಲ್ಫ್
- ಕಾವಲ್ರಿ ಬ್ರಿಗೇಡ್ ಬ್ರಿಗ್ ಜನ್ ಸಿ.ಎಚ್ ಪಲ್ಲಿಸೆರ್
- 21ನೆಯ ಡೇಲೀಸ್ ಹಾರ್ಸ್
- 22ನೆಯ ಸ್ಯಾಮ್ ಬ್ರೌನ್ಸ್ ಹಾರ್ಸ್
- 35ನೆಯ ಸಿಂಡೆ ಹಾರ್ಸ್
ಆರ್ಟಿಲಲ್ರಿ ಕೊಲ್ ಲೆ ಮಿಜುರಿಯರ
- ಫಸ್ಟ್ ಇನ್ ಫಂಟೃ ಬ್ರಿಗೇಡ್ ಬ್ರಿಗ್ ಜನ್ ಆರ್ ಲೇಸಿ
- 70ನೆಯ ಈಸ್ಟ್ ಸರ್ರಿ ರೆಜಿಮೆಂಟ್
- 19ನೆಯ ಪಂಜಾಬೀಸ್
- 127ನೆಯ ಬಲುಚಿಸ್
- ಸೆಕಂಡ್ ಇನ್ ಫಂಟೃ ಬ್ರಿಗೇಡ್ ಬ್ರಿಗ್ ಜನ್ ನಟ್ಟಲ್
- 26ನೆಯ ಪಂಜಾಬೀಸ್
- 32ನೆಯ ಪಯೋನೀರ್ಸ್
- 55ನೆಯ ಕೋಕ್ಸ್' ರೈಫಲ್ಸ್
- 129ನೆಯ ಬಲುಚಿಸ್
ಜನಪ್ರಿಯ ಸಂಸ್ಕೃತಿ[ಬದಲಾಯಿಸಿ]
ಶೆರ್ಲಾಕ್ ಹೊಲ್ಮ್ಸ್ ಒಬ್ಬ ಸ್ನೇಹಿತ (ಕಥಾ ವೀಕ್ಷಣಕಾರ)ಡಾ.ವಾಟ್ಸನ್ ಎರಡನೆಯ ಅಫ್ಹ್ಗಾನ್ ಯುದ್ಧದಲ್ಲಿ ಕೆಲಕಾಲ ಸೇವೆ ಮಾಡಿದ್ದನು.ಆತ ತನ್ನ ಪುಸ್ತಕ ಎ ಸ್ಟಡಿ ಇನ್ ಸ್ಕಾರ್ಲೆಟ್ ನ ಮೊದಲ ಅಧ್ಯಾಯದಲ್ಲೇ ವಿವರಿಸಿದ್ದಾನೆ. ಮುಂದಿನ ಕೃತಿಗಳಲ್ಲಿ ವಾಟ್ಸನ್ ಆಫ್ಘಾನ್ ದ ನೀಳಗೋವಿಯ ಬುಲೆಟ್ ನಿಂದ ಉಂಟಾದ ಗಾಯದ ಬಗ್ಗೆ ವಿವರಿಸಿದ್ದಾನೆ.ಆದರೆ ಕೊನಾನ್ ಡೊಯೆಲ್ ಮಾತ್ರ ತನ್ನ ತೋಳು ಅಥವಾ ಕಾಲಿಗಾದ ಗಾಯ ಯುದ್ದದ ಸಂದರ್ಭದ್ದಾದುದೆಂದು ಜ್ಞಾಪಿಸಿಕೊಳ್ಳಲು ಯತ್ನಿಸುತ್ತಾನೆ. ಎಂ.ಎಂ ಕಾಯೆ ತನ್ನ ಕೊನೆಯ ದಿ ಫಾರ್ ಪೆವಿಲಿಯನ್ಸ್ ಕಾದಂಬರಿಯಲ್ಲಿ ಎರಡನೆಯ ಅಫ್ಘಾನ್ ಯುದ್ದದ ನಾಯಕನಾಗಿ ಮೆರೆದ ಅಶ್ಟೊನ್ ಪೆಲ್ಹಾನ್ ಮಾರ್ಟಿನ್ (ಆಶೊಕ್)ಬಗ್ಗೆ ಬರೆದಿದ್ದಾರೆ.ಅಶೊಕ್ ನನ್ನು ಬ್ರಿಟಿಶ್ ಗೂಢಚಾರನಾಗಿ ಅಫ್ಘಾನಿಸ್ತಾನ್ ಗೆ ಕಳಿಸಲಾಗಿತ್ತು.ಆತನ ಉತ್ತಮ ಸ್ನೇಹಿತನೊಬ್ಬನನ್ನು ಸರ್ ಪೆರ್ರೆ ಲೂಯಿಸ್ ಕಾವಗ್ನರಿ ಕಾಬುಲ್ ಆಕ್ರಮಣಕ್ಕೆ ತೆರಳುವಾಗ ಯ ಸೈನ್ಯದ ಮುಖ್ಯಸ್ಥನನ್ನಾಗಿಸಿತ್ತು.ಅದಲ್ಲದೇ ಈತ ಸಲಹೆಗಾರನಾಗಿ ಕಾಬುಲ್ ಗೆ ಹೋದಾಗ ಈ ಘಟನೆ ನಡೆಯಿತು. ಬ್ರಿಟಿಶ್ ಸೈನ್ಯ ಬೀಡು ಬಿಟ್ಟಿರುವಲ್ಲಿ ಬಾಲಾ ಹಿಸ್ಸಾರ್ ಕಾಬುಲ್ ಪತನಗೊಳ್ಳುವುದರೊಂದಿಗೆ ಕಾದಂಬರಿ ಅಂತ್ಯವಾಗುತ್ತದೆ.ಅತ್ಯಂತ ದುರಂತಮಯ ಕದನದಲ್ಲಿ ಎಲ್ಲಾ ಬ್ರಿಟಿಶ್ ಪಡೆ ಹಾಗು ಭಾರತೀಯ ಸೈನಿಕರ ಸಾವು ಸಂಭವಿಸಿತ್ತು.(ಇದರಲ್ಲಿನ ವಿವರವೆಲ್ಲವೂ ಸತ್ಯ ಸಂಗತಿಯನ್ನು ಆಧರಿಸಿತ್ತು.)ಆ ಯುದ್ಧದ ನಾಯಕ ತನ್ನ ಪತ್ನಿಯೊಂದಿಗೆ ಉತ್ತರದ ಹಿಮಾಲಾಯದೆಡೆ ಸವಾರಿ ಮಾಡುತ್ತಾನೆ)
ಇವನ್ನೂ ಗಮನಿಸಿ[ಬದಲಾಯಿಸಿ]
![]() |
Wikimedia Commons has media related to Second Anglo-Afghan War. |
- ಫಸ್ಟ್ ಆಂಗ್ಲೊ-ಆಫ್ಘಾನ್ ವಾರ್
- ಥರ್ಡ್ ಆಂಗ್ಲೊ-ಆಫ್ಘಾನ್ ವಾರ್
- ಯುರೊಪಿಯನ್ ಇನ್ ಫ್ಲುಯನ್ಸ್ ಇನ್ ಆಫ್ಘಾನಿಸ್ತಾನ್
- ಮಿಲಿಟರಿ ಹಿಸ್ಟ್ರಿ ಆಫ್ ಅಫ್ಘಾನಿಸ್ತಾನ್
ಉಲ್ಲೇಖಗಳು[ಬದಲಾಯಿಸಿ]
- ↑ Schmidt, Karl J. (1995). An Atlas and Survey of South Asian History. M.E. Sharpe. p. 74. ISBN 978-1563243332.
- ↑ Adamec, L.W.; Norris, J.A., Anglo-Afghan Wars, in Encyclopædia Iranica, online ed., 2010
- ↑ Norris, J.A., Anglo-Afghan Relations Archived 2013-05-17 at the Wayback Machine., in Encyclopædia Iranica, online ed., 2010
- ↑ ೪.೦ ೪.೧ Barfield, Thomas (2010). Afghanistan: A Cultural and Political History. Princeton University Press. p. 145. ISBN 0691145687, 9780691145686 Check
|isbn=
value: invalid character (help). Retrieved 2010-08-22. Cite has empty unknown parameter:|coauthors=
(help); More than one of|pages=
and|page=
specified (help) - ↑ ೫.೦ ೫.೧ Posturee, Bad (2002). Understanding Holocausts: How, Why and When They Occur. iUniverse. p. 84. ISBN 0595238386, 9780595238385 Check
|isbn=
value: invalid character (help). Retrieved 2010-08-22. Cite has empty unknown parameter:|coauthors=
(help); More than one of|pages=
and|page=
specified (help) - ↑ ೬.೦ ೬.೧ Robson, Brian. (2007). The Road to Kabul: The Second Afghan War 1878–1881. Stroud: Spellmount. p. 299. ISBN 978-1-86227-416-7.
- ↑ Hanna, Henry Bathurst (1904). The Second Afghan War, 1878-79-80: Its Causes, Its Conduct and Its Consequences. 2. Archibald Constable & Co. pp. 150–155.
ಗ್ರಂಥಸೂಚಿ[ಬದಲಾಯಿಸಿ]
- ಬಾರ್ತೊರ್ಪ್, ಮೈಕೆಲ್. 2002. ಅಫ್ಘಾನ್ ವಾರ್ಸ್ ಅಂಡ್ ದಿ ನಾರ್ತ್- ವೆಸ್ಟ್ ವಾರ್ಸ್ ಅಂಡ್ ದಿ ನಾರ್ತ್ ವೆಸ್ಟ್ ಫ್ರಂಟಿಯರ್ 1839-1947 ಕ್ಯಾಸೆಲ್. ಲಂಡನ್. ಐಎಸ್‌ಬಿಎನ್ 0-385-49062-3
- ವಿಲ್ಕಿನ್ ಸನ್-ಲಥಮ್, ರಾಬರ್ಟ್. 1977. ನಾರ್ತ್-ವೆಸ್ಟ್ ಫ್ರಂಟಿಯರ್ 1837-1947 . ಆಸ್ಪ್ರೆಯ್ ಪಬ್ಲಿಶಿಂಗ್. ಲಂಡನ್. ISBN 0-7864-0138-9.
ಬಾಹ್ಯ ಕೊಂಡಿಗಳು[ಬದಲಾಯಿಸಿ]
- ಸೆಕೆಂಡ್ ಆಂಗ್ಲೊ-ಆಫ್ಘನ್ ವಾರ್ ಕ್ರೊನೊಲಾಜಿ [permanent dead link]
- ಬ್ರಿಟಿಶ್ ಬ್ಯಾಟಲ್ಸ್
- ಆನ್ ಲೈನ್ ಅಫ್ಘಾನ್ ಕ್ಯಾಲಂಡರ್ ಉಯಿತ್ ಹಿಸ್ಟಾರಿಕಲ್ ಡೇಟ್ಸ್
- ಫೆಡ್ರೆಕ್ ರಾಬರ್ಟ್ಸ ಆಂಡ್ ದಿ ಲಾಂಗ್ ರೋಡ್ ಟು ಕಂಧಹಾರ್
- ಆನೆಸ್ ಎಸ್. ಕೆ. ಬ್ರೌನ್ ಮಿಲಿಟರಿ ಕಲೆಕ್ಷನ್, ಬ್ರೌನ್ ಯುನ್ವರ್ಸಿಟಿ ಲೈಬ್ರರಿ ವಿಲಿಯಮ್ ಸಿಂಪ್ಸನ್ಸ್ ಡೈರಿ ಅಂಡ್ ಅಲ್ಬಮ್ಸ್ ಆಫ್ ಸ್ಕೆಚಿಸ್ ಅಂಡ್ ವಾಟರ್ ಕಲರ್ಸ್ ಕವರಿಂಗ್ ದಿ ಅರ್ಲಿ ಪಾರ್ಟ್ ಆಫ್ ದಿ ಕಾಂಪೇನ್, ಅಂಡ್ ಡನ್ ಫಾರ್ ದಿ ಇಲ್ ಸ್ಟ್ರೇಟೆಡ್ ಲಂಡನ್ ನಿವ್ಸ್
- Webarchive template wayback links
- CS1 errors: empty unknown parameters
- CS1 errors: redundant parameter
- CS1 errors: ISBN
- Orphaned articles from ಮಾರ್ಚ್ ೨೦೧೯
- Articles with invalid date parameter in template
- All orphaned articles
- Commons link is locally defined
- All articles with dead external links
- Articles with dead external links from ಆಗಸ್ಟ್ 2021
- Articles with permanently dead external links
- Pages using country topics with unknown parameters
- ಯುನೈಟೆಡ್ ಕಿಂಗ್ಡಂನ್ನು ಒಳಗೊಂಡಿರುವ ಯುದ್ಧಗಳು
- ಅಫ್ಹಾನಿಸ್ತಾನ್ ನಲ್ಲಿನ ಯುದ್ಧಗಳು
- 1878 ರಲ್ಲಿ ಅಫ್ಘಾನಿಸ್ತಾನ್
- 1879 ರಲ್ಲಿ ಅಫ್ಘಾನಿಸ್ತಾನ್
- 1880 ರಲ್ಲಿ ಅಫ್ಘಾನಿಸ್ತಾನ
- 19ತ್-ಸೆಂಚುರಿ ಮಿಲಿಟರಿ ಹಿಸ್ಟ್ರಿ ಆಫ್ ದಿ ಯುನೈಟೆಡ್ ಕಿಂಗ್ಡಮ್
- ಸೆಕೆಂಡ್ ಆಂಗ್ಲೊ-ಅಫ್ಘಾನ್ ವಾರ್
- ಮಿಲಿಟರಿ ಹಿಸ್ಟ್ರಿ ಆಫ್ ಖೈಬರ್ ಪಖ್ತುಂಕಾ
- ಮಿಲಿಟರಿ ಹಿಸ್ಟ್ರಿ ಆಫ್ ಅಫ್ಘಾನಿಸ್ತಾನ್
- ಇತಿಹಾಸ
- Pages using ISBN magic links