ಎನ್.ನರಸಿಂಹಯ್ಯ

ವಿಕಿಪೀಡಿಯ ಇಂದ
Jump to navigation Jump to search

(ಜನನ.೧೯೨೫, ಸೆಪ್ಟೆಂಬರ್,೧೮-ಮರಣ.೨೦೧೧, ಡಿಸೆಂಬರ್,೨೫)

'ಪತ್ತೆದಾರಿ ಕಾದಂಬರಿಕಾರ,ನರಸಿಂಹಯ್ಯನವರು'

ಎನ್.ನರಸಿಂಹಯ್ಯನವರನ್ನು ಕನ್ನಡದ ಪತ್ತೇದಾರಿ ಕಾದಂಬರಿ ಗಳ ಜನಕನೆನ್ನಬಹುದು. 'ಸುಪ್ರಸಿದ್ಧ ಪತ್ತೇದಾರಪುರುಷೋತ್ತಮನ ಸಾಹಸ'ವೆಂಬ ಮಾಲಿಕೆಯ ಅಡಿಯಲ್ಲಿ ನೂರಾರು ಪತ್ತೇದಾರಿ ಕಥೆಗಳನ್ನು ಹೆಣೆದು ಓದುಗರಿಗೆ ಉಣಬಡಿಸುತ್ತಿದ್ದ ಒಬ್ಬ ಜನಪ್ರಿಯ ಲೇಖಕ. ಇಂಗ್ಲೀಷ್ ಸಾಹಿತ್ಯದಲ್ಲಿ ಬರುವ ಶರ್ಲಾಕ್ ಹೋಮ್ಸ್ ನನ್ನು ಹೋಲುವ ಕಥೆಗಳನ್ನು ಕನ್ನಡದಲ್ಲಿ ತಂದ ವ್ಯಕ್ತಿ.

ಜನನ, ವಿದ್ಯಾಭ್ಯಾಸ ಮತ್ತು ವೃತ್ತಿಜೀವನ[ಬದಲಾಯಿಸಿ]

'ಎನ್. ನರಸಿಂಹಯ್ಯ ನವರು', ೧೯೨೫ ಸಪ್ಟೆಂಬರ್ ೧೮ ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ, ಸಿ.ನಂಜಪ್ಪನವರು, ಚಿತ್ರದುರ್ಗದ ಆಶುಕವಿ. ತಂದೆಯವರಿಂದ ಅವರು ಸ್ಪೂರ್ತಿಗೊಂಡು ಸಾಹಿತ್ಯವಲಯದಲ್ಲಿ ಹೆಚ್ಚು ಸಾಧನೆಮಾಡಲು ಸಹಾಯವಾಯಿತು ೧೯೩೬ ನೆಯ ಇಸವಿಯಲ್ಲಿ ಇವರು ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವರ ತಂದೆ ತೀರಿಕೊಂಡರು. ಇವರಿಗೆ ಆಶ್ರಯ ನೀಡಿದ ಚಿಕ್ಕಪ್ಪ ಮುಂದೆ ಒಂದೇ ವರ್ಷದಲ್ಲಿ ತೀರಿಕೊಂಡರು. ಇಲ್ಲಿಗೆ ಇವರ ವಿದ್ಯಾಭ್ಯಾಸವು ಮುಕ್ತಾಯಗೊಂಡು ಇವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರಿಗೆ ತೆರಳಿದರು. ೧೯೩೮ ರಲ್ಲಿ, ತಮ್ಮ ೧೩ನೆಯ ವರ್ಷದಲ್ಲಿಯೆ ಎನ್. ನರಸಿಂಹಯ್ಯನವರು ಜೀವನ ನಿರ್ವಹಣೆಗೆ ಕೆಲವು ಉಪಕಸುಬುಗಳನ್ನು ಮಾಡಬೇಕಾಯಿತು. ಒಂದು ವರ್ಷದ ಬಳಿಕ ಆ ಕೆಲಸ ಬಿಟ್ಟು ಕಾಫೀ ತೋಟದಲ್ಲಿ ಕಾರ್ಮಿಕರಾಗಿ ಕೆಲಸಮಾಡಿದರು. ಕೈಗಾರಿಕಾ ಪಾಠಶಾಲೆಯಲ್ಲಿ ೩ ವರ್ಷಗಳ ತರಬೇತಿಗೆ ಸೇರಿಕೊಂಡರು. ೧೯೪೨ರಲ್ಲಿ ಬಸ್ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡವರು ೧೯೪೪ರಲ್ಲಿ ಬಸ್ ಕಂಡಕ್ಟರ್ ಆದರು. ೧೯೪೭ರಲ್ಲಿ ನಾಗರತ್ನಮ್ಮನವರ ಜೊತೆ ಇವರ ಮದುವೆಯಾಯಿತು. ೧೯೪೮ರಲ್ಲಿ ಚಿಕ್ಕಮಗಳೂರು ಬಿಟ್ಟು ಬೆಂಗಳೂರಿಗೆ ಬಂದು ಲಾರಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿರುವಾಗಲೆ ಬಾಡಿಗೆ ಮನೆಯಲ್ಲಿಯೆ ವಾಚನಾಲಯ ಪ್ರಾರಂಭಿಸಿ, ಬಾಲಸರಸ್ವತಿ, ವೆಂಕಟಾಚಾರ್ಯ, ಗುರುರಾಜಾಚಾರ್ಯ, ಗುಂಡಾಶಾಸ್ತ್ರಿ ಮೊದಲಾದವರ ಪತ್ತೇದಾರಿ ಕಾದಂಬರಿಗಳನ್ನು ಓದತೊಡಗಿದರು. 'ಪ್ರಿಂಟಿಂಗ್ ಪ್ರೆಸ್' ನಲ್ಲಿ ಕೆಲಸದಲ್ಲಿದ್ದಾಗ ಓದುವ ಹವ್ಯಾಸ ಬೆಳೆಸಿಕೊಂಡರು. ಆಗ ಎಮ್. ರಾಮಮೂರ್ತಿ ಯೆಂಬ ಹೆಸರಾಂತ ಪತ್ತೆದಾರಿ ಕಾದಂಬರಿಕಾರರಿದ್ದರು. ನರಸಿಂಹಯ್ಯನವರು, ಅವರಿಂದ ಪ್ರೇರಿತರಾದರು. ತಮ್ಮ ಕಾದಂಬರಿಯ ಕಥಾವಸ್ತುಗಳನ್ನು ವಿಭಿನ್ನವಾಗಿ ಆರಿಸಿಕೊಂಡಿದ್ದರು. ನಿಗರ್ವಿ ವಿನಯಶೀಲರು. ಇಂಗ್ಲೀಷ್ ಸಾಹಿತ್ಯ ಹೆಚ್ಚಾಗಿ ಓದಿದವರಲ್ಲ. ಅವರ ಕಾದಂಬರಿಗಳಲ್ಲಿ ದೇಸಿ ಸೊಗಡು, ಹಾಗೂ ಮಣ್ಣಿನ ವಾಸನೆಯನ್ನು ಕಾಣಬಹುದು.

ಪ್ರಥಮ ಪತ್ತೇದಾರಿ ಕಾದಂಬರಿ[ಬದಲಾಯಿಸಿ]

೧೯೫೨ರಲ್ಲಿ ಎನ್.ನರಸಿಂಹಯ್ಯನವರು ತಮ್ಮ ಪ್ರಥಮ ಪತ್ತೇದಾರಿ ಕಾದಂಬರಿ ಪತ್ತೇದಾರ ಪುರುಷೋತ್ತಮ ಬರೆದರು. ಅದನ್ನು ಪ್ರಕಟಿಸಿದವರು ಟಿ. ನಾರಾಯಣ ಅಯ್ಯಂಗಾರ್. ಇಲ್ಲಿಯವರೆಗೆ ಎನ್.ನರಸಿಂಹಯ್ಯನವರು ಮುನ್ನೂರೈವತ್ತಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಐವತ್ತಕ್ಕೂ ಹೆಚ್ಚು ಸಾಮಾಜಿಕ ಕಾದಂಬರಿಗಳನ್ನೂ ನೀಡಿದ್ದಾರೆ. ಐವತ್ತು/ಅರವತ್ತರ ದಶಕದಲ್ಲಿ ಹದಿಹರೆಯದ ಹುಡುಗರು ನರಸಿಂಹಯ್ಯನವರ ಕಾದಂಬರಿಗಳಿಂದ ಕನ್ನಡ ಪುಸ್ತಕ ಓದುವ ಹವ್ಯಾಸ ಪ್ರಾರಂಭಿಸುತ್ತಿದ್ದರು.

ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ[ಬದಲಾಯಿಸಿ]

'ನರಸಿಂಹಯ್ಯನವರು', 'ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ' ಎಂಬ 'ಸಂವಾದ ಕಾರ್ಯಕ್ರಮ'ದಲ್ಲಿ ತಮ್ಮ ಅನಿಸಿಕೆಗಳನ್ನು ತಮ್ಮ ಓದುಗರಿಗೆ ತಿಳಿಸಿದರು. ೧೯೮೨ ರಲ್ಲಿ ಕಂದಾಯ ಇಲಾಖೆಯಿಂದ ಒಂದು ನಿವೇಶನವನ್ನು ಖರೀದಿಸಿದ್ದರು. ೧೯೮೪ ರಲ್ಲಿ ಬಿ.ಡಿ.ಎ. ಅದನ್ನು ವಶಪಡಿಸಿಕೊಂಡಿತು. ಬದಲಿ ಸೈಟೂ ಇಲ್ಲ ಪರಿಹರವೂ ಸಿಕ್ಕಿರಲಿಲ್ಲ. ಈ ವಿಷಯವನ್ನು ಕನ್ನಡ ಪತ್ರಿಕೆಯೊಂದರಲ್ಲಿ ವರದಿ ಮಾಡಿದಾಗ, ಆಗಿನ 'ಬಿಡಿಯೆ ಕಮೀಶನರ್', ಶ್ರೀ.ಸಿದ್ದಯ್ಯ ನವರ ಕೃಪೆಯಿಂದಾಗಿ, ಬಿಡಿಎ ನೌಕರ ಸಂಘ ಬಡಾವಣೆಯಲ್ಲಿ ಉಚಿತವಾಗಿ ಒಂದು ನಿವೇಶನವನ್ನು ಕೊಡಲಾಯಿತು. ಶ್ರೀ ದೇವರಾಜ್ ಅರಸ್, ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ, ಕರ್ನಾಟಕ ಘನ-ಸರ್ಕಾರದಿಂದ ತಿಂಗಳಿಗೆ ೫೦೦ ರೂಪಾಯಿ 'ಮಾಸಾಶನ'ವನ್ನು ಕೊಡಲಾಯಿತು.೧೯೬೦-೭೦ ರಲ್ಲಿ ಕರ್ನಾಟಕದ ಯುವಜನರಿಗೆ, ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿದವರಲ್ಲಿ ಎನ್.ನರಸಿಂಹಯ್ಯನವರೂ ಒಬ್ಬರು. ಅವರಿಗೆ ಪ್ರತಿದಿನವೂ ೫೦-೧೦೦ ಪತ್ರಗಳು ಬರುತ್ತಿದ್ದವು. ಅವುಗಳನ್ನು ಓದಿ ಉತ್ತರಿಸುವುದರಲ್ಲಿ ಅವರಿಗೆ ಹೆಚ್ಚಿನ ಮುದ ಸಿಗುತ್ತಿತ್ತು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ[ಬದಲಾಯಿಸಿ]

ಅಂತರ್ಜಾಲದಲ್ಲಿ ಲಭ್ಯವಿರುವ ಕೆಲವು ಕಾದಂಬರಿಗಳು[ಬದಲಾಯಿಸಿ]

ಹೊರಸಂಪರ್ಕ ಕೊಂಡಿಗಳು[ಬದಲಾಯಿಸಿ]