ವಿಷಯಕ್ಕೆ ಹೋಗು

ಎನ್ರಿಕೋ ಬೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎನ್ರಿಕೋ ಬೆಟ್ಟಿ

ಎನ್ರಿಕೋ ಬೆಟ್ಟಿ (1823-92) ಒಬ್ಬ ಇಟಾಲಿಯನ್ ಗಣಿತವಿದ.

ಜೀವನ, ಸಾಧನೆಗಳು

[ಬದಲಾಯಿಸಿ]

ಜನನ 21-10-1923. ಪೀಸಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ. ಅಲ್ಲಿಯೇ ಪ್ರಾಧ್ಯಾಪಕತ್ವ. ಈತನ ಸಂಶೋಧನೆಗಳು ಮೊದಲ ಘಟ್ಟದಲ್ಲಿ ಬೀಜಗಣಿತ ಮತ್ತು ಎಲಿಪ್ಟಿಕ್ ಉತ್ಪನ್ನಗಳಿಗೆ ಮೀಸಲಾಗಿದ್ದುವು. ಸಮೀಕರಣಗಳ ಗ್ಯಾಲ್ವಾ ಸಿದ್ಧಾಂತದಲ್ಲಿ ಅನೇಕ ಪ್ರಮೇಯಗಳ ವಿಶದೀಕರಣ ಮತ್ತು ಯುಕ್ತ ವಿಸ್ತರಣೆ ಸಾಧಿಸಿಕೊಟ್ಟ. ಮಿಶ್ರ ಚರದ (complex variable) ಅನುಕೂಲ ಉತ್ಪನ್ನಗಳನ್ನು ಅವುಗಳ ಮೂಲ ಅಪವರ್ತನಗಳಾಗಿ (factors) ಮೊದಲಿಗೆ ವಿಭಜಿಸಿದಾತ ಈತನೇ.

ಮುಂದೆ 1863ರ ಸುಮಾರಿಗೆ ರೀಮಾನ್‌ನಿಂದ (1826-66) ಪ್ರಭಾವಿತನಾಗಿ ಗಣಿತ ಭೌತವಿಜ್ಞಾನದಲ್ಲಿ ಅಭಿರುಚಿ ವರ್ಧಿಸಿಕೊಂಡ. ವಿಭವ ಮತ್ತು ಪುಟಿತ ಸಿದ್ಧಾಂತಗಳಲ್ಲಿ (theory of elasticity) ಮೂಲಭೂತ ಸಂಶೋಧನೆ ನಡೆಸಿದ. ಟಾಪಾಲಜಿ (ಸಂಸ್ಥಿತಿ ವಿಜ್ಞಾನ) ಎಂದು ಈಗ ಪ್ರಸಿದ್ಧ ಪಡೆದಿರುವ ಗಣಿತಶಾಖೆಗೆ ಸಂಬಂಧಿಸಿದ ಲೇಖನವನ್ನು ಮೊದಲು ಪ್ರಕಟಿಸಿದವ (1871) ಈತನೇ.[] ಮ್ಯಾನಿಫೋಲ್ಡ್ಸ್ ಎಂಬ ವಿಶೇಷ ತೆರನಾದ ಗಣಿತ ವ್ಯವಸ್ಥೆಗಳಿಗೆ ಸಂಬಂಧಿಸಿದ ವಿಶಿಷ್ಟ ರೀತಿಯ ಸಂಖ್ಯೆಗಳನ್ನು ಕೂಡ ಈತ ಪರಿಕಲ್ಪಿಸಿದ. ಇವುಗಳಿಗೆ ಬೆಟ್ಟಿ ಸಂಖ್ಯೆಗಳೆಂದು ಹೆಸರು.

ಉಲ್ಲೇಖಗಳು

[ಬದಲಾಯಿಸಿ]
  1. Betti, Enrico (July 1870). "Sopra gli spazi di un numero qualunque di dimensioni". Annali di Matematica. 4 (1): 140–158. doi:10.1007/BF02420029. S2CID 122887209.

ಹೊರಗಿನ ಕೊಂಡಿಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: