ಎಡ್ವರ್ಡ್ ಜೆನ್ನರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Edward Jenner
Edward Jenner2.jpg
Jenner in the prime of his studies
ಜನನ 17 May 1749
Berkeley, Gloucestershire
ಮರಣ 26 ಜನವರಿ 1823 (ತೀರಿದಾಗ ವಯಸ್ಸು ೭೩)
Berkeley, Gloucestershire
ವಾಸಸ್ಥಳ Berkeley, Gloucestershire
ರಾಷ್ಟ್ರೀಯತೆ United Kingdom
ಕಾರ್ಯಕ್ಷೇತ್ರ Microbiology
ಅಭ್ಯಸಿಸಿದ ವಿದ್ಯಾಪೀಠ St George's, University of London
ಡಾಕ್ಟರೇಟ್ ಸಲಹೆಗಾರರು John Hunter
ಪ್ರಸಿದ್ಧಿಗೆ ಕಾರಣ smallpox vaccine

ಎಡ್ವರ್ಡ್ ಎಂಥೋನಿ ಜೆನ್ನರ್ (17 ಮೇ 1749 - 26 ಜನೆವರಿ 1823) ಒಬ್ಬ ಆಂಗ್ಲ ವಿಜ್ಞಾನಿಯಾಗಿದ್ದು, ಅವರು ಬರ್ಕ್ಲಿ, ಗ್ಲೌಸೆಸ್ಟರ್‌ಶೈರ್‌ನಲ್ಲಿ ತಮ್ಮ ಸುತ್ತಮುತ್ತಣ ನೈಸರ್ಗಿಕ ಪರಿಸರವನ್ನು ಅಭ್ಯಸಿಸಿದರು. ಜೆನ್ನರ್ ಅವರು ಸಿಡುಬಿನ ಲಸಿಕೆಯ ಅನ್ವೇಷಣೆಯಿಂದಾಗಿ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ. ಕೆಲವೊಮ್ಮೆ 'ಪ್ರತಿರೋಧಶಾಸ್ತ್ರದ ಪಿತಾಮಹ’ ಎಂದೂ ಕರೆಯಲ್ಪಡುವರು. ಜೆನ್ನರ್ ಅವರ ಸಂಶೋಧನೆಯು, ಬೇರೆ ಯಾರಿಂದಲೂ ಸಾಧ್ಯವಾಗದಷ್ಟು ಅಧಿಕ ಜೀವಗಳನ್ನು ಉಳಿಸಿದೆ.[೧][೨][೩]

ಆರಂಭಿಕ ಬದುಕು[ಬದಲಾಯಿಸಿ]

ಎಡ್ವರ್ಡ್ ಜೆನ್ನರ್ ಹುಟ್ಟಿದ್ದು ಬರ್ಕ್ಲಿಯಲ್ಲಿ 17 ಮೇ 1749ರಲ್ಲಿ (ಪುರಾತನ ಕಾಲಮಾಪಕದ ಪ್ರಕಾರ 6 ಮೇ). ನಂತರ ಜೆನ್ನರ್ ಅವರು, ದಕ್ಷಿಣ ಗ್ಲೌಸೆಸ್ಟರ್‌ಶೈರ್‌‍ನ ಚಿಪ್ಪಿಂಗ್ ಸೋದ್‌ಬರಿಯಲ್ಲಿ ಡೇನಿಯಲ್ ಲಡ್‌ಲೋ ಎಂಬ ಶಸ್ತ್ರ ಚಿಕಿತ್ಸಕರ ಕೆಳಗೆ, ತಮ್ಮ 14ನೇ ವಯಸ್ಸಿನಿಂದ ಎಂಟು ವರ್ಷಗಳ ಕಾಲ ಶಿಷ್ಯರಾಗಿದ್ದರು. 1770ರಲ್ಲಿ ಜೆನ್ನರ್,ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ಜಾನ್ ಹಂಟರ್ ಮತ್ತು ಇತರರ ಬಳಿ ಶಸ್ತ್ರಕ್ರಿಯೆ ಹಾಗೂ ಅಂಗರಚನಾಶಾಸ್ತ್ರ ಕಲಿಯಲು ಪ್ರಾರಂಭಿಸಿದರು.

ವಿಲಿಯಮ್ ಒಸ್ಲೆರ್ ಪ್ರಕಾರ ಜೆನ್ನೆರ್ ಹಂಟರ್ ಬಳಿ ವಿದ್ಯಾರ್ಥಿಯಾಗಿದ್ದಾಗ ಅವನಿಗೆ ವಿಲಿಯಮ್ ಹಾರ್ವೇಯ ’ಡೋಂಟ್ ಥಿಂಕ್ ಟ್ರೈ’ ಎಂಬ ಸಲಹೆಯನ್ನು ಪದೇ ಪದೆ ಬೋಧನೆ ಮಾಡುತ್ತಿದ್ದನು. ಇದು ವೈದ್ಯಕೀಯ ಕ್ಷೇತ್ರದಲ್ಲಿ ಅತಿಹೆಚ್ಚು ಪ್ರಸಿದ್ಧಿಯಲ್ಲಿರುವ ನುಡಿಗಟ್ಟು ಆಗಿದೆ.[೪] ಜೆನ್ನೆರ್ ತನ್ನ ಕಿರಿಯ ವಯಸ್ಸಿನಲ್ಲಿಯೇ ಅದಾಗಲೇ ಶಸ್ತ್ರಚಿಕಿತ್ಸೆಯ ಪದ್ಧತಿ ಮತ್ತು ಸಂಸ್ಥೆಗಳನ್ನು ಬೆಳೆಸುತ್ತಿರುವ ಜನಪ್ರಿಯ ವ್ಯಕ್ತಿಗಳ ವಲಯದಲ್ಲಿ ಗುರುತಿಸಲ್ಪಟ್ಟನು. ಹಂಟರ್ ಅವರು ನೈಸರ್ಗಿಕ ಇತಿಹಾಸದ ಕುರಿತು ಜೆನ್ನರ್‌ರೊಂದಿಗೆ ಯಾವಾಗಲೂ ಸಂಪರ್ಕದಲ್ಲಿದ್ದರು. ಅವರೇ ಜೆನ್ನರ್‌ರನ್ನು ರಾಯಲ್ ಸೊಸೈಟಿಗೆ ಶಿಫಾರಸು ಮಾಡಿದರು. 1773ರಲ್ಲಿ ಅವರು ತಮ್ಮ ಹಳ್ಳಿಗೆ ವಾಪಸ್ಸಾಗಿ, ಬರ್ಕ್ಲಿಯಲ್ಲಿ ಉದ್ದೇಶ ಪೂರಿತ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡು ಯಶಸ್ವಿ ವೈದ್ಯರು ಹಾಗೂ ಶಸ್ತ್ರಚಿಕಿತ್ಸಕರೆನಿಸಿದರು.
ಜೆನ್ನರ್ ಮತ್ತು ಕೆಲವರು ಸೇರಿ ಗ್ಲೌಸೆಸ್ಟರ್‌ಶೈರ್‌‌‌ನ, ರೋಡ್‌ಬರೊಹ್‌ನಲ್ಲಿ ಒಂದು ವೈದ್ಯಕೀಯ ಸಂಘವನ್ನು ಸ್ಥಾಪಿಸಿದರು. ಅಲ್ಲಿ ವೈದ್ಯಕೀಯ ವಿಷಯದ ಕುರಿತು ಪ್ರಕಟವಾಗುವ ಪತ್ರಿಕೆಗಳನ್ನು ಓದಿ ಚರ್ಚಿಸುತ್ತ ಒಟ್ಟಾಗಿ ಭೋಜನ ಮಾಡುತ್ತಿದ್ದರು. ಜೆನ್ನೆರ್ ಗಂಟಲೂತದ ಮೇಲೆ ವರದಿಗಳನ್ನು ಬರೆದಿದ್ದರು. ಇಲ್ಲಿಯ
ವೈದ್ಯಕೀಯ ಸಂಘವೇ ಫ್ಲೀಸ್ ವೈದ್ಯಕೀಯ ಸಮಾಜ ಅಥವಾ ಗ್ಲೌಸೆಸ್ಟರ್‌ಶೈರ್ ವೈದ್ಯಕೀಯ ಸಮಾಜವಾಗಿತ್ತು. ಇದು ರೊದ್‌ಬೊರೊದ [[]]ಫ್ಲೀಸ್ ಇನ್ ಪಾರ್ಲರ್‌ನಲ್ಲಿ ಇತ್ತು ಎಂದು ಹೇಳಲಾಗುತ್ತದೆ.

ಸಿಡುಬು[ಬದಲಾಯಿಸಿ]

ಈ ವೇಳೆಯಲ್ಲಿ ಸಿಡುಬಿನ ಭೀತಿ ಅತಿಯಾಗಿ ಕಾಡತೊಡಗಿತು. ರೋಗ ತಗುಲಿದ ಮೂರು ಜನರಲ್ಲಿ ಒಬ್ಬರು ಸಾವನ್ನಪ್ಪುತ್ತಿದ್ದರು ಮತ್ತು ಅವರಲ್ಲಿ ಬದುಕುಳಿದವರು ಅತಿಯಾಗಿ ವಿರೂಪಗೊಳ್ಳುತ್ತಿದ್ದರು. ಲೇಡಿ ಮೇರಿ ವರ್ಟ್ಲೆ ಮಾಂಟೆಗು ಇಸ್ತಾನ್‌ಬುಲ್‌ನಲ್ಲಿ, ತಮ್ಮ ನಿಗದಿತ ಅವಧಿಯಲ್ಲಿ ಅಂದರೆ 1716-1718ರಲ್ಲಿ, ಆಟಮನ್ ರಾಜವಂಶಚುಚ್ಚುಮದ್ದು ಹಾಕಿಸುವ ತತ್ವವನ್ನು ಕಂಡುಕೊಂಡರು ಮತ್ತು ಈ ವಿಚಾರವನ್ನು ಬ್ರಿಟನ್‌ಗೆ ಕೂಡ ತಂದರು. ನಂತರ ಕೆಲವು ವರ್ಷಗಳ ಮೇಲೆ ವಾಲ್ಟೇರ್ ಅವರು, 60% ರಷ್ಟು ಜನರು ಸಿಡುಬಿನ ರೋಗಕ್ಕೆ ತುತ್ತಾದರು, ಅವರಲ್ಲಿ 20% ಜನರು ಸಾವನ್ನಪ್ಪಿದರು ಎಂದು ದಾಖಲಿಸಿದರು. 1770ರವರೆಗೆ ವರ್ಷಗಳಲ್ಲಿ ಕಡಿಮೆ ಎಂದರೂ ಆರು ಜನರು (ಸೆವೆಲ್, ಜೆನ್ಸೆನ್, ಜೆಸ್ಟಿ 1774, ರೆಂಡೆಲ್, ಪ್ಲೆಟ್ 1791) ಇಂಗ್ಲೆಂಡ್ ಹಾಗೂ ಜರ್ಮನಿಗಳಲ್ಲಿ ಯಶಸ್ವಿಯಾಗಿ ಕೌಪಾಕ್ಸ್ (ಸಿಡುಬಿನ ವಿರುದ್ಧ ಬಳಸುವ ವೈರಸ್) ಲಸಿಕೆಯನ್ನು ಸಿಡುಬಿಗೆ ಪ್ರತಿರೋಧವಾಗಿ ಮನುಷ್ಯರಲ್ಲಿ ಬಳಸುವ ಸಾಧ್ಯತೆಯನ್ನು ಪರೀಕ್ಷಿಸಿದರು.[೫] ಉದಾಹರಣೆಗೆ, 1774ರ ಸಿಡುಬಿನ ಸಾಂಕ್ರಾಮಿಕ ರೋಗದ ವೇಳೆ ಡೋರ್‌ಸೆಟ್‌ನ ವ್ಯವಸಾಯಗಾರ ಬೆಂಜಮಿನ್ ಜೆಸ್ಟಿ, ಯಶಸ್ವಿಯಾಗಿ ತಮ್ಮ ಪತ್ನಿಗೆ ಹಾಗೂ ಎರಡು ಮಕ್ಕಳಿಗೆ ಕೌಪಾಕ್ಸ್ ಚುಚ್ಚುಮದ್ದನ್ನು ನೀಡಿದರು ಮತ್ತು ಪ್ರತಿರೋಧಕವನ್ನು ಹೆಚ್ಚಿಸಿದರು, ಆದರೆ ಈ ವಿಧಾನವು ಜೆನ್ನರ್ ಅವರ ಕಾರ್ಯದ ನಂತರ ಅಂದರೆ ಸುಮಾರು ಇಪ್ಪತ್ತು ವರ್ಷಗಳ ನಂತರವಷ್ಟೆ ವ್ಯಾಪಕವಾಗಿ ಪರಿಚಯಿಸಲ್ಪಟ್ಟಿತು. ವಾಸ್ತವದಲ್ಲಿ, ಜೆನ್ನರ್ ಅವರು ಜೆಸ್ಟಿಯವರ ಕಾರ್ಯವಿಧಾನ ಮತ್ತು ಯಶಸ್ಸನ್ನು ಅರಿತವರಾಗಿದ್ದರು.[೬]
ಜೆನ್ನರ್ ಅವರ ಮೊದಲ ಸಿದ್ಧಾಂತ:
ರೋಗದ ಸೋಂಕಿನ ಮೂಲವು ಕುದುರೆಗಳ ವ್ಯಾಧಿಯಿಂದ ಬಂದದ್ದಾಗಿದ್ದು, "ದಿ ಗ್ರೀಸ್" ಎಂದು ಕರೆಯಲ್ಪಡುವಂತದ್ದು, ಮತ್ತು ಇದು ತೋಟದ ಕೆಲಸಗಾರರಿಂದ ಹಸುಗಳಿಗೆ ವರ್ಗಾಯಿಸಲ್ಪಟ್ಟು, ನಂತರ ಪರಿವರ್ತನೆಯಾಗಿ ಕೌಪಾಕ್ಸ್ ಎಂಬ ಹೆಸರನ್ನು ಪಡೆದಿದೆ.
ಸಾಮಾನ್ಯವಾಗಿ ಅವಲೋಕಿಸಿದಾಗ, ಹೈನುಗಾರರು ಹೆಚ್ಚಾಗಿ ಸಿಡುಬು ರೋಗಕ್ಕೆ ತುತ್ತಾಗುತ್ತಿರಲಿಲ್ಲ. ಜೆನ್ನರ್ ಅಭಿಪ್ರಾಯದಂತೆ ಕೌಪಾಕ್ಸ್ ನ (ಸಿಡುಬನ್ನು ಹೋಲುವಂತಹುದೇ ರೋಗ, ಆದರೆ ಕಡಿಮೆ ಪರಿಣಾಮನ್ನುಂಟುಮಾಡುವಂತದ್ದು) ಬೊಕ್ಕೆಯಿಂದ ಉಂಟಾದ ಕೀವು ಹೈನುಗಾರರ ಸಂಪರ್ಕಕ್ಕೆ ಪದೇ ಪದೇ ಬರುವುದರಿಂದ ಅವರ ದೇಹದಲ್ಲಿ ಉಂಟಾಗುವ ರೋಗ ನಿರೋಧಕ ಶಕ್ತಿಯಿಂದಾಗಿ ಅವರು ರೋಗದಿಂದ ರಕ್ಷಿಸಲ್ಪಡುತ್ತಿದ್ದರು ಎಂದು ತಿಳಿದುಕೊಳ್ಳಲಾಯಿತು. ಜೆನ್ನರ್ ಅವರು ಬೆಂಜಮಿನ್ ಜೆಸ್ಟೀಸ್‌ರವರ ಮತ್ತು ಇತರೆ ಕೆಲವು ಕುಟುಂಬದವರು ತಮ್ಮ ಕುಟುಂಬದವರಿಗೆ ಉದ್ದೇಶಪೂರ್ವಕವಾಗಿ ಕೌಪಾಕ್ಸ್ ರೋಗದ ಸೋಂಕು ತಗಕುವಂತೆ ಮಾಡುವ ಪ್ರಯತ್ನದ ಮೂಲಕ ಅವರಲ್ಲಿಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿದ್ದರು ಹಾಗೂ ಅವರಿಗೆ ಸಿಡುಬು ರೋಗ ಉಂಟಾಗುವ ಸಂಭಾವ್ಯತೆ ಕಡಿಮೆ ಇತ್ತು ಎಂಬುದನ್ನು ಗುರುತಿಸಿದರು.
14 ಮೇ 1796ರಲ್ಲಿ, ಜೆನ್ನರ್ ತಮ್ಮ ಸಿದ್ಧಾಂತವನ್ನು, 8 ವರ್ಷದ ಬಾಲಕ ಜೇಮ್ಸ್ ಫಿಪ್ಸ್ (ಜೆನ್ನರ್ ಅವರ ಮಾಲಿಯ ಮಗ) ಎನ್ನುವವನಿಗೆ, ಬ್ಲಾಸಮ್ ಎನ್ನುವ ಹಸುವಿನಿಂದ,[೭] ಕೌಪಾಕ್ಸ್ ತಗುಲಿದ ಸಾರಾ ನೇಮ್ಸ್ ಎನ್ನುವ ಹೈನುಗಾರ್ತಿಯ ಕೈನಲ್ಲಾದ ಕೌಪಾಕ್ಸ್ ಬೊಕ್ಕೆಯಿಂದ ತೆಗೆದ ರೋಗಾಣು ಚುಚ್ಚುಮದ್ದನ್ನು ನೀಡಿದರು. ಸೇಂಟ್ ಜಾರ್ಜ್ ವೈದ್ಯಕೀಯ ಶಾಲೆಯ ಗ್ರಂಥಾಲಯದ ಗೋಡೆಯ ಮೇಲೆ ಈ ಹಸುವಿನ ತೊಗಲನ್ನು ತೂಗುಹಾಕಲಾಗಿದೆ (ಈಗ ಇದು ಟೂಟಿಂಗ್‌ನಲ್ಲಿದೆ). ಇದು ಈ ವೈದ್ಯಕೀಯ ಶಾಲೆಯ ಪ್ರತಿಷ್ಟೆಯ ವಿಷಯಗಳಲ್ಲೊಂದಾಗಿದೆ. ಜೆನ್ನರ್ ಅವರು ಲಸಿಕೆಯ ಕುರಿತು ಲೇಖನದಲ್ಲಿ ಉಲ್ಲೇಖಿಸಿದ 17ನೆ ಪ್ರಕರಣ ಫಿಪ್ಸ್ ಅವರದ್ದಾಗಿದೆ.
ಜೆನ್ನರ್ ಅವರು ಒಂದೇ ದಿನ ಫಿಪ್ಸ್‌ನ ಎರಡೂ ತೋಳುಗಳಿಗೆ ಕೌಪಾಕ್ಸ್ ಕೀವಿನ ರೋಗಾಣು ಚುಚ್ಚುಮದ್ದನ್ನು ನೀಡಿದರು. ನೇಮ್ಸ್ ಅವರ ಬೊಕ್ಕೆಯಿಂದಾದ ಕೀವನ್ನು ತೆಗೆದು ಮರದ ತುಂಡಿನ ಮೇಲೆ ಇಟ್ಟು ನಂತರ ಅದನ್ನು ಫಿಪ್ಸ್ ಅವರ ತೋಳುಗಳಿಗೆ ವರ್ಗಾಯಿಸಿ ರೋಗಾಣು ಚುಚ್ಚುವ ಕಾರ್ಯವನ್ನು ಪೂರ್ತಿಗೊಳಿಸಿದರು. ಇದು ಸ್ವಲ್ಪ ಮಟ್ಟಿಗೆ ಜ್ವರ ಹಾಗೂ ಅಹಿತವನ್ನುಂಟುಮಾಡಿತಾದರೂ ಯಾವುದೇ ಹೆಚ್ಚಿನ ಅನಾರೋಗ್ಯವನ್ನುಂಟುಮಾಡಲಿಲ್ಲ. ನಂತರ, ಅವರು ಫಿಪ್ಸ್‌ನಿಗೆ ಆ ಕಾಲದಲ್ಲಿ ಪ್ರತಿರೋಧಕವನ್ನು ಹೆಚ್ಚಿಸಲು ನೀಡುವ ಹಲವಾರು ದ್ರವ್ಯಗಳನ್ನು ನೀಡಿದರು. ಯಾವುದೇ ರೋಗವೂ ಅವನನ್ನು ಕಾಡಲಿಲ್ಲ. ನಂತರ ಮತ್ತೆ ಈ ಬಾಲಕನು ಅನೇಕ ದ್ರವ್ಯಗಳಿಂದ ಪರೀಕ್ಷೆಗೊಳಪಟ್ಟನು ಹಾಗೂ ಯಾವುದೇ ಸೋಂಕಿನ ಲಕ್ಷಣಗಳನ್ನು ತೋರಿಸಲಿಲ್ಲ ಎಂದು ಜೆನ್ನರ್ ವರದಿ ಮಾಡಿದರು.
ತಿಳಿದಿರುವಂತದ್ದು
ಸಿಡುಬು, ರೋಗಾಣು ಚುಚ್ಚುಮದ್ದು ಹಾಕಿ ಉಂಟಾಗುವ ಅನಾರೋಗ್ಯಕ್ಕಿಂತ ಹೆಚ್ಚು ಅಪಾಯಕಾರಿಯಾದಂತದ್ದು ಮತ್ತು ಇದಕ್ಕಿಂತ ಕೌಪಾಕ್ಸ್ ಕಡಿಮೆ ಅಪಾಯಕಾರಿಯಾದಂತದ್ದು.
ಸಿದ್ಧಾಂತ
ಕೌಪಾಕ್ಸ್ ಸೋಂಕು ಸಿಡುಬಿಗೆ ನಿರೋಧಕವಾಗಿ ಪ್ರತಿರೋಧಕ ಶಕ್ತಿಯನ್ನು ನೀಡುತ್ತದೆ.
ಪರೀಕ್ಷೆ
ಕೌಪಾಕ್ಸ್ ಸೋಂಕು ತಗುಲಿದ ನಂತರ ರೋಗಾಣು ಚುಚ್ಚುಮದ್ದು ಪಡೆದು, ಅದು ಸಿಡುಬಿನ ಸೋಂಕು ಉತ್ಪತ್ತಿ ಮಾಡುವಲ್ಲಿ ಅಸಫಲವಾದರೆ, ಸಿಡುಬಿನ ಪ್ರತಿರೋಧಕ ಶಕ್ತಿಯು ಹೆಚ್ಚಿದಂತೆಯೆ.
ಫಲಿತಾಂಶ:
ರೋಗಾಣು ಚುಚ್ಚುಮದ್ದು ನೀಡುವುದಕ್ಕಿಂತ ಹೆಚ್ಚು ಸುರಕ್ಷಿತವಾಗಿ ಸಿಡುಬಿನ ಪ್ರತಿರೋಧಕವನ್ನು ನೀಡಲಾಗುತ್ತಿತ್ತು.
ರೊನಾಲ್ಡ್ ಹಾಪ್‌ಕಿನ್ಸ್ ಹೇಳುತ್ತಾರೆ: "ಜೆನ್ನರ್ ಅವರ ಅದ್ವಿತೀಯ ಕೊಡುಗೆಯೆಂದರೆ ಅವರು ಕೆಲವರಿಗೆ ಕೌಪಾಕ್ಸ್ ರೋಗಾಣು ಚುಚ್ಚುಮದ್ದು ನೀಡಿದರು ಎನ್ನುವುದಲ್ಲ. ಬದಲಾಗಿ ನಂತರ ಅವರು ಅದು ಸಿಡುಬಿನ ಪ್ರತಿರೋಧಕ ಎನ್ನುವುದನ್ನು ಸಾಬೀತುಪಡಿಸಿದರು ಎನ್ನುವುದು. ಅದಕ್ಕಿಂತ ಹೆಚ್ಚಾಗಿ, ಅವರು ರಕ್ಷಿಸಲ್ಪಟ್ಟ ಕೌಪಾಕ್ಸ್‌ ಅನ್ನು ಕೇವಲ ಹಸುವಿನ ನೇರ ಸಂಪರ್ಕದಿಂದಲ್ಲದೆ, ಮನುಷ್ಯರಿಂದ ಮನುಷ್ಯರಿಗೆ ಕೂಡ ಸಕ್ರಿಯವಾಗಿ ರಕ್ತದೊಳಕ್ಕೆ ತೂರಿಸಬಹುದು ಎಂಬುದನ್ನು ತೋರಿಸಿಕೊಟ್ಟರು.[೮] ಜೊತೆಗೆ, ತಮ್ಮ ಸಿದ್ಧಾಂತಗಳನ್ನು 23 ವಿಷಯಗಳ ಒಂದು ಸರಣಿಯಂತೆ ಪರೀಕ್ಷೆಗೊಳಪಡಿಸಿದರು. ಈ ರೀತಿಯ ಸಂಶೋಧನಾ ಪ್ರಕಾರವು ಅವರ ಪುರಾವೆಗಳ ಊರ್ಜಿತತ್ವವನ್ನು ಹೆಚ್ಚಿಸಿತು.
ಅವರು ತಮ್ಮ ಸಂಶೋಧನೆಯನ್ನು ಮುಂದುವರೆಸಿದರು ಮತ್ತು ಅವರ ಮೊದಲ ವರದಿಯನ್ನು ರಾಯಲ್ ಸೊಸೈಟಿಗೆ ನೀಡುತ್ತಿದ್ದರು ಆದರೆ ತಮ್ಮ ಪ್ರಾಥಮಿಕ ಪ್ರಯೋಗದ ವಿಷಯವನ್ನು ಅವರು ಪ್ರಕಟಿಸಲಿಲ್ಲ. ಸುಧಾರಣೆಯ ಮತ್ತು ಹೆಚ್ಚಿನ ಕೆಲಸದ ನಂತರ, ಅವರು ಇಪ್ಪತ್ಮೂರು ಪ್ರಕರಣಗಳ ಒಂದು ವರದಿಯನ್ನು ಪ್ರಕಟಿಸಿದರು. ಅವರ ಕೆಲವು ತೀರ್ಮಾನಗಳು ಸರಿಯಾಗಿದ್ದವು ಮತ್ತು ಕೆಲವೊಂದು ತಪ್ಪಾಗಿದ್ದವು– ಇದರ ಪುನರಾವರ್ತನೆಗೆ ಆಧುನಿಕ ಸೂಕ್ಷ್ಮ ಜೀವವಿಜ್ಞಾನ ಮತ್ತು ಸೂಕ್ಷ್ಮದರ್ಶಕೀಯ ವಿಧಾನದಿಂದ ಸುಲಭ ಸಾಧ್ಯವಾಗುತ್ತಿತ್ತು. ಈಗಿರುವಂತೆ ಆಗ ಕೂಡ ವೈದ್ಯಕೀಯ ಬೆಳವಣಿಗೆಯನ್ನು ಮುಂಜಾಗೃತೆಯಿಂದ ನೋಡಲಾಗುತ್ತಿತ್ತು. ಅವನ ಸಂಶೋಧನೆಗಳನ್ನು ಒಪ್ಪಿಕೊಳ್ಳುವುದಕ್ಕೆ ಮುಂಚೆ ಅವುಗಳನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ಅಂತಿಮವಾಗಿ ಲಸಿಕೆ ನೀಡುವುದನ್ನು ಅಂಗೀಕರಿಸಲಾಯಿತು, ಹಾಗೂ 1840ರಲ್ಲಿ ಬ್ರಿಟಿಷ್ ಸರ್ಕಾರವು ಸಿಡುಬಿನದ್ದೇ– ರೋಗಾಣು ಚುಚ್ಚುಮದ್ದು– ನೀಡುವುದನ್ನು ನಿಷೇಧಿಸಿತು ಮತ್ತು ಉಚಿತವಾಗಿ ಕೌಪಾಕ್ಸ್– ಬಳಸಿ ಲಸಿಕೆ–ಯನ್ನು ಒದಗಿಸಿತು. (ಲಸಿಕೆಯ ಕಾಯ್ದೆಗಳನ್ನು ನೋಡಿರಿ)
1802ರ ಎಡ್ವರ್ಡ್ ಜೆನ್ನರ್ ಕುರಿತಾದ ವ್ಯ್‌ಂಗ್ಯ ಭಾವಚಿತ್ರದಲ್ಲಿ ಜೆನ್ನೆರ್ ರೋಗಿಗಳಿಗೆ ಚುಚ್ಚುಮದ್ದು ನೀಡುತ್ತಿದ್ದಾನೆ. ಅವರೆಲ್ಲ ತಮಗೆ ಆಕಳಿನಂತೆ ಕೊಂಬು ಬರಬಹುದೇನೋ ಎಂಬ ಭಯದಲ್ಲಿರುವುದನ್ನು ಚಿತ್ರಿಸಲಾಗಿದೆ.
ಜೆನ್ನರ್ ಅವರ ಲಸಿಕೆಯ ಕಾರ್ಯವು ಮುಂದುವರೆದಂತೆ, ಅದು ಅವರ ಸಾಮಾನ್ಯ ವೈದ್ಯಕೀಯ ವೃತ್ತಿಗೆ ತಡೆಯನ್ನೊಡ್ಡಿತು. ಅವರು ಸಹವರ್ತಿಗಳಿಂದ ಬೆಂಬಲವನ್ನು ಪಡೆದರು ಮತ್ತು ರಾಜನು ಸಂವಿಧಾನದಲ್ಲಿ ಅವರ ಲಸಿಕೆಯ ಕಾರ್ಯಕ್ಕಾಗಿ £10,000 ನ್ನು ಬಿಡುಗಡೆಗೊಳಿಸಿದನು. 1806ರಲ್ಲಿ ಅವರ ಮುಂದುವರಿದ ಕೆಲಸಕ್ಕಾಗಿ ಮತ್ತೂ £20,000 ನ್ನು ಬಿಡುಗಡೆಗೊಳಿಸಲಾಯಿತು.
1803ರಲ್ಲಿ ಲಂಡನ್ನಿನಲ್ಲಿ ಇವರು ಸಿಡುಬನ್ನು ಬುಡಸಮೇತ ನಿರ್ಮೂಲನೆ ಮಾಡಲು ಲಸಿಕೆಯ ಕುರಿತು ಪ್ರಚಾರ ಮಾಡುವ ಒಂದು ಸಮಾಜ, ಜೆನೇರಿಯನ್ ಸಂಸ್ಥೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1808ರಲ್ಲಿ, ಸರ್ಕಾರದ ಬೆಂಬಲದೊಂದಿಗೆ, ಈ ಸಮಾಜವು ರಾಷ್ಟ್ರೀಯ ಲಸಿಕಾ ಸಂಸ್ಥೆ ಎನಿಸಿತು. ಜೆನ್ನರ್ ಅವರು 1805ರಲ್ಲಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸಂಘದ ಪ್ರತಿಷ್ಠಾನದಲ್ಲಿ ಸದಸ್ಯರಾದರು ಹಾಗೂ ನಂತರದ ದಿನಗಳಲ್ಲಿ ಅವರಿಗೆ ಹಲವಾರು ಸಂಶೋಧನಾ ಪ್ರಬಂಧಗಳನ್ನು ಒದಗಿಸಿದರು. ಈಗ ಅದು ರಾಯಲ್ ಸೊಸೈಟಿ ಆಫ್ ಮೆಡಿಸಿನ್ ಎಂದಾಗಿದೆ. 1806ರಲ್ಲಿ ಇವರು ಸ್ವಿಡಿಶ್ ರಾಜವಂಶದ ವಿಜ್ಞಾನ ಅಕಾಡೆಮಿಯಲ್ಲಿ ವಿದೇಶಿ ಸದಸ್ಯರಾಗಿ ಚುನಾಯಿತರಾದರು.
1811ರಲ್ಲಿ ಲಂಡನ್ನಿಗೆ ವಾಪಸ್ಸಾದ ಮೇಲೆ ಇವರು, ಲಸಿಕೆ ಹಾಕಿದ ನಂತರವೂ ಸಿಡುಬು ಕಾಣಿಸಿದ ಹಲವಾರು ಪ್ರಮುಖ ಪ್ರಕರಣಗಳನ್ನು ಗಮನಿಸಿದರು. ಈ ಪ್ರಕರಣಗಳಲ್ಲಿ ವ್ಯಾಧಿಯು, ಹಿಂದಿನ ಲಸಿಕೆಯಿಂದ ಸಂಪೂರ್ಣವಾಗಿ ಕಡಿಮೆಯಾಗಲಿಲ್ಲವೆಂಬುದನ್ನು ಇವರು ಕಂಡುಕೊಂಡರು. 1821ರಲ್ಲಿ ಇವರು ಕಿಂಗ್ ಜಾರ್ಜ್ IV ಅವರಿಗೆ ವಿಶೇಷ ವೈದ್ಯರಾಗಿ ನೇಮಕಗೊಂಡರು, ಇದು ಒಂದು ಮಹತ್ತಾದ ರಾಷ್ಠ್ರೀಯ ಗೌರವ ಹಾಗೂ ಇವರನ್ನು ಬರ್ಕ್ಲಿಯ ಮಹಾಪೌರ ಮತ್ತು ಶಾಂತಿಯ ನ್ಯಾಯಮೂರ್ತಿಯೆಂದು ಕರೆಯಲಾಯಿತು. ಇವರು ನೈಸರ್ಗಿಕ ಚರಿತ್ರೆಯಲ್ಲಿ ತಮಗಿರುವ ಆಸಕ್ತಿಯನ್ನು ಮುಂದುವರೆಸಿದರು. 1823ರಲ್ಲಿ, ತಮ್ಮ ಜೀವನದ ಕೊನೆಯ ವರ್ಷದಲ್ಲಿ, ಇವರು ತಮ್ಮ ಒಬ್ಸರ್ವೇಷನ್ಸ್ ಆನ್ ದಿ ಮೈಗ್ರೇಷನ್ ಆಫ್ ಬರ್ಡ್ಸ್ ನ್ನು ರಾಯಲ್ ಸೊಸೈಟಿಗೆ ಕೊಡುಗೆಯಾಗಿ ನೀಡಿದರು.
ಜೆನ್ನರ್ ಅವರು 1823 ಜನೆವರಿ 25ರಂದು ಲಕ್ವದಿಂದ ಜರ್ಜರಿತರಾದರು ಇದರಿಂದ ತಮ್ಮ ದೇಹದ ಬಲಬಾಗದ ಸಂಪೂರ್ಣ ಹಿಡಿತವನ್ನು ಕಳೆದುಕೊಂಡರು. ಇವರು ಇದರಿಂದ ಎಂದಿಗೂ ಸಂಪೂರ್ಣವಾಗಿ ಗುಣಮುಖರಾಗಲಿಲ್ಲ. 26 ಜನೆವರಿ 1823ರಲ್ಲಿ, ತಮ್ಮ 73ನೇ ವರ್ಷದಲ್ಲಿ ಮತ್ತೊಮ್ಮೆ ಪಾರ್ಶ್ವವಾಯು ಹೊಡೆತದಿಂದ ಕೊನೆಯುಸಿರೆಳೆದರು. ಇವರು ಒಬ್ಬ ಮಗ ಹಾಗೂ ಮಗಳನ್ನು ಹೊಂದಿದ್ದರು, ಇವರ ಹಿರಿಯ ಮಗ 21ನೆ ವಯಸ್ಸಿನಲ್ಲಿ ಕ್ಷಯರೋಗದಿಂದ ಸಾವನ್ನಪ್ಪಿದ್ದನು.
ಅವನ ಮೂಲ ವರದಿಯು ಶಸ್ತ್ರಚಿಕಿತ್ಸಕರ ರಾಯಲ್ ಕಾಲೇಜ್‌(ಲಂಡನ್)ನಲ್ಲಿದೆ

ಮೊದಲ ಸಮುದಾಯ ಲಸಿಕೆ ಹಾಕಿಸುವಿಕೆ[ಬದಲಾಯಿಸಿ]

1796 ಡಿಸೆಂಬರ್ 1ರಂದು, ಟ್ರಿಂಟಿಯಲ್ಲಿ ವೈದ್ಯ ಪ್ರಚಾರಕ ಮತ್ತು ನ್ಯೂಫೌಂಡ್‌ಲ್ಯಾಂಡಿನಲ್ಲಿ ಎರಡನೆಯ ಅತಿ ದೊಡ್ಡ ಒಪ್ಪಂದಕ ಡಾ. ಜಾನ್ ಕ್ಲಿಂಚ್ ಅವರು ಗ್ಲೌಸೆಸ್ಟರ್‌ಶೈರ್‌ನ ಡಾ.ಎಡ್ವರ್ಡ್ ಜೆನ್ನರ್ ಅವರಿಗೆ ಒಂದು ಪತ್ರವನ್ನು ಕಳುಹಿಸಿದರು. ಕ್ಲಿಂಚ್ ಅವರು ಸಿಡುಬಿಗೆ ಪ್ರತಿರೋಧಕವಾಗಿ ಕೌಪಾಕ್ಸ್ ಬೊಕ್ಕೆಯನ್ನು ಲಸಿಕೆಯಾಗಿ ಬಳಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಕೋರಿದರು. ಜೆನ್ನರ್ ಅವರು 6 ತಿಂಗಳ ಮುಂಚೆಯಷ್ಟೆ ತಮ್ಮ ಮೊದಲ ರೋಗಿಗೆ ಲಸಿಕೆಯನ್ನು ನೀಡಿದ್ದರು. 1800 ಜೂನ್‌ನಲ್ಲಿ, ಜೆನ್ನರ್ ಅವರು 23 ರೋಗಿಗಳ ಮೇಲೆ ತಾವು ನಡೆಸಿದ ಲಸಿಕೆ ನೀಡುವ ಪ್ರಯೋಗವನ್ನು ತಿಳಿಸುವ, ಸಿಡುಬಿನ ಲಸಿಕೆಗೆ ಕಾರಣಗಳು ಮತ್ತು ಪರಿಣಾಮಗಳ ಕುರಿತು ಒಂದು ಶೋಧನೆ ಎಂಬ ಪ್ರಸಿದ್ಧ ಕಿರುಹೊತ್ತಿಗೆ ಪ್ರಕಟಗೊಳ್ಳುವ ಒಂದು ವರ್ಷ ಅಥವಾ ಇನ್ನೂ ಮುಂಚೆ ಬಹುಶಃ ಕ್ಲಿಂಚ್ ಅವರು ನ್ಯೂಫೌಂಡ್‌ಲ್ಯಾಂಡಿನಲ್ಲಿ ಜನರಿಗೆ ಲಸಿಕೆಯನ್ನು ನೀಡುತ್ತಿದ್ದರು.
ಜೆನ್ನರ್ ಮತ್ತು ಕ್ಲಿಂಚ್, ಇಬ್ಬರೂ 1749ರಲ್ಲಿ ಜನಿಸಿದವರು, ಇವರು ಗ್ಲೌಸೆಸ್ಟರ್‌ಶೈರ್‌ನ, ಸಿರೆನ್‌ಸಿಸ್ಟರ್‌ನಲ್ಲಿ ಪೂಜ್ಯ ಡಾ.ವಾಶ್‌ಬೌರ್ನ್ಸ್ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಲಂಡನ್ನಿಗೆ ಹೋಗುವ ಮುಂಚೆ ಹೆಸರುವಾಸಿ ಶಸ್ತ್ರಚಿಕಿತ್ಸಕ ಜಾನ್ ಹಂಟರ್ ಅವರ ವಿದ್ಯಾರ್ಥಿಗಳಾಗಿದ್ದರು. ಜೆನ್ನರ್ ಅವರು ತಮ್ಮ ಸ್ವಸ್ಥಳಕ್ಕೆ ಮರಳಿದರು. ಆದರೆ ಕ್ಲೆಂಚ್ ಅವರು ನ್ಯೂಫೌಂಡ್‌ಲ್ಯಾಂಡ್‌ನ ಮುಖ್ಯ ಬಂದರು ಪೂಲ್ ಹತ್ತಿರ ಡೋರ್‌ಸೆಟ್‌ನಲ್ಲಿ 3 ವರ್ಷಗಳ ಕಾಲ ಅಭ್ಯಾಸ ನಡೆಸಿದರು. 1775ರಲ್ಲಿ ಬೊನಾವಿಸ್ತಾದಲ್ಲಿ ವೃತ್ತಿ ನಡೆಸಲು ಕ್ಲೆಂಚ್ ಅವರು ನ್ಯೂಫೌಂಡ್‌ಲ್ಯಾಂಡ್‌ಗೆ ತೆರಳಿದರು. 8 ವರ್ಷಗಳ ನಂತರ ಅವರು ಟ್ರಿನಿಟಿಗೆ ನಡೆದರು, ಅಲ್ಲಿ ಅವರು ಭಾನುವಾರ ಧರ್ಮೋಪನ್ಯಾಸಕರಿಗೆ ಧರ್ಮ ಭೋದನೆ ಮಾಡಿದರು. ಜೆನ್ನರ್ ಅವರ ಸೋದರಳಿಯ, ಅದೇ ಚರ್ಚನ ಉದ್ದೇಶವನ್ನಿಟ್ಟುಕೊಂಡ-ವೈದ್ಯ ವೃತ್ತಿಯ ಜಾರ್ಜ್ ಜೆನ್ನರ್, ತಮ್ಮ ವೈದ್ಯಕೀಯ ಶಿಕ್ಷಣವನ್ನು 1789ರಲ್ಲಿ ಟ್ರಿನಿಟಿಯಲ್ಲಿ ಕ್ಲೆಂಚ್ ಕೆಳಗೆ ಪ್ರಾರಂಭಿಸಿದರು.
1800 ಜುಲೈ 15ರಂದು, ಎಡ್ವರ್ಡ್ ಜೆನ್ನರ್‌ರಿಂದ ಲಸಿಕೆಯ ಎರಡನೆ ಸರಕು ಕ್ಲೆಂಚ್ ಅವರನ್ನು ತಲುಪಿತು; ಎರಡು ಸರಕಿನಲ್ಲಿ ಮೊದಲನೆಯದಂತೆಯೆ ಇದು ಕೂಡ ಟ್ರಿನಿಟಿ ಮತ್ತು ಸೇಂಟ್. ಜಾನ್ಸ್ ಮಧ್ಯದ ದ್ವೀಪ, ಹರ್ಬರ್ ಗ್ರೇಸ್‌ಗೆ ಜಾರ್ಜ್ ಜೆನ್ನರ್ ಅವರ ಮೂಲಕ, ನಂತರ ಧರ್ಮೋಪನ್ಯಾಸಕ ಮಂತ್ರಿಯ ಮೂಲಕ ಬಂದು ತಲುಪಿತು. 1800ರ ಅಕ್ಟೋಬರ್ ಮೊದಲ ವಾರದಲ್ಲಿ ಕ್ಲೆಂಚ್ ಅವರು ಪಕ್ಕದ ಸೆಂಟ್. ಜಾನ್ಸ್ ಮತ್ತು ಪೊರ್ಚುಗಲ್ ಕೋವ್‌ನ ಒಪ್ಪಂದಕ್ಕಿಂತ ಹೆಚ್ಚುವರಿ ಜನರಿಗೆ ಲಸಿಕೆಯನ್ನು ಹಾಕಿದರು ಹಾಗೂ 1801ರ ಕೊನೆಯ ವೇಳೆಗೆ ಅವರು 700 ಜನರಿಗೆ ಲಸಿಕೆ ಹಾಕಿದ್ದರು.
ವಿಲಿಯಮ್ ಆರ್. ಲೆಫಾನು ಅವರು ಜೆನ್ನರ್ ಕುರಿತ ನಿರ್ಧಾರಕ ಗ್ರಂಥಸೂಚಿಯಲ್ಲಿ ಉತ್ತರ ಅಮೇರಿಕಾದಲ್ಲಿ 1800 ಜುಲೈನಲ್ಲಿ ತಮ್ಮ ಸ್ವಂತ ಮಕ್ಕಳಿಗೆ ಚುಚ್ಚುಮದ್ದು ನೀಡಿ ನಂತರ ಬೋಸ್ಟನ್ನಿನಲ್ಲಿ ಲಸಿಕೆಯನ್ನು ಪ್ರಚಾರಪಡಿಸಿದ. ಬೆಂಜಮಿನ್ ವಾಟರ್‌ಹೌಸ್‌ಗಿಂತ ಮೊದಲು ಚುಚ್ಚುಮದ್ದುಗಾರರೆನಿಸಿದ ಶ್ರೇಯಸ್ಸು ಕ್ಲೆಂಚ್ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ. ದುಃಖವೆಂದರೆ, ನಿರ್ಣಾಯಕ ದಾಖಲೆಗೆ ಅವರು ನೀಡಿದ ಮೊದಲ ಲಸಿಕೆಯ ಖಚಿತ ತಾರೀಖು ದೊರಕದೆ ಇರುವುದು. ಕ್ಲೆಂಚ್ ಅವರು ಟ್ರಿನಿಟಿಯಲ್ಲಿ ಸ್ಮಾರಕ ಫಲಕದಿಂದ ಗೌರವಿಸಲ್ಪಟ್ಟರು. (ಈ ವಿಭಾಗವು ಜಾನ್ ಡಬ್ಲು.ಆರ್. ಮ್ಯಾಕ್‌ಇಂಟೈರ್, ಎಮ್‌ಬಿ ಬಿಎಸ್ ಇವರಿಂದ ಪುನರ್‌ಪ್ರಕಟಣೆ ಮಾಡಲ್ಪಟ್ಟಿತು; ಸಿ. ಸ್ಟೌರ್ಟ್ ಹೌಸ್ಟನ್, ಎಮ್‌ಡಿ ಇವರು ’ಕೆನಡಾದಲ್ಲಿ ಸಿಡುಬು ಮತ್ತು ಅದರ ನಿಯಂತ್ರಣ’ ವರದಿಯನ್ನು ಪ್ರಕಟಿಸಿದರು. ಸಿಎಮ್‌ಎಜೆ 14ನೇ ಡಿಸೆಂಬರ್ 1999)

ಪರಂಪರೆ[ಬದಲಾಯಿಸಿ]

1979ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ, ಸಿಡುಬು ನಿರ್ಮೂಲನೆಗೊಂಡ ರೋಗ ಎಂದು ಘೋಷಿಸಿತು. ಇದು ಸಾರ್ವಜನಿಕ ಆರೋಗ್ಯಕ್ಕಾಗಿ ಹಲವು ಜನರ ಸಂಘಟಿತ ಪ್ರಯತ್ನದ ಫಲ, ಆದರೆ ಲಸಿಕೆ ಹಾಕಿಸುವುದು ಅತ್ಯವಶ್ಯಕ ಅಂಶವಾಗಿದೆ. ಹಾಗೂ ಇದು ಬುಡಸಮೇತ ನಿರ್ಮೂಲನೆಗೊಂಡಿದೆ ಎಂದು ಘೋಷಿಸಲ್ಪಟ್ಟರೂ , ಕೆಲವು ನಿದರ್ಶನಗಳು ಈಗಲೂ ಪ್ರಯೋಗಾಲಯಗಳಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಅಟ್ಲಾಂಟಾ, ಜಾರ್ಜಿಯಾ ಸಂಯುಕ್ತ ರಾಷ್ಟ್ರ, ಹಾಗೂ ರಷ್ಯಾದ ನೋವೊಸಬಿರ್ಸ್ಕ್ ಆಬ್ಲಾಸ್ಟ್‌‍ನ ಕೋಲ್ಟ್ ಸೋವ್‌ ಸ್ಟೇಟ್‌ ರಿಸರ್ಚ್‌ ಸೆಂಟರ್ ಆಫ್ ವೈರಾಲಜಿ ಆಂಡ್ ಬೈಯೋಟೆಕ್ನಾಲಜಿ VECTORಗಳಲ್ಲಿ ಉಳಿದುಕೊಂಡಿದೆ.
ಅವರ ಕೆಲಸದ ಪ್ರಾಮುಖ್ಯತೆಯು ಇಲ್ಲಿಗೆ ನಿಲ್ಲುವುದಿಲ್ಲ. ಇವರ ಲಸಿಕೆಯು ಆಧುನಿಕ-ದಿನಗಳ ಪ್ರತಿರೋಧಕಶಾಸ್ತ್ರದ ಸಂಶೋಧನೆಗೆ ಮೂಲಾಧಾರವಾಗಿದೆ ಮತ್ತು ಇವರು ಆರಂಭಿಸಿದ ಮಾರ್ಗವು ಒಂದು ದಿನ ಸಂಧಿವಾತ, ಏಡ್ಸ್ ಹಾಗೂ ಇನ್ನೂ ಹಲವು ರೋಗಗಳ ಔಷಧಿಗೆ ಕಾರಣವಾಗಬಹುದು.[೯]

ಸ್ಮಾರಕ[ಬದಲಾಯಿಸಿ]

ಚಿತ್ರ:Jenner-statue-by-lachlan-mvc-006f.jpg
ಕೆನ್ಸಿಂಗ್‌ಟನ್ ಗಾರ್ಡನ್ಸ್‌ನಲ್ಲಿನ ಕಂಚಿನ ಶಿಲ್ಪ
ಟೋಕಿಯೊದಲ್ಲಿರುವ ಸ್ಮಾರಕ

ಪ್ರಕಟಣೆಗಳು[ಬದಲಾಯಿಸಿ]

 • 1798 ಸಿಡುಬಿನ ಲಸಿಕೆಯ ಕಾರಣಗಳು ಮತ್ತು ಪರಿಣಾಮಗಳ ಬಗೆಗೆ ಒಂದು ಪರಿಶೀಲನೆ
 • 1799 ಸಿಡುಬಿನ ಲಸಿಕೆಯ ಬಗೆಗಿನ ಇನ್ನೂ ಹೆಚ್ಚಿನ ಅವಲೋಕನಗಳು
 • 1800 ಸಿಡುಬಿನ ಲಸಿಕೆಗೆ ಸಂಬಂಧಿಸಿದ ಸತ್ಯಗಳು ಮತ್ತು ಅವಲೋಕನಗಳ ಒಂದು ನಿರಂತರತೆ 40pgs
 • 1801 ಲಸಿಕೆಯ ರೋಗಾಣು ಚುಚ್ಚಿಕೆಯ ಮೂಲ 12pgs

ಇದನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 5. Plett PC (2006). "Peter Plett and other discoverers of cowpox vaccination before Edward Jenner" [Peter Plett and other discoverers of cowpox vaccination before Edward Jenner]. Sudhoffs Archiv (in German). 90 (2): 219–32. PMID 17338405. 
 6. Grant J. Corrupted Science. Facts, Figures & Fun, 2007. p. 24. ISBN 13:9871904332732 Check |isbn= value: invalid character (help). 
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Hopkins, Donald R. (2002). The greatest killer: smallpox in history, with a new introduction. Chicago: University of Chicago Press. p. 80. ISBN 978-0-226-35168-1. OCLC 49305765. 
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Royal College of Physicians. "JENNER, Edward (1749-1750)". AIM25 Archives. 
 11. St George's, University of London. "Our History". 

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • ಭೌತಶಾಸ್ತ್ರಜ್ಞರ ರಾಯಲ್ ಕಾಲೇಜಿನಲ್ಲಿನ ವರದಿಗಳು
 • ಬ್ಯಾರೊನ್, ಜಾನ್ ಎಮ್.ಡಿ. ಎಫ್.ಆರ್.ಎಸ್., "ಎಡ್ವರ್ಡ್ ಜೆನ್ನೆರ್‌ ಎಮ್‌ಡಿ ಎಲ್‌ಎಲ್‌ಡಿ ಎಫ್‌ಆರ್‌ಎಸ್‌ ಜೀವನ", ಹೆನ್ರಿ ಕೊಲ್‌ಬರ್ನ್, ಲಂಡನ್, 1827.
 • ಬ್ಯಾರೊನ್, ಜಾನ್, "ಎಡ್ವರ್ಡ್ ಜೆನ್ನೆರ್‌ನ ಪತ್ರ ವ್ಯವಹಾರಗಳ ಮೂಲಕ ಅವನ ಸಿದ್ಧಾಂತ ಮತ್ತು ಆಯ್ಕೆಗಳ ಉದಾಹರಣೆಗಳ ಜೊತೆಗೆ ಅವನ ಜೀವನ". ಎರಡು ಸಂಪುಟಗಳು. (ಲಂಡನ್ ) 1902.
 • ಎಡ್ವರ್ಡ್ ಜೆನ್ನೆರ್, ವ್ಯಕ್ತಿ ಮತ್ತು ಅವನ ಕಾರ್ಯ. ಬಿಎಮ್‌ಜೆ 1949 ಇ ಅಶ್ವೋರ್ತ್ ಅಂಡರ್‌ವುಡ್
 • ಫಿಷರ್, ರಿಚರ್ಡ್ ಬಿ., "ಎಡ್ವರ್ಡ್ ಜೆನ್ನೆರ್ 1749-1823," ಆಂಡ್ರೆ ಡೊಯೆಚ್, ಲಂಡನ್, 1991.
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Gross CP, Sepkowitz KA (1998). "The myth of the medical breakthrough: smallpox, vaccination, and Jenner reconsidered". International Journal of Infectious Diseases. 3 (1): 54–60. doi:10.1016/S1201-9712(98)90096-0. PMID 9831677. 
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Theves G (1997). "Smallpox: an historical review" [Smallpox: an historical review]. Bulletin De La Société Des Sciences Médicales Du Grand-Duché De Luxembourg (in German). 134 (1): 31–51. PMID 9303824. 
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Kumate-Rodríguez J (1996). "Bicentennial of smallpox vaccine: experiences and lessons" [Bicentennial of smallpox vaccine: experiences and lessons]. Salud Pública De México (in Spanish). 38 (5): 379–85. PMID 9092091. 
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Baxby D (1996). "Jenner and the control of smallpox". Transactions of the Medical Society of London. 113: 18–22. PMID 10326082. 
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Hammarsten JF, Tattersall W, Hammarsten JE (1979). "Who discovered smallpox vaccination? Edward Jenner or Benjamin Jesty?". Transactions of the American Clinical and Climatological Association. 90: 44–55. PMC 2279376Freely accessible. PMID 390826. 
 • Rodrigues BA (1975). "Smallpox eradication in the Americas". Bulletin of the Pan American Health Organization. 9 (1): 53–68. PMID 167890. 
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Voigt K (1964). "THE PHARMACY DISPLAY WINDOW. EDWARD JENNER DISCOVERED SMALLPOX VACCINATION." [The Pharmacy Display Window. Edward Jenner Discovered Smallpox Vaccination]. Pharmazeutische Praxis (in German). 106: 88–9. PMID 14237138. 
 • ಸಿಡುಬು ರೋಗಕ್ಕೆ ಉಲ್ಲೇಖವನ್ನು ನೀಡುತ್ತಿರುವ ಆರ್ಡನ್ಸ್ ಸರ್ವೇಯ ಅವಲೋಕನ: http://explore.ordnancesurvey.co.uk/os_routes/show/1539
 • 1970 ಡೇವಿಸ್ ಜೆಡಬ್ಲು. ಕೆನಡಾದ ಮೊದಲ ಚುಚ್ಚುಮದ್ದುಗಾರ ರೆವೆರೆಂಡ್ ಜಾನ್ ಕ್ಲಿಂಚ್ ಬಗೆಗಿನ ಒಂಸು ಐತಿಹಾಸಿಕ ವರದಿ. ಸಿಎಮ್‌ಎಜೆ 1970;102:957-61.
 • 1970 ರಾಬರ್ಟ್ಸ್ ಕೆಬಿ. ಸಿಡುಬು: ಒಂದು ಐತಿಹಾಸಿಕ ರೋಗ. ನ್ಯೂಫೌಂಡ್‌ಲ್ಯಾಂಡ್ ಒಕಾಸ್ ಸ್ಮಾರಕ ವಿಶ್ವವಿದ್ಯಾಲಯದ ವರದಿಗಳು Med Hist 1978;1:31-9.
 • 1951 ಲಿಫಾನು ಡಬ್ಲುಆರ್. ಎಡ್ವರ್ಡ್ ಜೆನ್ನೆರ್‌ನ ಒಂದು ಜೈವಿಕ-ಗ್ರಂಥಗಳ ವಿವರಣೆ ಪಟ್ಟಿ, 1749–1823. ಲಂಡನ್ (ಯುಕೆ): ಹಾರ್ವೆ ಮತ್ತು ಬ್ಲೈಥ್; 1951. ಪುಟ 103-8.

ಬಾಹ್ಯ ಕೊಂಡಿಗಳು[ಬದಲಾಯಿಸಿ]