ವಿಷಯಕ್ಕೆ ಹೋಗು

ಎಡ್ಮೇ ಮ್ಯಾರಿಯಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಡ್ಮೇ ಮ್ಯಾರಿಯಾಟ್

ಎಡ್ಮೇ ಮ್ಯಾರಿಯಾಟ್ (1620-84) ಒಬ್ಬ ಫ್ರೆಂಚ್ ಭೌತವಿಜ್ಞಾನಿ. ಪ್ರಾಯೋಗಿಕ ಭೌತವಿಜ್ಞಾನದ ಪ್ರವರ್ತಕರ ಪೈಕಿ ಒಬ್ಬ.

ಜೀವನ, ಕೊಡುಗೆಗಳು[ಬದಲಾಯಿಸಿ]

ಬರ್ಗಂಡಿಯ ಡೈಜೋನ್‌ನಲ್ಲಿ ಜನನ. ಅಲ್ಲಿಯೇ ಹೆಚ್ಚು ಕಾಲ ಕಳೆದ ಈತ ಅಲ್ಲಿಯ ಸೇಂಟ್ - ಮಾರ್ಟಿನ್ - ಸೂ - ಬೌನ್ ನ ಮಠಾಧಿಪತಿ ಆಗಿದ್ದ.[೧] ಪ್ಯಾರಿಸ್‌ನಲ್ಲಿ 1966 ರಲ್ಲಿ ಸ್ಥಾಪನೆಯಾದ ವಿಜ್ಞಾನ ಅಕಾಡೆಮಿಯ ಪ್ರಥಮ ಸದಸ್ಯರ ಪೈಕಿ ಈತನೂ ಒಬ್ಬ. ಭೌತವಿಜ್ಞಾನದಲ್ಲಿ ಅವಲೋಕನ ಮತ್ತು ಸಂಶಯಗಳ ಸತ್ತ್ವವನ್ನು ಪ್ರಥಮವಾಗಿ ಜಾರಿಗೆ ತಂದವ. ಅನಿಲಗಳಿಗೆ ಸಂಬಂಧಿಸಿದಂತೆ ಬ್ರಿಟಿಷ್ ವಿಜ್ಞಾನಿ ರಾಬರ್ಟ್ ಬಾಯ್ಲ್ (1627-91) ಆವಿಷ್ಕರಿಸಿದ ನಿಯಮವನ್ನು ಮ್ಯಾರಿಯಾಟ್ ಸ್ವತಂತ್ರವಾಗಿ ಆವಿಷ್ಕರಿಸಿದ. ಫ್ರಾನ್ಸಿನಲ್ಲಿ ಈ ನಿಯಮಕ್ಕೆ ಮ್ಯಾರಿಯಾಟ್ ನಿಯಮ ಎಂದೇ ಹೆಸರಿತ್ತು. ತರಲಗಳ ಚಲನೆ, ವಸ್ತುಗಳ ಬೀಳುವಿಕೆ, ಬಂದೂಕದ ಹಿನ್ನೆಗೆತ, ಬಣ್ಣದ ಸ್ವಭಾವ, ತುತ್ತೂರಿಯ ಸ್ವರ, ವಾಯುಭಾರಮಾಪಕ, ನೀರಿನ ಹೆಪ್ಪುಗಟ್ಟುವಿಕೆ ಮುಂತಾದ ಅನೇಕ ಭೌತವಿದ್ಯಮಾನಗಳನ್ನು ಕುರಿತಂತೆ ಮ್ಯಾರಿಯಾಟ್ ಪ್ರೌಢಪ್ರಬಂಧಗಳನ್ನು ಬರೆದ. ಇವೆಲ್ಲ ಅಕಾಡೆಮಿಯ ಅನುಭವಗಳು ಮತ್ತು ಇತಿಹಾಸ ಎಂಬ ಅರ್ಥಬರುವ ಹೆಸರಿನ ಗ್ರಂಥದ (1733) ಮೊದಲ ಭಾಗದಲ್ಲಿವೆ. ಭೌತವಿಜ್ಞಾನವನ್ನು ಕುರಿತ ಇವನ ನಾಲ್ಕು ಪ್ರಬಂಧಗಳ ಪೈಕಿ ಮೊದಲನೆಯ ಮೂರು ಪ್ಯಾರಿಸ್ಸಿನಲ್ಲಿ (1676-79) ಪ್ರಕಟವಾದವು. ಇವನ ಮುಖ್ಯ ಸಂಶೋಧನೆಗಳಿಗೆ ಸಂಬಂಧಿಸಿದ ವಿಷಯಗಳು ಅವುಗಳಲ್ಲಿವೆ. ಇವು ಮತ್ತು ಭೌತದ್ರವ್ಯಗಳ ಆಘಾತಗಳು ಎಂಬ ಪ್ರಬಂಧ ಮ್ಯಾರಿಯಾಟ್‌ನ ಪ್ರಬಂಧಗಳು ಎಂಬ ಅರ್ಥಬರುವ ಹೆಸರಿನ ಗ್ರಂಥದ ಮೊದಲ ಭಾಗದಲ್ಲಿ ಇವೆ. ಇದರ ಎರಡನೆಯ ಪ್ರಬಂಧ ಅನಿಲಗಳ ಸ್ವಭಾವಕ್ಕೆ ಸಂಬಂಧಿಸಿದ್ದು. ಇದರಲ್ಲಿ ಈತ ಸ್ವತಂತ್ರವಾಗಿ ಆವಿಷ್ಕರಿಸಿದ ಬಾಯ್ಲ್ ನಿಯಮದ ನಿರೂಪಣೆ ಇದೆ.[೨][೩]

ನಿಧನ[ಬದಲಾಯಿಸಿ]

ಮ್ಯಾರಿಯಾಟ್ 1684 ಮೇ 12 ರಂದು 64 ನೆಯ ವಯಸ್ಸಿನ ಪ್ಯಾರಿಸ್ಸಿನಲ್ಲಿ ನಿಧನನಾದ.[೪]

ಉಲ್ಲೇಖಗಳು[ಬದಲಾಯಿಸಿ]

  1.  Herbermann, Charles, ed. (1913). "Edme Mariotte" . Catholic Encyclopedia. New York: Robert Appleton Company. {{cite encyclopedia}}: Cite has empty unknown parameters: |HIDE_PARAMETER4=, |HIDE_PARAMETER2=, |HIDE_PARAMETERq=, |HIDE_PARAMETER20=, |HIDE_PARAMETER5=, |HIDE_PARAMETER8=, |HIDE_PARAMETER7=, |HIDE_PARAMETER6=, |HIDE_PARAMETER9=, |HIDE_PARAMETER1=, and |HIDE_PARAMETER3= (help)
  2. See: Mariotte, Essais de Physique, ou mémoires pour servir à la science des choses naturelles, (Paris, France: E. Michallet, 1679); "Second essai. De la nature de l'air". (Mariotte, Edmé), Oeuvres de Mr. Mariotte, de l'Académie royale des sciences; … , vol. 1 (Leiden, Netherlands: P. Vander Aa, 1717); see especially pp. 151-153. In his experiments, Mariotte (like Robert Boyle) used a mercury barometer. Mariotte took a long glass tube that was sealed at one end and partially filled it with mercury. He recorded the initial volume of air in the tube; the air was at a pressure of 28 inches of mercury (standard atmospheric pressure). He then pressed his finger over the open end of the tube and inverted the tube, immersing its open end in a vat of mercury. The level of mercury in the tube would then fall and the air inside the tube would expand. On p. 152, Mariotte stated his "law of nature" concerning the behavior of air in mercury barometers: " … & je trouvai toujours, qu'après l'expérience faite, la proportion de l'air dilaté, à l'étenduë de celui qu'on avoit laissé au haut du mercure avant l'expérience, étoit la même que celle de vingt-huit pouces de mercure, qui est le poids entier de l'Atmosphére, à l'exces de vingt-huit pouces par dessus la hauteur où il demeuroit après l'expérience: ce qui fait connoître suffisamment, qu'on peut prendre pour une régle certaine ou loi de la nature, que l'air se condense à proportion des poids dont il est chargé." ( … and I always found, that after the experiment [had been] done, the proportion of the [volume of] expanded air to the extent [i.e., volume] of that which had been left at the top of the mercury before the experiment, was the same as that of 28 inches of mercury [i.e., standard atmospheric pressure], which is the weight of the entire atmosphere, to the excess of 28 inches above the height where it remained after the experiment [i.e., the pressure of the air after it had expanded, was 28 inches of mercury (atmospheric pressure) minus the height of the mercury in the barometer after the air had expanded]: which made it sufficiently known, that one can take as a sure rule or law of nature, that air condenses in proportion to the weight with which it is loaded.) In other words, the ratio of the volume (V2) of the air in the mercury barometer after the experiment to the volume (V1) of the air in the barometer before the experiment was always the same as the ratio of the (atmospheric) pressure (p1) of the air in the barometer before the experiment to the pressure (p2) of the air in the barometer after the experiment. So V2 / V1 = p1 / p2 or p1 V1 = p2 V2 .
  3. Partial translation in Magie, W.M. (1935). "Marriotte: Relations of pressure and volume of air." A Source Book in Physics. Cambridge: Harvard UP, pp 88–92.
  4. "Mariotte, Edme". The Galileo Project. Retrieved 26 September 2021.{{cite web}}: CS1 maint: url-status (link)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: