ಋಣಭಾರ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (January 2009) |
Personal Finance |
---|
Credit and debt |
Employment contract |
Retirement |
Personal budget |
See also |
ಋಣಭಾರ ಎಂಬುದು ಯಾವುದು ತೀರಿಸಬೇಕಾಗಿರುವುದು ಎನಿಸಿಕೊಂಡಿರುತ್ತದೋ ಅದಕ್ಕೆ ಸಂಬಂಧಿಸಿರುತ್ತದೆ; ಸಾಮಾನ್ಯವಾಗಿ ಇದು ತೀರಿಸಬೇಕಾಗಿರುವ ಆಸ್ತಿಪಾಸ್ತಿಗಳಿಗೆ ಉಲ್ಲೇಖಿಸಲ್ಪಡುತ್ತದೆಯಾದರೂ, ನೈತಿಕ ಕೃತಜ್ಞತೆಯ ಭಾರಗಳು ಹಾಗೂ ಹಣದ ಅಗತ್ಯವಿರದ ಇತರ ಪಾರಸ್ಪರಿಕ ಕ್ರಿಯೆಯನ್ನೂ ಈ ಪದವು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಬಲ್ಲದು. ಆಸ್ತಿಪಾಸ್ತಿಗಳ ಸಂದರ್ಭಗಳಲ್ಲಿ ಹೇಳುವುದಾದರೆ, ಋಣಭಾರ ಎಂಬುದು ಒಂದು ಕೂಡುವಿಕೆಯು ಅಥವಾ ಫಲಿತವು ಗಳಿಸಲ್ಪಡುವುದಕ್ಕೆ ಮುಂಚಿತವಾಗಿ ಭವಿಷ್ಯದ ಖರೀದಿಸುವ ಶಕ್ತಿಯನ್ನು ವರ್ತಮಾನದಲ್ಲಿ ಬಳಸುವ ಒಂದು ವಿಧಾನವಾಗಿದೆ. ಕೆಲವೊಂದು ಕಂಪನಿಗಳು ಮತ್ತು ಸಂಸ್ಥೆಗಳು ಋಣಭಾರವನ್ನು ತಮ್ಮ ಒಟ್ಟಾರೆ ಸಾಂಸ್ಥಿಕ ಹಣಕಾಸು ವ್ಯವಹಾರ ಕೌಶಲದ ಒಂದು ಭಾಗವಾಗಿ ಬಳಸುತ್ತವೆ.[ಸಾಕ್ಷ್ಯಾಧಾರ ಬೇಕಾಗಿದೆ] ಓರ್ವ ಸಾಲದಾತನು ಓರ್ವ ಸಾಲಗ್ರಾಹಿಗೆ ಆಸ್ತಿಪಾಸ್ತಿಗಳ ಒಂದು ಮೊತ್ತವನ್ನು ಸಾಲವಾಗಿ ಕೊಡಲು ಒಪ್ಪಿದಾಗ ಒಂದು ಋಣಭಾರವು ಸೃಷ್ಟಿಯಾಗುತ್ತದೆ. ಆಧುನಿಕ ಸಮಾಜದಲ್ಲಿ, ಋಣಭಾರವು ಸಾಮಾನ್ಯವಾಗಿ ಮರುಪಾವತಿಸಲ್ಪಡುವ ನಿರೀಕ್ಷೆಯೊಂದಿಗೆ ನೀಡಲ್ಪಡುತ್ತದೆ; ಬಹುತೇಕ ನಿದರ್ಶನಗಳಲ್ಲಿ ಇದರ ಜೊತೆಗೆ ಬಡ್ಡಿಯೂ ಸೇರಿರುತ್ತದೆ. ಐತಿಹಾಸಿಕವಾಗಿ ಹೇಳುವುದಾದರೆ, ಕರಾರಿಗೆ ಒಳಪಟ್ಟ ಸೇವಕರ ಸೃಷ್ಟಿಗೆ ಸಂಬಂಧಿಸಿದಂತೆ ಋಣಭಾರವು ಪ್ರಮುಖ ಕಾರಣವಾಗಿತ್ತು.
ವ್ಯುತ್ಪತ್ತಿ
[ಬದಲಾಯಿಸಿ]ಋಣಭಾರದ ಆಂಗ್ಲರೂಪವಾದ ಡೆಟ್ (Debt) ಎಂಬ ಪದವು ಫ್ರೆಂಚ್ ಪದವಾದ ಡೆಟ್ಟೆ ಎಂಬುದರಿಂದ ಮತ್ತು ಡಿ ಹಬೆರೆ (ಹೊಂದುವುದು) ಎಂಬುದರಿಂದ ಬಂದಿರುವ ಲ್ಯಾಟಿನ್‌ನ ಡೆಬೆರೆ ಎಂಬ ಪದದಿಂದ ಅಂತಿಮವಾಗಿ (ಸಲ್ಲಿಸಬೇಕಾಗಿರುವುದು) ಬಂದಿದೆ. Debt ಪದದಲ್ಲಿನ b ಅಕ್ಷರವು 17ನೇ ಶತಮಾನದಲ್ಲಿ ಪ್ರಾಯಶಃ ಸ್ಯಾಮ್ಯುಯೆಲ್ ಜಾನ್ಸನ್‌ನಿಂದ ಅವನ 1755ರ ಶಬ್ದಕೋಶದಲ್ಲಿ ಮರು-ಪರಿಚಯಿಸಲ್ಪಟ್ಟಿತು- ಒಂದು b ಅಕ್ಷರವಿಲ್ಲದೆಯೇ ಅಸ್ತಿತ್ವದಲ್ಲಿದ್ದ ಇತರ ಹಲವಾರು ಪದಗಳು ಸರಿಸುಮಾರು ಅದೇ ಸಮಯದಲ್ಲಿ ಅವನ್ನು ಪುನಃ ಒಳ-ಸೇರಿಸಿಕೊಂಡವು.
ಪಾವತಿ
[ಬದಲಾಯಿಸಿ]ಒಂದು ಋಣಭಾರವು ನೆರವೇರುವುದಕ್ಕೆ ಮುಂಚಿತವಾಗಿ, ಸಾಲಗ್ರಾಹಿ ಹಾಗೂ ಸಾಲದಾತರಿಬ್ಬರೂ ಸಹ ಋಣಭಾರವು ಮರುಪಾವತಿಸಲ್ಪಡುವ ವಿಧಾನದ ಕುರಿತಾಗಿ ತಮ್ಮ ಸಮ್ಮತಿಯನ್ನು ವ್ಯಕ್ತಪಡಿಸಬೇಕು. ಇದಕ್ಕೆ ಮುಂದೂಡಿದ ಪಾವತಿಯ ಮಾನದಂಡ ಎಂದು ಕರೆಯಲಾಗುತ್ತದೆ. ಈ ಪಾವತಿಯು ಸಾಮಾನ್ಯವಾಗಿ ಚಲಾವಣಾ ನಾಣ್ಯದ ಏಕಮಾನಗಳಲ್ಲಿನ ಹಣದ ಒಂದು ಮೊತ್ತ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆಯಾದರೂ, ಕೆಲವೊಮ್ಮೆ ಸರಕುಗಳ ಪರಿಭಾಷೆಯಲ್ಲಿನ ಹೆಸರಿನಿಂದಲೂ ಕರೆಯಲ್ಪಡುತ್ತದೆ. ಸಮಯದ ಒಂದು ಅವಧಿಯ ನಂತರ ಪಾವತಿಯನ್ನು ಹೆಚ್ಚಳಗಳಲ್ಲಿ ಮಾಡಬಹುದು, ಅಥವಾ ಸಾಲ ಒಪ್ಪಂದದ ಅಂತ್ಯದ ವೇಳೆಗೆ ಒಂದೇ ಬಾರಿಗೆ ಮಾಡಬಹುದು.
ಋಣಭಾರದ ಬಗೆಗಳು
[ಬದಲಾಯಿಸಿ]ಕಂಪನಿಯೊಂದು ತನ್ನ ಕಾರ್ಯಾಚರಣೆಗಳಿಗೆ ಹಣವೊದಗಿಸುವ ದೃಷ್ಟಿಯಿಂದ ವಿಭಿನ್ನ ಬಗೆಗಳ ಋಣಭಾರವನ್ನು ಬಳಕೆಮಾಡಿಕೊಳ್ಳುತ್ತದೆ. ಋಣಭಾರದ ವಿಭಿನ್ನ ಬಗೆಗಳನ್ನು ಈ ರೀತಿಯಾಗಿ ಸಾರ್ವತ್ರಿಕವಾಗಿ ವರ್ಗೀಕರಿಸಬಹುದು: 1) ಆಧಾರದೊಂದಿಗಿನ ಮತ್ತು ಆಧಾರವಿಲ್ಲದ ಋಣಭಾರ, 2) ಖಾಸಗಿ ಮತ್ತು ಸಾರ್ವಜನಿಕ ಋಣಭಾರ, 3) ಸಂಘಟಿಸಲ್ಪಟ್ಟ ಮತ್ತು ಉಭಯ ಪಕ್ಷೀಯ ಋಣಭಾರ, ಹಾಗೂ 4) ಮೇಲೆ ಉಲ್ಲೇಖಿಸಿರುವ ಲಕ್ಷಣಗಳ ಪೈಕಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಲಕ್ಷಣಗಳನ್ನು ಪ್ರದರ್ಶಿಸುವ ಋಣಭಾರದ ಇತರ ಬಗೆಗಳು.[೧] ಒಂದು ವೇಳೆ ಒಂದು ಒಡೆತನದ ಆಧಾರದ ಮೇಲೆ ಕಂಪನಿಯ ಆಸ್ತಿಪಾಸ್ತಿಗಳನ್ನು ಸಾಲದಾತರು ಆಸರೆಯ ಸಾಧನವನ್ನಾಗಿ ಅವಲಂಬಿಸಿದ್ದರೆ ಅಥವಾ ಅನ್ಯಥಾ ಕಂಪನಿಗೆ ಪ್ರತಿಯಾಗಿ ಸಾರ್ವತ್ರಿಕ ಹಕ್ಕು ಸಮರ್ಥನೆಗಳನ್ನು ಮೀರಿಸಿದ್ದರೆ, ಅಂಥ ಋಣಭಾರದ ಕಟ್ಟುಪಾಡು ಆಧಾರದೊಂದಿಗಿನದು ಎಂದು ಪರಿಗಣಿಸಲ್ಪಡುತ್ತದೆ. ಆಧಾರವಿಲ್ಲದ ಋಣಭಾರವು ಹಣಕಾಸಿನ ಕೃತಜ್ಞತೆಯ ಭಾರಗಳನ್ನು ಒಳಗೊಂಡಿದ್ದು, ಇಲ್ಲಿ ಸಾಲದಾತರು ತಮ್ಮ ಹಕ್ಕು ಸಮರ್ಥನೆಗಳನ್ನು ಈಡೇರಿಸುವುದಕ್ಕಾಗಿ ಎರವಲುಗಾರನ ಆಸ್ತಿಪಾಸ್ತಿಗಳನ್ನು ಆಸರೆಯ ಸಾಧನವನ್ನಾಗಿ ಅವಲಂಬಿಸಿರುವುದಿಲ್ಲ. ಖಾಸಗಿ ಋಣಭಾರವು ಬ್ಯಾಂಕ್-ಸಾಲದ ಬಗೆಯ ಕೃತಜ್ಞತೆಯ ಭಾರಗಳನ್ನು ಒಳಗೊಂಡಿದ್ದು, ಅದು ಮೇಲಂತಸ್ತಿನದು ಅಥವಾ ಮಧ್ಯದಂತಸ್ತಿನದು ಆಗಬಹುದಾಗಿರುತ್ತದೆ. ಸಾರ್ವಜನಿಕ ಋಣಭಾರವು ಒಂದು ಸಾರ್ವತ್ರಿಕ ವ್ಯಾಖ್ಯಾನವಾಗಿದ್ದು ಎಲ್ಲಾ ಹಣಕಾಸಿನ ಸಾಧನಗಳನ್ನೂ ಒಳಗೊಂಡಿರುತ್ತದೆ. ಈ ಹಣಕಾಸಿನ ಸಾಧನಗಳು ಒಂದು ಸಾರ್ವಜನಿಕ ವಿನಿಮಯ ಕೇಂದ್ರದಲ್ಲಿ ಅಥವಾ ಪ್ರತ್ಯಕ್ಷ ಮಾರಾಟದಲ್ಲಿ ಮುಕ್ತವಾಗಿ ಮಾರಾಟ ಮಾಡಬಲ್ಲ ಸಾಧನಗಳಾಗಿದ್ದು, ಒಂದು ವೇಳೆ ಅದಕ್ಕೆ ಕಟ್ಟುಪಾಡುಗಳೇನಾದರೂ ಇದ್ದಲ್ಲಿ ಅದು ಅಲ್ಪ ಪ್ರಮಾಣದಲ್ಲಿರುತ್ತದೆ. ಸಾಲ ಸಿಂಡಿಕೇಟುಗಳ ರಚನೆ ಎಂಬುದು ಒಂದು ಅಪಾಯ ನಿರ್ವಹಣಾ ಸಾಧನವಾಗಿದ್ದು, ಋಣಭಾರದ ಹೊಣೆಹೊತ್ತು ಬರೆದುಕೊಡುವಿಕೆಯನ್ನು ಮಾಡುತ್ತಿರುವ ಅಗ್ರಗಣ್ಯ ಬ್ಯಾಂಕುಗಳು ತಮ್ಮ ಅಪಾಯವನ್ನು ತಗ್ಗಿಸಿಕೊಳ್ಳುವಲ್ಲಿ ಹಾಗೂ ಸಾಲಕೊಡುವಿಕೆ ಸಾಮರ್ಥ್ಯವನ್ನು ಮುಕ್ತಗೊಳಿಸಿಕೊಳ್ಳುವಲ್ಲಿ ಅವುಗಳಿಗೆ ಅನುವು ಮಾಡಿಕೊಡುತ್ತದೆ. ಒಂದು ಮೂಲಭೂತ ಸಾಲವು ಋಣಭಾರದ ಅತ್ಯಂತ ಸರಳವಾದ ಸ್ವರೂಪವಾಗಿದೆ. ಸಮಯದ ಒಂದು ನಿಶ್ಚಿತ ಅವಧಿಗೆ ಸಂಬಂಧಿಸಿರುವ, ಒಂದು ನಿರ್ದಿಷ್ಟ ದಿನಾಂಕದೊಳಗಾಗಿ ಮರುಪಾವತಿಸಲ್ಪಡಬೇಕಾದ ಮೂಲಧನದ ಮೊತ್ತವೊಂದನ್ನು ಸಾಲವಾಗಿ ನೀಡುವುದರ ಒಂದು ಒಡಂಬಡಿಕೆಯನ್ನು ಇದು ಒಳಗೊಂಡಿರುತ್ತದೆ. ವಾಣಿಜ್ಯ ಸಾಲಗಳಲ್ಲಿ, ಪ್ರತಿ ವರ್ಷಕ್ಕೆ ಮೂಲಧನದ ಮೊತ್ತದ ಒಂದು ಶೇಕಡಾವಾರು ಪ್ರಮಾಣವಾಗಿ ಲೆಕ್ಕಹಾಕಲ್ಪಡುವ ಬಡ್ಡಿಯು ಕೂಡಾ ಆ ದಿನಾಂಕದೊಳಗೇ ಪಾವತಿಸಲ್ಪಡಬೇಕಾಗುತ್ತದೆ.
ಕೆಲವೊಂದು ಸಾಲಗಳಲ್ಲಿ, ಸಾಲಗ್ರಾಹಿಗೆ ವಾಸ್ತವವಾಗಿ ನೀಡಲ್ಪಟ್ಟ ಮೊತ್ತವು ಮರುಪಾವತಿಸಲ್ಪಡಬೇಕಾದ ಮೂಲಧನದ ಮೊತ್ತಕ್ಕಿಂತ ಕಡಿಮೆಯಿರುತ್ತದೆ; ಒಂದು ಹೆಚ್ಚಿನಮಟ್ಟದ ಬಡ್ಡಿ ದರದ [ನೋಡಿ: ಪ್ರಧಾನಾಂಶ (ಅಡಮಾನ)] ರೀತಿಯಲ್ಲಿಯೇ ಹೆಚ್ಚುವರಿ ಮೂಲಧನವು ಅದೇ ಆರ್ಥಿಕ ಪರಿಣಾಮವನ್ನು ಹೊಂದಿರುತ್ತದೆ, ಮತ್ತು ಅದು ಕೆಲವೊಮ್ಮೆ "ಬೇಕರ್‌ನ ಡಜನ್" ಮೇಲಿನ ಒಂದು ಆಟವಾದ ಬ್ಯಾಂಕರ್‌ನ ಡಜನ್ ಎಂದು ಉಲ್ಲೇಖಿಸಲ್ಪಡುತ್ತದೆ- ಸಲ್ಲಿಸಬೇಕಾಗಿರುವುದು ಹನ್ನೆರಡನ್ನು (ಒಂದು ಡಜನ್), ಸ್ವೀಕರಿಸುವುದು ಹನ್ನೊಂದರ ಒಂದು ಸಾಲವನ್ನು (ಒಂದು ಬ್ಯಾಂಕರ್‌ನ ಡಜನ್) ಎಂಬುದು ಇದರ ಹಿಂದಿರುವ ವಿಶೇಷತೆ. ಜಾರಿಗೆ ಬರುವ ಬಡ್ಡಿದರವು ಹುಂಡಿವಟ್ಟಕ್ಕೆ ಸಮನಾಗಿರುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅಗತ್ಯ: ಒಂದು ವೇಳೆ ಒಬ್ಬನು 10$ ಹಣವನ್ನು ಎರವಲು ತೆಗೆದುಕೊಳ್ಳುತ್ತಾನೆ ಮತ್ತು ಅವನು 11$ ಹಣವನ್ನು ಮರುಪಾವತಿಸಬೇಕಿರುತ್ತದೆ ಎಂದಾದಲ್ಲಿ, ಆಗ ಇದು (11$–10$)/10$ = 10% ಬಡ್ಡಿಯಾಗುತ್ತದೆ; ಆದಾಗ್ಯೂ, ಒಂದು ವೇಳೆ ಒಬ್ಬನು 9$ ಹಣವನ್ನು ಎರವಲು ತೆಗೆದುಕೊಳ್ಳುತ್ತಾನೆ ಮತ್ತು ಅವನು 10$ ಹಣವನ್ನು ಮರುಪಾವತಿಸಬೇಕಾಗುತ್ತದೆ ಎಂದಾದಲ್ಲಿ, ಆಗ ಇದು (10$–9$)/9$ = 11 1/9 % ಬಡ್ಡಿಯಾಗುತ್ತದೆ.[೨]. ಒಂದು ಸಂಘಟಿಸಲ್ಪಟ್ಟ ಸಾಲವು, ಯಾವುದೇ ಏಕ ಸಾಲದಾತನು ಅಪಾಯಕ್ಕೆ ಸಿದ್ಧನಾಗಿ ಒಂದು ಏಕ ಸಾಲದಲ್ಲಿ ನೀಡುವ ಹಣಕ್ಕಿಂತ ಹೆಚ್ಚು ಹಣವನ್ನು ಎರವಲು ತೆಗೆದುಕೊಳ್ಳಲು ಬಯಸುವ ಕಂಪನಿಗಳಿಗೆ ನೀಡಲಾದ ಒಂದು ಸಾಲವಾಗಿದ್ದು, ಇದು ಸಾಮಾನ್ಯವಾಗಿ ಅನೇಕ ದಶಲಕ್ಷ ಡಾಲರುಗಳಷ್ಟಿರುತ್ತದೆ. ಇಂಥದೊಂದು ಸಂದರ್ಭದಲ್ಲಿ, ಬ್ಯಾಂಕುಗಳ ಒಂದು ಒಕ್ಕೂಟವು ಮೂಲಧನದ ಮೊತ್ತದ ಒಂದು ಭಾಗವನ್ನು ಮುಂದಿಡಲು ಪ್ರತಿಯೊಂದೂ ಸಮ್ಮತಿಸಬಹುದು. ಬಾಂಡು ಎಂಬುದು ಕಂಪನಿಗಳು ಮತ್ತು ಸರ್ಕಾರಗಳಂಥ ನಿರ್ದಿಷ್ಟ ಸಂಸ್ಥೆಗಳಿಂದ ನೀಡಲ್ಪಡುವ ಒಂದು ಋಣಭಾರದ ಭದ್ರತೆಯಾಗಿದೆ. ಮೂಲಧನದ ಮೊತ್ತಕ್ಕೆ ಬಡ್ಡಿಯನ್ನು ಸೇರಿಸಿ ಮರುಪಾವತಿ ಮಾಡುವಲ್ಲಿ ಒಂದು ಬಾಂಡು ಹಿಡುವಳಿದಾರನಿಗೆ ಅರ್ಹತೆಯನ್ನು ನೀಡುತ್ತದೆ. ಸಂಸ್ಥೆಯೊಂದು ಹಣವನ್ನು ಎರವಲು ತೆಗೆದುಕೊಳ್ಳಲು ಬಯಸಿದಾಗ, ಮಾರುಕಟ್ಟೆ ಸ್ಥಳವೊಂದರಲ್ಲಿ ಬಾಂಡುಗಳು ಹೂಡಿಕೆದಾರರಿಗೆ ನೀಡಲ್ಪಡುತ್ತವೆ. ಬಾಂಡುಗಳು ಒಂದು ನಿಶ್ಚಿತ ಜೀವಿತಾವಧಿಯನ್ನು ಹೊಂದಿದ್ದು, ಅದು ಸಾಮಾನ್ಯವಾಗಿ ಅನೇಕ ವರ್ಷಗಳ ರೂಪದಲ್ಲಿರುತ್ತದೆ; 30 ವರ್ಷಗಳವರೆಗೆ ಬಾಳಿಕೆ ಬರುವ ಅಥವಾ ಅವಧಿಯನ್ನು ಹೊಂದಿರುವ ದೀರ್ಘಾವಧಿ ಬಾಂಡುಗಳು, ಕಡಿಮೆ ಸಾಮಾನ್ಯದವಾಗಿವೆ. ಬಾಂಡುಗಳ ಜೀವಿತಾವಧಿಯ ಅಂತ್ಯದ ವೇಳೆಗೆ ಹಣವನ್ನು ಸಂಪೂರ್ಣವಾಗಿ ಮರುಪಾವತಿಸಬೇಕಾಗುತ್ತದೆ. ಬಾಂಡಿನ ಜೀವಿತಾವಧಿಯ ಸಮಯದಲ್ಲಿ, ಅಂತ್ಯದ ಪಾವತಿಗೆ ಬಡ್ಡಿಯನ್ನು ಸೇರಿಸಬಹುದು, ಅಥವಾ ಕ್ರಮಬದ್ಧವಾದ ಕಂತುಗಳಲ್ಲಿ (ಇದಕ್ಕೆ ಕೂಪನ್ನುಗಳು ಎಂದು ಹೆಸರು) ಅದನ್ನು ಪಾವತಿಸಲು ಸಾಧ್ಯವಿದೆ. ಬಾಂಡುಗಳನ್ನು ಬಾಂಡು ಮಾರುಕಟ್ಟೆಗಳಲ್ಲಿ ಮಾರಾಟಮಾಡಬಹುದು, ಮತ್ತು ಇಕ್ವಿಟಿಗೆ ಹೋಲಿಕೆಯಾಗಿ ಬಾಂಡುಗಳನ್ನು ತುಲನಾತ್ಮಕವಾದ ಸುರಕ್ಷಿತ ಹೂಡಿಕೆಗಳಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.
ಋಣಭಾರ ಸಿಂಡಿಕೇಟುಗಳ ರಚನೆ
[ಬದಲಾಯಿಸಿ]ನಿಧಿಯ ಮೂಲ
[ಬದಲಾಯಿಸಿ]ನಗದು ಸಾಲ ವ್ಯಾಪಾರ ಸರಕುಗಳು ಮತ್ತು ಋಣಭಾರದ ಭದ್ರತೆಗೆ ಪ್ರತಿಯಾಗಿ ಬ್ಯಾಂಕುಗಳು ಹಣವನ್ನು ಸಾಲಕೊಡುವಲ್ಲಿನ ಪ್ರಧಾನ ವಿಧಾನ ಇದಾಗಿದೆ.
ಈ ಖಾತೆಯಿಂದ ಹಿಂತೆಗೆದುಕೊಳ್ಳಬಹುದಾದ ಹಣವು, ಖಾತೆಯಲ್ಲಿ ಠೇವಣಿ ಇರಿಸಲಾದ ಮೊತ್ತಕ್ಕೆ ಸಂಬಂಧಿಸಿದಂತೆ ಮಿತಿಗೊಳಪಡಿಸಿರುವುದಿಲ್ಲ ಎಂಬ ಅಂಶವನ್ನು ಹೊರತುಪಡಿಸಿದರೆ, ಇದು ಒಂದು ಚಾಲ್ತಿ ಖಾತೆಯಂತೆ ನಿರ್ವಹಿಸಲ್ಪಡುತ್ತದೆ. ಅದರ ಬದಲಿಗೆ, "ಮಿತಿ" ಎಂದು ಕರೆಯಲಾಗುವ ಒಂದು ನಿರ್ದಿಷ್ಟ ಮೊತ್ತವನ್ನು ಹಿಂತೆಗೆದುಕೊಳ್ಳಲು ಖಾತೆಯ ಹಿಡುವಳಿದಾರನಿಗೆ ಅವಕಾಶವಿರುತ್ತದೆ.
ಸದರಿ "ಮಿತಿ" ಎಂಬುದು ಖಾತೆಯಲ್ಲಿ ಇರಿಸಲಾಗಿರುವ ಠೇವಣಿ ಮೊತ್ತವನ್ನು ಮೀರಿ ನೀಡಲಾಗುವ "ಸಾಲ ಸೌಲಭ್ಯ"ವಾಗಿರುತ್ತದೆ. ತಾತ್ತ್ವಿಕವಾಗಿ ಹೇಳುವುದಾದರೆ, ನಗದು ಸಾಲಗಳು ಬೇಡಿಕೆಯ ಮೇರೆಗೆ ಪಾವತಿಸಲ್ಪಡುತ್ತವೆ. ಆದ್ದರಿಂದ ಇವು ಬ್ಯಾಂಕಿನ ಬೇಡಿಕೆ ಠೇವಣಿಗಳ ಪ್ರತಿರೂಪದಂತೆ (ಅಥವಾ ಪೂರಕ ವಸ್ತು ಅಥವಾ ದಾಖಲೆಯ ದ್ವಿಪ್ರತಿ) ಇರುತ್ತವೆ. ಕಾರ್ಯೋಪಯುಕ್ತ ಬಂಡವಾಳ: ಸಂಸ್ಥೆಗಳು ತಮ್ಮೆಲ್ಲಾ ದೈನಂದಿನ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪಾವತಿಸಲು ನಗದಿನ ಅಗತ್ಯವನ್ನು ಹೊಂದಿರುತ್ತವೆ. ಅವು ವೇತನಗಳನ್ನು ಪಾವತಿಸುವುದಿರುತ್ತದೆ, ಕಚ್ಚಾ ಸಾಮಗ್ರಿಗಳಿಗಾಗಿ ಪಾವತಿಸುವುದಿರುತ್ತದೆ, ಬಿಲ್ಲುಗಳನ್ನು ಪಾವತಿಸುವುದಿರುತ್ತದೆ ಹಾಗೂ ಈ ಪಟ್ಟಿ ಇನ್ನೂ ಮುಂದುವರಿಯುತ್ತದೆ. ಇದನ್ನೆಲ್ಲಾ ಕೈಗೊಳ್ಳಲು ಅವಕ್ಕೆ ಲಭ್ಯವಿರುವ ಹಣವನ್ನು ಸಂಸ್ಥೆಯ ಕಾರ್ಯೋಪಯುಕ್ತ ಬಂಡವಾಳ ಎಂದು ಕರೆಯಲಾಗುತ್ತದೆ. ಪ್ರಸಕ್ತ ಇರುವ ಆಸ್ತಿಪಾಸ್ತಿಗಳು ಕಾರ್ಯೋಪಯುಕ್ತ ಬಂಡವಾಳದ ಮುಖ್ಯ ಮೂಲಗಳಾಗಿರುತ್ತವೆ. ಏಕೆಂದರೆ ಇವು ನಗದನ್ನು ಉತ್ಪತ್ತಿ ಮಾಡಿಕೊಳ್ಳಲು ಸಂಸ್ಥೆಯಿಂದ ಬಳಕೆಗೆ ಒಳಗಾಗಬಲ್ಲ ಅಲ್ಪಾವಧಿ ಆಸ್ತಿಪಾಸ್ತಿಗಳಾಗಿರುತ್ತವೆ. ಆದಾಗ್ಯೂ, ಸಂಸ್ಥೆಯು ಪ್ರಸಕ್ತ ಹಣಕಾಸಿನ ಹೊಣೆಗಾರಿಕೆಗಳನ್ನೂ ಹೊಂದಿರುತ್ತದೆಯಾದ್ದರಿಂದ, ಈ ಕುರಿತು ಲೆಕ್ಕಾಚಾರ ಹಾಕುವಾಗ ಸಂಸ್ಥೆಯೊಂದು ತನ್ನ ಫೈಸಲಾತಿಯಲ್ಲಿ ಎಷ್ಟು ಪ್ರಮಾಣದಲ್ಲಿ ಕಾರ್ಯೋಪಯುಕ್ತ ಬಂಡವಾಳವನ್ನು ಹೊಂದಿದೆ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ, ಕಾರ್ಯೋಪಯುಕ್ತ ಬಂಡವಾಳವೆಂದರೆ:- ಕಾರ್ಯೋಪಯುಕ್ತ ಬಂಡವಾಳ = ಪ್ರಸಕ್ತ ಆಸ್ತಿಪಾಸ್ತಿಗಳು || ಮೂಲದಾಸ್ತಾನು + ಸಾಲಗ್ರಾಹಿಗಳು + ನಗದು - ಪ್ರಸಕ್ತ ಹಣಕಾಸಿನ ಹೊಣೆಗಾರಿಕೆಗಳು ಈ ರೀತಿಯಾಗಿ ಕಾರ್ಯೋಪಯುಕ್ತ ಬಂಡವಾಳವು ನಿವ್ವಳ ಪ್ರಸಕ್ತ ಆಸ್ತಿಪಾಸ್ತಿಗಳಂತೆಯೇ ಇರುತ್ತದೆ, ಮತ್ತು ಇದು ಸಂಸ್ಥೆಯ ಆಯವ್ಯಯ ಪಟ್ಟಿಯ ಮೇಲಿನ ಅರ್ಧಭಾಗದ ಒಂದು ಮುಖ್ಯಭಾಗವಾಗಿರುತ್ತದೆ. ವ್ಯವಹಾರದ ಅಸ್ತಿತ್ವವೊಂದು ತನ್ನ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿರುವ ಕಾರ್ಯೋಪಯುಕ್ತ ಬಂಡವಾಳವನ್ನು ಹೊಂದುವುದು ಅತ್ಯಂತ ಪ್ರಮುಖವಾಗಿರುತ್ತದೆ. ಅನೇಕ ವ್ಯವಹಾರಗಳು ಮುಳುಗುವಂತಾಗಿದ್ದರೆ, ಇದಕ್ಕೆ ಅವು ಲಾಭದಾಯಕವಾಗಿ ನಡೆಯದೇ ಇದ್ದುದು ಕಾರಣವಲ್ಲ; ಕಾರ್ಯೋಪಯುಕ್ತ ಬಂಡವಾಳದ ಕೊರತೆಗಳಿಂದ ಅವು ಬಳಲಿದ್ದೇ ಅದಕ್ಕೆ ಕಾರಣ. ಕಾರ್ಯೋಪಯುಕ್ತ ಬಂಡವಾಳದ ಚಕ್ರ ಬ್ಯಾಂಕಿನ ಓವರ್‌ಡ್ರಾಫ್ಟ್: ಓವರ್‌ಡ್ರಾಫ್ಟ್ ಎಂದರೆ ಒಂದು ಬ್ಯಾಂಕ್ ಖಾತೆಯಿಂದ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆಯುವ ಕ್ರಮ ಎಂದರ್ಥ. ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ಓರ್ವ ಖಾತೆಯ ಹಿಡುವಳಿದಾರನು ಒಂದು ಬ್ಯಾಂಕ್ ಖಾತೆಯಲ್ಲಿ ತಾನು ಠೇವಣಿ ಇರಿಸಿರುವ ಹಣಕ್ಕಿಂತ ಹೆಚ್ಚಿನ ಹಣವನ್ನು ಖಾತೆಯಿಂದ ಹಿಂತೆಗೆದುಕೊಳ್ಳುವುದು ಓವರ್ ಡ್ರಾಫ್ಟ್ ಎನಿಸಿಕೊಳ್ಳುತ್ತದೆ. ಬ್ಯಾಂಕ್ ಖಾತೆಯಲ್ಲಿ ಲಭ್ಯವಿರುವ ಶಿಲ್ಕಿಗಿಂತ ಖಾತೆಯಿಂದ ಹಣದ ಹಿಂತೆಗೆತದ ಮೊತ್ತವು ಹೆಚ್ಚಾದಾಗ ಒಂದು ಓವರ್ ಡ್ರಾಫ್ಟ್ ಸನ್ನಿವೇಶ ನಿರ್ಮಾಣವಾಗುತ್ತದೆ. ಇದರಿಂದಾಗಿ ಸದರಿ ಖಾತೆಯು ಒಂದು ಋಣಾತ್ಮಕ ಶಿಲ್ಕಿನ ಸ್ಥಾನವನ್ನು ಪಡೆಯುತ್ತದೆ ಹಾಗೂ ಈ ರೀತಿ ಹೆಚ್ಚುವರಿ ಹಣವನ್ನು ಹಿಂತೆಗೆದ ವ್ಯಕ್ತಿಯು "ಹೆಚ್ಚಾಗಿ ಹಣ ತೆಗೆದವ" (ಹೆಚ್ಚು ಹಣ ತೆಗೆಯುವವ) ಎಂದು ಕರೆಸಿಕೊಳ್ಳುತ್ತಾನೆ. ಒಂದು ವೇಳೆ, ಒಂದು ಓವರ್‌ಡ್ರಾಫ್ಟ್ ಸಂರಕ್ಷಣಾ ಯೋಜನೆಗೆ ಸಂಬಂಧಿಸಿದಂತೆ ಖಾತೆಯನ್ನು ಒದಗಿಸುವವನೊಂದಿಗೆ ಒಂದು ಪೂರ್ವಭಾವಿ ಒಡಂಬಡಿಕೆಯು ಇದ್ದಿದ್ದೇ ಆದಲ್ಲಿ, ಮತ್ತು ಹೆಚ್ಚಾಗಿ ಹಿಂತೆಗೆಯಲ್ಪಟ್ಟ ಹಣದ ಮೊತ್ತವು ಅವನ ಅಧಿಕೃತ ಓವರ್‌ಡ್ರಾಫ್ಟ್ ಮಿತಿಯೊಳಗಿದ್ದಲ್ಲಿ, ಆಗ ಸಾಮಾನ್ಯವಾಗಿ ಸಮ್ಮತಿಸಲ್ಪಟ್ಟ ದರದಲ್ಲಿ ಬಡ್ಡಿಯನ್ನು ವಿಧಿಸಲಾಗುತ್ತದೆ. ಒಂದು ವೇಳೆ, ಸಮ್ಮತಿಸಲ್ಪಟ್ಟ ಷರತ್ತುಗಳನ್ನು ಶಿಲ್ಕು ಮೀರಿದ್ದೇ ಆದಲ್ಲಿ, ಆಗ ಶುಲ್ಕಗಳನ್ನು ವಿಧಿಸಬಹುದಾಗಿರುತ್ತದೆ ಮತ್ತು ಉನ್ನತವಾದ ಬಡ್ಡಿ ದರವು ಅದಕ್ಕೆ ಅನ್ವಯವಾಗಬಹುದಾಗಿರುತ್ತದೆ. ಅವಧಿ ಸಾಲ: ಅವಧಿ ಸಾಲಗಳು ಬ್ಯಾಂಕಿನಲ್ಲಿನ ನಿಶ್ಚಿತ ಠೇವಣಿಗಳ ಪ್ರತಿರೂಪಗಳಾಗಿರುತ್ತವೆ. ನಿಶ್ಚಿತವಾದ, ಪೂರ್ವ-ನಿರ್ಧಾರಿತ ಕಂತುಗಳಲ್ಲಿ ಮರುಪಾವತಿಯನ್ನು ಮಾಡಬೇಕೆಂದು ಕೇಳಿಕೊಂಡಿದ್ದಾಗ, ಈ ವಿಧಾನದಲ್ಲಿ ಬ್ಯಾಂಕುಗಳು ಹಣವನ್ನು ಸಾಲಕೊಡುತ್ತವೆ. ದೀರ್ಘಾವಧಿ ಆಸ್ತಿಪಾಸ್ತಿಗಳನ್ನು, ಅಂದರೆ, ಒಂದು ಸುದೀರ್ಘಾವಧಿಯ (ಕಡೇಪಕ್ಷ ಒಂದು ವರ್ಷವನ್ನು ಮೀರುವ ಅವಧಿಯ) ನಂತರ ಎರವಲುಗಾರನಿಗೆ ಪ್ರಯೋಜನವನ್ನು ತಂದುಕೊಡುವ ಆಸ್ತಿಪಾಸ್ತಿಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಬಯಸುವ ಎರವಲುಗಾರರಿಗೆ ಈ ಬಗೆಯ ಸಾಲವನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಸ್ಥಾವರ ಮತ್ತು ಯಂತ್ರೋಪಕರಣಗಳ ಖರೀದಿಗಳು, ಕಾರ್ಖಾನೆಗಾಗಿ ಕಟ್ಟಡವನ್ನು ನಿರ್ಮಿಸುವುದು, ಹೊಸ ಯೋಜನೆಗಳನ್ನು ಸ್ಥಾಪಿಸುವುದು ಇವೇ ಮೊದಲಾದವು ಈ ವರ್ಗದಲ್ಲಿ ಬರುತ್ತವೆ. ವಾಹನಗಳು, ಬಳಕೆದಾರರ ಗೃಹಬಳಕೆಯ ವಸ್ತುಗಳು, ಸ್ಥಿರಾಸ್ತಿಗಳ ಖರೀದಿಗೆ ಹಾಗೂ ಮೂಲಸೌಕರ್ಯದ ಸೃಷ್ಟಿಗೆ ಧನಸಹಾಯ ಮಾಡುವಿಕೆ ಇವೂ ಸಹ ಈ ವರ್ಗದಲ್ಲಿ ಬರುತ್ತವೆ. ಹುಂಡಿವಟ್ಟ ಮಾಡುವಿಕೆ: ಹುಂಡಿವಟ್ಟ ಮಾಡುವಿಕೆಯು (ಬಿಲ್ ಡಿಸ್ಕೌಂಟಿಂಗ್) ಕೆಲವೊಂದು ಸಣ್ಣ ಬ್ಯಾಂಕುಗಳಲ್ಲಿ ಕಂಡುಬರುವ ಒಂದು ಪ್ರಮುಖ ಚಟುವಟಿಕೆಯಾಗಿದೆ. ಸಾಲಕೊಡುವಿಕೆಯ ಈ ನಿರ್ದಿಷ್ಟ ಬಗೆಯ ಅಡಿಯಲ್ಲಿ, ಎರವಲುಗಾರನ ಗಿರಾಕಿಗೆ ಸಂಬಂಧಿಸಿದಂತೆ ಎರವಲುಗಾರನಿಂದ ಸೆಳೆಯಲ್ಪಟ್ಟ ಹುಂಡಿಯನ್ನು ಬ್ಯಾಂಕು ತೆಗೆದುಕೊಳ್ಳುತ್ತದೆ ಮತ್ತು ಹುಂಡಿವಟ್ಟ/ದಳ್ಳಾಳಿ ರುಸುಮು ಎಂಬುದಾಗಿ ಒಂದಷ್ಟು ಮೊತ್ತವನ್ನು ಅದರಲ್ಲಿ ಮುರಿದುಕೊಂಡು, ಅವನಿಗೆ ಅಥವಾ ಅವಳಿಗೆ ತಕ್ಷಣವೇ ಹಣವನ್ನು ಪಾವತಿಸುತ್ತದೆ. ನಂತರ ಹುಂಡಿಯ ವಾಯಿದೆ ದಿನಾಂಕದಂದು ಎರವಲುಗಾರನ ಗಿರಾಕಿಗೆ ಹುಂಡಿಯನ್ನು ಬ್ಯಾಂಕು ಸಾದರಪಡಿಸುತ್ತದೆ ಮತ್ತು ಒಟ್ಟು ಮೊತ್ತವನ್ನು ಸಂಗ್ರಹಿಸುತ್ತದೆ. ಒಂದು ವೇಳೆ ಹುಂಡಿಯು ವಿಳಂಬವಾದಲ್ಲಿ, ವ್ಯವಹಾರ ನಿರ್ವಹಣೆಯ ಷರತ್ತುಗಳನ್ನು ಅವಲಂಬಿಸಿ ಎರವಲುಗಾರ ಅಥವಾ ಅವನ ಗಿರಾಕಿಯು ಒಂದು ಪೂರ್ವ-ನಿರ್ಧಾರಿತ ಬಡ್ಡಿಯನ್ನು ಬ್ಯಾಂಕಿಗೆ ಪಾವತಿಸುತ್ತಾರೆ. ಯೋಜನೆಗೆ ಧನಸಹಾಯ ಮಾಡುವಿಕೆ: ಯೋಜನೆಗೆ ಹಣವೊದಗಿಸುವುದು ಎಂದರೆ ಒಂದು ಸಂಕೀರ್ಣ ಹಣಕಾಸಿನ ರಚನೆಯನ್ನು ಆಧರಿಸಿ, ದೀರ್ಘಾವಧಿಯ ಮೂಲಸೌಕರ್ಯ ಹಾಗೂ ಕೈಗಾರಿಕಾ ಯೋಜನೆಗಳಿಗೆ ಧನಸಹಾಯ ಮಾಡುವುದಾಗಿರುತ್ತದೆ. ಇಲ್ಲಿ ಯೋಜನೆಗೆ ಹಣವೊದಗಿಸಲು, ಯೋಜನೆಯ ಪ್ರಾಯೋಜಕರ ಆಯವ್ಯಯ ಪಟ್ಟಿಗಳಿಗಿಂತ ಹೆಚ್ಚಾಗಿ ಯೋಜನೆಯ ಋಣಭಾರ ಹಾಗೂ ಇಕ್ವಿಟಿಗಳನ್ನು ಬಳಸಲಾಗುತ್ತದೆ.
ಸಾಮಾನ್ಯವಾಗಿ, ಪ್ರಾಯೋಜಕರು ಎಂದು ಕರೆಯಲ್ಪಡುವ ಹಲವಾರು ಇಕ್ವಿಟಿ ಹೂಡಿಕೆದಾರರನ್ನಷ್ಟೇ ಅಲ್ಲದೇ, ಕಾರ್ಯಾಚರಣೆಗೆ ಸಾಲಗಳನ್ನು ಒದಗಿಸುವ ಬ್ಯಾಂಕುಗಳ ಒಂದು ಒಕ್ಕೂಟವನ್ನು ಯೋಜನೆಗೆ ಧನಸಹಾಯ ಮಾಡುವ ಒಂದು ರಚನಾ-ಸ್ವರೂಪವು ಒಳಗೊಂಡಿರುತ್ತದೆ.
ನಿಧಿಯಲ್ಲದ ಮೂಲ
[ಬದಲಾಯಿಸಿ]ಹಣಭರವಸೆಯ ಪತ್ರ: ಒಂದು ವ್ಯವಹಾರ ನಿರ್ವಹಣೆಗೆ ಸಂಬಂಧಿಸಿದಂತೆ LCಯೂ ಸಹ ಪಾವತಿಯ ಮೂಲವಾಗಿರಲು ಸಾಧ್ಯವಿದೆ. ಅಂದರೆ, ಹಣಭರವಸೆಯ ಪತ್ರವನ್ನು ವಿಮೋಚನಗೊಳಿಸಿಕೊಂಡರೆ ಅದು ಓರ್ವ ರಫ್ತುದಾರನಿಗೆ ಹಣವನ್ನು ಪಾವತಿಸುತ್ತದೆ ಎಂದರ್ಥ. ಹಣಭರವಸೆಯ ಪತ್ರಗಳನ್ನು ಸಾಮಾನ್ಯವಾಗಿ ಗಣನೀಯ ಮೌಲ್ಯದ ಅಂತರರಾಷ್ಟ್ರೀಯ ವ್ಯಾಪಾರದ ವ್ಯವಹಾರ ನಿರ್ವಹಣೆಗಳಲ್ಲಿ ಪ್ರಧಾನವಾಗಿ ಬಳಸಲಾಗುತ್ತದೆ. ಒಂದು ದೇಶದಲ್ಲಿರುವ ಪೂರೈಕೆದಾರ ಹಾಗೂ ಮತ್ತೊಂದು ದೇಶದಲ್ಲಿನ ಗಿರಾಕಿಯ ನಡುವಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸದರಿ ಹಣಭರವಸೆಯ ಪತ್ರಗಳು ಬಳಕೆಯಾಗುತ್ತವೆ. ಮಾನ್ಯತೆ ಪಡೆದ ಸಾರ್ವಜನಿಕ ಸೌಲಭ್ಯಗಳು (ಬೀದಿಗಳು, ಪಾದಚಾರಿ ಹಾದಿಗಳು, ಬಿರುಸಾದ ನೀರ ಹರಿವಿನ ಕೊಳಗಳು, ಇತ್ಯಾದಿ.) ನಿರ್ಮಿಸಲ್ಪಡುತ್ತವೆ ಎಂಬುದನ್ನು ಖಾತ್ರಿಪಡಿಸಲು ಭೂ ಅಭಿವೃದ್ಧಿ ಪ್ರಕ್ರಿಯೆಯಲ್ಲಿಯೂ ಅವು ಬಳಸಲ್ಪಡುತ್ತವೆ. ಹಣಭರವಸೆಯ ಪತ್ರವೊಂದಕ್ಕೆ ಸಂಬಂಧಿಸಿದ ಪಕ್ಷಸ್ಥರಲ್ಲಿ ಸಾಮಾನ್ಯವಾಗಿ ಇವರು ಸೇರಿರುತ್ತಾರೆ: ಹಣವನ್ನು ಸ್ವೀಕರಿಸಬೇಕಿರುವ ಓರ್ವ ಫಲಾನುಭವಿ, ಯಾವುದರಲ್ಲಿ ಅರ್ಜಿದಾರನು ಓರ್ವ ಗ್ರಾಹಕನಾಗಿರುತ್ತಾನೋ ಆ ನೀಡಿಕೆಯ ಬ್ಯಾಂಕು, ಮತ್ತು ಯಾವುದರಲ್ಲಿ ಓರ್ವ ಗ್ರಾಹಕನು ಫಲಾನುಭವಿಯಾಗಿರುತ್ತಾನೋ ಆ ಸೂಚನಾಪತ್ರ ನೀಡುವ ಬ್ಯಾಂಕು. ಬಹುಪಾಲು ಎಲ್ಲಾ ಹಣಭರವಸೆಯ ಪತ್ರಗಳು ಮಾರ್ಪಡಿಸಲಾಗದ ಸ್ವರೂಪವನ್ನು ಒಳಗೊಂಡಿರುತ್ತವೆ; ಅಂದರೆ, ಫಲಾನುಭವಿಯ, ನೀಡಿಕೆಯ ಬ್ಯಾಂಕಿನ ಮತ್ತು ಒಂದು ವೇಳೆ ದೃಢೀಕರಿಸುವ ಬ್ಯಾಂಕೇನಾದರೂ ಇದ್ದಲ್ಲಿ ಅದರ ಪೂರ್ವಭಾವಿ ಒಡಂಬಡಿಕೆಯಿಲ್ಲದೆಯೇ ಅವನ್ನು ತಿದ್ದುಪಡಿ ಮಾಡುವುದನ್ನಾಗಲೀ ಅಥವಾ ರದ್ದುಪಡಿಸುವುದಾಗಲೀ ಸಾಧ್ಯವಿರುವುದಿಲ್ಲ. ಒಂದು ವ್ಯವಹಾರ ನಿರ್ವಹಣೆಯನ್ನು ಕಾರ್ಯರೂಪಕ್ಕೆ ತರುವ ಸಂದರ್ಭದಲ್ಲಿ, ಜೈರೋ ವಿಧಾನಗಳುಗಳು ಮತ್ತು ಪ್ರವಾಸಿ ಚೆಕ್ಕುಗಳಿಗೆ ಸಾಮಾನ್ಯವಾಗಿರುವ ಕಾರ್ಯಚಟುವಟಿಕೆಗಳನ್ನು ಹಣಭರವಸೆಯ ಪತ್ರಗಳು ಸಂಯೋಜಿಸುತ್ತವೆ. ವಿಶಿಷ್ಟವೆನಿಸುವಂತೆ, ಪಾವತಿಯನ್ನು ಸ್ವೀಕರಿಸುವುದಕ್ಕೆ ಸಂಬಂಧಿಸಿದಂತೆ ಓರ್ವ ಫಲಾನುಭವಿಯು ಸಲ್ಲಿಸಬೇಕಾದ ದಸ್ತಾವೇಜುಗಳಲ್ಲಿ, ಒಂದು ವಾಣಿಜ್ಯ ಸರಕುಪಟ್ಟಿ, ಸರಕು ತುಂಬುವಿಕೆಯ ಹುಂಡಿ, ಮತ್ತು ಸಾಗಣೆಯಲ್ಲಿರುವಾಗ ಸದರಿ ತುಂಬಲ್ಪಟ್ಟ-ಸರಕು ನಷ್ಟ ಅಥವಾ ಹಾನಿಗೆ ಪ್ರತಿಯಾಗಿ ವಿಮೆಗೆ ಒಳಪಟ್ಟಿತ್ತು ಎಂಬುದನ್ನು ಸಾಬೀತುಮಾಡುವ ಒಂದು ದಸ್ತಾವೇಜು ಇವೆಲ್ಲವೂ ಸೇರಿರುತ್ತವೆ. ಆದಾಗ್ಯೂ, ಪಟ್ಟಿ ಹಾಗೂ ದಸ್ತಾವೇಜುಗಳ ನಮೂನೆಯು ಕಲ್ಪನಾಶಕ್ತಿ ಮತ್ತು ಸಮಾಲೋಚನೆಗೆ ಮುಕ್ತವಾಗಿದೆ ಹಾಗೂ ಸಾಗಣೆಗೆ ತುಂಬಿಸಲ್ಪಟ್ಟ ಸರಕುಗಳ ಗುಣಮಟ್ಟ, ಅಥವಾ ಅವುಗಳ ಮೂಲದ ಸ್ಥಳದ ಕುರಿತು ಪುರಾವೆಯನ್ನು ಒದಗಿಸುವ, ಓರ್ವ ತಟಸ್ಥ ವೀಕ್ಷಕನಿಂದ ನೀಡಲ್ಪಟ್ಟ ದಸ್ತಾವೇಜುಗಳನ್ನು ಸಲ್ಲಿಸುವುದಕ್ಕೆ ಸಂಬಂಧಿಸಿದ ಅವಶ್ಯಕತೆಗಳನ್ನು ಅವು ಒಳಗೊಳ್ಳಬಹುದಾಗಿರುತ್ತದೆ.
Corporate finance |
---|
Working capital |
Sections |
Societal components |
ಋಣಭಾರದ ಲೆಕ್ಕಪತ್ರಗಾರಿಕೆ
[ಬದಲಾಯಿಸಿ]ರಾಷ್ಟ್ರೀಯ ಲೆಕ್ಕಪತ್ರಗಾರಿಕೆಯಲ್ಲಿ, ಯಾರು ಉಪಕೃತನಾಗಿರುತ್ತಾನೋ ಅವನ ಅನುಸಾರ ಋಣಭಾರಗಳನ್ನು ಸೇರಿಸಲಾಗುತ್ತದೆ. ಗೃಹಕೃತ್ಯದ ಋಣಭಾರ ಎಂಬುದು ಗೃಹಕೃತ್ಯಗಳಿಂದ ಹೊಂದಲ್ಪಟ್ಟಿರುವ ಋಣಭಾರವಾಗಿರುತ್ತದೆ. "ರಾಷ್ಟ್ರೀಯ" ಅಥವಾ ಸಾರ್ವಜನಿಕ ಋಣಭಾರ ಎಂಬುದು ಬಗೆಬಗೆಯ ಸರ್ಕಾರೀ ಸಂಸ್ಥೆಗಳಿಂದ (ಒಕ್ಕೂಟ ಸರ್ಕಾರ, ರಾಜ್ಯಗಳು, ನಗರಗಳು ...) ಹೊಂದಲ್ಪಟ್ಟಿರುವ ಋಣಭಾರವಾಗಿರುತ್ತದೆ. ವ್ಯವಹಾರ ಋಣಭಾರ ಎಂಬುದು ವ್ಯವಹಾರಗಳಿಂದ ಹೊಂದಲ್ಪಟ್ಟಿರುವ ಋಣಭಾರವಾಗಿರುತ್ತದೆ. ಹಣಕಾಸಿನ ಋಣಭಾರ ಎಂಬುದು ಹಣಕಾಸಿನ ವಲಯದಿಂದ (ಒಂದು ಹಣಕಾಸಿನ ಸಂಸ್ಥೆಯಿಂದ ಮತ್ತೊಂದಕ್ಕೆ) ಹೊಂದಲ್ಪಟ್ಟಿರುವ ಋಣಭಾರವಾಗಿರುತ್ತದೆ. ಒಟ್ಟಾರೆ ಋಣಭಾರ ಎಂಬುದು ಜೋಡಿ-ಲೆಕ್ಕಪತ್ರಗಾರಿಕೆಯನ್ನು ತಡೆಗಟ್ಟುವಲ್ಲಿನ ಹಣಕಾಸಿನ ಋಣಭಾರವನ್ನು ಹೊರತುಪಡಿಸಿದ, ಆ ಎಲ್ಲಾ ಋಣಭಾರಗಳ ಮೊತ್ತವಾಗಿರುತ್ತದೆ. ಋಣಭಾರದ ಈ ವಿಭಿನ್ನ ಬಗೆಗಳನ್ನು ಋಣಭಾರ/GDP ಅನುಪಾತಗಳಲ್ಲಿ ಲೆಕ್ಕಾಚಾರ ಮಾಡಲು ಸಾಧ್ಯವಿದೆ. ಋಣಭಾರದ ಬಾಕಿಯ ಉಪಕೃತತ್ವ ಹಾಗೂ ಗಾತ್ರದಲ್ಲಿನ ಬದಲಾವಣೆಗಳ ವೇಗವನ್ನು ಮೌಲ್ಯಮಾಪನ ಮಾಡುವಲ್ಲಿ ಆ ಅನುಪಾತಗಳು ನೆರವಾಗುತ್ತವೆ. ಉದಾಹರಣೆಗೆ, USAಯು ಒಂದು ಉನ್ನತ ಮಟ್ಟದ ಗ್ರಾಹಕ ಋಣಭಾರವನ್ನು ಮತ್ತು ಒಂದು ಕಡಿಮೆ ಮಟ್ಟದ ಸಾರ್ವಜನಿಕ ಋಣಭಾರವನ್ನು ಹೊಂದಿದ್ದರೆ, ಪೂರ್ವದ ಐರೋಪ್ಯ ದೇಶಗಳಲ್ಲಿ ಇದಕ್ಕೆ ವಿರುದ್ಧವಾದ ಸ್ಥಿತಿಯು ವಾಸ್ತವವಾಗಿ ಇರುವಂತೆ ಕಂಡುಬರುತ್ತದೆ. ಖಾಸಗಿ ಮತ್ತು ಸಾರ್ವಜನಿಕ ಮಧ್ಯವರ್ತಿಗಳಿಗೆ ಸಂಬಂಧಿಸಿದಂತೆ ಋಣಭಾರದ ಲೆಕ್ಕಪತ್ರಗಾರಿಕೆಯಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಒಂದು ವೇಳೆ, ಓರ್ವ ಖಾಸಗಿ ಮಧ್ಯವರ್ತಿಯು ಏನನ್ನಾದರೂ ನಂತರ ಪಾವತಿಸುವುದರ ಕುರಿತು ಭರವಸೆ ನೀಡಿದರೆ, ಅದು ಒಂದು ಋಣಭಾರವನ್ನು ಹೊಂದಿರುತ್ತದೆ, ಮತ್ತು ಈ ಋಣಭಾರವು ಸಾರ್ವಜನಿಕ ಮಧ್ಯವರ್ತಿಗಳಿಂದ ನಿರ್ಬಂಧಪಡಿಸಲಾಗುವ ಸ್ವರೂಪದ್ದಾಗಿರುತ್ತದೆ. ಒಂದು ವೇಳೆ, ಸಾರ್ವಜನಿಕ ಆಡಳಿತ ಘಟಕವೊಂದು ಒಂದು ಕಾನೂನನ್ನು ಅನುಮೋದಿಸಿ, ನಂತರದಲ್ಲಿ ಏನನ್ನೋ ಪಾವತಿಸುವುದಾಗಿ (ಒಂದು ವಿಧದ ಭರವಸೆ) ಅದು ವಿವರಣೆ ನೀಡಿದರೆ, ನಂತರದಲ್ಲಿ ಸದರಿ ಕಾನೂನನ್ನು ಬದಲಾಯಿಸುವ (ಮತ್ತು ಪಾವತಿಸದಿರುವ) ಹಕ್ಕನ್ನು ಅದು ಕಾದಿರಿಸಿಕೊಳ್ಳುತ್ತದೆ. ಉದಾಹರಣೆಗೆ, ಈ ಕಾರಣದಿಂದಲೇ ನಿವೃತ್ತಿಗಳಿಗೆ ಸಂಬಂಧಿಸಿದಂತೆ ಪಾವತಿಸುವುದಾಗಿ ಸರ್ಕಾರಗಳು ಭರವಸೆ ನೀಡಿದ ಹಣವು ಸಾರ್ವಜನಿಕ ಋಣಭಾರದ ನಿರ್ಧಾರಣೆಯಲ್ಲಿ ತೋರಿಸಲ್ಪಡುವುದಿಲ್ಲ; ಆದರೆ ಅದೇ ವೇಳೆಗೆ, ನಿವೃತ್ತಿಗಳಿಗೆ ಸಂಬಂಧಿಸಿದಂತೆ ಹಣ ಪಾವತಿಸುವುದಾಗಿ ಖಾಸಗಿ ಕಂಪನಿಗಳಿಂದ ನೀಡಲ್ಪಟ್ಟ ಭರವಸೆಗಳು ತೋರಿಸಲ್ಪಡುತ್ತದೆ.
ಖಾತರಿಗಾರಿಕೆ
[ಬದಲಾಯಿಸಿ]ಕಂಪನಿಯೊಂದು ಆಸ್ತಿಪಾಸ್ತಿಗಳನ್ನು ಅಥವಾ ಸ್ವೀಕಾರಾರ್ಹವಾದವುಗಳನ್ನು ಒಟ್ಟುಗೂಡಿಸಿ, ದತ್ತಿಯೊಂದರ ಮೂಲಕ ಘಟಕಗಳಲ್ಲಿ ಅವುಗಳನ್ನು ಮಾರುಕಟ್ಟೆಗೆ ಮಾರಿದಾಗ ಖಾತರಿಗಾರಿಕೆಯು ಸಂಭವಿಸುತ್ತದೆ. ಒಂದು ನಗದು ಹರಿವಿನೊಂದಿಗಿನ ಯಾವುದೇ ಆಸ್ತಿಪಾಸ್ತಿಯನ್ನು ಖಾತರೀಕರಿಸಬಹುದು. ಈ ಸ್ವೀಕಾರಾರ್ಹವಾದವುಗಳಿಂದ ಬರುವ ನಗದು ಹರಿವುಗಳನ್ನು ಈ ಘಟಕಗಳ ಹಿಡುವಳಿದಾರರಿಗೆ ಪಾವತಿಸಲು ಬಳಸಲಾಗುವುದು. ಕಂಪನಿಗಳು ತಮ್ಮ ಆಯವ್ಯಯ ಪಟ್ಟಿಗಳಿಂದ ಈ ಆಸ್ತಿಪಾಸ್ತಿಗಳನ್ನು ತೆಗೆದುಹಾಕುವ ಮತ್ತು ಆಸ್ತಿಪಾಸ್ತಿಯೊಂದನ್ನು ಚಲಾವಣೆಗೆ ತರುವ ದೃಷ್ಟಿಯಿಂದ ಈ ಕ್ರಮವನ್ನು ಅನೇಕಬಾರಿ ಅನುಸರಿಸುತ್ತವೆ. ಈ ಆಸ್ತಿಪಾಸ್ತಿಗಳು ಆಯವ್ಯಯ ಪಟ್ಟಿಯಿಂದ "ತೆಗೆದುಹಾಕಲ್ಪಟ್ಟಿರುತ್ತವೆ"ಯಾದರೂ ಮತ್ತು ಅವು ದತ್ತಿಯ ಹೊಣೆಗಾರಿಕೆ ಆಗಬೇಕಿರುತ್ತದೆಯಾದರೂ, ಕಂಪನಿಯ ತೊಡಗಿಸಿಕೊಳ್ಳುವಿಕೆಯನ್ನು ಅದು ಕೊನೆಗಾಣಿಸುವುದಿಲ್ಲ. ಅನೇಕವೇಳೆ ಕಂಪನಿಯು ದತ್ತಿಯಲ್ಲಿ ಒಂದು ವಿಶೇಷ ಬಡ್ಡಿಯನ್ನು ನಿರ್ವಹಿಸುತ್ತದೆ. ಇದಕ್ಕೆ ಒಂದು "ಬಡ್ಡಿ ಮಾತ್ರವೇ ಇರುವ ಪಟ್ಟಿ" ಅಥವಾ "ಮೊದಲ ನಷ್ಟದ ತುಣುಕು" ಎಂದು ಕರೆಯಲಾಗುತ್ತದೆ. ದತ್ತಿಯಿಂದ ಮಾಡಲಾಗುವ ಯಾವುದೇ ಪಾವತಿಗಳನ್ನು ಈ ಬಡ್ಡಿಗೆ ಪೂರ್ವಭಾವಿತ್ವದಲ್ಲಿ ಕ್ರಮಬದ್ಧವಾದ ಹೂಡಿಕೆದಾರರಿಗೆ ಮಾಡುವುದು ಅಗತ್ಯವಾಗಿರುತ್ತದೆ. ಇದು ಹೂಡಿಕೆದಾರರನ್ನು ಅಪಾಯದ ಒಂದು ಮಟ್ಟದಿಂದ ಸಂರಕ್ಷಿಸುವುದೇ ಅಲ್ಲದೇ, ಖಾತರಿಗಾರಿಕೆಯನ್ನು ಹೆಚ್ಚು ಆಕರ್ಷಕವನ್ನಾಗಿಸುತ್ತದೆ. ಈ ಬಡ್ಡಿಯ ಮೇಲಿನ ನಷ್ಟಗಳಿಗೆ ಕಂಪನಿಯ ಒಡ್ಡುವಿಕೆಯ ನಿರ್ದಿಷ್ಟ ಸನ್ನಿವೇಶದಲ್ಲಿ, ಆಸ್ತಿಪಾಸ್ತಿಗಳು ನಿಜವಾಗಿಯೂ ಆಯವ್ಯಯ ಪಟ್ಟಿಯಾಚೆಗೆ ಸೇರಿದವಾಗಿವೆಯಾ ಎಂಬ ಪ್ರಶ್ನೆಯನ್ನು ಮೇಲೆ ನಮೂದಿಸಿದ ಅಂಶವು ಹುಟ್ಟುಹಾಕುತ್ತದೆ.
ಋಣಭಾರ, ಹಣದುಬ್ಬರ ಮತ್ತು ವಿನಿಮಯ ದರ
[ಬದಲಾಯಿಸಿ]ಕೆಳಗೆ ನಮೂದಿಸಲಾಗಿರುವಂತೆ, ಋಣಭಾರವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಹಣಕಾಸಿನ ಚಲಾವಣಾ ನಾಣ್ಯದಲ್ಲಿ ಹೆಸರಿಸಲ್ಪಡುತ್ತದೆ. ಆದ್ದರಿಂದ ಆ ಚಲಾವಣಾ ನಾಣ್ಯದ ಮೌಲ್ಯಮಾಪನದಲ್ಲಿನ ಬದಲಾವಣೆಗಳು ಋಣಭಾರದ ಪರಿಣಾಮಕ ಗಾತ್ರವನ್ನು ಬದಲಾಯಿಸಬಲ್ಲವಾಗಿರುತ್ತವೆ. ಹಣದುಬ್ಬರ ಅಥವಾ ಹಣದುಬ್ಬರವಿಳಿತದ ಕಾರಣದಿಂದಾಗಿ ಇದು ಸಂಭವಿಸಬಲ್ಲುದಾಗಿರುತ್ತದೆ. ಆದ್ದರಿಂದ ಎರವಲುಗಾರ ಮತ್ತು ಸಾಲದಾತರಿಬ್ಬರೂ ಸಹ ಒಂದೇ ಚಲಾವಣಾ ನಾಣ್ಯವನ್ನು ಬಳಸುತ್ತಿದ್ದಲ್ಲಿ ಇದು ಸಂಭವಿಸಲು ಸಾಧ್ಯವಿದೆ. ಈ ರೀತಿಯಾಗಿ, ಮುಂದೂಡಲ್ಪಟ್ಟ ಪಾವತಿಯ ಮಾನದಂಡಗಳ ಮೇಲೆ ಸಮ್ಮತಿಯನ್ನು ಮುಂಚಿತವಾಗಿ ಸೂಚಿಸುವುದು ಮುಖ್ಯವಾಗಿರುವುದರಿಂದ, ಏರಿಳಿತದ ಒಂದು ಮಟ್ಟವೂ ಸಹ ಸ್ವೀಕಾರಾರ್ಹವಾಗಿ ಸಮ್ಮತಿಸಲ್ಪಡುತ್ತದೆ. ಒಂದು ನಿದರ್ಶನವಾಗಿ ಹೇಳುವುದಾದರೆ, ಇದು "US ಡಾಲರಿನಿಂದ ಹೆಸರಿಸಲ್ಪಟ್ಟ" ಋಣಭಾರಕ್ಕೆ ಸಮ್ಮತಿಸುವುದು ಸಾಮಾನ್ಯವಾಗಿದೆ[ಸಾಕ್ಷ್ಯಾಧಾರ ಬೇಕಾಗಿದೆ]. ಬ್ಯಾಂಕಿಂಗ್ ಖಾತೆಗಳಲ್ಲಿ ತೊಡಗಿಸಿಕೊಂಡಿರುವ ಋಣಭಾರದ ಸ್ವರೂಪವು, ಕೈಗಾರಿಕೀಕರಣಕ್ಕೆ ಒಳಗಾದ ಬಹುಪಾಲು ರಾಷ್ಟ್ರಗಳಲ್ಲಿನ ಹಣದ ಒಂದು ಬೃಹತ್ ಅನುಪಾತಕ್ಕೆ ಸಂಬಂಧಿಸಿದಂತೆ ಸಮಜಾಯಿಷಿಯನ್ನು ನೀಡುತ್ತದೆ (ಇದರ ಒಂದು ಚರ್ಚೆಗೆ ಸಂಬಂಧಿಸಿದಂತೆ ಹಣ, ವ್ಯಾಪಕ ಹಣ, ಮತ್ತು ಬೇಡಿಕೆ ಠೇವಣಿಗಳನ್ನು ಕುರಿತಾದ ಮಾಹಿತಿಯನ್ನು ನೋಡಿ). ಆದ್ದರಿಂದ ಹಣದುಬ್ಬರ, ಹಣದುಬ್ಬರವಿಳಿತ, ಹಣ ಪೂರೈಕೆ, ಮತ್ತು ಋಣಭಾರಗಳ ನಡುವೆ ಒಂದು ಸಂಬಂಧವು ಕಂಡುಬರುತ್ತದೆ. ಕೈಗಾರಿಕೀಕರಣಕ್ಕೆ ಒಳಗಾದ ರಾಷ್ಟ್ರದ ಸಮಗ್ರ ಆರ್ಥಿಕತೆಯಿಂದ ಪ್ರತಿನಿಧಿಸಲ್ಪಟ್ಟ ಮೌಲ್ಯದ ಸಂಗ್ರಹಣೆ ಹಾಗೂ ಅದರ ಮೇಲೆ ತೆರಿಗೆಯನ್ನು ವಿಧಿಸುವಲ್ಲಿನ ರಾಜ್ಯದ ಸಾಮರ್ಥ್ಯವು, ಋಣಭಾರದ ವಿದೇಶಿ ಹಿಡುವಳಿದಾರನಿಗೆ ಮರುಪಾವತಿಯ ಒಂದು ಖಾತರಿಯಂತೆ ವರ್ತಿಸುತ್ತದೆ. ಏಕೆಂದರೆ, ವಿಶ್ವಾದ್ಯಂತದ ಅನೇಕ ಸ್ಥಳಗಳಲ್ಲಿ ಕೈಗಾರಿಕಾ ಸರಕುಗಳು ಉನ್ನತವಾದ ಬೇಡಿಕೆಯನ್ನು ಹೊಂದಿರುತ್ತವೆ.
ಹಣದುಬ್ಬರ ಸೂಚ್ಯಂಕದೊಡನೆ ಹೊಂದಿಸಲ್ಪಟ್ಟ ಋಣಭಾರ
[ಬದಲಾಯಿಸಿ]ಖಾತೆಯ ಹಣದುಬ್ಬರ-ಸೂಚ್ಯಂಕದೊಡನೆ ಹೊಂದಿಸಲ್ಪಟ್ಟ ಏಕಮಾನಗಳಿಗೆ ಸಂಪರ್ಕ ಕಲ್ಪಿಸಲಾದ ಎರವಲು ತೆಗೆದುಕೊಳ್ಳುವ ಮತ್ತು ಮರುಪಾವತಿಯ ವ್ಯವಸ್ಥೆಗಳು ಸಾಧ್ಯವಿದ್ದು, ಕೆಲವೊಂದು ದೇಶಗಳಲ್ಲಿ ಬಳಸಲ್ಪಡುತ್ತಿವೆ. ಉದಾಹರಣೆಗೆ, ಹಣದುಬ್ಬರ-ಸೂಚ್ಯಂಕದೊಡನೆ ಹೊಂದಿಸಲ್ಪಟ್ಟ ಬಾಂಡುಗಳ ಎರಡು ಬಗೆಗಳನ್ನು US ಸರ್ಕಾರವು ನೀಡುತ್ತದೆ. ಅವೆಂದರೆ, ಸರ್ಕಾರಿ ಖಜಾನೆಯ ಹಣದುಬ್ಬರ-ಸಂರಕ್ಷಿತ ಭದ್ರತೆಗಳು (ಟ್ರೆಷರಿ ಇನ್‌ಫ್ಲೇಷನ್-ಪ್ರೊಟೆಕ್ಟೆಡ್ ಸೆಕ್ಯುರಿಟೀಸ್-TIPS) ಮತ್ತು I-ಬಾಂಡುಗಳು. ಇವು ಲಭ್ಯವಿರುವ ಅತ್ಯಂತ ಸುರಕ್ಷಿತವಾದ ಹೂಡಿಕೆಯ ಸ್ವರೂಪಗಳಲ್ಲಿ ಒಂದಾಗಿವೆ. ಏಕೆಂದರೆ ಅಪಾಯದ, ಅಂದರೆ, ಹಣದುಬ್ಬರದ ಏಕೈಕ ಪ್ರಮುಖ ಮೂಲವು ನಿವಾರಿಸಲ್ಪಟ್ಟಿರುತ್ತದೆ. ಇತರ ಹಲವಾರು ಸರ್ಕಾರಗಳೂ ಇದೇ ಬಗೆಯ ಬಾಂಡುಗಳನ್ನು ನೀಡುತ್ತವೆ, ಮತ್ತು ಅವುಗಳಲ್ಲಿ ಕೆಲವು US ಸರ್ಕಾರಕ್ಕೆ ಅನೇಕ ವರ್ಷ ಮುಂಚಿತವಾಗಿಯೇ ಈ ಕ್ರಮಕ್ಕೆ ಕೈಹಾಕಿವೆ. ದೃಢವಾಗಿ ಉನ್ನತವಾಗಿರುವ ಹಣದುಬ್ಬರವನ್ನು ಹೊಂದಿರುವ ದೇಶಗಳಲ್ಲಿ, ಬ್ಯಾಂಕುಗಳಲ್ಲಿನ ಸಾಧಾರಣ ಎರವಲು ತೆಗೆದುಕೊಳ್ಳುವಿಕೆಗಳು ಕೂಡಾ ಹಣದುಬ್ಬರ ಸೂಚ್ಯಂಕದೊಡನೆ ಹೊಂದಿಸಲ್ಪಟ್ಟವಾಗಿರಬಹುದು.
ಋಣಭಾರ ಶ್ರೇಯಾಂಕಗಳು, ಅಪಾಯ ಮತ್ತು ರದ್ದತಿ
[ಬದಲಾಯಿಸಿ]ಅಪಾಯ ಮುಕ್ತ ಬಡ್ಡಿ ದರ
[ಬದಲಾಯಿಸಿ]Finance |
---|
ಬೃಹತ್ ಕಂಪನಿಗಳು ಅಥವಾ ಸರ್ಕಾರಗಳಂಥ ಸ್ಥಿರವಾದ ಹಣಕಾಸಿನ ವ್ಯವಹಾರದ ಅಸ್ತಿತ್ವಗಳಿಗೆ ನೀಡಲಾಗುವ ಸಾಲಕೊಡುವಿಕೆಗಳು ಅನೇಕವೇಳೆ "ಅಪಾಯ ಮುಕ್ತ"ವಾದವು ಅಥವಾ "ಕಡಿಮೆ ಅಪಾಯ"ದವು ಎಂದು ಕರೆಯಲ್ಪಡುತ್ತವೆ ಮತ್ತು "ಅಪಾಯ-ಮುಕ್ತ ಬಡ್ಡಿ ದರ" ಎಂದು ಹೇಳಲಾಗುವ ದರದಲ್ಲಿ ಮಾಡಲ್ಪಡುತ್ತವೆ. ಇದು ಏಕೆಂದರೆ, ಋಣಭಾರ ಮತ್ತು ಬಡ್ಡಿಗಳು ಕರ್ತವ್ಯಲೋಪಕ್ಕೆ ಒಳಗಾಗುವ ಅಥವಾ ಪಾವತಿಸಲ್ಪಡದಿರುವುದರ ಸಾಧ್ಯತೆಗಳು ಅತೀವವಾಗಿ ಕಡಿಮೆಯಿರುತ್ತವೆ. US ಸರ್ಕಾರಿ ಖಜಾನೆಯ ಭದ್ರತೆಯೊಂದು ಇಂಥ ಅಪಾಯ-ಮುಕ್ತ ಬಡ್ಡಿಯ ಒಂದು ಉತ್ತಮ ಉದಾಹರಣೆಯಾಗಿದೆ- ಇದು ಅರ್ಥವ್ಯವಸ್ಥೆಯಲ್ಲಿ ಲಭ್ಯವಿರುವ ಕನಿಷ್ಟ ಪ್ರತಿಫಲವನ್ನು ನೀಡುತ್ತದೆಯಾದರೂ, US ಸರ್ಕಾರಿ ಖಜಾನೆಯು ತನ್ನ ಋಣಭಾರ ಸಾಧನಗಳ ಮೇಲೆ ಕರ್ತವ್ಯಲೋಪವನ್ನು ಎಸಗುವುದಿಲ್ಲ ಎಂಬುದರ (ಬಹುಮಟ್ಟಿಗಿನ) ನಿರ್ದಿಷ್ಟ ನಿರೀಕ್ಷೆಯ ಅನುಕೂಲವನ್ನು ಹೂಡಿಕೆದಾರರು ಹೊಂದಿರುತ್ತಾರೆ. ಚರ ಬಡ್ಡಿ ದರಗಳನ್ನು ಸಜ್ಜುಗೊಳಿಸುವಲ್ಲಿ ಒಂದು ಅಪಾಯ-ಮುಕ್ತ ದರವೂ ಸಹ ಸಾಮಾನ್ಯವಾಗಿ ಬಳಸಲ್ಪಡುತ್ತದೆ. ಸದರಿ ಚರ ಬಡ್ಡಿ ದರಗಳು ಸಾಲಗ್ರಾಹಿಯ ಸಾಲಯೋಗ್ಯತೆಯ ಮೇಲೆ ಆಧರಿಸಿ (ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಅವನು ಅಥವಾ ಅವಳು ಕರ್ತವ್ಯಲೋಪ ಎಸಗುವುದರ ಅಪಾಯ ಮತ್ತು ಋಣಭಾರವನ್ನು ಸಾಲದಾತನು ಕಳೆದುಕೊಳ್ಳುವಲ್ಲಿನ ಅಪಾಯವನ್ನು ಲೆಕ್ಕಾಚಾರ ಹಾಕಿ) ಸಾಲದಾತನಿಗೆ ನೀಡಲಾದ ಅಪಾಯ-ಮುಕ್ತ ಬಡ್ಡಿ ದರ ಹಾಗೂ ಒಂದು ಲಾಭಾಂಶವಾಗಿ ಸಾಮಾನ್ಯವಾಗಿ ಲೆಕ್ಕಾಚಾರ ಹಾಕಲ್ಪಡುತ್ತದೆ. ವಾಸ್ತವದಲ್ಲಿ, ಯಾವುದೇ ಸಾಲಕೊಡುವಿಕೆಯೂ ನಿಜವಾಗಿಯೂ ಅಪಾಯ ಮುಕ್ತವಲ್ಲ, ಆದರೆ "ಅಪಾಯ ಮುಕ್ತ" ದರದಲ್ಲಿನ ಎರವಲುಗಾರರು ಕರ್ತವ್ಯಲೋಪವನ್ನು ಎಸಗುವ ಅಥವಾ ಹಣವನ್ನು ಪಾವತಿಸದಿರುವ ಪ್ರವೃತ್ತಿಯನ್ನು ಹೊಂದಿರುವ ಸಾಧ್ಯತೆಗಳು ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಒಂದು ವೇಳೆ ಚಲಾವಣಾ ನಾಣ್ಯವೊಂದರ ನಿಜವಾದ ಮೌಲ್ಯವು ಋಣಭಾರದ ಅವಧಿಯ ಸಮಯದಲ್ಲಿ ಬದಲಾದರೆ, ಮರುಪಾವತಿಸಲಾದ ಹಣದ ಖರೀದಿಸುವ ಶಕ್ತಿಯು ಸಾಲದ ಉಪಕ್ರಮದಲ್ಲಿ ನಿರೀಕ್ಷಿಸಲಾಗಿದ್ದ ಮಟ್ಟದಿಂದ ಪರಿಗಣನೀಯವಾಗಿ ಬದಲಾಗಬಹುದು. ಆದ್ದರಿಂದ ಒಂದು ಕಾರ್ಯಸಾಧ್ಯವಾದ ಹೂಡಿಕೆಯ ದೃಷ್ಟಿಕೋನದಿಂದ ಹೇಳುವುದಾದರೆ, "ಅಪಾಯ ಮುಕ್ತ" ಅಥವಾ "ಕಡಿಮೆ ಅಪಾಯದ" ಸಾಲಕೊಡುವಿಕೆಗಳಿಗೆ ಗಮನಾರ್ಹವಾದ ಅಪಾಯವು ಇನ್ನೂ ಅಂಟಿಕೊಂಡಿರುತ್ತದೆ. ಹಣದುಬ್ಬರದ ಕಾರಣದಿಂದಾಗಿ ಹಣದ ನಿಜವಾದ ಮೌಲ್ಯ ಬದಲಾಗಿರಬಹುದು, ಅಥವಾ, ಒಂದು ವಿದೇಶಿ ಹೂಡಿಕೆಯ ಸಂದರ್ಭದಲ್ಲಿ ಹೇಳುವುದಾದರೆ ವಿನಿಮಯ ದರದಲ್ಲಿನ ಏರಿಳಿತಗಳ ಕಾರಣದಿಂದಾಗಿ ಹಣದ ನಿಜವಾದ ಮೌಲ್ಯ ಬದಲಾಗಿರಬಹುದು. ಅಂತರರಾಷ್ಟ್ರೀಯ ಫೈಸಲಾತಿಗಳಿಗೆ ಸಂಬಂಧಿಸಿದ ಬ್ಯಾಂಕು ಎಂಬುದು ಕೇಂದ್ರೀಯ ಬ್ಯಾಂಕುಗಳ ಒಂದು ಸಂಘಟನೆಯಾಗಿದ್ದು, ಬ್ಯಾಂಕುಗಳು ತಾವು ನೀಡಿಕೆ ಮಾಡುವ ಸಾಲಕ್ಕೆ ಪ್ರತಿಯಾಗಿ ಎಷ್ಟು ಪ್ರಮಾಣದಲ್ಲಿ ಬಂಡವಾಳವನ್ನು ಹೊಂದಿರಬೇಕು ಎಂಬುದನ್ನು ವ್ಯಾಖ್ಯಾನಿಸಲು ಅದು ನಿಯಮಗಳನ್ನು ಸಿದ್ಧಗೊಳಿಸುತ್ತದೆ.
ಶ್ರೇಯಾಂಕಗಳು ಹಾಗೂ ಸಾಲಯೋಗ್ಯತೆ
[ಬದಲಾಯಿಸಿ]ಸರ್ಕಾರಗಳು ಹಾಗೂ ಖಾಸಗಿ ಸಂಸ್ಥೆಗಳೆರಡರಿಂದಲೂ ತೀರಿಸಲ್ಪಡಬೇಕಾಗಿರುವ ನಿರ್ದಿಷ್ಟ ಬಾಂಡಿನ ಋಣಭಾರಗಳಿಗೆ ಶ್ರೇಯಾಂಕ ನೀಡುವ ಸಂಸ್ಥೆಗಳು ಶ್ರೇಯಾಂಕವನ್ನು ನೀಡುತ್ತವೆ. ಮೂಡೀಸ್, ಫಿಚ್ ರೇಟಿಂಗ್ಸ್ ಇಂಕ್., A. M. ಬೆಸ್ಟ್ ಮತ್ತು ಸ್ಟಾಂಡರ್ಡ್ & ಪೂರ್'ಸ್ ಮೊದಲಾದವು ಇಂಥ ಶ್ರೇಯಾಂಕ ನೀಡುವ ಸಂಸ್ಥೆಗಳಲ್ಲಿ ಸೇರಿವೆ. ಸರ್ಕಾರ ಅಥವಾ ಕಂಪನಿಗೆ ಕೂಡಾ ಅದರದೇ ಆದ ಪ್ರತ್ಯೇಕ ಶ್ರೇಯಾಂಕವನ್ನು ನೀಡಲಾಗುತ್ತದೆ. ಈ ಸಂಸ್ಥೆಗಳು ಸಾಲಗ್ರಾಹಿಯ ಕೃತಜ್ಞತೆಯ ಭಾರಗಳನ್ನು ಗೌರವಿಸಲು ಅವನ ಸಾಮರ್ಥ್ಯದ ಮೌಲ್ಯನಿರ್ಣಯವನ್ನು ಮಾಡುತ್ತವೆ ಮತ್ತು ಅದಕ್ಕನುಸಾರವಾಗಿ ಅವನಿಗೆ ಅಥವಾ ಅವಳಿಗೆ ಒಂದು ಸಾಲದ ಶ್ರೇಯಾಂಕವನ್ನು ನೀಡುತ್ತವೆ. ಶ್ರೇಯಾಂಕಗಳಿಗೆ ಸಂಬಂಧಿಸಿದಂತೆ ಮೂಡೀಸ್ ಸಂಸ್ಥೆಯು Aaa Aa A Baa Ba B Caa Ca C ಎಂಬ ಅಕ್ಷರಗಳನ್ನು ಬಳಸುತ್ತದೆ; ಇಲ್ಲಿ Aa-Caa ಶ್ರೇಯಾಂಕಗಳು 1ರಿಂದ 3ರವರೆಗಿನ ಸಂಖ್ಯೆಗಳಿಂದ ಅರ್ಹತೆಯನ್ನು ಪಡೆಯುತ್ತವೆ. ಉದಾಹರಣೆಗೆ ಮ್ಯೂನಿಚ್ ರೆ ಸಂಸ್ಥೆಯು ಪ್ರಸಕ್ತವಾಗಿ Aa3 (as of 2004[update]) ಶ್ರೇಯಾಂಕವನ್ನು ಪಡೆದುಕೊಂಡಿದೆ. S&P ಮತ್ತು ಇತರ ಶ್ರೇಯಾಂಕ ನೀಡುವ ಸಂಸ್ಥೆಗಳು ಕೊಂಚ ವಿಭಿನ್ನ ಪದ್ಧತಿಗಳನ್ನು ಹೊಂದಿದ್ದು, ಅವು ದೊಡ್ಡಕ್ಷರಗಳು ಹಾಗೂ +/- ವಿಶೇಷಕಗಳನ್ನು ಬಳಸುತ್ತವೆ. ಶ್ರೇಯಾಂಕಗಳಲ್ಲಿನ ಒಂದು ಬದಲಾವಣೆಯು ಕಂಪನಿಯೊಂದರ ಮೇಲೆ ಬಲವಾದ ಪರಿಣಾಮವನ್ನು ಬೀರಬಲ್ಲದು. ಏಕೆಂದರೆ ಅದರ ಮರು-ಧನಸಹಾಯ ಮಾಡುವಿಕೆಯ ವೆಚ್ಚವು ಅದರ ಸಾಲಯೋಗ್ಯತೆಯನ್ನು ಅವಲಂಬಿಸಿರುತ್ತದೆ. Baa/BBB (ಮೂಡೀಸ್/S&P) ಶ್ರೇಯಾಂಕಗಳಿಗಿಂತ ಕೆಳಗಿರುವ ಬಾಂಡುಗಳು ಕಳಪೆ- ಅಥವಾ ಅತೀವ ಅಪಾಯದ ಬಾಂಡುಗಳೆಂದು ಪರಿಗಣಿಸಲ್ಪಟ್ಟಿವೆ. ಅವುಗಳ ಕರ್ತವ್ಯಲೋಪದ ಅಥವಾ ಪಾವತಿಸದಿರುವಿಕೆಯ ಅತೀವ ಅಪಾಯವು (Baಗೆ ಸಂಬಂಧಿಸಿದಂತೆ ಸರಿಸುಮಾರಾಗಿ 1.6%) ಹೆಚ್ಚಿನ ಮಟ್ಟದ ಬಡ್ಡಿ ಪಾವತಿಗಳಿಂದ ಸರಿಹೊಂದಿಸಲ್ಪಟ್ಟಿದೆ. ಕಳಪೆಯಾದ ಋಣಭಾರವು ಒಂದು ಸಾಲವಾಗಿದ್ದು, ಅದು (ಭಾಗಶಃವಾಗಿ ಅಥವಾ ಸಂಪೂರ್ಣವಾಗಿ) ಸಾಲಗ್ರಾಹಿಯಿಂದ ಪಾವತಿಸಲ್ಪಡುವುದಿಲ್ಲ. ಸಾಲಗ್ರಾಹಿಯು ತನ್ನ ಋಣಭಾರಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪವನ್ನು ಎಸಗುತ್ತಾನೆ ಎಂದು ಹೇಳಲಾಗುತ್ತದೆ. ಋಣಭಾರದ ಈ ಬಗೆಗಳು ಆಗಿಂದಾಗ್ಗೆ ಹೊಸ ರೂಪದಲ್ಲಿ ಪ್ರಸ್ತುತಪಡಿಸಲ್ಪಡುತ್ತವೆ ಮತ್ತು ಮುಖಬೆಲೆಗಿಂತ ಕೆಳಗಿನ ಬೆಲೆಗೆ ಮಾರಲ್ಪಡುತ್ತವೆ. ಕಳಪೆ ಬಾಂಡುಗಳನ್ನು ಖರೀದಿಸುವುದನ್ನು ಒಂದು ಅಪಾಯಕಾರಿ ಕ್ರಮವಾಗಿ ನೋಡಲಾಗುತ್ತದೆಯಾದರೂ, ಅದು ಸಮರ್ಥವಾಗಿ ಲಾಭದಾಯಕವಾಗಿರುವ ಹೂಡಿಕೆಯ ಒಂದು ಸ್ವರೂಪವಾಗಿದೆ.
ರದ್ದತಿ
[ಬದಲಾಯಿಸಿ]ದಿವಾಳಿತನವು ಸಾಕಷ್ಟಿಲ್ಲದ ಸಂದರ್ಭದಲ್ಲಿ, ಋಣಭಾರಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಬಿಟ್ಟುಬಿಡುವುದು ಅಪರೂಪವೆನ್ನಬಹುದು. ಕೆಲವೊಂದು ಸಂಸ್ಕೃತಿಗಳಲ್ಲಿನ ಸಂಪ್ರದಾಯಗಳು ಆಗ್ರಹಿಸುವ ಪ್ರಕಾರ, ಇದನ್ನು ಒಂದು ಕ್ರಮಬದ್ಧವಾದ (ಅನೇಕವೇಳೆ ವಾರ್ಷಿಕವಾದ) ಆಧಾರದ ಮೇಲೆ ಮಾಡಬೇಕಾಗುತ್ತದೆ. ಸಮಾಜದಲ್ಲಿನ ಗುಂಪುಗಳ ನಡುವೆ ಸಂಪೂರ್ಣವಾಗಿ ವ್ಯಾಪಿಸಿರುವ ಪಕ್ಷಪಾತಗಳನ್ನು ತಡೆಯುವ ದೃಷ್ಟಿಯಿಂದ, ಅಥವಾ ಋಣಭಾರ ಮತ್ತು ನಿರ್ಬಂಧಿಸುವಿಕೆಯ ಮರುಪಾವತಿಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಾರಾದರೊಬ್ಬರು ಓರ್ವ ವಿಶೇಷಜ್ಞರಾಗುವುದನ್ನು ತಡೆಯುವ ದೃಷ್ಟಿಯಿಂದ ಈ ಕ್ರಮವು ಅಗತ್ಯವಾಗಿರುತ್ತದೆ - ನೋಡಿ: ಋಣಭಾರ ಪರಿಹಾರ. ಲಿವಿಟಿಕಲ್ ತತ್ತ್ವಗಳ ಪುಸ್ತಕದಲ್ಲಿ ವಿವರಿಸಲಾಗಿರುವ ಬೈಬಲಿಗೆ ಸಂಬಂಧಿಸಿದ ಬಂಧವಿಮೋಚನ ವರ್ಷವು ಇದಕ್ಕೊಂದು ಉದಾಹರಣೆಯಾಗಿದೆ. ಇಂಗ್ಲಿಷ್ ಕಾನೂನಿನ ಅಡಿಯಲ್ಲಿ, ಸಾಲದಾತನು ಋಣಭಾರವನ್ನು ಬಿಟ್ಟುಬಿಡುವಂತೆ ಮೋಸಗೊಳಿಸಲ್ಪಟ್ಟಾಗ, ಇದೊಂದು ಅಪರಾಧವಾಗುತ್ತದೆ. ನೋಡಿ: ಕಳ್ಳತನದ ಕಾಯಿದೆ 1978. ಅಂತರರಾಷ್ಟ್ರೀಯ ಮೂರನೇ ವಿಶ್ವದ ಋಣಭಾರವು ತಲುಪಿರುವ ಮಾನದಂಡದ ಪ್ರಕಾರ, ಅಭಿವೃದ್ಧಿಶೀಲ ರಾಷ್ಟ್ರಗಳ ಜೊತೆಗಿನ ಸಂಬಂಧಗಳಲ್ಲಿ ಜಾಗತಿಕ ಇಕ್ವಿಟಿಯನ್ನು ಮರುಸ್ಥಾಪನೆ ಮಾಡಲು ಋಣಭಾರ ರದ್ದತಿಯು ಏಕೈಕ ಮಾರ್ಗವಾಗಿದೆ ಎಂಬುದು ಅನೇಕ ಅರ್ಥಶಾಸ್ತ್ರಜ್ಞರಿಗೆ ಮನವರಿಕೆಯಾಗಿದೆ.
ಋಣಭಾರದ ಪರಿಣಾಮಗಳು
[ಬದಲಾಯಿಸಿ]ಜನರು ಮತ್ತು ಸಂಘಟನೆಗಳು ಅನ್ಯಥಾ ಮಾಡಲು ಅಶಕ್ಯವಾದ ಕೆಲಸಗಳನ್ನು ಮಾಡಲು, ಅಥವಾ ಹಾಗೆ ಮಾಡಲು ಅವಕಾಶವಿಲ್ಲದ್ದನ್ನು ಮಾಡಲು ಋಣಭಾರವು ಅನುವುಮಾಡಿಕೊಡುತ್ತದೆ. ಸಾಮಾನ್ಯವಾಗಿ, ಕೈಗಾರಿಕೀಕರಣಕ್ಕೆ ಒಳಗಾದ ರಾಷ್ಟ್ರಗಳಲ್ಲಿನ ಜನರು ಮನೆಗಳು, ಕಾರುಗಳನ್ನು ಖರೀದಿಸಲು ಹಾಗೂ ಕೈಯಲ್ಲಿರುವ ನಗದಿನಿಂದ ಖರೀದಿಸಲು ತುಂಬಾ ದುಬಾರಿಯಾಗಿರುವ ಇತರ ಅನೇಕ ವಸ್ತುಗಳನ್ನು ಖರೀದಿಸಲು ಇದನ್ನು ಬಳಸಿಕೊಳ್ಳುತ್ತಾರೆ. ಕಂಪನಿಗಳು ತಮ್ಮ ಇಕ್ವಿಟಿಯ ಮೇಲಿನ ಪ್ರತಿಫಲವನ್ನು "ಹತೋಟಿಯಲ್ಲಿಟ್ಟುಕೊಳ್ಳುವ" ಮೂಲಕ, ತಮ್ಮ ಆಸ್ತಿಪಾಸ್ತಿಗಳಲ್ಲಿ ಮಾಡಿರುವ ಹೂಡಿಕೆಯ ಮೇಲೆ ಹತೋಟಿ ಹೊಂದಲೂ ಸಹ ಋಣಭಾರವನ್ನು ಬಳಕೆಮಾಡಿಕೊಳ್ಳುತ್ತವೆ. ಈ ಹತೋಟಿ ಕ್ರಮವು ಋಣಭಾರದಿಂದ ಇಕ್ವಿಟಿಗಿರುವ ಅನುಪಾತವಾಗಿದ್ದು, ಹೂಡಿಕೆಯೊಂದರ ಅಪಾಯ ಸಂಭವನೀಯತೆಯನ್ನು ನಿರ್ಣಯಿಸುವಲ್ಲಿ ಅದು ಮುಖ್ಯವೆಂದು ಪರಿಗಣಿಸಲ್ಪಡುತ್ತದೆ; ತಲಾ ಇಕ್ವಿಟಿಗೆ ಋಣಭಾರ ಹೆಚ್ಚಾದಷ್ಟೂ, ಅದು ಅಪಾಯಕರವಾಗಿರುತ್ತದೆ. ಕಂಪನಿಗಳು ಮತ್ತು ವ್ಯಕ್ತಿಗಳಿಬ್ಬರಿಗೂ, ಈ ಹೆಚ್ಚಳಗೊಂಡ ಅಪಾಯವು ಕಳಪೆ ಫಲಿತಾಂಶಗಳನ್ನು ತಂದೊಡ್ಡಬಹುದು. ಏಕೆಂದರೆ, ಬಾಹ್ಯ ವಿದ್ಯಮಾನಗಳು (ಆದಾಯ ನಷ್ಟ) ಅಥವಾ ಆಂತರಿಕ ತೊಡಕುಗಳ (ಸಂಪನ್ಮೂಲಗಳ ಕಳಪೆ ನಿರ್ವಹಣೆ) ಕಾರಣದಿಂದಾಗಿ ಋಣಭಾರಗಳಿಗೆ ಬಡ್ಡಿಕಟ್ಟುವಲ್ಲಿನ ವೆಚ್ಚವು ಪಾವತಿಸುವ ಸಾಮರ್ಥ್ಯದಿಂದಾಚೆಗೆ ಬೆಳೆಯಬಲ್ಲುದಾಗಿರುತ್ತದೆ. ಋಣಭಾರದ ಒಟ್ಟುಗೂಡಿಸುವಿಕೆಯಲ್ಲಿನ ಹೆಚ್ಚುವರಿಗಳು ಆರ್ಥಿಕ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತವೆ ಎಂಬ ಆರೋಪಕ್ಕೆ ಒಳಗಾಗುತ್ತಾ ಬಂದಿವೆ.[೩] ಉದಾಹರಣೆಗೆ, ಮಹಾನ್ ಆರ್ಥಿಕ ಕುಸಿತ ಆರಂಭಕ್ಕೆ ಪೂರ್ವಭಾವಿಯಾಗಿ ಋಣಭಾರ/GDP ಅನುಪಾತವು ಅತ್ಯಂತ ಹೆಚ್ಚಿನ ಮಟ್ಟದಲ್ಲಿತ್ತು. ಆರ್ಥಿಕ ಮಧ್ಯವರ್ತಿಗಳು ಅತೀವವಾಗಿ ಉಪಕೃತರಾದರು. ಭವಿಷ್ಯದ ಪ್ರತಿಫಲಗಳ ಮೇಲಿನ ಹೆಚ್ಚುವರಿ ನಿರೀಕ್ಷೆಗಳಿಗೆ ಸಮಾನವಾಗಿರುವ ಈ ಋಣಭಾರದ ಹೆಚ್ಚುವರಿಯು, ಮೂಲದಾಸ್ತಾನು ಮಾರುಕಟ್ಟೆಗಳಲ್ಲಿನ ಕನಸಾದ ಆಸ್ತಿಪಾಸ್ತಿಯ ಪ್ರಯತ್ನಗಳನ್ನು ಜೊತೆಗೂಡಿಸಿಕೊಂಡಿತು. ನಿರೀಕ್ಷೆಗಳು ಸರಿಪಡಿಸಲ್ಪಟ್ಟಾಗ, ಹಣದುಬ್ಬರವಿಳಿತ ಮತ್ತು ಒಂದು ಸಾಲದ ಮೊರೆತವು ಅನುಸರಿಸಿತು. ಹಣದುಬ್ಬರವಿಳಿತವು ಋಣಭಾರವನ್ನು ಪರಿಣಾಮಕಾರಿಯಾಗಿ ಹೆಚ್ಚು ದುಬಾರಿಯನ್ನಾಗಿಸಿತು ಮತ್ತು ಫಿಷರ್ ವಿವರಿಸಿದಂತೆ, ಇದು ಹಣದುಬ್ಬರವಿಳಿತವನ್ನು ಮತ್ತೊಮ್ಮೆ ಬಲವರ್ಧನೆ ಮಾಡಿತು. ಏಕೆಂದರೆ, ಆರ್ಥಿಕ ಮಧ್ಯವರ್ತಿಗಳು ತಮ್ಮ ಋಣಭಾರ ಮಟ್ಟವನ್ನು ತಗ್ಗಿಸುವ ದೃಷ್ಟಿಯಿಂದ ತಮ್ಮ ಬಳಕೆ ಮತ್ತು ಹೂಡಿಕೆಯನ್ನು ತಗ್ಗಿಸಿದರು. ಬೇಡಿಕೆಯಲ್ಲಿನ ತಗ್ಗಿಸುವಿಕೆಯು ವ್ಯವಹಾರ ಚಟುವಟಿಕೆಯನ್ನು ತಗ್ಗಿಸಿತು ಮತ್ತು ಮತ್ತಷ್ಟು ನಿರುದ್ಯೋಗವನ್ನು ಉಂಟುಮಾಡಿತು. ಒಂದು ಹೆಚ್ಚು ನೇರವಾದ ಅರ್ಥದಲ್ಲಿ ಹೇಳುವುದಾದರೆ, ಹಣದುಬ್ಬರವಿಳಿತದ ಕಾರಣದಿಂದ ಉಂಟಾದ ಋಣಭಾರ ವೆಚ್ಚ ಮತ್ತು ತಗ್ಗಿಸಿದ ಬೇಡಿಕೆಗಳೆರಡರಿಂದಲೂ ಸಹ ಹೆಚ್ಚಿನ ದಿವಾಳಿತನಗಳು ಕಂಡುಬಂದವು. ದಿವಾಳಿತನದಲ್ಲಿ ಪರ್ಯವಸಾನಗೊಳ್ಳದ ಎರವಲು ತೆಗೆದುಕೊಳ್ಳುವಿಕೆ ಮತ್ತು ಮರುಪಾವತಿಯ ವ್ಯವಸ್ಥೆಗಳ ಪರ್ಯಾಯ ಬಗೆಗಳ ಒಳಗೆ ಪ್ರವೇಶಿಸಲು ಕೆಲವೊಂದು ಸಂಘಟನೆಗಳಿಗೆ ಸಾಧ್ಯವಿದೆ. ಉದಾಹರಣೆಗೆ, ಕಂಪನಿಗಳು ತಮ್ಮಲ್ಲಿಯೇ ಇರುವ ಇಕ್ವಿಟಿಗಳಿಗೆ ಸಲ್ಲಿಸಬೇಕಾಗಿರುವ ಋಣಭಾರವನ್ನು ಕೆಲವೊಮ್ಮೆ ಪರಿವರ್ತಿಸಬಲ್ಲವಾಗಿರುತ್ತವೆ. ಇಂಥ ಸನ್ನಿವೇಶಗಳಲ್ಲಿ, ಎರವಲುಗಾರನ ಲಾಭಾಂಶಗಳು ಮತ್ತು ಬಂಡವಾಳ ಗಳಿಕೆಗಳ ಸ್ವರೂಪದಲ್ಲಿ ಋಣಭಾರ ಮತ್ತು ಬಡ್ಡಿಗೆ ಸಮಾನವಾದುದಾಗಿರುವ ಮತ್ತೇನನ್ನೋ ಮರುಗಳಿಸಲು ಸಾಲದಾತನು ಆಶಿಸುತ್ತಾನೆ. ಆದ್ದರಿಂದ "ಮರುಪಾವತಿಗಳು" ಎರವಲುಗಾರ ಏನನ್ನು ಗಳಿಸುತ್ತಾನೋ ಅದಕ್ಕೆ ಅನುಗುಣವಾಗಿರುತ್ತವೆ ಮತ್ತು ಈ ಕಾರಣದಿಂದಾಗಿ ಸ್ವತಃ ತಮ್ಮಲ್ಲೇ ದಿವಾಳಿತನವನ್ನು ಉಂಟುಮಾಡಲು ಅವಕ್ಕೆ ಸಾಧ್ಯವಾಗುವುದಿಲ್ಲ. ಒಮ್ಮೆಗೆ ಋಣಭಾರವು ಈ ವಿಧಾನದಲ್ಲಿ ಪರಿವರ್ತಿಸಲ್ಪಟ್ಟರೆ, ಅದು ಮತ್ತೆಂದೂ ಋಣಭಾರ ಎಂದು ಕರೆಸಿಕೊಳ್ಳುವುದಿಲ್ಲ.
ಋಣಭಾರದ ವಿರುದ್ಧದ ಚರ್ಚೆಗಳು
[ಬದಲಾಯಿಸಿ]ಕೆಲವೊಬ್ಬರು ಋಣಭಾರದ ವಿರುದ್ಧವಾಗಿ ವಾದಿಸುವ ಪ್ರಕಾರ, ಅದು ಒಂದು ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ಸಾಂಸ್ಥಿಕ ಮತ್ತು ಸರ್ಕಾರದ ಮಟ್ಟದ ಮೇಲಿನ ಒಂದು ಸಾಧನ ಹಾಗೂ ಸಂಸ್ಥೆಯಾಗಿದೆ.
ಬಡ್ಡಿಯೊಂದಿಗಿನ ಸಾಲಕೊಡುವಿಕೆಯನ್ನು ಇಸ್ಲಾಂ ಧರ್ಮವು ಇಂದಿಗೂ ಸಹ ನಿಷೇಧಿಸಿದರೆ, ಕ್ಯಾಥಲಿಕ್ ಚರ್ಚು ಇದಕ್ಕೆ 1822ರ ನಂತರದಲ್ಲಿ ಅವಕಾಶ ನೀಡಿತು, ಮತ್ತು ಯೆಹೂದ್ಯ ಧರ್ಮಶಾಸ್ತ್ರವು ತಿಳಿಸುವ ಪ್ರಕಾರ ಪ್ರತಿ 7 ವರ್ಷಗಳಿಗೊಮ್ಮೆ ಮತ್ತು ಪ್ರತಿ 50 ವರ್ಷಗಳಿಗೊಮ್ಮೆ ಎಲ್ಲಾ ಋಣಭಾರಗಳನ್ನು ಅಳಿಸಿಹಾಕಬೇಕು (ಲಿವಿಟಿಕಲ್ ತತ್ತ್ವಗಳ ಪುಸ್ತಕದಲ್ಲಿ ವಿವರಿಸಲ್ಪಟ್ಟಿರುವಂತೆ ಬಂಧವಿಮೋಚನ ವರ್ಷದಲ್ಲಿ).
ಋಣಭಾರವು ಬಡ್ಡಿಯ ಮೂಲಕ ಬೆಳೆಯುವುದಕ್ಕಿಂತ ವೇಗವಾಗಿ ಅದನ್ನು ಮರುಪಾವತಿಸದಿದ್ದಲ್ಲಿ, ಅದು ಸಮಯದ ಮೂಲಕ ಸಾಗುತ್ತಾ ಹೆಚ್ಚಾಗುತ್ತಾ ಹೋಗುತ್ತದೆ. ಈ ಪರಿಣಾಮವನ್ನು ದುಬಾರಿ ಬಡ್ಡಿ ಎಂದು ಹೆಸರಿಸಬಹುದು. ಇತರ ಸಂದರ್ಭಗಳಲ್ಲಿ "ದುಬಾರಿ ಬಡ್ಡಿ" ಎಂಬ ಪದವು ಬಡ್ಡಿಯ ಒಂದು ಹೆಚ್ಚುವರಿ ದರಕ್ಕೆ ಉಲ್ಲೇಖಿಸಲ್ಪಡುತ್ತದೆ. ಇದು ಸ್ವೀಕರಿಸಲಾದ ಅಪಾಯಕ್ಕೆ ಸಂಬಂಧಿಸಿದ ಒಂದು ನ್ಯಾಯಸಮ್ಮತವಾದ ಲಾಭದ ಹೆಚ್ಚುವರಿಯಾಗಿರುತ್ತದೆ. ಅಂತರರಾಷ್ಟ್ರೀಯ ಶಾಸನಬದ್ಧ ಚಿಂತನೆಯಲ್ಲಿ, ಜುಗುಪ್ಸೆ ಉಂಟುಮಾಡುವ ಋಣಭಾರ ಎಂಬುದು ರಾಜ್ಯದ ಹಿತಾಸಕ್ತಿಯನ್ನು ಈಡೇರಿಸದ ಉದ್ದೇಶಗಳಿಗೆ ಸಂಬಂಧಿಸಿದ ಒಂದು ಪ್ರಚಲಿತ ಪದ್ಧತಿಯಿಂದ ಮೇಲೆ ಎಳೆದುಕೊಳ್ಳಲ್ಪಟ್ಟ ಋಣಭಾರವಾಗಿದೆ. ಇಂಥ ಋಣಭಾರಗಳನ್ನು ಈ ಸಿದ್ಧಾಂತವು, ಅವುಗಳನ್ನು ಈಡುಮಾಡಿದ ಪ್ರಚಲಿತ ಪದ್ಧತಿಯ ವೈಯಕ್ತಿಕ ಋಣಭಾರಗಳೆಂದು ಪರಿಗಣಿಸುತ್ತದೆ ಮತ್ತು ಅವು ರಾಜ್ಯದ ಋಣಭಾರಗಳಾಗಿರುವುದಿಲ್ಲ. ಹೆಚ್ಚಿನ ಬಡ್ಡಿ ದರಗಳನ್ನು ಹೊಂದಿರುವ ಆರ್ಥಿಕತೆಯೊಂದರಲ್ಲಿ, ಇಕ್ವಿಟಿ ಹೂಡಿಕೆಯ ಮೇಲಿನ ಹೆಚ್ಚು ಹೊಂದಿಕೊಳ್ಳುವ ಲಾಭಾಂಶಗಳಿಗಿಂತ ಋಣಭಾರವು ಒಂದು ವ್ಯವಹಾರಕ್ಕೆ ಹೆಚ್ಚು ದುಬಾರಿಯಾಗಿರುತ್ತದೆ. ಒಂದು ವೇಳೆ ಸನ್ನಿವೇಶಗಳು ಕಷ್ಟಕರವಾಗಿದ್ದಲ್ಲಿ ಒಂದು ಲಾಭಾಂಶದ ಪಾವತಿಯನ್ನು ತಪ್ಪಿಸಲು ಸಾಧ್ಯವಾಗುವುದರಿಂದ, ಪ್ರಯಾಸಪಡುತ್ತಿರುವ ವ್ಯವಹಾರದ ಅಸ್ತಿತ್ವವೊಂದಕ್ಕೆ ಇಕ್ವಿಟಿ ಹೂಡಿಕೆಯ ಮೂಲಕ ಹಣವೊದಗಿಸುವುದು ಸುಲಭವಾಗಿ ಕಂಡುಬರಬಹುದು.
ಮಟ್ಟಗಳು ಮತ್ತು ಹರಿವುಗಳು
[ಬದಲಾಯಿಸಿ]ಜಾಗತಿಕ ಋಣಭಾರದ ಹೊಣೆಹೊತ್ತು ಬರೆದುಕೊಡುವಿಕೆಯು ವರ್ಷದಿಂದ ವರ್ಷಕ್ಕೆ 4.3%ನಷ್ಟು ಪ್ರಮಾಣದಲ್ಲಿ ಬೆಳೆದು, 2004ರ ಅವಧಿಯಲ್ಲಿ 5.19 ಲಕ್ಷ ಕೋಟಿ $ನಷ್ಟು ಪ್ರಮಾಣಕ್ಕೆ ಮುಟ್ಟಿತು. ಒಂದು ವೇಳೆ ವಿಶ್ವಾದ್ಯಂತವಿರುವ ದಶಲಕ್ಷಗಟ್ಟಲೆ ಜನರ ಖರ್ಚುಮಾಡುವಿಕೆಯ ಅಭ್ಯಾಸಗಳು ಅವರು ಮಾಡುತ್ತಿರುವ ರೀತಿಯಲ್ಲಿಯೇ ಮುಂದುವರಿದಲ್ಲಿ, ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಏರಬಹುದು ಎಂದು ನಿರೀಕ್ಷಿಸಲಾಗಿದೆ.
ಇವನ್ನೂ ನೋಡಿ
[ಬದಲಾಯಿಸಿ]- ಉತ್ಪನ್ನ (ಹಣಕಾಸು)
- ಋಣಭಾರ ನಿರ್ಬಂಧ
- ಸಾಲಗ್ರಾಹಿಗಳ ಸೆರೆಮನೆ
- ಹಣಕಾಸು ಮಾರುಕಟ್ಟೆಗಳು
- ಹಣಕಾಸಿನ ವಿಷಯಗಳ ಪಟ್ಟಿ
- ಹಣಕಾಸಿನದಲ್ಲದ ಋಣಭಾರ
- ಜುಗುಪ್ಸೆ ಉಂಟುಮಾಡುವ ಋಣಭಾರ
- ಒತ್ತಾಯಕ್ಕೆ ಒಳಗಾದ ಋಣಭಾರ
- ಆವರ್ತಿಸುವ ಖಾತೆ
- ಉಳಿತಾಯ
- ಇಕ್ವಿಟಿ
- ಹಣದ ಕಾಲಮೌಲ್ಯ
- ಥಾಮ್ಸನ್ ಹಣಕಾಸಿನ ಒಕ್ಕೂಟದ ಕೋಷ್ಟಕಗಳು
ಆಕರಗಳು
[ಬದಲಾಯಿಸಿ]- ↑ ಜೋಸೆಫ್ ಸ್ವಾನ್ಸನ್ ಮತ್ತು ಪೀಟರ್ ಮಾರ್ಷಲ್, ಹೌಲಿಹಾನ್ ಲೋಕೆ ಮತ್ತು ಲಿಂಡನ್ ನೋರ್ಲೆ, ಕಿರ್ಕ್‌ಲ್ಯಾಂಡ್ & ಎಲ್ಲಿಸ್ ಇಂಟರ್‌ನ್ಯಾಷನಲ್ LLP (2008). ಎ ಪ್ರಾಕ್ಟೀಷನರ್'ಸ್ ಗೈಡ್ ಟು ಕಾರ್ಪೊರೇಟ್ ರೀಸ್ಟ್ರಕ್ಚರಿಂಗ್, ಪುಟ 5. ಸಿಟಿ & ಫೈನಾನ್ಷಿಯಲ್ ಪಬ್ಲಿಷಿಂಗ್, 1ನೇ ಆವೃತ್ತಿ ISBN 9781905121311
- ↑ ಔಪಚಾರಿಕವಾಗಿ, d %ನಷ್ಟು ಹುಂಡಿವಟ್ಟವು ನಷ್ಟು ಪರಿಣಾಮಕ ಬಡ್ಡಿಯನ್ನು ಉಂಟುಮಾಡುತ್ತದೆ.
- ↑ 5 Ways to Get Out of Debt Faster. Kiplinger. 2007. Archived from the original on 2008-09-15. Retrieved 2010-06-15.
{{cite AV media}}
: Text "internet video" ignored (help); Text "medium" ignored (help)
- Pages using the JsonConfig extension
- CS1 errors: unrecognized parameter
- Pages using ISBN magic links
- Articles needing additional references from January 2009
- All articles needing additional references
- Articles with hatnote templates targeting a nonexistent page
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- Articles containing potentially dated statements from 2004
- All articles containing potentially dated statements
- ಸಾಲ
- ಋಣಭಾರ
- ಆಚಾರಸೂತ್ರಗಳಲ್ಲಿನ ಪ್ರಮುಖ ವಿವಾದಾಂಶಗಳು
- ವೈಯುಕ್ತಿಕ ಹಣಕಾಸಿನ ಸಮಸ್ಯೆಗಳು