ಉಷ್ಟ್ರ ಪಕ್ಷಿ
Ostrich | |||||
---|---|---|---|---|---|
![]() | |||||
Ostrich male (left) and females | |||||
Conservation status | |||||
Egg fossil classification | |||||
Kingdom: | |||||
Phylum: | Chordata
| ||||
Subphylum: | |||||
Class: | |||||
Superorder: | |||||
Order: | |||||
Family: | |||||
Genus: | |||||
Species: | S. camelus
| ||||
Binomial nomenclature | |||||
Struthio camelus | |||||
Subspecies | |||||
S. c. camelus Linnaeus, 1758 | |||||
![]() | |||||
Struthio camelus distribution map
|
ಉಷ್ಟ್ರ ಪಕ್ಷಿ ಹಾರಾಡಲು ಆಗದಂತಹ ಒಂದು ಪಕ್ಷಿ. ಬದುಕಿರುವ ಅತಿ ದೊಡ್ಡ ಪಕ್ಷಿ, ಇದು ಸ್ಟ್ರುತಿಯೊ ಕ್ಯಾಮಲಸ್ ಎಂಬ ಪ್ರಬೇಧಕ್ಕೆ ಸೇರಿದೆ. ಇದನ್ನು ಇಂಗ್ಲಿಷ್ ನಲ್ಲಿ ಆಸ್ಟ್ರಿಚ್ ಎನ್ನುತ್ತಾರೆ. ಸೊಮಾಲಿ ಉಷ್ಟ್ರ ಪಕ್ಷಿ ಇತರ ಉಷ್ಟ್ರ ಪಕ್ಷಿಗಿಂತ ಬೇರೆ ಜಾತಿಯೆ ಅಥವಾ ಬೇರೆ ಪ್ರಬೇಧವೆ ಎಂಬ ಚರ್ಚೆ ತಜ್ಞರಲ್ಲಿ ನೆಡೆಯುತ್ತಿದೆ.
ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]
ಈ ಹಕ್ಕಿಸ್ಟ್ರುತಿನಿಫ಼ೊರ್ಮಸ್ struthiniformes ಎಂಬ ಮುಖ್ಯ ಜಾತಿಯಡಿ ಬರುತ್ತದೆ. ಈ ವಿಂಗಡಣೆಯಲ್ಲಿ ಬರುವ ಇನ್ನಿತರ ಹಕ್ಕಿ ಗಳೆಂದರೆ, ಕಿವಿ (kiwi), ಏಮು (emu), ರಿಯಾ( rheas), ಕಾಸೊವಾರಿ ( cassowaries).ನಿಯರ್ನಿತಿಸ್ ಉಪವರ್ಗದ ಈ ಪ್ರಾಣಿಯ ಶಾಸ್ತ್ರನಾಮ ಸ್ಟ್ರುಥಿಯೋ ಕ್ಯಾಮೆಲಸ್.
ಭೌಗೋಳಿಕ ಹರಡುವಿಕೆ[ಬದಲಾಯಿಸಿ]
ವಾಸಸ್ಥಳ ಸಾಮಾನ್ಯವಾಗಿ ಅರೇಬಿಯ ಮತ್ತು ಆಫ್ರಿಕ ದೇಶಗಳ ಮರಳು ಕಾಡುಗಳು.ದಕ್ಷಿಣ ಅಮೆರಿಕ ಖಂಡದಲ್ಲಿ ರ್ಹಿಯ ಅಮೆರಿಕಾನ ಪ್ರಭೇದದ ಹುಲ್ಲಿಗಾವಲುಗಳಲ್ಲಿ ವಾಸಿಸುತ್ತವೆ. ದಕ್ಷಿಣ ಆಫ್ರಿಕ ಮತ್ತು ಕ್ಯಾಲಿಫೋರ್ನಿಯಗಳಲ್ಲಿ ಉಷ್ಟ್ರಪಕ್ಷಿಗಳನ್ನು ಕಾಣಬಹುದು.
ಲಕ್ಷಣಗಳು[ಬದಲಾಯಿಸಿ]
ಗಂಡು ಸುಮಾರು 8' ಎತ್ತರವೂ 150 ಕೆಜಿ ಪೌಂಡ್ ತೂಕವೂ ಇರುತ್ತದೆ. ಹೆಣ್ಣು ಸ್ವಲ್ಪ ಕಿರಿಯದು. ಹಾರಲಾಗದ ಪಕ್ಷಿ ಇದು. ಆದರೆ ಬಲು ವೇಗವಾಗಿ ಓಡಬಲ್ಲುದು. ಉಷ್ಟ್ರಪಕ್ಷಿಯ ರೆಕ್ಕೆಗಳಲ್ಲಿ ಹಲವು ಟೊಳ್ಳುಕಾಂಡದ ದಪ್ಪಗರಿಗಳಿವೆ. ತಲೆ ಸಣ್ಣದು. ಕತ್ತು ಉದ್ದ, ಎರಡರ ಮೇಲೂ ಗರಿಗಳ ಹೊದಿಕೆಯಿಲ್ಲ. ಅಗಲವಾದ ಚಪ್ಪಟೆಯದ ಕೊಕ್ಕು. ಕಾಲುಗಳು ಉದ್ದ, ಬಲವಾಗಿವೆ. ಇವಕ್ಕೂ ಗರಿಗಳ ಹೊದಿಕೆಯಿಲ್ಲ. ಅಗಲವಾದ ಚಪ್ಪಟೆಯಾದ ಕೊಕ್ಕು. ಕಾಲುಗಳು ಉದ್ದ, ಬಲವಾಗಿವೆ. ಇವಕ್ಕೂ ಗರಿಗಳ ಹೊದಿಕೆಯಿಲ್ಲ. ಎರಡು ಕಾಲುಬೆರಳುಗಳು ಮಾತ್ರ ಇವೆ. ಕೆಳಭಾಗದಲ್ಲಿ ಮೆತ್ತೆ ಇದೆ. ಒಂದು ಕಾಲುಬೆರಳು ಮತ್ತೊಂದಕ್ಕಿಂತ ಉದ್ದವಾಗಿದೆ. ಇವನ್ನು ಸರ್ವಭಕ್ಷಕಗಳೆಂದು ಕರೆದರೂ ತಿನ್ನುವುದು ಸಾಮಾನ್ಯವಾಗಿ ಗಿಡಗಂಟೆಗಳನ್ನೇ. ಬಹುಪತ್ನಿತ್ವ ಹೆಚ್ಚು. ಅನೇಕ ಹೆಣ್ಣುಗಳು ಒಂದು ಗಂಡು ಇರುವ ಗುಂಪುಗಳಲ್ಲಿ ವಾಸಿಸುವುದು ಪದ್ಧತಿ. ಸಾಮಾನ್ಯವಾಗಿ ಒಂದು ಹೆಣ್ಣು ಹಕ್ಕಿ ಒಂದು ಸಲಕ್ಕೆ ಒಂದು ಮೊಟ್ಟೆ ಇಡುತ್ತದೆ. ಇದನ್ನು ಗಂಡು ಮೊದಲೇ ತೋಡಿದ ಬಿಲಗಳಲ್ಲಿ ಅಡಗಿಸುತ್ತದೆ. ಮೊಟ್ಟೆಗಳಿಗೆ ಕಾವುಕೊಟ್ಟು ಕಾಪಾಡುವ ಕೆಲಸವನ್ನು ಎರಡೂ ಹಕ್ಕಿಗಳು ನಿರ್ವಹಿಸುತ್ತವೆ. ಮರಿ ಹುಟ್ಟಿದಾಗಲೇ ಅದಕ್ಕೆ ಗರಿಗಳ ಹೊದಿಕೆ ಇರುತ್ತದೆ. ಅದು ಸ್ವತಂತ್ರವಾಗಿ ತಿರುಗಾಡಿ ತಾಯಿತಂದೆಗಳ ಸಹಾಯವಿಲ್ಲದೆ ಆಹಾರವನ್ನು ಹುಡುಕಿಕೊಳ್ಳಬಲ್ಲುದು. ಗಂಡು ಹಕ್ಕಿಗಳಿಗೆ ಮಾಂಸಯುತವಾದ ಶಿಶ್ನವಿದೆ. ಹಾಗೆ ಹೆಣ್ಣುಹಕ್ಕಿಗಳಲ್ಲಿ ಹೆಂಬುಲ್ಲ(ಕ್ಲಿಟೋರಿಸ್) ಉಂಟು. ಇವು ವಿಕಾಸದಲ್ಲಿ ಮೀಸೊಜೋಯಿಕ್ ಯುಗದ ಅಂತ್ಯದಲ್ಲಿ ಕಾಣಿಸಿಕೊಂಡವು. ಇದರ ಕಾಲುಗಳು ಮತ್ತು ಕತ್ತು ನೀಳವಾಗಿದ್ದು ಗಂಟೆಗೆ ೭೦ ಕಿಲೊಮಿಟರ್ ವೇಗದಲ್ಲಿ ಓಡ ಬಲ್ಲದು[೨]. ಈಗ ಜೇವಂತ ಇರುವ ಪಕ್ಷಿಗಳ ಪೈಕಿ ಅತಿ ಭಾರಿ ಗಾತ್ರದ ಮೊಟ್ಟೆ ಇಡುವ ಹಕ್ಕಿ ಆಗಿದೆ. ಇದು ಮುಖ್ಯವಾಗಿ ಸಸ್ಯಹಾರಿಯಗಿದ್ದುರು ಕೆಲವು ಬೆನ್ನುಮೂಳೆ ಇಲ್ಲದ ಕೀಟಗಳನ್ನು ತಿನ್ನುತ್ತದೆ. ಇವುಗಳು ೫-೫೦ ಸಂಖ್ಯೆ ಇರುವ ತಂಡದಲ್ಲಿ ವಾಸಿಸುತದೆ. ತಮಗೆ ಅಪಾಯ ಮೂಡಿದಾಗ ಬಲಾವಾಗೆ ಎದುರಾಳಿಗೆ ಓದೆಯುತ್ತದೆ. ಇತರೆ ಅಪಾಯಕಾರಿ ಸಮಯದಲ್ಲಿ ಇವು ಓಡಿ ಹೊಗುತ್ತದೆ ಅಥವಾ ಬಗ್ಗಿ ಪೋದೆಗಳ ನಡುವೆ ಅವಿತು ಕೋಳ್ಳುತ್ತವೆ.
ಸಾಕಣೆ[ಬದಲಾಯಿಸಿ]
ಇವುಗಳನ್ನು ಪುಕ್ಕಕಾಗಿ ಅಥವಾ ಮಾಂಸಕಾಗಿ ಸಾಕುತ್ತಾರೆ. ಗರಿಗಳನ್ನು ಅಲಂಕಾರಕ್ಕೆ ಉಪಯೋಗಿಸುತ್ತಾರೆ.
ಉಲ್ಲೇಖಗಳು[ಬದಲಾಯಿಸಿ]
- ↑ BirdLife International (2012). "Struthio camelus". IUCN Red List of Threatened Species. Version 2013.2. International Union for Conservation of Nature. Retrieved 17 November 2015.CS1 maint: ref=harv (link)
- ↑ Davies, S.J.J.F. "Birds I Tinamous and Ratites to Hoatzins". Farmington Hills, MI: Gale Group. pp. 99–101. ISBN 0-7876-5784-0. Check
|isbn=
value: invalid character (help).
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
![]() |
Wikimedia Commons has media related to: |