ಇನೋಸಿಟಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇನೋಸಿಟಾಲ್ - ಶರೀರದಲ್ಲಿ ಉತ್ಪತ್ತಿಯಾಗಿ, ದೇಹದ ಬೆಳೆವಣಿಗೆಗೆ ಅತ್ಯಾವಶ್ಯಕವಾಗಿರುವ, ಸಕ್ಕರೆಗಳಿಗೆ ಸಂಬಂಧಿಸಿದ ಇದನ್ನು ಬಿ-ಕಾಂಪ್ಲೆಕ್ಸ್ ಗುಂಪಿಗೆ ಸೇರಿದ ಜೀವಾತು ಎಂದು ಪರಿಗಣಿಸಿದೆ. ಪ್ರಾಣಿಗಳಲ್ಲಿ ಕೂದಲು ಉದುರುವುದನ್ನು ತಡೆಹಿಡಿಯುವ ಮತ್ತು ಚರ್ಮರೋಗನಿವಾರಣೆ ಮಾಡುವ ಜೀವಾತು ಇದೇ. ಹೆಕ್ಸ್‍ಹೈಡ್ರೋಸೈಕ್ಲೊಹೆಕ್ಸೇನಿನ ಒಂಬತ್ತು ಸ್ಟೀರಿಯೋ ಸಮಘಟಕಗಳಲ್ಲಿ (ಐಸೊಮರ್ಸ್) ಒಂದು ಮಾತ್ರ ಜೀವಿತ ಪ್ರಾಮುಖ್ಯ ಪಡೆದಿದೆ. ಅದನ್ನು ಇನೋಸಿಟಾಲ್ ಅಥವಾ ಮೈಯೊಇನೊಸಿಟಾಲ್ ಎನ್ನುತ್ತಾರೆ. ಶರೀರದ ಮಾಂಸಖಂಡಗಳಿಂದ ಉತ್ಪತ್ತಿಯಾಗುವ ಕೆಲವು ರಸಗಳಲ್ಲಿ ಇನೋಸಿಟಾಲ್ ಎನ್ನುತ್ತಾರೆ. ಶರೀರದ ಮಾಂಸಖಂಡಗಳಿಂದ ಉತ್ಪತ್ತಿಯಾಗುವ ಕೆಲವು ರಸಗಳಲ್ಲಿ ಇನೋಸಿಟಾಲ್ ಇದೆ. ಮಾನವನ ಮಿದುಳಿನಲ್ಲಿ ಮಿದುಳುಬಳ್ಳಿಯಲ್ಲಿ ಇದು ಲೈಪೊಸಿಟಾಲ್ ಎಂಬ ರಂಜಕವುಳ್ಳ ಪದಾರ್ಥರೂಪದಲ್ಲಿದೆ. ಕೆಂಪುರಕ್ತಕಣಗಳುಳ್ಳ ಕೋಶಗಳು ಮತ್ತು ಕಣ್ಣುಗಳಲ್ಲಿರುವ ಕೋಶಗಳಲ್ಲಿ ಇನೋಸಿಟಾಲ್ ಅಲ್ಲದೆ ಕೆಲವು ಹಣ್ಣುಗಳಲ್ಲೂ ಕಾಯಿಪಲ್ಯಗಳಲ್ಲೂ ಮತ್ತು ಕೆಲವು ಧಾನ್ಯಗಳಲ್ಲೂ ಇನೋಸಿಟಾಲ್ ಫೈಟಿಕ್ ಆಮ್ಲದ ಹೆಕ್ಸ್‍ಫಾಸ್ಫೆರಿಕ್ ಎಸ್ಟರಾಗಿ ದೊರೆಯುತ್ತದೆ. ನಮ್ಮ ಶರೀರದಲ್ಲಿ ಗ್ಲೈಕೋಜನ್ ಶೇಖರವಾಗುವಂತೆ ಷಾರ್ಕ್ ಗುಂಪಿನ ಮೀನುಗಳ ದೇಹದಲ್ಲಿ ಇನೋಸಿಟಾಲ್ ಶೇಖರವಾಗುತ್ತದೆ.

ಇನೋಸಿಟಾಲ್ ಹರಳಾಕೃತಿಯ, ನೀರಿನಲ್ಲಿ ಕರಗುವ ಮದ್ಯಸಾರಗುಂಪಿನ ವಸ್ತು. ಇದರಲ್ಲಿ ಹೆಚ್ಚು-ಔಊ ಭಾಗಗಳಿರುವುದರಿಂದ ಸಕ್ಕರೆಯಂತೆಯೇ ಇದು ಸಿಹಿ. ಶರ್ಕರ ಪಿಷ್ಟ ಪದಾರ್ಥಗಳ ಮತ್ತು ಬೆಂಜಿûೀನ್ ಉಂಗುರವುಳ್ಳ ವಸ್ತುಗಳ ಲಕ್ಷಣಗಳೆರಡೂ ಇವೆ. ಇದರ ರಚನೆ ಚಿತ್ರದಲ್ಲಿ ತೋರಿಸಿದೆ.

ಚಿತ್ರ-1

1928ರಲ್ಲಿ ಇ.ವಿ. ಈಸ್ಟ್‍ಕಾಟ್ ಕೆಲವು ಯೀಸ್ಟುಗಳ ಬೆಳೆವಣಿಗೆಗೆ ಆವಶ್ಯಕವಾಗಿ ಇನೋಸಿಟಾಲ್ ಬೇಕಾದುದೆಂದು ಮೊದಲಬಾರಿಗೆ ತೋರಿಸಿದ. 1940ರಲ್ಲಿ ಇನೋಸಿಟಾಲ್ ಇಲಿಗಳಿಗೆ ಅತ್ಯಾವಶ್ಯಕವೆಂದು ವೂಲ್ಲೀ ತೋರ್ಪಡಿಸಿದ. ಆದರೂ ಇದರ ಆವಶ್ಯಕತೆ ಯಾವಾಗಲೂ ಇರಲೇಬೇಕಾದುದು ಕಂಡುಬಂದಿಲ್ಲ. ಕಾರಣ ಇಲಿಗಳ ಬೆಳೆವಣಿಗೆಗೆ ಸಂಬಂಧವಾಗಿ ಒದಗಿಸುವ ಅನೇಕ ಶುದ್ಧ ಆಹಾರ ಪದಾರ್ಥಗಳಲ್ಲಿ ಇನೋಸಿಟಾಲ್ ಸೇರಿಸಿರುವುದಿಲ್ಲ. ಸೂಕ್ಷ್ಮಜೀವಿಗಳ ಸಹಾಯವಿಧಾನದಿಂದ ಇದರ ಪ್ರಮಾಣ ನಿಗದಿ ಮಾಡಿದ್ದಾರೆ. ಕಿಣ್ವಗಳ (ಎಂeóÉೈಮ್ಸ್) ಸನ್ನಿವೇಶದಲ್ಲಿ ಇದರ ಪಾತ್ರವೇನೆಂಬುದು ವಸ್ತುತಃ ತಿಳಿದಿಲ್ಲ. ಶರ್ಕರ ಪಿಷ್ಟಪದಾರ್ಥವಾಗಿ ಅದು ಜೀವವಸ್ತುಕರಣಕ್ಕೆ (ಮೆಟಬಾಲಿಸಂ) ಒಳಗಾಗಬಲ್ಲುದು. ಸೂಕ್ಷ್ಮಜೀವಾಣುಗಳ ಬೆಳೆವಣಿಗೆಗೆ ಇದು ಅತ್ಯಾವಶ್ಯಕ ವಸ್ತುವಾಗಿರುವುದರ ಜೊತೆಗೆ ಇಲಿಗಳಿಗೆ ಕೆಲವು ಸಂದರ್ಭಗಳಲ್ಲಿ ಬೇಕೇಬೇಕಾದ ವಸ್ತುವಾಗಿದೆ. ಇನೋಸಿಟಾಲ್ ಅಭಾವದಿಂದಾಗಿ ಇಲಿಗಳಲ್ಲಿ ಕುಬ್ಜ ಬೆಳೆವಣಿಗೆ ಮತ್ತು ಕೂದಲು ಉದುರುವುದು ಗೋಚರವಾಗುತ್ತದೆ. ಕೆಲವು ಪರೀಕ್ಷಾ ಸನ್ನಿವೇಶಗಳಲ್ಲಿ ಇನೋಸಿಟಾಲ್ ಪಿತ್ತಜನಕಾಂಗದಲ್ಲಿ ಮೇದಸ್ಸು ಶೇಖರಿಸುವುದನ್ನು ನಿವಾರಿಸುವುದರಿಂದ ಅದನ್ನು ಲಿಪೊಟ್ರೋಪಿಕ್ ಏಜೆಂಟ್ ಎಂದು ಪರಿಗಣಿಸಿದ್ದಾರೆ. ಸಮಸ್ಥಾನಿ (ಐಸೋಟೋಪಿಕ್) ಗ್ಲೂಕೋಸನ್ನುಪಯೋಗಿಸಿಕೊಂಡು ನಡೆಸಿದ ಪ್ರಯೋಗಗಳಲ್ಲಿ ಅದು ಇನೋಸಿಟಾಲ್ ಆಗಿ ಪ್ರಾಣಿಗಳಲ್ಲಿ ಪರಿವರ್ತನೆ ಹೊಂದಿರುವುದು ತಿಳಿದುಬಂದಿದೆ. ಕರುಳುಗಳಲ್ಲಿನ ಸೂಕ್ಷ್ಮ ಜೀವಿಗಳು ಇನೋಸಿಟಾಲನ್ನು ಸಾಕಷ್ಟು ಪ್ರಮಾಣದಲ್ಲಿ ಸಂಶ್ಲೇಷಿಸಿವೆ. ಮಾನವನ ಆಹಾರ ಪಟ್ಟಿಯಲ್ಲಿ ಇನೋಸಿಟಾಲ್ ಅವಶ್ಯವೆಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ. ಅತ್ಯಂತ ಬೇರ್ಪಡಿಸಿದ ಮಾನವ ಜೀವಕಣಕೂಟ ಅದರ ಸಂವರ್ಧಿಯಲ್ಲಿ (ಕಲ್ಚರ್) ತನ್ನ ಬೆಳೆವಣಿಗೆಗೆ ಈ ವಸ್ತುವನ್ನು ಅಪೇಕ್ಷಿಸುತ್ತದೆ ಎಂಬುದಾಗಿ 1956ರಲ್ಲಿ ಎಚ್. ಈಗಲ್ ತಿಳಿಸಿದ್ದಾನೆ. ಇನೋಸಿಟಾಲಿನ ಪೋಷಣ ಪಾತ್ರದ ಬಗ್ಗೆ ಇನ್ನೂ ಹೆಚ್ಚು ಸಂಶೋಧನಾಭ್ಯಾಸ ಮಾಡಬೇಕೆಂಬುದು ಇದರಿಂದ ವ್ಯಕ್ತವಾಗುತ್ತದೆ. (ಪಿ.ಜಿ.ಆರ್.)