ಆ್ಯಂಡ್ರ್ಯೂ ಟೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೨೦೧೮ರಲ್ಲಿ ಆ್ಯಂಡ್ರ್ಯೂ ಟೈ

ಆ್ಯಂಡ್ರ್ಯೂ ಜೇಮ್ಸ್ ಟೈ, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಬಲಗೈ ಮಧ್ಯಮ ವೇಗದ ಬೌಲರ್ ಹಾಗೂ ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್ಮನ್. ದೇಶೀಯ ಕ್ರಿಕೆಟ್ನಲ್ಲಿ ಪರ್ತ್ ಸ್ಕೊಚೆರ್ಸ್ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯಾ ತಂಡಗಳಿಗೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ೧೧ ಪಂಜಾಬ್ ತಂಡಕ್ಕೆ ಆಡುತ್ತಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಟೈ ಡಿಸೆಂಬರ್ ೧೨, ೧೯೮೬ರಲ್ಲಿ ಆಸ್ಟ್ರೇಲಿಯಾದ ಪರ್ತ್ನಲ್ಲಿ ಜನಿಸಿದರು. ಗ್ರೇಡ್ ಮಟ್ಟದ ಕ್ರಿಕೆಟ್ ಸರಣಿಯಲ್ಲಿ ಸಕಾರ್ಬೋರೋ ತಂಡದ ಪರವಾಗಿ ಆಡುತ್ತಾರೆ. ಪ್ರಥಮ ದರ್ಜೆ ಕ್ರಿಕೆಟ್ ಆಡುವ ಮುನ್ನವೇ ಇವರು ಸೋಮರ್ಸೆಟ್ ಪರವಾಗಿ ಆಡುತಿದ್ದರು. ೨೦೧೩-೧೪ರ ಬಿಗ್ ಬ್ಯಾಷ್ ಸರಣಿಯಲ್ಲಿ ಸಿಡ್ನಿ ಥಂಡರ್ಸ್ ತಂಡದಿಂದ ಪದಾರ್ಪಣೆ ಮಾಡಿದರು. ನಂತರ ಪರ್ತ್ ಸ್ಕೊಚೆರ್ಸ್ ತಂಡಕ್ಕೆ ಸೇರ್ಪಡೆಗೊಂಡರು[೨][೩][೪]

ವೃತ್ತಿ ಜೀವನ[ಬದಲಾಯಿಸಿ]

ಟೈ ನವಂಬರ್ ೧೬, ೨೦೧೪ರಲ್ಲಿ ಹೋಬರ್ಟ್ ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಹಾಗೂ ಟ್ಯಾಸ್ಮೆನಿಯ ವಿರುಧ್ಧ ನಡೆದ ಪಂದ್ಯದ ಮೂಲಕ ಇವರು ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪನೆ ಮಾಡಿದರು.[೫]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಟೈ ರವರು ಜನವರಿ ೨೯, ೨೦೧೬ ರಂದು ಮೆಲ್ಬೋರ್ನ್ ನಲ್ಲಿ ಭಾರತದ ವಿರುಧ್ಧ ನಡೆದ ಎರಡನೇ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೬] ಜನವರಿ ೧೪, ೨೦೧೮ ರಂದು ಮೆಲ್ಬೋರ್ನ್ ನಲ್ಲಿ ಇಂಗ್ಲೆಂಡ್ ತಂಡದ ವಿರುಧ್ಧ ನಡೆದ ಮೊದಲನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೭]

ಪಂದ್ಯಗಳು[ಬದಲಾಯಿಸಿ]

 • ಏಕದಿನ ಕ್ರಿಕೆಟ್ : ೦೭ ಪಂದ್ಯಗಳು[೮]
 • ಟಿ-೨೦ ಕ್ರಿಕೆಟ್ : ೨೬ ಪಂದ್ಯಗಳು

ವಿಕೆಟ್ಗಳು[ಬದಲಾಯಿಸಿ]

 1. ಏಕದಿನ ಪಂದ್ಯಗಳಲ್ಲಿ: ೧೨
 2. ಟಿ-೨೦ ಪಂದ್ಯಗಳಲ್ಲಿ: ೩೭

ಉಲ್ಲೇಖಗಳು[ಬದಲಾಯಿಸಿ]

 1. https://www.cricbuzz.com/profiles/9617/andrew-tye
 2. https://web.archive.org/web/20141025151835/http://www.waca.com.au/other/players_detail.php?ID=170
 3. https://au.news.yahoo.com/all-rounder-ready-to-tye-one-on-in-big-bash-20144019.html
 4. https://www.smh.com.au/sport/cricket/adam-voges-to-captain-perth-scorchers-in-big-bash-league-20140909-10eh6s.html
 5. https://www.espncricinfo.com/series/8043/scorecard/754895/tasmania-vs-western-australia-sheffield-shield-2014-15
 6. https://www.espncricinfo.com/series/11188/scorecard/895819/australia-vs-india-2nd-t20i-india-tour-of-australia-2015-16
 7. https://www.espncricinfo.com/series/10883/scorecard/1072310/australia-vs-england-1st-odi-eng-tour-of-aus-and-nz-2017-18
 8. http://www.espncricinfo.com/australia/content/player/459508.html