ವಿಷಯಕ್ಕೆ ಹೋಗು

ಆಲಿ‌ಸಸ್ ಅಡ್ವೆಂಚರ್ಸ್ ಇನ್ ವಂಡರ್‌ಲ್ಯಾಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Alice's Adventures in Wonderland
Title page of the original edition (1865)
ಲೇಖಕರುLewis Carroll
ಚಿತ್ರಲೇಖಕJohn Tenniel
ದೇಶEngland
ಭಾಷೆEnglish
ಪ್ರಕಾರChildren's fiction
ಪ್ರಕಾಶಕರುMacmillan
ಪ್ರಕಟವಾದ ದಿನಾಂಕ
26 November 1865
ನಂತರದThrough the Looking-Glass

ಆಲಿ‌ಸಸ್ ಅಡ್ವೆಂಚರ್ಸ್ ಇನ್ ವಂಡರ್‌ಲ್ಯಾಂಡ್ (ವಂಡರ್‌ಲ್ಯಾಂಡಿನಲ್ಲಿ ಅಲಿಸ್‌ನ ಸಾಹಸಗಳು) (ಸಾಮಾನ್ಯವಾಗಿ ಚಿಕ್ಕದಾಗಿ ಆಲಿ‌ಸ್ ಇನ್ ವಂಡರ್‌ಲ್ಯಾಂಡ್ ) ಚಾರ್ಲ್ಸ್ ಲುಟ್ವಿಡ್ಜ್ ಡಾಡ್ಜ್‌ಸನ್ ಎಂಬ ಆಂಗ್ಲಸಾಹಿತಿಯು ಲೂಯಿಸ್ ಕೆರಾಲ್ ಎಂಬ ಕಾವ್ಯನಾಮದಡಿಯಲ್ಲಿ 1865 ನೆಯ ಇಸವಿಯಲ್ಲಿ ಬರೆದ ಒಂದು ಕಾದಂಬರಿ.[೧] ಆಲಿಸ್‌ ಹೆಸರಿನ ಹುಡುಗಿ ವಿಲಕ್ಷಣ ಮತ್ತು ಪರಿಸ್ಥಿತಿಯಿಂದಾಗಿ ಜೀವವಿಲ್ಲದ ಪ್ರಾಣಿಯಾಗಿ ಮೊಲದ ಬಿಲದಲ್ಲಿ ಬಿದ್ದು ಕಾಲ್ಪನಿಕ ಜಗತ್ತಿನಲ್ಲಿ ವಾಸವಾಗುವ ಕತೆಯುನ್ನು ಹೇಳುತ್ತದೆ. ಕತೆಯು ಡಾಡ್ಜ್‌ಸನ್‌ನ ಗೆಳೆಯರಿಗೆ ಹೇಳುವ ಪೂರ್ವಕತೆಗಳಿಂದ ತುಂಬಿದೆ. ಕತೆಯು ಅಂತ್ಯದವರೆಗೂ ತರ್ಕದ ಪಾತ್ರ ವಹಿಸುವುದರಿಂದ ಮಕ್ಕಳ ಜೊತೆ ದೊಡ್ಡವರಲ್ಲೂ ಪ್ರಸಿದ್ದಿ ಹೊಂದಿದೆ.[೨] ಅಸಂಬದ್ಧ ಸಾಹಿತ್ಯದ ಪ್ರಕಾರದ [೨][೩] ಒಂದು ಅತ್ಯಂತ ವಿಶಿಷ್ಟವಾದ ಉದಾಹರಣೆ ಎಂದು ಪರಿಗಣಿಸಲ್ಪಟ್ಟಿದೆ. ಮತ್ತು ಇದರ ವಿವರಣಾ ಶೈಲಿ ಮತ್ತು ರಚನೆ ಅತ್ಯಂತ ಪರಿಣಾಮಕಾರಿಯಾದದ್ದು,[೩] ವಿಶೇಷವಾಗಿ ಕಾಲ್ಪನಿಕ ಕತೆ ಪ್ರಕಾರದಲ್ಲಿ.

ಇತಿಹಾಸ

[ಬದಲಾಯಿಸಿ]
ಆಲಿಸ್ ಅಡ್ವೆಂಚರ್ಸ್ ಅಂಡರ್‌ಗ್ರೌಂಡ್‌ನಿಂದ ಸಂಕ್ಷೇಪಿತ ಪುಟ

ಆಲಿಸ್ ರೆವರೆಂಡ್ ಚಾರ್ಲ್ಸ್ ಲುಟ್ವಿಡ್ಜ್‌ ಡಾಡ್ಜ್‌ಸನ್ ಮತ್ತು ರೆವರೆಂಡ್ ರಾಬಿನ್‌ಸನ್ ಡಕ್‌ವರ್ತ್ ಮೂರು ಜನ ಹುಡುಗಿಯರ ಜೊತೆ ಥೇಮ್ಸ್ ನದಿಯಲ್ಲಿ ದೋಣಿ ಹಾಯಿಸಿಕೊಂಡು ಹೋದ ಸರಿಯಾಗಿ ಮೂರು ವರ್ಷದ ನಂತರ ಅಂದರೆ 1865ರಲ್ಲಿ ಬರೆಯಲ್ಪಟ್ಟಿತು.[೪]

 • ಲೋರಿನಾ ಕಾರ್ಲೊಟ್ಟೆ ಲಿಡೆಲ್ (13 ವಯಸ್ಸಿನ, 1849 ರಲ್ಲಿ ಹುಟ್ಟಿದ) (ಪುಸ್ತಕದ ಪದ್ಯ ಪ್ರಸ್ತಾವನೆಯಲ್ಲಿ "ಪ್ರಿಮಾ")
 • ಆಲಿಸ್ ಪ್ಲೀಸನ್ಸ್ ಲಿಡೆಲ್ (10 ವಯಸ್ಸಿನ, 1852 ರಲ್ಲಿ ಹುಟ್ಟಿದ) (ಪುಸ್ತಕದ ಪದ್ಯ ಪ್ರಸ್ತಾವನೆಯಲ್ಲಿ "ಸೆಕುಂದಾ")
 • ಎಡಿತ್ ಮ್ಯಾರಿ ಲಿಡೆಲ್ (8 ವಯಸ್ಸಿನ , 1853 ರಲ್ಲಿ ಹುಟ್ಟಿದ) (ಪುಸ್ತಕದ ಪದ್ಯ ಪ್ರಸ್ತಾವನೆಯಲ್ಲಿ "ಟೆರ್ಟಿಯಾ").

ಈ ಮೂರು ಹುಡುಗಿಯರು ಹೆಮ್ರಿ ಜಾರ್ಜ್ ಲಿಡೆಲ್ ನ ಮಕ್ಕಳು. ಆತ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಉಪಕುಲಪತಿ ಮತ್ತು ಕ್ರೈಸ್ತ ಚರ್ಚ್‌ನ ಮುಖ್ಯಾಧಿಕಾರಿ ಹಾಗೆಯೇ ವೆಸ್ಟ್‌ಮಿನ್ಟರ್ ಶಾಲೆಯ ಮುಖ್ಯಾಧ್ಯಾಪಕನಾಗಿದ್ದ. ಪುಸ್ತಕದ ಹೆಚ್ಚಿನ ಸಾಹಸಗಳು ಆಕ್ಸ್‌ಫರ್ಡ್‌ ಮತ್ತು ಕ್ರೈಸ್ತ ಚರ್ಚ್‌ನಲ್ಲಿನ ಕಟ್ಟಡಗಳು, ಪರಿಸ್ಥಿತಿಗಳು ಮತ್ತು ಅಲ್ಲಿನ ಜನರ ಮೇಲೆ ಆಧರಿಸಿದೆ ಮತ್ತು ಜನರಿಂದ ಪ್ರಭಾವಕ್ಕೊಳಪಟ್ಟಿದೆ. ಉದಾಹರಣೆಗೆ , ಕ್ರೈಸ್ತ ಚರ್ಚ್ ನಲ್ಲಿನ ಮುಖ್ಯ ಸಭಾಂಗಣದ ಹಿಂಬಾಗದ ನಿಜವಾದ ಮೆಟ್ಟಿಲುಗಳು ಸಾಂಕೇತಿಕವಾಗಿ "ಮೊಲದ ಬಿಲ"ವನ್ನು ಹೋಲುತ್ತವೆ. ಕೆರೊಲ್‌ರ ತಂದೆ ಸದಸ್ಯರಾಗಿದ್ದ ರಿಫನ್ ಕೆಥೆಡ್ರಲ್ಲಿನಲ್ಲಿ ಕಂಡಂತೆ ಗ್ರಿಫನ್ ಮತ್ತು ಮೊಲದ ಕೆತ್ತನೆ ಕಥೆಗೆ ಸ್ಫೂರ್ತಿಯಾಗಿದ್ದವು ಎಂದು ನಂಬಲಾಗಿದೆ.[೫] ಆಕ್ಸ್‌ಫರ್ಡ್ ಹತ್ತಿರದ ಪೊಲಿ ಬ್ರಿಡ್ಜ್ ನಿಂದ ಪ್ರಯಾಣ ಶುರುವಾಗುತ್ತದೆ ಮತ್ತು ಗಾಡ್ಸ್‌ಟೊವ್ ಹಳ್ಳಿಯಿಂದ 5 ಮೈಲಿ ದೂರದಲ್ಲಿ ಮುಗಿಯುತ್ತದೆ. ಕಾಲ ಕಳೆಯುವುದಕ್ಕಾಗಿ ರೆವರೆಂಡ್ ಡಾಡ್ಜ್‌ಸನ್ ಹುಡುಗಿಯರಿಗೆ ಬೇಸರವಾಗಿರುವ ಮತ್ತು ಸಾಹಸವನ್ನರಸಿ ಹೊರಟಿರುವ ಸಣ್ಣ ಹುಡುಗಿಯ ಕತೆ ಹೇಳುತ್ತಾನೆ. ಆ ಹುಡುಗಿಯರಿಗೆ ಕತೆ ತುಂಬಾ ಇಷ್ಟವಾಯಿತು, ಮತ್ತು ಆಲಿಸ್ ಲಿಡೆಲ್ ತನ್ನ ಬಗ್ಗೆ ಬರೆಯಲು ಡಾಡ್ಜ್‌ಸನ್‍ಗೆ ಹೇಳಿದಳು. ದೀರ್ಘವಿರಾಮದ ನಂತರ-ಎರಡು ವರ್ಷಗಳ ನಂತರ- ಅಂತಿಮವಾಗಿ ಅವನು ಆಲಿಸ್‌ ಅಡ್ವೆಂಚರ್ಸ್ ಅಂಡರ್ ಗ್ರೌಂಡ್ ಬರೆದ. 1864 ನವೆಂಬರ್ 26 ರಂದು ಡಾಡ್ಜ್‌ಸನ್ ತನ್ನದೇ ಚಿತ್ರಗಳೊಂದಿಗೆ ಕೈಬರಹದಲ್ಲಿ ಪುಸ್ತಕ ಬರೆದು ಆಲಿಸ್‌ಗೆ ಸಮರ್ಪಿಸಿದ. ಮಾರ್ಟಿನ್ ಗಾರ್ಡನರ್ ಒಳಗೊಂಡಂತೆ ಹಲವರು ಊಹಿಸಿದ ಪ್ರಕಾರ ಮೊದಲ ಆವೃತ್ತಿ ನಾಶಹೊಂದಿದ್ದು ನಂತರ ಡಾಡ್ಜ್‌ಸನ್ ಬಹಳ ವಿಸ್ತಾರವಾದ ಪ್ರತಿಯನ್ನು ಕೈಯಿಂದಲೇ ಮುದ್ರಿಸಿದ[೬], ಆದರೆ ಇದಕ್ಕೆ ಬೆಂಬಲಿಸುವಂತ ಯಾವುದೆ ಮೊದಲ ನೋಟಕ್ಕೆ ತೋರುವ ಸಾಕ್ಷಿಗಳಿಲ್ಲ. ಆದರೆ ಆಲಿಸ್ ತನ್ನ ಪ್ರತಿ ಪಡೆಯುವುದಕ್ಕಿಂತ ಮೊದಲೇ, ಡಾಡ್ಜ್‌ಸನ್ ಪ್ರಕಟಿಸಲು ತಯಾರಿ ನಡೆಸಿದ್ದ ಮತ್ತು 15,500 ಪ್ರಾರಂಭಿಕ ಶಬ್ದಗಳಿಂದ 27,500 ಶಬ್ದಗಳಿಗೆ ವಿಸ್ತರಿಸಿದ. ಇದರಲ್ಲಿ ಮುಖ್ಯವಾಗಿ ಗುರುತಿಸಬಹುದಾದ ಚೆಶೈರ್ ಕ್ಯಾಟ್ ಮತ್ತು ಮ್ಯಾಡ್ ಟಿ-ಪಾರ್ಟಿ ಸೇರಿಸಿದ ಎಪಿಸೋಡ್‌ಗಳು. 1865 ರಲ್ಲಿ "ಲೆವಿಸ್ ಕರೊಲ್"ರಿಂದ ಜಾನ್ ಟೆನ್ನಿಯಲ್ ವಿವರಣೆಯೊಂದಿಗೆ ಡಾಡ್ಜ್‌ಸನ್‌ನ ಆಲಿಸಸ್ ಅಡ್ವೆಂಚರ್ಸ್ ಇನ್ ವಂಡರ್‌ಲ್ಯಾಂಡ್‌ ಕತೆ ಪ್ರಕಟವಾಯಿತು. ಮೊದಲ 2,000 ಪ್ರತಿ ಮುದ್ರಿತವಾದವುಗಳನ್ನು ಹಿಂಪಡೆಯಲಾಯಿತು ಏಕೆಂದರೆ ಟೆನ್ನಿಯಲ್ ಮುದ್ರಿತ ಗುಣಮಟ್ಟದ ಬಗ್ಗೆ ಆಕ್ಷೇಪಿಸಿದ.[೭] ಹೊಸ ಆವೃತ್ತಿ ಅದೇ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಯಿತು, , 1866 ರ ದಿನಾಂಕವನ್ನು ಹೊಂದಿದ್ದ ಆ ಪುಸ್ತಕವನ್ನು ತ್ವರಿತವಾಗಿ ಮುದ್ರಿಸಲಾಯಿತು. ಅದರ ಫಲಿತಾಂಶವಾಗಿ, ಮೂಲ ಆವೃತ್ತಿ ಡಾಡ್ಜ್‌ಸನ್‌ನ ಒಪ್ಪಿಗೆಯ ಮೇರೆಗೆ ಆಪ್ಲೆಟಾನ್‌ನ ನೂಯಾರ್ಕ್ ಪಬ್ಲೀಷಿಂಗ್ ಹೌಸ್‌ಗೆ ಮಾರಾಟವಾಯಿತು. ಈ ಆ‍ಯ್‌ಪಲ್‌‌ಟನ್ ಆಲಿಸ್ ನ ಮುಖಪುಟವು 1866 ಮ್ಯಾಕ್‌ಮಿಲನ್ ಆಲಿಸ್‌ನಂತೆಯೇ ಇತ್ತು. ಆದರೆ ಪುಸ್ತಕದ ಹಾಳೆಗಳನ್ನು ಸೇರಿಸಿ ಹೊಲಿದಿರುವ ಭಾಗದಲ್ಲಿ ಕೆಳಭಾಗದಲ್ಲಿ ಮಾತ್ರ ಪ್ರಕಾಶಕರ ಹೆಸರಿತ್ತು.

ಮೂಲ ಮ್ಯಾಕ್‌ಮಿಲ್ಲನ್ ಶೀರ್ಷಿಕೆಯ ಪುಟವನ್ನು ರದ್ದುಗೊಳಿಸಿ ಆ‍ಯ್‌ಪಲ್‌ಟನ್‌‌ ಆಲಿಸ್ ನ ಶೀರ್ಷಿಕೆ ಪುಟದಲ್ಲಿ ಸೇರಿಸಲಾಯಿತು ಮತ್ತು 1866ರಲ್ಲಿ ನ್ಯೂಯಾರ್ಕ್ ಪಬೀಷರ್ಸ್ ಹೆಸರನ್ನು, ಮತ್ತು ವರ್ಷವನ್ನು 1865 ಎಂದು ಮುದ್ರಿಸಿದರು.

ಮುದ್ರಿತ ಪ್ರತಿಗಳು ಶೀಘ್ರವಾಗಿ ಸಂಪೂರ್ಣ ಮಾರಾಟಗೊಂಡಿತು. ಪ್ರಕಟಿತ ಆಲಿಸ್ ಸಂಚನೆಯುಂಟುಮಾಡಿತು, ಮಕ್ಕಳು ಮತ್ತು ದೊಡ್ಡವರಲ್ಲಿ ಒಂದೆ ರೀತಿಯ ಮೆಚ್ಚಿಗೆ ಪಡೆಯಿತು. ಈ ನಡುವೆ ಮೊದಲು ಅತ್ಯಾಸಕ್ತಿಯಿಂದ ಓದಿದವರು ಕ್ವೀನ್ ವಿಕ್ಟೋರಿಯಾ ಮತ್ತು ಯುವಕನಾದಆಸ್ಕರ್ ವೈಲ್ಡ್. ಈ ಪುಸ್ತಕ ಮುದ್ರಿತವಾಗದೇ ಇರಲು ಸಾಧ್ಯವಿಲ್ಲಾ. ಆಲಿಸ್‌ ಅಡ್ವೆಂಚರ್ಸ್ ಇನ್ ವಂಡರ್‌ಲ್ಯಾಂಡ್‌ 125 ಭಾಷೆಗಳಿಗೆ ಅನುವಾದಗೊಂಡಿದೆ. ನೂರಕ್ಕಿಂತ ಹೆಚ್ಚಿನ ಆವೃತ್ತಿ ಕಂಡಿದೆ, ಮುಖ್ಯವಾಗಿ ನಾಟಕಗಳು ಮತ್ತು ಸಿನೇಮಾಗಳಲ್ಲಿ ಹಾಗೂ ಅಸಂಖ್ಯಾತ ಇತರೆ ಮಾಧ್ಯಮಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಸಾಮಾನ್ಯವಾಗಿ ಆಲಿಸ್‌ ಇನ್ ವಂಡರ್‌ಲ್ಯಾಂಡ್‌ ಶೀರ್ಷಿಕೆ ಪುಸ್ತಕವನ್ನು ಸಂಕ್ಷೇಪಿಸಿ ಉಲ್ಲೇಖಿಸಲಾಗಿದೆ,ಅನೇಕ ರಂಗಭೂಮಿಯಲ್ಲಿ ಪರ್ಯಾಯ ಹೆಸರಿನಿಂದ ಪ್ರಸಿದ್ದಿಯಾಗಿದೆ,ಸಿನೇಮಾ ಮತ್ತು ದೂರದರ್ಶನಗಳಲ್ಲಿ ಕತೆಯನ್ನು ಹಲವಾರು ವರ್ಷಗಳಿಂದ ಅಳವಡಿಸಿಕೊಳ್ಳಲಾಗುತ್ತಿದೆ. ಹಲವಾರು ಮುದ್ರಣಗಳು ಆಲಿಸ್ ಅಡ್ವೆಂಚರ್ಸ್ ಇನ್ ವಂಡಾರ್ಲ್ಯಾಂಡ್ ಮತ್ತು ಇದರ ಮುಂದುವರಿದ ಭಾಗವಾದ ಥ್ರೂ ಲುಕ್ಕಿಂಗ್ -ಗ್ಲಾಸ್, ಮತ್ತು, ವಾಟ್ ಆಲಿಸ್ ಫೌಂಡ್ ದೇರ್ ಶೀರ್ಷಿಕೆಯನ್ನು ಒಳಗೊಂಡಿವೆ.

ಮುದ್ರಣದ ಪ್ರಮುಖಾಂಶಗಳು

[ಬದಲಾಯಿಸಿ]
1898 ಆವೃತ್ತಿಯ ಕವರ್
 • 1865: ಮೊದಲನೆಯ ಯು.ಕೆ. ಮುದ್ರಣ (ಸಂಕ್ಷೇಪಿತ ಸಂಚಿಕೆ).
 • 1865: ಆಲಿಸ್ ನ ಮೊದಲ ಅಮೆರಿಕನ್ ಮುದ್ರಣ.[೮]
 • 1869:ಅಡ್ವೆಂಚರ್ಸ್ ಡಿ'ಆಲಿಸ್ ಆ ಪೇಸ್ ದೆಸ್ ಮಾರ್ವೀಲ್ಲೆಸ್ ಫ್ರೆಂಚ್ ನಲ್ಲಿ ಪ್ರಕಟಿತವಾಯಿತು, ಅನುವಾದ ಹೆನ್ರಿ ಬ್ಯೂರಿಂದ ಆಯಿತು.
 • 1869: ಆಲಿಸಸ್ ಅಡ್ವೆಂಚರ್ಸ್ ಇನ್ ವಂಡರ್‌ಲ್ಯಾಂಡ್‌ ಜರ್ಮನ್ ನಲ್ಲಿ ಆಂಟೋನಿ ಜಿಮರ್ಮ್ಯಾನ್‌ರವರಿಂದ ಅನುವಾದಗೊಂಡು ಪ್ರಕಟವಾಯಿತು.
 • 1870: ಆಲಿಸಸ್ ಆಫ್ವೆಂಟಿರಿ ಸಾಗೊಲ್ಯಾಂಡೆಟ್ ಸ್ವಿಡೀಷ್ ನಲ್ಲಿ ಎಮಿಲಿ ನೊನ್ನೆನ್‌ರಿಂದ ಅನುವಾದಗೊಂಡು ಪ್ರಕಟವಾಯಿತು.
 • 1871: ಡಾಡ್ಜ್‌ಸನ್ ಲಂಡನ್‌ನಲ್ಲಿದ್ದ ಕಾಲದಲ್ಲಿ ಇನ್ನೊಬ್ಬ ಆಲಿಸ್‌ಳ ಭೇಟಿಯಾಯಿತು, ಅವಳೆ ಆಲಿಸ್ ರೈಕ್ಸ್, ಮತ್ತು ಕನ್ನಡಿಯಲ್ಲಿ ಅವಳ ಪ್ರತಿಬಿಂಬದ ಬಗ್ಗೆ ಮಾತನ್ನಾಡಿದರು, ಇದು ಥ್ರೂ ಗ್ಲಾಸ್- ಲುಕಿಂಗ್ ಮತ್ತು ವಾಟ್ ಆಲಿಸ್ ಫಾಂಡ್ ದೇರ್ ಬರೆಯಲು ಕಾರಣವಾಯಿತು, ಇವುಗಳು ಕೂಡ ಉತ್ತಮವಾಗಿ ಮಾರಾಟವಾದವು.
 • 1886: ಕೆರೊಲ್‌ ಮೊದಲನೇಯ ಆಲಿಸ್ ಅಡ್ವೆಂಚರ್ಸ್ ಅಂಡರ್‌ಗ್ರೌಂಡ್ ಹಸ್ತಪ್ರತಿಯ ನಕಲನ್ನು ಪ್ರಕಟಿಸಿದರು.
 • 1890: ದ ನರ್ಸರಿ ಆಲಿಸ್ , ಒಂದು ವಿಶೇಷ ಆವೃತ್ತಿ "ಟು ಬಿ ರೀಡ್ ಬೈ ಚಿಲ್ಡ್ರನ್ ಎಜ್ಡ್ ಫ್ರಾಂ ನಾಟ್ ಟು ಫೈವ್." ಪ್ರಕಟಿಸಿದ.
 • 1908: ಆಲಿಸ್ ಮೊದಲು ಅನುವಾದಗೊಂಡಿದ್ದು ಜಪನೀಸ್‌ಗೆ
 • 1910: ಲಾ ಅವೆಂಚುರೋಜ್ ಡೆ ಆಲಿಸಿಯೊ ಎನ್ ಮಿರ್ಲ್ಯಾಂಡೊ ಎಲ್ಫ್ರಿಕ್ ಲಿಯೊಫ್ವಿನ್ ಕಿಯರ್ನ್ರೆ ಯವರು ಎಸ್ಪೆರಾಂಟೊ ಗೆ ಅನುವಾದಿಸಿದರು.
 • 1916: ವೈಡರ್‌ಮೆರ್ ಸೀರಿಸ್‌ನ ಪ್ರಕಟಗೊಂಡ ಮೊದಲನೇಯ ಆವೃತ್ತಿ ,ಅದ್ಭುತ ಲೋಕದಲ್ಲಿ ಆಲಿಸ್‌ಳ ಸಾಹಸಗಳು . ಮಿಲೊ ವಿಂಟರ್ ರಿಂದ ವಿವರಿಸಲ್ಪಟ್ಟಿದೆ.
 • 1960: ಅಮೆರಿಕಾದ ಬರಹಗಾರ ಮಾರ್ಟಿನ್ ಗಾರ್ಡನರ್, ಆಲಿಸಸ್ ಅಡ್ವೆಂಚರ್ಸ್ ಇನ್ ವಂಡರ್‌ಲ್ಯಾಂಡ್‌ ಮತ್ತು ಥ್ರೂ ದ ಲುಕ್ಕಿಂಗ್-ಗ್ಲಾಸ್‌ ಇವೆರಡರನ್ನೂ ಸೇರಿಸಿ ದ ಅನೊಟೆಟೆಡ್ ಆಲಿಸ್ ಒಂದು ವಿಶೇಷ ಆವೃತ್ತಿ ಪ್ರಕಟಿಸಿದರು. ಈ ಪುಸ್ತಕದಲ್ಲಿ ವಿಸ್ತೃತವಾದ ಟಿಪ್ಪಣಿಗಳಿದ್ದು, ಅವು ಅದರಲ್ಲಿನ ನಿಗೂಢವಾದ ಹಿನ್ನೆಲೆಗಳ ಕುರಿತು ವಿವರಿಸುತ್ತಿದ್ದವು, ಮತ್ತು ವಿಕ್ಟೋರಿಯನ್ ಕಾಲದ ಕವಿತೆಗಳ ಪೂರ್ಣ ಪಠ್ಯವನ್ನು ಹೊಂದಿತ್ತು. ನಂತರದ ಆವೃತ್ತಿ ಈ ಟಿಪ್ಪಣಿಗಳ ವಿಸ್ತಾರವಾಗಿದೆ.
 • 1961: ದ ಪೋಲಿಯೋ ಸೊಸೈಟಿ ಜಾನ್ ಟೆನ್ನಿಯಲ್‌ನ 42 ವಿವರಣೆಯ ಪ್ರಕಟಿಸಿತು.
 • 1964: ಅಲಿಸಿಯಾ ಟೆರ್ರಾ ಮಿರಬಿಲಿ ಕ್ಲಿವ್ ಹರ್ಕೊರ್ಟ್ ಕ್ಯಾರುದರ್ಸ್‌ರಿಂದ ಲಾಟಿನ್‌ಗೆ ಅನುವಾದಗೊಂಡು ಪ್ರಕಟವಾಯಿತು.
 • 1998: ಆಲಿಸ್ ಲೆವೀಸ್ ಕೆರೊಲ್‌‌ರ ಸ್ವಂತ ಪ್ರತಿ, 1865ರ ಮೊದಲ ಆವೃತ್ತಿಯ ಉಳಿದ 6 ಪ್ರತಿಗಳಲ್ಲಿ ಇದು ಒಂದು, ಅಮೆರಿಕಾದ ಒಬ್ಬ ಅನಾಮಿಕ ಹರಾಜಿನಲ್ಲಿ 1.54 ಮಿಲಿಯನ್ಸ್ ಅಮೆರಿಕನ್ ಡಾಲರ್‌ಗೆ ಖರೀದಿಸಿದ, ಇದುವರೆಗೂ ಮಾರಾಟವಾದ ಅತ್ಯಂತ ದುಬಾರಿಯಾದ ಮಕ್ಕಳ ಪುಸ್ತಕ (ಅಥವಾ 19ನೇ ಶತಮಾನದ ಸಾಹಿತ್ಯ ಕೃತಿ)ಇದಾಗಿದೆ.[೯] ಇದರ (ಇದರ ಮೊದಲಿನ ದಾಖಲೆ 2007ರಲ್ಲಿ ಜೆ.ಕೆ ರೌಲಿಂಗ್‌ರ ಹ್ಯಾರಿ ಪಾಟರ್ ಪುಸ್ತಕದ ಲಿಮಿಟೆಡ್- ಎಡಿಶನ್‌ನಿಂದ ಕಡಿಮೆಯಾಯಿತು. ಹರಾಜಿನಲ್ಲಿ 1.95 ದ ಟೇಲ್ಸ್ ಆಫ್ ಬೀಡ್ಲ್ ದ ಬಾರ್ಡ್ 1.95 ಯೂರೋ ಮಿಲಿಯನ್‌ಗೆ(3.9 ಮಿಲಿಯನ್) ಮಾರಾಟವಾಯಿತು.[೧೦]
 • 2003: Eachtraí Eilíse i dTír na nIontas ನಿಕೋಲಸ್ ವಿಲಿಯಮ್ಸ್‌ರಿಂದ ಐರಿಷ್ ಭಾಷೆಗೆ ಅನುವಾದಗೊಂಡು ಪ್ರಕಟವಾಯಿತು.
 • 2008: ಪೋಲಿಯೋ ಆಲಿಸ್ ಅಡ್ವೆಂಚರ್ಸ್ ಇನ್ ಅಂಡರ್‌ಗ್ರೌಂಡ್ ನ ನಕಲು ಆವೃತ್ತಿ (3,752 ಮಿತ ಪ್ರತಿಗಳು,ದ ಒರಿಜಿನಲ್ ಆಲಿಸ್ ಕರಪತ್ರಗಳ ಪೆಟ್ಟಿಗೆ ).
 • 2009: ಅಲೈಸ್ ಇನ್ ಪೊವ್ ಆ‍ಯ್‌ನ್ ಆ‍ಯ್‌ನೆಥೊವ್ ಕಾರ್ನಿಷ್ ಭಾಷೆಗೆ ನಿಕೋಲಸ್ ವಿಲಿಯಮ್‌ರಿಂದ ಅನುವಾದಗೊಂಡು ಪ್ರಕಟವಾಯಿತು.
 • 2009: ಮಕ್ಕಳ ಪುಸ್ತಕ ಸಂಗ್ರಹಕಾರ ಮತ್ತು ಅಮೆರಿಕಾದ ಮಾಜಿ ಫುಟ್ಬಾಲ್ ಆಟಗಾರ ಪ್ಯಾಟ್ McInally ಆಲಿಸ್ ಲಿಡೆಲ್‌ಳ ಸ್ವಂತ ಪ್ರತಿಯನ್ನು ಹರಾಜಿನಲ್ಲಿ 115,೦೦೦ ಡಾಲರ್‌ಗೆ ಮಾರಾಟಮಾಡಿದ.[೧೧]

ಸಾರಾಂಶ

[ಬದಲಾಯಿಸಿ]
ಹಸಿವಿನಲ್ಲಿ ಬಿಳಿ ಮೊಲ

ಅಧ್ಯಾಯ 1- ಮೊಲದ ಬಿಲದ ಕೆಳಗೆ: ಆಲಿಸ್ ತನ್ನ ಸಹೋದರಿಯೊಂದಿಗೆ ನದಿಯ ದಡದಲ್ಲಿ ಕುಳಿತ್ತಿದ್ದಳು, ಸಹೋದರಿ ಪುಸ್ತಕ ಓದುತ್ತಿದ್ದಳು ಹಾಗೂ ಆಲಿಸ್‌ಗೆ ಬೇಸರವಾಗುತಿತ್ತು. ಹಠಾತ್ತಾಗಿ ಅವಳು ಒಂದು ಬಿಳಿ ಮೊಲ ಕಂಡಳು, ಅದು ಒಂದು ಕೋಟು ತೊಟ್ಟು ಕೈಗಡಿಯಾರವನ್ನು ಇಟ್ಟುಕೊಂಡು ತಡವಾಯಿತು ಎಂದು ದುಃಖಿಸುತ್ತಾ ಓಡುತಿತ್ತು. ಅವಳು ಅದನ್ನು ಹಿಂಬಾಲಿಸುತ್ತಾ ಮೊಲದ ಬಿಲದ ಕೆಳಗೆ ಹೋಗಿ ನಿಧಾನವಾಗಿ ಸುರಂಗ ಮಾರ್ಗದ ಕೊನೆಯತ್ತ ಬೀಳುತ್ತಾಳೆ, ಅಲ್ಲಿ ಜಿಜ್ಞಾಸ ಉಂಟು ಮಾಡುವ ಹಲವು ವಸ್ತುಗಳಿದ್ದವು. ಕೊನೆಗೆ ಅವಳು ಬುಡವನ್ನು ತಲುಪಿದಾಗ, ಹಲವು ಬೀಗ ಬಡಿದ ಅನೇಕ ಗಾತ್ರಗಳ ಬಾಗಿಲುಗಳ ಜಿಜ್ಞಾಸಿಕ ಕೊಣೆಯಲ್ಲಿ ತನ್ನನ್ನು ಪಡೆಯುತ್ತಾಳೆ.

ನಂತರ ಒಂದು ಚಿಕ್ಕ ಗಾಜಿನ ಮೇಜಿನ ಮೇಲೆ ಪುಟ್ಟ ಚಿನ್ನದ ಬಿಗದ ಕೈಯನ್ನು ನೋಡುತ್ತಾಳೆ. ಆಲಿಸ್ ಗೊಡೆಯ ಕೆಳಗೆ ಒಂದು ಚಿಕ್ಕ ಪರದೆಯನ್ನು ಗಮನಿಸುತ್ತಾಳೆ ಹಾಗೂ ಅದನ್ನು ಎತ್ತಿ ನೋಡಿದಾಗ ಒಂದು ಚಿಕ್ಕ ಬಾಗಿಲನ್ನು ಕಾಣುತ್ತಾಳೆ, ಅದು ಆ ಬೀಗದ ಕೈಯಿಂದ ತೆರೆದು ಒಂದು ಸುಂದರವಾದ ಉದ್ಯಾನಕ್ಕೆ ದಾರಿಯಾಗಿತ್ತು. ಆಲಿಸ್‌ಳಿಗೆ ಅದು ಪ್ರವೇಶಿಸಲು ಬಹಳ ಚಿಕ್ಕದಾಗಿತ್ತು. ಹಿಂದಿರುಗಿ ನೋಡಿದಾಗ ಅಲ್ಲಿ ಮೇಜಿನ ಮೇಲೆ "ನನ್ನನ್ನು ಕುಡಿ" ಎಂಬ ಗುರುತು ಪಟ್ಟಿ ಹೊಂದ ಒಂದು ಪುಟ್ಟ ಬಾಟಲಿಯನ್ನು ಕಾಣುತ್ತಾಳೆ, ಮುಂಚೆ ಅದು ಅಲ್ಲಿ ಇರುವುದಿಲ್ಲ. ಅವಳು ಅದನ್ನು ಕುಡಿಯುತ್ತಾಳೆ ಹಾಗೂ ಆ ಬಾಗಿಲಿಂದ ಪ್ರಶಿಸುವಷ್ಟು ಗಾತ್ರದಲ್ಲಿ ಕುಗ್ಗುತ್ತಾಳೆ. ದುರದೃಷ್ಟವಾಗಿ ಆಲಿಸ್ ಬೀಗದ ಕೈಯನ್ನು ಎತ್ತರದ ಮೇಜಿನ ಮೇಲೆ ಇಟ್ಟಿರುತ್ತಾಳೆ. ಮೇಜಿನ ಅಡಿಯಲ್ಲಿ ಒಂದು ಡಬ್ಬಿಯನ್ನು ಪಡೆಯುತ್ತಾಳೆ, ಅದರಲ್ಲಿ "ನನ್ನನ್ನು ತಿನ್ನು" ಎಂದು ಬರೆದ ಒಂದು ಕೇಕ್ ಇರುತ್ತದೆ. ಅಧ್ಯಾಯ 2-ಕಣ್ಣಿರಿನ ಕೊಳ್ಳ: ಆಲಿಸ್ ದುಃಖಿತಳಾಗಿ ಅಳುತ್ತಾಳೆ, ಅವಳ ಕಣ್ಣಿರ ಪ್ರವಾಹದಿಂದ ಮನೆಯ ಮುನ್ನಂಗಳದ ದಾರಿ ತುಂಬುತ್ತದೆ. ಆಲಿಸ್ ತನ್ನ ಕಣ್ಣಿರಿನ ಮೂಲಕ ಈಜಿ ಒಂದು ಇಲಿಯನ್ನು ಭೇಟಿ ಮಾಡುತ್ತಾಳೆ, ಅದು ಕೂಡ ಈಜುತ್ತಿರುತ್ತದೆ. ಅವಳು ಅದರೊಂದಿಗೆ ಸಣ್ಣ ಸಂಭಾಷಣೆ ಮಾಡಲು ಪ್ರಯತ್ನಿಸುತ್ತಾಳೆ ಆದರೆ ಅವಳಿಗೆ ಬರಿ ಅವಳ ಬೆಕ್ಕಿನ ವಿಷಯವಷ್ಟೆ ತೋಚುತ್ತದೆ, ಇದು ಇಲಿಯ ಮನಸ್ಸನ್ನು ನೋಯಿಸುತ್ತದೆ. ಅಧ್ಯಾಯ 3-ರಹಸ್ಯಕೂಟ ಹಾಗೂ ಒಂದು ಉದ್ದ ಕಥೆ: ಕಣ್ಣಿರಿನ ಸಮುದ್ರ ಇತರ ಪ್ರಾಣಿ ಹಾಗೂ ಪಕ್ಷಿಗಳ ಬೀಸುವಿಕೆಯ ಸಮೂಹದಿಂದ ಕೂಡಿತ್ತು. ಆಲಿಸ್ ಹಾಗೂ ಇತರ ಪ್ರಾಣಿಗಳು ದಡದ ಮೇಲೆ ಸಭೆ ಸೇರಿ ಮತ್ತೆ ಒಣಗುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸಿದರು. ಇಲಿಯು ವಿಜಯಶಾಲಿ ವಿಲಿಯಮ್‌ ಬಗ್ಗೆ ಒಂದು ಒಣ ಉಪನ್ಯಾಸವನ್ನು ನೀಡಿತು. ಡೋಡೋ ಪಕ್ಷಿಯು ಇವರೆನ್ನಲ್ಲ ಒಣಗಿಸಲು ಎಲ್ಲರನ್ನು ಒಳಗೊಂಡ ಸ್ಪಷ್ಟ ವಿಜಯಿಗಳಿಲ್ಲದ ವೃತ್ತಾಕಾರದ ರಹಸ್ಯಕೂಟದ ಓಟವನ್ನು ಏರ್ಪಡಿಸುವುದು ಉತ್ತಮವೆಂದು ನಿರ್ಧರಿಸಿತು. ಅಧ್ಯಾಯ 4 - ಮೊಲ ಸಣ್ಣ ಬಿಲ್‌ನ್ನು ಕಳುಹಿಸಿತು: ಬಿಳಿ ಮೊಲ ಮತ್ತೆ ಡಚಸ್‌ನ ಕೈಗವಸು ಮತ್ತು ಬೀಸಣಿಗೆಯನ್ನು ಹುಡುಕುತ್ತಾ ಕಾಣಿಸಿಕೊಂಡಿತು. ಆತ ಅಲೈಸ್‌ಗೆ ಮನೆಯೊಳಗೆ ಹೋಗಿ ಅವರನ್ನು ಹುಡುಕಿ ತರಲು ಆದೇಶಿಸಿದ, ಆದರೆ ಅವಳು ಒಳಪ್ರವೇಶಿಸುತ್ತಿದ್ದಂತೆಯೇ ಬೆಳೆಯಲು ಶುರುಮಾಡಿದಳು. ಗಾಬರಿಗೊಂಡ ಮೊಲ ಬಿಲ್‌ ಹಲ್ಲಿ, ಛಾವಣಿಗೆ ಹತ್ತಿ, ಚಿಮಣಿಯ ಮೂಲಕ ಇಳಿ ಎಂದು ತನ್ನ ವನಮಾಲಿಗೆ ಆದೇಶಿಸುತ್ತಾನೆ. . ಅಲೈಸ್ ಹೊರಗಡೆ ಸೇರಿಕೊಂಡು ಆಕೆಯ ದೈತ್ಯ ಬಾಹುಗಳನ್ನು ನಿಟ್ಟಿಸುತ್ತಿರುವ ಪ್ರಾಣಿಗಳ ಧ್ವನಿಯನ್ನು ಕೇಳಿಸಿಕೊಂಡಿತು. ಗುಂಪು ಆಕೆಯೆಡೆಗೆ ಸಣ್ಣ ಕಲ್ಲುಗಳನ್ನು ಬೀಸಿತು, ಆ ಕಲ್ಲುಗಳು ಸಣ್ಣ ಕೇಕ್‌ಗಳಾಗಿ ಮತ್ತೆ ಅಲೈಸ್ ಕುಗ್ಗುವಂತೆ ಮಾಡಿತು. ಅಧ್ಯಾಯ 5- ಕೇಟರ್‌ಪಿಲ್ಲರ್‌ನಿಂದ ಸಲಹೆ: ಅಲೈಸ್‌ ಅಣಬೆಯ ಮೇಲೆ ಬಂದಿತು. ಅದರ ಮೇಲೆ ಕುಳಿತಿದ್ದ ಕೇಟರ್‌ಪಿಲ್ಲರ್‌ (ಕಂಬಳಿ ಹುಳ)ಹುಕ್ಕಾ ಸೇದುತಿತ್ತು. ಕಂಬಳಿಹುಳ ಅಲೈಸ್‌ನ್ನು ಪ್ರಶ್ನಿಸಿತು, ಆಗ ಆಕೆ ಒಂದು ಪದ್ಯವನ್ನು ನೆನಪಿಸಿಕೊಳ್ಳಲಾಗದ ಅಸಮರ್ಥತೆಯೊಂದಿಗೆ ಜಟಿಲಗೊಂಡ ಪ್ರಸ್ತುತ ವ್ಯಕ್ತಿತ್ವ ಸಂದಿಗ್ಧತೆಯನ್ನು ಒಪ್ಪಿಕೊಳ್ಳುತ್ತಾಳೆ. ಸರಿದು ಹೋಗುವ ಮುನ್ನ ಕಂಬಳಿಹುಳು ಅಲೈಸ್‌ಗೆ, ಅಣಬೆಯ ಒಂದು ಭಾಗ ನಿನ್ನನ್ನು ಉದ್ದ ಮಾಡುತ್ತದೆ ಹಾಗೂ ಇನ್ನೊಂದು ಭಾಗ ಚಿಕ್ಕದಾಗಿ ಮಾಡುತ್ತದೆ ಎಂದು ಹೇಳಿತು. ಅಣಬೆಯಿಂದ ಎರಡು ತುಂಡುಗಳನ್ನು ಮುರಿದುಕೊಳ್ಳುತ್ತಾಳೆ. ಒಂದು ಭಾಗ ಆಕೆಯನ್ನು ಯಾವಾಗಿಗಿಂತಲೂ ಚಿಕ್ಕದಾಗಿ ಕುಗ್ಗಿಸುತ್ತದೆ, ಹಾಗೆಯೇ ಇನ್ನೊಂದು ಭಾಗ ಆಕೆಯ ಕತ್ತನ್ನು ಮರಗಳ ಹತ್ತಿರ ಹೋಗುವಷ್ಟು ಎತ್ತರಕ್ಕೆ ಬೆಳೆಯುವ ಹಾಗೆ ಮಾಡುತ್ತದೆ, ಆಗ ಗಿಳಿ ಆಕೆಯನ್ನು ಹಾವು ಎಂದು ತಿಳಿದುಕೊಳ್ಳುತ್ತದೆ. ಅಲೈಸ್‌ ಸ್ವಲ್ಪ ಪ್ರಯತ್ನಪಟ್ಟು ತನ್ನ ಸಾಮಾನ್ಯ ಎತ್ತರಕ್ಕೆ ಬಂದಿತು. ಆಕೆ ಚಿಕ್ಕ ಭೂಮಿಕಾಣಿಯ ಮೇಲೆ ಮುಗ್ಗುರಿಸಿ, ಸರಿಯಾದ ಎತ್ತರವನ್ನು ತಲುಪಲು ಅಣಬೆಯನ್ನು ಬಳಸುತ್ತಾಳೆ.

ಅಧ್ಯಾಯ 6 - ಹಂದಿ ಮತ್ತು ಕಾಳುಮೆಣಸು: ಡ್ಯೂಕ್ಸ್‌ ಆಫ್‌ ದಿ ಹೌಸ್‌ನಿಂದ ಫಿಷ್‌ ಫುಟ್‌ಮ್ಯಾನ್‌ಗೆ ಆಮಂತ್ರಣ ಬರುತ್ತದೆ, ಆ ಸಮಯದಲ್ಲಿ ಅವನು ಫ್ರಾಗ್‌ ಫುಟ್‌ಮ್ಯಾನ್‌ಗೆ ಪರಿಚಯಿಸಲ್ಪಡುತ್ತಾನೆ. ಆಲಿಸ್‌ ಇದನ್ನು ಗಮನಿಸುತ್ತಾಳೆ ಮತ್ತು ಕಪ್ಪೆಯ ಜೊತೆಗೆ ಮಾತನಾಡಿದ ನಂತರ ಅದನ್ನು ಮನೆಯೊಳಗೆ ಸ್ವಾಗತಿಸುತ್ತಾಳೆ. ಡ್ಯೂಕ್‌ನ ಅಡುಗೆಯವನು ತಾವು ಮಾಡಿದ ಅಡುಗೆಯನ್ನು ತುಂಬಾ ಉತ್ಸಾಹದಿಂದ ಮಾಡುತ್ತಿರುತ್ತಾನೆ. ಆದರೆ ಅದರಲ್ಲಿ ಹೆಚ್ಚಾಗಿ ಕಾಳು ಮೆಣಸು ಬಳಸಿದ್ದರಿಂದ ಅದು ಹೆಚ್ಚು ಖಾರಮಯವಾಗಿರುತ್ತದೆ. ಇದು ಆಲಿಸ್‌ ಮತ್ತು ಡ್ಯೂಕ್‌ನ ಮಗುವಿನ ಮೇಲೆ ಪರಿಣಾಮ ಬೀರುತ್ತದೆ (ಆದರೆ ಅದು ಅಡುಗೆಯವಳು ಮತ್ತು ಅವಳ ಚೆಶೈರ್‌ ಬೆಕ್ಕಿನ ಮೇಲಲ್ಲ) ಇದರಿಂದ ಅವರು ಪದೇ ಪದೇ ಸೀನುವುದಕ್ಕೆ ತೊಡಗುತ್ತಾರೆ. ಆಲಿಸ್‌ಗೆ ಡ್ಯೂಕ್‌ನು ಆ ಮಗುವನ್ನು ಹಸ್ತಾಂತರಿಸುತ್ತಾನೆ ಆದರೆ ಅದು ತಕ್ಷಣ ಹಂದಿಯಾಗಿ ಬದಲಾಗುತ್ತದೆ.

ಅಧ್ಯಾಯ 7-ಒಂದು ಹುಚ್ಚು ಟೀ ಪಾರ್ಟಿ: ಚೆಶೈರ್‌ ಬೆಕ್ಕು ಮರದ ಮೇಲೆ ಕಾಣಿಸಿಕೊಳ್ಳುತ್ತದೆ, ಮತ್ತು ಅವಳನ್ನು ಮಾರ್ಚ್‌ ಹೇರ್‌ನ ಮನೆಗೆ ದಾರಿ ತೋರಿಸುತ್ತದೆ. ಅವನು ಕೆಲಕ್ಷಣದಲ್ಲಿ ಮಾಯವಾಗುತ್ತಾನೆ ಆದರೆ ಗಾಳಿಯಲ್ಲಿ ತಂತಾನೆ ತೇಲುತ್ತ ಆಲಿಸ್‌ಳು ಹಲ್ಕಿರಿಯದ ಬೆಕ್ಕಿಲ್ಲ, ಬೆಕ್ಕಿಲ್ಲದೆ ಹಲ್ಕಿರಿಯುವುದು ಸಾಧ್ಯವಿಲ್ಲ ಎಂಬ ಹೇಳಿಕೆಯನ್ನು ನೀಡುವಂತೆ ಮಾಡುತ್ತಾಳೆ. ಆಲಿಸ್‌ ’ಹುಚ್ಚು’ ಟೀ ಪಾರ್ಟಿಯಲ್ಲಿ ಹ್ಯಾಟ್ಟರ್‌( ಈಗ ಸಾಮಾನ್ಯವಾಗಿ ಹುಚ್ಚು ಹ್ಯಾಟರ್‌ ಎಂದು ಕರೆಯಲಾಗುತ್ತದೆ),ಮಾರ್ಚ್‌ ಹೇರ್ ಮತ್ತು ಸುಮಾರು ಒಂದು ಅಧ್ಯಾಯ ಪೂರ ಮಲಗಿದ್ದ ಮಲಗುವ ಡೊರ್ಮೊಸ್‌ ಜೊತೆಗೆ ಅತಿಥಿಯಾಗುತ್ತಾಳೆ. ಇನ್ನುಳಿದ ಪಾತ್ರಗಳು ಆಲಿಸ್‌ಗೆ ನಿಗೂಢವಾಗಿರುತ್ತವೆ ಮತ್ತು ಹಲವಾರು ಉಪಕತೆಗಳು ಇರುತ್ತವೆ. ಹುಚ್ಚು ಹಾರ್ಟರ್‌ ಇಲ್ಲಿ ತಾವು ದಿನವಿಡಿ ಟೀಯನ್ನು ಕುಡಿಯುತ್ತೆವೆ ಏಕೆಂದರೆ ಕಾಲವು ನಮಗೆ ದಿನವಿಡೀ ಅಂದರೆ ಆರುಗಂಟೆಯವರೆಗೆ (ಟಿ ಸಮಯ) ನಿಂತುಕೊಳ್ಳುವ ಶಿಕ್ಷೆ ನೀಡಿದೆ ಎಂಬುದನ್ನು ಹೊರಗೆಡಹುತ್ತಾನೆ. ಆಲಿಸ್‌ ಹಲವಾರು ನಿಗೂಡ ವಿಷಯಗಳಿಂದಾಗಿ ಸುಸ್ತಾಗುತ್ತಾಳೆ ಮತ್ತು ಅವಮಾನಿತಳಾಗುತ್ತಾಳೆ. ಇದು ತಾನು ಈವರೆಗೆ ಭಾಗವಹಿಸಿದ ಅತ್ಯಂತ ಕೆಟ್ಟ ಟೀ ಪಾರ್ಟಿ ಎಂದು ಹೇಳಿ ಅಲ್ಲಿಂದ ಹೊರನಡೆಯುತ್ತಾಳೆ.

ಆಲಿಸ್ ಫ್ಲೆಮಿಂಗೊ ಜೊತೆಗೆ ಕ್ರಾಂಕ್ವೆಟ್ ಆಡಲು ಪ್ರಯತ್ನ
ದ ಗ್ರಿನ್ನಿಂಗ್ ಚೆಶೈರ್ ಕ್ಯಾಟ್

ಅಧ್ಯಾಯ 8-ರಾಣಿಯ ಚೆಂಡಾಟದ ಮೈದಾನ: ಅಲೈಸ್ ಟೀ ಪಾರ್ಟಿಯನ್ನು ಮುಗಿಸಿಕೊಂಡು ಗಾರ್ಡನ್‌ ಪ್ರವೇಶಿಸುತ್ತಾಳೆ, ಅವಳು ಅಲ್ಲಿಗೆ ಬಂದ ಮೇಲೆ ಮೂರು ಆಟಆಡುವ ಕಾರ್ಡುಗಳಲ್ಲಿ ಕೆಂಪು ಗುಲಾಬಿ ಗಿಡದಲ್ಲಿರುವ ಬಿಳಿ ಗುಲಾಬಿಗಳ ಚಿತ್ರವನ್ನು ಬಿಡಿಸಲಾಗಿರುತ್ತದೆ. ಏಕೆಂದರೆ ರಾಣಿಯ ಹೃದಯವು ಬಿಳಿ ಗುಲಾಬಿಗಳನ್ನು ದ್ವೇಷಿಸುತ್ತದೆ. ಅಧಿಕ ಕಾರ್ಡುಗಳು, ರಾಜರು ಮತ್ತು ರಾಣಿಯರ ಮೆರವಣಿಗೆ ನಡೆಯುತ್ತಿರುತ್ತದೆ ಮತ್ತು ಆ ಉದ್ಯಾನಕ್ಕೆ ಬಿಳಿ ಮೊಲವೊಂದು ಸಹ ಪ್ರವೇಶಿಸುತ್ತದೆ. ಅಲೈಸ್ ಮತ್ತೆ ರಾಜ ಮತ್ತು ರಾಣಿಯನ್ನು ಭೇಟಿಯಾಗುತ್ತಾಳೆ. ರಾಣಿ ತಾನು ಪದೆಪದೆ ಹೇಳುವ ಪದಗುಚ್ಚ "Off with his head!" ಎಂಬುದರ ಜೊತೆಗೆ ತನ್ನನ್ನು ಪರಿಚಯಿಸಿಕೊಳ್ಳುತ್ತಾಳೆ. ಆ ವಿಷಯದಲ್ಲಿ ಕೊಂಚ ಅತೃಪ್ತಿಯು ಆಕೆಗೆ ತೀರ ಸಮೀಪದ್ದಾಗಿತ್ತು. ಅಲೈಸ್ ರಾಣಿ ಮತ್ತು ಆಕೆಯ ಉಳಿದ ವಿಷಯಗಳೊಂದಿಗೆ ಚೆಂಡಾಟವನ್ನು ಆಡಲು ಆಹ್ವಾನಿಸುತ್ತಾಳೆ (ಅಥವಾ ಆದೇಶಿಸುತ್ತಾಳೆ), ಆದರೆ ಆಟವು ಅವ್ಯವಸ್ಥೆಯಲ್ಲಿ ಬೇಗನೆ ದುಸ್ಥಿಃತಿಗೆ ಇಳಿಯುತ್ತದೆ. ಜೀವವಿರುವ ರಾಜಹಂಸಗಳನ್ನು ದಾಂಡಿನಂತೆಯೂ ಮತ್ತು ಮುಳ್ಳುಹಂದಿಗಳನ್ನು ಚೆಂಡಿನಂತೆಯೂ ಬಳಸಿಕೊಳ್ಳಲಾಗಿತ್ತು ಮತ್ತು ಅಲೈಸ್ ಮತ್ತೊಮ್ಮೆ ಚೆಶೈರ್ ಕ್ಯಾಟ್‌ ಅನ್ನು ಭೇಟಿಯಾಗುತ್ತಾಳೆ, ಹೃದಯಗಳ ರಾಣಿಯು ತನ್ನ ಗಂಡನೊಂದಿಗೆ ಮತ್ತೆ ಚರ್ಚೆ ಮಾಡುತ್ತಿರುತ್ತಳೆ, ಕ್ಯಾಟ್‌ನ ತೆಲೆಗೆ ಹೊಡೆಯುತ್ತಾಳೆ, ಆದರೆ ಏಕೆಂದರೆ ಬೆಕ್ಕು ಡಚೆಸ್ಸ್‌ಗೆ ಸೇರಿದ್ದಾಗಿರುತ್ತದೆ, ರಾಣಿಯು ಈ ವಿಷಯವನ್ನು ತೀರ್ಮಾನಿಸಲು ಜೈಲಿನಿಂದ ಡಚ್ಚಸ್ ಅನ್ನು ಬಿಡುಗಡೆ ಮಾಡಲು ಪ್ರಚಾರ ಮಾಡುತ್ತಾಳೆ. ಅಧ್ಯಾಯ 9-ಸೋಗಿನ ಆಮೆಯ ಕಥೆ: ಡಚ್ಚೆಸ್ ಅನ್ನು ಅಲೈಸ್‌ಳ ಮನವಿಯಂತೆ ಚೆಂಡಾಟದ ಮೈದಾನಕ್ಕೆ ತೆಗೆದುಕೊಂಡು ಬರಲಾಯಿತು.ಆಕೆಯು ತನ್ನ ಸುತ್ತಲಿರುವ ಪ್ರತಿಯೊಂದು ನೀತಿಗಳನ್ನು ಹುಡುಕುವಲ್ಲಿ ಮಗ್ನಳಾಗಿದ್ದಳು. ಹೃದಯಗಳ ರಾಣಿಯು ಬಲವಂತದ ಬೆದರಿಕೆಯಲ್ಲಿ ಆಕೆಯನ್ನು ತೆಗೆದುಹಾಕುತ್ತಾಳೆ ಮತ್ತು ಗ್ರಿಫಾನ್‌ಗೆ ಅಲೈಸ್‌ಳನ್ನು ಪರಿಚಯಿಸುತ್ತಾಳೆ, ಅವನು ಆಕೆಯನ್ನು ಸೋಗಿನ ಆಮೆಯಾಗಿ ತೆಗೆದುಕೊಳ್ಳುತ್ತಾನೆ. ಸೋಗಿನ ಆಮೆಯು ತುಂಬಾ ದುಃಖತಪ್ತವಾಗಿರುತ್ತದೆ, ಆದರೆ ಅವನಿಗೆ ಯಾವುದೇ ದುಃಖವಿಲ್ಲ. ಅವನು ತಾನು ಶಾಲೆಯಲ್ಲಿ ನಿಜವಾದ ಆಮೆಯಾಗಿ ಹೇಗೆ ಬಳಸಲ್ಪಟ್ಟಿದ್ದೆ ಎಂಬ ತನ್ನ ಕಥೆಯನ್ನು ಹೇಳಲು ಪ್ರಯತ್ನಿಸುತ್ತಾನೆ, ಅದಕ್ಕೆ ಗ್ರಿಫಾನ್ ಅಡ್ಡಪಡಿಸುತ್ತಾನೆ, ಆಗ ಅವರು ಆಟವನ್ನು ಆಡುವರು. ಅಧ್ಯಾಯ 10-ಲೊಬ್ಸ್ಟರ್‌ ಕ್ವಾರ್ಡಿಲ್ಲೆ : ಅಲೈಸ್ (ತಪ್ಪುತಪ್ಪಾಗಿ) "'Tis the Voice of the Lobster" ಎಂದು ಬಾಯಿ ಪಾಠಹೇಳಿದಾಗ ಕಡಲೇಡಿ ಇಸ್ಪಿಟಾಟಕ್ಕೆ ಸೋಗಿನ ಆಮೆ ಮತ್ತು ಗ್ರಿಫಾನ್ ನೃತ್ಯ ಮಾಡಿದವು. ಸೋಗಿನ ಆಮೆಯು ಮುಂದಿನ ಪ್ರಯೋಗಕ್ಕೆ ಅಲೈಸ್‌ಳನ್ನು ಗ್ರಿಫಾನ್ ಅಡ್ಡಿಪಡಿಸಿದ ಸಂದರ್ಭದಲ್ಲಿ ಅವರಿಗೆ "ಬ್ಯೂಟಿಫುಲ್ ಸೋಪ್" ಎಂದು ಹಾಡಿತು.

ಅಧ್ಯಾಯ 11-ಟಾರ್ಟ್ಸ್‌ ಕದ್ದವರು ಯಾರು ?: ಆಲಿಸ್‌ಳು ಒಂದು ವಿಚಾರಣೆಗೆ ಹಾಜರಾಗಿದ್ದಳು ಅಲ್ಲಿ ಕ್ನೇವ್‌ ಆಫ್ ಹಾರ್ಟ್ಸ್‌‍ ರಾಣಿಯ ಟಾರ್ಟ್ಸ್‌ ಕದ್ದ ಆರೋಪಕ್ಕೆ ಗುರಿಯಾಗಿರುತ್ತಾಳೆ.

ಇದರ ನಿರ್ಣಾಯಕರಾಗಿ ಅನೇಕ ಪ್ರಾಣಿಗಳು ಭಾಗವಹಿಸಿರುತ್ತವೆ. ಅವುಗಳಲ್ಲಿ ಬಿಲ್‌ ಎಂಬ ಹಲ್ಲಿಯೂ, ವೈಟ್‌ ರಾಬಿಟ್‌ ನ್ಯಾಯಾಲಯದ ಕಹಳೆ ಊದುವವನಾಗಿರುತ್ತಾನೆ ಮತ್ತು ನ್ಯಾಯಾದೀಶರಾಗಿ ’ಕಿಂಗ್‌ ಆಫ್ ಹಾರ್ಟ್ಸ್‌‌‍’ ಇರುತ್ತಾರೆ.

ವಿಚಾರಣೆಯ ಸಮಯದಲ್ಲಿ ಆಲಿಸ್‌ಗೆ ಅವಳು ವೇಗವಾಗಿ ಬೆಳೆಯುತ್ತಿರುವುದು ಗೊತ್ತಾಗುತ್ತದೆ. ಡೋರ್‌ಮೌಸ್‌ ಆಲಿಸ್‌ಗೆ ಬೈಯುತ್ತಾಳೆ ಮತ್ತು ಅವಳಿಗೆ ಅಷ್ಟು ವೇಗವಾಗಿ ನೀನು ಬೆಳೆಯುವುದು ಸರಿ ಅಲ್ಲ. ಎಲ್ಲ ಗಾಳಿಯನ್ನು ನೀನೊಬ್ಬಳೇ ಕುಡಿದರೆ ಉಳಿದವರು ನಾವು ಏನು ಮಾಡೋದು ಎಂಬಂತೆ ಪ್ರಶ್ನೆ ಮಾಡುತ್ತದೆ.

ಆಲಿಸ್‌ ಗೇಲಿ ಮಾಡುತ್ತಾ ಡೋರ್‌ಮೌಸ್‌ನ ಆರೋಪವನ್ನು ತಳ್ಳಿ ಹಾಕುತ್ತಾಳೆ ಅಲ್ಲದೆ ಎಲ್ಲರೂ ಬೆಳೆಯುತ್ತಾರೆ ಅದಕ್ಕೆ ನಾನು ಬೆಳೆಯುತ್ತಿದ್ದೇನೆ ಅದರಲ್ಲಿ ತನ್ನ ತಪ್ಪೇನೂ ಇಲ್ಲ ಎಂದು ಹೇಳುತ್ತಾಳೆ.

ಮ್ಯಾಡ್‌ ಹಟ್ಟರ್‌, ರಾಜ ಕೇಳಿದ ಪ್ರಶ್ನೆಗೆಲ್ಲದಕ್ಕೂ ನೇರವಾಗಿ ಉತ್ತರಿಸದೇ ಸಿಟ್ಟುಬರುವಂತೆ ವರ್ತಿಸುತ್ತಿರುತ್ತಾನೆ ಮತ್ತು ಡ್ಯೂಕ್‌ನ ಅಡುಗೆ ಭಟ್ಟ ಇದಕ್ಕೆ ಸಾಕ್ಷಿಯಾಗುತ್ತಾನೆ.

ಅಧ್ಯಾಯ 12 -ಆಲಿಸ್‌ಳ ಸಾಕ್ಷಿ : ಆಲಿಸ್‌ಳನ್ನು ನಂತರ ಸಾಕ್ಷಿಗಾಗಿ ಕರೆಯಲಾಗುತ್ತದೆ. ಆಕಸ್ಮಿಕವಾಗಿ ಅವಳು ನಿರ್ಣಾಯಕರು ಕುಳಿತಿರುವ ಪೆಟ್ಟಿಗೆಯನ್ನು ಬಡಿಯುತ್ತಾಳೆ ಇದರಿಂದ ಅದರ ಮೇಲಿರುವ ಪ್ರಾಣಿಗಳೆಲ್ಲ ಕೆಳಗೆ ಬೀಳುತ್ತವೆ. ರಾಜನು ಎಲ್ಲ ನಿರ್ಣಾಯಕರು ತಮ್ಮ ತಮ್ಮ ಸ್ವ-ಸ್ಥಾನದಲ್ಲಿ ಕುಳಿತುಕೊಳ್ಳಬೇಕೆಂದು ಹೇಳುತ್ತಾನೆ. ಡೋರ್‌ಮೌಸ್‌ನಂತೆಯೇ, ರಾಜ ಮತ್ತು ರಾಣಿ ಕೂಡ ಅವಳು ವೇಗವಾಗಿ ಬೆಳೆಯುವುದನ್ನು ಕಂಡು ಅವಳನ್ನು ಗುಂಪಾಗಿ ಹೀಯಾಳಿಸುತ್ತಾರೆ. ಅವಳು ರಾಜ ಮತ್ತು ಕ್ವಿನ್‌ ಆಪ್‌ ಹಾರ್ಟ್ಸ್‌ ಅವರಲ್ಲಿ ಈ ಅಸಹನೀಯ ವಿಚಾರಣೆಯ ಕುರಿತು ವಾದ ಮಾಡುತ್ತಾಳೆ. ಅಲ್ಲದೆ ಅವಳು ಮಾತನಾಡುವುದನ್ನು ನಿಲ್ಲಿಸಲು ವಿರೋಧ ವ್ಯಕ್ತಪಡಿಸುತ್ತಾಳೆ. ರಾಣಿಯು ಅವಳ ಯಾವತ್ತಿನ ಗತ್ತಿನಲ್ಲಿ ಆಲಿಸ್‌ಳನ್ನು ಬೈಯುತ್ತಾಳೆ. ಆದರೆ ಆಲಿಸ್ ಹೆದರದೆ ಅವರೆಲ್ಲರನ್ನೂ ನೀವೆಲ್ಲ ಕೇವಲ ಒಂದು ಪ್ಯಾಕ್ ಕಾರ್ಡ್ಸ್‌ ಅಷ್ಟೆ ಎಂದು ಹೇಳುತ್ತಾಳೆ. ಆಲಿಸ್‌ಳ ಅಕ್ಕ ಅವಳನ್ನು ಅವಳ ಮುಖದ ಮೇಲೆಲ್ಲ ಬಿದ್ದಿದ್ದ ಆಟದ ಕಾರ್ಡ್‌ಗಳನ್ನು ಸರಿಸುತ್ತಾ ಟೀ ಕುಡಿಯುವುದಕ್ಕಾಗಿ ಎಬ್ಬಿಸುತ್ತಾಳೆ. ಆಲಿಸ್‌ ತನಗಾದ ವಿಸ್ಮಯ ಅನುಭವದ ಬಗ್ಗೆ ಯೋಚಿಸುತ್ತಾ ಅವಳ ಅಕ್ಕನನ್ನು ಯೋಚನೆ ಹಚ್ಚುತ್ತಾಳೆ.

ಪಾತ್ರಗಳು

[ಬದಲಾಯಿಸಿ]

thumb|right|250px|ಅದ್ಭುತ ಲೋಕದಲ್ಲಿ ಆಲಿಸ್‌ಳ ಸುತ್ತುವರೆದ ನಡವಳಿಕೆಗೆ ಪೀಟರ್ನೆವೆಲ್ಸ್ ನ ವಿವರಣೆ(1890)

ಪಾತ್ರಗಳ ಕುರಿತು ತಪ್ಪು ಕಲ್ಪನೆ

[ಬದಲಾಯಿಸಿ]

ಟ್ವೀಡ್ಲೆಡಮ್ ಮತ್ತು ಟ್ವೀಡ್ಲೆಡೀ, ಹಂಪ್ಟಿ ಡಂಪ್ಟಿ ಹಾಗೂ ಜ್ಯಾಬರ್‌ವೊಕ್ ಅದ್ಭುತ ಲೋಕದಲ್ಲಿ ಆಲಿಸ್‌ಳ ಸಾಹಸಗಳ ಲ್ಲಿನ ಪಾತ್ರಗಳು ಎಂದು ಅನೇಕ ಬಾರಿ ತಿಳಿಯಲಾಯಿತಾದರೂ, ನಿಜವಾಗಿ ಅವರು ಥ್ರೂ ದಿ ಲುಕಿಂಗ್ ಗ್ಲಾಸ್ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುವರು. ಅವು ಅನೇಕ ಬಾರಿ ಚಿತ್ರದ ಅನುವಾದಗಳಲ್ಲಿ ಒಳಗೊಂಡಿದ್ದರೂ, ಯಾವುದು ಗೊಂದಲಕ್ಕೆ ಕಾರಣವಾಗುವ ಹೆಚ್ಚಾಗಿ ಸರಳವಾಗಿ "ಅದ್ಭುತ ಲೋಕದಲ್ಲಿ ಆಲಿಸ್," ಎಂದು ಕರೆಯಲ್ಪಡುವವು. ಕ್ವೀನ್ ಆಫ್ ಹಾರ್ಟ್ಸ್ ಸಾಮಾನ್ಯವಾಗಿ ಥ್ರೂ ದಿ ಲುಕಿಂಗ್ ಗ್ಲಾಸ್‌ ನ ಕಥೆಯ ಭಾಗದಲ್ಲಿ ಕಾಣಿಸಿಕೊಳ್ಳುವ ರೆಡ್ ಕ್ವೀನ್‌ನಿಂದಾಗಿ ತಪ್ಪು ತಿಳಿಯಲ್ಪಡುತ್ತದೆ, ಆದರೆ ರಾಣಿಯ ಹೊರತಾಗಿ ಅದರ ಪಾತ್ರವು ಹೆಚ್ಚೇನನ್ನು ಹಂಚಿಕೊಳ್ಳುವುದಿಲ್ಲ. ಮೊದಲ ಪುಸ್ತಕದಲ್ಲಿ ಪ್ರಸ್ತುತಪಡಿಸಲಾದ ಕ್ವೀನ್ ಅಫ್ ಹಾರ್ಟ್ಸ್, ಇಸ್ಪೀಟು ಕಟ್ಟಿನ ಆಕೃತಿಗಳು, ಹಾಗೆಯೇ ಮುಂದುವರಿದ ಭಾಗದಲ್ಲಿ ಮುಖ್ಯ ವಿಷಯ ಚೆಸ್ ಆಗಿದ್ದು ಕೆಂಪು ರಾಣಿಯು ಕೆಂಪು ಚೆಸ್ ಮಾದರಿಯನ್ನು ಪ್ರತಿನಿಧಿಸುತ್ತದೆ. ಹಲವು ಅಳವಡಿಕೆಗಳು ಹೆಚ್ಚು ಗೊಂದಲಕ್ಕೆ ಕಾರಣವನ್ನುಂಟುಮಾಡುತ್ತಾ, ಪಾತ್ರಗಳನ್ನು ಮಿಶ್ರಗೊಳಿಸುತ್ತದೆ.

ಪಾತ್ರದ ಮುನ್ನುಡಿ

[ಬದಲಾಯಿಸಿ]

ಬೋಟಿಂಗ್ ಪಾರ್ಟಿ ಸದಸ್ಯರು ಮೊದಲು ಕಾರೊಲ್‌ರ ಕಥೆ ಕೇಳಿದುದನ್ನು ಎಲ್ಲ ಅಧ್ಯಾಯ 3ರಲ್ಲಿ ("ಎ ಕಾಕಸ್ ಟೇಲ್ ಎಂಡ್ ಎ ಲಾಂಗ್ ಟೇಲ್") ಒಂದು ಅಥವಾ ಇನ್ನೊಂದು ರೂಪದಲ್ಲಿ ತೋರಿಸಲಾಗಿದೆ. ಅಲ್ಲಿ ಖಂಡಿತವಾಗಿ, ಆಲಿಸ್ ಲಿಡ್ಡೆಲ್ ಆಕೆಯೇ, ಕ್ಯಾರೊಲ್, ಅಥವಾ ಚಾರ್ಲಸ್ ಡಾಗ್ಸನ್, ಡೋಡೊ ಎಂದು ವ್ಯಂಗ್ಯಚಿತ್ರಿಸಲಾಯಿತು. ಕ್ಯಾರೊಲ್ ಡೋಡೊ ಎಂದು ಕರೆಯಲ್ಪಟ್ಟರು ಏಕೆಂದರೆ ಡಾಗ್ಸನ್ ಮಾತನಾಡಿದಾಗ ತೊದಲುತ್ತಿದ್ದರು, ಹೀಗೆ ಒಂದು ವೇಳೆ ಅವರು ತಮ್ಮ ಕೊನೆಯ ಹೆಸರನ್ನು ಹೇಳಿದರೆ ಅದು ಡೊ-ಡೊ -ಡಾಗ್ಸನ್ ಎಂದಾಗುತ್ತಿತ್ತು. ಕೆನನ್ ಡಕ್‌ವರ್ತ್ ಬಾತುಕೋಳಿಯಾಗಿ ಉಲ್ಲೇಖಿಸಲ್ಪಟ್ಟರು, ಲೋರಿಯಾಗಿ ಲೊರಿನಾ ಲಿಡ್ಡೆಲ್, ಮತ್ತು ಹದ್ದಿನ ಮರಿಯಾಗಿ ಈಡೆಥ್ ಲಿಡ್ಡೆಲ್ (ಆಲಿಸ್ ಲಿಡ್ಡೆಲ್ಸ್ ಸಹೋದರಿಯರು). ಬಹುಶಃ ಬಿಲ್ ದಿ ಲಿಜಾರ್ಡ್ ಬೆಂಜಮಿನ್ ಡಿಸ್ರೇಲಿ ಅವರ ಹೆಸರಿನ ಒಂದು ಕಥೆ. ಥ್ರೂ ದಿ ಲುಕಿಂಗ್ ಗ್ಲಾಸ್ ಮೇಲೆ ಟೆನ್ನೀಲ್‌ರ ಒಂದು ವಿಮರ್ಶೆಯು ಹೀಗೆ ಹೇಳುತ್ತದೆ, ಕಾಗದ ಟೊಪ್ಪಿಯನ್ನು ಧರಿಸಿದ "ಮ್ಯಾನ್ ಇನ್ ವೈಟ್ ಪೇಪರ್" (ಯಾರನ್ನು ಆಲಿಸ್ ರೈಲಿನಲ್ಲಿ ಅವಳ ಸಹ ಪ್ರಯಾಣಿಕನಾಗಿ ಭೇಟಿಯಾಗುತ್ತಾಳೆ), ಪಾತ್ರವು ಡಿಸ್ರೇಲಿ ಅವರ ವ್ಯಂಗ್ಯಚಿತ್ರವನ್ನು ನಿರೂಪಿಸುತ್ತದೆ ಎಂದು. ದಿ ಲಯನ್ ಮತ್ತು ದಿ ಯುನಿಕಾರ್ನ್ ವಿಮರ್ಶೆಯು ಕೂಡ ಟೆನ್ನೀಲ್‌ರ ಗ್ಲ್ಯಾಡ್‌ಸ್ಟೋನ್ ಹಾಗೂ ಡಿಸ್ರೇಲಿ ಮೇಲಿನ ಜೋರಿನ ವಿಮರ್ಶೆಗೆ ಸಮಾನ ಸದೃಶ ವಿಮರ್ಶೆಯನ್ನು ಹೊಂದಿತ್ತು. ಹ್ಯಾಟುಗಾರ ಪಾತ್ರವು ಹೆಚ್ಚಾಗಿ ಆಕ್ಸ್ ಫರ್ಡ್‌ನಲ್ಲಿ ತನ್ನ ಸಾಂಪ್ರದಾಯಿಕವಲ್ಲದ ಆವಿಷ್ಕರಣಕ್ಕೆ ಹೆಸರುವಾಸಿಯಾದ ಪೀಠೋಪಕರಣ ವ್ಯಾಪಾರಿ ಥಿಯೊಫಿಲಸ್ ಕಾರ್ಟರ್ ಅವರನ್ನು ಹೋಲುತ್ತದೆ. ಟೆನ್ನೀಲ್ ಕ್ಯಾರಲ್‌ರ ಸಲಹೆಯ ಮೇರೆಗೆ ಕಾರ್ಟರ್‌ರನ್ನು ಹೋಲುವ ಟೊಪ್ಪಿಗಾರ (ಹ್ಯಾಟರ್) ನನ್ನು ಸ್ಪಷ್ಟವಾಗಿ ಚಿತ್ರಿಸಿದರು. ಡಾರ್ಮೌಸ್, ಮೂವರು ಪುಟ್ಟ ಸಹೋದರಿಯರಾದ ಎಲ್ಸಿ, ಲೇಸಿ, ಮತ್ತು ಟಿಲ್ಲಿ ಅವರ ಕಥೆಯನ್ನು ಹೇಳುತ್ತದೆ. ಇವರೆಲ್ಲರು ಲಿಡ್ಡೆಲ್ ಸಹೋದರಿಯರು: ಎಲ್ಸಿ ಎಲ್.ಸಿ. ಆಗಿ (ಲೊರಿನಾ ಶಾರ್ಲೆಟ್), ಟಿಲ್ಲಿ ಎಡಿಥ್ ಆಗಿ (ಅವಳ ಕುಟುಂಬದ ಅಡ್ಡ ಹೆಸರು ಮಟಿಲ್ಡಾ), ಮತ್ತು ಲೇಸಿ ಎನ್ನುವುದು ಆಲಿಸ್‌ನ ಅಕ್ಷರಪಲ್ಲಟ. ಮಾಕ್ ಟರ್ಟಲ್ ಎನ್ನುವುದು ಡ್ರಾವ್ಲಿಂಗ್ ಮಾಸ್ಟರ್ ಅವರ ನುಡಿ, "ಒಂದು ಮುದಿ ಕಾಂಗರ್ ಹಾವುಮೀನು," ಅದು ವಾರಕ್ಕೊಮ್ಮೆ "ಎಳೆಯಲು, ವಿಸ್ತರಿಸಲು ಮತ್ತು ಸುರುಳು ತಂತಿಯಲ್ಲಿ ಮಸುಕಾಗಿಸುವುದು." ಹೇಳಿಕೊಡಲು ಬರುವುದು. ಇದು, ಯಾರು ವಾರಕ್ಕೊಮ್ಮೆ ಲಿಡ್ಡೆಲ್ ಮನೆಗೆ ಬಂದು ಮಕ್ಕಳಿಗೆ ಚಿತ್ರಕಲೆ , ರೇಖಾಚಿತ್ರ ಮತ್ತು ತೈಲಚಿತ್ರ ಹೇಳಿಕೊಡುವ ಕಲೆಯ ವಿಮರ್ಶಕ ಜಾನ್ ರುಸ್ಕಿನ್ ಅವರನ್ನು ಉಲ್ಲೇಖಿಸುತ್ತದೆ. (ಮಕ್ಕಳು ನಡೆಸಿದರು, ವಾಸ್ತವದಲ್ಲಿ, ಚೆನ್ನಾಗಿ ಕಲಿತರು; ಆಲೀಸ್ ಲಿಡ್ಡೆಲ್, ಪ್ರತಿಯೊಬ್ಬರಿಗೆ, ಬಹಳಷ್ಟು ನೈಪುಣ್ಯತೆಯ ಜಲವರ್ಣಗಳನ್ನು ತಯಾರಿಸಿದಳು.) ಮಾಕ್ ಟರ್ಟಲ್ (ಆಮೆ) ಕೂಡ "ಬ್ಯೂಟಿಫುಲ್ ಸೂಪ್" ಹಾಡಿತು. ಈ ಪದ್ಯವು, ಲಿಡ್ಡೆಲ್ ಮನೆಯಲ್ಲಿ ಯಾವ ಅದೇ ಬೇಸಿಗೆಯಲ್ಲಿ ಲೆವಿಸ್ ಕೆರೊಲ್‌ ಅವರು ಪ್ರಥಮ ಬಾರಿಗೆ ಭೂಮಿಯ ಮೇಲೆ ಆಲಿಸ್‌ಳ ಸಾಹಸಗಳು ಕಥೆಯನ್ನು ಹೇಳಿದಾಗ ಲೊರಿನಾ, ಆಲಿಸ್ ಮತ್ತು ಎಡಿಥ್ ಲಿಡ್ಡೆಲ್ ಈ ಮೂವರಿಂದ ಲೆವಿಸ್ ಕೆರೊಲ್‌‌ಗಾಗಿ ಹಾಡಲ್ಪಟ್ಟ "ಸ್ಟಾರ್ ಆಫ್ ದಿ ಈವ್ನಿಂಗ್, ಬ್ಯೂಟಿಫುಲ್ ಸ್ಟಾರ್," ಗೀತೆಯ ಅಣುಕು ಪದ್ಯ.[೧೨]

ಪರಿವಿಡಿ

[ಬದಲಾಯಿಸಿ]

ಕವಿತೆಗಳು ಹಾಗೂ ಗೀತೆಗಳು

[ಬದಲಾಯಿಸಿ]

---ಟೆನ್ನಿಲ್‌ರ ನಿದರ್ಶನ--- ಜಾನ್ ಟೆನ್ನಿಲ್ ರ ವಿವರಣೆಯಲ್ಲಿ ಆಲಿಸ್, ಕಪ್ಪು ಕೂದಲು ಮತ್ತು ಚಿಕ್ಕ ಮುಂಗುರಳನ್ನು ಹೊಂದಿದ ಯಾವ ನಿಜವಾದ ಆಲಿಸ್ ಲಿಡ್ಡೆಲ್ ರನ್ನು ಚಿತ್ರಿಸುವುದಿಲ್ಲ. ಒಂದು ಅವಿಚ್ಛಿನ್ನ ದಂತಕಥೆಯಿದೆ, ಅದೆಂದರೆ ಕ್ಯಾರಲ್ ಟೆನ್ನಿಲ್‌ರ ಬಳಿ ಮತ್ತೊಬ್ಬ ಬಾಲ್ಯ-ಸ್ನೇಹಿತೆ, ಮೇರಿ ಹಿಲ್ಟನ್ ಬೇಕಾಕ್‌ರ ಒಂದು ಭಾವಚಿತ್ರ ಕಳುಹಿಸಿಕೊಟ್ಟರು, ಆದರೆ ಇದಕ್ಕೆ ಯಾವ ಸಾಕ್ಷಿ ಇಲ್ಲ, ಇನ್ನೂ ಬೆಳಕಿಗೆ ಬರಬೇಕಾಗಿದೆ ಹಾಗೂ ಟೆನ್ನಿಲ್ ನಿಜವಾಗಿ ಬೇಕಾಕ್‌ರನ್ನು ತಮ್ಮ ರೂಪದರ್ಶಿಯಾಗಿ ಬಳಸಿಕೊಂಡರೆ ಎನ್ನುವುದು ವಾದಕ್ಕೆ ಗುರಿಯಾಗಿದೆ. ---ಜನಪ್ರಿಯ ಸಾಲುಗಳು ಮತ್ತು ನುಡಿತಗಳು--- ಶೀರ್ಷಿಕೆಯಲ್ಲಿ ಬರುವ "ಅದ್ಭುತಲೋಕ" ಪದ, ಭಾಷೆಯನ್ನು ನಮೂದಿಸುತ್ತದೆ ಮತ್ತು ಅದ್ಭುತವಾದ ಕಲ್ಪನಾ ಸ್ಥಳವನ್ನು ಅಥವಾ ಹಾಗಲ್ಲದಿದ್ದರೆ ಒಬ್ಬರು ಅಂಥಹ ಲಕ್ಷಣಗಳಿರುವ ಕನಸನ್ನು ಕಂಡ ಒಂದು ನಿಜ-ಜಗತ್ತಿನ ಸ್ಥಳವನ್ನು ಉಲ್ಲೇಖಿಸುತ್ತದೆ. ಇದು, ಹೆಚ್ಚಿನದಾಗಿ ಆಲಿಸ್‌ನಂತೆ, ವಿಶಾಲವಾಗಿಪ್ರಸಿದ್ಧ ಸಂಸ್ಕೃತಿಯಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. [[ಫೈಲ್:ರಕ್ಯಾಮ್ ಅಲಿಸ್.jpg|thumb|250px|right|ಬಿಳಿ ಮೊಲದ ಜೊತೆ ಆಲಿಸ್‌ನ ಚಿತ್ರ ಆರ್ತುರ್ ರಕ್‌ಕ್ಯಾಮ್‌ರಿಂದ ]] "ಡೌನ್ ದ ರಾಬಿಟ್-ಹೋಲ್," ಈ ಪುಸ್ತಕದ ಅಧ್ಯಾಯ 1, ತುಂಬಾ ಪ್ರಸಿದ್ಧವಾಗಿದ್ದು ಅಜ್ಞಾತ ಸ್ಥಳಕ್ಕೆ ಸಾಹಸ ಯಾತ್ರೆ ಕೈಗೊಳ್ಳುವವರಿಗೆ ಸ್ಪೂರ್ತಿಯಾಯಿತು. ಔಷಧ ಸಂಪ್ರದಾಯದಲ್ಲಿ, "ಗೋಯಿಂಗ್ ಡೌನ್ ದಿ ರೆಬಿಟ್ ಹೋಲ್" ಭ್ರಮಜನಕ ಔಷಧ ತೆಗೆದುಕೊಳ್ಳಲು ಇದು ಒಂದು ರೂಪಕ, ಅಂತೆಯೇ ಕ್ಯಾರಲ್‌ರ ಕಾದಂಬರಿಯಲ್ಲಿ ಇಂಥದ್ದೇ ಬಗೆ [ವೈಟ್ ರೆಬಿಟ್ (ಹಾಡು) [ಡ್ರಗ್ ಟ್ರಿಪ್]] ನಲ್ಲಿ ಕಾಣಿಸುತ್ತದೆ. ಅಧ್ಯಾಯ 6ರಲ್ಲಿ, ಚೆಶೈಯರ್ ಬೆಕ್ಕು ಕಾಣೆಯಾದಾಗ ಆಲಿಸ್ ತನ್ನ ಮರೆಯಲಾಗದ ಮುಂದಿನ ಸಾಲುಗಳಲ್ಲಿ ಹೀಗೆ ಹೇಳುತ್ತಾಳೆ:"....ಬೆಕ್ಕು ಇಲ್ಲದ ಗ್ರಿನ್! ನನ್ನ ಜೀವನದಲ್ಲಿ ನಾನು ಎಂದಿಗೂ ನೋಡಿಲ್ಲದ ಹೆಚ್ಚಿನ ಕುತೂಹಲದ ಘಟನೆ ಇದಾಗಿದೆ!" ಅಧ್ಯಾಯ 7,ರಲ್ಲಿ ಹ್ಯಾಟ್ಟರ್ ಉತ್ತರವಿಲ್ಲದ ಪ್ರಸಿದ್ದ ಒಗಟುಕೊಡುತ್ತಾನೆ: "ಬರೆಯುವಮಿರುಗುಕಪ್ಪಿನಮೇಜಿನಂತೆ ಯಾಕೆ?" ಆದಾಗ್ಯೂ ಕರೋಲ್ ಮಿರುಗುಗಪ್ಪಿಗೆ ಯಾವುದೇ ಪರಿಹಾರ ಕೊಡಲು ಇಚ್ಛಿವುದಿಲ್ಲಾ,1896ರ ಹೊಸ ಆವೃತ್ತಿಯ "ಆಲಿಸ್" ಪ್ರಸ್ತಾವನೆಯಲ್ಲಿ, ಅವನು ಹಲವಾರು ಉತ್ತರಗಳಿಗೆ ಸಲಹೆ ಸೂಚಿಸುತ್ತಾನೆ: "ಏಕೆಂದರೆ ಇದು ಕೆಲವು ನೋಟ್ಸ್‌ಗಳನ್ನು ನಿರ್ಮಾಣ ಮಾಡಬಹುದು, ಆದಾಗ್ಯೂ ಅವುಗಳು ತುಂಬಾ ನೀರಸವಾಗಿರುತ್ತವೆ; ಮತ್ತು ಯಾವತ್ತೂ ಇದನ್ನು ತಪ್ಪು ಮುಕ್ತಾಯದಲ್ಲಿ ಇಡಲಾಗಿರಲಿಲ್ಲ!" ("never" ಶಬ್ಧದ ಕಾಗುಣಿತವನ್ನು ಗಮನಿಸಿ ಇದು "nevar" ಎಂದು ಬರೆಯಲಾಗಿದ್ದು ಮುಂದೆ ಇದನ್ನು ತಿರುವುಮುರುವಾಗಿಸಿದಾಗ "raven" ಎಂದಾಯಿತು. ಈ ಶಬ್ದ,ನಂತರದ ಆವೃತ್ತಿಗಳಲ್ಲಿ "ಸರಿಪಡಿಸಲ್ಪಟ್ಟಿತು" "never" ಮತ್ತು ಕರೊಲ್‌ರ ಚಮತ್ಕಾರಿಕ ಶಬ್ದ ಕಾಣೆಯಾಯಿತು.) ಒಗಟು ಪರಿಣಿತ ಸ್ಯಾಮ್ ಲಾಯ್ಡ್ಕೆಳಕಂಡ ಪರಿಹಾರಗಳನ್ನು ನೀಡಿದ್ದಾನೆ: *ಯಾವ ಟಿಪ್ಪಣಿಗೆ ಅವರು ಗುರುತಿಸಿದ್ದರೋ ಆ ಟಿಪ್ಪಣಿ ಸಂಗೀತದ ಟಿಪ್ಪಣಿಯಾದ್ದರಿಂದ ಟಿಪ್ಪಣಿಸಲಿಲ್ಲ*ಪೋಇಬ್ಬರ ಬಗ್ಗೆ ಬರೆದಿದ್ದಾನೆ, *ಅವರಿಬ್ಬರೂ ಗರಿಯಿಂದ ಮಾಡಿದ ಮಸಿ ಲೇಖನಿಯನ್ನು ಹೊಂದಿದ್ದಾರೆ("ಇಂಕ್ವೆಲ್ಸ್") *ಬಿಲ್ಸ್ ಮತ್ತು ಟೇಲ್ಸ್("ಬಾಲಗಳು")ಇವರು ಅವರ ಗುಣಲಕ್ಷಣಗಳಲ್ಲಿ ಇದ್ದಾರೆ. *ಅವರಿಬ್ಬರೂ ಅವರವರ ಕಾಲಿನ ಮೇಲೆ ನಿಂತಿದ್ದರಿಂದ ತಮ್ಮ ಕಳುವನ್ನು ಮುಚ್ಚಿಡುತ್ತಾರೆ.("ಕಳವುಗಳು)ಮತ್ತು ಇನ್ನೂ ಅನೇಕ ಇತರೆ ಪಟ್ಟಿ ಮಾಡಿದ ಉತ್ತರಗಳನ್ನು ಮುಚ್ಚಿಹಾಕು In ಫ್ರಾಂಕ್‌ ಬೆಡ್ಡರ್‌ನ ಕಾದಂಬರಿಸಿಯಿಂಗ್‌ ರೆಡ್‌ನಲ್ಲಿ, ಮುಖ್ಯ ವಿರೋಧ ಪಾತ್ರದ, ಕ್ವೀನ್‌ ರೆಡ್‌ (ಮೆಗಾಲೊಮೆನಿಯಾಕ್‌ ವಿಡಂಬನಾತ್ಮಕ ಘಟನೆಯಾಗಿ ಕ್ವಿನ್‌ ಆಫ್‌ ಹಾರ್ಟ್ಸ್‌‍) ಲೆವಿಸ್‌ ಕ್ಯಾರೋಲ್‌ನನ್ನು ಭೇಟಿ ಮಾಡುತ್ತಾಳೆ ಮತ್ತು ಸಮಸ್ಯೆಗೆ ಉತ್ತರವಾಗಿ "ನಾನು ಹಾಗೆ ಹೇಳುತ್ತೇನೆ ಅದಕ್ಕೆ ಅದು ಹೀಗೆ " ಎಂಬ ಉತ್ತರವನ್ನು ಪಡೆಯುತ್ತಾಳೆ.

ಕ್ಯಾರೊಲ್‌ ಇವಳ ವಿರೋಧ ಕಟ್ಟಿಕೊಳ್ಳಲು ತುಂಬಾ ಭಯಪಡುತ್ತಿರುತ್ತಾಳೆ. ಯಾವಾಗಲೂ ಕ್ವೀನ್‌ ಆಫ್‌ ಹಾರ್ಟ್ಸ್‌ ಸಿಟ್ಟಾದಾಗ "ಆಫ್‌ ವಿತ್‌ ಹರ್ ಹೆಡ್‌" ಎಂಬ ವಾಕ್ಯವನ್ನು ಉಪಯೋಗಿಸುತ್ತಿರುತ್ತಾಳೆ. ಆಲಿಸ್‌ಳ ಕುರಿತಾಗಿ ಹಾಗೂ ಹೆಚ್ಚಾಗಿ ಉಳಿದೆಲ್ಲರ ಕುರಿತಾಗಿಯೂ ಹೆಚ್ಚಾಗಿ ಸಿಟ್ಟಾಗಿರುತ್ತಾಳೆ. ಇಲ್ಲಿ ಕ್ಯಾರೊಲ್‌ ಶೆಕ್ಸ್‌ಫಿಯರ್‌ನ ರಿಚರ್ಡ್‌ III (III, iv, 76) ಶೆಕ್ಸ್‌ಫಿಯರ್‌ ನಾಟಕದಲ್ಲಿ ರಿಚರ್ಡ್‌ ಲಾರ್ಡ್‌ ಹೆಸ್ಟಿಂಗ್ಸ್‌‍ನ ಗಲ್ಲು ಹಾಕಿದ್ದನ್ನು ನೋಡುತ್ತಾ ಅಳುತ್ತಾ "ಆಫ್‌ ವಿತ್‌ ಹಿಸ್‌ ಹೆಡ್‌" ಎಂಬ ಪದಪ್ರಯೋಗವನ್ನು ಮಾಡುತ್ತಾನೆ. ಇದನ್ನು ಇಲ್ಲಿ ಕ್ಯಾರೊಲ್ ಪಾತ್ರ ಬಳಸಿಕೊಂಡಿರಬಹುದು ಎಂದುಕೊಳ್ಳಲಾಗಿದೆ..‌ ಆಲಿಸ್‌ "ಈಟ್‌ ಮಿ" ಎಂದು ಬರೆದ ಕೇಕ್‌ ತಿಂದ ನಂತರ ದೊಡ್ಡದಾಗಿ ಬೆಳೆಯತೊಡಗುತ್ತಾಳೆ ಮತ್ತು "curiouser and curiouser," ಎಂದು ಕೂಗಿಕೊಳ್ಳುತ್ತಾಳೆ. ಇವತ್ತಿಗೂ ಕೂಡ ಒಂದು ಸಮಾರಂಭವು ಅದ್ಭುತವಾಗಿದ್ದಾಗ ಅದನ್ನು ವರ್ಣಿಸಲು ಈ ಶಬ್ಧ ಬಳಸುವುದುಂಟು. ಚೆಶೈರ್‌ ಕ್ಯಾಟ್‌ ಆಲಿಸ್‌ಗೆ "We're all mad here," ಎಂದು ತಿಳಿಸುವ ಸಾಲನ್ನು ಇವತ್ತಿಗೂ ಹಲವಾರು ವರ್ಷಗಳಿಂದ ಬಳಸಲಾಗುತ್ತಿದೆ. ಕ್ಯಾರೊಲ್‌ ಗಣಿತಜ್ಞೆಯಾಗಿದ್ದರಿಂದ ಕ್ರೈಸ್ತ್‌ ಚರ್ಚ್‌ ಈ ಮೇಲಿನ ಸಾಲಿನಲ್ಲಿರುವ ==ಸಿಂಬಾಲಿಸಮ್‌== ===ಗಣಿತ=== ಮುಂತಾದ ವಿಷಯಗಳನ್ನೊಳಗೊಂಡಿರುವುದರಿಂದ ಟೆಂಪ್ಲೇಟು:ಸೈಟ್‌ ಬುಕ್‌ ಅದರಲ್ಲಿ ಹೆಚ್ಚೆಚ್ಚು ಗಣಿತಾತ್ಮಕವಾದ ಉಲ್ಲೇಖಗಳು ಮತ್ತು ಗಣಿತಾತ್ಮಕ ಪರಿಕಲ್ಪನೆಗಳು ಈ ಎಲ್ಲ ಕಥೆಗಳಲ್ಲಿ ಕಂಡುಬರುತ್ತದೆ ಥ್ರೂ ದಿ ಲುಕಿಂಗ್‌ ಗ್ಲಾಸ್‌; ಉದಾಹರಣೆಗೆ: * ಅಧ್ಯಾಯ 1, " ಡೌನ್‌ ದಿ ರಾಬಿಟ್‌-ಹೋಲ್‌," ಆಲಿಸ್‌ ಸಣ್ಣವಲಾಗುತ್ತಿರುವ ಸಂಧರ್ಬದಲ್ಲಿ, ಆಲಿಸ್‌ ಯಾವ ಗಾತ್ರದವರೆಗೆ ಅವಳು ಸಣ್ಣವಳಾಗಬಹುದು ಎಂಬ ತಾತ್ವಿಕ ಯೋಚನೆಯನ್ನು ಹುಟ್ಟುಹಾಕುತ್ತಾಳೆ. ಅದಲ್ಲದೆ "ಮೇಣದ ಬತ್ತಿಯ ರೀತಿಯಲ್ಲಿ,ಎಲ್ಲ ಸೇರಿ ಹೊರಹೋಗುವ."; ಈ ಪರಿಕಲ್ಪನೆಯು ವಿಮರ್ಶಾತ್ಮಕವಾಗಿ ಮಿತಿ ಹೇಳುತ್ತದೆ. * ಅಧ್ಯಾಯ 2, "ದಿ ಪೂಲ್‌ ಆಪ್‌ ಟಿಯರ್ಸ್‌‍," ಆಲಿಸ್‌ಳು ಇದರಲ್ಲಿ ದ್ವಿಗುಣಗೊಳ್ಳುವಿಕೆಯನ್ನು ಪ್ರಯೋಗಿಸುತ್ತಾಳೆ ಆದರೆ ಅದು ವಿರುದ್ಧವಾದ ಫಲಿತಾಂಶವನ್ನು ನೀಡುತ್ತದೆ:" ಈಗ ನೋಡು: ನಾಲ್ಕು ಬಾರಿ ಐದು ಸೇರಿದರೆ ಹನ್ನೆರಡು, ಮತ್ತು ನಾಲ್ಕು ಬಾರಿ ಆರು ಹದಿಮೂರು, ಮತ್ತು ನಾಲ್ಕು ಬಾರಿ ಏಳು ಸೇರಿದರೆ-ಓಹ್‌ ನನ್ನ ಮುದ್ದು! ನಾನು ಈ ಬೆಲೆಯಲ್ಲಿ ಇಪ್ಪತ್ತನ್ನು ಪಡೆದುಕೊಳ್ಳುವುದು ಸಾಧ್ಯವಿಲ್ಲ!" ಇದು ವಿಭಿನ್ನ ರೀತಿಯಲ್ಲಿ ಅಂಕೆಗಳನ್ನು ಬಳಸುವ ವಿಧಾನವನ್ನು ತಿಳಿಸಿಕೊಡುತ್ತದೆ. ಮೂಲಗಳು ಮತ್ತು ಸ್ಥಾನಾತ್ಮಕ ಸಂಖ್ಯಾ ಪದ್ಧತಿ (4 x 5 = 12 ಮೂಲವಾಗಿ 18 ಅಂಕನ ಪದ್ಧತಿ; 4 x 6 = 13 ಮೂಲ ಗಣಿತದಲ್ಲಿ 21 ಅಂಕನ ಪದ್ಧತಿ. 4 x 7 ಇದು 14 ಮೂಲವಾಗಿ 24 ಅಂಕನ ಪದ್ಧತಿ, ಮುಂದಿನ ಅನುಕ್ರಮ ಪದ್ಧತಿಯ ಪ್ರಕಾರ).

 • ಅಧ್ಯಾಯ 5, "ಕೆಟರ್‌ಪಿಲ್ಲರ್‌ನಿಂದ ಸಲಹೆ," ಪಿಜನ್‌ಗಳ ಪ್ರಕಾರ ಸಣ್ಣ ಹುಡುಗಿಯರು ಒಂದು ರೀತಿಯ ಸರ್ಪ ಇದ್ದಂತೆ, ಸಣ್ಣ ಹುಡುಗಿಯರು ಮತ್ತು ಸರ್ಪ‌ ಇಬ್ಬರೂ ಮೊಟ್ಟೆ ತಿನ್ನುವವರಾಗಿದ್ದಾರೆ. ಈ ಅಮೂರ್ತ‌ ಪರಿಕಲ್ಪನೆಯು ಸಾಮಾನ್ಯವಾಗಿ ವಿಜ್ಞಾನದ ಅನೇಕ ಕ್ಷೇತ್ರಗಳಲ್ಲಿ ಇರುತ್ತದೆ, ಗಣಿತದಲ್ಲಿ ಈ ತರ್ಕವನ್ನು ವೇರಿಯಬಲ್‌ಗಳ ಸಬ್‌ಸ್ಟಿಟ್ಯೂಶನ್ ನಲ್ಲಿ ಬಳಸಿಕೊಳ್ಳಬಹುದಾಗಿದೆ. ಅಧ್ಯಾಯ 7 ರಲ್ಲಿ "A Mad Tea-Party," the March Hare, the Mad Hatter, ಮತ್ತು Dormouse ಇವುಗಳು ಅನೇಕ ಉದಾಹರಣೆಗಳನ್ನು ನೀಡುತ್ತಿದ್ದು, ಇವುಗಳಲ್ಲಿ ಒಂದು ವಾಕ್ಯ A ದ ಶಬ್ದಾರ್ಥ ಮೌಲ್ಯವು Aconverse ನ ಮೌಲ್ಯಕ್ಕೆ ಸಮನಾಗಿರುವುದಿಲ್ಲ

(ಉದಾಹರಣೆಗೆ, "ಏಕೆ, 'ನಾನು ತಿನ್ನುವುದನ್ನು ನೋಡುತ್ತೇನೆ' ಎಂಬುದನ್ನು 'ನಾನು ನೋಡುವುದನ್ನು ನಾನು ತಿನ್ನುತ್ತೇನೆ'!" ಎಂದೂ ಅದೇ ರೀತಿಯಲ್ಲಿಯೇ ಹೇಳಬಹುದಾಗಿದೆ.) ತರ್ಕಶಾಸ್ತ್ರ ಮತ್ತು ಗಣಿತದಲ್ಲಿ ಇದು ವಿಲೋಮ ಸಂಬಂಧವನ್ನು ಚರ್ಚಿಸುವಂತಹುದಾಗಿದೆ. * ಅಧ್ಯಾಯ 7 ರಲ್ಲಿ ಸಹಾ, ಒಂದು ದುಂಡು ಮೇಜಿನ ಸುತ್ತ ಇರುವ ಕುರ್ಚಿಗಳನ್ನು ಬದಲಿಸುತ್ತ ಹೋಗುವುದಾದರೆ, ಅದು ಮತ್ತೆ ಮೊದಲಿನ ಸ್ಥಾನಕ್ಕೇ ತಂದುಬಿಡುವುದರ ಅರ್ಥವೇನು ಎಂದು ಆಲಿಸ್ ವಿಚಾರ ಮಾಡುತ್ತಾಳೆ. ಚೆಶೈರ್ ಬೆಕ್ಕು ಕೊನೆಗೆ ಸಂಪೂರ್ಣವಾಗಿ ಮರೆಯಾಗುವಂತೆ ಮಸುಕಾಗುತ್ತದೆ, ಮತ್ತು ಅದರ ವಿಶಾಲವಾದ ಹಲ್ಲುಕಿರಿತ ಮಾತ್ರ ಗಾಳಿಯಲ್ಲಿ ಜೋತುಬಿದ್ದಂತೆ ಉಳಿದಿರುತ್ತದೆ, ಮತ್ತು ಅದನ್ನು ನೋಡಿದ ಆಲಿಸ್ ಅಚ್ಚರಿಪಡುತ್ತ, ತಾನು ಈವರೆಗೂ ಹಲ್ಲುಕಿರಿಯದಿದ್ದ ಬೆಕ್ಕನ್ನು ನೋಡಿದ್ದೇನೆ, ಆದರೆ ಬೆಕ್ಕಿಲ್ಲದ ಹಲ್ಲು ಕಿರಿತವನ್ನು ಯಾವತ್ತೂ ನೋಡಿಲ್ಲ ಅಂದುಕೊಳ್ಳುತ್ತಾಳೆ. ಡಾಡ್ಜ್‌‍ಸನ್ ಬರೆಯಲು ಪ್ರಾರಂಭಿಸಿದಾಗ ಪರಿಕಲ್ಪನೆಗಳ ಆಳವಾದ ಚಿಂತನೆ (ನಾನ್-ಯೂಕ್ಲೀಡಿಯನ್ ರೇಖಾಗಣಿತ, ಅಮೂರ್ತ ಬೀಜಗಣಿತ, ಗಣಿತದ ತರ್ಕಶಾಸ್ತ್ರದ ಪ್ರಾರಂಭಗಳು...) ಆಗ ತಾನೇ ಬೆಳೆಯಲಾರಂಭಿಸಿತ್ತು. ಬೆಕ್ಕು ಮತ್ತು ಅದರ ಹಲ್ಲುಕಿರಿಯುವಿಕೆಯ ಸಂಬಂಧದ ಕುರಿತು ಡಾಡ್ಜ್‌ಸನ್ ವಿವರಿಸುತ್ತಿದ್ದನ್ನು ಈಗಿನ ಗಣಿತ ಮತ್ತು ಸಂಖ್ಯೆಗಳ ನಡುವಿನ ಪರಿಕಲ್ಪನೆಯನ್ನು ವಿವರಿಸುತ್ತದೆ. ಉದಾಹರಣೆಗೆ, ಎರಡು ಅಥವಾ ಮೂರು ಸೇಬುಗಳನ್ನು ಗಣನೆಗೆ ತೆಗೆದುಕೊಳ್ಳುವ ಬದಲು, ಕೇವಲ ಸೇಬಿನ ಪರಿಕಲ್ಪನೆಯನ್ನು ಗಣನೆಗೆ ತೆಗೆದುಕೊಳ್ಳಬಹುದು, ಮತ್ತು ಅದರ ಮೇಲೆ 'ಎರಡು' ಮತ್ತು 'ಮೂರ' ರ ಪರಿಕಲ್ಪನೆಗಳು ಅವಲಂಬಿತವಾಗಿರುತ್ತವೆ. ಆದರೂ, 'ಎರಡು' ಮತ್ತು 'ಮೂರ' ರ ಪರಿಕಲ್ಪನೆಗಳನ್ನು ಸೇಬಿನ ಹೊರತಾಗಿ ಗಣನೆಗೆ ತೆಗೆದುಕೊಳ್ಳುವುದು ಇನ್ನೂ ಉನ್ನತ ಮಟ್ಟದ್ದಾಗುತ್ತದೆ, ಹಲ್ಲುಕಿರಿಯುವಿಕೆಯ ಹಾಗೆಯೇ, ಏಕೆಂದರೆ ಮೊದಲು ಹಲ್ಲುಕಿರಿಯುವಿಕೆಯು ಬೆಕ್ಕಿನ ಮೇಲೆ ಅವಲಂಬಿತವಾಗಿತ್ತು, ಆದರೆ ನಂತರ ಆ ಭೌತಿಕ ವಸ್ತುವಿನಿಂದ ಬೇರೆಯಾಗುತ್ತದೆ. ===ಫ್ರೆಂಚ್ ಭಾಷೆ=== ಮಾರ್ಟಿನ್ ಗಾರ್ಡಿನರ್ ಮತ್ತು ಸೆಲ್ವಿನ್ ಗುಡೇಕರ್ ಸೇರಿದಂತೆ ಅನೇಕರು ಹೇಳಿದಂತೆ ಡಾಡ್ಜ್‌ಸನ್ ಫ್ರೆಂಚ್ ಭಾಷೆ ಯಲ್ಲಿ ಆಸಕ್ತಿಯನ್ನು ಹೊಂದಿದ್ದ, ಮತ್ತು ಕತೆಯಲ್ಲಿ ಈ ಭಾಷೆಯ ಕುರಿತಂತೆ ಉಲ್ಲೇಖಿಸಲು ಮತ್ತು ಶ್ಲೇಷಾರ್ಥ ಚಮತ್ಕಾರಗಳನ್ನು ಮಾಡಲು ಬಯಸಿದ್ದ. ವಿಕ್ಟೋರಿಯನ್ ಕಾಲದ ಮಧ್ಯಮ ವರ್ಗದ ಹುಡುಗಿಯರ ಜೀವನದಲ್ಲಿ ಫ್ರೆಂಚ್ ಭಾಷೆಯನ್ನು ಕಲಿಯುವುದು ಬಹಳೇ ಸಾಮಾನ್ಯವಾಗಿದ್ದರಿಂದ ಈ ಉಲ್ಲೇಖಗಳು ಫ್ರೆಂಚ್ ಪಾಠಗಳಿಗೆ ಸಂಬಂಧಿಸಿದ್ದವಾಗಿದ್ದವು ಎಂದು ಹೇಳಬಹುದು. ಉದಾಹರಣೆಗೆ ಎರಡನೇ ಅಧ್ಯಾಯದಲ್ಲಿ, ಆಲಿಸ್ ಇಲಿಯು ಫ್ರೆಂಚ್ ಇರಬಹುದು ಎಂದುಕೊಂಡು ತನ್ನ ಫ್ರೆಂಚ್ ಪಾಠದ ಪುಸ್ತಕದ ಮೊದಲ ಸಾಲನ್ನು ಅದಕ್ಕೆ ಹೇಳುತ್ತಾಳೆ: "Où est ma chatte?" ("ನನ್ನ ಬೆಕ್ಕು ಎಲ್ಲಿ?"). ಹೆನ್ರಿ ಬ್ಯೂನ ಅನುವಾದದಲ್ಲಿ, ಆಲಿಸ್ ಇಲಿಯು ಇಟಾಲಿಯನ್ ಇರಬಹುದು ಎಂದುಕೊಂಡು ಇಟಾಲಿಯನ್ ಭಾಷೆಯಲ್ಲಿ ಮಾತನಾಡುತ್ತಾಳೆ. ===ಶಾಸ್ತ್ರೀಯ ಭಾಷೆಗಳು=== ಎರಡನೇ ಅಧ್ಯಾಯದಲ್ಲಿ, ಆಲಿಸ್ ಇಲಿಯನ್ನು ಪ್ರಾರಂಭದಲ್ಲಿ, ತನ್ನ ಸಹೋದರನ ಪುಸ್ತಕವಾದ ಪಠ್ಯಪುಸ್ತಕ ದಲ್ಲಿನ ನಾಮಪದದ declension (: "A mouse (nominative)— of a mouse (genitive)— to a mouse (dative)— a mouse (accusative)— O mouse!) ಅರೆಬರೆ ನೆನಪಿನಲ್ಲಿ "ಓ ಮೌಸ್," ಎಂದೇ ಕರೆಯುತ್ತಾಳೆ. (vocative)." ಇದು ಬೈಜಾಂಟಿಯನ್ ಭಾಷಾಶಾಸ್ತ್ರಜ್ಞರು ಶಾಸ್ತ್ರೀಯ ಗ್ರೀಕ್ ಭಾಷೆಗಾಗಿ ಸ್ಥಾಪಿಸಿದ ಸಾಂಪ್ರಾದಾಯಿಕ ಕ್ರಮಕ್ಕೆ (ಮತ್ತು ಈ ಕ್ರಮವು ಯುನಿಟೆಡ್ ಕಿಂಗ್‌ಡಮ್ ಹಾಗೂ ಕೆಲವು ಪಶ್ಚಿಮ ಯೂರೋಪ್‌ನ ದೇಶಗಳನ್ನು ಹೊರತುಪಡಿಸಿ ಈಗಲೂ ಪ್ರಮಾಣಿತ ಬಳಕೆಯಾಗಿ ಉಳಿದಿದೆ) ಸರಿಹೊಂದುತ್ತದೆ. ಏಕೆಂದರೆ ablative ಕೇಸ್ ಇದರಲ್ಲಿ ಇಲ್ಲವಾಗಿದ್ದು, ಇದನ್ನು ಗ್ರೀಕರು ಸೇರಿಸಿಲ್ಲ ಹಾಗೂ ಇದು ಲ್ಯಾಟಿನ್‌ನಲ್ಲಿ ಕಂಡುಬರುತ್ತದೆ. ಹಾಗಾಗಿ ಈ ಉಲ್ಲೇಖವು ಲ್ಯಾಟಿನ್‌ಗೆ ಸಂಬಂಧಿಸಿಲ್ಲ ಎಂದು ಕೆಲವರು ಹೇಳುತ್ತಾರೆ. ===ಐತಿಹಾಸಿಕ ಉಲ್ಲೇಖಗಳು=== ಹದಿನೆಂಟನೆಯ ಅಧ್ಯಾಯದಲ್ಲಿ, ಮೂರು ಕಾರ್ಡ್‌ಗಳು ಗುಲಾಬಿ ಗಿಡದಲ್ಲಿನ ಗುಲಾಬಿಗಳಿಗೆ ಕೆಂಪು ಬಣ್ಣ ಬಳಿಯುತ್ತಿವೆ, ಏಕೆಂದರೆ ಅವರು ಆಕಸ್ಮಿಕವಾಗಿ ಒಂದು ಬಿಳಿ-ಗುಲಾಬಿ ಗಿಡವನ್ನು ನೆಟ್ಟಿದ್ದರು ಮತ್ತು ಅದನ್ನು ಕ್ವೀನ್ ಆಫ್ ಹಾರ್ಟ್ಸ್ ದ್ವೇಶಿಸುತ್ತಿದ್ದಳು. ಕೆಂಪು ಗುಲಾಬಿಗಳು ಇಂಗ್ಲೀಷರನ್ನು ಹೌಸ್ ಆಫ್ ಲ್ಯಾಂಚೆಸ್ಟರ್ ಮತ್ತು ಬಿಳಿ ಗುಲಾಬಿಗಳು ಅವರ ವಿರೋಧಿಗಳನ್ನು ಹೌಸ್ ಆಫ್ ಯಾರ್ಕ್ ಸೂಚಿಸುತ್ತಿದ್ದವು. ಆದ್ದರಿಂದ, ಈ ದೃಶ್ಯವು ಗುಲಾಬಿಗಳ ಯುದ್ಧಗಳಿಗೆ ಗುಪ್ತ ಹಿನ್ನೆಲೆಯನ್ನು ಒದಗಿಸುತ್ತದೆ.ಇತರ ವಿವರಣೆಗಳು | ಲೆನ್ನಿಯ ಅಲಿಸ್ ಇನ್ ವಂಡರ್‌ಲ್ಯಾಂಡ್ ಸೈಟ್</ref>

ಸಿನಿಮಾದ ಮತ್ತು ದೂರದರ್ಶನದ ರೂಪಾಂತರಗಳು

[ಬದಲಾಯಿಸಿ]
"ಮ್ಯಾಡ್-ಟೀ ಪಾರ್ಟಿ"ಯಲ್ಲಿ ಆಲಿಸ್, ಮಾರ್ಚ್ ಹರೆ, ಮತ್ತು ಮ್ಯಾಡ್ ಹಟ್ಟರ್ ಇದು ಸಿನೆಮಾಗೆ ಮೊದಲ ರೂಪಾಂತ 1903ರಲ್ಲಿ ಸೆಸಿಲ್ ಹೆಪ್ವರ್ಥ್ ನಿರ್ದೇಶಿಸಿದ
ಚಿತ್ರ:Movie alice in wonderland flowers.png
ಡಿಸ್ನಿಯ ಅನಿಮೇಶನ್ ಆವೃತ್ತಿಯಲ್ಲಿ ಆಲಿಸ್

ಪುಸ್ತಕವು ಹಲವು ಸಿನಿಮಾದ ಮತ್ತು ದೂರದರ್ಶನದ ರೂಪಾಂತರಗಳಿಗೆ ಸ್ಫೂರ್ತಿ ನೀಡಿದ್ದಾವೆ. ಈ ಪಟ್ಟಿಯು ಮೂಲ ಪುಸ್ತಕಗಳ ನೇರ ಮತ್ತು ಪೂರ್ಣ ರೂಪಾಂತರಗಳನ್ನು ಮಾತ್ರ ಹೊಂದಿದೆ. ಆ ಪುಸ್ತಕಗಳಿಂದ ಪ್ರಭಾವಗೊಂಡ- ಆದರೆ ವಾಸ್ತವಿಕಗಾಗಿ ಅವುಗಳ ಮೇಲೆ ಆಧಾರವಾಗಿರದ - ಮುಂದುವರಿದ ಭಾಗಗಳು ಮತ್ತು ಕೃತಿಗಳು (ಉದಾಹರಣೆಗೆ ಟಿಮ್ ಬರ್ಟನ್‌ನ 2010ರ ಸಿನಿಮಾ ಆಲಿಸ್ ಇನ್ ವಂಡರ್ ಲ್ಯಾಂಡ್ ), ವರ್ಕ್ಸ್ ಇನ್‌ಫ್ಲುಯನ್ಸ್‌ಡ್ ಬೈ ಆಲಿಸ್ ಇನ್ ವಂಡರ್‌ಲ್ಯಾಂಡ್‌ನಲ್ಲಿ ಕಾಣಿಸಿಕೊಳ್ಳುತ್ತವೆ.

ಹಾಸ್ಯಪತ್ರಿಕೆಗಳ ಆಳವಡಿಕೆಗಳು

[ಬದಲಾಯಿಸಿ]

ಈ ಪುಸ್ತಕವು ಹಲವು ಹಾಸ್ಯಪತ್ರಿಕೆಗಳ ಆಳವಡಿಕೆಗೆ ಪ್ರೇರಣೆಯಾಗಿದೆ.

ಅಭಿನಯದ ನೇರ ಪ್ರಸಾರ

[ಬದಲಾಯಿಸಿ]

ಪುಸ್ತಕದ ಹಠಾತ್ ಜನಪ್ರಿಯತೆಯಿಂದ ನೇರ ಪ್ರಸಾರದ ಅಭಿನಯಗಳು ಆರಂಭಗೊಳ್ಳಲು ತಡವಾಗಲಿಲ್ಲ. ಒಂದು ಮುಂಚಿನ ಉದಾಹರಣೆ ಎಂದರೆ ಆಲಿಸ್ ಇನ್ ವಂಡರ್‌ಲ್ಯಾಂಡ್ , ಇದು H. ಸಾವಿಲ್ ಕ್ಲಾರ್ಕ್ (ಪುಸ್ತಕ) ಹಾಗೂ ವಾಲ್ಟರ್ ಸ್ಲಾಟರ್ (ಸಂಗೀತ) ಅವರ ಸಂಗೀತ ನಾಟಕವಾಗಿತ್ತು ಮತ್ತು 1886ರಲ್ಲಿ ಲಂಡನ್‌ನ ಪ್ರಿಂನ್ಸ್ ಒಫ್ ವೇಲ್ಸ್ ನಾಟಕಶಾಲೆಯಲ್ಲಿ ಪ್ರದರ್ಶನಗೊಂಡಿತ್ತು. ಕ್ಯಾರೊಲ್‌ನ ಅತಿ ವ್ಯಾಪಕವಾಗಿ ಗುರುತಿಸಲಾದ ಕೃತಿ ಈ ಪುಸ್ತಕ ಹಾಗೂ ಅದರ ಮುಂದುವರಿದ ಭಾಗ ಆಗಿತ್ತು, ಹೀಗಾಗಿ ಇವು ನಾಟಕ, ಗೀತರೂಪಕ, ಬ್ಯಾಲೆ ಹಾಗೂ ಬ್ರಿಟಿಷರ ಸಾಂಪ್ರದಾಯಿಕ ಮೂಕನಾಟಕಗಳಂತಹ ಹಲವು ನೇರ ಅಭಿನಯಗಳನ್ನು ಪ್ರೇರಿಸಿದೆ. ಈ ಕೃತಿಗಳ ಪರಿಮಿತಿ ಮೂಲ ಪುಸ್ತಕದ ವಿಶ್ವಸನೀಯ ಯುಕ್ತವಾದ ಅಳವಡಿಕೆಯಿಂದ ಹಿಡಿದು ಹೊಸ ಕೃತಿಗಳಿಗೆ ಈ ಪುಸ್ತಕ ಆಧಾರವಾಗಿ ಕೂಡ ಇದೆ. ಈ ಪುಸ್ತಕದ ಆಧಾರವಾದ ಹೊಸ ಕೃತಿಗೆ ಸೂಕ್ತ ಉದಾಹರಣೆ ದ ಏಟ್ಥ ಸ್ಕ್ವೇರ್ ಹಾಗೂ ಅ ಮರಡರ್ ಮಿಸ್ಟರಿ ಸೆಟ್ ಇನ್ ವಂಡರ್‌ಲ್ಯಾಂಡ್, ಇದನ್ನು ಬರೆದವರು ಮ್ಯಾಥ್ಯು ಫ್ಲೆಮಿಂಗ್ ಮತ್ತು ಸಂಗೀತ ಹಾಗೂ ಹಾಡಿನ ಸಾಹಿತ್ಯ ನೀಡಿದವರು ಬೆನ್ ಜೆ. ಮ್ಯೆಕ್‌ಫರ್ಸನ್. ಈ ಗೊಥ್-ಸ್ವರದ ರಾಕ್ ಸಂಗೀತ 2006ರಲ್ಲಿ ಮೊದಲ ಬಾರಿಗೆ ಇಂಗ್ಲಾಂಡ್‌ನ ಪೊರ್ಟ್ಸಮಥ್‌ನಲ್ಲಿನ ನ್ಯೂ ಥೀಯೇಟರ್ ರಾಯಲ್‌ನಲ್ಲಿ ಪ್ರದರ್ಶಿತವಾಯಿತು. ಪ್ರಾಗ್‌ನ ಜನಪ್ರಿಯ ಕಪ್ಪು ಬೆಳಕಿನ ನಾಟಕಶಾಲೆಯಾದ TA ಫಾಂಟಾಸ್ಟಿಕನಲ್ಲಿ "ಆಸ್ಪೆಕ್ಟ್ಸ್ ಒಫ್ ಆಲಿಸ್"ನ ಪ್ರದರ್ಶನ ನಡೆಯಿತು; ಇದರ ಲೇಖಕ ಹಾಗೂ ನಿರ್ದೇಶಕ ಪೆಟರ್ ಕ್ರಾಟೊಕ್ವಿಲ್. ಈ ಅಳವಡಿಕೆ ಪುಸ್ತಕಕ್ಕೆ ವಿಶ್ವಸನೀಯವಾಗಿಲ್ಲ, ಆದರೆ ಇದು ಆಲಿಸ್‌ಳ ಪರಿಪಕ್ವತೆಯತ್ತದ ಪಯಣವನ್ನು ಅನ್ವೇಷಿಸುತ್ತದೆ ಹಾಗೆ ಚೆಕ್ ರಿಪಬ್ಲಿಕ್‌ನ ಇತಿಹಾಸದ ಮುನ್ನುಡಿಗಳನ್ನು ಸಂಘಟಿಸುತ್ತಾ ಬರುತ್ತೆ. ವರುಷಗಳು ಉರುಳುತ್ತಿದಂತೆ ಹಲವು ಕಲೆಯನ್ನು ನಿರ್ವಹಿಸುವ ಗಮನೀಯ ಜನರು ಆಲಿಸ್ ಪ್ರೊಡ್ಕಷ್ಸ್‌ನಲ್ಲಿ ಒಳಗೊಂಡಿದ್ದಾರೆ. ನಟಿ ಇವಾ ಲಿ ಗ್ಯಾಲಿನನ್ 1932ರಲ್ಲಿ ಆಲಿಸ್‌ನ ಎರಡು ಪುಸ್ತಕಗಳನ್ನು ಆಳವಡಿಸಿಕೊಂಡರು, ಈ ಪ್ರೊಡ್ಕಷನ್ 1947 ಹಾಗೂ 1982ರಲ್ಲಿ ನ್ಯೂ ಯೋರ್ಕ್‌ನಲ್ಲಿ ಪುನಶ್ಚೇತನಗೊಂಡಿತು. ಜೊಸೆಫ್ ಪ್ಯಾಪ್ ಅವರದು ಅಮೇರಿಕಾದ ಪ್ರಚಲಿತ ಪ್ರೊಡ್ಕಷನ್ಸ್‌ಗಳಲ್ಲಿ ಒಂದು, 1980ರಲ್ಲಿ ನ್ಯೂ ಯೋರ್ಕ ನಗರದ ಪಬ್ಲಿಕ್ ನಾಟಕಶಾಲೆಯಲ್ಲಿ ಇವರು ಆಲಿಸ್ ಇನ್ ಕಾನ್ಸರ್ಟ್‌ ನ ಪ್ರದರ್ಶನ ಮಾಡಿದರು. ಎಲಿಜಿಬೆಥ್ ಸ್ವಾಡೊಸ್ ಪುಸ್ತಕ, ಸಾಹಿತ್ಯ ಹಾಗೂ ಸಂಗಿತವನ್ನು ಬರೆದರು. ಆಲಿಸ್‌ಳ ಅಡ್ವೆಂಚರ್ಸ್ ಇನ್ ವಂಡರ್‌ಲ್ಯಾಂಡ್ ಹಾಗೂ ಥ್ರೂ ದ ಲುಕಿಂಗ್ ಗ್ಲಾಸ್ ಎರಡರ ಮೇಲೆ ಆಧಾರಿಸಿ, ಪ್ಯಾಪ್ ಹಾಗೂ ಸ್ವಾಡೊಸ್ ಇದರ ಒಂದು ಆವೃತಿಯನ್ನು ಈ ಹಿಂದೆ ನ್ಯೂ ಯೋರ್ಕ್ ಶೇಕ್ಸ್‌ಪೀಯರ್ ಆಚರಣೆಯಲ್ಲಿ ನಿರ್ಮಿಸಿದ್ದರು. ಮರ್ಲಿ ಸ್ಟ್ರೀಪ್ ಆಲಿಸ್,ಪಾತ್ರದಲ್ಲಿ ಕಾಣಿಸಿಕೊಂಡರು,ದ ವೈಟ್ ಕ್ವೀನ್, ಮತ್ತು ಹಂಪ್ಟಿ,ಡಂಪ್ಟಿ. ಡೆಬ್ಬಿ ಅಲೆನ್, ಮೈಕೆಲ್ ಜೆಟರ್, ಮತ್ತು ಮಾರ್ಕ್ ಲಿನ್-ಬೇಕರ್ ಪಾತ್ರವರ್ಗದಲ್ಲಿ ಒಳಗೊಂಡಿದ್ದರು. ಜಗತ್ತಿನೆಲ್ಲೆಡೆಯ ಪದ್ಯ ಶೈಲಿಯಲ್ಲಿ ಪಾತ್ರದಾರಿಗಳು ಆಧುನಿಕ ಉಡುಪಿನಲ್ಲಿ ಖಾಲಿ ಸ್ಟೇಜ್‌ನಲ್ಲಿ ಅಭಿನಯಿಸಿದರು,ನಾಟಕದ ಅಳವಡಿಕೆಯಲ್ಲಿ ಹಿಡಿತವಿರಲಿಲ್ಲ. ಈ ನಿರ್ಮಾಣವು DVDಯಲ್ಲೂ ಲಭ್ಯವಿದೆ. ಹಾಗೆಯೇ,1992ರ ಆಲಿಸ್‌ ನಾಟಕದ ನಿರ್ಮಾಣ ಆಲಿಸ್ ‌ನ ಎರಡು ಪುಸ್ತಕಗಳನ್ನು ಸ್ಫೂರ್ತಿಯಾಗಿ ಬಳಸಿಕೊಳ್ಳಲಾಯಿತು. ಆದಾಗ್ಯೂ,ಇದು ಕತೆಯ ನಿರೂಪಣೆಗೆ ಎಳೆಯ ಆಲಿಸ್‌ ಲಿಡ್ಡೆಲ್,ಪ್ರಬುದ್ದ ಆಲಿಸ್ ಲಿಡ್ಡೆಲ್ ಮತ್ತು ಚಾರ್ಲ್ಸ್ ಡಾಡ್ಜ್‌ಸನ್‌ನ ದೃಶ್ಯಗಳನ್ನು ಹೊಂದಿತ್ತು. ನಾಟಕವನ್ನು ಪೌಲ್ಸ್ ಸ್ಜಮಿಡ್ತ್ ಬರೆದರು,ಜೊತೆಗೆ ಟಾಮ್ ವೈಟ್ಸ್ ಮತ್ತು ಕತ್ಲಿನ್ ಬ್ರೆನ್ನನ್ ಮ್ಯೂಸಿಕ್ ಬರೆದರು. ಆದಾಗ್ಯೂ ಮೂಲ ತಯಾರಿಕೆ ಹಮ್ಬರ್ಗ್‌, ಜರ್ಮನಿಯಲ್ಲಿ, ಸಣ್ಣ ಪ್ರಮಾಣದ ಪ್ರೇಕ್ಷಕರನ್ನು ಮಾತ್ರ ಸ್ವಾಗತಿಸಿತು, 2002ರಲ್ಲಿ ಟಾಮ್ ವೈಟ್ಸ್ ಆಲಿಸ್ ಆಲ್ಬಮ್‍ ಹಾಡುಗಳನ್ನು ಬಿಡುಗಡೆ ಮಾಡಿದ ಇದು ಬಹಳ ಮೆಚ್ಚುಗೆ ಪಡೆಯಿತು.

ವೃತ್ತಿಪರ ಪ್ರದರ್ಶನಗಳ ಜೊತೆಯಾಗಿ ಶಾಲೆಯಲ್ಲಿಯೂ ಇದರ ತಯಾರಿಕೆಗಳು ಸಮೃದ್ಧವಾಗಿ ಆದವು. ಹೈಸ್ಕೂಲ್ ಮತ್ತು ಕಾಲೇಜ್ ಎರಡರಲ್ಲೂ ಹಲವಾರು ಸ್ಟೇಜ್ ಅಭಿನಯಕ್ಕೆ ಆಲಿಸ್ ರೂಪಾಂತರ ಪ್ರೇರೆಪಿಸಿತು. ಕಾಲ್ಪನಿಕ ಕತೆ ಮತ್ತು ಹಲವಾರು ಸಂಖ್ಯೆಯ ಪಾತ್ರಗಳು ತಯಾರಿಕೆಗೆ ಚೆನ್ನಾಗಿ ಹೊಂದಿಕೆಯಾಗುತ್ತವೆ. ಕತೆಯ ಸವಿಸ್ತಾರವಾದ ನಾಟಕದ ಅಳವಡಿಕೆಯು ಡೇವಿಡ್ ಹೆನ್ರಿ ಹ್ವಾಗ್‌ರ ಇಂಗ್ಲೀಶ್ ಭಾಷೆಯ ಗೀತನಾಟಕಕ್ಕೆ ಕೋರಿಯನ್ ಸಂಯೋಜಕ ಅನ್‌ಸುಕ್ ಚಿನ್ ರಿಂದ ಜೂನ್ 30 2007 ಬವೇರಿಯನ್ ಸ್ಟೇಜ್ ಅಪೆರಾದಲ್ಲಿ ಜಗತ್ತಿನ ಪ್ರಥಮ ಪ್ರದರ್ಶನ ಪಡೆಯಿತು. 2009 ಡಿಸೆಂಬರ್‌ನಲ್ಲಿ ಫೋರಿಡಾದ ತಂಪಾದಲ್ಲಿ ಹೊಸ ಸಂಗೀತಮಯ ಶೀರ್ಷಿಕೆ "ವಂಡರ್‌ಲ್ಯಾಂಡ್‌" ಇದರ ಪ್ರಥಮ ಪ್ರದರ್ಶನ ನಡೆಯಿತು. ಫಿಲಡೆಲ್ಫಿಯಾ ಸಂಯೋಜಕ ಜೋಸೆಫ್ ಹಾಲ್‌ಮನ್ ನಟನಿಗೆ, ಕೊಳಲು (ಮಾದುರ್ಯವನ್ನು ದ್ವಿಗುಣಗೊಳಿಸುವ) ತಾರಸ್ಥಾಯಿ ಸ್ಯಾಕ್ಸೋಫೋನ್, ತಂತಿವಾದ್ಯ, ಬಡಿತ, ಮತ್ತು ಸ್ಟ್ರಿಂಗ್ ಟ್ರಿಯೊ ಜೊತೆ ಎಳು ಜನ ನರ್ತಕರನ್ನೊಳಗೊಂಡ ಅಲಿಸ್ ಬ್ಯಾಲೆ ಮತ್ತು ನಾಟಕ ಬರೆದನು, ಇದು ಎಪ್ರಿಲ್ 2010 ರಲ್ಲಿ ಸ್ಯಾನ್ ಡಿಗೊ ದಲ್ಲಿ ಪ್ರದರ್ಶನಗೊಳ್ಳಲಿದೆ. ಇದು ಸ್ಯಾನ್ ಡಿಗೋ ಚೇಂಬರ್ ಸಂಗೀತ ಸಂಘ, ಆರ್ಟ್ ಆಫ್ ಏಲನ್ ಮತ್ತು ಕೊಲೆಟ್ಟೆ ಹಾರ್ಡಿಂಗ್ ಡಾನ್ಸ್ ಕಂಪನಿಗಳಿಂದ ನಿಯೋಜಿಸಲ್ಪಟ್ಟಿತು.[೧೪]

ಟೀಕೆಗಳು

[ಬದಲಾಯಿಸಿ]

ಸಾಮಾನ್ಯವಾಗಿ ಈ ಪುಸ್ತಕವನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗಿದೆ, ಆದರೆ ಇದರ ವಿಚಿತ್ರ ಮತ್ತು ಕಲ್ಪಿಸಲಾಗದ ದೃಷ್ಟಿಕೋನಕ್ಕಾಗಿ ತಿರಸ್ಕರಿಸಲ್ಪಟ್ಟಿದೆ ಕೂಡಾ.[ಸೂಕ್ತ ಉಲ್ಲೇಖನ ಬೇಕು] ಹೆಸರಾಂತ ವಿಮರ್ಶಕ ಕಾಲ್ಪನಿಕ ಬರಹಗಾರ ಟೆರ್ರಿ ಪ್ರಾಟ್‌ಚೆಟ್, ಈ ಕೃತಿಯನ್ನು ಇಷ್ಟ ಪಡದಿರುವುದಾಗಿ ಹೇಳಿದ್ದಾರೆ:

I didn't like the Alice books because I found them creepy and horribly unfunny in a nasty, plonking, Victorian way. Oh, here's Mr Christmas Pudding On Legs, hohohoho, here's a Caterpillar Smoking A Pipe, hohohoho. When I was a kid the books created in me about the same revulsion as you get when, aged seven, you're invited to kiss your great-grandmother.[೧೫]

1931ರಲ್ಲಿ , ಈ ಕೃತಿಯನ್ನು ಹುನಾನ್, ಚೀನಾಗಳಲ್ಲಿ ನಿಷೇಧಿಸಲಾಯಿತು,ಏಕೆಂದರೆ "ಪ್ರಾಣಿಗಳು ಮನುಷ್ಯರ ಭಾಷೆಯನ್ನು ಉಪಯೋಗಿಸಲು ಸಾಧ್ಯವಿಲ್ಲ" ಮತ್ತು ಪ್ರಾಣಿಗಳ ಮಾತ್ತು ಮನುಷ್ಯರ ಮಟ್ಟ ಒಂದೇ ರೀತಿಯಾಗಿ ಚಿತ್ರಿಸಲಾಗಿದೆ." ನ್ಯೂ ಹ್ಯಾಂಪಶಾಯರ್‌ನ ಹವೆರ್ಹಿಲ್ ವುಡ್ಸ್‌ವಿಲ್ಲೆ ಹೈ ಸ್ಕೂಲ್ ನಲ್ಲಿ ಈ ಕಥೆಯನ್ನು ನಿಷೇಧಿಸಲಾಯಿತು, ಏಕೆಂದರೆ "ಕೆಟ್ಟನುಡಿಗಳು, ಹಸ್ತಮೈಥುನದ ಪ್ರಸ್ತಾಪ ಮತ್ತು ಲೈಂಗಿಕ ಕಲ್ಪನೆಗಳು, ಮತ್ತು ಶಿಕ್ಷಕರ ಮತ್ತು ಧಾರ್ಮಿಕ ವಿಧಿವಿಧಾನಗಳ ಅವಮಾನಕರ ಪಾತ್ರಗಳನ್ನು ಹೊಂದಿತ್ತು".[೧೬]

ಪ್ರಭಾವಕ್ಕೊಳಗಾದ ಕೃತಿಗಳು

[ಬದಲಾಯಿಸಿ]
ಸೆಂಟ್ರಲ್ ಪಾರ್ಕ್‌ನಲ್ಲಿ ಆಲಿಸ್

ಆಲಿಸ್ ಮತ್ತು ಉಳಿದ ಅದ್ಭುತಲೋಕ ಈ ದಿನಗಳಲ್ಲಿ ಬಹಳಷ್ಟು ಇತರ ಕಲಾತ್ಮಕ ಕೃತಿಗಳಿಗೆ ಸ್ಫೂರ್ತಿಯಾಯಿತು ಅಥವಾ ಪ್ರಭಾವ ಬೀರಿತು, ಉದಾಹರಣೆಗೆ ಕೆಲವೊಮ್ಮೆ ಅಪ್ರತ್ಯಕ್ಷವಾಗಿ ಡಿಸ್ನಿ ಸಿನೇಮಾದಂತವುಗಳಿಂದ. ದಿಟ್ಟವಾದ,ಸಮಂಜಸವಾದ,ಪಾತ್ರಗಳಿಂದ,ಆಲಿಸ್ ದೊಡ್ಡ ಪ್ರಸಿದ್ದಿ ಹೊಂದಿತು ಮತ್ತು ಸಾಹಿತ್ಯ ಮತ್ತು ಪಾಪ್ ಸಂಸ್ಕೃತಿಯಲ್ಲಿ ಇದೇ ತರಹದ ಹಿರೋಯಿನ್‌ ಗಳಿಗೆ ಸ್ಫೂರ್ತಿ ನೀಡಿತು,ಬಹಳಷ್ಟು ಜನ ಗೌರವಕ್ಕಾಗಿ ಆಲಿಸ್ ಹೆಸರು ಇಟ್ಟುಕೊಂಡರು.

ಆಕರಗಳು

[ಬದಲಾಯಿಸಿ]
 1. ಬಿಬಿಸಿಯ ಅತ್ಯುತ್ತಮ ಇಂಗ್ಲೀಷ್ ಪುಸ್ತಕಗಳ ಪಟ್ಟಿ
 2. ೨.೦ ೨.೧ ಲೆಸೆರ್ಕಲ್, ಜೀನ್-ಜಾಕ್ವೆಸ್ (1994) ಫಿಲಾಸಫಿ ಆಫ್ ನಾನ್ಸೆನ್ಸ್ : ದ ಇನ್ಸ್ಯುಯೇಶನ್ ಆಫ್ ವಿಕ್ಟೋರಿನ್ ನಾನ್ಸೆನ್ಸ್ ಲಿಟ್ರೆಚರ್ ರೌಟ್‌ಲೆಜ್, ನ್ಯೂಯಾರ್ಕ್, ಪೇಜ್ 1 ‍ಆ‍ಯ್‌೦ಡ್ ಫಾಲೋವಿಂಗ್ , ISBN 0-415-07652-8
 3. ೩.೦ ೩.೧ ಸ್ಕ್ವಾಬ್, ಗ್ಯಾಬ್ರಿಯಲ್ (1996) "ಚಾಪ್ಟರ್ 2: ನಾನ್ಸೆನ್ಸ್ ಆ‍ಯ್‌೦ಡ್ ಮೆಟಾಕಮ್ಯೂನಿಕೇಶನ್ : ಆಲಿಸ್ ಇನ್ ವಂಡಾರ್ಲ್ಯಾಂಡ್ " ದ ಮಿರರ್ ಆ‍ಯ್‌೦ಡ್ ದ ಕಿಲ್ಲರ್-ಕ್ವೀನ್ : ಅದರ್ನೆಸ್ ಇನ್ ಲಿಟ್ರರಿ ಲ್ಯಾಂಗ್ವೇಜ್ , ಇಂಡಿಯಾನಾ ಯುನಿವರ್ಸಿಟಿ ಪ್ರೆಸ್, ಬ್ಲೂಮಿಂಗ್‌ಟಾನ್,ಇಂಡಿಯಾನಾ, ಪು. 49-102, ISBN 0-253-33037-8
 4. ದ ಬ್ಯಾಕ್‌ಗ್ರೌಂಡ್ & ಹಿಸ್ಟರಿ ಆಫ್ ಆಲಿಸ್ ಇನ್ ವಂಡರ್‌ಲ್ಯಾಂಡ್‌ Archived 2012-06-02 ವೇಬ್ಯಾಕ್ ಮೆಷಿನ್ ನಲ್ಲಿ.. ಬೆಡ್‌ಟೈಮ್-ಸ್ಟೋರಿ ಕ್ಲಾಸಿಕ್ಸ್. 2007ರ ಜನವರಿ 27ರಂದು ಮರುಸಂಪಾದಿಸಲಾಯಿತು
 5. "Ripon Tourist Information". Hello-Yorkshire.co.uk. Retrieved 2009-12-01.
 6. (ಗಾರ್ಡನರ್, 1965)
 7. ಮೊದಲ ಮುದ್ರಣದ ಕೇವಲ 23 ಪ್ರತಿಗಳು ಮಾತ್ರ ಉಳಿದುಕೊಡಿದೆ ಎಂದು ತಿಳಿದುಬರುತ್ತದೆ ; ಪ್ರಮುಖ ದಾಖಲೆಗಳಲ್ಲಿ ಅಥವಾ ಗ್ರಂಥಾಲಯಗಳು 18 ಪ್ರತಿ ಹೊಂದಿವೆ, ಉಳಿದ 5 ಪ್ರತಿಗಳು ಹ್ಯಾರಿ ರಾನ್ಸಮ್ ಹ್ಯುಮಾನಿಟಿಸ್ ರೀಸರ್ಚ್ ಸೆಂಟರ್‌ನಂತಹ ಖಾಸಗಿ ವ್ಯಕ್ತಿಗಳಲ್ಲಿವೆ.
 8. Carroll, Lewis (1995). The Complete, Fully Illustrated Works. New York: Gramercy Books. ISBN 0-517-10027-4.
 9. "Auction Record for an Original 'Alice'", ದ ನ್ಯೂ ಯಾರ್ಕ್ ಟೈಮ್ಸ್, p. B30, 11 December 1998
 10. "JK Rowling book fetches £1.9m at auction", The Telegraph, 13 December 2007
 11. ರಿಯಲ್ ಆಲಿಸ್ ಇನ್ ವಂಡರ್‌ಲ್ಯಾಂಡ್‌ ಪುಸ್ತಕ ಯುಎಸ್‌ಎಯಲ್ಲಿ 115,000 ಡಾಲರ‍್ಗೆ ಮಾರಾಟವಾಗಿದೆ http://news.bbc.co.uk/1/hi/england/oxfordshire/8416127.stm
 12. ದ ಡೈರಿ ಅಫ್ ಲೆವೀಸ್ ಕರೊಲ್, 1 ಆಗಸ್ಟ್ 1862 ಎಂಟ್ರಿ
 13. "Alisa v Strane Chudes" (in Russian). Animator.ru. Retrieved 3 March 2010.{{cite web}}: CS1 maint: unrecognized language (link)
 14. http://www.artofelan.org/
 15. "Words from the Master". Retrieved from Unseen University 29 January 2007.
 16. "ವೈ ವಾಸ್ 'ಆಲಿಸ್'ಸ್ ಅಡ್ವೆಂಚರ್ಸ್ ಇನ್ ವಂಡಾರ್ಲ್ಯಾಂಡ್ ' ಬ್ಯಾನ್ಡ್?" ಮೂಲ ಉಲ್ಲೇಖ (http://sshl.ucsd.edu/banned/books.html Archived 2007-07-16 ವೇಬ್ಯಾಕ್ ಮೆಷಿನ್ ನಲ್ಲಿ. "ಬ್ಯಾನ್ಡ್ ಬುಕ್ಸ್ ವೀಕ್: 25 ಸೆಪ್ಟೆಂಬರ್–2 ಆಕ್ಟೋಬರ್) ಎಲ್ಲಿಯೂ ಅಸ್ತಿತ್ವದಲ್ಲಿಲ್ಲ (31. ಜನವರಿ 2007

ಹೊರಗಿನ ಕೊಂಡಿಗಳು

[ಬದಲಾಯಿಸಿ]
Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಆಲಿ‌ಸಸ್ ಅಡ್ವೆಂಚರ್ಸ್ ಇನ್ ವಂಡರ್‌ಲ್ಯಾಂಡ್]]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: