ಆಸ್ಕರ್ ವೈಲ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
1882ರಲ್ಲಿ ವೈಲ್ಡ್

ಆಸ್ಕರ್ ವೈಲ್ಡ್ (೧೮೫೪-೧೯೦೦) ಒಬ್ಬ ಐರಿಷ್ ಕವಿ, ಉತ್ತಮ ವಾಗ್ಮಿ ಹಾಗೂ ನಾಟಕಕಾರ. ಐರ್ಲೆಂಡಿನ ಡಬ್ಲಿನ್‍ನಲ್ಲಿ ೧೮೫೪ರಲ್ಲಿ ಜನಿಸಿದ. ಆಸ್ಕರ್ ಫಿಂಗಲ್ ಓ ಫ್ಲಾಹರ್ಟಿ ವಿಲ್ಸ್‌ವೈಲ್ಡ್ ಎಂಬುದು ಇವನ ಪೂರ್ಣ ಹೆಸರು. ವಾಗ್ಮಿತೆ ಹಾಗೂ ಪಾಂಡಿತ್ಯಗಳನ್ನು ಉತ್ತಮಪಡಿಸಿಕೊಳ್ಳುವ ಹಂಬಲದಿಂದ ಐರ್ಲೆಂಡನ್ನು ಬಿಟ್ಟು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸೇರಿದ. ಜೀವನ ಹಾಗೂ ಕಲೆಗಳ ವಿಚಾರದಲ್ಲಿ ಇವನ ಪಾಂಡಿತ್ಯ ಅಗಾಧವಾಗಿದ್ದ ಕಾರಣ ಬಹಳ ಬೇಗ ಪ್ರಸಿದ್ಧಿಗೆ ಬಂದ. ದ ಹ್ಯಾಪಿ ಪ್ರಿನ್ಸ್ ಅಂಡ್ ಅದರ್ ಟೇಲ್ಸ್ (೧೮೮೮) ಕೃತಿಯಲ್ಲಿ ಇವನ ನಿಜವಾದ ಸೃಜನಾತ್ಮಕ ಪ್ರತಿಭೆ ದರ್ಶನವಾಗುತ್ತದೆ.

ಪಿಕ್ಚರ್ ಆಫ್ ಡೋರಿಯನ್ ಗ್ರೇ (೧೮೯೦) ಇವನ ಏಕಮಾತ್ರ ಕಾದಂಬರಿ. ನೀತಿ ಪ್ರಧಾನವಾದ್ದು. ಒಂದು ದೈವಿಕ ವ್ಯಕ್ತಿತ್ವದ ವಿನಾಶಕಾರಿ ಪ್ರವೃತ್ತಿಯನ್ನು ಇಲ್ಲಿ ಚಿತ್ರಿಸಿದ್ದಾನೆ. ಲೇಡಿ ವಿಂಡರ್ಮರ್ಸ್ ಫ್ಯಾನ್ (೧೮೯೨), ಎ ವುಮೆನ್ ಆಫ್ ನೋ ಇಂಪಾರ್ಟೆನ್ಸ್ (೧೮೯೩), ಎನ್ ಐಡಿಯಲ್ ಹಸ್ಬೆಂಡ್ (೧೮೯೫) ಇವನ ಇತರ ಕೃತಿಗಳು. ದಿ ಇಂಪಾರ್ಟೆನ್ಸ್ ಆಫ಼್ ಬೀಯಿಂಗ್ ಅರ್ನೆಸ್ಟ್ (೧೮೯೫) ಇವನ ಅತ್ಯಂತ ಮಹತ್ತ್ವದ ಕೃತಿ. ಇವನ ನಾಟಕಗಳು ಮುಖ್ಯವಾಗಿ ಸಾಮಾಜಿಕ ವಿಡಂಬನೆಗಳಾಗಿವೆ. ದ ಇಂಪಾರ್ಟೆನ್ಸ್ ಆಫ಼್ ಬೀಯಿಂಗ್ ಅರ್ನೆಸ್ಟ್ ಕೃತಿಯಲ್ಲಿ ಬ್ರಿಟಿಷ್ ಸಾಮಾಜಿಕ ಬದುಕಿನ ಪೊಳ್ಳುತನವನ್ನು ಬಯಲಿಗೆಳೆಯುವ ಪ್ರಯತ್ನವಿದೆ. ಸಾಲೊಮೆ ಇವನ ಫ್ರೆಂಚ್ ಏಕಾಂಕ. ಇದು ಪ್ಯಾರಿಸ್‍ನಲ್ಲಿ ಪ್ರದರ್ಶನಗೊಂಡಿತು. ಈಸ್ತೆಟಿಕ್ ಫಿಲಾಸಫಿ ಎಂಬುದು ೧೮೮೨ರಲ್ಲಿ ಅಮೆರಿಕದಲ್ಲಿ ಸೌಂದರ್ಯ ಮೀಮಾಂಸೆಗೆ ಸಂಬಂಧಿಸಿದಂತೆ ಇವನು ನೀಡಿದ ಭಾಷಣ. ಕಲೆಕ್ಟೆಡ್ ಪೊಯಮ್ಸ್ ಇವನ ಕವನ ಸಂಕಲನ. ಸಲಿಂಗ ರತಿಯ ಸಾಮಾಜಿಕ ಆಪಾದನೆ ಮೇರೆಗೆ ಇವನು ಬಂಧನಕ್ಕೊಳಗಾಗಬೇಕಾಯಿತು. ಆ ಸಂದರ್ಭದಲ್ಲಿ ದ ಬ್ಯಾಲೆಡ್ ಆಫ್ ರೀಡಿಂಗ್ ಗೋಲ್ ಎಂಬ ಕವಿತೆಯನ್ನೂ ಡಿ ಪ್ರೊಫೆಂಡಿಸ್ ಎಂಬ ಆತ್ಮಚರಿತ್ರೆಯನ್ನೂ ಬರೆದ. ಬಂಧನದಿಂದ ಬಿಡುಗಡೆಗೊಂಡ ಅನಂತರ ಇಂಗ್ಲೆಂಡ್ ಬಿಟ್ಟು ಫ್ರಾನ್ಸ್‌ಗೆ ತೆರಳಿದ. ಈತ ೧೯೦೦ರಲ್ಲಿ ನಿಧನನಾದ.

ಹೊರಗಿನ ಕೊಂಡಿಗಳು[ಬದಲಾಯಿಸಿ]

Historical societies[ಬದಲಾಯಿಸಿ]

Historical notes[ಬದಲಾಯಿಸಿ]

Radio programmes[ಬದಲಾಯಿಸಿ]


Online texts by Wilde[ಬದಲಾಯಿಸಿ]

Images[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: