ಆರಿಫ಼್ ರಾಜ

ವಿಕಿಪೀಡಿಯ ಇಂದ
Jump to navigation Jump to search

ಟೆಂಪ್ಲೇಟು:ವುಟುಕು ಆರಿಫ್ ರಾಜ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಆರಕೆರಾ ಗ್ರಾಮದವರು. ಇವರು ರಾಯಚೂರು ಜಿಲ್ಲೆಯ ಉಪ್ರಾಳ ಕ್ಯಾಂಪ್ನಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದಾರೆ.ಸೈತಾನನ ಪ್ರವಾದಿ, ಜಂಗಮ ಫಕೀರನ ಜೋಳಿಗೆ , ಬೆಂಕಿಗೆ ತೊಡಿಸಿದ ಬಟ್ಟೆ ಇವರ ಕವನ ಸಂಕಲನಗಳು. "ಜಂಗಮ ಫಕೀರನ ಜೋಳಿಗೆ" ಸಂಕಲನಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ, ಬೇಂದ್ರೆ ಪುಸ್ತಕ ಬಹುಮಾನ ಹಾಗು 2012ರ ಕೇಂದ್ರ ಸಾಹಿತ್ಯ ಅಕಾಡೆಮಿಯ "ಯುವ ಪುರಸ್ಕಾರ" ಪ್ರಶಸ್ತಿ ದೊರೆತಿವೆ. ಇವರ ಕವಿತೆಗಳು ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಪರ್ಷಿಯನ್ ಭಾಷೆಯಲ್ಲಿ ರಚಿತವಾದ "ಭಾರತದ ಸಮಕಾಲೀನ ಕವಿತೆಗಳು" ಸಂಕಲನದಲ್ಲಿ ಇವರ ಅನುವಾದಿತ ಕವಿತೆಗಳು ಪ್ರಕಟಗೊಂಡಿವೆ. ಇವರ "ಬೆಂಕಿಗೆ ತೊಡಿಸಿದ ಬಟ್ಟೆ" ಕೃತಿಗೆ 2014ರ ದಿನಕರ ದೇಸಾಯಿ ಪ್ರಶಸ್ತಿ ಒಲಿದು ಬಂದಿದೆ.