ಆಮ್‍ರಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Aamras.JPG

ಆಮ್‍ರಸ್ ಭಾರತೀಯ ಉಪಖಂಡದ ಪಾಕಪದ್ಧತಿಯಲ್ಲಿ ಕಾಣಿಸಿಕೊಳ್ಳುವ ಒಂದು ಸಿಹಿ ಖಾದ್ಯವಾಗಿದೆ. ಇದನ್ನು ಮಾವಿನಹಣ್ಣಿನ ತಿರುಳಿನಿಂದ ತಯಾರಿಸಲಾಗುತ್ತದೆ. ಕಳಿತ ಮಾವಿನಹಣ್ಣಿನ ತಿರುಳನ್ನು ಸಾಮಾನ್ಯವಾಗಿ ಕೈಯಿಂದ ತೆಗೆಯಲಾಗುತ್ತದೆ. ಇದನ್ನು ಪೂರಿ ಅಥವಾ ಚಪಾತಿಯ ಜೊತೆಗೆ ಸೇವಿಸಲಾಗುತ್ತದೆ. ಅದರ ರುಚಿಯನ್ನು ಹೆಚ್ಚಿಸಲು ಕೆಲವೊಮ್ಮೆ ತಿರುಳಿಗೆ ತುಪ್ಪ ಮತ್ತು ಹಾಲನ್ನು ಸೇರಿಸಲಾಗುತ್ತದೆ. ಸಿಹಿಯನ್ನು ಹೊಂದಾಣಿಕೆ ಮಾಡಲು ಸಕ್ಕರೆಯನ್ನು ಕೂಡ ಸೇರಿಸಲಾಗುತ್ತದೆ. ಇದನ್ನು ಹಲವುವೇಳೆ ಆಚರಣೆಗಳು ಮತ್ತು ಮದುವೆಗಳಲ್ಲಿ ಏಲಕ್ಕಿ ಹಾಗೂ ತುಂಡರಿಸಿದ ಹಣ್ಣುಗಳೊಂದಿಗೆ ಸೇವಿಸಲಾಗುತ್ತದೆ.

ಆಮ್‍ರಸ್ ಒಂದು ಸಾಂಪ್ರದಾಯಿಕ ಗುಜರಾತಿ ಖಾದ್ಯವೂ ಆಗಿದೆ. ಇದು ಸಕ್ಕರೆ ಸೇರಿಸಿದ ಮಾವಿನ ಹಣ್ಣಿನ ತಿರುಳನ್ನು ಹೊಂದಿರುತ್ತದೆ. ಹಣ್ಣಿನ ನಾರಿನಂಥ ಎಳೆಗಳನ್ನು ತೆಗೆಯಲು ತಿರುಳನ್ನು ಮಸ್ಲಿನ್ ಬಟ್ಟೆಯ ಮೂಲಕ ಸೋಸಲಾಗುತ್ತದೆ.[೧] ಇದನ್ನು ಸಾಮಾನ್ಯವಾಗಿ ರೋಟ್ಲಿ ಅಥವಾ ಪೂರಿಗಳೊಂದಿಗೆ ತಿನ್ನಲಾಗುತ್ತದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. Vanisha, S.R, Nambier, Vashist (2004). A Textbook On Food Contamination And Safety. Anmol Publications. p. 52.
  2. Seshadri, Diana (2007). Food for the Gods. Lulu.com. p. 47. ISBN 978-1-4303-1269-7.
"https://kn.wikipedia.org/w/index.php?title=ಆಮ್‍ರಸ್&oldid=993595" ಇಂದ ಪಡೆಯಲ್ಪಟ್ಟಿದೆ