ವಿಷಯಕ್ಕೆ ಹೋಗು

ಆದಿ ಲಕ್ಷ್ಮಿ ಪುರಾಣ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆದಿ ಲಕ್ಷ್ಮಿ ಪುರಾಣವು 2019 ರ ಕನ್ನಡ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು ವಿ. ಪ್ರಿಯಾ ಬರೆದು ನಿರ್ದೇಶಿಸಿದ್ದಾರೆ ಮತ್ತು ರಾಕ್‌ಲೈನ್ ವೆಂಕಟೇಶ್ ಅವರ ಬ್ಯಾನರ್ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ನಿರ್ಮಿಸಿದ್ದಾರೆ. ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ನಟಿಸಿರುವ ಈ ಚಿತ್ರವು ಡ್ರಗ್ಸ್ ದಂಧೆಯ ಹಿನ್ನೆಲೆಯ ಕಥೆ ಹೊಂದಿದ್ದು, ತನಿಖಾ ಅಧಿಕಾರಿ ಆದಿತ್ಯ (ನಿರೂಪ್ ಭಂಡಾರಿ ಅಭಿನಯ) ಮತ್ತು ಟ್ರಾವೆಲ್ ಏಜೆನ್ಸಿಯ ಲಕ್ಷ್ಮಿ (ರಾಧಿಕಾ ಪಂಡಿತ್ ಅಭಿನಯ) ಇವರುಗಳ ಆಕಸ್ಮಿಕ ಭೇಟಿಯ ಕಥೆಯಾಗಿದೆ. ಚಿತ್ರವು 19 ಜುಲೈ 2019 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಯಿತು ಮತ್ತು ಈಗ ಇದು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಲಭ್ಯವಿದೆ. [] []

ಪಾತ್ರವರ್ಗ

[ಬದಲಾಯಿಸಿ]

ಬಿಡುಗಡೆ

[ಬದಲಾಯಿಸಿ]

ಚಿತ್ರವು 19 ಜುಲೈ 2019 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 

ಹಿನ್ನೆಲೆಸಂಗೀತ

[ಬದಲಾಯಿಸಿ]

ಅನೂಪ್ ಭಂಡಾರಿ ಅವರು ಈ ಚಿತ್ರಕ್ಕೆ ಗೀತೆಗಳನ್ನು ಬರೆದುದಲ್ಲದೆ ಸಂಗೀತವನ್ನೂ ಸಂಯೋಜಿಸಿದ್ದಾರೆ.

ಹಾಡುಗಳ ಪಟ್ಟಿ
ಸಂ.ಹಾಡುಹಾಡುಗಾರರುಸಮಯ
1."ಬೂಮ್ ಬೂಮ್"ಸಂಜಿತ್ ಹೆಗ್ಡೆ, ಐಶ್ವರ್ಯ ರಂಗರಾಜನ್, ಪ್ರಜ್ವಲ್ ಜೈನ್3:22
2."Manase Muttala"ವಿಜಯ್ ಪ್ರಕಾಶ್, ಸುಪ್ರಿಯಾ ಲೋಹಿತ್, ಐಶ್ವರ್ಯ ರಂಗರಾಜನ್, ಅನೂಪ್ ಭಂಡಾರಿ3:27
3."ಮುದ್ದು ಸುಳ್ಳು"ಸಿದ್ದಾರ್ಥ್ ಬೆಳ್ಮಣ್ಣು4:23
ಒಟ್ಟು ಸಮಯ:11:12

ಉಲ್ಲೇಖಗಳು

[ಬದಲಾಯಿಸಿ]
  1. "Aadi Lakshmi Puraana". Times of India. 19 July 2019.
  2. "Aadi Lakshmi Puraana team plans for a release in July". The New Indian Express.


ಬಾಹ್ಯ ಕೊಂಡಿಗಳು

[ಬದಲಾಯಿಸಿ]