ವಿಷಯಕ್ಕೆ ಹೋಗು

ಆಟೋ ರಾಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಟೋರಾಜ ಇಂದ ಪುನರ್ನಿರ್ದೇಶಿತ)
ಆಟೋ ರಾಜ
ನಿರ್ದೇಶನವಿಜಯ್
ನಿರ್ಮಾಪಕಸಿ.ಜಯರಾಂ
ಪಾತ್ರವರ್ಗಶಂಕರನಾಗ್, ಗಾಯತ್ರಿ ದ್ವಾರಕೀಶ್, ಲೀಲಾವತಿ, ಪದ್ಮ, ಅಶ್ವಥ್ ಬಾಲಕೃಷ್ಣ,ತೂಗುದೀಪ ಶ್ರೀನಿವಾಸ್,ಸುಂದರ ಕೃಷ್ಣ ಅರಸ್,ಪ್ರಭಾಕರ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆಸಪ್ತಸ್ವರ ಮೂವೀಮೇಕರ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಜಾನಕಿ

ಆಟೋ ರಾಜಾ ೧೯೮೦ ರ ಭಾರತೀಯ ಕನ್ನಡ-ಭಾಷೆಯ ಚಿತ್ರವಾಗಿದ್ದು, ಎಂ ಡಿ ಸುಂದರ್ ಅವರ ಚಿತ್ರಕಥೆಯನ್ನು ಆಧರಿಸಿ ನಿರ್ದೇಶಕ ವಿಜಯ್ ಅವರು ನಿರ್ದೇಶಿಸಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರಿಯ ಪತಿ ಸಿ.ಜಯರಾಮ್ ಅವರು ಸಪ್ತಸ್ವರ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.[] ಚಿತ್ರದಲ್ಲಿ ಶಂಕರ್ ನಾಗ್ ಮತ್ತು ಗಾಯತ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ, ದ್ವಾರಕೀಶ್, ಬಾಲಕೃಷ್ಣ ಮತ್ತು ಲೀಲಾವತಿ ಇತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರವು ಸಂಗೀತ ಜೋಡಿ ರಾಜನ್-ನಾಗೇಂದ್ರ ಸಂಯೋಜಿಸಿದ ಮೂಲ ಹಾಡುಗಳನ್ನು ಒಳಗೊಂಡಿದೆ. ಚಿತ್ರದ ಛಾಯಾಗ್ರಹಣವನ್ನು ಎಸ್ ವಿ ಶ್ರೀಕಾಂತ್ ನಿರ್ವಹಿಸಿದ್ದಾರೆ. ಇದು ಕನ್ನಡ ಚಿತ್ರರಂಗದ ಅತ್ಯುತ್ತಮ ವಾಣಿಜ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ ಮತ್ತು ಆರಾಧನಾ ಸ್ಥಾನಮಾನವನ್ನು ಪಡೆದುಕೊಂಡಿದೆ. ಈ ಚಿತ್ರವು ಶಂಕರ್ ನಾಗ್ ಅವರ ಸ್ಟಾರ್‌ಡಮ್ ಅನ್ನು ಹೆಚ್ಚಿಸುವಲ್ಲಿ ಗಮನಾರ್ಹವಾಗಿದೆ.[]

ಪಾತ್ರವರ್ಗ

[ಬದಲಾಯಿಸಿ]

ಧ್ವನಿಮುದ್ರಿಕೆ

[ಬದಲಾಯಿಸಿ]

ಚಿತ್ರದ ಧ್ವನಿಪಥವನ್ನು ಪ್ರಸಿದ್ಧ ಜೋಡಿ ರಾಜನ್-ನಾಗೇಂದ್ರ ಮತ್ತು ಸಾಹಿತ್ಯವನ್ನು ಚಿ. ಉದಯಶಂಕರ್ ಸಂಯೋಜಿಸಿದ್ದಾರೆ. ರಾಜನ್-ನಾಗೇಂದ್ರ "ನನ್ನ ಆಸೆ ಹಣ್ಣಾಗಿ" ರಾಗವನ್ನು ೧೯೮೩ ರ ತೆಲುಗು ಚಲನಚಿತ್ರ "ಪುಲಿ ಬೆಬ್ಬುಲಿ" ಯ "ಪರಿಮಲಿಂಚು ಪುನ್ನಮಿಲೋ" ಹಾಡಿಗೆ ಮರುಬಳಕೆ ಮಾಡಿದ್ದಾರೆ.[][]

ಧ್ವನಿಮುದ್ರಿಕೆ ಹಾಡು ಗಾಯಕರು ಸಮಯ
"ಹೊಸ ಬಾಳು" ಎಸ್.ಜಾನಕಿ
"ನನ್ನ ಆಸೆ ಹಣ್ಣಾಗಿ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ೪:೧೯
"ಪರಮಾತ್ಮ ಆಡಿಸಿದಂತೆ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮಣಿ
"ನಲಿವ ಗುಲಾಬಿ ಹೂವೆ" ಎಸ್.ಪಿ.ಬಾಲಸುಬ್ರಹ್ಮಣ್ಯಂ ೪:೦೫

ಪರಂಪರೆ

[ಬದಲಾಯಿಸಿ]
ಬೆಂ‌ಗಳೂರಿನ ಆಟೋವೊಂದರ ಮೇಲೆ ಶಂಕರ್ ನಾಗ್ ಅವರ ಫೋಟೊ

ರಾಜಾ ಎಂಬ ವಿನಮ್ರ ಆಟೋ ಚಾಲಕನ ಪಾತ್ರದಲ್ಲಿ ನಟಿಸಿರುವ ಶಂಕರ್ ನಾಗ್ ಆಟೋ ರಿಕ್ಷಾ ಚಾಲಕರ ವೃತ್ತಿಗೆ ಒಂದು ಘನತೆಯನ್ನು ತಂದುಕೊಟ್ಟ ಕೀರ್ತಿಗೆ ಪಾತ್ರರಾಗಿದ್ದಾರೆ. [] ಚಿತ್ರ ಬಿಡುಗಡೆಯಾಗಿ ನಾಲ್ಕು ದಶಕಗಳ ನಂತರವೂ ಸಹ ಶಂಕರ್ ನಾಗ್ ಅವರ ಫೋಟೋ ಕರ್ನಾಟಕದಾದ್ಯಂತ ಆಟೋ ರಿಕ್ಷಾಗಳನ್ನು ಅಲಂಕರಿಸಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. https://m.youtube.com/watch?si=6D-_F9x3HsZ5jCDv&v=Qki3to_QlZw&feature=youtu.be
  2. "A high for city's 'Auto Rajas'". Bangalore Mirror. Archived from the original on 27 February 2022. Retrieved 17 November 2021.
  3. https://m.youtube.com/watch?si=WIv4AoIY0U7-isrw&v=lsTCsgX_AKM&feature=youtu.be
  4. https://m.youtube.com/watch?si=-FWfHg8plSHZPoQp&v=4MxDv-odCYI&feature=youtu.be
  5. "Auto Raja's birth anniversary a memorable affair". The Hindu. 10 November 2014. Archived from the original on 27 February 2022. Retrieved 17 November 2021.
  6. Khajane, Muralidhara (29 September 2015). "The iconic Auto Raja". The Hindu. Archived from the original on 1 March 2022. Retrieved 17 November 2021.
"https://kn.wikipedia.org/w/index.php?title=ಆಟೋ_ರಾಜ&oldid=1204575" ಇಂದ ಪಡೆಯಲ್ಪಟ್ಟಿದೆ