ಆಟಿಯ ಕುಣಿತಗಳು
ಆಟಿ ತಿಂಗಳಿನಲ್ಲಿ ಬೇರೆ ಬೇರೆ ಕುಣಿತಗಳು ಮನೆ ಮನೆಗೆ ಬಂದು ಊರಿನ ಮಾರಿ ಕಳೆಯುತ್ತದೆ ಎಂಬುದು ತುಳುನಾಡಿನ ತುಳುವರ ನಂಬಿಕೆ.ಆಟಿ ಕಳಂಜ ,ಬೇಡನ್ ,ಮರ್ದೆ ಎಂಬಿತ್ಯಾದಿ ಕುಣಿತಗಳು ಆಟಿಯ ವಿಶೇಷ ಕುಣಿತಗಳಾಗಿವೆ.
ಆಟಿ ಕಳೆಂಜ ತುಳುನಾಡಿನ ಒಂದು ಶ್ರೇಷ್ಠ ಆಚರಣೆಯಾಗಿದೆ. ತುಳುನಾಡಿನಲ್ಲಿ ವಿಪರೀತ ಮಳೆಯ ಸಮಯವಾದ ಆಟಿ ತಿಂಗಳಿನಲ್ಲಿ ಊರಿಗೆ ಅಂಟಿರುವ ಮಾರಿಯನ್ನು ಹೋಗಲಾಡಿಸಲು ಮನೆಮನೆಗೆ ಆಟಿ ಕಳೆಂಜ ಬರುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ತುಳುವಿನ ಆಟಿ (ಆಷಾಢ: ಚಾಂದ್ರಮಾನದಲ್ಲಿ ನಾಲ್ಕನೆಯ ತಿಂಗಳು) ತಿಂಗಳಲ್ಲಿ ನಲಿಕೆ ಅಥವಾ ಪಾಣಾರ ಜನವರ್ಗದವರು ಆಟಿಕಳೆಂಜ ವೇಷವನ್ನು ಹಾಕಿಕೊಂಡು ಮನೆ ಮನೆಗೆ ಹೋಗಿ ಕುಣಿಯುತ್ತಾರೆ.[೧]
ಆಟಿ ಕಳೆಂಜನ ವೇಷ ಭೂಷಣ
[ಬದಲಾಯಿಸಿ]ಸಣ್ಣ ಬಾಲಕನಿಗೆ ತಾಳೆಗರಿಯ ತತ್ರ (ಛತ್ರಿ) ಕೊಟ್ಟು ಕುಣಿಯಲು ಹಿಮ್ಮೇಳದಲ್ಲಿ ‘ತೆಂಬರೆ’-ಯನ್ನು (ಚರ್ಮ ವಾದ್ಯ)ಪುರುಷ ವ್ಯಕ್ತಿ ನುಡಿಸುತಿರುತ್ತಾನೆ. ಕಳೆಂಜನ ವೇಷ ಭೂಷಣದಲ್ಲಿ ಮುಖ್ಯವಾಗಿ ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಅಥವಾ ಕೈಗೆ-ಮೈಗೆ ಬಣ್ಣ, ಮುಖ್ಯವಾಗಿ ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಮತ್ತು ಕಿಸಗಾರ ಹೂವಿನಿಂದ ಸಿಂಗರಿಸಿದ ಟೊಪ್ಪಿಗೆ ಇವುಗಳು ಆಟಿಕಳೆಂಜನ ವೇಷಗಳು. ಮುಖಕ್ಕೆ ಬಿಳಿ ಬಣ್ಣವನ್ನು ಬಳಿದುಕೊಳ್ಳುತ್ತಾರೆ. ತಟ್ಟಿಯಿಂದ ಹೆಣೆದು ಮಾಡಿದ ಕೊಡೆಯನ್ನು ಹೂವು-ಎಲೆಗಳಿಂದ ಅಲಂಕರಿಸಿಕೊಳ್ಳುತ್ತಾರೆ. ಆ ಕೊಡೆಯನ್ನು ತಿರುಗಿಸುತ್ತಾ ಮನೆಮನೆಗೆ ತೆರಳಿ ಅಲ್ಲಿ ನೃತ್ಯ ಮಾಡುತ್ತಾರೆ. ಪಾಡ್ದನ ಹೇಳಲು ಒಬ್ಬ ಸಹಾಯಕ ಜತೆಗಿರುತ್ತಾನೆ. ಆತ ತೆಂಬರೆಯನ್ನು ಬಾರಿಸುತ್ತಾ ಪಾಡ್ದನದ ಮೂಲಕ ಕಳೆಂಜದ ಕಥೆಯನ್ನು ವಿವರಿಸುತ್ತಾ ಸಾಗುತ್ತಾನೆ. ಕಳೆಂಜ ವೇಷಧಾರಿ ನೃತ್ಯ ಮಾಡುತ್ತಾನೆ.[೨]
ಬೇಡನ್
[ಬದಲಾಯಿಸಿ]ಬೇಡನ್ ಎಂದರೆ ಒಂದು ದೈವದ ಕುಣೀತ ಕರ್ಕಾಟಕ(ಆಟಿ)ತಿಂಗೊಳಿನಲ್ಲಿ ಕೇರಳ ಕಡೆ ಮನೆ ಮನೆಗೆ ಬಂದು ಜನರ ಕಷ್ಟ ಪರಿಹರಿಸುತ್ತದೆ ಎಂಬ ನಂಬಿಕೆ. ಈ ಬೇಡನ್ ದೈವವನ್ನು ಮಲವೆರ್ ಎನ್ನುವ ಒಂದು ಜನಾಂಗವರು ಕಟ್ಟಿ ಮನೆ ಮನೆಗೆ ಬರುವ ಪದ್ದತಿ.ಮಲಯಾಲದಲ್ಲಿ ವೇಡನ್ ಎಂದು ಕರೆಯುತ್ತಾರೆ [೩]
ವೇಷ,ಕುಣಿತ,ಕ್ರಮ
[ಬದಲಾಯಿಸಿ]ಈ ದೈವವನ್ನು ಚಿಕ್ಕ ಪ್ರಾಯದ ಮಕ್ಕಳಲ್ಲಿ ಕಟ್ಟಿಸುತ್ತಾರೆ. ಕಿರಾತ (ಬೇಟೆಗಾರ)ನ ರೀತಿಯಲ್ಲಿ ಚಿಕ್ಕ ಪ್ರಾಯದ ಹುಡುಗನಿಗೆ ವೇಷ ಹಾಕಿಸುತ್ತಾರೆ .ಕೆಂಪು ಬಣ್ಣದ ರೇಷ್ಮೆ ಬಟ್ಟೆ ಉಡಿಸಿ ತಲೆಗೆ ನಾಗನ ಚಿತ್ರದ ತಲೆ ಪಟ್ಟಿ ಕಟ್ಟುತ್ತಾರೆ .ಮೋರೆಗೆ ಕೆಂಪು ಮುಖ ವರ್ಣಿಕೆ ಹಾಕಿ ಕಿರಾತನ ರೂಪ ಮಾಡುತ್ತಾರೆ.
ಈ ದೈವ ದೇವಸ್ಥಾನ ,ದೈವಸ್ಥಾನದಲ್ಲಿ ಕಟ್ಟಿ ಕುಣಿಯುವ ಬದಲು ಪ್ರತಿ ಮನೆ ಮನೆಗೆ ಬಂದು ನಲಿಯುತ್ತದೆ.ಚೆಂಡೆ ವಾದ್ಯದವರು ಹೇಳುವ ಬೇಟೆಯ ಹಾಡಿಗೆ ಈ ದೈವ ಕುಣಿಯುತ್ತದೆ ಈ ದೈವ ಮನೆಗೆ ಬಂದರೆ ಐಶ್ವರ್ಯ ಮತ್ತು ಸಂಪತ್ತು ಅಧಿದೇವತೆಯಾದ ಲಕ್ಷ್ಮೀದೇವಿ ನೆಲೆ ಆಗುತ್ತಾಳೆ ಎಂಬುದು ಸಾಮಾನ್ಯ ನಂಬಿಕೆ.ಬೇಡನ್ ದೈವ ಮನೆಗೆ ಬರುವಾಗ ದೀಪ ಉರಿಸಿ ಇಡಬೇಕು ಆಮೇಲೆ ಚೆಂಡೆವಾದಕರು ಮನೆಯವರ ಒಪ್ಪಿಗೆ ಪಡೆದು ಸಂಧಿ ಹೇಳುತ್ತ ಚೆಂಡೆ ಭಾರಿಸಲು ಸುರು ಮಾಡುವಾಗ ಬೇಡನ್ ದೈವ ಮನೆಯ ಎದುರು ಹಿಂದೆ ಮುಂದೆ ಹೋಗುತ್ತ ಕುಣಿಯುತ್ತದೆ .ಕುಣಿದು ಆದನಂತರ ಭಸ್ಮದ ಕುರ್ದಿ ನೀರು ಮಾಡಿ ಒಂದು ಬತ್ತಿ ಉರಿಸಿಕೊಂಡು ಮನೆಯ ಯಜಮಾನಿಯು ಮನೆಯ ಹೊರಗೆ ಬಂದು ಅಂಗಳದ ತೆಂಕು ಭಾಗದಲ್ಲಿ ಬತ್ತಿದೀಪ ಸುತ್ತಲು ಕುರ್ದಿ ನೀರು ಚೆಲ್ಲುತ್ತಾರೆ. ಮನೆ ಮತ್ತು ಸುತ್ತು ಪರಿಸರ ಶುದ್ಧ ಆಗಿ ದುಷ್ಟ ಶಕ್ತಿ ದೂರ ಆಗುತ್ತದೆ ಎನ್ನುವ ನಂಬಿಕೆ. ದೈವ ಕುಣಿದು ಮನೆಯಿಂದ ಹೋಗುವಾಗ ಹಣ, ಅಕ್ಕಿ, ಮಳೆಗಾಲಕ್ಕೆ ಇಟ್ಟ ತೆಂಗಿನಕಾಯಿ ತರಕಾರಿ , ಧಾನ್ಯ, ಉಪ್ಪು ಇತ್ಯಾದಿ ವಸ್ತುಗಳನ್ನು ದಾನ ಕೊಡುವ ಕ್ರಮ.
ಮರ್ದೆ
[ಬದಲಾಯಿಸಿ]ಮರ್ದೆ ಎಂದರೆ ಒಂದು ದೈವದ ಕುಣಿತ. ಕರ್ಕಾಟಕ(ಆಟಿ)ತಿಂಗೊಳಿನಲ್ಲಿ ಕೇರಳ ಕಡೆ ಮನೆ ಮನೆಗೆ ಬಂದು ಜನರ ಕಷ್ಟ ಪರಿಹರಿಸುತ್ತದೆ ಎಂಬ ನಂಬಿಕೆ. ಮರ್ದೆ ಅಂದರೆ ಪಾರ್ವತಿ ಎಂಬ ನಂಬಿಕೆ.ಆಷಾಡದಲ್ಲಿ ಮರ್ದೆ ಮನೆಗೆ ಬಂದರೆ ಮಾರಿ ದೂರವಾಗುತ್ತದೆ ಎಂಬ ನಂಬಿಕೆ .ಈ ಮರ್ದೆ ದೈವವನ್ನು ವಣ್ಣನ್ ಎನ್ನುವ ಒಂದು ಜನಾಂಗವರು ಕಟ್ಟಿ ಮನೆ ಮನೆಗೆ ಬರುವ ಪದ್ದತಿ.ವಣ್ಣನ್ ಜನಾಂಗವನ್ನು ತುಳುವಲ್ಲಿ ನೆಕ್ಕರೆರ್ ಎಂದು ಕರೆಯುತ್ತಾರೆ[೩]
ವೇಷ
[ಬದಲಾಯಿಸಿ]ಈ ದೈವವನ್ನು ಚಿಕ್ಕ ಪ್ರಾಯದ ಮಕ್ಕಳಲ್ಲಿ ಕಟ್ಟಿಸುತ್ತಾರೆ. ಪಾರ್ವತಿಯ ರೀತಿಯಲ್ಲಿ ಚಿಕ್ಕ ಪ್ರಾಯದ ಹುಡುಗನಿಗೆ ವೇಷ ಹಾಕಿಸುತ್ತಾರೆ .ಕೆಂಪು ಬಣ್ಣದ ರೇಷ್ಮೆ ಬಟ್ಟೆ ಉಡಿಸಿ ತಲೆಗೆ ತಲೆ ಪಟ್ಟಿ ಕಟ್ಟುತ್ತಾರೆ .ಮೋರೆಗೆ ಕೆಂಪು ಮುಖ ವರ್ಣಿಕೆ ಹಾಕಿ ಪಾರ್ವತಿಯ ರೂಪ ಮಾಡುತ್ತಾರೆ.
ಕುಣಿತದಕ್ರಮ
[ಬದಲಾಯಿಸಿ]ಈ ದೈವ ದೇವಸ್ಥಾನ ,ದೈವಸ್ಥಾನದಲ್ಲಿ ಕಟ್ಟಿ ಕುಣಿಯುವ ಬದಲು ಪ್ರತಿ ಮನೆ ಮನೆಗೆ ಬಂದು ನಲಿಯುತ್ತದೆ.ಚೆಂಡೆ ವಾದ್ಯದವರು ಹೇಳುವ ಹಾಡಿಗೆ ಈ ದೈವ ಕುಣಿಯುತ್ತದೆ .ಈ ದೈವ ಮನೆಗೆ ಬಂದರೆ ಐಶ್ವರ್ಯ ಮತ್ತು ಸಂಪತ್ತು ಅಧಿದೇವತೆಯಾದ ಲಕ್ಷ್ಮೀದೇವಿ ನೆಲೆ ಆಗುತ್ತಾಳೆ ಎಂಬುದು ಸಾಮಾನ್ಯ ನಂಬಿಕೆ.ಬೇಡನ್ ದೈವ ಮನೆಗೆ ಬರುವಾಗ ದೀಪ ಉರಿಸಿ ಇಡಬೇಕು ಆಮೇಲೆ ಚೆಂಡೆವಾದಕರು ಮನೆಯವರ ಒಪ್ಪಿಗೆ ಪಡೆದು ಸಂಧಿ ಹೇಳುತ್ತ ಚೆಂಡೆ ಭಾರಿಸಲು ಸುರು ಮಾಡುವಾಗ ಮರ್ದೆ ದೈವ ಮನೆಯ ಎದುರು ಅಂಗಳದಲ್ಲಿ ಹಿಂದೆ ಮುಂದೆ ಹೋಗುತ್ತ ಕುಣಿಯುತ್ತದೆ .ಕುಣಿದು ಆದನಂತರ ಕುರ್ದಿ ನೀರು ಮಾಡಿ ಒಂದು ಬತ್ತಿ ಉರಿಸಿಕೊಂಡು ಮನೆಯ ಯಜಮಾನಿಯು ಮನೆಯ ಹೊರಗೆ ಬಂದು ಅಂಗಳದ ಬಡಗು ಭಾಗದಲ್ಲಿ ಬತ್ತಿದೀಪವನಿಟ್ಟು ಸುತ್ತಲು ಕುರ್ದಿ ನೀರು ಚೆಲ್ಲುತ್ತಾರೆ. ಮನೆ ಮತ್ತು ಸುತ್ತು ಪರಿಸರ ಶುದ್ಧ ಆಗಿ ದುಷ್ಟ ಶಕ್ತಿ ದೂರ ಆಗುತ್ತದೆ ಎನ್ನುವ ನಂಬಿಕೆ. ದೈವ ಕುಣಿದು ಮನೆಯಿಂದ ಹೋಗುವಾಗ ಹಣ, ಅಕ್ಕಿ, ಮಳೆಗಾಲಕ್ಕೆ ಇಟ್ಟ ತೆಂಗಿನಕಾಯಿ ತರಕಾರಿ , ಧಾನ್ಯ, ಉಪ್ಪು ಇತ್ಯಾದಿ ವಸ್ತುಗಳನ್ನು ದಾನ ಕೊಡುವ ಕ್ರಮ.
ಉಲ್ಲೇಖಗಳು
[ಬದಲಾಯಿಸಿ]- ↑ "Bantwala: ತುಳುನಾಡಿನ ವಿಶಿಷ್ಟ ಆಚರಣೆ- ಮಾರಿ ಕಳೆವ ಆಟಿ ಕಳೆಂಜ". NAMMAKUDLA NEWS - ನಮ್ಮಕುಡ್ಲ ನ್ಯೂಸ್. 29 July 2023. Retrieved 12 July 2024.
- ↑ "ಸಂಕಷ್ಟ ದೂರಮಾಡುತ್ತೆ ಆಟಿ ಕಳೆಂಜ! ರೋಗರುಜಿನ ದೂರ ಮಾಡುವ ನಂಬಿಕೆ". News18 ಕನ್ನಡ. 21 July 2022. Retrieved 12 July 2024.
- ↑ ೩.೦ ೩.೧ https://thesulliamirror.com/aati-aashada-special-article/