ವಿಷಯಕ್ಕೆ ಹೋಗು

ಮೀಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಲ್ಕ್ ಹೋಗನ್‍ನ ಮೀಸೆ

ಮೀಸೆಯು ಮೇಲಿನ ತುಟಿ ಮೇಲೆ ಬೆಳೆಸಲಾಗುವ ಮುಖದ ಕೂದಲು.

ಒಬ್ಬ ವ್ಯಕ್ತಿಯ ಮುಖದ ಕೂದಲು ಅವನ ಪುರುಷತ್ವದ ಚಿಹ್ನೆಯಾಗಿದೆ ಎನ್ನುವುದು ಒಂದು ಸಾಂಪ್ರದಾಯಿಕ ಭಾರತೀಯ ನಂಬಿಕೆಯಾಗಿದೆ. ಇದು ೧೯ನೇ ಶತಮಾನದಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಸಮಸ್ಯೆಯನ್ನು ಉಂಟುಮಾಡಿತು. ಪರಿಣಾಮವಾಗಿ, ಭಾರತೀಯ ಮೀಸೆಗಳು ಬ್ರಿಟಿಷರ ಮುಖದ ಕೂದಲಿನ ಮೇಲೆ ಆಳವಾದ ಪ್ರಭಾವ ಬೀರಿದವು. ಆ ಸಮಯದವರೆಗೆ ಗಡ್ಡ ಮೀಸೆ ಬೋಳಿಸಿಕೊಳ್ಳುತ್ತಿದ್ದ ಬ್ರಿಟಿಷ್ ಸೇನೆಯವರಿಗೆ ಭಾರತೀಯ ಸೈನಿಕರ ನಡುವೆ ಅಧಿಕಾರ ಚಲಾಯಿಸುವುದು ಕಷ್ಟವಾಯಿತು, ಏಕೆಂದರೆ ಭಾರತೀಯ ಸೈನಿಕರು ತಮ್ಮ ಅಧಿಕಾರಿಗಳಿಗೆ ಮೀಸೆ, ಗಡ್ಡ ಮತ್ತು ಗಿರಿಜಾಮೀಸೆ ಇರದಿರುವುದು ಪುರುಷತ್ವದ ಅಭಾವವೆಂದು ಕಂಡರು. ಅಂತಿಮವಾಗಿ, ತಮ್ಮ ಪಡೆಗಳ ಗೌರವವನ್ನು ಗಳಿಸಲು ಬ್ರಿಟಿಷ್ ಅಧಿಕಾರಿಗಳು ಮೀಸೆಗಳು ಮತ್ತು ಇತರ ಮುಖದ ಕೂದಲನ್ನು ಬೆಳೆಸಿಕೊಳ್ಳಲು ಆರಂಭಿಸಿದರು. ಮೀಸೆಯನ್ನು ಪ್ರದರ್ಶಿಸುವ ಪ್ರವೃತ್ತಿಯು ಬೇಗನೇ ಸೇನೆಯಾದ್ಯಂತ ಹರಡಿತು ಮತ್ತು ನಂತರ ಸಾಮಾನ್ಯ ಬ್ರಿಟೀಷ್ ನಾಗರಿಕರಲ್ಲಿ ಹರಡಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "India's Facial Hair Cutbacks". The Chap. 3 April 2009. Retrieved 22 May 2017.[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಮೀಸೆ&oldid=1224521" ಇಂದ ಪಡೆಯಲ್ಪಟ್ಟಿದೆ